ಒಟ್ಟು 130 ಕಡೆಗಳಲ್ಲಿ , 48 ದಾಸರು , 123 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಶರಣು ಮಧ್ವಗುರು ಶರಣೆಂಬೋದೆ ಬೀಜ ಮಂತ್ರ ಇಹಪರಕಿದೆ ಸಾಧನವೆಂದು ನಂಬಿಬಿಟ್ಟೆ ಹಲವು ತಂತ್ರ ಪ.ಹರಿಕೊಡದಾರು ಕೊಡುವರಿಲ್ಲ ನರರನು ಬೇಡಲ್ಯಾಕೆ ಶ್ರೀಹರಿಕೊಟ್ಟರುಂಟು ಹಗಲಿರುಳು ಒಣಹಂಬಲ್ಯಾಕೆ1ಇದು ನನ್ನದದು ನನ್ನದೆಂದು ಬರಿದೆ ಹೊತ್ತು ಹೋಯಿತಲ್ಲ ಶ್ರೀಪದುಮನಾಭನ ಕೃಪೆ ಭಕುತಿದಾರಿಯ ಹೊಂದಿ ಪಡೆಯಲಿಲ್ಲ 2ಎರವಿನ ಸತಿಸುತ ಪಶು ಧಾನ್ಯ ಒಂದೊಂದಾಗ್ಯಗಲುವಾಗ ಗತಹರುಷನಾಗಿ ರಂಗನಂಘ್ರಿಯ ಮರೆದುಂಡೆನಿರಯಭೋಗ3ಕರ್ಮತ್ರಯಗಳು ಕರಗವೆ ಶ್ರೀನಿವಾಸನೊಲುಮೆಯಿಂದ ದುಷ್ಕರ್ಮಾರಣ್ಯವು ಸುಟ್ಟು ಹೋಗದೆ ನಾಮಾಗ್ನಿಯಿಂದ 4ಬೇಡಿದುದೀವ ಪ್ರಸನ್ವೆಂಕಟೇಶನ ಬೇಡಬೇಕು ಅವನಹಾಡುತ ಹೊಗಳುತ ಜನ್ಮಾಯುಷ್ಯವ ಹೋಗಾಡಬೇಕು 5
--------------
ಪ್ರಸನ್ನವೆಂಕಟದಾಸರು
ಹಿರಿದು ಸಂಸಾರ ನೆಲೆಯದು ಕಲ್ಪತರುಕಾಮಧೇನುವದು ಸುಖವೋ ದುಃಖವೋಹೊನ್ನು ಸತಿಯು ಸುತರೆನ್ನವರೆನ್ನದೆಚಿನ್ಮಯರೂಪೆಂದು ತಿಳಿದುಉನ್ನತವಾಗಿಹ ಸಾಧುಗುಣದಿ ತಾಮುನ್ನ ನೋಡುವವನ ನರನೋ ಹರನೋ1ಮನೆಯು ಮಾತಾ ಪಿತ ಮನುಜವರ್ಗವನೆಲ್ಲಘನಮಹಿಮನ ವಿನೋದವೆಂದುಸನುಮತದಲಿ ತಾನಧಿಕಾರಿಯೆನಿಸಿಯೆಮನದಿ ಸೂಚಿಪುದು ಉರಿಯೋ ಸಿರಿಯೋ2ಬಂಧನದೊಳು ಮಹಾ ನಿಂದನೆಯನು ಕೇಳುತಲಿಕುಂದುಕೊರತೆಗೆಲ್ಲ ಹಿಗ್ಗುತಲಿಇಂದಿದು ಅತ್ಮನ ಲೀಲಾ ಚರಿತನೆಂದುಮುಂದೆ ತೋರುವದಿದು ಭಯವೋ ಜಯವೋ3ಜನನ ಮರಣ ಸುಟ್ಟುಮನುಜ ಜೀವನ ಕೆಟ್ಟುಕನಸಿನ ತೆರ ಸಂಸಾರ ಮೂಡಿದಿನಕರಜ್ಯೋತಿಯಲಿ ಬಹುಬೆಳಗುತಲಿ ತಾ ನಿಹುದುಗೆಲುವೋ ಒಲವೋ4ಕರುಣಕಟಾಕ್ಷಸುಕರುಣ ಶಾಂತತ್ವದಿಸರಸ ಸುಜ್ಞಾನವನಳವಡಿಸಿಗುರುಚಿದಾನಂದಾವಧೂತನೆ ತಾನಾಗಿಹರುಷಿಸಿ ಸುಖಿಪುದು ದೊರೆಯೋ ಚರಿಯೋ5
--------------
ಚಿದಾನಂದ ಅವಧೂತರು
ಹೊಯ್ಯಾಲೊ ಡಂಗುರವ - ಜಗ - |ದಯ್ಯನಯ್ಯ ಶ್ರೀಹರಿ ಅಲ್ಲದಿಲ್ಲವೆಂದುಪ.ಅಷ್ಟೈಶ್ವರ್ಯದ ಲಕುಮಿಯ ಅರಸೆಂದು |ಸೃಷ್ಟಿ - ಸ್ಥಿತಿ - ಲಯಕರ್ತನೆಂದು ||ಗಟ್ಟಿಯಾಗಿ ತಿಳಿದುಹರಿ ಎನ್ನದವರೆಲ್ಲ |ಭ್ರಷ್ಟರಾದರು ಇಹ - ಪರಕೆ ಬಾಹ್ಯರು ಎಂದು 1ಹರಿಯೆಂಬ ಬಾಲನ ಹರಹರ ಎನ್ನೆಂದು |ಕರುಣವಿಲ್ಲದೆ ಪಿತ ಬಾಧಿಸಲು ||ತರಳನ ಮೊರೆಕೇಳಿ ನರಮೃಗರೂಪದಿ |ಹರಿಯ ನಿಂದಕನ ಸಂಹರಿಸಿದ ಮಹಿಮೆಯ 2ಕರಿ ಆದಿಮೂಲನೆ ಕಾಯೆಂದು ಮೊರೆಯಿಡೆ |ಸುರರನು ಕರೆಯಲು ಬಲ್ಲದಿರೆ ||ಗರುಡನನೇರದೆ ಬಂದು ಮಕರಿಯ ಸೀಳ್ದು |ಕರಿರಾಜನ ಕಾಯ್ದ ಪರದೈವ ಹರಿಯೆಂದು 3ಸುರಪಗೊಲಿದು ಬಲಿಯ ಶಿರವನೊದ್ದಾಗಲೇ |ಸುರಸವು ಉದಿಸೆ ಶ್ರೀ ಹರಿಪಾದದಿ ||ಪರಮೇಷ್ಟಿ ತೊಳೆಯಲು ಪವಿತ್ರೋದಕವೆಂದು |ಹರ ತನ್ನ ಶಿರದಲ್ಲಿ ಧರಿಸಿದ ಮಹಿಮೆಯ 4ಮಾನಸಲಿಂಗಪೂಜೆಗೆ ಮೆಚ್ಚಿ ಶಿವ ಬಂದು |ಬಾಣನ ಬಾಗಿಲ ಕಾಯ್ದಿರಲು |ದಾನವಾಂತಕ ಸಾಸಿರ ತೋಳ ಕಡಿವಾಗ |ಮೌನದಿಂದೊಪ್ಪಿಸಿಕೊಟ್ಟ ಶಿವನು ಎಂದು 5ಭಕ್ತಗೊಲಿದು ಭಸ್ಮಾಸುರಗೆ ಶಿವ ವರವಿತ್ತು |ಭಕ್ತನ ಭಯದಿಂದ ಓಡುತಿರೆ ||ಯುಕ್ತಿಯಿಂದಸುರನ ಸುಟ್ಟು ಶಿವನ ಕಾಯ್ದ |ಶಕನು ಶ್ರೀಹರಿ ಅಲ್ಲದಿಲ್ಲವೆಂದು 6ಗರಳಜ್ವಾಲೆಗೆ ಸಿರಿರಾಮ - ರಾಮನೆಂದು |ಸ್ಮರಿಸುತಿರಲು ಉಮೆಯರಸನಾಗ ||ಕೊರಳು ಶೀತಲವಾಗೆ ಸಿತಿಕಂಠ ತನ್ನಯ |ಗಿರಿಜೆಗೆ - ರಾಮಮಂತ್ರವ ಕೊಟ್ಟ ಮಹಿಮೆಯ 7ಹರಬ್ರಹ್ಮ ಮೊದಲಾದ ಸುರರನುದಶಶಿರ |ಸೆರೆಹಿಡಿದು ಸೇವೆಯ ಕೊಳುತಿರಲು ||ಶರಧಿಯ ದಾಟಿ ರಾವಣನ ಸಂಹರಿಸಿದ |ಸುರರ ಲಜ್ಜೆಯ ಕಾಯ್ದ ಪರದೈವ ಹರಿಯೆಂದು 8ಜಗದುದ್ಧಾರನು ಜಗವ ಪೊರೆವನೀತ |ಜಗ ಬ್ರಹ್ಮಪ್ರಳಯದಿ ಮುಳುಗಲಾಗಿ ||ಮಗುವಾಗಿ ಜಗವನುದ್ಧರಿಸಿ ಪವಡಿಸಿ ಮತ್ತೆ |ಜಗದ ಜನಕಪುರಂದರವಿಠಲನೆಂದು9
--------------
ಪುರಂದರದಾಸರು