ಒಟ್ಟು 4120 ಕಡೆಗಳಲ್ಲಿ , 119 ದಾಸರು , 3273 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವತಾಸ್ತುತಿಗಳು ಅಂಧನೋ ನಾ ಬಲು ಅಂಧನೊ ಪ ಸುಂದರವಾದ ಹೃನ್ಮಂದಿರದಲಿ ನಿನ್ನಸುಂದರಮೂರ್ತಿಯ ಕಣ್ದೆರದು ಕಾಣದ ಅ.ಪ. ಕುಹಕ ಚಿಂತಿಸುವಅಹುದು ಸಜ್ಜನನೆಂದು ಬಹುಜನ ನುಡಿಯಲುಮಹಮೋದ ಮಡುವಿನೊಳ್ ಮಹದಜ್ಞನೆನಿಸಿದ 1 ವಿಷಮ ದುರ್ವಿಷಯಗಳಲಿ ಮನ ಹೊಗಿಸೀವಿಷವೆಂದು ತಿಳಿದು ವಿಷಯ ಸೇವಿಸೀಅಸಮ ಮಹಿಮ ನಮ್ಮ ಝಷಕೇತು ಜನಕನವಿಷಯಗಳ ಬಹು ವಿಷಯೀಕರಿಸಿದಂಥ 2 ಮಾನವ ನಾ3
--------------
ಗುರುಗೋವಿಂದವಿಠಲರು
ದೇವದೇವನಾ ಭಜಿಸು ಜಾನಕಿ ಪ್ರೇಮನಾ ಬಿಡದೆ ಇನ್ನು ಪ ಇಂದಿರೇಶನಾ ಸಕಲ ವಿಶ್ವನಾಥನಾ ಸುಂದರ ರೂಪನ ಸುಗುಣ ಸುಜನವಂದ್ಯನಾ ಸಿಂಧು ಶಯನನಾ ಚೆಲುವ ಶ್ರೀನಿವಾಸನಾ ಮಂದರಾದ್ರಿಯನೆ ಪೊತ್ತ ಮಹಿಮಾನಂದನ 1 ವಾರಿಜನಾಬನಾ ಘನ ವಾಸುಕಿಶಯನನಾ ನೀರಜ ನಯನನಾ ಕೃಷ್ಣಾ ನಿಗಮಗೋಚರನಾ ನವನೀತ ಚೋರನಾ ಪಾರಮಾರ್ಥಿಕ ಜ್ಞಾನದಲ್ಲಿ ಪ್ರಬಲವಾಗಿ ಮನವು ನಿಲ್ಲಿಸಿ2 ಪನ್ನಗ ಭೂಷಣನಾದ ಪಾರ್ವತೀಶನಾ ಮನ್ನಿಸಿ ಪೊರೆದನ ಮಹಾಮಹಿಮೆಯುಳ್ಳನಾ ಚಿನ್ಮಯ ರೂಪನಾ ಪರಮ ಚಿದ್ವಿಲಾಸನಾ ಹೆನ್ನ ತೀರನಿಲಯ ಸುಪ್ರಸನ್ನ 'ಹೆನ್ನ ವಿಠ್ಠಲ’ ನಾದ 3
--------------
ಹೆನ್ನೆರಂಗದಾಸರು
ದೇವನಹುದೊ ದೇವಾಧಿದೇವ ಕಾವಕರುಣ ಶ್ರೀ ವಾಸುದೇವ ಭಾವಿಕರಿಗೆ ಜೀವಕೆ ಜೀವ ಧ್ರುವ ಸಾಮಜಪ್ರಿಯ ಸುರಲೋಕಪಾಲ ಕಾಮಪೂರಿತ ನೀ ಸಿರಿಸಖಲೋಲ ಸಾಮಗಾಯನಪ್ರಿಯ ಸದೋದಿತ ಸ್ವಾಮಿನಹುದೊ ನೀನೆವೆ ಗೋಪಾಲ 1 ಅಕ್ಷಯ ಪದ ಅವಿನಾಶ ಪೂರ್ಣ ಪಕ್ಷಿವಾಹನ ಉರಗಶಯನ ಪಕ್ಷಪಾಂಡವಹುದೊ ಪರಿಪೂರ್ಣ ಲಕ್ಷುಮಿಗೆ ನೀ ಜೀವನಪ್ರಾಣ 2 ದಾತನಹುದೊ ದೀನದಯಾಳ ಶಕ್ತಸಮರ್ಥ ನೀನೆ ಕೃಪಾಲ ಭಕ್ತವತ್ಸಲನಹುದೊ ಮಹಿಪತಿ ಸ್ವಾಮಿ ಪತಿತಪಾವನ ನೀನವೆ ಅಚಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವರಲ್ಲೇ ಸಜ್ಜನವರವನಿ | ಪ ಅಕುಲ ತನ್ನಂತಖಿಳದಿ ನೋಡುತಾ | ಸಕಲರ ಹಿತದಲಿ ಪ್ರಕಟದಿ ಬಾಳುತಾ | ಮಕ ಮಾವುಗಳ ವಿಕಳರಿಯರು 1 ಶಾಂತಿ ಶಮೆದಮೆದಾಂತಿ ತಿತಕ್ಷಾ | ಅಂತರ್ಬಹಿಯವಂತರು ಭಕ್ತಿಯ | ಪಂಥದಿ ನಡೆಯುತ ನಂತನ ಮೂರುತಿ | ಚಿಂತಿಸಿ ಮನ ವಿಶ್ರಾಂತಿಯಲಿಹರು 2 ಅಣುಪರಿ ಸದ್ಗುಣ ಮನುಜನ ಕಂಡರ | ವನಪರ್ವತ ಸಮವೆನೆ ಕೊಂಡಾಡುವ | ತನುಮನ ವಚನದಿ ಘನ ಪುಣ್ಯಾಮೃತ | ಮನಿಗುರು ಮಹಿಪತಿ ತನು ಭವಗಂದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೇವರಾಜ ನುತನೆ ಖಗಪಾ | ಬಲ | ದೇವ ಚರಣ ಮಧುಪ ಪ ಭಾವಜಾರಿ ಸಮನು ಎನಿಪ | ತಾವಕನ್ನ ಸಲಹೊ ಕಾಶ್ಯಪ ಅ.ಪ. ಜಲಧಿ ಗಾರುಡ ಮುಖ ಕಾರುಣ್ಯದಿ | ಹೊರಡೂಡುತ | ಹಾರಿದೆ ವಿ | ಸ್ತಾರಾಮೆಗೆ 1 ಕೂರ್ಮ ದ್ವೇಷದಿಂದಾ | ನೆರೆಹೊರೇಯ ದುಃಖದಿಂದಾ |ಇರಲು ಕಳೆಯೆ ಗರುಡನಿಂದಾ | ವರಮುನಿ ಪೇಳ್ದ ಮುದದಲಿಂದಾ ||ಭಾರಿಲಿ ಇಹ | ಕೂರಮ ಕರ್ಯ | ಹರವ ಮೇಲೆ | ಢೋರದ ತರುಕ್ಹಾರಲದೂ | ದಾರಿತ ವಿ | ಸ್ತಾರದ ಮಹಿ | ಮೋರುಗುಣಿ2 ಅಮೃತ ಕಲಶ ತಂದಾ ||ಕಾರುಣಿ ದಿತಿ | ಜಾರಿಗೆ ಮಾತೆ | ಕಾರಾಗೃಹ | ತಾರಣ ಮುರವೈರಿಯ ವಹ | ತೋರೈ ಹೃ | ದ್ವಾರಿಜದಿ | ಶ್ರೀಹರಿಪದ 3
--------------
ಗುರುಗೋವಿಂದವಿಠಲರು
ದೇವರಿಂದಲಿ ಭಕ್ತಧಿಕನು | ಭಾವ ಭಕುತಿಯಲಿ ಬಲ್ಲಿದನು ಪ ಅವನ ಉದರದಲಿ ಜಗವಿಹುದು | ಅವನ ತನ್ನೆದೆಯಲ್ಲಿ ನಿಲಿಸಿಹನು 1 ದಾವನಿಂದಲಿ ಜಗಹುಟ್ಟುತಲಿಹುದು | ಅವನ ಜನುಮಕಿವ ತಾರಿಸಿದನು 2 ಕಾಳಗದಲಿ ನಿಸ್ಸೀಮನ ದಾವನು | ಸೋಲಿಸಿದವನೆನು ನದಿಸುತನು 3 ಸಾಗರ ಜಲ ಘನ ತುಂಬಿಕೊಂಡಿಹುದು ಮೇಘ ಮುಖದಿ ಬೆಳೆಯಾಗುವದು 4 ಬಾಳಿಗಿಡವು ಸ್ವಾನಂದದಲಿಹುದು | ಬಾಳೆಹಣ್ಣವು ಜನ ನಲಿಸುವುದು 5 ಸಂಗರಹಿತ ಗುರು ಮಹಿಪತಿ ಸ್ವಾಮಿಯ | ಹಂಗಿಗನನು ತನ್ನ ಮಾಡಿದನು 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೇವಾ ದೇವಾ ಸಾರಂಗ ಪಾಣಿ ದೇವಾ ದೇವಾ ಸಾರಂಗ ಪಾಣೀ ಪ ದೇವ ದೇವ ಘನ ಶ್ರೀ ವಧುವಲ್ಲಭ ಸಾವಿರ ನಾಮದ ಪಾವನ ರೂಪಾ 1 ಭುವನವ ಪಿಡಿದೊಯ್ದನುಜನ ಹರಿ ಪವನಜ ಪ್ರೀಯಾ2 ಕುಂಜರ ಧ್ವಜಜನ ರಂಜಿಪ ಕದಲಿಗೆ ಅಂಜಿಕೆ ಹಾರಿಪ ಕುಂಜದ ಕರನೇ 3 ಸುಮನದಿ ಧರೆಯೊಳು ನಮನ ಕೃತಕ ಭಯ ಗಮನ ಸುರೇಶಾ4 ವಿಧಿ ತ್ರಿಪುರ ವಿನುತ ಪದ ಮಿಥುನದಯಾಳಾ5 ಹರಿಯೆಂದೊದರಲು ಸರಿಯಾದಿಗಳಿಗೆ ಅರಿಯ ದಂದದಿ ಬಂದು ಕರಿಯನು ಕಾಯ್ದೆ6 ನಂದನ ನಂದನ ಮಂದರಗಿರಿಧರಾ ನಂದನೆ ಮಹಿಪತಿ ನಂದನ ಪ್ರೀಯಾ||7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೇವಾ ನಿನ್ನ ಚರಣವನ್ನು ಮರೆಯಲಾರೆನು ಮರೆಯದಂತೆ ಕರುಣದಿ ಎನ್ನಾ ಸ್ಮರಣೆಯೊಳಿಡು ನೀನು ಪ ಪಂಕಜಾಂಬಕಿ ಲಕ್ಞ್ಮೀರಮಣಾ ರಂಗರಕ್ಷಕಾ ಶಂಕಾನಾಶ ಸರ್ವಾಧಾರ ಶಂಕರಸಖಾ ಶಂಖ ಚಕ್ರಗಳ ಕರದೊಳ್ ಪಿಡಿದ ಪಂಕಜನೇತ್ರನೇ 1 ತನ್ನವರಿಂತೆಂದೆನಿಸಿ ಕೊಂಡು ಅನ್ಯರ ಭಜಿಪುದು ಬನ್ನ ಬಡುವುದು ಮುನ್ನ ಎನ್ನನು ಪೊರೆವರ್ಯಾರೊ ಪನ್ನಗಶಯನನೇ 2 ಅಂತು ಇಂತೆನಲೊಲ್ಲೆ ದೇವಾ ಅನಂತ ಮಹಿಮೆಯಾ ಸಂತಸಾಧು ಸಾಧ್ಯನಾಗಿಹ ಅಂತರಾತ್ಮನಾ ಚಿಂತೆ ಭ್ರಾಂತಿಗಳ ತೊರೆದು ಗುರುವರ ಶಾಂತಿ ಪಾಲಿಪನೇ 3
--------------
ಶಾಂತಿಬಾಯಿ
ದೇವಾದಿ ದೇವ ನಮೋ ಶ್ರೀ ಸತ್ಯದೇವ ಪ ದೇವಾದಿ ದೇವ ಹರಿ ಗೋವಿಂದ ಮುಕುಂದ ಭಾವಜನಕ ಸದ್ಭಾವುಕ ಜನಪ್ರಿಯ ಅ.ಪ. ಶ್ರೀಶಾ ಶಶಿಕೋಟಿ ಸಂಕಾಶ ಸುಶೋಭಿತ ದರಹಾಸ ಸುಜನ ಪರಿಪೋಷ ಸನ್ನುತ ಸರ್ವೇಶ ಈಶಾ ಈ ಸಮಸ್ತ ಜಗದೀಶನೆಂದು ನಿನ್ನ ನಾ ಸ್ತುತಿಸುವೆ ಮನದಾಸೆಯ ಸಲ್ಲಿಸೊ ವಾಸವಾದಿ ಸುರಮಹಿಮ ಪ ರೇಶ ಪೂರ್ಣಗುಣ ದಾಸಜನಾವನ ಕ್ಲೇಶವ ಕಳೆದಿನ್ನು ನೀ ಸರ್ವದ ಎನ್ನ ಪೋಷಿಸು ಕರಿಗಿರಿ ವಾಸ ಶ್ರೀ ನರಹರಿ 1
--------------
ವರಾವಾಣಿರಾಮರಾಯದಾಸರು
ದೇವಾಧಿ ದೇವನೀತ ಜೀವ ಪ್ರಾಣನಾಥ ಕಾವ ಕರುಣನೀತ ಹಂಸನಾಥ 1 ದೇಶಿಕರ ದೇವ ಭಾಸಿ ಪಾಲಿಸುವ ವಾಸುದೇವ 2 ಸ್ಮರಿಸುವರ ಜೀವ ಹರಿ ಪರಂ ದೈವ ಪರಮ ಭಕ್ತರಿಗೀವ ಹರುಷವ 3 ಸಾಧು ಹೃದಯವಾಸ ಸದಮಲಾನಂದ ಘೋಷ ಸದೋದಿತ ಪ್ರಕಾಶ ಯಾದವೇಶ 4 ಇಹಪರ ಸಾಹ್ಯನೀತ ಬಾಹ್ಯಾಂತ್ರ ಸದೋದಿತ ಮಹಿಪತಿ ಪ್ರಾಣನಾಥ ಅವಧೂತ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವಾಧಿದೇವ ನೀನಹುದು ಸಾಕ್ಷಾತ ಭಾವಿಸುವರಾತ್ಮ ಭಜಕರ ಪ್ರಾಣದಾತ ಧ್ರುವ ಸುಜನ ಮನೋಹರ ಮೂಜಗ ಆಧಾರ ಭಜಕ ಭಯಹರ 1 ಕರುಣಸಾಗರ ಪರಮ ಉದಾರ ದುರಿತ ಸಂಹಾರ 2 ಬಾಹ್ಯಂತ್ರಲಿವ್ಹ ಇಹಪರ ಕಾವ ಮಹಿಪತಿಯ ರಕ್ಷಿಸುವ ಶ್ರೀ ದೇವ ದೇವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವಾಧಿದೇವ ನೀನಹುದೊ ಶ್ರೀಹರಿ ಕಾವಕರುಣ ನೀನೆ ಮುರಾರಿ ಧ್ರುವ ಕಮಲಭವಾರ್ಜಿತ ಕಾರುಣ್ಯ ಶೀಲ ವಿಮಲ ವಿರಾಜಿತ ಮದನಗೋಪಾಲ 1 ಕನಕಾಂಬರಧರ ಕಸ್ತೂರಿತಿಲಕ ಸನಕಾದಿವಂದ್ಯ ಶರಣ ರಕ್ಷಕ 2 ಅಗಣಿತ ಮಹಿಮ ಅವರುಜ ನೇತ್ರ ನೀನಹುದೊ ನಿಸ್ಸೀಮ 3 ಮುನಿಜನ ಪಾಲಕ ಮಾಮನೋಹರ ಘನಸುಖದಾಯಕ ಸು ಜನ ಸಹಕಾರ 4 ಭಾನುಕೋಟಿತೇಜ ನೀನೆ ಸುಹೃದಯ ದೀನದಯಾಳು ನೀನಹುದೊ ಮಹಿಪತಿಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವಾಧಿದೇವನೀತನೆ ಸಾಕ್ಷಾತ ಕಾವ ಕರುಣ ಗುರುನಾಥ ಧ್ರುವ ದಾತ ಸುರಲೋಕನಾಥ ಶ್ರುತಿಸ್ಮøತಿ ಸನ್ಮತ ಯತಿಜನವಂದಿತ ಪತಿತಪಾವನನಹುದೀತ 1 ಆನಂದೊ ಬ್ರಹ್ಮಸ್ವರೂಪ ಅನುದಿನ ಭಯಪಾಲಿಸ 2 ಶ್ರೀನಾಥ ಮಹಾಮಹಿಮರ ಮಹಿಪತಿಗುರು ಪ್ರಾಣನಾಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವಿ ನೀ ಗಿರಿಜಾತೆಯು ನಿನ್ನಯ ಕಾಂತ ರಜತಾಖ್ಯಗಿರಿನಾಥನು ನೀನು ಭವಾನಿಯು ನಿನ್ನ ಕಾಂತನು ಭವದೇವನಾಗಿರುವ ಪ ನಿನ್ನ ಯೌವನಭಂಗದ ಭೀತಿಯ ಕಂಡು ವಿಘ್ನೇಶನನು ಪುಟ್ಟಿಸಿ ಪ್ರಣಾತ್ಮಗಳನೊಬ್ಬ ತನುಜಗೆ ಕಲ್ಪಿಸಿ ಕೃತಕೃತ್ಯನಾದ ನಿನ್ನರಸ ಕಾಣಮ್ಮ 1 ನಿನ್ನ ಕಾಂತನು ಪಾರ್ಥನಿಗೆ ಬಾಣವನೀಯಲು ನೀನು ಅಂಜಲಿಕಾಸ್ತ್ರವನು ಪ್ರೇಮದಿ ನಿನ್ನ ಕಾಂಚನ ಚಿತ್ತವರಿತು ಕೊಡಲು ನಿನ್ನೊಳ್ ಪಾರ್ಥಸೂತನ ದಯವೆಷ್ಟೆಂಬೆ 2 ರಾಜೇಶ ಹಯಮುಖನÀ ದಯದಿಂದ ನಿನ್ನ ಪತಿ ವಿಷವ ಜೀರ್ಣಿಸಿಕೊಂಡನು ರಜತಾದ್ರಿಯೊಳಗಿರುವ ಶಿತಿಕಂಠ ಶಂಕರನ ಮಹಿಮೆಯದ್ಭುತವಲ್ಲವೇ ಪೇಳು ಗಿರಿಜೆ 3
--------------
ವಿಶ್ವೇಂದ್ರತೀರ್ಥ
ದೇವೇಂದ್ರನ ಸೊಸೆ ದೇವಕ್ಕಿ ತನಯಳು ಏನೇನು ಬಯಸಿದಳು ಪ ಒಂದು ತಿಂಗಳು ತುಂಬಲು ಸುಭದ್ರ ಅಂಜೂರಿ ದ್ರಾಕ್ಷಿ ಕಿತ್ತಳೆ ಜಂಬುನೇರಳು ಬಯಸಿದಳು ಅಂಬುಜಾಕ್ಷನ ತಂಗಿ ಪೈಜಣ ರುಳಿ ಗೆಜ್ಜೆ ಕಾ- ಲುಂಗುರ ಕಿರುಪಿಲ್ಯ ಇಟ್ಟೇನೆಂಬುವಳು 1 ಎರಡು ತಿಂಗಳು ತುಂಬಲು ಸುಭದ್ರ ಪರಡಿ ಮಾಲತಿ ಸಣ್ಣ ಶ್ಯಾವಿಗೆ ಬಯಸಿದಳು ಪರಿವೇಶನ ತಂಗಿ ಹರಡಿ ಕಂಕಣ ಹಸ್ತ ಕಡಗ ಹಿಂಬಳೆ ದ್ವಾರ್ಯ ಇಟ್ಟೇನೆಂಬುವಳು 2 ಮೂರುತಿಂಗಳು ತುಂಬಲು ಸುಭದ್ರ ವಾಲ್ಯ ಪಚ್ಚದ ಚಂದ್ರ ಬಾಳ್ಯವ ಬಯಸಿದಳು ಮಾರನಯ್ಯನ ತಂಗಿ ತೋಳಿಗ್ವಜ್ರದ ವಂಕಿ ಮಾಣಿಕ್ಯದ್ವೊಡ್ಯಾಣ ಇಟ್ಟೇನೆಂಬುವಳು 3 ನಾಲ್ಕು ತಿಂಗಳು ತುಂಬಲು ಸುಭದ್ರ ಆಕಳ ತುಪ್ಪ ಅನಾರಸ ಬಯಸಿದಳು ಶ್ರೀಕಾಂತನ ತಂಗಿ ತೂಕದ ಸರಿಗೆಯಿಟ್ಟು ಏಕಾವಳಿಯ ಸರ ಹಾಕೇನೆಂಬುವಳು 4 ಐದು ತಿಂಗಳು ತುಂಬಲು ಸುಭದ್ರ ಕೆನೆಮೊಸರ್ಹಾಕಿದ ಬುತ್ತಿ ಚಿತ್ರಾನ್ನವ ಬಯಸಿದಳು ಅಸುರಾಂತಕನ ತಂಗಿ ಹಸುರುಪತ್ತಲನುಟ್ಟು ಕುಸುಮ ಮಲ್ಲಿಗೆಮೊಗ್ಗು ಮುಡಿದೇನೆಂಬುವಳು 5 ಆರು ತಿಂಗಳು ತುಂಬಲು ಸುಭದ್ರ ಚೌರಿ ರಾಗಟೆ ಜಡೆಬಂಗಾರ ಬಯಸಿದಳು ಮಾರನಯ್ಯನ ತಂಗಿ ನಾಗಮುರಿಗೆನಿಟ್ಟು ಜಾಜಿ ಮಲ್ಲಿಗೆಮೊಗ್ಗು ಮುಡಿದೇನೆಂಬುವಳು 6 ಏಳು ತಿಂಗಳು ತುಂಬಲು ಸುಭದ್ರ ಕ್ಷೀರ ಮಂಡಿಗೆ ಬುಂದ್ಯ ಫೇಣಿಯ ಬಯಸಿದಳು ಕಮಲ ಕ್ಯಾದಿಗೆ ಮುಡಿಯ ನಿಂಬಾವಳಿ ಪತ್ತಲ ನಿರಿದುಟ್ಟೇನೆಂಬುವಳು7 ಎಂಟು ತಿಂಗಳು ತುಂಬಲು ಸುಭದ್ರ ಚಿಂತಾಕು ಪದಕ ಕಟ್ಟಾಣಿಯ ಬಯಸಿದಳು ವೈಕುಂಠಪತಿಯ ತಂಗಿ ಇಂಟರ್ ಪಪ್ಪುಳಿನುಟ್ಟು ಸೀಮಂತದುತ್ಸವ ಮಾಡೆ ಸುಖದಿಂದಿರುವಳು 8 ಒಂಬತ್ತು ತಿಂಗಳು ತುಂಬಲು ಸುಭದ್ರೆಗೆ ಬಂಗಾರದ್ಹೊರಸಿನಲ್ಲಿರಿಸಿ ಆರತಿ ಮಾಡಲು ಮಂಗಳಮಹಿಮ ಭೀಮೇಶಕೃಷ್ಣನ ತಂಗಿ ಕಂದ ಅಭಿಮನ್ಯು ಎಂಬುವನ ಪಡೆದಳು 9
--------------
ಹರಪನಹಳ್ಳಿಭೀಮವ್ವ