ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಕಾರಣವಿಲ್ಲೆ ನಿಂದೇ ಅಶ್ವತ್ಥ ಶ್ರೀ ನಾರಸಿಂಹೆನಿಸಿ ಅಜಭವರ ತಂದೇ ಪ ಹೊರೆಯ ಲೈತರಲು ಹಂಬಲಿಪ ಪ್ರಲ್ಹಾದಿಲ್ಲ | ಹಿರಣ್ಯ ಕಾಸುರನಿಲ್ಲ | ಸುರರಿಗುಪಟಳವೇನು ಇಲ್ಲ ಸ್ತಂಭ | ಬಿರಿದು ದೋರುವ ಅಹೋಬಲದ ಸ್ಥಳವಲ್ಲ 1 ಸಿರಿಯ ಮೋಹನ ನಿಮ್ಮ ರೂಪವನೆ ಆವರಿಸಿ | ಮರದ ಪೇರ್ಗಳೆಪಾದ ಕೊಂಬುಗಳ ಕರಧರಿಸಿ | ಸಿರಸಾಗ್ರ ಮಧ್ಯುದರ ವೆರಸೀ ಪರ್ಣ| ದಿರುವ ಅವಯವ ಮಾಡಿ ಪಾದರ್ಪೆದ್ರನಿಸೀ2 ಧರೆಗಧಿಕ ಸುಕ್ಷೇತ್ರ ಶೂರ್ಪಾಲಯವೆ ನೋಡಿ | ಮೆರೆಯುತಿಹ ಕೃಷ್ಣ ವೇಣಿಯ ತೀರದಲಿ ಮೂಡಿ | ಹರಗರುಡ ಗಣಪರೋಡಗೂಡಿ ನಲಿವ | ಗುರುಮಹಿಪತಿ ಸ್ವಾಮಿ ಕಾಯೋದಯ ಮಾಡಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀನೇ ದಯಾಸಂಪನ್ನ ಭಕ್ತ ಪ್ರಸನ್ನಾ ಪ ಕಂದನಿನ್ನಯ ದಿವ್ಯಾನಂದ ಮೂರುತಿಯ ನಾ ಕುಂದದೇ ಭಜಿಸಲು ಮರುಗಿ ಬೇಗಾ ಇಂದಿರೇ ಅಜಭವರೆಂದೂ ಕಾಣದ ನಿಜ ವೆಂದೆಂಬೋ ರಾಜ್ಯದೊಳಿದ್ದ ಕಾರಣದಿಂದ 1 ಹರಿಸರ್ವೋತ್ತಮನೆಂದು ಪಿತನಾಜ್ಞೆಯ ಮೀರಲು ಹರಿರೂಪತಾಳ್ದು ದೈತ್ಯನ ಶಿರವಾ ಹರಿದು ಬಾಲನನೆತ್ತಿ ಸಲಹಿದ ಬಗೆಯಿಂದ ಕರುಣಾಕರನೆಂದು ಶ್ರುತಿಯು ಪೇಳುತ್ತಿರಲೂ 2 ಪಾತಕದಿಂದ ಗೌತಮಸತಿ ಶಿಲೆಯಾಗೆ ಭೂತಳದೊಳು ಪರಬೊಮ್ಮನೆಂಬೋ ಸೀತಾರಾಮಾವತಾರರಿಂದ ಸೌಂದರ್ಯ ನೂತನಪದ ಸೋಕಲು ನಿಜಸತಿಯಾದಳೋ 3 ಗುರುತನೂಜನ ಮಂತ್ರಶಕ್ತಿ ವೇದನೆ ತಡೆದೆ ಹರಿಯೆಂದು ಕರೆದ ಉತ್ತರೆಗೆ ಬೇಗಾ ವರಚಕ್ರವನು ಮರೆಮಾಡಿ ಪರೀಕ್ಷಿತನ ಪೊರೆಯೆ ತ್ರಿಜಗದೊಳು ಕೀರ್ತಿಯಾಹುದರಿಂದ 4 ಹರನಿಂದ ಉರಿಯ ಹಸ್ತವ ಪಡೆದು ಭಸ್ಮಾ ಸುರನು ಫಾಲಕ್ಷನ ಖತಿಗೊಳಿಸೆ ಸಿರಿವೇಲಾಪುರ ಚನ್ನಕೇಶವನಾವೇಶದಿಂ ಪರಿದಸುರನ ಕೊಂದು ಸ್ಥಿರವಾದಕಾರಣ 5
--------------
ಬೇಲೂರು ವೈಕುಂಠದಾಸರು
ಪೂಜೆಯ ನಾನೇನ ಮಾಡುವೆ|ವiಹಾ ರಾಜರಾಜ ಕುರುಣಾನಂದ ಮೂರುತಿ ಹರಿಯೇ ಪ ಧ್ಯಾನಧಾರಣ ಮಂಗಳ ಮೂರ್ತಿಯ ಮಾಡುವೆನೆಂದರೆ| ನಿನ್ನ ಸುಖದ ನೆಲೆಯ ಇಂದಿರಾ ದೇವಿಯರಿಯಳು ಹರಿಯೇ 1 ಶಂಖೋದಕದಿ ಅಭಿಷೇಕ ಮಾಡುವನೆಂದರೆ|ನಿನ್ನಪದ ಪಂಕಜದಲಿ ಭಾಗಿರಥಿ ಬಂದಳೂ ಹರಿಯೇ2 ವಸ್ತ್ರವನುಡಿಸುವೆನೆಂದರೆ ದ್ರೌಪದಿಯವಸರದಿ|ನಿನ್ನಯ ವಸ್ತ್ರದಿಂಡಿನ ಎಣಿಕೆಯ ದೋರದೆನಗೆ ಹರಿಯೇ3 ಗಂಧಪುಷ್ಪವನೀವೆನೆಂದÀರೆ ನಿನ್ನ ಚರಣಾಬ್ಜದಾ|ಮಕ ಭ್ರಮರ ಅಜಭವರಾದರು ಹರಿಯೇ 4 ಆರೋಗಣೆಯ ಮಾಡಿಸುವೆನೆಂದರೆ ನಿನ್ನಕೈಯದಿ|ಸುರರು ಆರೋಗಣೆಯ ಮಾಡಿ ಅಮರರಾದರು ಹರಿಯೇ 5 ನೀರಾಂಜನ ಮಾಡುವನೆಂದರೆ ಕೋಟಿ ಸೂರ್ಯಪ್ರಭೆಯತೇಜ| ಮೀರಿತು ಸ್ತುತಿಗಿನ್ನು ಶ್ರುತಿಗಳು ನಿಂತವು ಹರಿಯೇ6 ಗುರುವರ ಮಹೀಪತಿನಂದನ ಸಾರಥಿ|ನಿನ್ನ ಸ್ಮರಣೆಯ ಕೊಟ್ಟನುದಿನದಿ ರಕ್ಷಿಸುಹರಿಯೇ7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭವ | ಬನ್ನ ಬಿಡಿಸಿ ಕಾಯೋ ಅಜಭವರಯ್ಯ ಪ ಆಶೆಯೆಂಬ ನದಿಯಲ್ಲಿ | ಘನ | ಸೂಸುವ ಮನೋರಥವ ಸೆಳವಿನಲಿ | ವಾಸನೆ ತೆರೆಗಳಿ ಬರಲಿ | ಬಲು | ಘಾಸಿಯಾಗುವೆ ಸಿಕ್ಕಿ ಮೋಹ ಸುಳಿಯಲಿ 1 ಉಲಿವ ಕುತರ್ಕ ಪಕ್ಷಿಗಳು | ನುಂಗ | ನಕ್ರ ಕಾಮಕ್ರೋಧಗಳು | ಬಲಿದು ವಿವೇಕ ಧಡಿಗಳು | ಕೋರೆ | ಯಲಿ ಬೀಳೆ ಧೃತಿ ಶಾಂತಿಯೆಂಬಾ ವೃಕ್ಷಗಳು2 ಸಿರಿ | ಕಾಂತ ನಿನ್ನಯ ನಾಮ ಹಡಗ ತಂದು | ಪಂಥಗಾಣಿಸೋ ಗತಿಗಿಂದು | ದಯ | ವಂತ ಗುರು ಮಹಿಪತಿ ಪ್ರಭು ದೀನ ಬಂಧು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಿಜಯ ರಾಯರ ಭಜಿಸದವ ನಿರ್ಭಾಗ್ಯ ಕಾಣೋ ಪ ಅಜಭವರಕಿಂತಧಿಕ ಗಜವರದ ಪರನೆಂದಾ ಅ.ಪ. ಋಷಿಗಳೆಲ್ಲರು ಕಲೆತು ಸತ್ರಯಾಗವ ಮಾಡೆಹೃಷಿಕೇಶ ಚತುರಾಸ್ಯ ಕೈಲಾಸ ವಾಸಾ |ಈಸು ಮೂರ್ತಿಗಳಲ್ಲಿ ಮಿಗಿಲಾರು ಎಂದೆನ್ನೆಸೂಸಿ ಮೂರ್ಲೋಕಗಳ ಶ್ರೀಶ ಪರನೆಂದಾ 1 ದೇವಮುನಿ ನರನಾಗಿ ಭುವಿಯಲ್ಲಿ ಜನಿಸುತಾದೇವದೇವನ ಸ್ತೋತ್ರ ಕವನವನೆ ಗೈದಾ |ಆವ ಲಕ್ಷವು ಪಂಚಕೆ ನ್ಯೂನ ಪಾದವ ಮಾಡ್ದದೇವ ಮುನಿ ಸುತ ಗುರು ಮಧ್ವಪತಿ ವಿಠಲಾ 2 ಜವನವರು ಕೊಂಡ್ಯೋಗೆ ಜವಪುರಿಗೆ ತನಯನಾಜವನೊಡನೆ ಶೆಣೆಶಾಡಿ ಹರಿಗೆ ಮೊರೆಯಿಡಲು |ಜೀವದಾನವ ಪೊಂದಿ ಚಿಪ್ಪಗಿರಿಗೆ ತೆರಳಲುಜೀವಂತ ನಾದನೈ ತನಯ ಮೋಹನ್ನಾ 3 ಪೂರ್ಣಬೋಧರ ಮತವ ಗಾನ ರೂಪದಿ ಪೇಳಿಪೂರ್ಣಗುಣ ಹರಿಯೆಂದು ಸ್ಥಾಪಿಸುತಲೀ |ಪೂರ್ಣ ಸಂಪ್ರೀತಿಯಲಿ ನೆಲೆಸಿ ಚಿಪಗಿರಿಯಲ್ಲಿಪೂರ್ಣನಂಘ್ರಿಯ ಭಜಿಸಿ ಭಕ್ತರನೆ ಪೊರೆದಾ 4 ಯುವ ಸಂವತ್ಸರದ ಸುಕಾರ್ತಿಕದ ಸಿತಪಕ್ಷಯಾದು ಗುರುದಿನ ದಶಮಿ ಮೊದಲ್ಯಾಮದಿ |ಪವನಾಂತರಾತ್ಮ ಗುರು ಗೋವಿಂದ ವಿಠ್ಠಲನಸ್ತವನದಿಂದಲಿ ಪೊರಟ ಹರಿಯ ಪುರಕಾಗಾ 5
--------------
ಗುರುಗೋವಿಂದವಿಠಲರು
ಸುರನರರ ಸಹಸಕ್ಹರಿ ಸಹಾಯ ಬೇಕುನರಹರಿಯು ಕೊಡದನಕ ದೊರೆವುದೇನು ಪ.ಹರಿಕೊಡದೆ ಅಜಭವರಿಗರಸುತನವೆಲ್ಲಿಯದುಹರಿಕೊಡದೆ ಸಿರಿಸಂಪದೆರವು ತನಗೆಹರಿಕೊಡದೆ ಸಕಳ ಜೀವರಿಗಶನ ದುರ್ಲಭವುಹರಿಕೊಡುವನಿರಲು ಅನ್ಯರಿಗೆ ಸ್ವಾತಂತ್ರ್ಯಿಲ್ಲ 1ಹರಿಯೆ ಜಡಚೇತನರ ಹೊರೆದುದ್ಭವಿಸಿ ಅಳಿವಹರಿಯಾವ ಕಾರ್ಯಕ್ಕೆ ಬೆರೆದು ಬರುವಹರಿಅಂತರ್ಬಹಿರದೊಳು ಭರಿತನಾಗಿಹ ತತ್ವಹರಿಯಿಲ್ಲದಾವ ತಾಣಿಲ್ಲ ನಂಬು ಹರಿಯ 2ಹರಿನುಡಿಯದಾರಿಗುತ್ತರಗುಡಲು ಬಲವಿಲ್ಲಹರಿನುಡಿಯನಾಲಿಪರು ಸಿರಿದಿವಿಜರುಹರಿನುಡಿಯೆ ಗತಿಮತಿಯು ಹರಿಯೆನ್ನ ದಾತಾರಹರಿಪ್ರಸನ್ವೆಂಕಟಪ ನಿರುತ ಬಿಡನೆನ್ನ3
--------------
ಪ್ರಸನ್ನವೆಂಕಟದಾಸರು