ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬರುವ ಸಂದಣಿ ಭಾಳೆ ಭಾಳವೆ ಅಲ್ಲಿ ರಂಭೆ ಊರ್ವಶಿಯರ ಸಮ್ಮೇಳವೆ ಪ. ವರಗಿರಿ ವಾಸನ ಕರೆಯ ಬರುವ ಸೊಬಗು ಧರೆಯ ಮ್ಯಾಲಿಲ್ಲ ಸುಂದರಿಯೆ ರುಕ್ಮಿಣಿಯೆ 1 ಪಾಂಚಾಲಿ ಮೊದಲಾದ ಕೆಂಚೆಯರ ಆಭರಣವುಮಿಂಚಿನಂತೆ ಹೊಳೆಯುತ ಸಿದ್ಧರಾಗಿಹರಮ್ಮ ಚಂಚಲೆಯರು2 ಕಾಲಿಂದಿ ಮೊದಲಾದವರು ಭಾಳ ವಸ್ತಗಳಿಟ್ಟುವೈಯಾರಿಯರು ಒಲಿಯುತ ವ್ಯಾಳಾಶಯನನ ಬಳಿಗೆ 3 ಭದ್ರೆ ಮೊದಲಾದವರು ತಿದ್ದಿ ತಳಪಿಟ್ಟು ಶುದ್ಧ ವಸ್ತಗಳಿಟ್ಟುಸಿದ್ಧರಾಗಿಹರಮ್ಮ ಅನಿರುದ್ದನ ಕರೆಯಲು4 ಮಂದಗಮನೆಯರು ಗಂಧಕಸ್ತೂರಿ ಪುಷ್ಪಅಂದಾಗಿ ಧರಿಸಿ ಆನಂದವಾಗಿಹರಮ್ಮ5 ಕಾಲಂದುಗೆಗೆಜ್ಜಿ ತೋಳಲೆ ತಾಯಿತ ಭಾರಿ ವಸ್ತಗಳಿಟ್ಟು ಲೋಲ್ಯಾಡುತಿಹರಮ್ಮ6 ಅಚ್ಚಮುತ್ತಿನ ವಸ್ತ ಸ್ವಚ್ಚತೋರುವಂತೆ ಬಿಚ್ಚಿ ಚಾದರ ಹೊತ್ತು ಮಚ್ಚನೇತ್ರಿಯರೆಲ್ಲ 7 ಅಂದುಗೆ ಅರಳೆಲೆ ಬಿಂದುಲಿ ಭಾಪುರಿ ಕಂದರಿಗೊಸ್ತಗಳಿಟ್ಟು ಆನಂದವಾಗಿಹರಮ್ಮ8 ಮುತ್ತಿನ ಝಲ್ಲೆ ವಸ್ತಗಳಿಟ್ಟು ಫುಲ್ಲನಾಭನ ಕರೆಯಲು ಎಲ್ಲರೂನಿಂತಾರೆ9 ಶ್ರೇಷ್ಠ ರಾಮೇಶನ ಅಷ್ಷೊಂದು ಕರೆಯಲು ಪಟ್ಟಾವಳಿಗಳನುಟ್ಟು ಧಿಟ್ಟೆಯರು ನಿಂತಾರೆ10
--------------
ಗಲಗಲಿಅವ್ವನವರು
ಬಾರೊ ರಂಗ ಕೋಮಲಾಂಗ ದಾರಿಗೆ ತನ್ನಂಗಸಂಗ ನೀಡಲ್ಹೋದ ಎನ್ನ ಕಂಗಳಿಂದ ನೋಡದೆ 1 ಉಂಗುರಗುರುಳ ಚೆಲ್ವೆ ಉದಯಭಾಸ್ಕರನಂತಿದ್ದ ಜಾಂಬವಂತಿಯೇರ್ಹಂಬಲಿಸುತ್ಹೋದನೆ ಸಖಿಯೆ 2 ರಂಗುತುಟಿ ರಜತದಾಭರಣ ಕುಂದಣದಂತಿರುವೋ ಕೋಮಲೆ ಇಂದು ನಾ ಕರೆತಾವೇನಮ್ಮ ಸುಂದರಾಂಗನ 3 ವೇಳ್ಯಮಾಡಿದೆನ್ನರಮಣ ಕಾಳಾದೇವಿ ಮನೆಯಲವಳ ತೋಳ ಪಿಡಿದು ಸೆಳೆಮಂಚದಲ್ಲಿ ಕುಳಿತಿಹನೆ 4 ಏಳು ಏಳೆಂದೆಬ್ಬಿಸುತಲಿ ಈರೇಳು ಲೋಕದೊಡೆಯನ ನಾಳೆ ನಾ ಕರೆತಾವೇನಮ್ಮ ನಾರದಪ್ರಿಯನ 5 ಅಮ್ಮನಾ ಸ್ಮರಿಸಲ್ಲಾ ್ಹ್ಯಗೆ ಪನ್ನಂಗಶಯನ ನೀಲ ರನ್ನಮಂಚದಲ್ಲಿ ಲೆತ್ತವನ್ನಾಡಹೋದ 6 ಅನ್ನವನು ಬಿಟ್ಟು ಭಾಮೆ ತನ್ನ ಪ್ರಾಣ ತೊರೆವೋಳೆಂದು ಮನ್ನಿಸಿ ಕರೆತಾವೇನಮ್ಮ ನಿನ್ನಾಳುವೋನ 7 ಮುದ್ದು ಮುಖವನು ನೋಡುತಿದ್ದನಾಕೆ ಮಂದಿರದಲ್ಲಿ ಮದ್ದು ಮಾಡ್ವೊಲಿಸಿದ್ದಾಳೇನಾ ಭದ್ರಾ ಕೃಷ್ಣಗೆ 8 ಸದ್ಯೋಜಾತನಯ್ಯನಯ್ಯ ಕದ್ರುಕುಮಾರನ ಶಯ್ಯ- ನ್ನ ್ಹದ್ದೇರಿಸಿ ಕರೆತಾವೇನಮ್ಮ ಪದ್ಮನಾಭನ 9 ಅತ್ಯಂತ ಪ್ರೀತಿ ಮೋಹದ ಮಿತ್ರವಂತೆ ಮಂದಿರದಲ್ಲಿ ವತೆÀ್ತಯಿಟ್ಟಂತಾಯಿತಮ್ಮ ವಾಮಾಂಗಿ ಹರಿಯ 10 ಸತ್ಯವಾಗಿ ಕೇಳೇ ಭಾಮೆ ಹೆತ್ತ ತಾಯಿ ತಂದೆಯರಾಣೆ ಹಸ್ತ ಮುಗಿದು ಕರೆತಾವೇನರ್ಕಕೋಟಿತೇಜನ 11 ಪಚ್ಚೆಪದಕ ರತ್ನದಾಭರಣ ಅಚ್ಚಮುತ್ತಿನಂತಿರುವೊಳ್ವೊಯ್ಯಾರಿ ಮೆಚ್ಚು ಮಾಡೊಲಿಸಿದ್ದಾಳೇನೊ ಲಕ್ಷಣಾ ಹರಿಯ 12 ರಕ್ಷಿಸ್ಹರಿ ರಕ್ಷಿಸೆಂದು ಇಕ್ಷು ಬಿಲ್ಲನಯ್ಯನ ಕರೆತಂದು ಈ ಕ್ಷಣದಲ್ಲಿ ಕೂಡಿಸುವೆ ಇಂದಿರಾಪತಿಯ 13 ಚೆಲ್ವೆರುಕ್ಮಿಣಿ ಮಂದಿರದಲ್ಲಿ ಮಲ್ಲಿಗೆ ಮಂಚದಲ್ಲೆಚ್ಚರಿ- ಲ್ಲದ್ಹಾಗೆ ಕುಳಿತಿದ್ದ ಬರುವೋನಿಲ್ಲಿಗಿನ್ನಾ ್ಹ್ಯಗೆ14 ಪಲ್ಲವಪಾದಗಳಿಂದ ನಿಲ್ಲದೆ ಭೀಮೇಶಕೃಷ್ಣ ಇಲ್ಲಿಗೆ ಬಂದಿರುವ ನೋಡೆ ಫುಲ್ಲನಯ್ಯನು 15
--------------
ಹರಪನಹಳ್ಳಿಭೀಮವ್ವ
ಲಾಲಿ ಆಡಿದ ರಂಗ ಲಾಲಿ ಆಡಿದ ಪ. ಬಾಲೆ ರುಕ್ಮಿಣಿ ದೇವೇರೊಡನೆ ಮೂರು ಲೋಕನಾಳ್ವ ದೊರೆಯುಅ.ಪ. ಸಾಧು ಮಚ್ಚಕಚ್ಚಪರೂಪನಾಗಿ ಭೇದಿಸಿ ತಮನ ಕೊಂದುವೇದವನ್ನು ಮಗನಿಗಿತ್ತು ಭೂದೇವಿಯರೊಡನೆ ಕೃಷ್ಣ 1 ಅಮೃತ ಬಡಿಸಿ ಸತ್ಯಭಾಮೆಯರೊಡನೆ ಕೃಷ್ಣ2 ವರಾಹ ರೂಪನಾಗಿ ಆದಿ ಹಿರಣ್ಯಕನ ಕೊಂದುಮೇದಿನಿಯ ಮೇಲಕೆ ತಂದು ರಾಧೆಯೊಡನೆ ನಗುತ ಕೃಷ್ಣ 3 ಪುಟ್ಟಬಾಲನ ನುಡಿಯ ಕೇಳಿ ಕೆಟ್ಟ ಕಶ್ಯಪನುದರ ಸೀಳಿಅಷ್ಟಮಂಗಳವಾದ್ಯವಾಗಲು ಅಷ್ಟ ಸ್ತ್ರೀಯರೊಡನೆ ಕೃಷ್ಣ 4 ಸುರರು ಲಕುಮಿಯೊಡನೆ ನಗುತ ಕೃಷ್ಣ 5 ಯುದ್ಧದಲಿ ಕೊಡಲಿ ಪಿಡಿದು ಗುದ್ದಿ ಕ್ಷತ್ರೇರ ಶಿರವ ತರಿದುಗೆದ್ದ ಸಿಂಹನೆನಿಸಿಕೊಂಡು ಪದ್ಮಾವತಿಯ ಕೂಡೆ ಕೃಷ್ಣ 6 ಸೇತುಬಂಧನವನ್ನೆ ಮಾಡಿ ಧೂರ್ತರಾವಣನ್ನ ಕೊಂದುಖ್ಯಾತಿಪಡೆದು ಪುರಕೆ ಬಂದು ಸೀತೆಯೊಡನೆ ರಾಮಚಂದ್ರ 7 ಒಂದು ಏಳು ಎಂಟುಸಾವಿರ ಇಂದುಮುಖಿಯರನ್ನು ಕೂಡಿಮಂದಮಾರುತ ಚಂದ್ರ ಬರಲು ನಂದಗೋಕುಲದ ದೊರೆಯು 8 ಅಂಬರವ ತೊರೆದು ದಿಗಂಬರÀ ವೇಷವನ್ನೆ ಧರಿಸಿಮಂಗಳಾಂಗ ಮಾರಜನಕ ರಂಗನಾಯಕಿಯೊಡನೆ ಕೃಷ್ಣ9 ಅಚ್ಚಮುತ್ತಿನಾಭರಣವಿಟ್ಟು ಲಕ್ಷವಿಲ್ಲದೆ ಹಯವನೇರಿಭಕುತರಿಗೆ ಅಭಯಕೊಡುತ ಭಕ್ತವತ್ಸಲ ಹಯವದನ 10
--------------
ವಾದಿರಾಜ
ಸತ್ರಾಜಿತ ಕುಮಾರಿ ಗೃಹಕೆ ಪಕ್ಷಿವಾಹನ ತನ್ನ ಅಚ್ಛದ ಸತಿಯ ಕಾರಣನೆಲ್ಲೂ ಭಾಮೆ ಇಚ್ಛೆಯಿಂದಲಿ ಬಂದನಿಲ್ಲೆ 1 ಮಚ್ಛಲೋಚನೆ ನಗುತ ಅಚ್ಚಮುತ್ತಿನ ದ್ವಾರ್ಯ ಮುಚ್ಚುಕದವ ತೆಗೆಯದೆ ಭಾಮೆ ಅಚ್ಚುತನ ಕೂಡ ವಿನಯದಿ 2 ಮದಗಜಗಮನೆ ಕೇಳೆ ಗಜವರದನು ನಾನೆ ಕದವ ತೆಗೆಯೆ ಕಮಲಾಕ್ಷಿ ಭಾಮೆ ಮುದದಿ ನೋಡೆನ್ನ ನಿರೀಕ್ಷೆ 3 ಗಜವರದನೆ ಗಜವ ವಧೆ ಮಾಡಿದವನು ನಿನ್ನ ನೆಲೆಯ ಬಲ್ಲವರು ನಾವಲ್ಲ ಕೃಷ್ಣ ಕದವ ತೆಗೆಯೋರ್ಯಾರಿಲ್ಲ4 ಉದಕÀದೊಳು ಮುಣುಗಿ ಬ್ಯಾಗ ಮದಕದಿಂದ್ಹಯನ ಕೊಂದು ತವಕದಿ ವೇದವ ತಂದೆ ನಾನು ಭಾಮೆ ಮತ್ಸ್ಯ ನಾನೆ 5 ಹೊಳೆವೊ ಮತ್ಸ್ಯನಾದರೆ ಶರಧಿ ಹುಡುಕುತ ಹೋಗೊ ನಿನಗಾವಾಸಸ್ಥಾನಯಿದಲ್ಲ ಕೃಷ್ಣ ಜಲವೆನ್ನ ಮನೆಯೊಳಗಿಲ್ಲ 6 ಅಂಬುಧಿ ಮಥಿಸಿ ಅಮೃತ ತಂದು ಸುರರಿಗಿಟ್ಟು ಮಂದರವ ಬೆನ್ನಲಿ ತಾಳಿದೆನೆ ಭಾಮೆ ಸುಂದರ ಕೂರ್ಮನು ನಾನೆ 7 ಸುರರಸುರರ ಯುದ್ಧ ಬಿಟ್ಟು ಮೋಹಿನ್ಯಾಗಲ್ಲಿ ನಡೆ ನಾ ಸ್ತ್ರೀರೂಪ ನೋಡೋಳಲ್ಲ ಕೃಷ್ಣ ಛಲದಿಂದ್ವಂಚಿಸು ಹೋಗವರನೆಲ್ಲ 8 ಮಣ್ಣು ಕೆದರುತಲ್ಹೋಗ್ಹಿ- ರಣ್ಯಾಕ್ಷನ್ನ ಸೀಳಿ ಮನ್ನಿಸ್ಯವನಿಯ ತಂದೆ ನಾನೆ ಭಾಮೆ ವರಾಹ ನಾ ಬಂದೀನೆ 9 ವರಾಹ ನೀನಾದರೆ ಗರಿಗಂಹರವ ಸೇರೊ ಮನೆಗೆ ಬರುವೋದುಚಿತಲ್ಲ ಕೃಷ್ಣ ಮೆಲುವ ಬೇರೆನ್ನ ಮನೆಯೊಳಿಲ್ಲ 10 ತರಳ ಕರೆಯಲು ಕಂಬ ಒಡೆದಸುರನ ಒಡಲ ಕಡು ಕೋಪವನ್ನು ತಾಳಿದನೆ ಭಾಮೆ ವರಲಕ್ಷ್ಮೀನರಸಿಂಹ ನಾನೆ 11 ಕರುಳಾಧಾರಕ ಕೇಳೊ ಕರಾಳವದನಕ್ಕಂಜುವೆನು ಕಡುಕೋಪ ಎನ್ನೊಳು ತರವಲ್ಲ ಕೃಷ್ಣ ತರಳರಂಜುವರು ಲಕ್ಷ್ಮೀನಲ್ಲ 12 ಅಂಜೋದ್ಯಾತಕೆ ಚಿಕ್ಕ ಕÀಂದ ವಟುವು ಚೆಲ್ವ ಸುಂದರ ವಾಮನನು ನೋಡೆ ಭಾಮೆ ಬಂದೆನ್ನ ಗುಣವ ಕೊಂಡಾಡೆ 13 ಕಪಟ ರೂಪದಿ ದಾನ ತ್ರಿಪಾದ ಭೂಮಿ ಬೇಡಿದ ವಿಪರೀತ ಮಾಯವ ಕಂಡವಳಲ್ಲ ಕೃಷ್ಣ ಅಪರ್ಮಿತ ಗುಣ ಬಲಿ ಬಲ್ಲ 14 ಸರಸಿಜಮುಖಿ ಕೇಳೆ ನಿರುತ ಜಪತಪಾಚರಿಸಿ ಪರಶುರಾಮನು ನಾ ಬಂದೆನೆ ಭಾಮೆ ಶರಥ ಮಾಡದಿರೆನ್ನೊಳು ನೀನೆ 15 ನಿರುತ ನಿಷ್ಠೆಯ ಬಲ್ಲೆ ಗುರುತು ಮಾತೆಯ ಕೊಂದೆ ಸರಸವಾಡುವೋಳು ನಾನಲ್ಲ ಕೃಷ್ಣ ಶರಥÀ ಕ್ಷತ್ರಿಯರಲ್ಲಿದು ಹೋಗೆಲ್ಲ 16 ಎರಡೈದು ಶಿರಗಳ ಕಡಿದು ಜಾನಕಿದೇವಿ ಒಡಗೊಂಡಯೋಧ್ಯವನಾಳಿದೆನೆ ಭಾಮೆ ಪೊಡವಿಗೊಡೆಯ ರಾಮ ನಾನೆ 17 ಅಡವಿ ಅರಣ್ಯ ತಿರುಗಿ ಮಡದಿಗಪನಿಂದ್ಯವ ಕಟ್ಟಿ ಅಡವಿಗಟ್ಟ್ಯಂತಃಕರಣವಿಲ್ಲ ಕೃಷ್ಣ ಬಿಡು ನಿನ್ನ ಸುಳ್ಳು ವಚನವಿದೆಲ್ಲ 18 ಯದುವಂಶದೊಳು ಜನಿಸಿ ವಧೆಮಾಡಿ ದೈತ್ಯರ ನಿರ್ಭಯದಿಂದ ಬೆಳೆದೆನೆ ಭಾಮೆ ಮಧು ಮುರಾಂತಕÀ ಕೃಷ್ಣ ನಾನೆ 19 ಕಲಹ ಮಾಡುತ ಕಾಲ- ಯಮನಿಂದಲೋಡಿ ಬಂದು ನಿರ್ಭಯದಿಂದ ಬೆಳೆಯಲು ನಿಂದೆಲ್ಲ ಕೃಷ್ಣ ಮಲಗಿದ ಮುಚುಕುಂದ ಬಲ್ಲ 20 ನಿಗಮ ನಿಂದ್ಯವ ಮಾಡಿ ಬಗೆಯಿಂದ ತ್ರಿಪುರರ ಚೆದುರೆಯರನು ಒಲಿಸಿದೆನೆ ಭಾಮೆ ಸುಗುಣ ಶರೀರ ಬೌದ್ಧ ನಾನೆ 21 ತ್ರಿಪುರ ಸತಿಯರನೆಲ್ಲ ವಶಮಾಡಿದಂಥ ಶೂರ ವಸನರಹಿತಾಗಿ ತಿರುಗೋದÀಲ್ಲ ಕೃಷ್ಣ ಶಶಿಮುಖಿಯರು ನಗುವರೆಲ್ಲ 22 ಚೆಲುವ ತುರುಗನೇರಿ ಹೊಳೆವೋ ಕತ್ತಿಯ ಶೂರ ಖಳರ ಮರ್ದನ ಮಾಡುವೆನೆ ಭಾಮೆ ಥಳಥಳಿಸುವ ಕಲ್ಕ್ಯ ನಾನೆ23 ಕಲಿಯ ಸಂಹಾರ ಕೇಳೊ ನಿನ್ನ ಕತ್ತಿಗಂಜುವರ್ಯಾರೊ ಕಟಿಪಿಟ್ಯೆನ್ನೊಳು ತರವಲ್ಲ ಕೃಷ್ಣ ಕಲಿಗಳೆನ್ನರಮನೆಯೊಳಿಲ್ಲ 24 ಜಾಂಬವಂತನ್ನ ಗೆದ್ದು ತಂದೆ <
--------------
ಹರಪನಹಳ್ಳಿಭೀಮವ್ವ