ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಾಥ ರಕ್ಷಕ ಆಪದ್ಬಾಂಧವ ಶ್ರೀಪತಿ ಕೇಶವ ಮಾಧವನೆ ಪ ಮದನ ಗೋಪಾಲನೆ ಮಾತರಿಶ್ವಪ್ರಿಯ ಹರಿ ಶ್ರೀಶ ಅ.ಪ ಬಿಟ್ಟ ಕಂಗಳ ಮುಚ್ಚದೆ ತಿರುಗುವ ಬೆಟ್ಟವ ಬೆನ್ನಿನೊಳಾಂತಿರುವ ಗಟ್ಟಿನೆಲವ ಕೆದರುತ ಬೇರರಸುವ ಹೊಟ್ಟೆಯ ಕರುಳನೆ ಬಗೆದಿರುವ1 ಪೊಡವಿಯ ಬೇಡುತ ಕೊಡಲಿಯ ಪಿಡಿಯುತ ಪೊಡವಿಪರೆಲ್ಲರ ಗೆಲಿದವನೆ ಮಡದಿಯನರಸುತ ಕಡಲನು ಕಟ್ಟುತ ಕಡಹಲ್ದ ಮರನೇರ್ದ ಮೃಡಸಖನೆ2 ಬುದ್ಧನಾಗಿ ತ್ರಿಪುರರ ಗೆಲಿದವನೆ ಶುದ್ಧ ಹಯವನೇರಿ ಮೆರೆದವನೆ ಹದ್ದುವಾಹನವೇರುತ ನಲಿದಾಡುವ ಪದ್ಮನಾಭ ಪುರುಷೋತ್ತಮನೆ3 ಅಗಣಿತ ಮಹಿಮನೆ ಖಗವರವಾಹನ ನಿಗಮವೇದ್ಯ ನಿರ್ಮಲಚರಿತ ಬಗೆಬಗೆಯಿಂದಲಿ ಭಜಿಸುವ ಭಕುತರ ಅಘನಾಶನ ಸುಜನರ ಪ್ರಿಯ 4 ಸೌಮ್ಯ ವತ್ಸರದಿ ಸುಂದರಶ್ಯಾಮನ ಸಾಮಗಾನಲೋಲನ ಭಜಿಸಿ ಕಾಮ್ಯಕರ್ಮಗಳ ತ್ಯಜಿಸಲು ಹರುಷದಿ ಕಮಲನಾಭ ವಿಠ್ಠಲ ಒಲಿವ 5
--------------
ನಿಡಗುರುಕಿ ಜೀವೂಬಾಯಿ
ದುರ್ಲಭ ಇದು ಕಲಿಯುಗದೊಳಗೆ ಕಾಣಾ ಎಲ್ಲರಿಗೆ ದೊರಕಬಲ್ಲದೆ ಶ್ರೀ ವಲ್ಲಭನ ಪಾದಸೇವೆ ಮಾಡೋ ನೀ ನಲಿದಾಡೋ ಎಲೆ ಮನುಜಾ ಪ ಗಂಧರ್ವರು ಸಿದ್ಧರು ವಿದ್ಯಾ ದರಸಾಧ್ಯ ಗುಹ್ಯಕ ಸುರಮುನಿಗಣ ಗರುಡಾದ್ಯರೆ ನೆರೆದು ಪುರಹರ ಮೂವನ ಬಲ್ಲಿದರೀ ಇಲ್ಲವೆನುತಲಿ ಬರಿದು ರೇಖೆಯ ಬರಿಸಿದರೊ ಡಂಗುರ ಹೊಯಿಸಿದರೊ ಎಲೆ ಮನುಜಾ 1 ಹರಿಯೆಂತೆಂದವ ಧರ್ಮಕೆ ಸಂದವ ಕರದಲಿ ದಂಡಿಗೆ ಪಿಡಿದವ ಪುಣ್ಯವ ಪಡೆದವ ಚರಣದ್ವಯದಲಿ ಗೆಜ್ಜೆಯ ಕಟ್ಟಿದವ ಅಟ್ಟಿದವ ಯಮ ಭಟರ ಹರಿಹರಿದಾಡುತ ಕುಣಿದವ ಉತ್ತಮ ಗುಣದವ ಹಿರಿದಾಗಿ ಗಾಯನ ಪಾಡಿದವ ಸುರರನ ಗೂಡಿದವ ಮಾಯವ ಬಿಡೋ ಎಲೆ ಮನುಜಾ2 ಭವಾಬ್ಧಿ ದಾಟಿದವ ಇಂಬಾಗಿ ಕಡ್ಡಿ ವಾದ್ಯವ ಹಾಕಿದವ ದುರುತವ ನೂಕಿದವ ಸಂಭ್ರಮ ತಾಳ ಕಟದವ ಊಟದವ ಸುರರೊಡನೆ ತುಂಬಿದ ದಾಸರ ಸಭೆಯೊಳಗಿದ್ದವ ನರಕವನೊದ್ದವ ಕಂಬನಿ ಪುಳಕೋತ್ಸವ ಸುರಿದವ ತತ್ವವನರಿದವ ನೀ ಸುಖದಲಿ ಬಾಳೊ ಎಲೆ ಮನುಜಾ 3 ಬೇಸರದಲೆ ಹೇಳಿ ಏಕಾದಶಿಯ ವಾಸರದಲಿ ಜಾಗರವನು ಗೈದ ಮಾನೀಸನು ಅಘನಾಶನು ಚರಣಕೆ ಏರಿಸಿದನಿವ ಬೆರೆದು ಎಲೆ ಮನುಜಾ4 ಗೋಪಾಳವನು ಬೇಡಿ ನಿತ್ಯಸುಖಿಯಾಗಿ ತಾಪತ್ರೆಯ ಮೊದಲಾದ ದುಷ್ಕರ್ಮ ಪಾಪರಹಿತನಾಗಿ ಸಿರಿ ಪದ್ಮವ ಪೊಂದಿದ ಭಜಕರು ಒಂದೇ ಗೇಣೊ ಎಲೆ ಮನುಜಾ 5
--------------
ವಿಜಯದಾಸ
ರಾಮರಾಮ ರಾಮ ರಾಮಸೀತಾರಾಮ ದಶರಥನಂದನ ರಾಮ ದಯಮಾಡು ಶ್ರೀರಾಮ ಪಶುಪತಿ ಪಾಲಕರಾಮ ಪಾಲಿಸೊಯನ್ನನು ಶ್ರೀರಾಮ ಪ ಭಕ್ತವತ್ಸಲರಾಮ ಪಾಂಡವ ಪಕ್ಷಕರಾಮ ಮುಕ್ತಿದಾಯಕ ರಾಮ ಮುನಿಗಣ ವಂದ್ಯರಾಮ ಯುಕ್ತ ಜಗತ್ಕರ್ತರಾಮ ಇನಕೂಲಭೂಷಣರಾಮ ಮೌಕ್ತಿಕ ಮಣಿಗಣರಾಮ ಮಾಣಿಕ್ಯ ಮುಕುಟಧರರಾಮ 1 ಅಹಿಪಶಯನ ಶ್ರೀರಾಮ ಅನೇಕ ಚರಿತರಾಮ ಅಮಿತ ಪರಾಕ್ರಮ ರಾಮ ಇಹಪರ ಬಾಂಧವ ರಾಮ ವಿಶ್ವಕುಟುಂಬ ರಾಮ ಮಹಾಮಹಿಮ ಶ್ರೀರಾಮ ಮನುಜಾಧಿಪತಿರಾಮ 2 ಭೂತದಯಾಪರರಾಮ ಪುಣ್ಯಪುರುಷ ಶ್ರೀರಾಮ ಪಾತಕ ಭಯಹರರಾಮ ಪತಿತ ಪಾವನ ರಾಮ ನಾಥ ಜಗತ್ರಯರಾಮ ಅನಾಥ ರಕ್ಷಕರಾಮ ಸೇತುಬಂಧನ ರಾಮ ಶಾಶ್ವತ ವಿಗ್ರಹರಾಮ 3 ಮಂಗಳ ಮೂರುತಿ ರಾಮ ಮಧುಸೂದನ ಶ್ರೀರಾಮ ಗಂಗಾಪಿತ ಹರಿರಾಮ ಗೌರೀವಲ್ಲಭರಾಮ ಶೃಂಗಾರಾಂಗ ರಾಮಾಶ್ರಿತಜನ ಪೋಷಿತರಾಮ ರಾಜೀವ ನಯನ ರಾಮ 4 ಸತ್ಯವಾಕ್ಯ ಶ್ರೀರಾಮ ಸದಾನಂದ ರಾಮ ನಿತ್ಯನಿರಂಜನ ರಾಮ ನಿರ್ವಿಕಲ್ಪ ಶ್ರೀರಾಮ ಭೃತ್ಯಕೋಟಿ ಸಂಘರಾಮ ಪುಣ್ಯಪ್ರಭಾವ ಶ್ರೀರಾಮ ದೈತ್ಯಾಂತಕ ಶ್ರೀರಾಮ ತಾಟಕಮರ್ದನ ಶ್ರೀರಾಮ 5 ನವನೀತ ಹೃದಯರಾಮ ಕೋಟಿ ಭಾನುತೇಜ ರಾಮ ಕರುಣಸಾಗರ ರಾಮ ಹಾಟಕಾಂಬರಧರ ರಾಮ ಆದಿನಾರಾಯಣ ರಾಮ ಕೋಟಿಕಂದರ್ಪರೂಪ ರಾಮ ಕೋಮಲಗಾತ್ರರಾಮ 6 ಯದುಕುಲಾಬ್ಧಿಚಂದ್ರ ರಾಮ ಯಶೋದಾನಂದನ ರಾಮ ಮೃದು ಮಧು ಭಾಷಣರಾಮ ಮೂಲರೂಪ ಶ್ರೀರಾಮ ಗದಧರ ವಂದ್ಯರಾಮ ಘನಗಂಭೀರರಾಮ ಪದುಮನಾಭ ಶ್ರೀರಾಮ ಪರಮಕೃಪಾಳುರಾಮ 7 ಸರಸಿಜಭವನುತರಾಮ ಸದ್ವಿಲಾಸ ಶ್ರೀರಾಮ ಕರಿರಾಜ ಪಾಲಕ ರಾಮ ಕಲ್ಮಷ ಪರಿಹರರಾಮ ಸುರಪತಿ ವಂದ್ಯರಾಮ ಸುಜನಾಂತರ್ಯಾಮಿ ರಾಮ ಶರಧಿಶಯನ ಶ್ರೀರಾಮ ಶಾಙ್ರ್ಞಪಾಣಿ ರಾಮ 8 ಕಮಲೋದರರಾಮ ಘನಗುಣಶಾಂತ ರಾಮ ಸಾರಥಿ ರಾಮ ಕಮಲಮನೋಹರ ರಾಮ ಗರುಡವಾಹನರಾಮ ಕಮಲಾಪ್ತ ಶಶಿನೇತ್ರ ಕರ್ಮಸಾಕ್ಷಿ ಭೂತರಾಮ 9 ಈಶ ಜಗತ್ರಯ ರಾಮ ವಿಷ್ಣುಸರ್ವೋತ್ತಮ ರಾಮ ವಾಸುದೇವ ಕೃಷ್ಣರಾಮ ವಸುದೇವ ನಂದನ ರಾಮ ಭೂಸುರಪ್ರಿಯ ಶ್ರೀರಾಮ ಸರ್ವಪೂಜಿತರಾಮ ವಸುಗಿರಿ ವಾಸರಾಮ ವೈಕುಂಠನಿಲಯರಾಮ 10 ನೀಲಮೇಘವರ್ಣರಾಮ ನಿಖಿಲವೈಭವರಾಮ ಪುಂಡರೀಕ ವರದ ರಾಮ ಫಾಲಲೋಚನ ಪ್ರಿಯರಾಮ ಪಾಂಡುರಂಗ ಶ್ರೀರಾಮ ಕಾಲಿಯಾಮರ್ದನರಾಮ ದ್ವಾರಕಾವಾಸರಾಮ 11 ವೇಣುನಾದ ಶ್ರೀರಾಮ ವೆಂಕಟರಮಣ ರಾಮ ಗಾನಲೋಲ ಶ್ರೀ ರಾಮ ಕಂಬುಕಂಧರರಾಮ ಮಾನಿತ ತ್ರಿಭುವನರಾಮ ಮಂದರಧರ ಶ್ರೀರಾಮ ಧೇನು ಪಾಲಕ ರಾಮ ದೇವಾಧಿದೇವ ರಾಮ 12 ಕುಂಭಿನೀಧವ ರಾಮ ಕುಶಲವ ಜನಕರಾಮ ಅಂಬರ ಧ್ರುವನಂತೆ ರಾಮ ಅಜಮಿಳನಂತೆ ರಾಮ ಪೊರೆದಂಥ ರಾಮ 13 ತಾಪತ್ರಯದಲಿ ರಾಮ ನಾತಪಿಸುತಿರುವೆ ರಾಮ ಪರಿ ತಾಪವ ರಾಮ ಹೆದರಿಸಿ ಕಳೆಯೊ ರಾಮ ಭೂಪ ನೀನಲ್ಲದೆ ರಾಮ ಭೂವಿಯೊಳಧಿಕ ನೀನಲ್ಲವೆರಾಮ ಕಾಪಾಡುವ ಭಾರರಾಮ ಕರ್ತನು ನೀನೆ ರಾಮ 14 ನಿತ್ಯ ಕಲ್ಯಾಣರಾಮ ಅಘನಾಶನ ಶ್ರೀರಾಮ ಅನಂತನಾಮರಾಮ ಜಗದೊಳಧಿಕನಾದರಾಮ ಜಯ`ಹೆನ್ನೆವಿಠಲ’ ರಾಮ ಮನ್ನಿಸಿ ಸಲಹೊರಾಮ 15
--------------
ಹೆನ್ನೆರಂಗದಾಸರು