ಒಟ್ಟು 720 ಕಡೆಗಳಲ್ಲಿ , 93 ದಾಸರು , 581 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸು ಕರುಣಿಸು ಚನ್ನಕೇಶವನೇ ಕರುಣಿಸು ನಾ ನಿನ್ನ ದಾಸನೆಂತೆಂದು ಪ ಸಹÀಸ್ರನಾಮಗಳೀಶ ಬೇಗ ಮುಕ್ತಿಯನು 1 ನಂಬಿದೆ ಹರಿ ನಿನ್ನ ಚರಣವ ದೇವಾ ಅಂಬುಜ ನಯನನೆ ನಿನ್ನ ಭಕ್ತಿಯನು 2 ಬಹಳ ನೊಂದೆನು ಸಂಸಾರ ಜಾಲದಲೀ ಇಹ ಯಾತ್ರೆ ಮುಗಿಸುತ್ತ ಪರಗತಿಯನ್ನು 3 ವರ ದೂರ್ವಾಪುರದಲ್ಲಿ ನಿರುತನಾಗಿದ್ದು ಸರಸದಿ ಭಕ್ತರ ಪೊರೆವ ಶ್ರೀ ಹರಿಯೇ 4
--------------
ಕರ್ಕಿ ಕೇಶವದಾಸ
ಕರ್ಕಿ ಚೆನ್ನಕೇಶವ ಸ್ತುತಿ ಅನ್ಯರನು ಬೇಡೆನು ಚನ್ನಕೇಶವನೇ ಸೇವ್ಯ ಸರ್ವಾತ್ಮನೇ ಪ ತರಳ ಧೃವನನು ಕಾಯ್ದು ಧರಣಿಯನ್ನವಗಿತ್ತ ಸುರಸೇವ್ಯನಾಕೇಶವಂದ್ಯ ಹರಿ ಜೊರತು 1 ದುರುಳ ಕುರುಪತಿಯನುರೆಜೆ ಭಾಮೆ ದ್ರೌಪದಿಮಾನ ತರಿಯತಿಣಿಸಲ್ಕವಳ ಕಾಯ್ದ ಹೊರತು 2 ದುಷ್ಟ ಕಂಸನ ಬಾಧೆಯಿಂ ಲೋಕ ತತ್ತರಿಸೆ ಭ್ರಷ್ಟನನು ಕೊಂದ ಜಗ ಪೊರೆದ ಹರಿ ಹೊರತು 3
--------------
ಕರ್ಕಿ ಕೇಶವದಾಸ
ಕಷ್ಟಗಳ ಪರಿಹರಿಸೊ ಶ್ರೇಷ್ಠ ಮಾರುತಿಯೇ ಭ್ರಷ್ಟನಾದೆನು ಭಂಡ ಸಂಸಾರದಲ್ಲೀ ಪ ಸ್ವಾರ್ಥವೆನ್ನುವ ದುಃಖ ಸಾಗರದಿ ಮುಳುಗಿದ್ದು ಸ್ವಾರ್ಥಕೋಸುಗ ಹೀನ ಕೃತ್ಯಗಳ ಗÉೈದೂ ಅರ್ಥವನು ಗಳಿಸುತ್ತ ತುಂಬಿದೆನು ಈ ವಡಲ ವ್ಯರ್ಥವಾಯಿತು ಜನ್ಮ ಸಾರ್ಥವನು ಮಾಡೋ1 ನಿರುತದೀ ಧರ್ಮ ಕರ್ಮಗಳ ತೊಲಗಿದೆನು ಭವದಿ ಸುಖವೆಲ್ಲವೂ ಮಾಯವಾಯಿತು ದೇವಾ ಶರಣರಿಗೆ ತಂದೆ ನೀನೆಂದು ಮೊರೆಹೊಕ್ಕೇ 2 ಪರಹಿತವ ಬಯಸದಲೆ ಕೇಡು ಬಗೆದೆನು ನಿತ್ಯ ಪರಸತಿಯಪೇಕ್ಷಿಯಲಿ ನಿರುತನಾಗಿದ್ದೇ ಅರಿತೆನೀಗಲೆ ನಾನು ಸರ್ವ ನಶ್ವರವೆಂದು ನರಹರಿಯ ನೀರೆರೆಯೊ ಈ ಬಾಡು ಶಶಿಗೇ 3 ಭಕ್ತವತ್ಸಲನೆಂಬ ಬಿರುದ ಪೊತ್ತಿಹೆ ನೀನು ಭಕ್ತಿಯಲಿ ನಾ ನಿಂನ ಸೇವೆ ಮಾಡುವೆನು ಭಕ್ತದಾಯಕಯಂನ ಹಸಿವೆ ತೃಷೆಗಳ ನೀಗಿ ಮುಕ್ತಿಯನು ನೀಡೆನಗೆ ಚನ್ನಕೇಶವನೇ 4
--------------
ಕರ್ಕಿ ಕೇಶವದಾಸ
ಕಾಕುತ್ಸ ರಘುನಾಥ ಶ್ರೀರಾಮಚಂದ್ರ ಭೂಕಾಂತೆ ಸಿರಿವಂತೆ ಜನಕಾತ್ಮಜೇಂದ್ರ ಪ ಪಾಕ ಶಾಸನ ಕಾಯ್ದ ದಶರಥ ಕಂದ ಲೋಕನಾಯಕ ಸ್ವಾಮಿ ಭಕ್ತರಾನಂದಾ ನಂಬಿದೆ ಹರಿ ನಿನ್ನ ಚರಣಯುಗ್ಮಗಳ ನಂಬಿದ ಶ್ರೀ ಹರಿ ದಿವ್ಯ ರೂಪಗಳಾ ನಂಬಿದೆ ನಿನ್ನ ಹರಿಲೀಲೆ ಮಹಿಮ ಕೀರ್ತಿಗ¼ À ನಂಬಿದೆ ಪಾಲಿಸೋ ತರಿದು ಕಷ್ಟಗಳ 1 ಸ್ಮರಿಸುವೆ ಭಜಿಸುವೆ ಶುಭ್ರ ನಾಮಗಳ ಪರಿಪರಿ ಪೊಗಳುವೆ ನಮಿಸುವೆ ಹರಿಯ ನಿರುತದಿ ಪಾಡುವೆ ನಿನ್ನ ಸ್ತೋತ್ರಗಳ ವಿರಚಿಸಿ ಮಾಡುವೆ ಹರಿ ಕೀರ್ತನೆಗಳ 2 ಭಕ್ತನ ಲಾಲಿಸೋ ದಾನವಾಂತಕನೇ ಭಕ್ತಿಯ ಪಾಹಿಸೂಕರ ರೂಪಧರನೇ ಭಕ್ತನ ಪಾಲಿಸೋ ದೇವ ನಿರ್ಮಲನೇಮುಕ್ತಿಯ ಪಾಲಿಸೋ ಚನ್ನಕೇಶವನೇ 3
--------------
ಕರ್ಕಿ ಕೇಶವದಾಸ
ಕಾಯಬೇಕೆನ್ನ ಕೇಶವನೇ ಬಂದು ಪಾಯವನರಿಯೆನು ಹರಿಯೇ ಮಾಧವನೇ ಪ ಭವಸಾಗರವÀ ದಾಟಿ ಬಂದೇ ಇನ್ನು ಭವವನ್ನು ಬಂಬಿದೆ ಹರಿಯೇ ಶರಣೆಂದೆ ಅ.ಪ. ಜವನ ಬಾಧೆಗೆ ಅಂಜಿ ಬಂದೇ ಭವರೋಗ ವ್ಯೆದ್ಯನೇ ರಕ್ಷಿಸೋ ತಂದೇ 1 ಯೋನಿಗೆ ಬರಲಾರೆ ಹರಿಯೇ ಬಂದು ಮೌನದಿ ವೇಳೆಯನನ್ಯರೊಳ್ತಳೆಯೇ 2 ಜನ್ಮವ ಕಳದೆನು ಬರಿದೇ ಗಾನಲೋಲನೆ ಎನ್ನ ರಕ್ಷಿಸೋ ತಂದೇ 3
--------------
ಕರ್ಕಿ ಕೇಶವದಾಸ
ಕಾಯೋ ನೀ ಅನಸೂಯಾ ಪುತ್ರನೇ ಜೀಯಾ ದತ್ತಾತ್ರೇಯ ದೇವನೇ ಪ ಪತ್ರೇಂದ್ರ ಗಮನಾ ಪರಮಾನಂದಾ ಶತ ಪತ್ರದಳ ನಯನಾ ಕೇಶವಾ ಮಿತ್ರ ಶತಕೋಟಿ ಪ್ರಕಾಶ ಸುರೇಶನೇ ಅತ್ರಿ ಗೋತ್ರ ಸಮುದ್ಭವಾ 1 ಸರ್ವಾಧಾರವ್ಯಯ ತ್ರಯ ಮೂರು ಸರ್ವ ಲೋಕ ವ್ಯಾಪ್ತನು ಚಾರು ತತ್ವರಿತ ಸರ್ವಾತೀತ ಮುಕುಂದನೇ 2 ಯೋಗಿ ಜನರ ಮಾನಸ ಹಂಸಾ ಸಂತ ಗುಣ ಸಂಪನ್ನನು ಅನಂತ ರೂಪ ಮಹಿಪತಿ ನಂದನ ಪ್ರಭು ಅನಂತ ಮಹಿಮ ಶ್ರೀ ಕೃಷ್ಣನೇ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾರುಣ್ಯಸಾಗರನೇ ನಾ ಸೇರುವೆ ಮಾರನ ಪಡೆದವನೇ ಪ ಭಾವಾತೀತನೆ ಯೆನ್ನ ಅವಗುಣವೆನಿಸದೆ ಸೇವಕನಿಗೆ ನಿನ್ನ ಭಕ್ತಿಯ ನೀಡೋ 1 ದೇವಕಿ ಕಂದನೇ ಸನಕವಂದಿತನೇ ಸೇವೆಯ ಮಾಡುವೆ ಚರಣವ ನೀಡೋ 2 ಅಜನಿಗೆ ಪಿತನಾಗಿ ದ್ವಿಜರಿಗೊಡೆಯನಾಗಿ ಗಜನನ್ನು ಪೊರೆದ ಶ್ರೀ ಲಕ್ಷ್ಮೀ ಸೇವಿತನೇ 3 ಪಾದ ಯುಗ್ಮಗಳನ್ನು ಭಜಕನ ಸಲಹಯ್ಯ ಚನ್ನಕೇಶವನೇ 4
--------------
ಕರ್ಕಿ ಕೇಶವದಾಸ
ಕಾಲ ಕರ್ಮವ ಕಾಲಿಲೊದೆದವ | ಕತ್ತಲಿಗಂಜುವನೇ | ಆಲಿಯ ಮೇಲಕೆ ನಿಲಿಸಿದ ಪುರುಷನು | ಬಾಲೆರ ಬಯಸುವನೇ ಪ ಅಮೃತ ನದಿಯೊಳು ತೃಪ್ತ್ಯಾದ ಮಹಾತ್ಮನು | ಅಂಬಲಿ ಸುರಿಯುವನೇ | ಕುಂಭಕ ವಾಯುವ ನಿಲಿಸಿದ ಸಜ್ಜನ | ಕುಂಭಿನಿಗುದಿಸುವನೇ1 `ತತ್ತ್ವಮಸಿ’ ಮಹಾವಾಕ್ಯವ ತಿಳಿದವ | ಮಿಥ್ಯಕೆ ಮೆಚ್ಚುವನೇ | ನಿತ್ಯನಿತ್ಯದಿ ಇರುವವನೂ | ಅನಿತ್ಯಕೆ ಮೆಚ್ಚುವನೇ 2 ಭವ ಮೂರ್ತಿ ಭವತಾರಕ ಭಜಕನು | ಭೇದವ ಮಾಡುವನೇ 3
--------------
ಭಾವತರಕರು
ಕಾಲ ಚಕ್ರವನೇರಿ ಭಾಸಿಪ ಬಾಲ ಸೂರ್ಯನ ವಂದಿಪೆ ಪ ಕಾಲ ರೂಪನೆ ಬಾಲ ಚಂದ್ರನೆ ಪೂಜಿಪೆ ಅ.ಪ. ಸೃಷ್ಟಿ ರೂಪನೆ ವೃಷ್ಟಿದಾಯಕ ಶ್ರೇಷ್ಠ ಭೂಮಿಯ ಪುತ್ರನೆ ಕಷ್ಟಹರ ಸುಜ್ಞಾನ ಮೂರುತಿ ಇಷ್ಟದಾಯಕ ಸೌಮ್ಯನೆ 1 ದೇವಗಣಗುರು ಕ್ಷೇಮದಾಯಕ ಜೀವವರ ಗುರು ಪಾಲಿಸೈ ದೇವಶುಕ್ರನೆ ಕಾವ್ಯರೂಪನೆ ಕಾವ್ಯ ಸೇವನೆ ಪೋಷಿಸೈ 2 ಪುಂಗವರ ಮಹಿಮಾಂಗ ಶನಿ ಸನ್ಮಂಗಳಾತ್ಮಕ ದೇವನೆ ಮಂಗಳವನೆಸಗೆಂದು ವಂದಿಪೆ ರಾಹುವೆ ವರಕೇತುವೆ 3 ಶ್ರೀನಿವಾಸನೆ ಪಾಲಿಸುವುದೆಂದೀ ನವಗ್ರಹ ಭಕ್ತಿಯಿಂಧೇನುನಗರ ಜನೇಶನೇವರ ವೇಂಕಟೇಶನೆ ಪೋಷಿಸೈ 4
--------------
ಬೇಟೆರಾಯ ದೀಕ್ಷಿತರು
ಕಾಳಿ ಭವಾನಿ ಶಿವೆ ಪಾಲಿಸೇ | ಪ ಗೋತ್ರೋದ್ಬವೆಸಿತ ಗೋತ್ರ ಕೃತಾಲಯೆ | ಗೋತ್ರಸುರಾರ್ಚಿತೆ ಗೋತ್ರಾರಿಯನುತೆ 1 ಭುವನೇಶ್ವರಿತ್ರೈ ಭುವನಾರ್ಚಿತಪದ | ಭುವನಜಯುಗ್ಮಳೆ ಭುವನಜ ಲೋಚನಳೇ 2 ನಾಗಾಂಬರ ಪ್ರಿಯೆ ನಾಗ ಸುವೇಣಿಯೇ | ನಾಗತಿ ಬೆಡುವೆ ನಾ ಗಿರಿಜೇಶಳೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮಕುಲದ ನೆಲೆಯನೇನಾದರೂ ಬಲ್ಲಿರ ಪ ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲಅಟ್ಟು ಉಣ್ಣದ ವಸ್ತುಗಳಿಲ್ಲಗುಟ್ಟು ಕಾಣಿಸ ಬಂತು ಹಿರಿದೇನು ಕಿರಿದೇನುನೆಟ್ಟನೆ ಸರ್ವಜ್ಞನ ನೆನೆ ಕಂಡ್ಯ ಮನುಜ 1 ಜಲವೆ ಸಕಲ ಕುಲಕ್ಕೆ ತಾಯಲ್ಲವೆಜಲದ ಕುಲವನೇನಾದರೂ ಬಲ್ಲಿರಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹನೆಲೆಯನರಿತು ನೀ ನೆನೆ ಕಂಡ್ಯ ಮನುಜ 2 ಹರಿಯೆ ಸರ್ವೋತ್ತಮ ಹರಿಯೆ ಸರ್ವೇಶ್ವರಹರಿಮಯವೆಲ್ಲವೆನುತ ತಿಳಿದುಸಿರಿ ಕಾಗಿನೆಲೆಯಾದಿಕೇಶವರಾಯನಚರಣ ಕಮಲವ ಕೀರ್ತಿಸುವನೆ ಕುಲಜ 3
--------------
ಕನಕದಾಸ
ಕುಲವ್ಯಾವುದಯ್ಯ ಕಪಿಕುಲನೆ ನಿನಗೆ ಒಲಿದಿಹನು ಹರಿ ನಿನಗೆ ಎಂದು ಜನ ನುತಿಸುವರು ಪ. ಮರ ಹಾರುವಂಥ ಮರ್ಕಟಕುಲದಲವತರಿಸಿ ಶರಧಿ ಲಂಘಿಸುತ ದ್ವೀಪಾಂತರವಾಸಿ ದುರುಳರನು ಸಂಹರಿಸಿ ದೊರೆ ಸುತರ ಸೇವಿಸಿ ಕರದಿ ಎಂಜಲು ಕೊಂಡು ಮರವನೇರಿದನೆ 1 ಪ್ರಥಮ ಕುಲವನೆ ಬಿಟ್ಟು ದ್ವಿತೀಯ ಕುಲದೊಳಗುದಿಸಿ ಹಿತವೆ ರಕ್ಕಸಿ ಸಂಗ ಪಥದಿ ನಿನಗೆ ದಿತಿಜನಾಹುತಿ ಅನ್ನ ಗತಿಯಿಲ್ಲದಲೆ ತಿಂದು ಚತುರ ಕುಲಜನ ನೀ ನುತಿಸಿ ಹಿಗ್ಗಿದನೆ 2 ತುಳುವಂಶಜನೆ ನೀ ಲಲನೆ ಸಂಗವ ತೊರೆದು ಅಲೆದೆ ಯತಿಯಾಗಿ ಈ ಇಳೆ ಎಲ್ಲವ ಕುಲನ್ಯೂನ ಗೋಪಾಲಕೃಷ್ಣವಿಠ್ಠಲನ ಪದವ ಒಲಿಸಲೋಡಿದೆ ಆರು ಬರದಂಥ ಗಿರಿಗೆ 3
--------------
ಅಂಬಾಬಾಯಿ
ಕೃತಕೃತ್ಯನಾದೆನಿಂದಿನ ದಿನದಲಿ ವ್ರತಿ ಕುಲೋತ್ತಂಸ ಭುವನೇಂದ್ರರಾಯರ ಕಂಡು ಪ ಗಂಗಾ ಪ್ರಯಾಗ ಗಯಾ ನೈಮಿಷಾರಣ್ಯ ಕುರು ಜಾಂಗಳಾದ್ಯಖಿಳ ಸುಕ್ಷೇತ್ರಗಳಲಿ ಸಾಂಗ ಕರ್ಮಗಳ ಹರಿಗರ್ಪಿಸಿದ ಫಲವು ಮುನಿ ಪುಂಗವರ ಕಂಡ ಮಾತ್ರದಿ ಸಮನಿಸಿತೆನಗೆ 1 ಹಿಂದೆ ಬಹು ಜನ್ಮದಿ ಮಾಡಿದ ಸುಕೃತಕೆ ಕ ಪಾದ ಕಮಲ ಸಂದರ್ಶನವೆ ಮಹತ್ಪಲವಾಯಿತೆನಗೆ ಗೋ ವಿಂದನ ಪ್ರತಿಬಿಂಬರಾದ ಕಾರಣದಿಂದ 2 ಅನ್ಯಸಾಧನೆಗಳಿನ್ನಾಚರಿಸಲ್ಯಾಕೆ ಮ ತ್ತನ್ಯರಾರಾಧನೆಯ ಮಾಡಲ್ಯಾಕೆ ಸನ್ನುತ ಮಹಿಮ ಜಗನ್ನಾಥ ವಿಠಲನ ಕಾ ರುಣ್ಯ ಪಾತ್ರರಾ ಕರುಣವಾಯಿತೆನ್ನೊಳಿಂದು 3
--------------
ಜಗನ್ನಾಥದಾಸರು
ಕೇಶವದಾಸಗೆ ಚರಣವ ನೀಡೋ ವಾಸುದೇವನೇ ನಿನ್ನ ಪಾದವ ನೀಡೋ ಪ ಚರಣವ ಗಂಗಾಮೃತದಿಂದ ತೊಳೆಯುವೇ ಚರಣಕ್ಕೆ ಶ್ರೀಗಂಧವನ್ನು ಲೇಪಿಸುವೆ ಚರಣಕ್ಕೆ ಆರತಿ ಬೆಳಗುವೆ ಹರಿಯೇ 1 ಪಾದದೊಳೆನ್ನಯ ಶಿರವಿತ್ತು ಬೇಡುವೆ ನಿತ್ಯ ಕುಡಿಯುತ್ತಲಿರುವೇ ಪಾದಧೂಳಿಗಳನ್ನು ಬಿಡದೆ ನಾ ಹÉೂರುವೇ ಪಾದದೊಳೀ ತನುವನ್ನು ನಾ ಬಿಡುವೇ 2 ಅಡಿಯನ್ನು ನೋಡಿ ಸಂತೋಷಗೊಳ್ಳುವೆನು ಅಡಿಯನ್ನು ಸೇವಿಸಿ ಭಕ್ತನಾಗುವೆನು ಅಡಿಯನ್ನು ಪೂಜಿಸಿ ಭಜಿಸಿ ಪಾಡುವೆನು ಅಡಿಯನ್ನು ಸೇರಿ ನಾ ಮುಕ್ತನಾಗುವೆನು 3
--------------
ಕರ್ಕಿ ಕೇಶವದಾಸ
ಕೇಳು ನಾ ಪೇಳ್ವದೊಂದಾ ನಿತ್ಯಾನಂದಾ ಪ. ಕೇಳು ನಾ ಪೇಳ್ವದೊಂದಾ ಕಂಸಾದ್ಯಸುರವೃಂದ ಸೀಳಿ ಶೀಘ್ರಾದಿ ಪರಿಹರಿಸಿದಿ ಪಿತೃ ಬಂಧ ಅ.ಪ. ನಿಗಮ ತತಿಗಳು ನಿಶ್ಯೇಷ ತಿಳಿಯದ ಸುಗುಣವಾರಿಧಿ ಸುಖಬೋಧ ದೇಹ ಸ್ವಗತ ಖೇದೊಝ್ಝಿತ ಸರ್ವ ನಿಯಾಮಕ ಖಗಪತಿವಾಹನ ಕಾಮಿತ ಭಾವನ ಪಾಲನ ಪರಾತ್ಪರ ಸ್ವಗತಿ ನಿಯತಿ ಜ್ಞಾನ ದಾಯಕ ತ್ರಿಗುಣ ವರ್ಜಿತ ತ್ರಿಭುವನೇಶ್ವರ ಮಗುವು ನುಡಿವುದ ಮಾತೆಯಂದದಿ 1 ಮೊದಲಿನ ಭವಗಳ ಹದನ ಒಂದರಿಯೆನು ಪಾದ ಪದುಮಗಳ ಸದರದಿ ಸೇವಿಸಲಧಿಕ ಸಾಧನ ಮಾನು ಷ್ಯದಿ ಬಂದು ವೈಷ್ಣವ ಬುಧರಾ ಸೇವೆಯ ಬಿಟ್ಟು ವಿಧವಿಧ ಮೋಹಾಂಧಕಾರಗ- ಳುದಿಸಲದರೊಳು ಸಿಲುಕಿ ನಿರುಪದಿ ಬಧಿರ ಮೂಕ ಜಡಾಂಧನಾದೆನು ಸದಯ ಇನ್ನಾದರೂ ಕಟಾಕ್ಷದಿ 2 ತಾಪತ್ರಯೋನ್ಮೂಲನೇಶಾ ಕೌಸ್ತುಭಭೂಷ ಸುಜನ ಗಣೈಕ ಪೋಷಾ ಈಪರಿಯೊಳಗೆನ್ನ ಜರಿವದುಚಿತವೇನೊ ಕಾಪುರುಷರ ಸಂಗ ಕಡಿದು ಕರುಣವಿಟ್ಟು ಶ್ರೀ ಪಯೋಜ ಭವೇಂದ್ರ ವಂದ್ಯ ಪ್ರ- ದೀಪ ಸತ್ಸಿದ್ಧಾಂತ ತಿಳಿಸಿ ಪ- ದೇ ಪದೇ ಕಾಪಾಡು ವೆಂಕಟ ಭೂಪ ನೀ ಗತಿಯೆಂದು ನಂಬಿದೆ ಕೇಳು 3
--------------
ತುಪಾಕಿ ವೆಂಕಟರಮಣಾಚಾರ್ಯ