ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ನಾಟಿ ಅಗ್ರಹಾರದ ಶ್ರೀರಾಮ) ಕಂಡಿರೆ ನಾಟಿ ಕೋದಂಡ ರಾಮನ ಪದ್ಮ- ಜಾಂಡದಿ ನಾಯಕನಾ ಕಟಕ ಕಿರೀಟಧಾರಿ ಮಾ- ರ್ತಾಂಡ ಕೋಟಿಪ್ರಭನಾ ಪ. ಭೂತಳದೊಳಗೆ ವಿಖ್ಯಾತರಾಗಿಹ ರಘು- ನಾಥ ಒಡೆಯರ ಮೇಲೆ ಪ್ರೀತಿಯಿಂದಲಿ ಬಂದ ಪವಮಾನವಂದಿತ- ನೀತನು ನಿಜ ಜನರ ಬೀತಿಯ ಬಿಡಿಸುವೆನೆಂದು ಬಿಲ್ಲಂಬುಗ- ಳಾಂತು ಕರಾಬ್ಜದಲಿ ಪಾತಕಗಳ ಪರಿಹಾರಗೈದರಿಗಳ ಘಾತಿಸುವನು ಜವದಿ 1 ಕಡು ಪರಾಕ್ರಮಿ ವಾಯಿನು ಧಿಕ್ಕರಿಸಿ ಕೈ ಪಿಡಿದಂತೆ ರವಿಜನಸು ಬಡವರ ಭಕ್ತಿಯ ದೃಢಕೆ ಮೆಚ್ಚುತ ಜಗ- ದೊಡೆಯನು ಸಂತಸದಿ ಒಡೆಯ ನೀ ಸಲಹೆಂದು ವಂದಿಸಿ ತುಲಸಿಯ ಕೊಡುವನು ಕರುಣ ಕಟಾಕ್ಷದಿ ಪುರುಷಾರ್ಥ ತಡೆಯದೆ ತವಕದಲಿ 2 ಎರಡು ಭಾಗದಿ ಭಕ್ತ ಗರುಡ ಮಾರುತಿಯರ- ನಿರಿಸಿ ಕೊಂಡವನುದಿನದಿ ನಿರವಧಿ ಸೇವೆಯ ಕೈಕೊಂಡು ಜಾನಕಿ- ವರನಿಹನೀಪುರದಿ ಸಿರಿವರ ವೆಂಕಟಗಿರಿ ರಾಜನಿವನೆಂದು ನೆರೆ ನಂಬಿ ಸೇವಿಪರಾ ಪರಿಕಿಸಿ ತನ್ನಯ ಚರಣ ಸೇವೆಯನಿತ್ತು ಪೊರೆವನು ಕರುಣಾಕರ 3
--------------
ತುಪಾಕಿ ವೆಂಕಟರಮಣಾಚಾರ್ಯ
(ನಾವೂರ ಅಗ್ರಹಾರದ ಕಟ್ಟೆ ಮುಖ್ಯಪ್ರಾಣ) ಕರವ ಪಿಡಿಯೋ ಜಾಣ ಘಟ್ಯಾಗಿರಲಿ ಕರುಣಾ ದುಷ್ಟ ಭಾವನೆಯನ್ನು ದೂರವೋಡಿಸಿ ಮನೋ- ಭೀಷ್ಟವ ದಯಮಾಡು ದುರಿತಾಬ್ಧಿ ಕಾರಣ ಪ. ಕೋಳಾಲ ಜನರಮೇಲ್ಕರುಣಾ ಕಟಾಕ್ಷಧಿ ಕೋಳಾಲ ಕರಯುಗದಿ ಪಿಡಿದು ಬಂದು ನೀಲ ಮೇಘನ ತೆರದಿ ಶೋಭಿಸುತಾಗ್ರ- ಮಾಲೆಯ ಶಿಖರದಲಿ ರಾಜಿಸುವ ಕೃಷ್ಣನ ಲೀಲೆಗಳಿಗನುಕೂಲನಾಗಿ ಸುಲೋಲ ನೇತ್ರಾವತಿ ಸರಿದ್ವರ ಕ- ಪಿಲದೊಳು ಪುಟ್ಟಾಲಯದೊಳನುಗಾಲ ನಿಂತ ಕೃಪಾಲವಾಲಾ 1 ಪ್ರಾಚೀನ ಯುಗದಿ ಮಾರೀಚ ವೈರಿಯ ಸೇರಿ ನೀಚ ರಕ್ಕಸರ ಗೆದ್ದೆ ದ್ವಾಪರದಲ್ಲಿ ಕೀಚಕ ಕುಲವ ಗೆದ್ದೆ ಕ್ಷಮೆಯೊಳು ತಿದ್ದೆ ಸೂಚಿಸಿದ ದೇವೋತ್ತಮರ ಬಲು ಸೂಚನೆಯ ಕೈಗೊಂಡು ಕಲಿಮಲ ಮೋಚನೆಯಗೊಳಿಸಿಲ್ಲಿ ನಿಂದು ನಿ- ರೋಚನಾತ್ಮಜ ವರದನೊಲಿಸುವ 2 ಕಾಯ ವಾಕ್ಕøತಾನಂತಾ ಪರಧಾಮ- ನೇನೊಂದನೆಣಿಸದಿರು ಕೃಪಾಪಾತ್ರ ನಾನೆಂದು ನೆನೆಸುತಿರು ಅಭಿಮಾನ ತೋರು ಪಾದ ಪಂಕಜ ಮಾನಿ ಕರುಣಿಸಹೀಂದ್ರ ಗಿರಿವರ ಶ್ರೀನಿವಾಸನ ಮುಖ್ಯಮಂತ್ರಿಯ 3
--------------
ತುಪಾಕಿ ವೆಂಕಟರಮಣಾಚಾರ್ಯ
ಘನನಂದನ ರಾಮಚಂದ್ರ ಪ ತಂದೆ ತಾಯಿ ಬಂಧು ನೀನು ಸಂದ ಯೆನ್ನ ಮಿತ್ರನೀನು ಕಂದನಿಗಾನಂದ ಬೀರಿ ಅಂದವಾದ ಪಾದತೋರು1 ಸ್ವಾಮಿ ನಿನ್ನ ನಾಮವನ್ನು ನೇಮದಿಂದ ಧ್ಯಾನಿಪೆನ್ನ ಪ್ರೇಮದಿಂದ ಕ್ಷೇಮ ಕೊಟ್ಟು ಸಾಮಗಾನಗೈಸು ವಿಷ್ಣು 2 ಅಗ್ರಹಾರಪಾಲಾಧೀಶ ಅಗ್ರಪೂಜೆಗೊಂಬ ಶ್ರೀಶ ಸುಗ್ರೀವನ್ನ ಪೊರೆದ ಉಗ್ರದೈತ್ಯನಾಶ ಹೆಜ್ಜಾಜೀಶ 3
--------------
ಶಾಮಶರ್ಮರು
ಧರ್ಮವೆಂದೆನಿಪ ಮಾರ್ಗವನು ಬಿಟ್ಟುಕರ್ಮವೆಂದೆನಿಪ ಕಾನನವ ಪೊಕ್ಕುದುರ್ಮಾರ್ಗದಲಿ ನಡೆದವಗೆ ಘೋರವ್ಯಾಧಿಕರ್ಮಪಾಕದಲಿ ಸಾರುತಿದೆ ಜಗದಿ ಪ ಹರಿಹರ ವಿಭೇದಗೈದವಂಗೆ ದಂತಚ್ಯುತವುಗುರುದೈವಗಳ ನಿಂದೆಗೈದವಗೆ ಉನ್ಮದವುಪರಸತಿಯ ಕಾಮಿಸಿದವಗೆ ಪಾಂಡು ರೋಗವುಕೆರೆಗಳನು ಒಡೆಸಿದಾತಗೆ ಶೀತಜ್ವರವುಹಿರಿಯರನು ಜರಿದವಗೆ ಪೀನಾಶಿ ರೋಗವುಧರೆಯನಳಿಸಿದವಗೆ ಸರ್ವಾಂಗ ಪರಿಶ್ವೇತವುಪುರ ಅಗ್ರಹಾರ ಕೆಡಿಸಿದವಗೆ ರಾಜರೋಗವೆಂದುಅರಿವುದು ಸಕಲ ಜನರು 1 ಕಥೆ ಪುರಾಣಗಳ ಹಳಿದವಗೆ ಕಾಸಶ್ವಾಸಮತಭೇದವನು ಮಾಡಿದವಗೆ ಮೂಲವ್ಯಾಧಿಪಿತಮಾತೆಯರ ಸಲಹದವಗೆ ಗಂಡಾಮಾಲೆಯತಿಗಳನು ನಿಂದಿಸಿದವಗೆ ಸನ್ನಿಪಾತ - ಪರಸತಿಯರಿಗೆ ಅಳುಪಿದಾತಗೆ ಮೂತ್ರ ಕೃಚ್ರಪತಿವ್ರತೆಯರ ಪೀಡಿಸಿದವಗೆ ಅತಿಸಾರಮತಿಗೇಡಿ ಮೂರ್ಖನಿಗೆ ಕ್ಷಯರೋಗ - ಇದುಕ್ಷಿತಿಯೊಳಗೆ ಸಿದ್ಧಾಂತ 2 ಶಿಶು ಹತ್ಯೆ ಗೈದವಗೆ ಕುಕ್ಷಿಶೂಲೆಪಶುಗಳನು ಮರ್ದಿಸಿದವಗೆ ಪ್ರಮೇಹವುಉಸಿರಲೇಕಿನ್ನು ಸ್ವಾಮಿದ್ರೋಹಿಗೆ ಬಹುಮೂತ್ರಪುಸಿಯನಾಡುವ ಪುರುಷಗೆ ರಕ್ತ ಕಾಳಿಹಸಿದವರಿಗನ್ನವಿಕ್ಕದವಗೆ ಆಮ್ಲಪಿತ್ತವೃಷಭವನು ಒದ್ದವಗೆ ಬಿಗರುವಾತಮುಸುಕುವುದು ವಿಶ್ವಾಸಘಾತಕಗೆ ನರರೋಗಪುಸಿಯಲ್ಲವಿದು ಕೇಳಿ ಜನರು 3 ಕೊಟ್ಟು ಭಾಷೆಯ ತಪ್ಪಿದವಗೆ ಉಪಜಿಹ್ವೆಕೊಟ್ಟು ತುಪ್ಪಿದವಗೆ ಕರಕಂಪನಕೊಟ್ಟರೂ ಕೊಡಲಿಲ್ಲವೆಂಬವಗೆ ಉದರರೋಗಕೊಟ್ಟವರಿಗೆರಡು ಬಗೆವಗೆ ಮೇಹರೋಗಅಷ್ಟಮದದಿಂದ ಮೆರೆವವಗೆ ಬೆರಗಿನ ರೋಗಬಟ್ಟೆಯೊಳು ಮುಳ್ಳು ಹರಡಿದವಗೆ ನೇತ್ರವ್ಯಾಧಿಹುಟ್ಟುವುದು ಕಂಕಣ ಕಂಟಕಗೆ ಕುಷ್ಠರೋಗಕಟ್ಟಿಟ್ಟ ಬುತ್ತಿ ಇದು4 ಕರ್ಮ ಬಲ್ಲವರಾರುಎಂದು ಮಂದಮತಿಗಳಾಗಿ ಕೆಟ್ಟಳಿಯದಿರೆಹಿಂದಣದೆಲ್ಲವೂ ಬಹದೆಂಬುದಕೆ ಸಾಕ್ಷಿಇಂದು ಕಣ್ಣೆದುರೆ ಜಗದೊಳಗೆ ತೋರುತಿಹುದಿಗೊಚಂದದಲಿ ತಾಯಿ ಮಗುವಿಗೆ ಮೊಲೆಯ ಹಾಲುಣಿಸುವಂದದಲಿ ಉಣಿಸಿದಲ್ಲದೆ ಬಿಡದು ಮರೆಯದಿರಿಕಂದರ್ಪಪಿತ ಸೊಂಡೆಕೊಪ್ಪದಾದಿಕೇಶವನಮುಂದರಿತು ಭಜಿಸಿ ಮುಕ್ತಿಯ ಪಡೆಯಿರಣ್ಣ5
--------------
ಕನಕದಾಸ
ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕುವ್ಯಾಸಮುನಿರಾಯರ ಸಂನ್ಯಾಸದಿರವ ಪ ಆಸೆಯಿಂದ ತಮ್ಮುದರ ಪೋಷಣೆಗಾಗಿ ಛಪ್ಪನ್ನದÉೀಶವ ತಿರುಗಿ ಸಂಚಾರ ಮಾಡುತಮೀಸಲ ಮಡಿ ಬಚ್ಚಿಟ್ಟು ಮಿಂಚುಕೂಳನುಂಡು ದಿನಮೋಸಮಾಡಿ ಕಳೆವ ಸನ್ಯಾಸಿಗಳ ಸರಿಯೆ1 ಕೆರೆ ಬಾವಿ ಪುರ ಅಗ್ರಹಾರಂಗಳ ಮಾಡಿ ಭೂಸುರರೊಂದು ಲಕ್ಷ ಕುಟುಂಬಗಳಪೊರೆವ ವೈಭವ ಕೀರ್ತಿಯಿಂದಲಿ ವ್ಯಾಸರಾಯರ ಗುಣಗಣ ಗಾಂಭೀರ್ಯಾದಿಗಳ2 ಹಗಲಿರುಳೆನ್ನದೆ ಆವಾಗ ಶ್ರೀಹರಿ ಪದಪದ್ಮಯುಗಳವನರ್ಚಿಸಿ ಭಕುತಿಯಿಂದರಘುಪತಿಭಜಕ ಬ್ರಹ್ಮಣ್ಯತೀರ್ಥರ ಕುವರರಂಗವಿಠಲನನ್ನು ಬಿಡೆಬಿಡೆನು ಎಂಬ3
--------------
ಶ್ರೀಪಾದರಾಜರು