ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಮಂಗಳ ಪದ) ಸೃಷ್ಟಿ ಸ್ಥಿತಿ ಕಾರಣಕೆ ಕರ್ತನಾದ ಶ್ರೀ ವಿಷ್ಣುವಿಗೆ ಜಯ ಮಂಗಳಂ ಪ ಕಚ್ಛಪ ವರಾಹಾದಿ ಅವತಾರ ಸ್ವೇಚ್ಛೆಯಾದರಿಸಿದವಗೆ ನೆಚ್ಚಿ ನೆನೆಯುವರು ಮನದಿಸ್ಟೆಪೂರಿಸುವ ಶ್ರೀ ಅಚ್ಯುತಗೆ ಜಯ ಮಂಗಳಂ ಹರಿಗೆ 1 ಸಿರಿ ಬ್ರಹ್ಮವಾಯು ಮೊದಲಾದ ಸನಕಾದ್ಯರಿಂ ಸ್ತೋತ್ರಗೊಳ್ವಗೆ ಮಂಗಳಂ ನಾರದ ಶುಕಾದಿ ಮುನಿಗಳು ಪಠಿಸುವ ಪುರಾಣ ಪುರುಷೋತ್ತಮಗೆ ಮಂಗಳಂ ಹರಿಗೆ 2
--------------
ಹನುಮೇಶವಿಠಲ
ಆರತಿಯೆತ್ತಿದರೆ ಕೇಶವ ನಾರಾಯಣಗೆ ಪ. ಶಾಶ್ವತವೀವ ಮಾಧವ ವಾಸವವಂದ್ಯ ಗೋವಿಂದಗಾರತಿಯನೆತ್ತಿದರೆ ಅ.ಪ. ದ್ವಾಪರ ರಹಿತ ಶ್ರೀವಿಷ್ಣುವಿಗೆ ಅಪಾರ ಮಧುಸೂದನಗೆ ಪಾಪರಹಿತ ತ್ರಿವಿಕ್ರಮಗಾರತಿಯನೆತ್ತಿದರೆ1 ಸಾಧುಸೇವಿತ ವಾಮನಗೆ ಶ್ರೀಧರ ಹೃಷೀಕೇಶನಿಗೆ ಆದಿಮೂರುತಿ ಪದ್ಮನಾಭಗಾರತಿಯನೆತ್ತಿದರೆ 2 ದÁಮೋದರ ವಾಲುಳ್ಳವಗೆ(?) ಪ್ರೇಮದಿ ಸಂಕರ್ಷಣಗೆ ಕಾಮಿತಾರ್ಥವನೀವ ವಾಸುದೇವಗಾರತಿಯನೆತ್ತಿದರೆ 3 ಅನಿರುದ್ಧ ಪುರುಷೋತ್ತಮಗೆ ವಿನಯದಿಂದಲಿ ಅಧೋಕ್ಷಜಗಾರತಿಯನೆತ್ತಿದರೆ 4 ನರಸಿಂಹರೂಪನಾದವಗೆ ವರದ ಮೂರುತಿ ಅಚ್ಯುತಗೆ ಅರಿಭಯಂಕರ ಜನಾರ್ದನಗಾರತಿಯನೆತ್ತಿದರೆ 5 ಉಪೇಂದ್ರನೆಂದೆನಿಸಿಕೊಂಡವಗೆ ಅಪಾರಮಹಿಮ ಶ್ರೀಹರಿಗೆ ಗೋಪಾಲಮೂರುತಿ ಶ್ರೀಕೃಷ್ಣಗಾರತಿಯನೆತ್ತಿದರೆ 6 ಚತುರವಿಂಶತಿಮೂರುತಿಗಳಾ ಅತಿಶಯ ಧವಳವ ಪಾಡೆ ಸಿರಿ ಹಯವದನ 7
--------------
ವಾದಿರಾಜ
ವ್ಯರ್ಥ ಕೆಟ್ಟರು ಯಿಂದು ನರಮನುಜರು ಸಾರ್ಥಕ ಮಾಡಿಕೊಳ್ಳರು ಶರೀರವುಳ್ಳವರು ಪ ಮರುಳಾಟ ಪರ ಬುದ್ಧಿಯೊಳು ಮುಳುಗಿ ವಿಷಯವ ಭೋಗಿಸಿ ಮದ್ದು ತಿಂದಂತೆ ಇದ್ದಾದರು ಉದಯದಲಿ ಎದ್ದು ಕುಳಿತು ಒಮ್ಮೆ ಹರಿಯಂದು ನುಡಿಯದೆ 1 ಹರಿವ ಜಲವ ಮಿಂದು ಹರಿಗೆ ಅರ್ಪಿಸುತೇವೆಂದು ಬರಿದೆ ಬಾರದೆ ಬಿಂದು ಜಲ ತಂದು ಅರಘಳಿಗೆ ಅಚ್ಯುತಗೆ ಭಕುತಿಯಲಿ ಅಭಿಷೇಕ ಯರದು ಯಮಬಾಧೆ ಕಳೆಯಲರಿಯದ ಮಂಕು 2 ಅಡವಿಯಿಂದಲಿ ಒಂದು ತುಳಸಿದಳವನೆ ತಂದು ತಡಿಯದಲೆ ತಾವರೆದಳನಯನನ ಕರವ ಮುಗಿದು ಮುಕುತಿ ಪಡಿಯಲೊಲ್ಲದ ಪರಮ ಪಾಪಿಷ್ಟ ಜನರಯ್ಯಾ3 ಪತ್ರ ಫಲ ಪುಷ್ಪ ತೋಯ ಮುಂದಿರಿಸಿ ನೀಲ ಗಾತ್ರಗೆ ನೈವೇದ್ಯವೆಂದು ಬಗೆದು ಸ್ತೋತ್ರವನೆ ಮಾಡಿ ಪ್ರದಕ್ಷಿಣೆ ನಮಸ್ಕಾರ ನಿತ್ಯ ಒಂದೊಂದು ಮಾಡದೆ ಕರ್ಮಿಗಳು4 ಇಂದಿನ ಹಮ್ಮು ನಾಳಿಗೆಯಿಲ್ಲ ಈ ದೇಹ ಇಂದು ಬಂದದೆ ನಾಳೆ ಬರಲರಿಯದೂ ಸಿಂಧುಶಯನ ನಮ್ಮ ವಿಜಯವಿಠ್ಠಲನ ಮನ ಬಂದಾಗ ನೆನೆದು ಭವವನದಿ ಉತ್ತರಿಸದೆ 5
--------------
ವಿಜಯದಾಸ
ಎಲ್ಲಿಯ ಮಧುರಾಪುರವು | ಎಲ್ಲಿಯ ತಾ ಬಿಲ್ಲು ಹಬ್ಬ |ಎಲ್ಲಿಯ ಸೋದರಮಾವನೆ ಪಎಲ್ಲಿಯ ಮಲ್ಲರಸಂಗ |ಖುಲ್ಲಕಂಸನು ನಮಗೆ |ಎಲ್ಲಿಯ ಜನ್ಮದ ವೈರಿಯೆ-ಸಖಿಯೆ ಅ.ಪವೃಂದಾವನದೊಳಗಿರುವ ವೃಕ್ಷಜಾತಿಗಳೆಲ್ಲ |ಒಂದೊಂದು ಫಲದಿಂದಲಿ ಸಂದಣಿತವೆ ||ಕುಂದಕುಸುಮದಲಿರುವ ಮಂದಿರದಲಿಚಕೋರ|ಒಂದೊಂದು ಸುಖಭರಿತವೆ ||ಅಂದುಮಾಧವನಮ್ಮ ಹೊಂದಿ ಕರವಿಡಿದ |ನಂದನ ಕಂದನ ಚರಿತವೆ ಸಖಿಯೆ 1ಅಕ್ರೂರ ತಾನೆಲ್ಲ ಅಚ್ಯುತಗೆಎಡೆಮಾಡಿ |ಆ ಕ್ರೂರನೆನಿಸಿದನೆ |ವಕ್ರಮಾರ್ಗವ ಕೂಡಿ ವನಿತೆಯರ ಉಸಿರೆಣಿಸಿ |ಚಕ್ರಧರನಗಲಿಸಿದನೆ ||ಆಕ್ರಮಿಸಿ ಸುರಲೋಕ ಪಾರಿಜಾತವನಂಬು-|ಜಾಕ್ಷಿಗೆ ತಂದಿತ್ತನೆ-ಸಖಿಯೆ 2ನೀರ ಚೆಲ್ಲಾಟದೊಳು ನಿಲಿಸಿ ನಮ್ಮೆಲ್ಲರ |ನಾರಿಯರಿಗೆ ಚಲ್ಲಿದನೆ ||ಮೋರೆ ಮೋರೆ ನೋಡಿ ಅಧರಾಮೃತಗಳ |ಸಾರಿ ಸಾರಿ ಸವಿದುಂಬನೆ ||ದ್ವಾರಕಾಪುರವಾಸ ಪುರಂದರವಿಠಲ |ಸೇರಿ ನಮ್ಮನು ಸಲಹುವನೆ-ಸಖಿಯೆ 3
--------------
ಪುರಂದರದಾಸರು