ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಚ್ಯುತಾನಂತನೆ ನಿನ್ನ ನೆಚ್ಚಿಕೊಂಡಿಹೆನು ಇಚ್ಛಾರೂಪ ಸ್ವಚ್ಛಾಭೂಪ ಸ್ವೇಚ್ಛೋಪಾತ್ತ ಸಗುಣ ರೂಪ ಪ. ನಾಮತ್ರಯ ಮಂತ್ರ ಜಪಿಸಿ ಸೋಮಧರನು ತಾನು ಆ ಮಹಾ ಹಲಾಹಲವನು ನೇಮದಿಂದ ಜಯಿಸಿರುವನು ಕಾಮಚಾರ ಕುಮತಿ ಮನುಜರಾ ಮಾಯಾದಿಗಳನು ಶ್ರೀಮಹೀಶ ಸಿಂಧುವಾಸ ನೀ ಮನ್ನಿಸಲು ನಿಲುವದೇನು 1 ನಗಧರ ನಿನ್ನಂಘ್ರಿಕಮಲಯುಗಳ ಒಂದೆ ಸಾಕು ಎನಗೆ ತ್ರಿಗುಣ ವಿಷಯವಾದ ಸರ್ವ ನಿಗಮಕರ್ಮವ್ಯಾಕೊ ಅಗಣಿತಾತ್ಮ ಅಮೃತಾಂಧಸರ ಮಗುವಿನಂತೆ ಪೊರೆವಿ ನಗುತಲೆನ್ನ ನೀ ಕಾಯ್ದದಕೆ ಪೊಗಳಲು ನಾ ಶಕ್ತನಹುದೆ 2 ಪೋರ ಕೆಟ್ಟುಹೋದನೆಂದು ಊರಜನರು ನುಡಿದಾ ಕ್ರೂರ ಮಾತ ಕೇಳಿ ತಾಳಲಾರದೆ ನಾ ಬಂದು ವಾರಿಜಾಕ್ಷ ನಿನ್ನ ಪದಕೆ ದೂರ ಪೇಳಲಂದು ಶ್ರೀರಮಣಿಯ ಸಹಿತಲೆನಗಾಧಾರವಾದಿ ದೀನಬಂಧು 3 ಇಂದ್ರಿಯಂಗಳೆನ್ನ ವಿಷಯಬಂಧದಿಂದ ಬಿಡಲು ಒಂದು ಕರ್ಮದಲು ಸಾಂಗದಿಂದಲೆನಗೆ ನಿಲಲು ಇಂದಿರೇಶ ಈ ಕಾರಣದಿ ಕುಂದಮನಕೆ ತಾರದಿರೊ ತಂದೆ ನೀನೆ ಶರಣನೆಂದು ಹೊಂದಿರುವದನೆಣಿಸಿ ಸಲಹೊ 4 ನಾಮಸ್ಮರಣವಿತ್ತು ಕಾಯಿ ಕಾಮಿತಾರ್ಥದಾಯಿ ನೇಮ ಒಂದು ನಡೆಸದಂಥ ಪಾಮರನಾಗಿಹೆನು ಸೋಮಧರನ ಶುದ್ಧಿಕರಿಸ ಭೂಮಿತೀರ್ಥ ಜನಕರಾಮಕೃಷ್ಣ ವೇದವ್ಯಾಸ ಸ್ವಾಮಿ ಶ್ರೀನಿವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ
ಈತÀನೀಗ ವಿಜಯ ವಿಠ್ಠಲಾ ಯಾತನೆಯನು ಕಳೆದು ಪೊರೆವಾ ಪ ಕರೆದರೊಂದೆ ನುಡಿಗೆ ಬಂದು ಕರುಣದಿಂದ ಮುಂದೆ ನಿಂದು ಕರವ ಪಿಡಿದು ಅಂದು ಅಭಯ ಕರವ ಪಾಲಿಸಿದ ದಯಾಸಿಂಧು ಪರಿಪರಿಯಿಂದಲಿ ಹಿಂದು ಮುಂದು ದುರಿತದಿಂದ ನೊಂದು ಬಂದು ಮೊರೆ ವಿಚಾರಿಸಿ ಸಾಕಿದನಿಂದು 1 ಅಚ್ಯುತಾನಂತನೆಂಬ ನಾಮಾ ಅಚ್ಚು ಸುಧೆಯೆನಗೆ ನೇಮಾ ನಿಚ್ಚ ಉಣಲಿಕಿತ್ತ ಪ್ರೇಮಾ ಚಚ್ಚಲದಲಿ ಪೂರ್ಣಕಾಮಾ ಹೆಚ್ಚಿ ಬಪ್ಪ ಮದದಾ ಸ್ತೋಮಾ ನುಚ್ಚು ಮಾಡಿ ಬಿಡುವ ಭೀಮಾ ಸುಚ್ಚರಿತ ಸಾರ್ವಭೌಮಾ2 ಮೊದಲೆ ಗುರು ಪುರಂದರದಾಸರಾ ಹೃದಯದೊಳಗೆ ನಿಂದಾ ಶೃಂಗಾರಾ ಉದಧಿಯೋ ಇದು ಬಣ್ಣಿಸಿಬಲ್ಲ್ಲಿರಾ ತ್ರಿದಶರೊಳಗೆ ಕಾಣೆ ಜ್ಞಾನರ ಸದಮಲಾನಂದ ಪೂರ್ಣ ಇಂದಿರಾ ಸದನಾ ಪ್ರತಾಪಗುಣ ಪಾರಾವಾರಾ ಪದೋಪದಿಗೆ ಎನ್ನಯ ಮನೋಹರಾ3
--------------
ವಿಜಯದಾಸ