ಒಟ್ಟು 210 ಕಡೆಗಳಲ್ಲಿ , 66 ದಾಸರು , 160 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯೆಂದಿಗೆ ಬರುತೀಯೆ ಸುಂದರ ಭಾರತಿ ಮಂದರೋದ್ಧರನ ತೋರಿಸೆಂದೆ ನಾ ಬಂದೆ ಪ. ಅಂಧಕಾರಣ್ಯದೊಳು ನಿಂದು ತತ್ತರಿಸುವೆನು ತಾಯೆ ಕುಂದುಗಳೆಣಿಸಾದಿರು ಆನಂದ ತೋರು ಅ.ಪ. ಹರಿಗೆ ಕಿರಿಯ ಸೊಸಿ ವಾತನಸತಿಯು ನೀನು ಪ್ರಖ್ಯಾತಿವಂತಳೇ ಏಕಾಂತ ಭಕ್ತಳೇ ತ್ರಿವಿಧ ಜೀವರೊಳಗೆ ನಿಂತು ತ್ರೀವಿಧ ಪ್ರೇರಣೆ ಮಾಡುವಿ ದೇನಿ ನಿನ್ನಾ ಮಹಿಮೆಗೆ ನಮೋ ಎಂಬೆ ಪುತ್ಥಳಿಯಾ ಬೊಂಬೆ 1 ಮಂದರೋದ್ಧರನ ಪಾದಸೇವಕಳೇ ನಿನಗೀಡೆ ನಲಿದಾಡೆ ಒಂದನಾದರೂ ಮಾತನಾಡೆ ವರಗಳ ನೀಡೆ ದಯಮಾಡಿ ನೋಡೆ ತವಪಾದವ ಕೊಡೆ ಕರವ ಜೋಡಿಸಿ ಬೇಡುವೆನಿಂದು ನಾ ಬಂದು 2 ಗರುಡ, ಶೇಷ ರುದ್ರಾದಿಗಳೊಡೆಯಳೇ ನೀನು ನಿನ್ನಡಿಗಳಿಗೆರಗುವೆ ನಾನು ತಡಮಾಡ ಬ್ಯಾಡಮ್ಮಾ ನಡೆದು ಬಾರಮ್ಮ ಭವ ಮಡುವಿನೊಳಗಿರುವೆನು ತೋರಿಸೋ ದಯಪಾಲಿಸೋ 3
--------------
ಕಳಸದ ಸುಂದರಮ್ಮ
ರಕ್ಷಿಸು ಮಹಮಾಯೆ ಕರುಣ ಕ- ಟಾಕ್ಷದಿಂದಲಿ ತಾಯೆ ಪ. ದಾಕ್ಷಾಯಿಣಿ ದೈತ್ಯಾಂತಕಿ ವರ ನಿಟಿ- ಲಾಕ್ಷನ ರಾಮಿ ನಿರೀಕ್ಷಿಸು ಜನನೀಅ.ಪ. ವಾಸವಮುಖವಿನುತೆ ರವಿಸಂ- ಕಾಶೆ ಸುಗುಣಯೂಥೇ ಭಾಸುರಮಣಿಗಣಭೂಷೆ ತ್ರಿಲೋಕಾ- ಧೀಶೆ ಭಕ್ತಜನಪೋಷೆ ಪರೇಶೆ1 ಗುಹಗಣಪರಮಾತೆ ದುರಿತಾ- ಪಹೆ ದುರ್ಜನ ಘಾತೆ ಬಹುಕಾಮಿತಪ್ರದೆ ಭಜಕಜನೋರ್ಜಿತೆ ಮಹಿತೆ ಯೋಗಿಹೃದ್ಗುಹನಿವಾಸಿನಿಯೆ2 ಶುಂಭಾಸುರಮಥಿನಿ ಸುರನಿಕು- ರುಂಬಾರ್ಚಿತೆ ಸುಮನಿ ರಂಭಾದಿಸುರನಿತಂಬಿನೀ ಜನಕ- ದಂಬಸೇವಿತಪದಾಂಬುಜೆ ಗಿರಿಜೆ3 ಅಷ್ಟಾಯುಧಪಾಣಿ ಸದಾಸಂ- ತುಷ್ಟೆ ಸರಸವಾಣಿ ಸೃಷ್ಟಿಲಯೋದಯಕಾರಿಣಿ ರುದ್ರನ ಪರಾಕು ಕಲ್ಯಾಣಿ4 ನೇತ್ರಾವತಿ ತಟದ ವಟಪುರ- ಕ್ಷೇತ್ರಮಂದಿರೆ ಶುಭದಾ ಸುತ್ರಾಣಿ ಲಕ್ಷ್ಮೀನಾರಾಯಣಿ ಸ- ರ್ವತ್ರ ಭರಿತೆ ಲೋಕತ್ರಯನಾಯಕಿ5
--------------
ತುಪಾಕಿ ವೆಂಕಟರಮಣಾಚಾರ್ಯ
ರಕ್ಷಿಸೆ ಏಕನಾಥೆ ತಾಯೆ ದಯದಿಂದ ಎನ್ನನು ಸೊಕ್ಕಿದ ದೈತ್ಯ ಸಂಹಾರೆ ಶರಣ ಜನೋದ್ಧಾರೆ ಪ. ದುರಿತ ದುಃಖ ನಿವಾರಿ ಶರಣರ ಸಲಹುವ ದಾತೆ ಖಳರೆದೆಗಂತೆ ನಿಡಿ ಗುರುಳ ಬಾಲೆ ಪಲ್ಲವಪಾಣಿ ಸುರರ ನಾಯಕಿ ಅಖಿಲದೇವಮಾತೆ ವಿಖ್ಯಾತೆ 1 ಅಳುವಾಡುವ ರಂಗನ ಅದೇನರಿತು ಭಂಗ ಬಾಳ ಬಡಿಸಿದೆಯವ್ವ ಭಕ್ತರುದ್ಧಾರಿ ಕಾಳಗದೊಳು ಕಂಠೀರವೆ ಕರೆದಭಯವನೀವೆ ಸುಕೃತ ಪಂಥಗಾರ್ತಿ 2 ಹಿಂಡು ಭೂತಂಗಳಿಗೆಲ್ಲ ಹೆಚ್ಚಿನ ಬಿರುದನೆ ತಾಳ್ದೆ ಚಂಡಿ ಚಾಮುಂಡಿ ತ್ರೈಲೋಕ್ಯನಾಥೇ ಕಂಡು ನಮಿಸುವರ ಕಾಯ್ವೆ ಕಾಮಿತದಾತೆ 3 ಇಂದ್ರಾದಿ ದಿಕ್ಪಾಲಕರು ವಂದಿಸಿ ಸ್ತುತಿಮಾಡಲವರ ಬಂಧನವ ಪರಿಹರಿಸಿದೆಯೆ ಚಂದ್ರಮುಖಿಯೆ ಇಂದು ಬಂದ ಬಂಧನವ ಬಿಡಿಸಿ ಎಂದೂ ಎನ್ನ ನೀ ಕಾಯೆ ತಾಯೆ 4 ಮಲೆತ ಮಹಿಷಾಸುರನ ಕೊಂದೆ ಮಲೆಬೆನ್ನೂರಿನಲಿ ನಿಂದೆ ಬಲುನೇಮವಂತೆ ಸಂತೆಹರವಿಲೆ ನಿಂತೆ ಪುಲ್ಲಲೋಚನೆ ಪ್ರಖ್ಯಾತೆ ಪರಶುರಾಮನ ಮಾತೆ ಹೆಳವನಕಟ್ಟೆ ರಂಗನ ಸಹೋದರಿ5
--------------
ಹೆಳವನಕಟ್ಟೆ ಗಿರಿಯಮ್ಮ
ರಘುಪತಿಯಾ ತೋರಮ್ಮಾ | ರಾಜೀವಾಂಬರೆ ಬಾರಮ್ಮಾ ಪ ಭಕುತರಾ - ಭೀಷ್ಟೇಯನು | ಪೂರಿಸುವನಾ ಅನುದಿನ ಕಾವನಾ | ನಿನ್ನಯ ಜೀವನಾ ಅ.ಪ ಸರಸಾ ಕೋಕಿಲಾಲಾಪೆ | ಸಕಲಾ ಮಂಗಳ ರೂಪೆ || ಸದ್ಗುಣ ಧಾಮನಾ | ದಶರಥ ರಾಮನಾ 1 ವಸುಧಾಕಾಯ ಸಂಭೂತೆ | ವರದೇವೇದ ವಿಖ್ಯಾತೆ || ಅಸಮಧನು ವನೆತ್ತ್ಯಭಯವಿತ್ತನಾ | ನಿನಗೊಲಿದಾತನಾ | ರಘುಕುಲಜಾತನಾ 2 ಶರಣೆಂಬೆ ಮಹಾಮಾಯೆ ಸಲಹಬೇಕೆನ್ನತಾಯೆ ಗುರು ಮಹಿಪತಿಸ್ವಾಮಿ | ಜಗದಯ್ಯನಾಪವನಜ ಪ್ರಿಯನಾ ಸುರಮುನಿಧೇಯನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಜಮುಖೀ ಬೇಗ ಪ. ಚಿತ್ರವಿಚಿತ್ರಮಾಗಿ ಮೆರೆವ ರತ್ನಖಚಿತ ಮಂಟಪದಿ ಕೆತ್ತನೆಯ ಹಸೆಯಮೇಲೆ ರತ್ನಗಂಬಳಿಯ ಹಾಸಿ 1 ಪರಿಪರಿಯ ರಾಗದಿಂದ ತರುಣಿಯರು ನಿನ್ನ ಪಾಡಿ ಕರೆಯುತಿಹರೋಳ್ ಕರುಣೆಯಿರಿಸಿ ಅರಸನೊಡನೆ ಸರಸದಿಂದ2 ಪಂಕಜಾಕ್ಷಿ ನಿನ್ನ ಚರಣಕಿಂಕರರ ಮೊರೆಯ ಕೇಳಿ ಕನಕಪೀಠದಲ್ಲಿ ಕುಳಿತು ಕಾಂಕ್ಷಿತಾರ್ಥವಿತ್ತು ಸಲಹು 3 ಪರಮಪುರುಷ ಶೇಷಶೈಲವರದನರಸಿ ನಿನ್ನ ಗುಣವೆ ಸ್ಮರಿಸಿ ಸ್ಮರಿಸಿ ಕರೆಯುತಿರುವ ತರಳೆಯರಂ ಪೊರೆಯೆ ತಾಯೆ4
--------------
ನಂಜನಗೂಡು ತಿರುಮಲಾಂಬಾ
ಲಕ್ಷ್ಮೀದೇವಿ 13 ಭಾಗ್ಯವ ಕೊಡು ತಾಯೆ ಪ ಭಾರ್ಗವಿ ನಿನ್ನಯ| ಪದಯುಗಕೆರಗುವೆ| ಭಾಗ್ಯದ ಲಕ್ಷ್ಮೀ ಸೌ| ಭಾಗ್ಯದ ನಿಧಿಯೇ ಅ. ಪ ಸಾಗರಸಂಜಾತೆ| ದೇವಿ| ನಾಗವರದಪ್ರೀತೆ || ಯೋಗಿಜನಾವಳಿ| ಮಾನಸಪೂಜಿತೆ | ಅಗಣಿತಗುಣಮಣಿ| ತ್ರಿಜಗದ್ವಂದಿತೆ 1 ಸುರುಚಿರಸುಮಗಾತ್ರೆ | ದೇವಿ| ಹಿಮಕರನಿಭವಕ್ತ್ರೆ || ಕಿನ್ನರ | ಸುರಮುನಿ ಪೂಜಿತೆ | ಕಾಮಿತವೀಯುವ || ಕರುಣಾಕರೆಯೆ 2 ಜನನಿಯೆ ನಿರತವು ನೀ | ಪ್ರೇಮವ | ನಿರಿಸುತಲೆನ್ನೊಳು ನೀ | ಕನಕದ ವೃಷ್ಟಿಯ | ಕರೆಯುತಲನುದಿನ | ಮನ್ಮನದಿಷ್ಟವು | ಸಿದ್ಧಿಸುವಂದದ 3 ಅಹಿಪತಿ ಶಯನನಿಗೆ | ಮೋಹದ | ಮಹಿಷಿಯು ನೀನಾಗೆ || ಮಹಿಮಾಕರೆ ನೀ | ಮಹಿಯೊಳಗನಿಶವು | ಇಹಪರ ಸುಖವನು | ಭವಿಸುವ ತೆರದಾ 4 ಅಜಭವಸುರವಿನುತೆ | ದೇವಿ | ಸುಜನಾವಳಿಪ್ರೀತೆ || ಗಜವಾಹಿನಿ ವರ | ಮದಗಜಗಮನೆಯೆ | ವಿಜಯವಿಠಲಪ್ರಿಯೆ ಶ್ರೀ ಗಜಲಕ್ಷ್ಮಿಯೆ 5 ಶುಭ | ಮಂಗಳೆ ಸುಪವಿತ್ರೆ || ಮಂಗಳಾಂಗಿ ನರ | ಸಿಂಗನ ರಮಣಿಯೆ | ಮಂಗಳಕಾರ್ಯಗ | ಳನುದಿನವೆಸಗುವ 6 ಪಂಕಜದಳನೇತ್ರೆ | ದೇವಿ | ಕಿಂಕರನುತಿಪಾತ್ರೆ || ಶಂಖಚಕ್ರಾಂಕಿತ | ಶ್ರೀ ವೈಕುಂಠನ |ಅಂಕದಿ ಮೆರೆವಖಿ | ಳಾಂಕ ಮಹಿಮಳೇ 7
--------------
ವೆಂಕಟ್‍ರಾವ್
ಲಕ್ಷ್ಮೀದೇವಿ ಕಮಲಾಕ್ಷಿ ತಾಯೆ ಸೂಕ್ಷ್ಮಮತಿಯನಿತ್ತು ಪೊರೆದು ರಕ್ಷಿಪದೇವಿ ಪ ಹರಿಯರಾಣಿ ಭುಜಗವೇಣಿ ಪರಿಪರಿಯ ಕ್ಲೇಶಗಳಳಿವ ದುರಿತದೂರನ ಕರಪಿಡಿಯುತ ಬಾ ಪರಿ ವೈಭವದಿ 1 ವಂದಿಸುವೆ ನಿನ್ನ ಪದಕೆ ಅಂಬುಜಾಕ್ಷಿ ಕರುಣವ ಮಾಡಿ ಕಂಬು ಕಂಧರನೊಡಗೂಡುತ ಬಾ ಸಂಭ್ರಮ ಸೂಸುತಲಿ 2 ಗೆಜ್ಜೆ ಪೈಜನಿ ಪಾಡಗರುಳಿಯು ಸಜ್ಜಾಗಿಹ ಕಾಲುಂಗುರ ಧ್ವನಿಯ ಮೂರ್ಜಗದೊಡೆಯನ ಕರಪಿಡಿಯುತ ಬಾ ಸಜ್ಜನ ರಕ್ಷಕಳೆ 3 ನಡುವಿಗೆ ನವರತ್ನದ ಪಟ್ಟಿ ಬಿಡಿಮುತ್ತುಗಳುದುರುವ ಪೀತಾಂಬರ ಬಡನಡÀು ಬಳುಕುತ ಅಡಿ ಇಡು ಬಾ ನಿ- ನ್ನೊಡೆಯನ ಕೂಡುತಲಿ 4 ಕರದಲಿ ಕಂಕಣ ಹಾಸರ ಬಳೆಗಳು ಬೆರಳಲಿ ಉಂಗುರ ಥಳಥಳಿಸುತಲಿ ಗರುಡಗಮನ ನೊಡಗೂಡುತ ಬಾ ಬಾ ಗರುವವು ಮಾಡದಲೆ5 ವಂಕಿನಾಗಮುರುಗಿ ಕರದಲಿ ಬಿಂಕದಿ ಪಿಡಿದಿಹ ತಾವರೆ ಕುಸುಮವು ಪಂಕಜಾಕ್ಷನೊಡಗೂಡುತ ಮನ ಶಂಕೆಯು ಮಾಡದಲೆ6 ಕಠ್ಠಾಣಿಸರ ಪದಕಗಳ್ಹೊಳೆಯುತ ಕಟ್ಟಿದ ಉಂಗುರಡ್ಡಿಕಿ ಶೋಭಿಸುತ ಚಿತ್ತಜನಯ್ಯನನೊಡಗೂಡುತ ಬಾ ಮತ್ತೆ ಹರುಷದಲಿ 7 ಥಳಥಳಿಸುವ ಗಲ್ಲಕೆ ಅರಿಶಿನವು ನಲಿಯುವ ಮೂಗುತಿ ಮುಖುರ ಬುಲಾಕು ಹೊಳೆವ ಮೀನು ಬಾವಲಿ ಚಳತುಂಬುಗಳ್ಹೊಳೆಯುತ ಘಳಿಲನೆ ಬಾರಮ್ಮ 8 ಕುರುಡಿ ಬಾವಲಿ ಬುಗುಡಿ ಚಂದ್ರ ಮುರುವಿನ ಕಾಂತಿ ಮುಗುಳ್ನಗೆ ಮುಖವು ಉರುಗಾದ್ರೀಶನ ಕರಪಿಡಿಯುತ ಬಾ ಕರೆ ಕರೆ ಮಾಡದಲೆ 9 ಘಣೆಯಲಿ ಕುಂಕುಮ ಬೈತಲೆ ಬಟ್ಟು ಥಳಥಳಿಸುವ ಕಣ್ಣಿಗೆ ಕಪ್ಪಿಟ್ಟು ಎಳೆಬಾಳೆಯ ಸುಳಿಯಂದದಿ ಬಳುಕುತ ಘಳಿಲನೆ ಬಾರಮ್ಮ10 ಕೆಂಪಿನ ರಾಗುಟಿ ಜಡೆ ಬಂಗಾರವು ಸಂಪಿಗೆ ಮಲ್ಲಿಗೆ ಸರಗಳ ಮುಡಿದು ಸೊಂಪಿಲಿ ಶ್ರೀ ಹರಿಯೊಡನಾಡುತ ನಲಿಯುವ ಸಂತಸ ತೋರಮ್ಮ11 ಇಂದಿರೆ ಶ್ರೀರಮೆ ಭಾರ್ಗವಿಯೆ ನಂದತ್ರಯಾ ಸದಾಸುಶೀಲೆ ಸುಗಂಧಿ ಸುಂದರಿ ಮಂದಗ ಮನೆಯೆ ಚಂದದಿ ಬಾರಮ್ಮ 12 ಸುತ್ತೆಲ್ಲ ಸುರಸ್ತ್ರೀಯರು ಮುತ್ತಿನ ಛತ್ರ ಚಾಮರದರ್ಪಣ ಪಿಡಿದು ನೃತ್ಯಗಾಯನ ಮಾಡುತ ಕರೆವರು ಸತ್ವರ ಬಾರೆನುತ 13 ಶ್ರಮ ಪರಿಹರಿಸೆನುತಲಿ ಬೇಡುವೆನು ಮಮತೆಲಿ ಕರಗಳ ಮುಗಿಯುತ ಬೇಡಲು ಕಮಲನಾಭ ವಿಠ್ಠಲನೊಡನೆ ಶ್ರೀ- ಕಮಲೆಯು ಬರುತಿಹಳು14
--------------
ನಿಡಗುರುಕಿ ಜೀವೂಬಾಯಿ
ಲೋಕಮಾತೆಯೆ ದಯಮಾಡೆ ತಾಯೆ ಪರಿ ಪೂಜಿಪೆ ಶ್ರೀಪತಿಯ ಸತಿಯೆ ಪುಲ್ಲನಾಭನ ಕೂಡಿ ಮೆಲ್ಲಡಿ ಇಡುತಲಿ ಉಲ್ಲಾಸದಿಂದಲಿ ಬಂದು ಕಾಯೆ ತಾಯೆ 1 ನಿತ್ಯ ಮಂಗಳನಾಗೆ ಅಚ್ಚುತನರಾಣಿ ನಿಚ್ಚದಿ ಭಕ್ತಿ ಜ್ಞಾನವಿತ್ತು ಕಾಯೆ ತಾಯೆ 2 ವಕ್ಷಸ್ಥಳದಲಿ ನಿಂತೂ ಕಾಯೆ ತಾಯೆ ಪಕ್ಷಿವಾಹನ ರುಕ್ಮಿಣೀಶ ವಿಠಲನ ರಾಣಿ 3
--------------
ಗುಂಡಮ್ಮ
ವಂದಿಸುವೆನೆಲೆ ತಾಯೆ ವಂದಿತಾಮರೆಯೆ ಪ. ಶ್ರೀಕಲಶಾಬ್ಧಿಕನ್ಯೆ ಸುರಕುಲಮಾನ್ಯೆ ಶ್ರೀಕರ ಗುಣಪೂರ್ಣೆ ಶೋಕಾಪಹರಣೆ ಲೋಕನಾಯಕೆ ಘನ್ನೆ ಪಾಕಶಾಸನಸುತೆ ಪವನಜಸೇವಿತೆ ಸಾಕೇತನಿಲಯೆ ಸರಾಗದಿ ರಕ್ಷಿಸು 1 ಆನತನುತ ಗೀರ್ವಾಣಿ ಅಂಬುಜಪಾಣಿ ಮಾನಿನೀಮಣಿ ಕಲ್ಯಾಣಿ ಭಯವಾರಿಣಿ ಭಾವಜಾತ ಜನನೀ ಭಾಗವತಾರ್ಚಿತೆ ಭಕ್ತಾಭಯಪ್ರದಾತೆ ಬಾಗುತೆ ಶಿರ ನಿನಗೇಗಳುಂ ಮನವಾರೆ 2 ಅರಿಯೆನು ನಿನಗೆಣೆಯಾರ ಕಾಣೆನು ಹಿತರ ಚರಣವ ನಂಬಿದೆ ಮನವಾರ ಪಿಡಿಯೆನ್ನ ಕರವ ಕರುಣದಿ ನೋಡೆನ್ನಿರವ ಪರಮಪಾವನ ಶೇಷಗಿರೀಶನ ಕರುಣಾರೂಪಿಣಿ ಜಗತ್ಕಾರಿಣಿ3
--------------
ನಂಜನಗೂಡು ತಿರುಮಲಾಂಬಾ
ವರವ ಕೊಡೆ ತಾಯೆ ವರವ ಕೊಡೆ ಪ. ಶರಧಿಯ ಕನ್ನೆ ನೀ ಕೇಳೈ ಸಂಪನ್ನಳೆ ಸೆರಗೊಡ್ಡಿ ಬೇಡುವೆನಮ್ಮ ವರವ ಕೊಡೆ ನೆರೆ ನಂಬಿದೆನು ನಿನ್ನ ಚರಣಕಮಲವನು ಪರಿಹರಿಸೆಮ್ಮ ದಾರಿದ್ರ್ಯ ಕಷ್ಟವ ತಾಯೆ1 ಹೊಳೆವಂಥ ಅರಸಿನ ಹೊಳೆವ ಕರಿಯ ಮಣಿ ಸ್ಥಿರವಾಗಿ ಕಟ್ಟುವಂಥ ವರವ ಕೊಡೆ ತಾಳೋಲೆ ಹೊನ್ನೋಲೆ ತೊಳೆದೊಯ್ದ ಬಿಚ್ಚೋಲೆ ಯಾವಾಗಲಿರುವಂಥ ವರವ ಕೊಡೆ 2 ಬಾಗಿಲ ತೋರಣ ಮದುವೆ ಮುಂಜಿ ನಾಮಕರಣ ಯಾವಾಗಲಾಗುವಂಥ ವರವ ಕೊಡೆ ಬಂಧುಬಳಗ ಹೆಚ್ಚಿ ಹೆಸರುಳ್ಳ ಮನೆ ಕಟ್ಟಿ ಉಂಡಿಟ್ಟಿಡುವಂಥ ವರವ ಕೊಡೆ 3 ಹಾಲ ಕರೆಯುವ ಮೇಲಾದ ಸರಳೆಮ್ಮೆ ಸಾಲಾಗಿ ಕಟ್ಟುವಂಥ ವರವ ಕೊಡೆ ಕಂಡಕಂಡವರಿಗೆ ಕರೆದು ಮೃಷ್ಟಾನ್ನವ ತಿಳಿ ನೀರು ಕೊಡುವಂಥ ವರವ ಕೊಡೆ 4 ಲಕ್ಷ್ಮೀನಾರಾಯಣನ ವಕ್ಷಸ್ಥಳದಲ್ಲಿ ಲಕ್ಷ್ಮಣವಾಗಿರುವಂಥ ಮಹಾಲಕ್ಷ್ಮಿ ಅಷ್ಟೈಶ್ವರ್ಯವು ಪುತ್ರಸಂತಾನವ ಕೊಟ್ಟು ರಕ್ಷಿಸುವವಮ್ಮ ವರವ ಕೊಡೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ವಾರುಣೀ - ಮಜ್ಜನನಿಯೆ - ವಾರುಣೀ ಪ ಸೂರಿ ಪರಿ ಪಾಹಿ ಅ.ಪ. ಪರಿ | ಕಾರ್ಯವ ಮಾಡಿಸು 1 ಪತಿಗೆ ಶತಾವರ ಗುಣಿಯೇ | ಹರಿಸತಿಯರಾರು ಮಂದಿಗೆಣೆಯೆ | ಉಕ್ತಸತಿಯರಿಗೆರಡೂನ ಗುಣಿಯೆ | ಕೇಳುಸ್ತುತಿ ಪಂಚರಾತ್ರ ಮಾನಿಯೆ | ಆಹವಿತತ ಮಹಿಮ ಹರಿ | ಅತಿಶಯ ಗುಣಗಳಸತತದಿ ತುತಿಸುವ | ಮತಿಯನೆ ಕೊಡು ತಾಯೆ 2 ಪರಿ ಪರಿ ಪರಿ ವಿಧದಿಂದ 3
--------------
ಗುರುಗೋವಿಂದವಿಠಲರು
ವಿಜಯ ಭೈರವಿ ತಾಯೆ ವಿಶ್ವೇಶಿ ಮಹಾಮಾಯೆ ಸ್ವಜನನೆಂದೆನ್ನ ಕಾಯೆ ಕುಜನ ಕೃತ್ಯಗಳನ್ನು ಕಾಲಿಂದಲೊರಸು ಕಂ- ಬುಜನೇತ್ರೆ ಕರುಣಾಸುಧೆಯ ನೀಡು ದಯಮಾಡು ಪ. ಪರಿ ಪರಿಯಲಿ ದೇಹ ಕರಗಿಸುತಿಹ ನಾನಾ ದುರಿತ ಕಾರಣವೇನೆಂದರಿಯದಲೇ ಮರುಗುತಲಿರೆಯಿಂದಿನಿರುಳ ಸ್ವಪ್ನದಿ ಬಂದು ಹರಿಯ ಚಿತ್ತದ ರೀತಿಯರುಪಿ ತ್ವರಿತದಿ 1 ಶರಣು ಜನ ಮಂಥಾರ ಶಾಶ್ವತ ತರಣಿ ಕೋಟಿ ಸಮಾನ ಭಾಸುರ ಚರಣ ಕಮಲಗಳನ್ನು ಶಿರದಲಿ ನಿರಪದಿಯೊಳಿಟ್ಟಿರವ ತೋರಿಸು 2 ಪಂಚ ವಿಂಶತಿ ತತ್ವ ಪರಿಭಾಸೆ ಪುರುಶಕ್ತಿ ಪಾಂಚ ಭೌತಿಕ ದೇಹ ಗತ ಬಾಧೆಯ ಕೊಂಚವಲ್ಲದೆ ಹರವಂಚವಾಗಿರುವೆ ವಿ- ರಿಂಚಿಯ ಜನನಿ ನಿಷ್ಕಿಂಚನ ಜನವಂದ್ಯೆ 3 ಪಾಂಚಜನ್ಯೋದಕವ ಸೇಚಿಸಿ ಪಂಚಕರಣಕೆ ಮಾರ್ಗ ಸೂಚಿಸಿ ಪಂಚವರ್ನದ ಶು ....... * 4
--------------
ತುಪಾಕಿ ವೆಂಕಟರಮಣಾಚಾರ್ಯ
ವಿದ್ಯಾಕಾಂತಯತಿಗಳ ಕೀರ್ತನೆ ಕಾಪಾಡಬೇಕೆಂದು ಗೋಪಾಲ ಕೃಷ್ಣಗೆ ನೀ ಪೇಳಬಾರದೆ ರುಕುಮಿಣಿ ನೀ ಪೇಳಬಾರದೆ ಸತ್ಯಭಾಮ ಪ ಪಾಪ ಮಾಡುವನೆಂದು ಕೋಪ ಮಾಡಿದಿರೆಂದು ನಾ ಪಾದಪದುಮಕ್ಕೆ ಶರಣೆಂಬೆ ತಾಯೆ 1 ನಿಮ್ಮ ನುಡಿಗಳಿಂದ ಸಮ್ಮತಿಸುವ ದೇವ ಸುಮ್ಮನೆ ತಿಳಿಸೆನ್ನ ಹಡದಮ್ಮ ತಾಯೆ 2 ಏನೊ ಪೇಳಿದನೆಂದು ನೀನೂಪೇಕ್ಷಿಸದಲೆ ಜಾನಕಿದೇವಿ ಪೇಳೆ ರಘೂಪತಿಗೆ ತಾಯೆ3 ಪಾದ ನಂಬಿದವರಿಗೆ ಮೋದವ ಕೊಡುವಂಥ ವೇದವ್ಯಾಸಗೆ ರಮೆ ತಿಳಿ ಹೇಳೆ ತಾಯೆ 4 ವಿದ್ಯಾಕಾಂತನ ಮನವಿದ್ದಂತೆ ಒಲಿಯುವ ಸದ್ದಯಾನಿಧಿ ನಮ್ಮ ನರಸಿಂಹ ತಾಯೆ 5 (ವಿದ್ಯಾಕಾಂತತೀರ್ಥರು (1824) ವ್ಯಾಸರಾಜ ಮಠದ 16 ನೇ ಯತಿಗಳು)
--------------
ವ್ಯಾಸತತ್ವಜ್ಞದಾಸರು
ವೃಂದಾವನಿ ದೇವಿ ತಂದೆ ಮಹಿಪತಿ ಪಾದಾ | ದ್ವಂದ್ವವೆನಗೆ ತೋರಮ್ಮಾ ಪ ಗೊಪ್ಪಿಸು ವಂದದ ಲೀಗ ಒಪ್ಪುವಂಘ್ರಿಯಾ ಬಿಗಿದಪ್ಪುವೆ ಮನದಿಂದೆ 1 ಚಾತಕ ನಲಿದು ಜೀಮೂತ ಬಯಸುವಂತೆ | ಶೀತಾಂಶುವಿಗೆ ಚಕೋರಾ | ಪರಿಧಾತು ವಾಗಿದೆಯನ್ನ2 ಹರಿದಯ ಪಡೆದರಂತೆ | ಮರೆಯದೆ ಹೃದಯ ಮಂದಿರದಿ ಚಿದ್ಘನ ಗೋ | ಚರಿಸುವಾ ಪರಿಯಲಿ ಕರುಣಿಸೆನಗೆ ತಾಯೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವೇಣುಗೋಪಾಲನಿಲಯೇ ವೀಣಾವಿನೋದವಲಯೇ ಪ ವಾಣಿ ಗೌರಿನುತೆ ತಾಯೆ | ಪ್ರಾಣತ್ರಾಣದಾತೆ ಸದಯೆ ಅ.ಪ ಬೃಂದಾವನ ವನವಾಸಿನಿ ಮಂದಾಕಿನಿ ಪ್ರಿತಮೋಹಿನಿ ಮಂದಾತ್ಮಜ ಸಹಚಾರಿಣಿ ಬೃಂದಾರಕ ಸುಖವರ್ಧಿನಿ 1 ಇಂದೀವರ ಸುಮಭೂಷಿಣಿ ವಂದೇ ಮಾಂಗಿರೀಶ ತೋಷಿಣಿ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್