ಒಟ್ಟು 1740 ಕಡೆಗಳಲ್ಲಿ , 104 ದಾಸರು , 1431 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಸಿವು ಬಹಳಾಗುತ್ತಿದೆ ಕೇಳಮ್ಮಯ್ಯಹಸನಾಗಿ ಉಣಬಡಿಸೇ ಪಬಿಸಿ ಬಿಸಿ ಕಡುಬು ಕಜ್ಜಾಯ ದೋಸೆಯು ಹುಗ್ಗಿಹಸನಾಗಿ ಬಡಿಸಮ್ಮ ಬಿಸಿ ಬಿಸಿಪರಮಾನ್ನಅ.ಪನೀರೊಳು ಮುಳುಗಿ ಬಂದೆ ಭಾರವ ಪೊತ್ತುಕೋರೆಲಿ ಧರಣಿ ತಂದೆಪೋರನೊಡನೆ ವೈರಿಯಾದ ದೈತ್ಯನ ಕರು-ಳ್ಹಾರವ ಮಾಡುತ್ತಭಾಳಬಳಲಿ ಬಂದೆ1ಪೊಡವಿ ದಾನವ ಬೇಡಿದೆ ರಾಜರ ಗೆದ್ದುಕೊಡಲಿ ಕಯ್ಯಲಿ ಪಿಡಿದೆಮಡದಿಯನರಸುತ ಅಡವಿಗಳ ಚರಿಸಿದೆಬಿಡದೆ ದೈತ್ಯರ ಸದೆ ಬಡಿದು ದಣಿದು ಬಂದೆ 2ವಿಷವನುಣಿಸಿದ ದೈತ್ಯಳ ಅಸುವನೆ ಹೀರಿಅಸುರ ಶಕಟನ ಸೀಳಿದೆವಸುದೇವ ಸುತನು ಈ ಅಸುರ ಮರ್ದನನಾಗಿಬಸುರೊಳು ಬ್ರಹ್ಮಾಂಡ ಧರಿಸಿದ ಕಾರಣ 3ಕಿಚ್ಚನುಂಗಿದ ಕಾರಣ ಹೊಟ್ಟೆಯ ಹಸಿವುಹೆಚ್ಚುತಲಿದೆ ನೋಡಮ್ಮಾಕಚ್ಚ ಬರುತಿಹ ಕಾಳಿ ಸರ್ಪನ ಹೆಡೆ ಮೇಲೆನರ್ತನ ಮಾಡುತಭಾಳಬಳಲಿ ಬಂದೆ4ಬತ್ತಲೆ ತಿರುಗಿ ಬಂದೆ ತೇಜಿಯನೇರಿಸುತ್ತಿದೆ ಧರಣಿಯನುಕರ್ತೃ ಶ್ರೀಹರಿಕಮಲನಾಭ ವಿಠ್ಠಲನಿಗೆತೃಪ್ತಿಯ ಪಡಿಸಮ್ಮ ಮುಕ್ತಿಪಥವನೀವೇ 5
--------------
ನಿಡಗುರುಕಿ ಜೀವೂಬಾಯಿ
ಹಸೆಗೆ ಬಾರೊ ಕುಸುಮನಯನ ಕುಶಲದಿಂದಲಿ ಬೇಗನೆಶಶಿಮುಖಿಯರ್ ಕರೆವರು ನಿನ್ನ ವಸುಧೆಪಾಲ ರಾಮನೊಪಅಸಮ ವೀರನನೆ ಗೆಲಿದು ಪಶುಪತಿಯ ಬಿಲ್ಲಮುರಿದುಕುಸುಮಬಾಲೆ ಕೊರಳೊಳ್ ಧರಿಸಿವಸುಧೆಸುತೆಯಕರವಪಿಡಿದು1ಕುಶಲದೀ ನಗುನಗುತಾ ಪಸರಿಸುವಿ ಮಂಟಪಕೆ ಹಸೆಗೆಧರಣಿ ಪಾಲರ್ ಲಜ್ಜೆವೆರಸಿ ಮೆರೆವ ಕೀರ್ತಿ ವಿಬುಧರೊಲಿಸೆದುರುಳದೈತ್ಯ ಕ್ರೋಧವರಿಸಿ ಸುರರುರಗದಲ್ಲಿನಿಂದುಹರುಷದಿ ಸುಮ ವರ್ಷವನ್ನು ಕರೆಯುವರೈ ಸರಸದೀ2ಜನಕರಾಯ ಹರುಷದಿಂದ ಜನಕೆ ಓಲೆ ಬರೆಯೆ ಕಂಡುಘನದಿ ದಿಬ್ಬಣ ಕೂಡಿ ಬಂದ ಜನಕ ಜನನಿಯರಿಗೆ ನಮಿಸಿಅನುನಯದಿಂ ಮನ ಓಲೈಸಿ ದನುಜಾಂತಕ ಗೋವಿಂದನೇ3<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ಹಿಂದಿನ ಬವಣೆಗಳೆಲ್ಲ ಆಗಲೆ ಮರೆದೆಯೇನೊ |ಇಂದುಬಂದ ಭಾಗ್ಯವು ನಿಜವೆ ವೆಂಕಟತಂದೆ?ಪತಲೆಗೆ ಹುಲಗಲ ಹೂವಕಟ್ಟಿತುರುಗಳ ಕಾಯುತಲಿದ್ದೆ |ಹಲವು ರತ್ನದ ಮುಕುಟ ಈಗ ಇಟ್ಟಿಹೆನೆಂದು 1ಒಪ್ಪಿಡಿಅವಲಕ್ಕಿಯನು ಒಪ್ಪದಿಂದ ಸವಿದೇ ಸವಿದೆ |ತಪ್ಪದೆ ಪಂಚಾಮೃತ ಉಂಡು ಸೊಕ್ಕಿದೆನೆಂದು 2ಭಾಗ್ಯವು ಬಂದರೆ ಭಕ್ತರನು ಮರೆವರೆ ಸೌ-|ಭಾಗ್ಯವಂತ ನೀನುಪುರಂದರವಿಠಲ3
--------------
ಪುರಂದರದಾಸರು
ಹೇಗೆ ಉದ್ಧಾರ ಮಾಡುವನು - ಶ್ರೀಹರಿ|ಹೀಗೆ ದಿನಗಳೆದುಳಿದವನ ಪರಾಗದಿಂದಲಿ ಭಾಗವತರಿಗೆ |ಬಾಗದಲೆ ತಲೆ ಹೋಗುವಾತನ ಅ.ಪಅರುಣೋದಯಲೆದ್ದು ಹರಿಯೆನ್ನದಲೆ ಗೊಡ್ಡು |ಹರಟೆಯಲಿ ಹೊತ್ತು ಏರಿಸಿದವನ ||ಸಿರಿತುಲಸಿಗೆ ನೀರನೆರೆದು ನಿರಂತರ |ಧರಿಸದೆಮೃತ್ತಿಕೆತಿರುಗುತಲಿಪ್ಪನ ||ಗುರುಹಿರಿಯರ ಸೇವೆ ಜರೆದು ನಿರಂತರ |ಪರನಿಂದೆಯ ಮಾಡಿ ನಗುತಿಹನ ||ಪರಹೆಣ್ಣು ಪರಹೊನ್ನು ಕರಗತವಾಗಲೆಂದು |ಪರಲೋಕ ಭಯಬಿಟ್ಟು ತಿರುಗುವನ ||ತರುಣಿ ಮಕ್ಕಳನು ಇರದೆ ಪೋಷಿಸಲೆಂದು |ಪರರ ದ್ರವ್ಯ ಕಳವು ವಂಚನೆ ಮಾಳ್ಪನ2ನಡೆಯಿಲ್ಲ ನುಡಿಯಿಲ್ಲ ಪಡೆಯಲಿಲ್ಲ ಪುಣ್ಯವ |ಬಿಡವು ನಿನ್ನ ಪಾಪಕರ್ಮಗಳೆಂದಿಗು ||ಸಡಲಿದಾಯುಷ್ಯವು ಕಡೆಗೂ ಸ್ಥಿರವೆಂದು |ಕಡುಮೆಚ್ಚಿ ವಿಷಯದೊಳಿಪ್ಪನ ||ಒಡೆಯ ಶ್ರೀಪುರಂದರ ವಿಠ್ಠಲರಾಯನ |ಅಡಿಗಳ ಪಿಡಿಯದೆ ಕಡೆಗೂ ಕೆಟ್ಟವನ 3
--------------
ಪುರಂದರದಾಸರು
ಹೇಗೆ ಮಾಡಲಿ ಮಗುವಿಗೇನಾಯಿತೊ - ಇದರ - |ಆಗಮವ ಬಲ್ಲವರು ತಿಳಿದೆಲ್ಲ ಪೇಳಿ ಪ.ತೂಗಿ ಮಲಗಿಸೆ ಕಣ್ಣ ಮುಚ್ಚಲೊಲ್ಲನು, ಬೆನ್ನ - |ಮೇಗೆ ಬುಗುಟಿಯು, ಎದೆಯು ಕಲ್ಲಾಗಿದೆ |ರೋಗವನೆ ಕಾಣೆ ದಾಡೆಯಲಿ ನೀರಿಳಿಯುತಿದೆ |ಕೂಗುವ ಧ್ವನಿಯೊಮ್ಮೆ ಕುಂದಲಿಲ್ಲ 1ಖಂಡಸಕ್ಕರೆ ಹಣ್ಣ ಕೊಟ್ಟರೊಲ್ಲದೆ ಮಣ್ಣ |ಹೆಂಡೆಯನು ಬೇಡಿ ತಾ ಪಿಡಿವ ಕೊಡಲಿ ||ಮಂಡೆ ಜಡೆಗಟ್ಟಿಹುದು ಮಾಡಲಿನ್ನೇನಿದಕೆ |ಹಿಂಡುಸತಿಯರ ದೃಷ್ಟಿ ಘುನವಾಯಿತೇನೊ2ಮೊಲೆಯನುಂಬಾಗ ಮೈಯಂಬರವನೊದೆಯುತಿದೆ |ಕಲಕಿತದಲಿ ಎನ್ನ ಕೊಲುವುದೇಕೋ ||ತಿಳಿದಿದರ ನೆಲೆಯನರಿತವರನೊಬ್ಬರ ಕಾಣೆ |ಚೆಲುವಸಿರಿಪುರಂದರವಿಠಲ ತಾ ಬಲ್ಲ3
--------------
ಪುರಂದರದಾಸರು
ಹೇಳಬಾರದೆ ಬುದ್ಧಿಯ - ಮಗನ ಊರ-|ಗೂಳಿಯ ಮಾಡಿದೆನೆ ? ಪಮೇಳದಿ ಓರಗೆಯವರ ಕೂಡಿಕೊಂಡು |ಹಾಳು ಮಾಡುತಾನೆ ಗೋವಳಗೇರಿಯ ಅ.ಪಅಟ್ಟದ ಮೇಲಿಟ್ಟಹ - ಚೆಟ್ಟಿಗೆ ಹಾಲು |ಬಟ್ಟನಿಕ್ಕಿ ಚೀಪುವ ||ದುಷ್ಟತನವ ಮಾಡಬೇಡ ಅಯ್ಯಾ ಎನೆ |ಕಷ್ಟವೇನೆಂಬೆ ಮುದ್ದಿಟ್ಟು ಓಡಿ ಪೋದ 1ಮೊಸರ ಮಥಿಸುತಿರಲು - ಬಂದು ಕುಳಿತ |ಹಸುಗೂಸು ಎನುತಿದ್ದೆನೆ ||ಕುಸುಮನಾಭನು ತನ್ನ ವಶವಾಗು ಎನುತಲಿ |ವಸನೆತೆಗೆದು ಮೊಲೆ ಪಿಡಿದು ಹೋದ ಮೇಲೆ 2ಬೆಣ್ಣೆಯ ಕಂಡರಂತೂ - ಅದರರೂಪ |ಕಣ್ಣಿಗೆ ತೋರನಲೆ ||ಸಣ್ಣವನೆಂದು ಬಗೆದು ನಾ ಕರೆದರೆ |ಬಣ್ಣದ ಮಾತಾಡಿ ಬಾ ಎಂದು ಕರೆವನು 3ಉಡುವ ಸೀರೆಯ ಕಳೆದು - ತಡಿಯಲಿಟ್ಟು |ಮಡುವಿನೊಳ್ ಮೈದೊಳೆಯೆ ||ದಡದಡ ಬಂದೊಯ್ದು ಕಡಹದ ಮರವೇರಿ |ಕೊಡು ಕೃಷ್ಣ ಎನುತಿರೆ ಪಿಡಿ ಜೋಡು ಕೈಯೆಂಬ 4ಎಷ್ಟು ಹೇಳಲಿ ನಿನಗೆ - ಯಶೋದೆ ಒಂ-|ದಿಷ್ಟು ಕರುಣವಿಲ್ಲವೆ |ಸೃಷ್ಟಿಗೊಡೆಯ ನಮ್ಮಪುರಂದರವಿಠಲ-------------------------- 5
--------------
ಪುರಂದರದಾಸರು