ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಚ್ಚು ಹಿಡಿದಿದೆ ಎನಗೆ ಹುಚ್ಚು ಹಿಡಿದಿದೆ ಪ ತುಚ್ಛ ವಿಷಯವೆಂಬುವಂಥ ಅಚ್ಚಮದ್ದು ನೆತ್ತಿಗೇರಿಅ.ಪ ಹಿರಿಯರರಿಯೆ ಕಿರಿಯರರಿಯೆ ಹರಿಯ ಸ್ಮರಣೆ ಮಾಡಲರಿಯೆ ನಾರಿಯರ ಪರಿಚಯದಿ ಆರು ಪುರುಷರೊಡನೆ ಇರುವೆ 1 ಇದ್ದರಿದ್ದೆ ಎದ್ದರೆದ್ದೆ ಇದ್ದ ಸುದ್ದಿ ಪೇಳಲರಿಯೆ ಕದ್ದ ಕಳ್ಳನಂತೆ ಇದ್ದು ಬುದ್ಧಿ ಹೊದ್ದಿಕಿ ಬಿಟ್ಟಿರುವೆ 2 ಹೀನಗುಣಗಳೇನು ಪೇಳಲಿ ಶ್ರೀ ನರಹರಿಯೆ ನೀನೆ ಬಲ್ಲಿ ಮಾನವಂತರು ಜ್ಞಾನವಿತ್ತು ಅಜ್ಞಾನ ವಿಷಯ ಹಾನಿ ಮಾಡಿರಿ3
--------------
ಪ್ರದ್ಯುಮ್ನತೀರ್ಥರು