ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಡಿಯ ತುಂಬಿರೆ ಕಡಲೊಡೆಯನ ಮಡದಿಗ್ಹರುಷದಿ ಪ ಬಿಡಿಯ ಮುತ್ತು ಬಿಗಿದ ತಟ್ಟೆಯ ಪಿಡಿದು ಬೇಗದಿಅ.ಪ ಅಚ್ಚ ಜರಿಪೀತಾಂಬ್ರನುಟ್ಟ ಅಚ್ಚುತನರಸಿಗೆ ಹೆಚ್ಚಿನ ಆಭರಣ ಧರಿಸಿ ಮೆರೆವ ದೇವಿಗೆ ಅಚ್ಚುತನ ವಕ್ಷಸ್ಥಳದಿ ವಾಸಿಪ ಲಕುಮಿಗೆ ಅಚ್ಚಮುತ್ತು ಅರಿಶಿನಡಿಕೆ ಉತ್ತತ್ತಿ ಫಲಗಳು 1 ಕದಳಿ ಫಲಗಳಿಂ ಅಂಬುಜಾಕ್ಷನರಸಿಗೆ ದಾಳಿಂಬೆ ತೆಂಗು ಸಹಿತದಿ ಅಂಬುಧಿಯೊಳು ಜನಿಸಿದ ಮುಕುಂದನರಸಿಗೆ ಅಂಬುಜಾಕ್ಷಿಯರೆಲ್ಲ ನೆರೆದು ಸಂಭ್ರಮಪಡುತಲಿ2 ಮಾದಳದ ಫಲವು ಮಾವು ಪನೆÀ್ನರಿಲ ಫಲಗಳ ಮಾಧವನ ಮಡದಿಗೀಗ ಮಾನಿನಿಮಣಿಯರು ಕ್ರೋಧಿನಾಮ ಸಂವತ್ಸರದಿ ಸಾಧು ಜನಗಳ ಆದರಿಸಿ ಕಾವ ಕಮಲನಾಭ ವಿಠ್ಠಲನರಸಿಗೆ 3
--------------
ನಿಡಗುರುಕಿ ಜೀವೂಬಾಯಿ
ಎತ್ತಿದರಾರತಿ ಮುತ್ತೈದೆಯರು ಬೇಗ ಅರ್ಥಿಯಿಂದಲಿ ಪಾಡಿ ಅಚ್ಚುತನರಸಿಗೆ ಪ ಇಂದಿರಾದೇವಿ ಸುಗಂಧ ಸುಂದರಿ ನಮ್ಮ ಮಂದಿರದೊಳು ನಲಿದಾಡುತಲಿಹ ತಾಯೆ ಚಂದಿರವದನೆ ಸುಂದರಿ ಶಾಂತಿ ಜಯಮಾಯೆ ಇಂದಿರೇಶನ ಪಟ್ಟದರಸಿ ವರ ಲಕ್ಷುಮಿಗೆ 1 ಕರುಣದಿ ವರಗಳ ಕರೆದು ಕೊಡುವಳೆಂಬ ಬಿರುದು ನಿನ್ನದು ತಾಯೆ ಕೊಡುವರ ಅಭಯವ ಗರುಡಗಮನನ ವಕ್ಷಸ್ಥಳದಲಿ ವಾಸಿಸು- ತಿರುವ ಸೌಭಾಗ್ಯದ ಖಣಿಯೆ ರಕ್ಷಿಸು ಎಂದು2 ಪದ್ಮಮುಖಿಯೆ ಪದ್ಮಪಾಣಿಯೆ ಪದ್ಮಾಕ್ಷಿ ಪದ್ಮಲೋಚನೆ ಪದ್ಮಸಂಭವೆ ಪೊಳೆವ ಹೃ- ತ್ಪದ್ಮದಿ ಕಮಲನಾಭ ವಿಠ್ಠಲನ ತೋರಿಪದ್ಮನೇತ್ರೆಯೆ ಶ್ರೀ ಪದ್ಮಾಲಯೆ ಪೊರೆ ಎಂದು3
--------------
ನಿಡಗುರುಕಿ ಜೀವೂಬಾಯಿ