ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಕ್ಷ್ಮೀದೇವಿ ಅಂಜಿಸುವುದ್ಯಾಕಮ್ಮ ಕಂಜೋದ್ಭವ ನಮ್ಮ ನೀ ಅಂಜಿಸಿದರೆ ಲೋಕ ಅಂಜದಿರುವುದೆ ಪ ಕುಂಜರಗಮನೆ ನಾವಂಜನದೇವಿ ಸಂಜಾತನಾದ ಪ್ರಭಂಜನನಣುಗರು ಪಾದ ಕಂಜಕ್ಕೆ ವಿಮುಖ ಸಂಜಿಲಿ ಚಲಿಸುವ ಪುಂಜರು ಕಡಿಮೆ 1 ನಿನ್ನನೆ ನಂಬಿ ನಾವಿನ್ನು ಸಂಸೃತಿಯ ಬನ್ನವೆ ಕಳಕೊಂಡು ಚನ್ನಾಗಿ ಜಗದಿ ಧನ್ಯರಾದೇವೆಂದು ಮನ್ನಾದಿ ಬಯಸೆ ಅನ್ಯಾರಂದದಲಿ ನೀ ನಮ್ಮನ್ನ ನೋಡುವರೆ2 ಸಿರಿ ನಾರಸಿಂಹನ್ನ ವರ ಭಕ್ತಿಯಲಿ ನೀನು ಕರವಶ ಮಾಡಿಪ್ಪೆ ಪರವೇನೆ ನಿನಗೆ ಪರಮೇಷ್ಠಿ ಮೊದಲಾದಮರರ ನೀ ಪೊರೆವೆ ಸಿರಿ ವಾಸುದೇವವಿಠಲನ್ನ ತೋರಮ್ಮ 3
--------------
ವ್ಯಾಸತತ್ವಜ್ಞದಾಸರು
ಸಂತೆಯ ಬಿದನೂರು ಹನುಮಂತ ಎನ್ನ ಅಂತರಂಗದಲಿ ಹರಿಯ ತೋರು ಹನುಮಂತ ಪ. ಎನ್ನ ಮೇಲೆ ಪಂಥ ಬೇಡ ನಿಂತು ಬೇಡುವೆ ಹನುಮಂತ ಅ.ಪ. ಅಂಜನಾದೇವಿಯ ಕುಮಾರ ಅಂಜಿಸುವ ಈ ಘೋರ ಸಂಸಾರ ಅಂಜಿಕೆಯ ಬಿಡಿಸೆನ್ನ ಕಾಯೊ ಬಲು ಧೀರ ಸುಗುಣ ಗಂಭೀರ ಸಂಜೀವನನ ಕಂಡ ಶೂರ ಅಂಜನಾದೇವಿಯ ಕುಮಾರ 1 ಕುಂತಿಯಾ ಸುತನಾಗಿ ನೀ ಜನಿಸಿ ಬಂದೇ ಪಂಥದಲಿ ಕೀಚಕನ ಸೋಲಿಸಿ ನಿಂತು ಕಂತುಪಿತನಿಗೆ ದುರ್ಯೋದನನ ಶಿರವ ಒಪ್ಪಿಸಿದೆ 2 ಮದ್ದಿಗೆ ಭಟ್ಟರಲಿ ನೀ ಜನಿಸೀ ಮಧ್ವಮತವನೆ ಉದ್ಧರಿಸಿ ನೀ ಬದರಿಯಲಿ ನಿಂದಿ ಮುದ್ದು ಕೃಷ್ಣನ ಪೂಜಿಸಿ ಉಡುಪಿಲಿ ಸ್ಥಾಪಿಸಿ 3 ಸಂತೆಬಿದನೂರಿನಲಿ ನಿಂತು ಬಂದ ಜನಕೆ ಆನಂದ ಪಡಿಸಿ ಸಂತೋಷದಿಂದ ವರಗಳ ಬೇಡಿದವರಿಗೆ ನೀಡುತ್ತ ಕಂತುಪಿತನ ಧ್ಯಾನದಲಿ ಅನವರತ ಸೇವಿಸುತ 4 ರಾಮ ಸೇವೆ ನೀ ಸಂಭ್ರಮದಲಿ ಮಾಡಿ ರಾಮರ ಧ್ಯಾನ ಮಾಡುತ ಪೂಜಿಸುತಿರುವಿ ರಮಾವಲ್ಲಭವಿಠಲನ ಧ್ಯಾನದಿ ಪಟ್ಟಕೆ ಬರಲಿರುವಿ 5
--------------
ಸರಸಾಬಾಯಿ