ಒಟ್ಟು 115 ಕಡೆಗಳಲ್ಲಿ , 36 ದಾಸರು , 109 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹನುಮ ನಮ್ಮ ತಾಯಿ ತಂದೆಭೀಮ ನಮ್ಮ ಬಂಧು ಬಳಗಆನಂದತೀರ್ಥರೆ ನಮ್ಮ ಗತಿಗೋತ್ರರು ಪ.ತಾಯಿ ತಂದೆ ಹಸುಳೆಗಳಿಗೆ ರಸಾಯನುಣಿಸಿ ಸಾಕುವಂತೆಆಯಾಸವಿಲ್ಲದೆ ಸಂಜೀವನವ ತಂದುಗಾಯಗೊಂಡ ಕಪಿಗಣವಪ್ರಿಯದಿಂದ ಪೊರೆದ ರಘುರಾಯನಂಘ್ರಿಗಳೆ ಸಾಕ್ಷಿ ತ್ರೇತಾಯುಗದಿ 1ಬಂಧು ಬಳಗದಂತೆ ಆಪದ್ಬಾಂಧವನಾಗಿ ಪಾರ್ಥರಿಗೆಬಂದ ಬಂದ ದುರಿತಗಳ ಪರಿಹರಿಸಿಅಂಧಕಜಾತರ ಕೊಂದುಅಂದೆ ಕೃಷ್ಣಾರ್ಪಣವೆಂದಾ ಯದುಕುಲೇಂದ್ರನಂಘ್ರಿಗಳೆ ಸಾಕ್ಷಿ ದ್ವಾಪರಾಂತ್ಯದಿ 2ಗತಿಗೋತ್ರರಂತೆ ಸಾಧುತತಿಗಳಿಗೆ ಸುಜ್ಞಾನವಿತ್ತುಮತಿಗೆಟ್ಟ ಇಪ್ಪತ್ತೊಂದು ಕುಭಾಷ್ಯಂಗಳಗತಿಗೆಡಿಸಿ ವೈಷ್ಣವರಿಗೆ ಸದ್ಗತಿಯ ತೋರಿದ ಪ್ರಸನ್ವೆಂಕಟಪತಿವ್ಯಾಸಾಂಘ್ರಿಗಳೆ ಸಾಕ್ಷಿ ಕಲಿಯುಗದಿ3
--------------
ಪ್ರಸನ್ನವೆಂಕಟದಾಸರು
ಹನುಮ ನಮ್ಮ ತಾಯಿತಂದೆ-ಭೀಮನಮ್ಮ ಬಂಧು ಬಳಗ |ಆನಂದ ತೀರ್ಥರೆಮಗೆ ಗತಿಗೋತ್ರವಯ್ಯ ಪತಾಯಿ ತಂದೆ ಹಸುಳೆಗಾಗಿ ಸಾಯ ಮಾಡಿ ಸಾಕುವಂತೆಆಯಾಸವಿಲ್ಲದೆ ಸಂಜೀವನ ತಂದೆ ||ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆದೆ ರಘುರಾಯನಂಘ್ರಿಗಳೆ ಸಾಕ್ಷಿ ತ್ರೇತಾಯುಗದಲ್ಲಿ 1ಬಂಧು ಬಳಗದಂತೆ ಆಪ್ಪದ್ಬಂಧುವಾಗಿ ಪಾರ್ಥನಿಗೆಬಂದ ದುರಿತಂಗಳ ಪರಿಹರಿಸಿ ||ಅಂಧಕಜಾತಕ ಕೊಂದು ನಂದನಂದನಿಗರ್ಪಿಸಿದ ಗೋ-ವಿಂದನಂಘ್ರಗಳೆ ಸಾಕ್ಷಿ ದ್ವಾಪರಯುಗದೆ 2ಗತಿಗೋತ್ರರಂತೆ ಸಾಧುಮತಿಗಳಿಂಗೆ ಗತಿಯನಿತ್ತುಮತಿಗೆಟ್ಟ ಇಪ್ಪತ್ತೊಂದು ಮತವ ಖಂಡಿಸಿ |ಮತಗೆಟ್ಟ ವೈಷ್ಣವರಿಗೆ ಗತಿಯ ತೋರಿದೆ ಪರಮಾತ್ಮಗತಿಪುರಂದರವಿಠಲ ಸಾಕ್ಷಿ ಕಲಿಯುಗದಲ್ಲಿ3
--------------
ಪುರಂದರದಾಸರು
ಹರಿಯ ನೆನೆಯದ - ನರಜನ್ಮವೇಕೆ ? ಶ್ರೀಹರಿಯ ಕೊಂಡಾಡದ ನಾಲಿಗೆಯಿನ್ನೇಕೆ ಪ.ಸತ್ಯ - ಶೌಚವಿಲ್ಲದ ಆಚಾರವೇಕೆ ?ಚಿತ್ತ ಶುದ್ಧಿಯಿಲ್ಲದ ಜ್ಞಾನವೇಕೆ ?ಭಕ್ತಿ - ಭಾನವಿಲ್ಲದ ದೇವಪೂಜೆ ಏಕೆ ?ಉತ್ತಮರಿಲ್ಲದ ಸಭೆಯು ಇನ್ನೇಕೆ ? 1ಕ್ರೋಧವ ಬಿಡದಿಹ ಸಂನ್ಯಾಸವೇಕೆ ?ಆದರವಿಲ್ಲದ ಅಮೃತಾನ್ನವೇಕೆ ?||ವೇದ - ಶಾಸ್ತ್ರವಿಲ್ಲದ ವಿಪ್ರತನವೇಕೆಕಾದಲಂಜುವನಿಗೆ ಕ್ಷಾತ್ರ ತಾನೇಕೆ ? 2ಸಾಲದಟ್ಟುಳಿಯೆಂಬ ಸಂಸಾರವೇಕೆ ?ಬಾಲಕರಿಲ್ಲದ ಭಾಗ್ಯವಿನ್ನೇಕೆ ?ವೇಳೆಗೆ ಒದಗದ ನೆಂಟರಿನ್ನೇಕೆ ? ಅನುಕೂಲವಿಲ್ಲದ - ಸತಿಯ ಸಂಗವೇಕೆ 3ಮಾತೆ - ಪಿತರ ತೊರೆದ ಮಕ್ಕಳಿನ್ನೇಕೆ ?ಮಾತು ಕೇಳದ ಮಗನಗೊಡವೆ ಇನ್ನೇಕೆ ||ನೀತಿ ತಪ್ಪಿದ ದೊರೆಯ ಸೇವೆ ಇನ್ನೇಕೆ ? ಅನಾಥನಾಗಿರುವಗೆ ಕೋಪವಿನ್ನೇಕೆ ? 4ಅಳಿದುಳಿದಿಹ ಮಕ್ಕಳುಗಳಿನ್ನೇಕೆ ?ತಿಳಿದು ಬುಧ್ಧಿಯ ಹೇಳಿದ ಗುರುತನವೇಕೆ ?ನಳಿನನಾಭ ಶ್ರೀ ಪುರಂದರವಿಠಲನಚೆಲುವ ಮೂರುತಿಯ ಕಾಣದ ಕಂಗಳೇಕೆ 5
--------------
ಪುರಂದರದಾಸರು
ಹೆಣಗಿದರಾಗದು ಒಣತರ್ಕದಲಿದಣಿದರೆ ಕೂಡದು ಭಕುತಿವನಜಾಕ್ಷನ ಕೃಪೆ ಮನಸ್ಸಾಕ್ಷ್ಯಾದರೆತನ ತಾನಾಹದು ಮುಕುತಿ ಪ.ಸೂಕ್ಷ್ಷ್ಮತತ್ವದಿ ದಕ್ಷನೆನಿಸದೆದೀಕ್ಷಿತ ನಾಮಿದ್ದೇನುಅಕ್ಷರಬಲದಲಿ ಲಕ್ಷವು ವೃಥಾಗುರುಶಿಕ್ಷಿಲ್ಲದ ಜನುಮೇನುಭಿಕ್ಷುಕ ಧಾನ್ಯದ ಲಕ್ಷ್ಷ್ಯದಲಿ ಪದ್ಮಾಕ್ಷನ ಪೊಗಳಿದರೇನುಕುಕ್ಷಿಯ ಲಾಭವುಅಕ್ಷಯತೋಷದಮೋಕ್ಷೋಪಾಯವದೇನು 1ದ್ರವ್ಯಾದಿವ್ರಯ ಹವ್ಯಾದಿಕ್ರಯಅವ್ಯಯಜೀವ ಸ್ವಭಾವಾಖ್ಯಕಾವ್ಯರಚನೆ ಶಬ್ದ ವ್ಯಾಕರಣದಹವ್ಯಾಸವು ಇಹ ಸೌಖ್ಯಅವ್ಯಾಕೃತ ನಾಮಾವ್ಯವಹಾರಿಲ್ಲದನವ್ಯ ಕಥಾಜನಸಖ್ಯದಿವ್ಯಮೂರುತಿ ವೇದವ್ಯಾಸಜಭವಸೇವ್ಯನ ನಿಷ್ಠೆಯೆ ಮುಖ್ಯ 2ಕಡು ಆದರದೊಳು ಕಡಲಳಿಯನ ಪದವಿಡಿಯದವನ ಶ್ರುತಿಶಾಸ್ತ್ರನಡುಹೊಳೆ ದಾಟುತ ತಡಿಯಲಿ ನಾವೆಯುಬುಡಮೇಲಾಯಿತು ವ್ಯರ್ಥದೃಢ ಪ್ರಸನ್ವೆಂಕಟ ಒಡೆಯನಾಚ್ಛಿನ್ನ ದಯಪಡೆದನುಗುರುಸುಖತೀರ್ಥನುಡಿಗಳ ಮಾಲೆಯ ತುಡುಗರ ತಮಸಕೆಬಡಿದಟ್ಟುವನು ಸಮರ್ಥ 3
--------------
ಪ್ರಸನ್ನವೆಂಕಟದಾಸರು