ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘನನಂದನ ರಾಮಚಂದ್ರ ಪ ತಂದೆ ತಾಯಿ ಬಂಧು ನೀನು ಸಂದ ಯೆನ್ನ ಮಿತ್ರನೀನು ಕಂದನಿಗಾನಂದ ಬೀರಿ ಅಂದವಾದ ಪಾದತೋರು1 ಸ್ವಾಮಿ ನಿನ್ನ ನಾಮವನ್ನು ನೇಮದಿಂದ ಧ್ಯಾನಿಪೆನ್ನ ಪ್ರೇಮದಿಂದ ಕ್ಷೇಮ ಕೊಟ್ಟು ಸಾಮಗಾನಗೈಸು ವಿಷ್ಣು 2 ಅಗ್ರಹಾರಪಾಲಾಧೀಶ ಅಗ್ರಪೂಜೆಗೊಂಬ ಶ್ರೀಶ ಸುಗ್ರೀವನ್ನ ಪೊರೆದ ಉಗ್ರದೈತ್ಯನಾಶ ಹೆಜ್ಜಾಜೀಶ 3
--------------
ಶಾಮಶರ್ಮರು
ಹ್ಯಾಂಗೆ ಮೆಚ್ಚಿದೆ ಹೆಂಗಳರನ್ನೆ ಹಲವುರೂಪ ತಾಳಿದವನ ಪ. ರಾಗ ಮಿಗಿಲು ಲಕುಮಿರಮಣ ಭೋಗಿರಾಜಶಯನನ ಅ.ಪ. ಜಲದಿ ಚರಿಸುತಿಹನು ಸತತ ಒಲಿದು ಶಿರವ ನೆಗಹಿ ನೋಡ ಸಲೆವಿಕಾರ ಕೋರೆಹಲ್ಲ ಚಲ ಮಹೋಗ್ರ ರೂಪನ ನೆಲವನಳೆದು ತಾಯಿತಲೆಯ ತರಿದು ಕರಡಿ ಕಪಿಯೊಳಾಡಿ ಒಲಿದು ಗೋವುಕಾಯ್ದು ಬತ್ತಲೆತೊಳಲಿ ತುರಗವೇರ್ದನ 1 ಸೊಗಡುಗಂಧವೆಸೆವ ತನುವು ತೆಗೆದ ಬಾಯಿ ಕುಗ್ಗಿದ ಬೆನ್ನು ಅಗೆದು ನೆಲವ ಬಗೆದು ರೌದ್ರ ಹೊಗೆಯತೋರ್ವ ವದನನ ವಿಗಡವಿಪ್ರ ರಾಜವೈರಿ ಬಗೆಯಬಡದಾರಣ್ಯವಾಸಿ ನಗವ ಬೆರಳ ತುದಿಯಲೆತ್ತಿ ಜಗದ ಲಜ್ಜೆಯ ತೊರೆದ ಕಲ್ಕಿಯ 2 ಮಿಡಿದು ಹೊಳೆವ ಚಂಚಲಚಿತ್ತ ಕಡುಕಠಿಣ ದೇಹದವನ ಹಿಡಿದ ರೋಮಮಯ ಶರೀರ ಕಿಡಿಯನುಗುಳ್ವ ನಯನನ ಬಿಡದೆ ದಾನಬೇಡಿ ಕೊಡಲಿಪಿಡಿದು ಮೃಡನ ಧನುವ ಮುರಿದು ಜಡಿದು ಅಗ್ರಪೂಜೆಗೊಂಡ ಕಡುನಿರ್ವಾಣ ಹಯವದನನ3 ಸಂಪ್ರದಾಯದ ಹಾಡುಗಳು
--------------
ವಾದಿರಾಜ
ಅಗ್ರಪೂಜೆಯ ಮಾಡಿದಾ ಧರ್ಮಜ ತಾನುಅಗ್ರಪೂಜೆಯ ಮಾಡಿದಾ ಪರಾಜರಾಜರಗೂಡಿ ರಾಜಸೂಯದಿ ಧರ್ಮ-ರಾಜನು ಹರಿಗೆ ರಾಜರ ಸಭೆಯೊಳು ಅ.ಪಶುದ್ಧಾಚಮನ ಸಂಕಲ್ಪದಿಪಾದತೊಳೆದಿತ್ತಸದ್ಭಕ್ತಿಯಲಿ ಗಂಧಾಕ್ಷತೆ ವೇದವೇದ್ಯಗೆ 1ವಸನಾಭರಣದಿವ್ಯಕುಸುಮಧೂಪವು ದೀಪತೃಷೆನೈವೇದ್ಯವನಿತ್ತು ಕ್ಲೇಶನಾಶನಿಗಂದು 2ಕ್ರಮುಕವರ್ಪಿಸಿ ನೀಲಾಂಜನವೆತ್ತಿ ಧ್ಯಾನಿಸಿಸುಮವಿತ್ತು ಬಲವಂದು ಚಕ್ರವಿಕ್ರಮಗೆ 3ಪೊಡಮಟ್ಟಘ್ರ್ಯವ ಬಿಟ್ಟು ಒಡನೆ ಯಜ್ಞಾಂತದಿಬಿಡೆ ಬ್ರಹ್ಮಾರ್ಪಣ UÉೂೀವಿಂದನ ಪಾದದ್ವಂದ್ವಕೆ 4
--------------
ಗೋವಿಂದದಾಸ
ಏಳಯ್ಯ ಬೆಳಗಾಯಿತು ಪ.ಬೆಳಗಾಯಿತೇಳಯ್ಯ ಬಿಸಿಲು ಮೈದೋರುತಿದೆಸುಳಿದೋರೈ ನಿನ್ನ ಹಾರಯ್ಸಿ ನಿಂದಿಹರುತಳುವ ಮಾಡದಿರಯ್ಯ ಸ್ವಾಮಿ ತಿರುಮಲೆರಾಯಸೆಳೆಮಂಚದಿಂದಲೇಳು ಅಪವೇದವನು ತರಲೇಳು ಮಂದರವ ಹೊರಲೇಳುಛೇದಿಸುತ ಅಸುರರನು ಭೂಮಿಯ ತರಲೇಳುಕಾದಿ ಹಿರಣ್ಯನ ಕರುಳ ಕೊರಳೊಳಗೆ ಧರಿಸೇಳು ಕಾದುಬಲಿಬಾಗಿಲೊಳಗೆ ||ಭೇದದಲಿ ಭೂಮಿಯ ತ್ರಿಪಾದದಿಂದಳೆಯೇಳುಛೇಧಿಸುತ ಕ್ಷತ್ರಿಯರ ಕೊಡಲಿಯಿಂ ಕಡಿಯೇಳುಸಾಧಿಸುತ ಶರಧಿಯಲಿ ಸೇತುವೆಯ ಕಟ್ಟೇಳುನಂದಗೋಪನ ಉದರದಿ 1ಪುರಮೂರ ಗೆಲಬೇಕು ಅರಿವೆಯನು ಕಳೆದೇಳುದುರುಳರನು ಕೊಲಬೇಕು ತುರಗವಾಹನನಾಗುಪರಿಪರಿಯ ಕೆಲಸಗಳ ಮಾಡಲುದ್ಯೋಗಿಸದೆ ಮರೆತುನಿದ್ರೆಯಗೈವರೆ||ಉರಿಗೈಯನಟ್ಟಿದರೆ ಹರನೋಡಿ ಬಂದಿಹನುಗಿರಿಜೆ ವರವನು ಬೇಡಬೇಕೆಂದು ನಿಂದಿಹಳುಸುರಪಾರಿಜಾತವನು ಕೊಂಡುಸುರರಾಜಬಂದಿರುವನೇಳಯ್ಯ ಹರಿಯೆ 2ಆಲದೆಲೆಯಿಂದೇಳು ಮಾಲಕುಮಿ ಬಂದಿಹಳುಹಾಲುಗಡಲಿಂದೇಳು ಶ್ರೀದೇವಿನಿಂದಿಹಳುಕಾಲಹೆಡೆಯಿಂದೇಳು ಭೂದೇವಿ ಬಂದಿಹಳು ಸಾಲಮಂಚಿಗಳಿಂದಲಿ ||ಕ್ಷಿತಿನಾಥ ನೀನೇಳು ಸತ್ಯಭಾಮೆ ಬಂದಿಹಳುಮತಿವಂತ ನೀನೇಳು ಜಾಂಬವತಿ ಬಂದಿಹಳುಗತಿವಂತ ನೀನೇಳು ಶ್ರೀತುಳಸಿ ಬಂದಿಹಳು ಏಕಾಂತ ಸೇವೆಯಮಾಡಲು 3ಅಂಬುರುಹದಿಂದ ಜನಿಸಿದ ಬ್ರಹ್ಮ ಬಂದಿಹನುಗಂಭೀರ ಗಾಯನದ ನಾರದನು ನಿಂದಿಹನುರಂಭೆ ಮೇನಕೆ ಮೊದಲು ನರ್ತನಕೆಐದಿಹರು ಶಂಬರಾರಿಪಿತನೆ ಏಳು||ರಾಜಸೂಯವಕೊಳಲು ವಾಯುಸುತ ಬಂದಿಹನುತೇಜಿಯಾಟಕೆ ಅರ್ಜುನನು ಕರೆದು ಬಂದಿಹನುಸಾಜಧರ್ಮಜ ಅಗ್ರಪೂಜೆ ಮಾಡುವೆನೆಂದು ಹೂಜೆಯನುಪಿಡಿದುಕೊಂಡು 4ದೇವ ನಿನ್ನಂಘ್ರಿಯನು ಪೂಜೆ ಮಾಡುವೆನೆಂದುಕಾವೇರಿ ಕೃಷ್ಣೆ ಗೌತಮಿ ಗಂಗೆ ಮಲಪಹರಿಸಾವಧಾನದಿ ಯಮುನೆ ತುಂಗಾ ಸರಸ್ವತೀಭೀಮರಥಿ ನೇತ್ರಾವತಿ ||ದುರಿತ ಬಂಧನವನ್ನು ಪರಿಹರಿಸಿದೆಯೊ ಸ್ವಾಮಿದುರಿತ ದುಷ್ಕರ್ಮವನು ದೇವ ಎಂದರೆ ಸುಡುವೆದುರಿತ ತಾಪಕೆ ಚಂದ್ರ ನೀನೆನಿಸಿಕೊಂಡೆಯೊಶ್ರೀ ಪುರಂದರವಿಠಲನೆ 5
--------------
ಪುರಂದರದಾಸರು