ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉ. ದಾಸವರ್ಯ ಸ್ತುತಿ ವಿಜಯದಾಸರು ಬಾಲೆಯರ ಪಾಲಿಸೈ ದೀನಜನ ಪಾಲ ವಿಜಯಾಖ್ಯ ರಾಯಾ ಪ ಅಚ್ಚರವಲ್ಲ ಜೀಯಾ ಅ.ಪ. ಘನ ವ್ಯಾಧಿಯಂ ಪೀಡಿತಳಾಗಿ ಸೇವಿಸೆ ನೀನಾಗಿ ವಲಿದು ಅಭಯವನಿತ್ತು ನಿನ್ನ ದಾಸನೆಂದುಪದೇಶಿಶಿ ಜರಿದು ದೂರ ನೋಡುವರೇ ಪರಮ ಕರುಣಾಶರಧಿ ನಿನ್ನ ದ್ವಂದ್ವಗಳಿಗಭಿವಂದಿಪೆ 1 ಅನ್ಯಳಲ್ಲವೋ ರಾಯಾ ನಿನ್ನ ಪರಮ ಪ್ರೀತ್ಯಾಸ್ಪದನ ತನುಜಳೋ ಸದ್ಭಕುತಿಯುಳ್ಳವಳು ಸಲ್ಲೇಲ ಸಂಪನ್ನೆ ಸತ್ಯಭೇದ ಜ್ಞಾನ ಸಚ್ಚಿತ್ತಪುರಿರಾಜನಿಂದ ಪಡೆದು ನಿನಗೆ ಸರಿಯಾಗಿ ತೋರಿದ ಬಳಿಕ 2 ಬಹೂಪರಿಯಿಂದ ಬೇಡುವೆನೊ ತವಚರಣ ನಂಬದ ಶರಣೆಯೆಂತೆಂದು ಕಣ್ತೆರೆದು ಕರುಣಿಸೊನಿನ್ನ ಶರಣರೊಳು ಶರಣಾಧಮನಯ್ಯ ಉದಾಶಿಸದೆ ಸಲಹು ತಂದೆವರದಗೋಪಾಲವಿಠ್ಠಲನ ಪ್ರೀಯಾ 3
--------------
ತಂದೆವರದಗೋಪಾಲವಿಠಲರು
ನಿನಗೆ ಅಚ್ಚರವಲ್ಲ ಅನುಮಾನಸಲ್ಲಾ ಇನಿತು ಶ್ರಮ ಕಳೆಯದಿರೆ ಘನತಿಲ್ಲ ನಿಮದಲ್ಲ ಪ ಹಿಂದೆ ನಿನ್ನ ಅಜ್ಞಾ ನಾ ಒಂದು ಮೀರಿದಕೆ ನೀ ಇಂದು ಭವಭವಣೆ ಬಹುಪರಿಯಿಂದಲೀ ತಂದು ನೋಯಿಸಿ ಮನಸುನಿಂದದಲೆ ಪರರಿಗೆ ಇಂದು ಮೊರೆಯನು ಹೋಗಿಸುವುದು ಥರವೇ ಹರಿಯೇ 1 ಒಂದು ತಿಳಿಯದಲೆ ನಾನು ಅಂದ ಮಾತಿಗೆ ಮನಸು ನೊಂದು ಈ ತೆರದಿ ಮಾಡುವುದು ರೀತೇ ಕಂದನಪರಾಧಗಳ ಒಂದು ನೋಡದ ಜನನಿ ಯಂದದಲಿ ನೀ ಪಾಲಿಸುವುದು ಸ್ವಾಮೀ ಪ್ರೇಮೀ 2 ಜಾತಮಗನನು ನಿಜತಾತ ಪರರಿಗೆ ತಾನು ಆತುರಾದಿಂದಲಿ ಮಾರಿದಂತೆ ದೂತರನು ಜಗದೇಕÀನಾಥ ನೀ ಪರಿಪರಿ ಫಾತಿಸಲು ಇನ್ನಾರು ಪೊರೆªರೈಯ್ಯಾ ಜೀಯಾ 3 ನಂಬಿದವರನ್ನು ನೀ ಅಂಬಿನಲಿ ಹೊಡೆವರೆ ಅರಿ ಪದುಮ ಗದಧರಪಾಣಿಯೆ ತುಂಬಿದ್ಹರಿಗೋಲಲ್ಲಿ ಇಂಬುಗೊಂಡಿರುವಾಗ ಅಂಬುಧಿಮುಣುಗಿಸುವದು ಥರವೇನೋ 4 ಯಾತಕೀಸೊ ಮಾತು ಸೋತೆ ನಾ ನಿನಗೀಗ ವಾತದೇವನ ತಾತ ಸೀತಾನಾಥಾ ನೀತ ಶ್ರೀಗುರುಜಗನ್ನಾಥ ವಿಠ್ಠಲರೇಯ ಮಾತು ಲಾಲಿಸಿ ಪಾಲಿಸುವದು ಇನ್ನಾ ಚೆನ್ನಾ 5
--------------
ಗುರುಜಗನ್ನಾಥದಾಸರು