ಒಟ್ಟು 2881 ಕಡೆಗಳಲ್ಲಿ , 122 ದಾಸರು , 2089 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗನ ನೋಡುವಾ ಶ್ರೀರಂಗನ ಪಾಡುವಾ ಪ ರಥಾಂಗ ಸುಧಾಂಗನು ಅ.ಪ ಇಂದಿರೆಯರಸ ಮುಕುಂದ ಜನಾರ್ದನ ಮಂದರಧರ ಗೋವಿಂದನ ಕೇಶವನ 1 ರಾಮನ ಜಾನಕಿರಾಮನ ರವಿಕುಲ ಸೋಮನ ಮಾಂಗಿರಿಧಾಮನ ಭೀಮನ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಂಗವಲಿದ ರಾಯಾ ಸಜ್ಜನ ಸಂಗ ಪಾಲಿಸಯ್ಯಾ ಮಂಗಳ ಚರಿತ ಕೃಪಾಂಗನೆ ಎನ್ನಂತ ರಂಗದಿ ನಿಲಿಸುತ ತವಾಂಘ್ರಿ ಸೇವಕನೆಂದು ಅ.ಪ ನತಜನ ಸುರಧೇನು ನೀನೆಂದು ನುತಿಸಿ ವಂದಿಸುವೆನೋ ರತಿಪತಿಪಿತ ನುತ ಕಥಾಮೃತ ಗ್ರಂಥದಿ ಸತತ ಎನಗೆ ಮತಿ ಹಿತದಲಿ ಪ್ರೇರಿಸು 1 ಧನ್ಯನ ನೀಮಾಡೋ ಕರುಣದಿ ಮನ್ನಿಸಿ ಕಾಪಾಡೋ ಘನ್ನ ಮಹಿಮಕಿನ್ನು ನಿನ್ನ ಹೊರತು ಇನ್ನಾರು ಕಾವರರಿಯೆ ಕಾಣೆ ಗುರೋ 2 ಮಂದಮತಿ ಬಿಡಿಸೋ ಈ ಭವ ಬಂಧನ ಪರಿಹರಿಸೊ ಪತಿ ಶಾಮಸುಂದರವಿಠಲ ದ್ವಂದ್ವ ಪದದಿ ಮನಹೊಂದಿಸೊ ಪೋಷಿಸೊ 3
--------------
ಶಾಮಸುಂದರ ವಿಠಲ
ರಂಗವೊಲಿದ ದಾಸರಾಯ | ಸತ್ಕವಿಜನಗೇಯ ಪ ಮಂಗಳಕರ ಕುಲಿಶಾಂಗ ಮತಾಂಬುಧಿ ಮಾನವ ಸಿಂಗಾರ್ಯರ ಸುತ ಅ.ಪ ಶರಣು ಮಂದಾರ ಪರಮೋದಾರ ಪರಿಪಾಲಿಸು ಧೀರ ಮಣಿ ಸುಹಾರ ಶೋಭಿತ ಕಂಧರ ಸಾರ ಸು ರಸಗ್ರಂಥ ಕೃತ ಕರುಣಾನಿಧೆ ಗುರು 1 ಜ್ಞಾನಿಕುಲನಾಥ ಭಾನುಜಸೂತ ಭವವಾರಿಧಿ ಪೋತ ಕ್ಷೋಣಿ ಸುರವ್ರಾತ ನಮಿತ ಸುಖ್ಯಾತ ವರದಾನಿ ಪುನೀತ | ಧೇನುಪಾಲ ದಾಸಾರ್ಯರ ಪದಯುಗ ಧ್ಯಾನಿತ ಮಾನಿತ ಮಾನವಿ ನಿಲಯ 2 ದುರಿತ ವಿದೂರ ಸನ್ಮಹಿಮಾಪಾರ ಪಾಮರ ಹೇಮಶಯ್ಯ ಕುಮಾರ ಕುಮತಾಬ್ಧಿ ಸಮೀರ ಕೋಮಲಾಂಗ ಮಮಸ್ವಾಮಿ ಸೋಮನುತ ಶಾಮಸುಂದರ ಸುಧಾಮ ಪ್ರೇಮ ಸಖ 3
--------------
ಶಾಮಸುಂದರ ವಿಠಲ
ರಘುಕುಲ ತಿಲಕ ವಿಠಲ ಇವಳ ಘಾವಳಿಗಳನುಬಗೆಹರಿಸಿ ಕಾಪಾಡ ಬೇಕೋ ಹರಿಯೇ ಪ ಭೃಗುವರದ ನಿನ್ನಂಘ್ರಿ ಸೇವೆಯಲಿ ಮಹಭಕ್ತಿಮಿಗೆ ಜ್ಞಾನ ಕೊಟ್ಟಿವಳ ಕಾಪಾಡ ಬೇಕೋ ಅ.ಪ. ಶಬರಿ ಎಂಜಲನುಂಡ | ಕಾರುಣ್ಯ ಮೂರುತಿಯೆಅಭಯದನು ನೀನಾಗಿ ವಂಶ ಉದ್ಧರಿಸೋ |ಕುಭವ ಪರಿಹರಕಾಗಿ ಸಾಧನವು ಎಂದೆನಿಪಶುಭ ಸದಾಗತಿ ಮತದಿ ದೀಕ್ಷೆಯನೆ ಈಯೋ 1 ಪಾದ ಸೇವಕಳೀಗೆಭೇದ ಪಂಚಕ ತಿಳಿಸಿ ಸಾಧನವಗೈಸೋ 2 ಸರ್ವಜ್ಞ ಸರ್ವೇಶ ಹಯಮೊಗಾತ್ಮಕನಾದಸರ್ವ ಸುಂದರ ಗುರುಗೋವಿಂದ ವಿಠಲ |ಸರ್ವದಾ ಸರ್ವತ್ರ ನಿನ್ನ ಸ್ಮøತಿಯನೆ ಕೊಟ್ಟುದರ್ವಿಜೀವಿಯ ಸಲಹೆ ಬಿನ್ನವಿಪೆ ನಿನಗೇ 3
--------------
ಗುರುಗೋವಿಂದವಿಠಲರು
ರಘುವೀರನ ಕಂಡನು ಕಪಿವೀರ ಕಲಿಕಲ್ಮಷದೂರ ಪ ಅಘವರ್ಜಿತ ಪನ್ನಗಶಯನನೆಂದು ಬಗೆದು ಮನದಿ ಕರಮುಗಿದನು ದೂರದಿ ಅ.ಪ. ಶಿರಭಾಗದಿ ಮೆರೆವ ಜಟಾಮಕುಟ | ಚಿಕುರಾಳಿಯಿಂದ ಪರಿಶೋಭಿಪ ಸುಂದರ ಲಲಾಟ | ಕಮಲಾಕ್ಷಗಳಲಿ ನಾಸಿಕ ಬಲು ಮಾಟ ಸ್ಮರಲಾವಣ್ಯ ಧಿಕ್ಕರಿಸುವ ಸುಂದÀರ ಶರಧಿ ಗಂಭೀರನ 1 ಆಜಾನುಬಾಹುಗಳತಿ ಪ್ರಶಸ್ತ | ಸುರಚಾಪದಂತೆ ರಾಜಿಪ ಧನುವ ಧರಿಸಿದ ಹಸ್ತ | ವಿಶಾಲ ವಕ್ಷಕೆ ಈ ಜಗದೊಳಗುಪಮೇಯದೆತ್ತ | ದೋಷನಿರಸ್ತ ಮೂಜಗದೊಳಗತಿ ಸೋಜಿಗನೆನಿಪ ಸು ತೇಜದಿ ರಾಜಿಪ ರಾಜಕುಮಾರನ 2 ಸುಂದರ ತ್ರಿವಳಿಗೊಪ್ಪುವ ಉದರ | ನೆರೆ ಗಂಭೀರ ಚಂದದಿ ಶೋಭಿಪ ನಾಭಿಕುಹರ | ಚೀರಾಂಬರಧರ ಬಂಧುರ ಕಟಿತಟ ಬಲು ರುಚಿರ | ನೋಳ್ಪರ ಚಿತ್ತಹರ ಕುಂದಿಲ್ಲದ ಪದದ್ವಂದ್ವ ಸುಶೋಭಿತ ಸುಂದರಾಂಗ ಶ್ರೀ ಕರಿಗಿರೀಶನ 3
--------------
ವರಾವಾಣಿರಾಮರಾಯದಾಸರು
ರಚ್ಚೆ ಕಟ್ಟೆ ಪುರಾಣ ರಾದ್ಧಾಂತವು -ಇದು ಪ ಹುಚ್ಚುತನದಲಿ ನೀ | ಚೋಚ್ಚ ನುಡಿಗಳನಾಡುವುದು ಅ.ಪ ನವನವ ಆಸ್ತಿಗಳೆಲ್ಲ | ಇವನ ಮನೆಗೆ ಸೇರಿ ಬಂತು 1 ಸೊಟ್ಟಮೂತಿ ನಾಗಪ್ಪನ ಸೋದರಿಯರು ಏನು ಹೇಳಲಿ 2 ಇವನಿಗೆ ಬಂತು ಮತ್ತೆ ನಾವು ಬಡವರು ನಮಗೆಲ್ಲಿಂದ ಬಹುದು? 3 ದುರ್ಯೋಧನ ಯೋಗ್ಯ ಕುಂತೀತರಳರದೇ ಅನ್ಯಾಯ ಕೃಷ್ಣನು ನೆರೆ ಮೋಸಗಾರನು ಭಾರತ ಕಥೆಯೆಂಬುವುದು4 ಮೋಸಗಾರರೀವೂರೆಲ್ಲ ಆಶೆ ಪಾತಕರು 5 ತಂಗಿ ಆಸ್ತಿ ಸೇರಿತಿವಗೆ ಭಂಗಿ ಕೋರ ವೆಂಕಟರಾಯ ಮಂಗಿ ಸಂಗದಿಂದಲೀ ಕಮಂಗನಾನನು 6 ಮಧ್ವರಾಯನ ಮಗನ ಕಥೆ ಏನು ಹೇಳೋಣ 7 ಕಾಸಿದ್ದವರೇನು ಮಾಡಿದರೂ ಮಾಡಬಹುದು 8 ದಾರಿಹೋಕರೆಲ್ಲ ಕೂಡಿ ಭಾರಿ ಭಾರಿ ಮಾತುಗಳಾಡಿ ಸೂರೆಗೊಂಬುವರು ಪಾಪ ಶರಧಿಯನ್ನು 9 ಶರಣರ ದೂರಿಪಾತಕಕ್ಕೆ ಭಾಗಿಗಳಹರು 10
--------------
ಗುರುರಾಮವಿಠಲ
ರಜತ ಪುರೀಶಾ ಪಾಲಿಸೋ | ನಿನ್ನ ಶ್ರೀಪಾದಭಜನೆಯೋಳಿರಿಸೋ ಪ ಅಜ ಜನಕನೆ ಹರಿ | ನಿಜ ಜನರಿಗೆ ನೀವಿಜಯದ ತವ ಪದ | ರಜದವನೆನಿಸೋ ಅ.ಪ. ಕ್ರತು ಕುವರಾ 1 ಭವ ಮುಖನುತ | ಪತ ಸರಸಿಜ ಯುಗಹೃದಯದಿ ಪೊಳೆಯುತ | ಮುದವನೇ ಬೀರೋಶ್ರೀಹಂಸಾ | ಯದು ವಂಶಾ | ಖಲಧ್ವಂಸಾಕೃತ ಕುರುಕುಲ ನಿರ್ವಂಶಾ 2 ಭವ | ಕರುಣಾ ನಿಧಿ ಪೊರೆಗೋವಿಂದ ಎನಗಾನಂದಾ 3
--------------
ಗುರುಗೋವಿಂದವಿಠಲರು
ರತುನ ಸಿಕ್ಕಿದೆ ತಮ್ಮ ಇದು ಬಹು ಜತನೆಲೋ ನಿಸ್ಸೀಮ ರತುನ ಸಿಕ್ಕಿದೆ ಪ ನಿನ್ನ ಸುಕೃತದ ಫಲದಿಂದ ಪತಿತಪಾವನ ಸಿರಿಪತಿ ವಿಮಲನಾಮ ಅ.ಪ ದುರಿತ ದಾರಿದ್ರ್ಯವಿಲ್ಲದ ಈ ರತ್ನದಿಂ ಜರಮರಣಂಟಿಲ್ಲ ನರಹರಿ ವರಪಾದ ಶರಣರು ಪರಕ್ಕೆ ಪರಮ ಗೌಪ್ಯದಿಂದ ಶೋಧಿಸುತಿರುವಂಥ 1 ತಾಪತ್ರಯಗಳಿಲ್ಲ ಈ ರತ್ನದಿಂ ಪಾಪ ಶಾಪವಿಲ್ಲ ಪಾಪಿಯಮದೂತರ ಲೋಪಗೈದಯ ಭಯ ಆಪಾರ ಪರಲೋಕ ಸೋಪಾನಕ್ಹಚ್ಚುವ2 ಧರ್ಮಕೆ ಕೊಡು ನದರ ಈ ರತ್ನದ ಮರ್ಮ ತಿಳಿಯೆ ಚದರ ಬ್ರಹ್ಮ ಬ್ರಹ್ಮಾದಿಗಳೊಮ್ಮನದ್ಹೊಗಳುತ ನಿರ್ಮಲಾಗುವ ಪರಬ್ರಹ್ಮ ಶ್ರೀರಾಮನೆಂಬ 3
--------------
ರಾಮದಾಸರು
ರಮೆಯರಸ ರಕ್ಷಿಸೋ ನಮಿತಜನರ ಕಲ್ಪದ್ರುಮ ಸುಮನೋಹರ ಪ ಅಮಿತ ಸುಗುಣ ಪೂರ್ಣ-ಶಮಲವರ್ಜಿತ ಹೃ- ತ್ಕಮಲ ದ್ಯುಮಣಿ ನಿಸ್ಸೀಮಮಹಿಮ ಸಂಪೂರ್ಣಕಾಮ ಹರಿ1 ಅಘ ಸಂ- ಕಷ್ಟಹರಿಸಿ ಸಂತುಷ್ಟಿಯನೀವ ನಿರ್ದುಷ್ಟಫಲಪ್ರದ 2 ಉರಗಾದ್ರಿವಾಸವಿಠಲ ದೇವ ಹರೇ ಕರೆ ನಿನ್ನ ಬಳಿ ಸಿರಿ ವೆಂಕಟೇಶನೆ ದೊರೆ-ಪೊರೆ ನಿನ್ನ್ಹೊರತು ನಾನರಿಯೆ 3
--------------
ಉರಗಾದ್ರಿವಾಸವಿಠಲದಾಸರು
ರವಿಕುಲಾಂಬುಧಿ ಸೋಮನೆ ಭುವನ ಪಾವನ ರಾಮನೆ ಪ ಕವಿವರಾರ್ಚಿತ ಭೂಮನೆ ದಿವಿಜಸನ್ನುತ ನಾಮನೆ ಅ.ಪ. ಚಂಡ ರಾವಣನುಪವನದೊಳು ಚಂದ್ರ ಮಂಡಲಾಸ್ಯೆ ಇರುವಳು 1 ಸುಂದರಿ ನಿನ್ನನು ಧ್ಯಾನಿಪಳು ಕುಂದುತ್ತ ಚಿತ್ತದಿ ಶೋಕಿಪಳು ಬಿಡುವಳು ಬಂಧನ ದೊಳಿರುವಳು2 ಮಾಸಿದ ಸೀರೆಯನುಟ್ಟಿಹಳು ದೂಸರ ವೇಣಿಯ ಸುತ್ತಿಹಳು ಭೂಷ ವಿಶೇಷದೊಳಾಸೆಯನಿಡಳುಪವಾಸವನೆ ಗೈವಳು 3 ತಾಮರಸಾಕ್ಷಿಯು ನೊಂದಿಹಳು ರಾಮ ರಾಮೆನ್ನುವಳು 4 ಜ್ಞಾನ ವಿಜ್ಞಾನವ ಪೊಂದಿಹಳು ಪತಿ ಭಕ್ತಿದೇವಿಯಾಗಿರುವಳು ಧೇನುಪುರೀಶ ಕೇಳು 5
--------------
ಬೇಟೆರಾಯ ದೀಕ್ಷಿತರು
ರಾಘವ ಹರಿ ವಿಠಲ | ಕಾಪಾಡೊ ಇವಳಾ ಪ ಅಘದೂರ ಶ್ರೀ ಹರಿಯೇ | ಪಾಪಘಗಳ ಕಳೆದೂ ಅ.ಪ. ಮುಕ್ತಿಗೇ ಸೋಪಾನ | ತಾರತಮ್ಯ ಜ್ಞಾನಮತ್ತೈದು ಭೇದಗಳ | ಅರಿವನೆ ಇತ್ತೂಪ್ರತ್ಯಹರ ತವನಾಮ | ಚಿತ್ತದಲಿ ನೆನೆವಂಥಉತ್ತಮದ ಸಂಸ್ಕøತಿಯ | ಕೊಟ್ಟು ಕಾಪಾಡೋ 1 ಪರಿ | ಇತ್ತಿಹೆನೊ ಅಂಕಿತವಚಿತ್ತದೊಲ್ಲಭ ಹರಿಯೆ | ಕರ್ತೃ ಕರ್ಮದಲೀವ್ಯಾಪ್ತ ನೀನಾಗಿದ್ದು | ಸತ್ಸಾಧನೆಯ ಗೈಸೀಎತ್ತು ಭವದಿಂದಿವಳ | ಉತ್ತಮೋತ್ತಮನೆ 2 ಇತ್ತು ವೈರಾಗ್ಯವನು | ಮತ್ತೆ ಜ್ಞಾನ ಸಂಪದಇತ್ತು ಕಾಪಾಡಿವಳ | ಕರ್ತೃ ರಾಮಚಂದ್ರಾ |ಉಕ್ತಿ ಎನ್ನದು ಇದೂ | ಮತ್ತನ್ಯ ನಾನೊಲ್ಲೆಮುಕ್ತಿ ದಾಯಕ ಗುರೂ | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ರಾಘವೇಂದ್ರ ನೀನೆನ್ನ ರಕ್ಷಕನಯ್ಯ ನಾಗಶಯನಧ್ಯಾನ ಒದಗಿಸೋ ಜೀಯ ಪ ಭಾಗ್ಯದೇಯ ವೈಶಾಲ್ಯ ಹೃದಯ ಮಂತ್ರಾಲಯ [ತುಂಗಾತೀರ] ಕ್ಷೇತ್ರ ನಿಲಯ ಅ.ಪ ಭಕ್ತರಕ್ಷಕ ನೀ ರಾಘವೇಂದ್ರ ಭಕ್ತ ಪಾಲಕ ನೀ ರಾಘವೇಂದ್ರ ಮುಕ್ತಿದಾಯಕ ನೀ ರಾಘವೇಂದ್ರ ಶಕ್ತಿ ಸ್ವರೂಪ ನೀ ರಾಘವೇಂದ್ರ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಘವೇಂದ್ರ ಹರಿ ವಿಠಲ | ಕಾಪಾಡೊ ಇವಳಾ ಪ ಭೋಗಿ ಶಯನನೆ ಹರಿಯೆ | ನಾಗಾರಿವಾಹಾ ಅ.ಪ. ಮಂತ್ರಮಂದಿರ ಧೊರೆಯ ಅಂತರಂಗದಿ ಭಜಿಪಸತತದಿ ವಿಜಯಾರ್ಯ | ಚಿಂತೆಯಲ್ಲಿಹಳಾ |ಅಯೆ ಸತ್ಸುಕೃತದಿಂ ಹರಿದಾಸ್ಯ ಕಾಂಕ್ಷಿಪಳಮಾತೆ ಕೈ ಪಿಡಿ ಹರಿಯೇ | ಸಂತರುದ್ಧರಣಾ 1 ಭಾವದಲಿ ತವ ಮಹಿಮೆ | ಸ್ತವನಗೈಯ್ಯುವ ಕಾರ್ಯದಿವಸ ದಿವಸದಿ ವೃದ್ಧಿ | ಭಾವವನೆ ಪೊಂದೀಕವನ ರೂಪದಿ ಪ್ರವಹ | ಭುವಿಯೊಳಗೆ ಹರಿವಂತೆಹವಣಿಸೋ ಶ್ರೀಹರಿಯೇ | ಪವನ ವಂದಿತನೆ 2 ಭವ ಭಂಗ | ಕಾರುಣ್ಯಪಾಂಗ 3 ಭವ ಶರಧಿ | ದಾಟಿಸೋ ಹರಿಯೇ 4 ಕೈವಲ್ಯಪ್ರದ ಪುರುಷ | ದೇವದೇವೇಶ ಹರಿಗೊವತ್ಸನದಿಗಾವು | ಧಾವಿಸುವ ತೆರದೀನೀವೊಲಿಯು ತಿವಳಿಗೆ | ಭಾವದಲಿ ಮೈದೋರೊಭಾವಜನಯ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ರಾಘವೇಂದ್ರಸ್ವಾಮಿಗಳ ಸ್ತೋತ್ರ ಕಂಡು ಧನ್ಯನಾದೆ ಗುರುಗಳ - ಕಣ್ಣಾರೆ ನಾಕಂಡು ಧನ್ಯನಾದೆ ಈ ಗುರುಗಳ ಪ ತುಂಗಾತಟದಿ ಬಂದು ನಿಂತ ಪಂಗು ಬಧಿರಾದ್ಯಂಗ ಹೀನರಅಂಗಗೈಸಿ ಸಲಹುವಾ - ನರಸಿಂಗನಂಘ್ರಿ ಭಜಕರಿವರ 1 ಗುರುವರ ಸುಗುಣೇಂದ್ರರಿಂದಪರಿಪರಿಯಲಿ ಸೇವೆಗೊಳುತವರಮಂತ್ರಾಲಯ ಪುರದಿ ಮೆರೆವಪರಿಮಳಾಖ್ಯ ಗ್ರಂಥಕರ್ತರ 2 ಸೋ ಅಹಂ ಎನ್ನದೆ ಹರಿಯ ದಾಸೋ ಅಹಂ ಎನ್ನಲು ಒಲಿದು ವಿಜಯಮೋಹನ ವಿಠ್ಠಲನ್ನ ಪರಮಸ್ನೇಹದಿಂದ ತೋರುವವರ 3
--------------
ಮೋಹನದಾಸರು
ರಾಜಕುಲ ವನರಾಶಿ ರಾಜರಾಜೇಶ್ವರಾ | ರಾಜೀವ ನಯನ ಯದುರಾಜ ಎಲೊ ಭಾಪುರೆ ಪ ಗರಳ ಪೇರ್ಮೊಲೆಯಿತ್ತ ಅಸುರಿಯಳ ಸಂಹರಿಸಿ | ಮರಳಿ ಅವಳಿಗೆ ಉತ್ತಮ ಗತಿಯನಿತ್ತೆ | ದುರಳ ಶಕಟಾಸುರನ ಚರಣ ದುಂಗುಟದಲ್ಲಿ | ತರಳಾಟದಿಂದ ಮರ್ದಿಸಿದೆ ಎಲೆ ಭಾಪುರೆ 1 ವ್ರಜ | ಪುರವ ಪಾಲಿಸಿದೆ ಕಾಳಿಂಗನೈದು | ಸಿರದಲ್ಲಿ ತುಳಿದು ರಮಣ ದ್ವೀಪಕೆ ಕಳುಹಿ | ಪರಿಪರಿಯ ಖಳರ ಮರ್ದಿಸಿದೆ ಎಲೊ ಭಾಪುರೆ 2 ಕರೆಯ ಬಂದಾ ಕ್ರೂರ ಭಕ್ತನಿಗೆ ಯಮುನೆಯಲಿ | ಕರುಣದಿಂದಲಿ ನಿಜರೂಪ ತೋರಿ | ಮುರಿದು ಧರಿಗೆ ವರಿಸಿದೆ ಕಂಸನ ಎಲೆ ಭಾಪುರೆ 3 ವನಧಿಯೊಳು ಪುರ ಬಿಗಿದು ಕಾಲಯವನನ ಸದೆದು | ಅನಿಲ ಸುತನಿಂದ ಮಾಗಧನ ಕೊಲ್ಲಿಸಿ | ವನಿತೆಯರ ಸೆರೆ ಬಿಡಿಸಿ ಸೂತತನವನೆ ವೊಹಿಸಿ | ಫಲ್ಗುಣಗೆ ವಿಶ್ವರೂಪವ ತೋರಿದೆ ಎಲೊ ಭಾಪುರೆ 4 ಗುರು ಭೀಷ್ಮ ಶಲ್ಯ ಶಕುನಿ ಸುಬಲ ಭಗದತ್ತ | ತರಣಿಸುತ ದುಶ್ಶಾಸ ಕೌರವೇಶಾ | ಎರಡು ಬಲ ವ್ಯಾಜ್ಯದಲಿ ಭೂಭಾರನಿಳುಹಿ ಸಾ | ವಿರ ತೋಳ ಖಳನ ಭಂಗಿಸಿದೆ ಎಲೊ ಭಾಪುರೆ5 ದ್ವಾರಕಾಪುರದಲ್ಲಿ ನಾರದಗೆ ಸೋಜಿಗವ | ತೋರಿದೆ ಒಬ್ಬೊಬ್ಬ ನಾರಿಯಲಿ | ನಾರಿಯರ ಕೂಡ ಬಲು ಕ್ರೀಡೆಗಳನಾಡಿ ಅ | ವರ ಸಂತಾನವನು ಪಡದೆ ಎಲೊ ಭಾಪುರೆ 6 ವರ ಚಂದ್ರಹಾಸ ಮಿಗಿಲಾದ ಭೂಪಾಲಕರ | ಕರೆಸಿ ಪಾಂಡುವರ ಯಾಗವನೆ ಮುಗಿಸಿ | ಹರುಷದಲಿ ಯದುಕುಲವಾಸ ಮಾಡಿದೆ | ಪರಮ ಪುರುಷ ವಿಜಯವಿಠ್ಠಲನೆ ಎಲೆ ಭಾಪುರೆ 7
--------------
ವಿಜಯದಾಸ