ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಜತ ಪೀಠದ ಯಾತ್ರೆ ರಜೋತಮ ಗುಣವುಳ್ಳ | ಪ್ರಜರಿಗೆ ದೊರಕುವದೆ | ತ್ರಿಜಗದೊಳಗೆ ಮುಂದೆ | ಅಜನಾಗಿ ಬಪ್ಪಗೆ | ಭಜನೆ ಮಾಡುವಂಥ ಸುಜನರಿಗಲ್ಲದೆ ಪ ಮಂದಾಕಿನಿ ಮಿಕ್ಕಾದ ನದಿಗಳಲ್ಲಿಗೆ ಪೋಗೆ | ಮಿಂದು ನಾನಾ ಕ್ಷೇತ್ರವ ಬಂದೂ ಬಿಡದೆ ತಿರುಗಿ ವೇದ ಶಾಸ್ತ್ರಗಳು | ಚಂದದಿ ಓದಿಕೊಂಡು | ಕುಂದದೆ ವ್ರತ ಯಾಗ ಯೋಗ ಮಾಡಲೇನು | ಬಿಂದು ಮಾತ್ರ ಫಲವಿಲ್ಲ | ಸುರರು ಒಂದಾಗಿ ಒಂದಿನ | ಅಂದು ಪೀಯೂಷವ ಕರೆಯೆ ಉಂಡವರಾರು 1 ಮಾನವ | ನಾಡೊಳು ಉಡುಪಿ ಯಾತ್ರೆ ಮಾಡಿದರವಗೇನು ಲೇಶ ಸತ್ಕರ್ಮವು | ಕೂಡದು ಕೂಡದಯ್ಯಾ | ಬಿಡಾಲನಂದದಿ ತಿರುಗಿದಂತಾಗುವದು | ಕೇಡಿಗೆ ಗುರಿಯಾಗುವಾ | ಜೋಡು ಇಲ್ಲಿಗೆ ಬಂದು ತಿರುಗಿ ಪೋದರೆಯೇನು | ಆಡಲೇನದಕೆ ತಿಲಾಂಶ ಸುಖವುಂಟೆ 2 ತಮೋ ಯೋಗ್ಯ ಉಡುಪಿನ ಯಾತ್ರೆ ಮಾಡಲು | ಅಮಿತ ಬಲವಂತನಾಗಿ ಪುಟ್ಟಿ ಆಕ್ರಮಿಸಿ ಪುಣ್ಯವನೆ ಕೆಡಿಸಿ ತಮಕೆ ಸಾಧನವಾದ ಸುಖಬಟ್ಟು ಬಹುಕಾಲ | ರಮಣಿ ಮಕ್ಕಳು ಸಹಿತದಿ | ನಿತ್ಯ | ತಮಸಿನೊಳಗೆ ವಾಸಫಲ ವ್ಯರ್ಥವಾಗದು 3 ರಾಜಸ ಗುಣದಲ್ಲಿ ಈ ಯಾತ್ರೆ ಮಾಡಲು | ಭೂಷಣವನೆ ಯಿಟ್ಟು | ವಾಜಿ ಗಜವಾಗಿ ಸೌಖ್ಯ ಈ ಜಗದೊಳು ಒಟ್ಟು ಪೋಗೋದಲ್ಲದೆ ವಿ | ರಾಜಿಸುವದು ಬಲ್ಲದೇ | ರಾಜಮಂದಿರಕೆ ನವರತ್ನ ತೆತ್ತಿಸಿದಂತೆ | ಈ ಜನದ ಸುಖದ ಫಲ ವ್ಯರ್ಥವಾಗುವದು4 ಮುಕ್ತಿಯೋಗ್ಯನು ಬಂದು ಯಾತ್ರೆಯ ಮಾಡಲು | ಮುಕ್ತಿ ಉತ್ತಮ ಕುಲದಲ್ಲಿ | ವ್ಯಕ್ತನಾಗೀ | ದಿವ್ಯ ಮನದಲ್ಲಿ ವಿರುಕುತಿ | ಭಕ್ತಿಜ್ಞಾನದಲಿ ಬಾಳಿ | ಶಕ್ತನೆಂದೆನೆ ಸತತ ಶ್ರೀಮದಾರ್ಯರ | ಭಕ್ತಿಲಿ ಲೋಲಾಡುತ | ಭಕ್ತವತ್ಸಲ ವಿಜಯವಿಠ್ಠಲ ಕೃಷ್ಣಸಾರ | ಭೋಕ್ತನಲ್ಲಿಪ್ಪನು ಫಲ ವ್ಯರ್ಥವಾಗದು 5
--------------
ವಿಜಯದಾಸ
ಶ್ರೀ ಮಧ್ವಮತ ಸಾಗರದೊಳಗೆ ಲೋಲಾಡಿ ಆ ಮಹಾತತ್ವ ತಾರತಮ್ಯಗಳ ತಿಳಿದು ಕಾಮ ಕ್ರೋಧಗಳೆಲ್ಲ ಹಳಿದು ಗುರು ಹನುಮಂತ ಭೀಮ ಮಧ್ವಮುನಿಯ ಸಾರಿರಯ್ಯ | ಅಯ್ಯಯ್ಯಾ ಪ ಅಂಜನೇಯ ಗರ್ಭದಲಿ ಜನಿಸಿ ಆಕಾಶದಲ್ಲಿ ಕಂಜನಾಪ್ತನ ತುಡುಕಿ ಕಿಷ್ಕಿಂಧದಲಿ ಕಪಿ ರಂಜನನ ಕೂಡಿ ಪಂಪಾ ತೀರದಲಿ ದೇವಂಜನ ಪಾದವ ಅಕ್ಷರಿ ಎನೊ ಭಂಜನವ ಮಾಡಿ ಲಂಕೆಯನುರಿಪಿ ಬಂದ ಪ್ರ ಭಂಜನಿಯ ಭಜಿಸಿರಯ್ಯಾ | ಅಯ್ಯಯ್ಯಾ | 1 ಧರ್ಮನಂದನೊಡನೆ ಜನಿಸಿ ಹಾಲಹಲ ಉಂಡು ಸೀರ್ಮುಟ್ಟಿ ಪೋಗಿ ನಾಗನ ಗೆದ್ದು ಅರಗಿನ ಅರ್ಮನೆಯ ದಾಟಿ ವನದೊಳಗೆ ಹಿಡಂಬನ ಶಾ ರಿರ್ಮುರಿದು ಸೀಳಿ ಬಿಸಟು ಕಿರ್ಮೀರ ದನುಜರ ಸದೆದು ಪೂತಂದು ಸು- ಶರ್ಮಕನ ಬಿಗಿದು ಕಣದೊಳಗೆ ದುಶ್ಯಾಸನನ ನಿರ್ಮಳಾತ್ಮಕನ ಭಜಿಸಿರಯ್ಯಾ | ಅಯ್ಯಾಯ್ಯಾ 2 ಹರಿಯೆ ಪರನೆಂದು ಬೊಬ್ಬಿಕ್ಕಿ ವಾದಿಗಳೆದೆ ಬಿರಿಯೆ ದು:ಶಾಸ್ತ್ರಜ ಜರಿಯೆ ದುರ್ಮತಗಳು ಪರಿಯ ಬಿಡದು ಠಕ್ಕೆ ಮೆರೆಯೆ ಧರೆಯೊಳಗೆ ಈ ಪರಿಯೆ ಮುನಿಗಾರು ಸರಿಯೆ ಪೊರೆಯ ಭಕ್ತರಿಗೆ ಸುಧೆ ಗರಿಯೆ ಜ್ಞಾನ ಮಾರ್ಗಾಂಕುರಿಯೆ ವೇದದ ಸಾರ ನೆರಿಯೆ ರಿಪುಕಾಲ ಮದಕರಿಗೆ ಕೇಸರಿಯೆ ಒಪ್ಪುವ ಭಜಿಸಿರಯ್ಯಾ | ಅಯ್ಯಯ್ಯಾ 3 ಅಜನಾಗಿ ಮುಂದೆ ಪಸರಿಸಿ ಬೆಳೆದು ಹರುಷದಲಿ ತ್ರಿಜಗವನು ನಿರ್ಮಾಣವನು ಮಾಡಿ ಒಂದೊಂದು ಸೃಜಿಸುವನು ಚಿತ್ರವಿಚಿತ್ರ ಗುಣಗಣವುಳ್ಳ ಇವನೆಂದು ವೇದಗಳು ಸಾರುತಿವೆ ಕುಜನಮತವನೆ ಪಿಡಿದು ಪುಸಿಯಿದು ಎಂದೆನ್ನದೆ ಭಜಿಸಿ ಗುರುಪಥವಿಡಿದು ಸಂದೇಹವನೆ ತೊರೆದು ಸುಜನರ ಶಿರೋಮಣಿಯಯ್ಯ | ಅಯ್ಯಾಯ್ಯಾ4 ಜಾತಿ ಸಂಕರವಾಗಿ ಜಾತಿ ಧರ್ಮವ ತೊರೆದು ಜಾತವೇದ ಸಯಜ್ಞ ಇಲ್ಲದಿದರೆ ವನಜ ಸಂ ಮೌಕ್ತಿದಮಣಿ ನುಡಿದ ಕರುಣದಲಿ ದ್ವಿ ಜಾತರನ ಉದ್ಧರಿಸ ಪೋಗೆನಲು ಜಯ ತನೋ ಜಾತ ಪುಟ್ಟಿದನು ಇಳಿಯೊಳಗೆ ಮಧ್ಯಗೇಹರ ಜಾತನಂ ಭಜಿಸಿರಯ್ಯ | ಅಯ್ಯಯ್ಯಾ | 5 ಇಳಿಯೊಳಗೆ ಬಲವಂತನಾದ ಮತ ಮಧ್ವಮತ ಸುಲಭವಾಗಿಹುದು ಸುಲಭರಿಗೆ ಕಮಲಕೇತಪನ ಹೊಳಪು ಹೊಳೆದಂತೆ ವಿಕಸಿತಾ ಮಾಡಿ ಸುಜ್ಞಾನ ಜಲಧಿಯೊಳಗಾಡಿಸುವುದು ಮಲತು ನಿಂತಿರ್ದ ಹರಿನಾಮ ದಂಡವಾ ಗುರುಕುಲತಿಲಕನಂ ಭಜಿಸಿರಯ್ಯಾ | ಅಯ್ಯಯ್ಯಾ |6 ದುರವಾದಿಗಳ ಗಂಡ ಗಜದಭೇರುಂಡ ಸಂ ಕರಣ ಪ್ರಾಣವನರದು ದುರ್ಮಾಯಿ ಮಿಥ್ಯದ ಕುಹಕ ಮುರಿದು ಉರಹಿ ಅರಿಗಳಂಗದ ಚರ್ಮ ಸುಲಿದು ಭೇರಿಗೆ ಹಾಕಿ ಹರಿಸೆ ಓಂಕಾರ ಮಣಿಯಂ ಭಜಿಸಿಯ್ಯಾ | ಅಯ್ಯಯ್ಯಾ 7 ಗುರುಕರುಣ ಪಡೆದ ಮಾನವನೆ ಸರ್ವಕೃತಾರ್ಥ ಗುರುಕರುಣ ಪಡೆಯದಿದ್ದವನ ಜನ್ಮವೇ ವ್ಯರ್ಥ ಉರಗ ಉಪವಾಸ ತಂತ್ರ ಕರಿ ಕರುಣತಿಪ್ಪುವದು ಗುರು ದಯಾಕರನಾಗೆ ಹರಿವೊಲಿದು ಸಲಹುವನು ಪಾದವ ನಂಬಿರೈಯ್ಯ | ಅಯ್ಯಯ್ಯಾ 8 ಪದ್ಧತಿಯ ಕೇಳಿ ಶುದ್ಧಾತ್ಮರಿದು ವರಗುರು ಮಧ್ವ ದುಗ್ಧಾಬ್ಧಿಯನು ಕಟಿದ ನವ ನವನೀತ ಮುದ್ದೆಯನು ತೆಗೆದು ನವವಿಧ ಭಕುತಿರಸದಿಂದ ಮೆದ್ದು ಸದ್ಭಾವದಲಿ ಸದ್ವೇಷ್ಣವರಾಗಿ ಮೃತ್ಯುವಿನ ಗೋನಾಳಿ ಒದ್ದು ಕಾಲನ ಮೀರಿ ವೈಕುಂಠಪುರ ಸಾರಿ ಸಿರಿ ಪಾದದ್ವಯವ ಭಜಿಸಿರಯ್ಯಾ ಅಯ್ಯಯ್ಯ 9
--------------
ವಿಜಯದಾಸ
ಶ್ರೀ ಮಧ್ವಾಚಾರ್ಯರ ಸ್ತೋತ್ರ ಪದ ನಮೋ ನಮೋ ಹರಿಪ್ರೀಯ ನಮೋ ನಮೋ ಸುರಗೇಯನಮೋ ನಮೋ ಗುರುರಾಯ ಮಧ್ವ ಮುನಿ ಜೀಯಾ ಪ ಧರೆಗೆ ಭಾರವಾಗಿ ಚರಿಸುತಿರೆ ಮಾಯಿಗಳುಧರಿಸಲಾರದೆ ಧರಣಿ ಸರಸಿಜೋದ್ಭವಗೆಮೊರೆಯಿಡಲು ಅಜನಾಗ ಹರಸುರರ ಸಹವಾಗಿಹರಿಯ ಸದನವ ಸಾರಿ ಅರುಹಿದನು ಇದನೆಲ್ಲ 1 ಕಾವನಯ್ಯನು ವಸುಧೆ ಭಾವವನು ತಿಳಿದನಿಲದೇವನೇ ನಿನಗೆ ಆಜ್ಞೆಯನೀಯಲುದೇವ ನೀ ನವತರಿಸಿ ಪಾವನವ ಮಾಡಿ ಸ-ಜ್ಜೀವಿಗಳ ಪೊರೆದರ ದುರ್ಜೀವಿಗಳ ನೀ ಮುರಿದೆ 2 ಕಾಮವನು ಕಡಿದು ಸನ್ನೇಮವನೆ ಹಿಡಿದು ಬಹುಸೀಮೆಯೊಳು ವಾದಿಗಳ ಸ್ತೋಮ ತರಿದುಹೇಮಕಚ್ಚುಲ ವೇಣುಗೋಪಾಲ ವಿಠಲನನಾಮಸುಧೆ ಸುಜನರಿಗೆ ಪ್ರೇಮದಲಿ ಸಮಿಯಿತ್ತೆ 3
--------------
ವೇಣುಗೋಪಾಲದಾಸರು
ಶ್ರೀ ತತ್ತ್ವವಾದ ಮತವ ಪಶ್ರೀ ತತ್ತ್ವವಾದ ಮತವಾರ್ದಿಶುಭಚಂದ್ರಮನ |ಭೂತಲದೊಳಪ್ರತಿಮನೆನಿಪ ಶ್ರೀಯತಿವರನ |ಪ್ರೀತಿಯಿಂ ಭಜಿಸೆ ಇಷ್ಟಾರ್ಥಗಳಸಲಿಸುವವಾತಜಾತನ ಸ್ಮರಿಸಿರೈ ಅ.ಪಶ್ರೀಮಾರುತನು ತ್ರೇತೆಯಲಿ ಹನುಮನೆಂದೆನಿಸಿ |ತಾ ಮುದದಿ ಅಂಜನಾದೇವಿ ಗರ್ಭದಿ ಜನಿಸಿ |ರಾಮಪಾದಾಂಬುರುಹ ಭಜಿಸಿ ಸದ್ಬಕ್ತಿಯಲಿಸ್ವಾಮಿಯಾಜೆÕಯನೆ ಕೊಂಡು |ನೇಮದಿಂ ಸಾಗರವ ದಾಟಿ ಲಂಕೆಯ ಪೊಕ್ಕು |ಪ್ರೇಮದಿಂದೊಯ್ದ ಮುದ್ರೆಯ ಜಾನಕಿಗೆ ಕೊಟ್ಟು |ಆ ಮಹದ್ವನದ ದನುಜರನೆಲ್ಲವಳಿದ - ನಿಸ್ಸೀಮ -ಹನುಮನ ಭಜಿಸಿರೈ 1ದ್ವಾಪರದಿ ಮಾರುತನು ಕುಂತಿದಾರಕನೆನಿಸಿ |ದ್ವಾಪರನ ಯುಕ್ತಯಿಂದುತ್ಕøಷ್ಟರಾಗಿದ್ದ |ಪಾಪಿಗಳನಳಿದು ಕೀಚಕ - ಜರಾಸಂಧಾದಿಭೂಪಾಲಕರನು ತರಿದು ||ದ್ರೌಪದಿಗೆ ಸೌಗಂಧಿ ಕುಸುಮವನು ತರಪೋಗ -ಲಾಪಥದೊಳಸುರಮಣಿಮಂತಕದನವ ಮಾಡೆ|ಕೋಪದಿಂದವನ ಮರ್ದಿಸಿದನತಿಬಲವಂತನಾ ಪುರುಷನಂ ಭಜಿಸಿರೈ 2ಕಲಿಯುಗವು ಪ್ರಾಪ್ತವಾಗಲು ಮಧ್ವನಾಮದಿಂದಿಳೆಯೊಳವತರಿಸಿ ಸೋಹಂ ಎಂಬ ಶಂಕರನಹುಲುಮತಂಗಳಜರಿದುಮಾಯಿಗಳಗೆಲಿದು ಮೋಹನ ಶಾಸ್ತ್ರಬಲೆಯನರಿದುಮತಿತ ದರುಶನವೈದ ನುಂಗಿ ಜೀರ್ಣಿಸಿಕೊಂಡುಪ್ರಲಯ ಭೈರವನೆಂಬ ಬಿರುದ ಅವನಿಯ ಮೇಲೆನೆಲೆಗೊಳಿಸಿ ವಿಷ್ಣು ಪರದೈವವೆಂದರುಹಿದಾಅಲವಭೋದರ ಭಜಿಸಿರೈ 3ಪ್ರತಿವಾದಿಗಿದಿರಾಗಿ ತಲೆಯೆತ್ತದಂತೆ ಸಂ-ತತ ಧರೆಯೊಳದ್ವೈತವಂಕುರಿಸದಂತೆ ದು-ರ್ಮತದ ಮೋಹನಶಾಸ್ತ್ರ ಪಲ್ಲವಿಸದಂತೆ ಮಾಯಿಗಳಮತಗಳ ಮತ ಹೆಚ್ಚದಂತೆ ||ಕ್ಷಿತಿಯೊಳಗೆ ಶ್ರೀತತ್ತ್ವವಾದ ನೆಲಸಿಪ್ಪಂತೆ |ಶ್ರುತಿಶಾಸ್ತ್ರವದ್ವೈತವಂ ಬಿಟ್ಟು ಸೆಳೆವಂತೆಪ್ರತಿಪಾದಿಸುವ ಖಳರ ದುರ್ಭಾಷ್ಯಗಳ ಜರಿದಯತಿರಾಯರು ಭಜಿಸಿರೈ 4ಪರಮವೈಷ್ಣವರ ಮಿಂಚಿಡುವ ರತ್ನದ ಸಾಣೆ |ಪರವಾದಿಗಳ ಬೆನ್ನ ಮುರಿವ ವಜ್ರದ ಸಾಣೆ |ಗುರುಮಧ್ವಮುನಿಯ ಬಲುವಿದ್ಯ ಸಾಮಥ್ರ್ಯಕ್ಕೆಸರಿಗಾಣೆ ಲೋಕದೊಳಗೆ ||ಧರೆಯೊಳಗೆ ಶ್ರೀತತ್ತ್ವವಾಗಿ ನೆಲಸಿಹ ವೀಣೆ |ಚರಿಸದಂತಿಳೆಯಲದ್ವೈತಕಿಕ್ಕಿದ ಆಣೆ |ವರಮೂರ್ತಿ ಚೈತನ್ಯ ವಂದ್ಯ ಸುತ್ರಾಮನೇ |ಪೂರ್ಣಪ್ರಜÕರ ಭಜಿಸಿರೈ 5ಅಕಳಂಕ ಚರಿತನೆ ಮುಮುಕ್ಷ ಮಸ್ತಕದಮಣಿ|ನಿಖಿಳಪೌರಾಣಶ್ರುತಿ ಶಾಸ್ತ್ರದಾಗಮದಖಣಿ|ಸಕಲವಾದಿಗಳ ಜಿಹ್ವೆಯಲಿ ಮೆಟ್ಟಿದಆಣಿಭಾಗವತಚಿಂತಾಮಣಿ ||ಯುಕುತಿ ಪರಿಪೂರ್ಣಯತ್ಯಾಶ್ರಮಕೆಕಟ್ಟಾಣಿ|ಪ್ರಕಟ ಕವಿಜನಕಮಲವ್ಯೂಹಕೆಗಗನಮಣಿ|ಸಕಲ ಜಗವಂದ್ಯ ಚೈತನ್ಯ ಚಿಂತಾಮಣಿಮುಖ್ಯಪ್ರಾಣರ ಭಜಿಸಿರೈ 6ಮುಂದೆ ಅಜನಾಗಿ ಪವಮಾನ ಕೃತಯುಗದಲ್ಲಿ |ಒಂದು ನಿಮಿಷದಲಿ ಸೃಜಿಸುವನು ಸಚರಾಚರವ |ಸಂದೇಹವಿಲ್ಲ ತಪ್ಪದು ವೇದವಾಕ್ಯವಿದುಹಿಂದೆ ಶ್ರೀಹರಿಸೇವೆಯ ||ಒಂದು ಬಯಸದಲೆ ನಿಚ್ಚಟದ ಭಕ್ತಿಯಲಿ ತಾ -ನಂದು ಮಾಡಿದಸುಕೃತ- ಫಲದಿಂದ ಬ್ರಹ್ಮತ್ವ |ಬಂದು ಯುಗ -ಯುಗದೊಳವರಿತರಿಸಿ ದೃಷ್ಟವತೋರ್ಪನಂದ ಮುನಿಪರ ಭಜಿಸಿರೈ 7
--------------
ಪುರಂದರದಾಸರು