ಒಟ್ಟು 7503 ಕಡೆಗಳಲ್ಲಿ , 128 ದಾಸರು , 4808 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ಮಧ್ವಮುನಿರನ್ನ ಮೂರುಪರಿಯ ದೋರಿದೆ ನಿನ್ನ ಹರಭಕ್ತಿಯಲಿ ಅವಿಚ್ಛಿನ್ನ ಸರಿಯಾರು ಧರೆಯೊಳು ನಿನ್ನ ಸ್ಮರಣೆಯಲಿಹೆ ರಾಮನ ಪರಮಪಾವನ್ನ 1 ಅತಿಬಾಹು ಪರಾಕ್ರಮ ಕ್ಷಿತಿಯೊಳು ನಿನ್ನದೇ ನೇಮ ಪ್ರಥಮಲ್ಯಾದೆ ಹನುಮ ದ್ವಿತಿಯಲ್ಯಾದೆ ಭೀಮ ತೃತಿಯಲ್ಲಿ ಪೂರ್ಣ ಪ್ರಜ್ಞನೆನಿಸಿದೆ ನಿಸ್ಸೀಮ 2 ಸಾಹ್ಯಕ್ಕೆ ಕಾರಣ ಮಹಾದೈತ್ಯರ ಮರ್ದನ ಶ್ರೀ ಹರಿ ಸಾನ್ನಿಧ್ಯ ಪೂರ್ಣ ಇಹ ಸಕಲ ನಿಪುಣ ಮುಖ್ಯಪ್ರಾಣ ಸ್ವಹಿತ ಸಾಧನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರು ಮಧ್ವೇಶ ವಿಠಲ | ಪೊರೆಯ ಬೇಕಿವಳ ಪ ಪರಮ ಭಕುತಿಲಿ ನಿನ್ನ | ದಾಸ್ಯ ಕಾಂಕ್ಷಿಪಳ ಅ.ಪ. ಹರಿಗುರೂ ಸದ್ಭಕ್ತಿ | ಹಿರಿಯರಲಿ ಅಸಕ್ತಿನಿರುತ ಕರುಣಿಸಿ ಇವಳ | ಪೊರೆಯೊ ಹರಿಯೇ |ಅರುಹ ಲೇನಿಹುದಿನ್ನು | ಸರ್ವಜ್ಞ ನೀನಿರುವೆಕರುಣದಲಿ ಪೊರೆಯೆಂದು | ಪ್ರಾರ್ಥಿಸುವೆ ಹರಿಯೇ 1 ಕೃದ್ಧಖಳ ಜನರನ್ನು | ಪ್ರಧ್ವಂಸ ಮಾಡುತಲಿಬುದ್ಧಿಯೊಳು ನೀ ನಿಂತು | ವಿದ್ಯೆ ಪ್ರದನಾಗೋಮಧ್ವಮತ ಪದ್ಧತಿಗಳುದ್ಧರಿಸಿ ಇವಳಲ್ಲಿಪದ್ಮನಾಭನೆ ಪೊರೆಯೊ | ಮಧ್ವಾಂತರಾತ್ಮಾ 2 ಕಂಸಾರಿ ಹರಿಯೇ 3 ನಿನ್ನ ಪ್ರೇರಣೆಯಂತೆ | ಕನ್ಯೆಗಂಕಿತವಿತ್ತೆನನ್ನೆಯಿಂ ಪೊರೆಯಿವಳ ಪನ್ನಂಗ ಶಯನಾ |ನಿನ್ನಂಥ ಕರುಣಾಳು | ಅನ್ಯರಾರಿಹರಯ್ಯಪನ್ನಗಾರಿಯ ವಾಹ | ಅನ್ನಂತ ಮಹಿಮಾ 4 ಪಾವನಾತ್ಮಕ ದೇವ | ಸಾರ್ವಕಾಲದಿ ನಿನ್ನಪಾವನ ಸ್ಮøತಿಯಿತ್ತು | ಶರ್ವವಂದ್ಯಾ ಭಾವದೊಳು ಮೈದೋರಿ | ಕಾವ್ಯದನೆ ಬಿನ್ನಪವಾನೀ ವೊಲಿದು ಸಲಿಸೊ ಗುರು | ಗೊವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಗುರು ಮುಖ್ಯಪ್ರಾಣದರಸನೆ ನೀ ಎನ್ನ ಕರುಣಿಸು ಕೃಪೆಯಿರಿಸು ಪ. ನಿತ್ಯ ಪರಿಪೂರ್ಣನಾಗುತ ಪರಮಾತ್ಮನ ಮತಕನುಸರಿಸಿ ಧರೆಗೆ ಭಾರವಾದ ದುರುಳರ ವಧೆಗೈದ ಮರುತಾತ್ಮಜ ಮನೋಹರ ಮೂರುತಿಯಾದ 1 ರಾಮನಪ್ಪಣೆಯಿಂದ ಆ ಮಹಾಂಬೋಧಿಯ ಭೀಮ ವಿಕ್ರಮನುರೆ ದಾಂಟಿ ಬಂದು ರಾಮಣೀಯಕರವಾದ ರಾಮಮುದ್ರಿಕೆಯನ್ನು ತಾ ಮಣಿಯುತ ಸೀತಾ ಮಾನಿನಿಗಿತ್ತ 2 ಆ ಮಹಾಲಕ್ಷ್ಮಿಯ ನೇಮವ ಕೈಗೊಂಡು ತಾಮಸಿಚರರ ನಿರ್ನಾಮಗೈದು ಹೇಮಲಂಕೆಯನುರೆ ಹೋಮವಗೈಯುತ ಚೂಡಾಮಣಿ ತಂದಿತ್ತ 3 ಕ್ರೂರ ಕೌರವಕುಲ ಘೋರ ಕಾನನಕೆ ಕು- ಠಾರನಾಗುತಲಿ ಸಂಹಾರಗೈದು ವಾರಿಜಾಕ್ಷನ ಕೃಪೆಯಿಂದ ಮಾಗಧನನ್ನು ಚೀರಿದ ಕುಂತಿಕುಮಾರ ಮೂರ್ಲೋಕದ 4 ಹರಿ ಸರ್ವೋತ್ತಮನೆಂದು ಧರೆಗೆ ಸಾರುತ ಬಂದು ವರ ವೈಷ್ಣವಮತ ಸ್ಥಿರವ ಮಾಡಿ ಧರಣಿಯೊಳಗೆ ತಾತ್ವರ್ಯನಿರ್ಣಯವೆಂಬ ಪರಮ ಗ್ರಂಥವಗೈದ ಗುರು ಮಧ್ವಾಚಾರ್ಯನೆ 5 ಇಂತೀ ಮೂರವತಾರವಾಂತು ದಾನವರಿಂಗೆ ಸಂತಾಪಗೈದ ಮಹಾತುಮನೆ ಚಿಂತಿತಾರ್ಥವನೀವ ಚಿಂತಾಮಣಿ ಎಂದು ಸಂತತ ಭಜಿಪೆನು ಶಾಂತ ಹುನುಮಂತನೆ 6 ಶ್ರೀ ರಾಘವ ಲಕ್ಷ್ಮೀನಾರಾಯಣನ ಪಾದ- ಚಾರಕನಾದ ಗಂಭೀರನಿಗೆ ನೀರಜಾಂಡದೊಳಾರು ಸಮಾನರು ಕ್ಷಿರಸಾಗರಶಯನ ನೀನೊಬ್ಬನಲ್ಲದೆ 7
--------------
ತುಪಾಕಿ ವೆಂಕಟರಮಣಾಚಾರ್ಯ
ಗುರು ಮುಖ್ಯಪ್ರಾಣದರಸನೆ ನೀ ಎನ್ನ ಕರುಣಿಸು ಕೃಪೆಯಿರಿಸು ಪ. ನಿತ್ಯ ಪರಿಪೂರ್ಣನಾಗುತ ಪರಮಾತ್ಮನ ಮತಕನುಸರಿಸಿ ಧರೆಗೆ ಭಾರವಾದ ದುರುಳರ ವಧೆಗೈದ ಮರುತಾತ್ಮಜ ಮನೋಹರ ಮೂರುತಿಯಾದ 1 ರಾಮನಪ್ಪಣೆಯಿಂದ ಆ ಮಹಾಂಬೋಧಿಯ ಭೀಮ ವಿಕ್ರಮನುರೆ ದಾಂಟಿ ಬಂದು ರಾಮಣೀಯಕರವಾದ ರಾಮಮುದ್ರಿಕೆಯನ್ನು ತಾ ಮಣಿಯುತ ಸೀತಾ ಮಾನಿನಿಗಿತ್ತ 2 ಆ ಮಹಾಲಕ್ಷ್ಮಿಯ ನೇಮವ ಕೈಗೊಂಡು ತಾಮಸಿಚರರ ನಿರ್ನಾಮಗೈದು ಹೇಮಲಂಕೆಯನುರೆ ಹೋಮವಗೈಯುತ ಚೂಡಾಮಣಿ ತಂದಿತ್ತ 3 ಕ್ರೂರ ಕೌರವಕುಲ ಘೋರ ಕಾನನಕೆ ಕು- ಠಾರನಾಗುತಲಿ ಸಂಹಾರಗೈದು ವಾರಿಜಾಕ್ಷನ ಕೃಪೆಯಿಂದ ಮಾಗಧನನ್ನು ಚೀರಿದ ಕುಂತಿಕುಮಾರ ಮೂರ್ಲೋಕದ 4 ಹರಿ ಸರ್ವೋತ್ತಮನೆಂದು ಧರೆಗೆ ಸಾರುತ ಬಂದು ವರ ವೈಷ್ಣವಮತ ಸ್ಥಿರವ ಮಾಡಿ ಧರಣಿಯೊಳಗೆ ತಾತ್ವರ್ಯನಿರ್ಣಯವೆಂಬ ಪರಮ ಗ್ರಂಥವಗೈದ ಗುರು ಮಧ್ವಾಚಾರ್ಯನೆ 5 ಇಂತೀ ಮೂರವತಾರವಾಂತು ದಾನವರಿಂಗೆ ಸಂತಾಪಗೈದ ಮಹಾತುಮನೆ ಚಿಂತಿತಾರ್ಥವನೀವ ಚಿಂತಾಮಣಿ ಎಂದು ಸಂತತ ಭಜಿಪೆನು ಶಾಂತ ಹುನುಮಂತನೆ 6 ಶ್ರೀ ರಾಘವ ಲಕ್ಷ್ಮೀನಾರಾಯಣನ ಪಾದ- ಚಾರಕನಾದ ಗಂಭೀರನಿಗೆ ನೀರಜಾಂಡದೊಳಾರು ಸಮಾನರು ಕ್ಷಿರಸಾಗರಶಯನ ನೀನೊಬ್ಬನಲ್ಲದೆ 7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಗುರು ಸದ್ಗುರು ಆರೆಂದು ನೋಡೊ ಗುರುತಿಟ್ಟು ಮನವೆ ಸೇವೆ ಮಾಡೊ ಧ್ರುವ ಗುರುಗಳುಂಟು ಮನೆಮನೆ ಬಹಳ ಬ್ಯಾರೆ ಬ್ಯಾರೆ ಮಾಡುತ ತಮ್ಮ ಮ್ಯಾಳ ದೋರುತಿಹರು ಮೋಹಿಸುವ ವಾಗ್ಜಾಲ ಸರಿ ತಮಗಾರಿಲ್ಲೆಂದೆನ್ನು ತಲಾ ತೋಳ 1 ಎಲ್ಲ ಬಲ್ಲತನದಭಿಮಾನ ಅಲ್ಲೆ ಕೊಂಬುದೇನುಪದೇಶ ಜ್ಞಾನ ಸೊಲ್ಲಿಲ್ಹೇಳಿ ಕೇಳಿದರಾಹುದೇನ ಸಲ್ಲದರಲಿಹುದೆನೊಡೆತನ 2 ಸರ್ವಸಮ್ಮ ತಾಗುವ ಸುಜ್ಞಾನ ಗರ್ವಾಭಿಮಾನಗೆಲ್ಲಿಹುದು ಖೂನ ಪೂರ್ವಾಪರ ಸದ್ಗುರು ನಿಜಧ್ಯಾನ ದೋರ್ವದು ತಾಂ ಪಡೆದವಗ ಪೂರ್ಣ3 ವಿರಳಾಗತ ಎಲ್ಲಿಗೊಬ್ಬ ಮಹಿಮ ಶರಣ ಹೊಕ್ಕವಗೆ ಪೂಜ್ಯಪರಮ ಕರತಳಾಮಲಕವಾಗುವ ನಿಜವರ್ಮ ಗುರುಮಾರ್ಗದಾಗೆನಬೇಕು ನೇಮ 4 ಗುರುವರ ಶಿರೋಮಣಿ ಭಾನುಕೋಟಿ ಗುರುತಾದ್ಯೆನ್ನ ಮನದೊಳು ನಾಟಿ ಪರಬ್ರಹ್ಮನಹುದೊ ಜಗಜೇಟಿ ತರಳ ಮಹಿಪತಿ ಮನವಸೋಘಟಿ(?) 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರು ಸ್ವರೂಪದರಹು ಗುರುತದೋರುವ ಕುರುಹು ಗುರುವ್ಹೆ ಇರುವ್ಹಾಂಗ ದೋರುದೆ ಪರಾತ್ಪರವು ಧ್ರುವ ಅರವಿನಾಗ್ರದಲಿಹ ಕುರುಹುದೋರುವ ಖೂನ ಗುರುತವಾಗುದೆ ಗುರುಕೃಪೆಯ ಜ್ಞಾನ ಮರವಿನ ಮೂಲವನು ಮರೆದು ಬಿಡುವಸ್ಥಾನ ಅರವೆ ಅರವಾಗಿದೋರುವ ನಿಜ ನಿಧಾನ 1 ಅರಹು ಮರವನೆ ದಾಟಿ ಮೀರಿ ದೋರುವ ಕುರುಹು ಅರಿತು ಕೊಂಬುದೆ ತತ್ವದರವ್ಹಿನರಹು ತಿರುಹು ಮುರುವ್ಹಿನ ಅರುಹದೋರಿ ಕೊಡುವುದೇ ಸ್ಥಿರವು ಬೆರೆದು ಕೊಡುವದೆ ಗುರುಙÁ್ಞÀ ನಾನಂದ ಕುರುಹು 2 ಕರೆದು ಕರುಣಿಸಿ ದಯವು ಬೀರಿದನುಭವ ಸುಖವು ಗುರುಭಾನುಕೋಟಿ ಪ್ರಕಾಶ ಎನಗೆ ಅರವೆ ಅರಿವ್ಹಾಗಿ ತೋರಿತು ಮನೋನ್ಮನವಾಗಿ ತರಳ ಮಹಿಪತಿಗೆ ಘನ ಬೆಳಗೆ ಬೆಳಕು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುಜ್ಞಾನದ ಕೀಲು ಬ್ಯಾರ್ಯಾದ ನೋಡಿ ಬಲು ಮೇಲು ಧ್ರುವ ಮೇಲಾಗಿ ಸ್ವಸುಖ ಸಾಧನ ಚಾಲ್ವರುತದ್ಯಾತಕ ತಾ ಜನ ತಿಳಕೋಬಾರದ ಈ ನಿಜಖೂನ ಸುಲಲಿತ ನಿಜಧನ 1 ಮೂಲೊಕದಲ್ಯವ ಪೂರ್ಣಪವಿತ್ರ ನೆಲೆಗೊಂಡಿ ಹ್ಯ ಘನ ಚರಿತ್ರ ಬಲದಿಹ್ಯ ಬಾಹ್ಯಾಂತ್ರ 2 ದೀನಮಹಿಪತಿ ಗುರುದೇವದೇವೇಶ ಖೂನವಿಡವದು ಬಲುಸಾಯಾಸ ಮುನಿಜನರುಲ್ಹಾಸ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುಜ್ಞಾನದ ಗುಟ್ಟು ಬ್ಯಾರದೆ ಕೇಳಿ ಕಿವಿಗೊಟ್ಟು ಧ್ರುವ ತನ್ನೊಳು ಪರಿಪೂರ್ಣ ಒಳಹೊರಗಾನಂದ ಘನ ಹೊಳವದು ಗುರುಕರುಣ1 ಪ್ರೀಯಾಗುದು ಸಾಧನ ಅನುಭವಕಿದೆ ನಿಧಾನ ಙÁ್ಞನದ ಸುಜ್ಞಾನ 2 ಮಹಿಪತಿ ಸದ್ಗುರು ಚರಣ ಪಡಿಯೊ ಸುದಯ ಕರುಣ ಬಿಡುವಂತೆ ಮನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುತ ಕೇಳುವ ಬನ್ನಿ ಗುರುವಿನ ಕೈಯ ಅರವ್ಹಿಸಿ ಕೊಡುವ ಸದ್ಗುರು ನಮ್ಮಯ್ಯ ದ್ರುವ ಕೇಳದೆ ಹೇಳುವ ಕೇಳದ ಮಾತು ತಿಳಿದುಕೊಳ್ಳಿರೊ ನಿಜ ಗೂಢವರಿತು 1 ತಿಳಿದೇನಂದರ ತಿಳಿಯದು ಯೋಗ ಹೂಳೆಯುತಲ್ಯದ ಮನದೊಳು ಅತಿಬ್ಯಾಗ 2 ಗುರ್ತು ಹೇಳಿದ ಮಹಿಪತಿ ಗುರುಮೂರ್ತಿ ಆರ್ಥಿಯಾಗದ ಯೋಗದ ಮನಮೂರ್ತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುದೈವದೊಲವೆÀನಗೆ ಬಲವೆ ಬಲವು ಏರಿ ಬಿನಗು ದೈವದ ಬಲವು ಯಾತಕೆ ಹಲವು ದ್ರುವ ಗುರುನಯನದೊಲವೆನಗೆ ನವನಿಧಾನದ ಬಲವು ಗುರುಅಭಯದೊಲುವೆ ನವಗ್ರಹದ ಒಲವು ಅನುದಿನ ಬಲವು ಸಿರಿ ಸಕಲಬಲವು 1 ಗುರು ದಯದೊಲವೆನಗೆ ತಾಯಿ ತಂದೆಯ ಬಲವು ಗುರು ಕರುಣದೊಲವೆನಗೆ ಬಾಹುಬಲವು ಗುರು ಬೋಧದೊಲವೆನಗೆ ಬಂಧುಗಳಗದ ಬಲವು ಗುರು ಧವರ್iದೊಲವೆನಗೆ ಸರ್ವ ಬಲವು 2 ಗುರು ಪ್ರಭೆದೊಲವೆನಗೆ ಅನುಭವಾಶ್ರಯ ಬಲವು ಗುರು ಙÁ್ಞನದೊಲವು ಘನÀ ದೈವ ಬಲವು ಗುರುನಾಮದೊಲವೆನಗೆ ಪಕ್ಷವಾಗಿ ಹ್ಯ ಬಲವು ತರಳ ಮಹಿಪತಿ ಸ್ವಾಮಿ ಬಲವೇ ಬಲವು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುನಾಥ ಗುರುನಾಥ ಹೇಳಿದ ಮಾತು ಮಾತೆನ್ನ ಬಹುದು ಮಾತುವೊಂದೇಪ ವೇದಕ್ಕೆ ನಿಲ್ಲದು ವಿವರಕ್ಕೆ ತೋರದುಆದಿ ಪುರಾಣದ ಅರ್ಥ ಅರ್ಥ ಅದುವಾದಕ್ಕೆ ದೂರದು ಕರವಶವಾಗದುಸಾಧಿಸಿ ತನಗೆ ತಿಳಿದು ಹೇಳಿದ ಮಾತು ಮಾತು ವೊಂದೇ 1 ಮೂರರ ನಡುವದು ಮೂಲವೆ ತಾನದುಧೀರ ಧೀರರೆಲ್ಲ ದಿಟ್ಟಿಪುದುಬೇರೆ ಮತ್ತಿಲ್ಲದು ಬೆಗಡಾಗಿ ಇಹುದು 2 ಸಾರಾಯದಿಂದೆನಗೊಲಿದು ಹೇಳಿದ ಮಾತು ಮಾತುವೊಂದೇಮಾತಿನ ಮಹಿಮೆಯ ಮತ್ತೇನ ಹೇಳಲಿಪ್ರೀತಿ ಎಂಬವೆಲ್ಲ ಪೀಡೆಯಾದವುಭೂತನಾಥ ಚಿದಾನಂದ ಭೂಪತಿಯಾದಈ ತೆರದಲಿ ತಾನಿಂತು ಹೇಳಿದ ಮಾತು ಮಾತುವೊಂದೇ3
--------------
ಚಿದಾನಂದ ಅವಧೂತರು
ಗುರುನಾಮ ಸ್ಮರಿಸಿರೊ ಶ್ರೀಗುರುನಾಮ ಸುರುಮುನಿಜರ ಪ್ರಿಯವಾದ ನಾಮ ದ್ರುವ ಬ್ರಹ್ಮ ವಿಷ್ಣುರುದ್ರರಿಗಿದೆ ನಿಜನಾಮ ಪ್ರೇಮದಿಂದ ಸ್ಮರಿಸುವರು ಇದೆ ನಾಮ ಸಮಸ್ತ ಲೋಕಕ್ಕೆ ಸಾರವಾದ ನಾಮ ನೇಮದಿಂದ ತಾರಿಸುವ ದಿವ್ಯನಾಮ 1 ಸಕಲಾಗಮ ಪೂಜಿತರಿದೆ ನಾಮ ಏಕೋಮಯವಾಗಿ ದೋರುವದಿದೆನಾಮ ಶುಕವಾಮ ದೇವರಿಗಿದೆ ನಿಜ ನಾಮ ಸುಖ ಸರ್ವರಿಗೆ ದೋರುವ ಗುರುನಾಮ 2 ಕರ್ಮಬಂಧನ ಛೇದಿಸುವದಿದೆ ನಾಮ ಕರ್ಮದೋರಿ ಕೊಡುವದೀ ಗುರುನಾಮ ಬ್ರಹ್ಮಾನಂದ ಸುಖದೊರುವಾನಂದ ನಾಮ ಧರ್ಮ ಜಾಗಿಸಿಕೊಡುವದೀ ಗುರುನಾಮ 3 ಅಜಮಿಳಗೆ ತಾರಿಸಿದಿದೇ ನಾಮ ಗಜಭಯ ಪರಿಹರಿಸಿದಿದೆ ನಾಮ ಸುಜನರಿಗೆ ಸುಪ್ರಸನ್ನವಾದ ನಾಮ ಮೂಜಗಕೆ ತಾಮುಖ್ಯವಾದ ಗುರುನಾಮ 4 ಅಹಲ್ಯ ಉದ್ಧರಣ ಮಾಡಿದುದಿದೆ ನಾಮ ಪ್ರಲ್ಹಾದÀನ ಪ್ರಾಣಗಾಯಿದಿದೆ ನಾಮ ಫಲುಗುಣ ತಾ ಪಕ್ಷವಾದದುದಿದೆ ನಾಮ ಒಲಿದು ಧ್ರುವಗಥಳವಿತ್ತ ಗುರುನಾಮ 5 ಅಗಣಿತ ಗುಣ ಪರಿಪೂರ್ಣವಾದ ನಾಮ ಸುಗಮ ಸುಪಥಸಾಧನ ಇದೆ ನಾಮ ಯೋಜನ ಸೇವಿಸುವ ನಿಜನಾಮ ನಿರ್ಗುಣಾನಂದವಾಗಿಹ್ಯ ಗುರುನಾಮ6 ಸೂರ್ಯಚಂದ್ರ ಸಮಸ್ತವಂದ್ಯ ಇದೆ ನಾಮ ಕಾರ್ಯಕಾರಣವಾಗಿಹ್ಯ ವಿದೆ ನಾಮ ತೂರ್ಯಾವಸ್ಥೆ ಯೊಳಗೆ ಸೂರಿಗೊಂಬು ನಾಮ ತರಳಮಹಿಪತಿ ತಾರಕ ಗುರುನಾಮ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುಪರಮ ಸ್ವರೂಪ ಧ್ರುವ ಇಡದು ತುಂಬೇದ ನೋಡಿ ಎಡಬಲ ಪೂರ್ಣ ಬಿಡದೆ ಸೂಸುತಲ್ಯದೆ ಜಡಿದು ನಿಧಾನ 1 ಸಂಧಿಸಿಹದು ನೋಡಿ ಹಿಂದೆಮುಂದೆಲ್ಲ ಒಂದು ಮನದಿ ನೋಡಿ ಬಂದು ನೀವೆಲ್ಲ 2 ಬೆಳದುಕೊಂಬುವಂತೆ ಹೊಳೆಯುತವಲ್ಲ ಸುಳುಹು ಶ್ರೀ ಕೃಷ್ಣನ ತಿಳುವವರಿಲ್ಲ 3 ಕಣ್ಣುಗೆಟ್ಟಿರಬ್ಯಾಡಿ ಕಾಣದೆ ಖೂನ ತ ನ್ನೊಳಗದೆ ನೋಡಿ ಸಾನ್ನಿಧ್ಯಪೂರ್ಣ 4 ಭಾಸುತಲ್ಯದೆ ಭಾಸ್ಕರಕೋಟಿ ತೇಜ ದಾಸ ಮಹಿಪತಿ ಪ್ರಾಣದೊಡಿಯ ಸಹಜ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುಪಾದಕೆ ಮನಮಗ್ನವಾಗುವದೆ ಖೂನ ಧ್ರುವ ಗುರು ತನ್ನೊಳಗದೆ ಗುರ್ತು ನರದೇಹ್ಯದ ಭಾವನೆತಾಮರ್ತು ಅರಿಯಲಿಕ್ಕೆ ಘನ ಬೆರ್ತು ಧರೆಯೊಳು ನಿಜನಿರ್ತ 1 ಗುರುಶಿಷ್ಯತ್ವದ ನಿಜಖೂನ ಮರಜನಗಳಿದು ಬಲ್ಲವೇ£ À ವಿರಳಾಗತ ವಿಹ್ಯದೀ ಙÁ್ಞನ ಸುರಜನ ಪಾವನ 2 ಭಾವದೊಳ ನಿಜಗುರು ಸಧ್ಬಕ್ತಿ ಠಾವಿಲಿರಬೇಕಿದು ಸಂಗತಿ ನಿಚ್ಚ ಮಹಿಪತಿ ಭವಹರ ಗುರುಮೂರ್ತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುಭಕುತಿಯಲಿ ಮನವಸ್ಥಿರವ ಗೊಳ್ಳಲಿಬೇಕು ಅರತು ಸದ್ಭಾವದಲಿ ದೃಢಗೊಳ್ಳಬೇಕು ಧ್ರುವ ನಿಶ್ಚಯವಿಡಬೇಕು ದುಶ್ಚಲವ ಬಿಡಬೇಕು ನಿಶ್ಚಿಂತದಲಿ ನಿಜಸುಖ ಪಡೆಯಬೇಕು 1 ನಂಬಿನಡಿಯಬೇಕು ಡಂಭಕವ ಬಿಡಬೇಕು ಹಂಬಲಿಸಿ ಅಂಬುಜಾಕ್ಷನ ನೋಡಬೇಕು 2 ವಿಶ್ವಾಸವಿಡಬೇಕು ವಿಷಗುಣವ ಬಿಡಬೇಕು ವಿಶ್ವವ್ಯಾಪಕನ ವಿಶ್ವದಿ ನೋಡಬೇಕು 3 ರತಿ ಪ್ರೇಮ ಬಿಡಬೇಕು ಅತಿ ಹರುಷ ಪಡಬೇಕು ಸ್ತುತಿಸ್ತವನವನು ಪಾಡಿಗತಿ ಪಡೆಯಬೇಕು 4 ಆರು ಜರಿಯಬೇಕು ಮೂರು ಹರಿಯಬೇಕು ಅರಿತು ಗುರುಪಾದ ಮಹಿಪತಿಬೆರೆಯಬೇಕು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು