ಒಟ್ಟು 1469 ಕಡೆಗಳಲ್ಲಿ , 101 ದಾಸರು , 1204 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಚ್ಚು ಹಿಡಿಯಿತೊ - ಎನಗೆ ಹುಚ್ಚು ಹಿಡಿಯಿತು ಪಅಚ್ಯುತನ ನಾಮವೆಂಬ ಮೆಚ್ಚು ಮದ್ದು ತಲೆಗೆ ಏರಿ ಅ.ಪವಾಸುದೇವನೆಂಬ ನಾಮ ವದನದಲಿ ಒದರುವೆ - ಮಾಯಪಾಶವೆಂಬ ಬಲೆಯ ಹರಿದು ಹರಿದು ಬಿಸುಡುವೆ ||ಕೇಶವನ ಹೂವ ಎನ್ನ ಮುಡಿಗೆ ಮುಡಿಸುವೆ - ಭವದಕ್ಲೇಶವೆಂಬ ಗೋಡೆಯನ್ನು ಕೆದರಿಕೆದರಿ ಬಿಸುಡುವಂಥ 1ಕೃಷ್ಣನಂಘ್ರಿ ಕಮಲಗಳಲಿ ನಲಿದು ನಲಿದು ಬೀಳುವೆ -ಭವಕಷ್ಟವೆಂಬ ಕುಂಭಗಳನು ಒಡೆದು ಒಡೆದು ಹಾಕುವೆ ||ನಿಷ್ಠರನ್ನು ಕಂಡವರ ಹಿಂದೆ ಹಿಂದೆ ತಿರುಗುವೆಭ್ರಷ್ಟ ಮನುಜರನ್ನು ಕಂಡು ಕಲ್ಲು ಕಲ್ಲಿಲಿಕ್ಕುವಂಥ 2ಮಂದಮತಿಗಳನು ಕಂಡರೆ ಮೂಕನಾಗುವೆನು - ಹರಿಯನಿಂದೆ ಮಡುವವರ ಮೇಲೆ ಮಣ್ಣ ಚೆಲ್ಲುವೆ ||ಮಂದರಾದ್ರಿಧರನ ದಿನದೊಳನಶನನಾಗುವೆ ಎನ್ನತಂದೆ ಪುರಂದರವಿಠಲನ ಪೊಗಳಿ ಪಾಡಿ ಆಡುವಂಥ 3
--------------
ಪುರಂದರದಾಸರು
ಹೇಗೆ ಅರ್ಚಿಸಲಿ ಮೆಚ್ಚಿಸಲಿ ನಿನ್ನನಾಗಶಯನ ನಾರದವಂದಿತನೆ ದೇವಾ ಪಮಂಗಳಾಭಿಷೇಕಕೆಉದಕತರುವೆನೆನೆಗಂಗೆಯ ಅಂಗುಟದಿ ಪಡೆದಿಹೆಯೊ ||ಸಂಗೀತ ಕೀರ್ತನೆ ಪಾಡುವೆನೆಂದರೆಹಿಂಗದೆ ತುಂಬುರ ನಾರದರು ಪಾಡುವರೊ 1ಪುಷ್ಪವ ತಂದು ನಿನಗರ್ಪಿಸುವೆನೆಂದರೆಪುಷ್ಪ ಫುಲ್ಲಯಿಸಿದೆ ಹೊಕ್ಕುಳಲಿ ||ಮುಪ್ಪತ್ತು ಮೂರ್ಕೋಟಿ ದೇವತೆಗಳು ನಿನಗೊಪ್ಪಯಿಸೆ ನೈವೇದ್ಯ ನಿತ್ಯತೃಪ್ತನು ನೀನು 2ಕೋಟಿಸೂರ್ಯರ ಕಾಂತಿ ಮಿಗಿಲಾದವನಿಗೊಂದುಮೋಟು ದೀವಿಗೆ ಬೆಳಗೆ ಬೆಳಕಹುದೆ? ||ಸಾಟಿಗಾಣದಸಿರಿಉರದೊಳು ನೆಲಸಿರೆಪೋಟುಗಾಸನು ಎಂತು ಕಾಣಿಕೆಯಿಡಲಯ್ಯ 3ಹಾಸಿಗೆಯನು ನಿನಗೆ ಹಾಸುವೆನೆಂದರೆಶೇಷನ ಮೈಮೇಲೆ ಪವಡಿಸಿಹೆ ||ಬೀಸಣಿಕೆಯ ತಂದು ಬೀಸುವೆನೆಂದರೆಆಸಮೀರಣ ಚಾಮರವ ಬೀಸುತಿಹನೋ4ನಿತ್ಯಗುಣಾರ್ಣವ ನಿಜಸುಖ ಪರಿಪೂರ್ಣಸತ್ತು ಚಿತ್ತಾನಂದ ಸನಕಾದಿ ವಂದ್ಯ ||ಮುಕ್ತಿದಾಯಕ ನಮ್ಮಪುರಂದರವಿಠಲನುಭಕ್ತಿಪ್ರಿಯನು ಎಂದು ಭಜಿಸಿ ಕೊಂಡಾಡುವೆ 5
--------------
ಪುರಂದರದಾಸರು
ಹೇಗೆ ಮಾಡಲಿ ಮಗುವಿಗೇನಾಯಿತೊ - ಇದರ - |ಆಗಮವ ಬಲ್ಲವರು ತಿಳಿದೆಲ್ಲ ಪೇಳಿ ಪ.ತೂಗಿ ಮಲಗಿಸೆ ಕಣ್ಣ ಮುಚ್ಚಲೊಲ್ಲನು, ಬೆನ್ನ - |ಮೇಗೆ ಬುಗುಟಿಯು, ಎದೆಯು ಕಲ್ಲಾಗಿದೆ |ರೋಗವನೆ ಕಾಣೆ ದಾಡೆಯಲಿ ನೀರಿಳಿಯುತಿದೆ |ಕೂಗುವ ಧ್ವನಿಯೊಮ್ಮೆ ಕುಂದಲಿಲ್ಲ 1ಖಂಡಸಕ್ಕರೆ ಹಣ್ಣ ಕೊಟ್ಟರೊಲ್ಲದೆ ಮಣ್ಣ |ಹೆಂಡೆಯನು ಬೇಡಿ ತಾ ಪಿಡಿವ ಕೊಡಲಿ ||ಮಂಡೆ ಜಡೆಗಟ್ಟಿಹುದು ಮಾಡಲಿನ್ನೇನಿದಕೆ |ಹಿಂಡುಸತಿಯರ ದೃಷ್ಟಿ ಘುನವಾಯಿತೇನೊ2ಮೊಲೆಯನುಂಬಾಗ ಮೈಯಂಬರವನೊದೆಯುತಿದೆ |ಕಲಕಿತದಲಿ ಎನ್ನ ಕೊಲುವುದೇಕೋ ||ತಿಳಿದಿದರ ನೆಲೆಯನರಿತವರನೊಬ್ಬರ ಕಾಣೆ |ಚೆಲುವಸಿರಿಪುರಂದರವಿಠಲ ತಾ ಬಲ್ಲ3
--------------
ಪುರಂದರದಾಸರು
ಹೇಳಿದ ಯಮಧರ್ಮ ತನ್ನಾಳಿಗೆ ಪ.ಹೇಳಿದ ಯಮ ತನ್ನೂಳಿಗದವರಿಗೆಖೂಳದುರಾತ್ಮರಾಗಿ ಬಾಳುವರನು ತರ1ಹರಿಸಂಕೀರ್ತನೆಯನರನಾರಿಯರು ಆದರದಲಿ ಮಾಡಿದವರ ನಿಂದಿಪನ ತರ 2ಹರಿದಾಸರಿಗೆ ಉಣಕರಿಯದೆ ಜನ್ಮಾಂತಒರಟುಮಾತಿನ ಲುಬ್ಧನರನ ನಿಲ್ಲದೆ ತರ 3ಹರಿಕಥಾಮೃತ ಉಪಚಾರಕಾಗಿ ಕೇಳುವಪರನಾರೇರಾಳುವ ದುರುಳನಕಟ್ಟಿತರ4ಗುರುಹಿರಿಯರೊಳು ನೀಚೋತ್ತರವನು ಕೊಡುವಮರುಳಾಗಿ ಮತಿಯ ಸತಿಯರಿಗಿತ್ತವನ ತರ 5ಅಂಬುಜಾಕ್ಷನ ಪೂಜೆ ಸಂಭ್ರಮದಿ ಮಾಡದೆರಂಭೆಯೊಡನಾಡುವ ಡಂಭಕನ ಹಿಡಿ ತರ 6ಒಳ್ಳಿದರ್ಹಳಿದು ತಾ ಬಲ್ಲವನೆನುವಚೆಲ್ವ ಪ್ರಸನ್ವೆಂಕಟ ವಲ್ಲಭನ ವೈರಿಯ ತರ 7
--------------
ಪ್ರಸನ್ನವೆಂಕಟದಾಸರು