ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಮಾರ್ಗ ಧನ್ಯಧನ್ಯವೆನ್ನಿ ಕರುಮುಗಿದು ಅನ್ನಿ ಧ್ರುವ ಮರೆವ ಗರ್ವವ ಮುರಿವ ಹರಿವ ಮೂರೆರಡಂಕುರವ ತೋರುವ ದೋರುವ ಯರ್ಹ ಪಜರುವ ಹೊಡೆವ ಮರುವ್ಹ ಅರುವ ಗುರುವಿನ ಕರುವ್ಹ ಬೆರುವ ಪರಾತ್ಪರವ ಇರುವ ಹರುಷದಿ ಸ್ಥಿರುವ ಕರೆವ ಸಾರಾಯ ಸುರೆವ 1 ಕಾಯ ಕಳವಳವ ಅಳೆವ ಚಿತ್ತ ಚಂಚಲವ ಗಳುವ ಭಾವದುಶ್ಚಲವ ಉಳುವ ಉಪಾಯಲಳಿವ ನಲುವ ನೋಡಿ ನಿಶ್ಚಲವ ಬಲಿವ ಭಕ್ತಿ ಅಚಲವ ತಿಳುವ ಸದ್ವಸ್ತುದ ಹೊಳೆವ 2 ಕೆಡುವ ಬುದ್ದಿಯ ಬಿಡುವ ಕಡೆವ ಸಂದೇಹ ದೃಢವ ನುಡಿವ ಶ್ರುತಿಯಂತೆ ನಡುವ ಜಡೆವ ಸದ್ಬಕ್ತಿವಿಡುವ ತುಡುವ ವೈರಾಗ್ಯನೆ ಮುಡುವ ಸದ್ಗತಿ ಸದ್ಗುರುಗತಿಪಡೆವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾವಧಾನವೆಂದು ಶ್ರುತಿಸಾರುತಿದೆಕೋ ಭಾವದಿಂದಲಿ ಮನವೆ ನೀ ಎಚ್ಚತ್ತುಕೋ ಧ್ರುವ ಭವದ ನಿದ್ರಿಗಳೆದು ಸಾವದಾನವಾಗೋ ನಿವಾಂತ ಕೂಡಲಿಕ್ಯದ ಬಲು ಬೆಳಗೋ ವಿವೇಕವೆಂಬ ಸ್ಮರಣೆ ಇದೆ ನಿನಗೋ ಭವಹರ ಗುರುವಿಗೆ ಶರಣಯುಗೋ 1 ಮುಚ್ಚಿದ ಮಾಯದ ಮುಸಕ್ಹಾರಿಸುವದೆ ಙÁ್ಞನ ಎಚ್ಚತ್ತಮ್ಯಾಲಿದೆ ಖೂನ ಸುವಸ್ತು ಧ್ಯಾನ ಅಚ್ಯುತಾನಂತನ ಕಾಂಬುದನುಸಂಧಾನ ಅಚಲವೆಲ್ಲಕ್ಕಿದೆ ಸುಪಥಸಾಧನ 2 ಬೆಳಗಿನ ಬೆಳಗಿದೆ ಬಲು ನಿಶ್ಚಲ ಒಳಗೆ ಹೊರಗೆ ತೋರುವ ಆನಂದ ಕಲ್ಲೋಳ ಹೊಳೆವ ಮಹಿಪತಿಸ್ವಾಮಿ ಪ್ರಭೆಯು ಬಹಳ ಬೆಳಗಾಯಿತು ಗುರುದಯ ಪ್ರಬಳ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು