ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಳಲ್ಲಲ್ಲಲ್ಲಲ್ಯೋ ಮಾಸಾಳಲ್ಲಲ್ಲಲ್ಲಲ್ಯೋ ಪ ಹೆಚ್ಚಿದ ತಮನೆಂಬ ದನುಜ ವೇದವ ಕದ್ದುಬಚ್ಚಿಟ್ಟು ನೀರೊಳು ಮುಳುಗಿರಲುಮಚ್ಚ ರೂಪದಿಂದ ಪೋಗಿ ಅವನ ಕೊಂದಅಚ್ಯುತರಾಯನೆಂಬ ಮಾಸಾಳಮ್ಮ1 ಕೂರ್ಮ ರೂಪಿನಿಂದೆತ್ತಿದ ಗೋ-ವಿಂದನೆಂಬುವ ಮಾಸಾಳಮ್ಮ2 ವರಾಹ ರೂಪಿ ಮಾಸಾಳಮ್ಮ 3 ಲೇಸು ತಪ್ಪಿದನೆಂದು ಹಿರಣ್ಯಕ ತನಯನಘಾಸಿ ಮಾಡಲು, ಕಂಬ ಒಡೆದುದಿಸಿರೋಷದಿ ದೈತ್ಯನ ಕರುಳ ಕಿತ್ತ ನರಕೇಸರಿ ರೂಪಿನ ಮಾಸಾಳಮ್ಮ 4 ಆ ಮಹಾಸಿರಿಯ ಗರ್ವದಿ ಮುಂದರಿಯದೆಭೂಮಿಯನು ಬಲಿ ತಾನಾಳುತಿರೆನೇಮಿಸಿ ಎರಡೇ ಹೆಜ್ಜೆಯೊಳಳಕೊಂಡವಾಮನ ರೂಪಿನ ಮಾಸಾಳಮ್ಮ 5 ಕಾಮಧೇನುವಿಗಾಗಿ ಕಾರ್ತವೀರ್ಯಾರ್ಜುನಆ ಮಹಾಮುನಿಯ ಪ್ರಾಣಕೆ ಮುನಿಯೆತಾಮಸವಿಲ್ಲದೆ ಕ್ಷತ್ರಿಯರ ಸಂಹರಿಸಿದರಾಮ ಭಾರ್ಗವನೆಂಬ ಮಾಸಾಳಮ್ಮ 6 ಜನಕ ಸುತೆಯನು ಕದ್ದೊಯ್ಯಲು ಲಂಕೆಗೆಗಣಿತಾತೀತ ಶರಧಿಯ ಕಟ್ಟಿಘನ ಕೋಪದಿ ದಶಿಶಿರನ ಕತ್ತರಿಸಿದಇನಕುಲ ರಾಮನೆಂಬ ಮಾಸಾಳಮ್ಮ 7 ದೇವಕಿ ಬಸುರೊಳು ಬಂದು ಗೋಕುಲದಿಆವ ಕಾವ ಗೊಲ್ಲರ ಸಲಹಿಮಾವನ ಕೊಂದು ಮತ್ತೈವರ ಸಲಹಿದದೇವ ಕೃಷ್ಣನೆಂಬ ಮಾಸಾಳಮ್ಮ8 ಪತಿವ್ರತೆಯರ ವ್ರತವಳಿಯಬೇಕೆನುತಲಿಅತಿಶಯದಿ ತ್ರಿಪುರದ ಸ್ತ್ರೀಯರನುತ ಬೌದ್ಧ ರೂಪದಿ ಬಹು ಭಂಗಪಡಿಸಿದರತಿಪತಿಪಿತನೆಂಬ ಮಾಸಾಳಮ್ಮ 9 ಖುಲ್ಲ ಮನುಜರನು ಕೊಲ್ಲಬೇಕೆನುತಲಿಭಲ್ಲೆ ಹಿಡಿದು ತುರಗವನೇರಿಅಲ್ಲಲ್ಲೆ ಸೊಲ್ಲಡಗಿಸಿ ವಲ್ಲಭನೆನಿಸಿದಬಲ್ಲಿದ ಕಲ್ಕಿಯೆಂಬ ಮಾಸಾಳಮ್ಮ 10 ಮಂಗಳ ಮಹಿಮ ಭುಜಂಗ ಶಯನ ಕಾ-ಳಿಂಗ ಮರ್ದನ ದೇವೋತ್ತುಂಗಅಂಗಜಪಿತ ನೆಲೆಯಾದಿಕೇಶವ ಅಂತ-ರಂಗದೊಳಿರುವ ಮಾಸಾಳಮ್ಮ 11
--------------
ಕನಕದಾಸ
ಬಾ ಬಾ ರಾಘವ ಬಾ ವೀರ ರಾಘವ ಪ ಮತ್ಸ್ಯರೂಪನಾಗಿ ಹೆಚ್ಚಿದ ದೈತ್ಯನ ಇಚ್ಛೆಯಿಂದಲಿ ಕೊಂದ ಅಚ್ಯುತರಾಯನೆ 1 ಕೂರ್ಮರೂಪನಾಗಿ ಅಮರರಿಗೊಲಿದು ನೀ ಕಾಮಜನಕ ಸುಪ್ರೇಮಾವನಿತ್ಯಂತೆ4 2 ವರಹರೂಪನಾಗಿ ಧರಣಿಯ ಚೋರನ ಶಿರವ ತಂದು ನೀ ಜಗವ ಪೊರೆದ್ಯಂತೆ 3 ದುರುಳ ರಕ್ಕಸನ ಕರುಳ ತೆಗೆದು ನಿನ್ನ ಕೊರಳೊಳಗಿಟ್ಯಂತೆ 4 ಚೆಲುವತನದಿ ಪೋಗಿ ಬಲಿಯದಾನವ ಬೇಡಿ ಕಲುಷ ಹರಿಸಿ ಅವನ ಪಾತಾಳಕ್ಕೊತ್ತಿದ್ಯಂತೆ 5 ಕೊಡಲಿಯ ಪಿಡಿಯುತ ದುಗುಡ ರಾಯರುಗಳ ಸೊ ಗಡು ಮುರಿದು ನೀ ಸಡಗರ ಪಟ್ಯಂತೆ 6 ಸೀತೆಗೋಸ್ಕರ ಪೋಗಿ ಸೇತುವೆಯನೆ ಕಟ್ಟಿ ಭೂತ ರಾವಣನ ಖ್ಯಾತಿಯಿಂದಲಿ ಕೊಂದ 7 ವಾರಿಜಾಕ್ಷಿಯರ ಕೂಡಿ ನೀರಾಟದೊಳು ಪೊಕ್ಕು ನೀರೆಯರ1 ಮನ ಅಪಹಾರಮಾಡಿದ ಕೃಷ್ಣ 8 ಚಿತ್ತಜಪಿತ ನೀನು ಬತ್ತಲೆಯೊಳು ಬಂದು ಉತ್ತಮ ಸ್ತ್ರೀಯರ ವ್ರತಗಳಳಿದ್ಯಂತೆ 9 ಸುಂದರ ವಾಜಿಯ ಚೆಂದಾದಿಂದೇರುತ ಮಂದಗಮನೆಯರ ನಂದವಳಿದ್ಯಂತೆ 10 ದೋಷರಹಿತ ನಮ್ಮ ಶೇಷವಿಠ್ಠಲನೆ ಬ್ಯಾಸರವಿಲ್ಲದೆ ಪೋಷಿಸಿ ಸಲಹಲು 11
--------------
ಬಾಗೇಪಲ್ಲಿ ಶೇಷದಾಸರು
ಸರುವದ ಪಠಿಸಿರೊ ಚತುರವಿಂಶತಿನಾಮ ಸಿರಿವಿರಿಂಚಾದಿಗಳಿಗೇ ಪ್ರಿಯಕರ ನಾಮ ಪ ಮಾಧವ ಗೋವಿಂದನ ಶ್ರೀಶ ವಿಷ್ಣು ಮಧುಸೂಧನ ತ್ರಿವಿಕ್ರಮನ 1 ವಾಮನ ಶ್ರೀಧರ ಹೃಷಿಕೇಶ ಪದುಮನಾಭ ದಾಮೋದರ ಸಂಕರುಷಣ ವಾಸುದೇವನ 2 ಅನಿರುದ್ಧ ಪುರುಷೋತ್ತಮ ದೇವನ ಅಧೋಕ್ಷಜ ನಾರಸಿಂಹ ಅಚ್ಯುತರಾಯನ 3 ಜನಾರ್ಧನ ಉಪೇಂದ್ರ ಹರಿ ಶ್ರೀ ಕೃಷ್ಣಸ್ವಾಮಿಯ ಜನನ ಮರಣ ರಹಿತನಾದ ಶ್ರೀನಿವಾಸನ 4 ಈ ಮಹಾನಾಮಂಗಳ ಪ್ರೇಮದಿಂ ಪಾಡಲು ಕಾಮಿತಾರ್ಥವೀವ ಶ್ರೀ ರಂಗೇಶವಿಠಲ 5
--------------
ರಂಗೇಶವಿಠಲದಾಸರು