ಒಟ್ಟು 126 ಕಡೆಗಳಲ್ಲಿ , 47 ದಾಸರು , 125 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೆನ್ನ ಮಾತ ಕೇಳದು - ಮಂದಜ್ಞಾನದಿ |ತನುವಿನಾಸೆಯ ಬಿಡಲೊಲ್ಲದು ಪವನಜನಾಭನೆ ನಿನ್ನ ನಾಮ ಸಾಸಿರವ |ನೆನೆಯದೆ ಕಂಡಕಡೆಗೆ ಎರಗುತಲಿದೆ ಅ.ಪದೇಹ ಸಂಬಂಧಿಗಳಾದವರೈವರು |ಮೋಹಪಾಶದಿಕಟ್ಟಿಬಿಗಿದಿಹರೈ ||ಕಾಯಅನಿತ್ಯವೆಂಬುದನರಿಯದೆ |ಮಾಯಾಪ್ರಪಂಚದಿಂದಲಿ ಬದ್ಧನಾಗಿಹೆ1ಸಾಧುಸಜ್ಜನರ ಸಂಗವ ಮಾಡಿ ಪರಗತಿ-|ಗಾಧಾರವನು ಮಾಡಲೊಲ್ಲದಯ್ಯ ||ಕ್ರೋಧಕುಹಕದುಷ್ಟರೊಡನಾಡಿ ಕಾಲನ |ಬಾಧೆಗೆ ಒಳಗಾಗುವಂತೆ ಮಾಡುತಲಿದೆ 2ಮದಗಜ ಮೈಯ ಮರೆತು ಮುಂದುಗಾಣದೆ |ಕದುವಿನೊಳಗೆ ಬಿದ್ದಂತಾದೆನಯ್ಯ ||ಹೃದಯ ಕಮಲದಲಿ ನಿಂತ ರಕ್ಷಿಸೋ ಎನ್ನ |ಪದುಮಾಕ್ಷ ವರದ ಶ್ರೀಪುರಂದರವಿಠಲ3
--------------
ಪುರಂದರದಾಸರು
ಮುಂದೋರುವನು ಮುರಾರಿಎಂದೆಂದು ಕುಜನಕೆ ದೂರನುಶೌರಿಪ.ಘನಭಾಗವತಶ್ರವಣವ ಮಾಳ್ಪರಿಗೆವನಜನಾಭನ ಸಂಕೀರ್ತನೆ ಕಾಮೇಷ್ಟರಿಗೆಮುನಿವಂದ್ಯ ಕೃಷ್ಣನ ಮನಸಲಿ ಮರಿಯದೆಗುಣಕರ್ಮನಾಮ ಸ್ಮರಣೆಯಲಿಹರಿಗೆ1ಶ್ರೀ ವಾಸುದೇವಾಂಘ್ರಿ ಸೇವಾಸಕ್ತರಿಗೆಶ್ರೀವರನರ್ಚನೆ ಸದ್ಭಾವಯುಕ್ತರಿಗೆಸಾವಿರಭಿದಾನದ ದೇವದೇವಗೆ ಸರ್ವದಾ ವಂದಿಸುವ ವ್ಯಾಸಂಗವಿಡಿದರಿಗೆ 2ಶೇಷಶಯನನ ಸದ್ದಾಸರಾದರಿಗೆದೋಷದೂರನ ಸಖರಹ ಸಜ್ಜೀವರಿಗೆಪ್ರಸನ್ವೆಂಕಟವಾಸಗೆ ತನ್ನನರ್ಪಿಸಿ ಮುಕುತಿ ಮನೆಯಾಸೆವಂತರಿಗೆ 3
--------------
ಪ್ರಸನ್ನವೆಂಕಟದಾಸರು
ರಾಮ ರಾಮಾಯೆಂದು ಮಾರುತಿಯು ನಡೆದು |ಸೋಮವದನೆ ಜಾನಕಿಯನು ಹುಡುಕಾ ಪಹರಿಯಿಂದ ಗುರುತು ಪಡೆದು ತನ್ನ ಶಿಖದಲಿ |ಧರಿಸಿಕೊಂಡತಿಶಯ ಭಕುತಿಯಲಿ ||ತೆರಳಿ ಮುಂದು ಮುಂದಕೆ ಕಡಲ ಸಮೀಪದಿ ವಾ- |ನರಾಧೀಶ ಮಾಡಿದ ವಾಸವನೂ1ರವಿಜನ ಭಯದಿಂದ ಕಪಿಗಳೆ- |ಲ್ಲವು ಎದೆಯನೊಡೆದು ನಗದೊಳು ಕುಳಿತಿರಲು ||ಪವನಜನು ಬಂದು ವಿಚಾರವ ಮಾಡಲು ಸಾಗ- |ರವ ದಾಟಲೊಬ್ಬಗೊಶವಲ್ಲವೆಂದರೆಲ್ಲರಲ್ಲಿ 2ನಮ್ಮನು ರಕ್ಷಿಸೋ ಕುಲಮಣಿಯೆ ವಾಸುದೇವನ |ಮೊಮ್ಮಗನೆ ಎಂದು ಕಪಿಗಳು ಯಾಚಿಸೆ ||ಗಮ್ಮನೆ ಹಾರಿ ರಕ್ಕಸಿ ಹೊಟ್ಟೆಯ ಹೊಕ್ಕು ದಾಟಿ ಮತ್ತೇ |ಒಮ್ಮೆ ಒಬ್ಬಳನ್ನು ಸೀಳಿ ಪುರಪ್ರವೇಶ ಮಾಡಿದ3ಗಿಡಗಿಡ ಚರಿಸುತ ಸ್ಥಳ ಸ್ಥಳದಲಿ ಬಲು |ಹುಡುಕುತ ಮೂಜಗ ಪೂಜಿತನ ||ಮಡದಿಯಾಕೃತಿಯನು ಕಾಣಲಾಕ್ಷಣದೊಳು |ತಡೆದನಲ್ಲಿಯೇ ಪದಗಳ ಮುಂದಕ್ಕಿಡದಲೇ4ಋಷಿಗಳಂದದಿ ಪ್ರಾಣೇಶ ವಿಠಲನೆನುತಿರೆ |ಶಶಿಮುಖಿಯಳು ಆಂಜನೇಯ ಪದ |ಬಿಸಜಾಂಘ್ರಿಗಳಿಗೆರಗಿ ಜಯ ಜಯವೆಂದು |ಉಸಿರಿದ ರಘುಪತಿಯ ಸುದ್ದಿ ವಿಸ್ತರದಲಿ 5
--------------
ಪ್ರಾಣೇಶದಾಸರು
ವನಜನಾಭನ ಧಾಳಿ ಘನವಾಯಿತಿಂದಿಲಿಂದಮನೆಯೊಳು ನಿಲ್ಲಲಾರೆವಮ್ಮ ಪಚಿನ್ನನ ಸುದ್ದಿನಿತ್ಯಹೇಳುವರು ಹತ್ತರಗೂಡಾ |ಹನ್ನೊಂದೆನ್ನ ಬೇಡವಮ್ಮ ||ಅನ್ಯಾಯದ ಮಾತುಹುಸಿಹುಟ್ಟಿಸಿಯಾಡಿದರೆ ನಮ್ಮ |ಸಣ್ಣವರಾಣೆ ಗೋಪೆಮ್ಮ 1ಪೋರರಾಟಿಕೆಯಾದರೆ ಜನನೋಡೆ ನಿರ್ಭಯದಿ |ಕ್ಷೀರವ ಕುಡಿಯಬೇಕಮ್ಮ ||ಆರೂ ಮನೆಯೊಳಿಲ್ಲದ ಸಮಯದಲ್ಲಿ ಪಾಲು |ಸೋರೆ ಕದ್ದೊಯ್ಯುತಿದ್ದನಮ್ಮ2ಚಿಕ್ಕವರನ್ನು ರಂಬಿಸಿ ಸಕ್ಕರೆ ಕೊಟ್ಟು ಕದ್ದು |ರೊಕ್ಕವ ತನ್ನಿರೆಂಬುವನಮ್ಮ ||ಮಕ್ಕಳಾಟಿಕೆ ಆದರಾಯಿತೆ ನಿನ್ನ ಕಂದ |ರೊಕ್ಕವನೇನು ಮಾಡ್ಯಾನಮ್ಮ 3ಏಕಾಂತ ಮನೆಯೊಳು ಸರು ಹೊತ್ತಿನಲ್ಲಿ ಬಂದು |ಶ್ರೀಕಾಂತನಡಗಿದ್ದನಮ್ಮ ||ಹೇ ಕಾಂತೆ ನಿನ್ನ ಸಲಿಗಿಲ್ಲದೆಂತು ಬಂದನೆಂದು |ಆ ಕಾಂತ ಸಂಗ ಬಿಟ್ಟನಮ್ಮ 4ನೀರೊಳು ನೆರಳೆಂದು ತಿಳಿಯದ ಮಗುವಿಗೆ |ಪೋರನೆಳೆದು ತಾಯಂಬೊನಮ್ಮ ||ಹಾರುತಿರಲು ಸ್ವಾಮಿಯ ದಯೆಯಿಂದ ಕಂಡು ಒಬ್ಬ |ನಾರಿ ಕರಕೊಂಡು ಬಂದಳಮ್ಮ 5ತರಳರಿಗೆಲ್ಲ ಇದರಂತೆ ಹತ್ತಿರೆಂದು ಹೇಳಿ |ಹರಿವಂದು ಹತ್ತಿಕೊಂಬೊನಮ್ಮ ||ಕರುಗಳೆಲ್ಲವು ಹೀಗೆ ಹತವಾಗಿ ಪೋಪವು |ತುರುಗಳ ಗಡಹವಮ್ಮ6ಬಾಲನ ಮನೆಯೊಳಗಿರ ಹೇಳಿ ಉದಕವ |ವಾಲಯಕೆ ತರಹೋದೆನಮ್ಮ ||ಮೂಲೇಶ ಹುಡುಗನ ಕೈಯಕಟ್ಟಿಮನೆಯೆಲ್ಲ |ಹಾಳು ಮಾಡಿಯೇನೋ ತಂದನಮ್ಮ 7ಹುಡುಗರ ಅಂಬೆಯಾಗಿಯೇರಿಸಿಕೊಂಡಾಡಿಸಿ |ಕೆಡಹಿ ಕೈಕಾಲು ಮುರಿದನಮ್ಮ ||ಬಡವರೆಂದರೆ ಪುನಃ ಬಿಡದಲೆ ತಾ ಹತ್ತಿ |ನಡುವ ನೋಯಿಸೀಹ ನೋಡಮ್ಮ 8ಬಾಲೆ ಅದೇನು ಕಾರಣವೋ ತಿಳಿಯದು ನಮ್ಮ |ಮೂಲೆಯಲಡಗಿದ್ದನಮ್ಮ ||ಛೀ ಲಕುಮೀಶ ನಡೆಯೆಂದೆ ಕೈ ಸಂಧಿಸದಾಕಳ |ಮೊಲೆ ಉಂಡಿದ್ದನಮ್ಮ 9ಗಂಡಅತ್ತೆಯ ಮನೆಘೋಗಿ ನಡುವ ಹೆಣ್ಣಾ |ಪುಂಡ ಬಂದಪ್ಪಿಕೊಂಡನಮ್ಮ ||ಕಂಡು ನಾನಿದು ತರವೇನೆಲೆ ರಂಗಾಯೆನ್ನಲು |ಭಂಡು ಮಾಡಿದನು ನೋಡಮ್ಮ 10ಭ್ರಷ್ಟ ಮಾತಲ್ಲವೆ ಬಾಣಂತಿ ಮಂಚದಡಿ ಕೆಂಡ- |ವಿಟ್ಟರೆ ಕಾಸಿಕೊಂಡನಮ್ಮ ||ಥಟ್ಟನೆ ಕಂಡಂಜಿ ಪ್ರಾಣಾಂತಿಕ ಆಯಿತು ಪ್ರಾಣೇಶ |ವಿಠಲನಿಂಥವ ಕಾಣಿರಮ್ಮ 11
--------------
ಪ್ರಾಣೇಶದಾಸರು
ಸದಾಶಿವನೆ ರುದ್ರಾ | ಕಳೆವುದ ಭದ್ರಾ |ಸದಾಗತಿಯ ಪದ | ಮಧುಕರ ನೆನಿಸುತಸುಧಾ ರಸವನೆರೆ || ಭಜಿಸುವವರ ಪೊರೆ ಪಗಜಅಜಿನಾಂಬರ |ಭುಜಗಭೂಷವರವಿಜಯಗಿತ್ತೆ ಶರ |ವೃಜಿನವೃಂದ ಹರಬಿಜಯಿಸಿ ಮನದಿ | ರಜವ ಕಳೆಯೊ ತ್ವರ ಅ.ಪ.ಕೃತ್ತಿವಾಸನೆ | ಭಕ್ತರಾರ್ತಿಹ |ಚಿತ್ತದಲಿನೆಲೆ| ಸುತ್ತ ಪಾಲಿಸೋ ||ಎತ್ತೆ ಈಭವ| ತಪ್ತನಾಗಿಹ |ಗುತ್ತಮೋತ್ತಮ |ವಿತ್ತಕೊಡು ಹರ 1ರೂಪವೈಕೃತ |ರೂಪತೈಜಸ|ರೂಪತಾಮಸ| ಈ ಪರಿಯಕೊಂಡ||ಶ್ರೀಪ ಪದಕ | ಲಾಪದಲ್ಲಿಡು |ವೈಪರೀತ್ಯ ಪ್ರ | ಲಾಪಕಳೆಶಿವ 2ಹೇ ಪವನಜನೆ | ತಾಪಸ ಪ್ರಿಯ |ತಾಪಕಳೆ ಗೌ | ರೀಪನೇಭವಕೂಪಕಳೆವ ದ | ಯಾ ಪಯೋ ನಿಧಿ |ಗೋಪಗುರುಗೋವಿಂದ ವಿಠಲಾಪ್ತ 3
--------------
ಗುರುಗೋವಿಂದವಿಠಲರು