ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ದಿವಸ ಹೀಗೆ ಕಳೆಯಲೊ ಗೋಪಾಲಕೃಷ್ಣ ಎಷ್ಟು ದಿವಸ ಹೀಗೆ ಕಳೆಯಲೊ ಪ. ಎಷ್ಟು ದಿವಸ ಹೀಗೆ ಎನ್ನ ಸೃಷ್ಟಿಗೊಡೆಯ ಬಳಲಿಸುವೆಯೊ ಕಷ್ಟಪಡಲಾರೆ ಭವದಿ ದೃಷ್ಟಿಯಿಂದ ನೋಡಿ ಸಲಹೋ ಅ.ಪ. ನಾನಾ ಜನ್ಮದಿ ತೊಳಲಿಸಿ ಎನ್ನನು ನೀನೆ ತಂದೆಯೊ ಮಾನವತ್ವದಿ ನಾನು ಎಂಬುದು ಬಿಡಿಸಿ ಈಗ ನೀನೆ ಕರ್ತನೆನಿಸಿ ಕಾಯೋ1 ದೇಹಸ್ಥನೆಂದೆನಿಸಿ ಎನ್ನ ದೇಹ ಮಧ್ಯದಿ ಕಾಣದಿಹರೆ ದೇಹಗಳನು ಧರಿಸಲಾರೆ ದೇಹ ಮೋಹ ಬಿಡಿಸದಿಪ್ಪರೆ 2 ಭೃತ್ಯವತ್ಸಲನೆಂದು ನಿನ್ನ ಭಕ್ತರೆಲ್ಲರು ಕರೆಯುತಿಹರೊ ಪೊತ್ತ ಬಿರುದು ಬಿಡುವರೇನೊ ಭೃತ್ಯಳೆಂದು ಎನ್ನ ಸಲಹೊ3 ಪೋಗುತಿದÉ ದಿವಸ ನೋಡು ಬೇಗ ಬೇಗನೆ ದಯವ ಮಾಡು ಭೋಗದಲಿ ವೈರಾಗ್ಯ ನೀಡು ಭಾಗವತರ ಸಂಗ ಕೊಡು 4 ಕರ್ಮದಲ್ಲಿ ಶ್ರದ್ಧೆಯಿಲ್ಲ ಧರ್ಮದಲ್ಲಿ ಬುದ್ಧಿಯಿಲ್ಲ ನಿರ್ಮಲದ ಜ್ಞಾನವಿಲ್ಲ ನಿರ್ಮಲಾತ್ಮ ಬಲ್ಲೆಯಲ್ಲ 5 ಅಂಧಕಾರದಿ ಎನ್ನನಿರಿಸಿ ಚಂದವೇನೋ ಹೀಗೆ ಮಾಳ್ಪದು ಕರ್ಮ ಸ್ವೀಕರಿಸಿ ಮುಂದೆ ಕರ್ಮವಿಡದೆ ಸಲಹೋ 6 ಅಪಾರ ಜನುಮದಲ್ಲಿನ ಪಾಪ ಸಮೂಹಗಳ ತರಿದು ಶ್ರೀಪಾದ ಸ್ಮರಣೆ ನೀಡೋ ಗೋಪಾಲಕೃಷ್ಣವಿಠಲ 7
--------------
ಅಂಬಾಬಾಯಿ
ಏನೆಂದೀದೇಹ್ಯವನು ನಂಬಿದಿ ಮನವೆ ನೀ ಏನೆಂದೀ ದೇಹ್ಯವನು ನಂಬಿದಿ ಪ ಏನೆಂದು ನಂಬಿದ್ಯೋ ಆನಂದದ್ಹಿಗ್ಗುತ ಕ್ಷೀಣವಾಗೊಂದುದಿನ ಮಣ್ಣು ಗೂಡುವುದರಿತು ಅ.ಪ ತಳಕ್ಹಾಕಿ ಜೋಡಿಸಿ ಹಲವು ನರಗಳಿಂದ ಬಲವಾಗಿಬಿಗಿದ ಈ ಎಲುವಿನ ಹಂದರ 1 ರೋಗಕ್ಕೆ ಇದು ತವರಾಗಿ ಒಂದಿನ ನಾಶ ವಾಗಿ ತಾ ಕೈಬಿಟ್ಟು ಪೋಗುವ ಮಂಟಪ 2 ಹಲವು ವಿಧದಿ ಮಜ್ಜ ಮಲ ಮೂತ್ರ ಬಲುಹೇಯ ಕುಂಡಲ 3 ಬಿಲದ್ವಾರ ಒಂಬತ್ತು ತುಳುಕಿತುಂಬ್ಹರಿಯುತ ತೊಳೆಯದಿರಲು ನಿಮಿಷ ಹೊಲಸಿಕ್ಕಿ ನಾರುವುದು 4 ತಂದೆ ಶ್ರೀರಾಮನಂ ಹೊಂದಿ ಭಜಿಸದೆ ಗಾಢ ಅಂಧಕಾರದಿ ಬಿದ್ದು ನಂದಿಪೋಗುವ ತನು 5
--------------
ರಾಮದಾಸರು
ಪಾಲಿಸೆಮ್ಮನು ವೆಂಕಟೇಶಾ ನಂಬಿದೆ ನಿನ್ನ ಪಾದಾ ಸಲಹೋ ಗಿರೀಶಾ ಪಾಲಿಸು ಪನ್ನಗಾ ಚಲವಾಸಾ ಪಾಲಿಸುವ ನ್ನ ಸರ್ವೇಶಾ ಪ ಅನುದಿನ ಕೊಂಡಾಡುವೆನಾ ಪತಿತ ಪಾವನ ನೀನೇಗತಿಯೆಂದು ನಂಬಿದೆ ಸನ್ಮತಿಯ ಪಾಲಿಸು ದೇವಾ ಅಹಿಗಿರಿ ನಿಲಯಾ 1 ಕರಣಶುದ್ಧನ ಮಾಡಿ ಕರೆದುಕೋ ಯನ್ನನು ಕರುಣಾಕರ ವೆಂಕರಾಯಾ ಜೀಯಾ2 ಅಗಣಿತ ಸರಿಯಾರು ನಿನಗೇ ಮೂಲೋಕದ ದೊರೆಯೇ 3 ಕರೆಕರೆ ಸಂಸಾರದೀ ಕೊರಗುತ್ತ ಮರುಗುತ್ತಲಿಹೆ ಭರದೀ ಕಣ್ದೆರೆದು ನೋಡೆಮ್ಮನು ಕನಕಾದ್ರಿಗೊಡೆಯಾ4 ಅರ್ಥಿಯಿಂದಲಿ ನಿನ್ನ ಬಲು ಪರಿಯಿಂದಲಿ ನುತಿಪೆನಾ ಸತ್ಯ ಮೂರುತಿ ನೀನೆ ಹತ್ತಿರ ಕರೆದು ಸಲಹೋ 5 ಹಿಂದೆ ಪ್ರಹ್ಲಾದನ ನುಡಿಯಾ ಕೇಳಿ ನೀ ಕಂಬದಿಂದೊಡೆದು ಬಂದೆ ಅಂಧಕಾರದಿ ಮುಳುಗಿ ಮುಂದೆ ಕಾಣದಲಿರುವೆ ಒಡೆಯ ಇಂದಿರೆ ರೆಮಣಾ 6 ವರವ ಕೊಡುವೇ ಇಷ್ಟಾರ್ಥಗಳ ಕೊಡುವೆ ವೆಂಕಟವಿಠಲಾ 7
--------------
ರಾಧಾಬಾಯಿ
ಎಷ್ಟು ಬಡಿವಾರೊ ನಿನ್ನಶ್ರೇಷ್ಠ ಸುಖಪೂರ್ಣ ಫನ್ನಅಷ್ಟ ಗುಣವನುಅತಿಗಳದ್ಯೊ ಯಾದವರನ್ನ ಪ.ಕುಕ್ಷಿಲೋಕನೆ ನಿನಗೆ ರಕ್ಷೆ ಇಟ್ಟಾಳೊಗೋಪಿವಕ್ಷ ಸ್ಥಳದಲ್ಲಿಹ ಲಕುಮಿಯುವಕ್ಷ ಸ್ಥಳದಲ್ಲಿಹ ಲಕುಮಿಯುಬೆರಗಾಗಿ ವೀಕ್ಷಿಸುತಲಿ ನಗತಾಳೊ 1ಅಂಧಕಾರದಿ ಜಲವೃಂದದಿ ದುಡುಕಿಸಿಒಂದೇ ಕೂಸಲ್ಲೊ ಪ್ರಳಯದಿಒಂದೇ ಕೂಸಲ್ಲೊ ಪ್ರಳಯದಿ ರಕ್ಷವತಂದು ಇಟ್ಟವರು ನಿನಗಾರೊ 2ಪುಟ್ಟ ಕೂಸೆಂದು ಸ್ತನ ಕೊಟ್ಟ ನಾರಿಯ ಕೊಂದೆಇಷ್ಟು ಕರುಣೆ ನಿನಗಿಲ್ಲೊಇಷ್ಟು ಕರುಣೆ ನಿನಗಿಲ್ಲೊ ದಯಾಬುದ್ದಿಕೆÀಟ್ಟು ಹೋಯಿತೇನೊ ಪ್ರಳಯದಿ 3ಕೃಷ್ಣ ಕೃಷ್ಣ ಎನುತ ಬಿಟ್ಟಳು ಪ್ರಾಣವದೃಷ್ಟಿಗೆ ಬೀಳೋದು ತಡವೇನೊದೃಷ್ಟಿಗೆ ಬೀಳೋದು ತಡವೇನೊ ನಿನ್ನವ್ಯಾಪ್ತಿ ಕೆಟ್ಟು ಹೋಯಿತೇನೊ ಪ್ರಳಯದಿ 4ಮಂದಮತಿಯರಗಂಡಮುಂದಕ್ಕೆ ಬಿಡಲೊಲ್ಲಇಂದಿರಾ ಪತಿಯೆ ಗತಿಯೆಂದಇಂದಿರಾ ಪತಿಯೆ ಗತಿಯೆಂದ ಭಕ್ತಳಕೊಂದೆಯಲ್ಲೊ ಪಾಪ ಬರಲಿಲ್ಲ 5ಕಡಲಶಾಯಿ ನಿನ್ನ ಬೆಡಗು ಎಷ್ಟು ಹೇಳಲಿಹಿಡ ಹಿಡಿದುಲಾಳಿಕೊಡುವಾಗಹಿಡ ಹಿಡಿದುಲಾಳಿಕೊಡುವಾಗ ಗೊಲ್ಲರಹುಡುಗರಿಗಿಂತ ಕಡೆಯೇನೊ 6ವೀರ ರಾಮೇಶ ನಿನ್ನಚಾರುಗುಣಗಳನೆಲ್ಲಸೂರಿಬಿಟ್ಟೇನೊ ಸುರರಿಗೆಸೂರಿಬಿಟ್ಟೇನೊ ಸುರರಿಗೆ ನಿನಗಿನ್ನುಯಾರೂ ಮನ್ನಿಸದ ಪರಿಯಂತ 7
--------------
ಗಲಗಲಿಅವ್ವನವರು