ಒಟ್ಟು 139 ಕಡೆಗಳಲ್ಲಿ , 41 ದಾಸರು , 124 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಷಯದ ವಿಚಾರ ಬಿಡು ವಿಹಿತಕರ್ಮವಮಾಡು|ವೈರಾಗ್ಯ ಭಾಗ್ಯಬೇಡು ಪ.ವಿಷವೆಂದು ಕಾಮ - ಕ್ರೋಧಗಳೆಲ್ಲವೀಡಾಡು |ಮಸಣಮನವೇ ಮಾಧವನನು ಕೊಂಡಾಡು ಅಪಅನುದಿನದಿ ಹರಿಕಥೆಯಕೇಳಿ ಸಂತೋಷಪಡು |ದಿನದಿನವು ಸಜ್ಜನರ ಕೂಡು ||ಮನಮುಟ್ಟಿ ದುರಾಚಾರ ಮಾಳ್ಪರನು ನೀ ಕಾಡು |ಹಣ - ಹೊನ್ನು ಪರಹೆಣ್ಣು ಹೆಂಟೆಯಂತೆನೋಡು1ವೇದ ಶಾಸ್ತ್ರಾರ್ಥ ತತ್ವದ ವಿಚಾರವಮಾಡು |ಮಾಧವನ ಭಕ್ತಿ ಬೇಡು ||ಪಾದದಲಿ ಪುಣ್ಯತೀರ್ಥದ ಯಾತ್ರೆಮಾಡು ಮಧು - |ಸೂದನನ ಕೀರ್ತಿ ಸಂಕಿರ್ತನೆಯಮಾಡು2ಅಂಬುಗುಳ್ಳಗಳಂತೆ ಎಂದಿಗಿದ್ದರು ದೇಹ |ನಂಬಿ ನೀ ಕೆಡಲುಬೇಡ ||ಕೊಂಬುವರು ಬಂದರಾಕ್ಷಣಕೆ ಬೆಲೆಯಾಗುವುದು |ಅಂಬುಜಾಕ್ಷ ಪುರಂದರವಿಠಲನ ನೆನೆ ಮನವೆ 3
--------------
ಪುರಂದರದಾಸರು
ವೈದ್ಯ ಬಂದ ನೋಡಿ - ವೆಂಕಟನೆಂಬ |ವೈದ್ಯ ಬಂದ ನೋಡಿ ಪ.ವೈದ್ಯ ಬಂದನು ವೇದವೇದ್ಯ ನೋಡೀಗಲೇಶ್ರೀದೇವಿರಮಣನು ಶ್ರೀನಿವಾಸನೆಂಬ ಅಪಎಷ್ಟು ದಿನದ ರೋಗಗಳೆಂಬುದ ಬಲ್ಲ |ಗಟ್ಟಿಯಾಗಿ ಧಾತುರಸಗಳನು ಬಲ್ಲ ||ಕಷ್ಟ ಬಡಿಸದಲೆನ್ನ ಭವರೋಗ ಬಿಡಿಸುವ |ಶಿಷ್ಟವಾದ ದೇಹ ಕೊಟ್ಟು ಕಾಯುವನಿವ 1ಹೊನ್ನು - ಹಣಂಗಳ ಅನ್ನವ ಅನುಸರಿಸಿ |ತನ್ನ ದಾಸನೆಂಬ ನಿಜವ ನೋಡಿ ||ಚೆನ್ನಾಗಿ ಜಿಹ್ವೆಗೆ ಸ್ವಾದವಾಗಿರುವಂಥ |ತನ್ನ ನಾಮಾಮೃತ ದಿವ್ಯ ಔಷಧವೀವ 2ಈತ ದಿಟ್ಟಿಸಿ ನೋಡೆ ಎಳ್ಳಷ್ಟು ರೋಗವಿಲ್ಲ |ಈ ತನುವಿಗೆಂದೆಂದು ರೋಗಬರಲರಿಯದು ||ಈತ ಅನಂತರೂಪದಿ ಜೀವರಿಗೆ ಮುನ್ನ |ಪ್ರೀತಿಯಿಂದಲಿ ಭವರೋಗ ಬಿಡಿಸುವ 3ಧರ್ಮವೈದ್ಯನಿವ ಜಗಕ್ಕೆಲ್ಲ ಒಬ್ಬನೆ |ಮರ್ಮಬಲ್ಲ ರೋಗಜೀವಂಗಳ ||ನಿರ್ಮಲವಾಗಿಹ ತನ್ನ ನಾಮಸ್ಮರಣೆ |ಒಮ್ಮೆ ಮಾಡಲು ಭವರೋಗ ಬಿಡಿಸುವ 4ಅನ್ಯ ವೈದ್ಯನೇಕೆ ಅನ್ಯ ಔಷಧವೇಕೆ ? |ಅನ್ನ ಮಂತ್ರ - ತಂತ್ರ - ಜಪವೇತಕೆ ? ||ಚೆನ್ನ ಪುರಂದರವಿಠಲನ್ನ ನೆನೆದರೆ |ಮನ್ನಿಸಿ ಸಲಹುವ ವೈದ್ಯ ಶಿರೋಮಣಿ 5
--------------
ಪುರಂದರದಾಸರು
ಹಿರಿದು ಸಂಸಾರ ನೆಲೆಯದು ಕಲ್ಪತರುಕಾಮಧೇನುವದು ಸುಖವೋ ದುಃಖವೋಹೊನ್ನು ಸತಿಯು ಸುತರೆನ್ನವರೆನ್ನದೆಚಿನ್ಮಯರೂಪೆಂದು ತಿಳಿದುಉನ್ನತವಾಗಿಹ ಸಾಧುಗುಣದಿ ತಾಮುನ್ನ ನೋಡುವವನ ನರನೋ ಹರನೋ1ಮನೆಯು ಮಾತಾ ಪಿತ ಮನುಜವರ್ಗವನೆಲ್ಲಘನಮಹಿಮನ ವಿನೋದವೆಂದುಸನುಮತದಲಿ ತಾನಧಿಕಾರಿಯೆನಿಸಿಯೆಮನದಿ ಸೂಚಿಪುದು ಉರಿಯೋ ಸಿರಿಯೋ2ಬಂಧನದೊಳು ಮಹಾ ನಿಂದನೆಯನು ಕೇಳುತಲಿಕುಂದುಕೊರತೆಗೆಲ್ಲ ಹಿಗ್ಗುತಲಿಇಂದಿದು ಅತ್ಮನ ಲೀಲಾ ಚರಿತನೆಂದುಮುಂದೆ ತೋರುವದಿದು ಭಯವೋ ಜಯವೋ3ಜನನ ಮರಣ ಸುಟ್ಟುಮನುಜ ಜೀವನ ಕೆಟ್ಟುಕನಸಿನ ತೆರ ಸಂಸಾರ ಮೂಡಿದಿನಕರಜ್ಯೋತಿಯಲಿ ಬಹುಬೆಳಗುತಲಿ ತಾ ನಿಹುದುಗೆಲುವೋ ಒಲವೋ4ಕರುಣಕಟಾಕ್ಷಸುಕರುಣ ಶಾಂತತ್ವದಿಸರಸ ಸುಜ್ಞಾನವನಳವಡಿಸಿಗುರುಚಿದಾನಂದಾವಧೂತನೆ ತಾನಾಗಿಹರುಷಿಸಿ ಸುಖಿಪುದು ದೊರೆಯೋ ಚರಿಯೋ5
--------------
ಚಿದಾನಂದ ಅವಧೂತರು
ಹೇಗೆ ಉದ್ಧಾರ ಮಾಡುವನು - ಶ್ರೀಹರಿ|ಹೀಗೆ ದಿನಗಳೆದುಳಿದವನ ಪರಾಗದಿಂದಲಿ ಭಾಗವತರಿಗೆ |ಬಾಗದಲೆ ತಲೆ ಹೋಗುವಾತನ ಅ.ಪಅರುಣೋದಯಲೆದ್ದು ಹರಿಯೆನ್ನದಲೆ ಗೊಡ್ಡು |ಹರಟೆಯಲಿ ಹೊತ್ತು ಏರಿಸಿದವನ ||ಸಿರಿತುಲಸಿಗೆ ನೀರನೆರೆದು ನಿರಂತರ |ಧರಿಸದೆಮೃತ್ತಿಕೆತಿರುಗುತಲಿಪ್ಪನ ||ಗುರುಹಿರಿಯರ ಸೇವೆ ಜರೆದು ನಿರಂತರ |ಪರನಿಂದೆಯ ಮಾಡಿ ನಗುತಿಹನ ||ಪರಹೆಣ್ಣು ಪರಹೊನ್ನು ಕರಗತವಾಗಲೆಂದು |ಪರಲೋಕ ಭಯಬಿಟ್ಟು ತಿರುಗುವನ ||ತರುಣಿ ಮಕ್ಕಳನು ಇರದೆ ಪೋಷಿಸಲೆಂದು |ಪರರ ದ್ರವ್ಯ ಕಳವು ವಂಚನೆ ಮಾಳ್ಪನ2ನಡೆಯಿಲ್ಲ ನುಡಿಯಿಲ್ಲ ಪಡೆಯಲಿಲ್ಲ ಪುಣ್ಯವ |ಬಿಡವು ನಿನ್ನ ಪಾಪಕರ್ಮಗಳೆಂದಿಗು ||ಸಡಲಿದಾಯುಷ್ಯವು ಕಡೆಗೂ ಸ್ಥಿರವೆಂದು |ಕಡುಮೆಚ್ಚಿ ವಿಷಯದೊಳಿಪ್ಪನ ||ಒಡೆಯ ಶ್ರೀಪುರಂದರ ವಿಠ್ಠಲರಾಯನ |ಅಡಿಗಳ ಪಿಡಿಯದೆ ಕಡೆಗೂ ಕೆಟ್ಟವನ 3
--------------
ಪುರಂದರದಾಸರು