ಒಟ್ಟು 8509 ಕಡೆಗಳಲ್ಲಿ , 134 ದಾಸರು , 5107 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಿ ದಾನವ ಕೋರುವಿ ಎಂಥಾ ಕೂಸಮ್ಮ ಶ್ರೀ- ಕಾಂತ ಸುಜನಮಾನಸಂತರಂಗದಿ ನಿತ್ಯ ನಿಂತು ನಲಿವ ಕೃಷ್ಣ ಪ. ಕ್ಷೀರ ವಾರಿಧಿಯಲ್ಲಿದ್ದನಾದರು ಬೆಣ್ಣೆ ಕ್ಷೀರವ ಕದ್ದು ಮೆದ್ದ ತೋರುವ ತತ್ವ ಶುದ್ಧ ಆದರು ಬಹು ಕ್ರೂರ ರಕ್ಕಸರ ಗೆದ್ದ ನೀರಜಾಲಯ ರಮಣ ಗೋಕುಲ ನಾರಿಯರ ಮೇಲ್ ಬಿದ್ದು ರಮಿಸಿದ ವಾರಿಜಾಸನ ವಂದ್ಯ ಸುರವರ ವೈರಿ ಶಕಟನ ಕಾಲಲೊದ್ದ 1 ಸಂಸಾರಾರ್ಣವ ತಾರಕನಾದರು ಪಾಂಡು- ವಂಶ ರಕ್ಷಣಕಾರಕ ಹಂಸಾದ್ಯ ಸುರಮಾರಕನಾದರು ನಾನಾ ಹಿಂಸಾದೋಷ ನಿವಾರಕ ಕಂಸಮರ್ದನ ವೈನತೇಯ ಶು- ಪಾದ ಕಮಲ ತಿ- ಲಾಂಶ ದೋಷರಹಿತ ಗೋಪಾ- ಲಾಂಶವೇರಿ ವಿನೋದಗೊಳುತಿಹ 2 ಶುದ್ಧ ಪೂರ್ಣಾನಂದ ಸುಜನಾರ್ತಿವಾರÀ ನಿ- ಷಿದ್ಧ ಕಲುಷದೂರಾ ಕ್ರುದ್ಧ ಖಳವಿದಾರ ಕಿಂಕರ ಪರಿಚರ ಸಿದ್ಧಾಂತ ಶ್ರುತಿ ಶೇಖರಾ ಬುದ್ಧ ರೂಪದಿ ಭೂತಪತಿಗೆ ಸ- ಮೃದ್ಧಿ ಜಯಪಾಲಿಸಿ ಸುರೋತ್ತಮ ಸಿದ್ಧವಂದಿತ ಶೇಷಗಿರಿಯೊಳ- ಗಿದ್ದು ದಾಸರನುದ್ಧರಿಸುತಿಹ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗೋಪಿ ನಿನಗೆ ದೂರ ಯಾರ ಮಾತ ಕೇಳವಲ್ಲಾ ರಂಗ ಚೋರ ಪ ದಿಕ್ಕಡದಿಮ್ಮಿಲೆ ಕೂಡಿಸುವ ಬ್ರಹ್ಮಾಂಡ ನೂರಾ ಇವನ ಮಹಿಮಾ ತಿಳಿಯದವ್ವಾ ಮಾಯಕಾರ ಅ.ಪ. ಕಳ್ಳನಾಗಿ ಕಂಣಮುಚ್ಚಿ ಗತಿಯವಲ್ಲನೆ ಭಾರ ನೆಗಿವ್ಯಾನೆ 1 ಕ್ವಾರಿಲೆ ಹಾದು ದೈತ್ಯನ ಕೊಂದಾನೆ ತರಳಗಾಗಿ ಖಂಬದಿಂದ ವಡದು ಬಂದಾನೆ 2 ಧಾರೂಣಿ ಅಳೆದು ಮೂರಡಿ ಮಾಡಿದ ಅಂಬೆಯ ಮಗನಾಗಿ ಎಂಥ ಕಾಡಿದ 3 ಅಂಬು ಹೂಡಿದ ನಂಬೀದ ವಿಭೀಷಣಗೆ ಪಟ್ಟಗಟ್ಟಿದ 4 ಗೋಕುಲದೊಳಗೆ ಪುಟ್ಟಿ ಬೆಣ್ಣೆ ಮೆದ್ದಾನೆ ವಸ್ತ್ರವಿಲ್ಲದಂತೆ ತಾ ಬತ್ತಾಲೆ ನಿಂತಾನೆ 5 ಕುದುರೆಯೇರಿ ಹಾರುತ ಬಂದಾನೆ ಬೆದರಬೇಡೆಂದು ಶ್ರೀದವಿಠಲ ಅಂದಾನೆ 6
--------------
ಶ್ರೀದವಿಠಲರು
ಗೋಪಿ ನಿನ್ನ ಬಾಲನ ಮಾಡುವ ಆಟದ ಪರಿಯನು ಪ ತುಡುಗಿಲಿ ಗೋರಸ ಕುಡಿವಾ | ಅವ | ಘಡಿಸಲು ಕಣ್ಣನೆ ಬಿಡುವಾ | ಹಿಡಿಯಲು ಬರೆ ಬೆನ್ಗೊಡುವ | ಅಡಿ | ಇಡುತಲಿ ತಿರುಗದೆ ಓಡುವನವ್ವಾ 1 ಕೊಡಮಸರಿಗೆ ಬಾಯ್ದೆರೆವಾ | ತಾ | ಬೇಡುವ ಪಸರಿಸಿ ಕರವಾ | ಕೊಡಲಿ ದಣಿಯದೆ ಸುರಿವಾ | ನ | ಟ್ಟಡವಿಲಿ ನಿಂದು ಹೊರೆವನವ್ವಾ 2 ಕೊಳಲನೂದಿ ಹೊಳೆವಾ | ಹೆಂ | ಗಳೆಯರ ಸನ್ಮತಿಗಳೆವಾ | ಅಳುಕದೆ ವಾಜಿಲಿ ನಲಿವಾ | ಇಳೆ | ಯೊಳು ಮಹಿಪತಿ ಸುತ ಪ್ರಭು ಲೀಲೆವ್ವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗೋಪಿ ನಿನ್ನ ಮಗನ ಲೂಟಿಯ ಪ ಮಾಡುತಾನೆ ಮನೆಗೆ ಬಂದು ಬಹಳ ಚೇಷ್ಟೆಯ ಅ ಮಾನಿನೀಯರೊಳಗೆ ಪೋಕಾಟವೇನಿದುಮಾನವನ್ನು ಕಳೆದ ಪರಿಯ ಹೇಳತೀರದು 1 ಪಿಡಿದ ಸೆರಗ ಬಿಡನು ಇನ್ನೇನ ಮಾಡಲಿತಡೆಯಲಾರೆವಮ್ಮ ಕೇಳೆ ಇವನ ಹಾವಳಿ 2 ಕದಳಿ ರಂಗನಬನ್ನಣೇಯ ಮಾತ ಕೇಳಿ ಬಿಡುವೆ ಪುರುಷನ 3
--------------
ಕನಕದಾಸ
ಗೋಪಿ ನಿನ್ನಯ ಬಾಲಕೃಷ್ಣನ ಚೇಷ್ಟೆಯ | ತಾಳಾಲಾರೆನು ನೀನು ಕರೆದು ಪೇಳದಿದ್ದರೆ ಬುದ್ಧಿಯ 1 ಮನೆಮನೆಗಳ ಪೊಕ್ಕು ಪೊಕ್ಕು ಪಾನ ಮಾಡುವ ಬಾಲನು | ಮಾನಿನೀಯರು ಕಂಡು ತಡೆದರೆ ಸ್ತನವ ಪಿಡಿದು ಮುದ್ದಿಪ 2 ಬೆಳಕು ಇಲ್ಲದ ಎಡೆಯಲ್ಲಿದ್ದರು ಹೊಳೆವನೇ ಸುರಧೀಪತಿ | ಉಳಿಯದಂತೆ ಕದ್ದು ಮೆದ್ದವ ಬಾಲನೆಂಬುದು ಉಚಿತವೆ 3 ಪರಿ ತನ್ನನೆಂದರೆ ಪರಮ ಹರುಷವ ಮಾಡುವ 4 ಮಣಿ ಏನು ಮಹಿಮೆಯ ಬಲ್ಲನೇ ರಘುತಿಲಕನೇ 5
--------------
ಅನ್ಯದಾಸರು
ಗೋಪಿ ನೋಡಮ್ಮಾ ಪ ಗೋಪಿ ನೋಡಮ್ಮಾ ದೇವ ದೇವೋತ್ತಮನಾದ ಕೇವಲ ಪರಬ್ರಹ್ಮ| ದೇವಿಮಗನಾಗಿ ಬಂದಿಹನೆ ನರರಂದದಿ ನಮ್ಮಾ ಭಾವಿಸಿ ಬ್ರಹ್ಮನ ಜನಕನ ಶಿಶುವೆಂದು ಮುದ್ದಾಡಿಸುವಾ ಸಂಭ್ರಮಾ1 ಮುಖಸಾರಭೋಕ್ತನಿಗೆ ಮೊಲೆ ಹಾಲನುಣಿಸಿ| ಮಜ್ಜನ ಗೈಸಿ| ಪ್ರಕಟಿದಿ ಶೇಷಶಾಯಿಗೆ ತೊಟ್ಟಿಲದಿ ಮಲಗಿಸಿ| ಸುಖಯೋಗ ನಿದ್ರೆಯುಳ್ಳಂಗೆ ಮಲಗೆಂದು ಜೋ ಜೋ ಎಂಬಳಾಕೆ 2 ಆವ ಯೋಗ ಮಾಯದಲಿ ಮೂಜಗವಾಡಿಸುವ| ಆವ ಮುಂಜರಗ ಸಿಡಿದು ಬೆಣ್ಣೆ ಬೇಡುತ ಕುಣಿವಾ| ಗೋಪಿ ಕೈಯೊಳಾಡುವಾ| ಆವನಲಿ ಮಹಿಪತಿ-ಸುತ ಪ್ರಭು ಲೀಲೆಯ ಕಣ್ಣಲಿ ನೋಡಿ ಸುಖಿಸುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗೋಪಿ ಪ ತನ್ನ ಬಳಿಗೆ ಬಾರೆನ್ನುತಲೋಡಿದ ಅ.ಪ ನೊರೆ ನೊರೆ ಹಾಲನು ಸುರಿಸುರಿದು ತನ್ನ ಕಿರು ಬೆರಳಾಡಿಸಿ ಕೊರಳನು ಕೊಂಕಿಸಿ ಪರಿ ಹಾಸ್ಯ ಕುಚೋದ್ಯವ ಮಾಡುತ ಮುರಳಿಯನೂದಿ ಬಾರೆನ್ನುತ ಬಂದನೆ1 ಬೆಣ್ಣೆಯ ಕದ್ದು ಕೈ ಸುಣ್ಣವಾಯಿತು ಎಂದು ಕಣ್ಣು ಬಾಯಿಗಳಿಂದ ಸನ್ನೆಯ ಮಾಡಿ ಹಣ್ಣನು ತಿನ್ನುವೆ ಎನ್ನುತಲೋಡಿದ ಚಿಣ್ಣನು ಮಾಂಗಿರಿರಂಗನು ನೋಡೇ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೋಪಿ ಪೋತನ ಕಾಣದೆಮಾತು ಮರೆತೆಂಧೀತ ಭೀತಾ ಹೇ ನಾಥಾಭಾಷೆ ಕೇಳುತ ನಿಮ್ಮೋಲ್ ಆಶೆ ಪುಟ್ಟಿಹಇಂದಿರೇಶನ ಸಹ ಸುಖಗೀತಾ ಹೇ ನಾಥಾ
--------------
ಇಂದಿರೇಶರು
ಗೋಪಿ ಬಾಲನೇ ಪ ಮುದ್ದು ಕುಂಡಲಧರ ಮಿದ್ದು ಚಪ್ಪಿರವನು1 ಎತ್ತಿಕೊಳಲು ಉಗುರೊತ್ತುವ ನೆದಿಯಲಿ 2 ಗುರುಮಹಿಪತಿ ಪ್ರಭು ಚರಿತವ ತಿಳಿಯದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗೋಪಿ ಹಾಡಿ ದಣಿಯಳೂ ಪ ನೋಡಿ ಹಾಡಿ ಹೊಗಳಿ ಕೃಷ್ಣಗೆ ಮಾಡಿ ಮಾಡಿ ಸಿಂಗರವನು ಅ.ಪ ಮಣ್ಣತಿಂದು ಚಪ್ಪರಿಸುವ ಚಿಣ್ಣನೆಡೆಗೆ ಓಡಿಬಂದು ಸಣ್ಣಬಾಯ ಬಿಡಿಸಿ ವಿಶ್ವವ ಕಣ್ಣಿನಿಂದ ಕಂಡು ನಲಿದು 1 ವಿಕಳೆಯಸುವ ಹೀರಿ ಕುಣಿದು ಶಕಟಖಳನನೊದ್ದು ಕೊಂದು ಬಕನ ಸೀಳಿ ಫಣಿಯ ತುಳಿದ ವಿಕಸಿತಾಂಗನ ಹಾಡಿ ಹೊಗಳಿ 2 ಗಿರಿಯನೆತ್ತಿ ಬೆರಳಿನಿಂದ ಕರದಮುರಳಿನಾದದಿಂದ ಧರೆಯ ದಿವಿಯಗೈದ ಮಾಂಗಿರಿಯರಸರಂಗನಂಗವ ನೋಡಿ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೋಪಿ : ವೇಣುಗೋಪಾಲ ನಿನ್ನ ಜಾಣತನವ ಬಿಡು ಬಿಡು ಮಾಡುವೇಜಾಣ ಪ ಕೃಷ್ಣ : ನೀರೆ ಗೋಪಿಯೆ ನಿನ್ನ ದ್ವಾರದೊಳಿರುವೆ ತೋರದೆನ್ನನು ನೀನು ಭಾರಿ ಬಳಲಿರುವೆ ನೀರೆ 1 ಗೋಪಿ : ಹತ್ತಿರದಲ್ಲಿದ್ದು ನೀನು ಇತ್ತೆನಗೆ ತೋರದಂತೆ ನಿನ್ನನು ``ವೇಣು 2 ಕೃಷ್ಣ : ಅಕ್ಷಿಯೊಳಗೆ ನಿನ್ನ ಸಾಕ್ಷಿಯಾಗಿರುವೆ ಕುಕ್ಷಿ ತುಂಬಿರುನೆ | ನೀರೆ 3 ಗೋಪಿ : ಆರು ಬಾಗಿಲು ನೀಗಿ ಜೋರಗಂಡಿಯೊಳ್ ಪೋಗಿ ಮಾಡುವೆ ||ವೇಣು|| 4 ಕೃಷ್ಣ : ಮನುಮುನಿ ಜನರೆಲ್ಲಾ ವಿನಯದಿಂ ಪಿಡಿದು ಘನಸುಖ ಪಡುವರು ಮನದೊಳಗರಿದು ||ನೀರೆ|| 5 ಗೋಪಿ : ಆಗಮ ಸಂಚಿತ್ತ ಭೋಗ ಸಂಸಾರವನ್ನೆಲ್ಲಾ ಜರೆನಿಸಿದೆಲ್ಲಾ ||ವೇಣು || 6 ಕೃಷ್ಣ : ನಿಮಿಷ ಮಾತ್ರದಿ ಸುಖವ ಮನದೇಸ್ಮರಿಸಿ ಅಮಮ ಘನಾನಂದ ರಮಿಸು ಸ್ವಸುಖವಿ ||ನೀರೆ|| 7 ಗೋಪಿ : ಕಣ್ಣ ಸನ್ನೆಯ ಮಾಡಿ ಅನ್ಯರ್ಮನ್ಮನೆಗಳಲ್ಯೋಡಿ ಮಾತುಗಳಾಡುವೆ ||ವೇಣು || 8 ಕೃಷ್ಣ : ಧೊರೆಯಾಗಿರುವೆ ನಾನು ತಿರಿದುಣ್ಣಲರಿಯೆ ಅರಿವಿನಿಂದರಿಯೆ || ನೀರೆ|| 9 ಕಂತು ಪಿತನೆ ನಿನ್ನ ಭ್ರಾಂತಿ ಹತ್ತಿತು ಎನಗೆ ಗುರುವರ ||ವೇಣು || 10
--------------
ಶಾಂತಿಬಾಯಿ
ಗೋಪಿ ಕೇಳ್ ನಿನ್ನ ಮಗ ಬಲು ಜಾರ ಚೋರ ಸುಕುಮಾರ ಪ ಮುದದಿ ಮುಕ್ಕುಂದ ಸದನಕ್ಕೆ ಬಂದ ದಢೀಯ ಮೀಸಲು ಬೆಣ್ಣೆ ತಿಂದ ನಿನ್ನ ಕಂದಾ 1 ಮಾರನಪಿತ ಮನೆಯೊಳು ಪೊಕ್ಕಾ ಹಿಡಿಯ ಹೋದರೆ ಸಿಕ್ಕಾ ನೋಡಿ ನಕ್ಕ ಭಾರಿ ಠಕ್ಕ 2 ಹರÉಯದ ಪೋರಿ ಜರದ ಕಂಗೋರಿ ಕರವ ಮಾನವ ಕಳೆದ 3 ಬಹಳ ದಿನವಾಯ್ತು ಹೇಳುವ್ಯದ್ಹಾಗೆ ಗೋಪಾಲನ ಮನಸ್ಸೊಮ್ಮೆ ಹಾಗೆ ಹೀಗೆ ಬೆಚ್ಚಿಬೀಳುವ್ಯದ್ಯ್ಹಾಗೆ 4 ರಾಧೆಯ ಮನದ ತಾಮೋದ ಮುಕ್ಕುಂದ ಶ್ರೀದವಿಠ್ಠಲನಾಥ ವೃಂದ ನಯಾನಂದ 5
--------------
ಶ್ರೀದವಿಠಲರು
ಗೋಪಿ ಜನಪಾಲ ಪಾವನ ತರಲೀಲ ಲಕ್ಷ್ಮೀಲೋಲ ಕಾಲನಮಿತ ಸುರಜಾಲ ಸೇವಿತ ಶೌರಿ ಪ ವಂದಿತ ಸುರಮುನಿ ವೃಂದ ಭಕುತಜನ ಬಂಧುವಾಗಿರುವ ಗೋವಿಂದ ಗೋಪಾಲದೇವ ಮಂದಹಾಸ ಬಲಿ ಬಂಧನ ಮುರಹರ ಸಿಂಧು ಶಯನ ಗೋಪಿಕಂದ ಮುಕುಂದ 1 ಕಂಸಾರಿ ಕರುಣಾಭ್ದಿ ಶೃಂಗಾರಿ ಸುಜನ ಮನೋರಥ ಸುರತರು ಹಾರ ಹೀರ ಗಂಭೀರ ವೈಯಾರ 2 ಅಂಬುಜ ಭವನುತ ಶಂಬರಾರಿಯಪಿತ ಜಂಭಾರಿ ನಮಿತ ಹೇರಂಬ ಜನಕಪ್ರೀತ ಕಂದರ ಕಮಳಾಂಬಕ ರಮಣ 3 ರಾಗಿ ಜನರ ಭವರೋಗ ಹರಣಹರಿ ನಗಧರ ಸಗರ ವಂಶೋದ್ಧಾರ ಖಗವರ ಗಮನ ಸುಗುಣ ಗಂಭೀರ 4 ದುರಿತ ಸಂಹಾರಿ ಕರದಿ ಚಕ್ರಧಾರಿ ಸುರರ ಸಿರಿ ಧುರ ಧೀರ ಚಿಪ್ಪಳಿವಾಸ ವೇಣುಗೋಪಾಲ 5
--------------
ಕವಿ ಪರಮದೇವದಾಸರು
ಗೋಪಿ ನಿನ್ನ ಮಗನು ಬಂದು ತಾಪಿಸಿದ ಮಕ್ಕಳನ್ನುಪ. ಕೋಪಿಸಬ್ಯಾಡವೆ ನೀನು ಭೂಪತಿಗ (ಳಿಗ್ಯೇಳೆ) ನುಅ. ಪ. ಕಂಡವರ ಮನೆಯೊಳಿವನು ಪುಂಡುತನವ ಮಾಡಿದದುಮಕ್ಕಳೆಂಬುವನು ದಿಂಡೆತನವ ಮಾಡಿದನು 1 ಹಿತ್ತಿಲ ಬಾಗಿಲೊಳ್ಬಂದು ಒತ್ತಿದ ಹಾಲನ್ನೆ ತಂದವೃತ್ತಪಯೋಧರಿಯರ ಮುತ್ತಿನ ಹಾರವ ಕಳೆದ 2 ಬೆಣ್ಣೆಗಳ ಕದ್ದು ತಿಂದು ಮಣ್ಣಿನ ಭಾಂಡವನೊಡೆದಹೆಣ್ಣುಗಳ ಬೆನ್ನ ಬಡಿದ ಸಣ್ಣ ಮೊಲೆಗಳ ಪಿಡಿದ 3 ನಿದ್ರೆ ಹೊತ್ತಿನೊಳು ಬಂದು ಕ್ಷುದ್ರತನವ ಮಾಡುತ್ತನಿಂದಸದ್ದು ಮಾಡದಿರೆಯೆಂದ ಮುದ್ದು ಕೊಡುವೆ ನಿನಗೊಂದ 4 ಸಿರಿ ಹಯವದನ ಬಂದ 5
--------------
ವಾದಿರಾಜ
ಗೋಪಿ ನೋಡಮ್ಮಾ ಗೋಪೆಮ್ಮಾ ಪ. ಗಡಿಗೆಯ ಒಡೆದಾನು ಕೊಡಹಾಲು ಕುಡಿದಾನು ಹುಡುಗರ ಬಡಿದು ಓಡಿ ಪೋದಾನು ನಿಮ್ಮ ಹುಡುಗಾ ಸಿಕ್ಕಿದ ಮೇಲೆ ಭಿಡಿಯಾವಿಲ್ಲದೆ ಗಿಡದಾ ನೆರಳಿಗೆ ಕಟ್ಟುವೆನು ಬೆನ್ನಟ್ಟುವೆನು 1 ನೆಲವಿನಲ್ಲಿದ್ದ ಪಾಲುಮೊಸರು ಬೆಣ್ಣೆ ಕದ್ದಾನು ಬಾಲಕರೊದ್ದನು ಮುದ್ದು ಹೆಣ್ಣು ಬಾಲೆಯರಿಗೆ ಕಣ್ಣುಸನ್ನೆ ಮಾಡಲಿ ಬಂದಾನು ಭಂಡು ಮಾಡಿದಾನು ದುಂಡ ಕುಚವ ಕರದಿ ಪಿಡಿದಾ ಓಡಿ ಪೋದಾ 2 ಹೆಡೆಯ ಸರ್ಪಾವ ಕರದೊಳು ಹಿಡಿದು ಸಂಜೀಯ ಹೊತ್ತಿಲಿ ತಂದಾನು ನಮ್ಮನ್ನಂಜಿಸಲು ಬಂದಾನು ನಾಗಕನ್ನಿಕೆಯರಿಂದ ಸ್ತೋತ್ರ ಮಾಡಿಸಿಕೊಂಡಾನು ಕಾಲಿಮರ್ಧನಕೃಷ್ಣಾನು 3
--------------
ಕಳಸದ ಸುಂದರಮ್ಮ