ಒಟ್ಟು 141 ಕಡೆಗಳಲ್ಲಿ , 46 ದಾಸರು , 133 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸನ್ನುತ ವಿಠಲ | ಭಾರ್ಗವಿಯ ರಮಣಾ ಪ ಯೋಗ ಮಾರ್ಗದಲಿ ಹೃ | ದ್ರೋಗ ಹರಿಸಿವಗೇ ಅ.ಪ. ಮುಗ್ದ ತರಳನು ಇವಗೆ | ದಗ್ಧ ಪಾಪವ ಮಾಡಿಮಧ್ವ ಸಿದ್ಧಾಂತಗಳ | ಪಧತಿಯ ತಿಳಿಸೋ |ಕೃದ್ಧಖಳ ದುರ್ಯೋಗ | ವದ್ದು ಕಳೆದೂರಕ್ಕೆಬುದ್ಧಿ ಜನ ಸಂಯೋಗ | ಬದ್ಧವಾಗಲಿ ಇವಗೇ 1 ನಿತ್ಯ ಮಂಗಳನೇ 2 ಭಾವಿ ಬೊಮ್ಮರು ಹಾಗು | ಭಾವಿ ಮರುತರ ಕರುಣಭಾವುಕಗೆ ಇರುವುದನು | ಭಾವಿತವು ಅವಗೇಭಾವ ಉದ್ರೇಕ ಸ | ದ್ಭಾವ ಭಾವಿತ ನನ್ನನೀವೊಲಿದು ಕಾಯೊ | ಕೃಪಾವಲೋಕನದಿ3 ಹರಿ ನಿನ್ನ ವಾರ್ತೆಯಲಿ | ಇರಲಿ ರತಿ ಇವಗಿನ್ನುಗುರು ಹಿರಿಯರಾ ಸೇವೆ | ಪರಮ ಭಕುತಿಂದಾವಿರಚಿಸುವ ಸೌಭಾಗ್ಯ | ಕರುಣಿಪುದೊ ಶ್ರೀ ಹರಿಯೆಮರುತಾಂತರಾತ್ಮ ತವ | ಸ್ಮರಣೆ ಸುಖ ಕೊಡುತಾ 4 ಭವ | ರೋಗವನೆ ಪರಿಹರಿಸೋನಾಗೇಶ ಶಯ್ಯ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸಲಹು ಸಲಹು ಸಲಿಲಜನಯನಾ|ಎನ್ನಾ| ಇಳೆಯೊಳು ಮೊರೆಯ ಹೊಕ್ಕಿಹೆ ನಿನ್ನಾ ಪ ಕರುಣ ನೋಟಗಳಿಂದಲಿ ನೋಡಿ|ಸರ್ವ| ಭಾರ ಒಪ್ಪಿಸಿಕೊಂಡು ನಿಜ ನೀಡಿ| ದಾರಿದೋರುವ ಸುಮತಿಯ ನಿಲಿಸಿ|ಅತಿ| ತರಳನೆನುತ ಭಯವನೆ ಹರಿಸಿ 1 ಹರಿದುರಿತದ ಬಂಧನ ಬಲಿಯಾ|ತವ| ಚರಣದ ಭಕುತಿ ಕೊಡಲಿ ದೊರಿಯಾ| ಹರಿಗುಡದರಸನ ದಶಮುಖದಾ ಸಂಗ| ಲಿರಿಸು ದಾಸರ ಸಗಟವನೊದೆದಾ2 ತ್ರಿಪುಟಿಯ ಸಂಗ ಬಿಡಿಸು ಮನದಿ|ಎನ್ನ| ವಿಪುಳ ವಾಜಿಯೊಳಿರಿಸು ಧೃಡದಿ ಕೃಪೆಯಲಿ ಮಹಿಪತಿ ಸುತ ಪ್ರಾಣಾ|ಎನ್ನ| ಅಪರಾಧ ಕ್ಷಮಿಸಿ ಹೊರಿಯೊ ಪೂರ್ಣಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಿರಿವರನೆ ಮರೆಬಿದ್ದೆ ಶರಣಾಗತಪ್ರೇಮಿ ಪರಿಭವದ ಕಿರಿಕಿರಿಯ ಪರಿಹರಿಸು ಸ್ವಾಮಿ ಪ ಅಡಿಗಡಿಗೆ ರಿಣಕೊಟ್ಟ ಒಡೆಯರತಿಕಿರಿಕಿರಿಯು ಇಡತೊಡಲಿಕ್ಕಿಲ್ಲೆಂಬ ಮಡದಿಕಿರಿಕಿರಿಯು ಎಡಬಿಡದೆ ಹಸೆತೃಷೆಯ ಕಡುತರದಕಿರಿಕಿರಿಯು ಕಡೆಹಾಯ್ಸು ಕಡುಬೇಗ ತಡೀಲಾರೆನಭವ 1 ಮಾಡುಣಲು ಕಿರಿಕಿರಿಯು ಬೇಡುಣಲು ಕಿರಿಕಿರಿಯು ನಾಡ ನಾಡ ತಿರುಗಲು ಕಡುಕಿರಿಕಿರಿಯು ಗೂಢದೊತ್ತಟ್ಟಿರಲು ಬಡತನದ ಕಿರಿಕಿರಿಯು ಖೋಡಿ ಕಿರಿಕಿರಿ ಬೇಡ ದೂರಮಾಡಭವ 2 ಕಿರಿಕಿರಿಲ್ಲದ ನಿನ್ನ ಚರಣದಾಸರ ನೆರೆಯು ಕರುಣಿಸಿ ನಿರುತದಿಂ ಪರಿಪಾಲಿಸಭವ ಶಿರಬಾಗ್ವೆ ಚರಣಕ್ಕೆ ನೀನೆ ಪರದೈವೆನಗೆ ತರಳನರಕೆಯ ಕೇಳು ವರದ ಶ್ರೀರಾಮ 3
--------------
ರಾಮದಾಸರು
ಸುರರ ಮೊರೆಯನೆಲ್ಲ ಕೇಳಿ ತರಳನೆ ವನದಿ ನರಹರಿ ರೂಪವ ತಾಳಿ ತೋರುತ ಧಾಳಿ ದುರುಳನ ಒಡಲನು ನಖದೊಳು ಸೀಳಿ ಕರುಳ ಮಾಲೆಯನು ಕೊರಳೊಳು ಧರಿಸಿದ ಸಿರಿವರಗಾರತಿಯ ಬೆಳಗಿರೆ ಶೋಭಾನೆ 1 ದುರಿತಾದ್ರಿಗಳನು ತರಿವ ಸ್ಮರಿಸುವ ದಾಸರ ಪೊರೆವ ಕರುಣಾಮೃತವನು ಶಿರದೊಳು ಸುರಿವಾ ಅರಿಪುಂಜವ ಕತ್ತರಿಸುತ ಮೆರೆವ ಕರವ ಪ್ರಲ್ಹಾದನ ಶಿರದೊಳಗಿರಿಸಿದ ಸರಸ ವರಗಾರತಿಯ ಬೆಳಗಿರೆ ಶೋಭಾನೆ 2 ಸುಲಲಿತ ಪದ್ಮೆಯ ವಕ್ಷ ಸ್ಥ ಳದಲಿ ನೆಲೆಗೊಳಿಸಿದಗೆ ಕಳವಳಿಸುವ ಭಕ್ತೌಘನ ಬೇಗದಿ ಸಲಹುತಹೋಬಲ ನಿಲಯದಿ ಶೋಭಿಪ ಚೆಲುವ ಶೇಷಗಿರಿ ವರನಿಗೆ ರತ್ನದ ತಳಿಗೆಯೊಳಾರತಿಯ ಬೆಳಗಿರೆ ಶೋಭಾನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿ ದಯಮಾಡೊ ಕರುಣದಿ ನೋಡೊ ತರಳನ್ನ ಮನ್ನಿಸಿ ಅಭಯವ ನೀಡೊ ಪ ನೆರೆನಂಬಿ ನಿನ್ನ ಮರೆಹೊಕ್ಕೆ ಕರುಣಾ ಭರಣನೆ ನಿಮ್ಮಯ ತೆರೆ ಕೃಪಾನಯನ1 ಹೆಜ್ಜೆ ಹೆಜ್ಜೆಗೆ ಘೋರ ಸಜ್ಜಿಲ್ಲ ಸಂಸಾರ ಸಜ್ಜನಸಂಪದನೆ ನಿರ್ಜರೇಶನೆ ಬಾರೊ2 ಮಾಯಾಮೋಹವ ಬಿಡಿಸಿ ಕಾಯೊ ಶ್ರೀರಾಮ 3
--------------
ರಾಮದಾಸರು
ಹರಿ ನಿನ್ನ ನಾಮದ | ಸ್ಮರಣೆಯ ನಾನು || ನಿರುತವು ಮಾಡುವೆ | ಪೊರೆಯೆನ್ನ ನೀನು ಪ ಶರಣರ ಪೊರೆವ| ಪರಮ ಪಾವನನು | ಕರುಣಾಳು ನಿನ್ನಯ | ಶರಣನಾಗಿಹೆನುಅ.ಪ ಕರಿರಾಜಗಿತ್ತೆ ನೀ | ವರ ಮುಕ್ತಿಪಥವ || ತರಳನಿಗೊಲಿದಿತ್ತೆ | ವರಧ್ರುವಪದವ 1 ಹರಿಯನು ತೋರೆಂದು | ಗರ್ಜಿಸಿ ಜರೆದ|| ದುರುಳನ ಬಗಿಯುತ್ತ| ತರಳನಿಗೊಲಿದ 2 ಕಾಮಿತಾರ್ಥವನಿತ್ತೆ| ಪ್ರೇಮದೊಳನಿಶ 3 ಮರಣದ ಸಮಯದಿ | ಕರೆದಜಾಮಿಳಗೆ|| ಪರಮಪದವನಿತ್ತು | ಕರುಣದಿ ಪೊರೆದ 4 ಅರಿತಾದರು ಮನ| ಕ್ಕರಿಯದೆ ಗೈದ || ದುರಿತಂಗಳಿರೆ ಪರಿ| ಹರಿಸೆಂದು ಸತತ 5 ನೀನಲ್ಲದೆನ್ನನು | ಪೊರೆಯುವರಿಲ್ಲ || ನಿನ್ನ ಸೇವೆಯ ಮಾಡ | ಲರಿಯೆ ನಾನಲ್ಲ6 ಇಹಪರಸುಖವಿತ್ತು | ಮುಕ್ತಿಯನೀವ || ಮಹಿಮನೆಂದರಿತಿಹೆ | ಭಕ್ತಸಂಜೀವ 7
--------------
ವೆಂಕಟ್‍ರಾವ್
ಹರಿದಾಸರಿಗೆ ಕಿಂಚಿತ್ತಳಿವಿಲ್ಲ ಮನವೆ ಹರಿಯನ್ನು ನೆರೆನಂಬು ಸರಿಯಾರು ನಿನಗೆ ಪ ದುರಿತ ಕೋಟ್ಯಾಚರಿಸಿ ನರಕಿಯಾದಜಮಿಳಗೆ ಮರಣಕಾಲದಿ ಸಂಸ್ಮರಣ ಮಾತ್ರದಿ ನರಕದ ಭಯತಪ್ಪಿ ಸ್ಥಿರಮುಕ್ತಿಪದವಾಯ್ತು ಅರಿದು ನೀ ಗಟ್ಟ್ಯಾಗಿ ಸ್ಮರಿಸು ಮಾಧವನ 1 ಹರಿಸರ್ವೋತ್ತಮನೆಂಬ ತರಳನಿಗೆ ಹಿರಣ್ಯ ಹರಿಯೆಲ್ಲಿ ತೋರದಿರೆ ಶಿರಹಾರಿಸಿಕಪೆನೆನಲು ನರಹರಿಯ ರೂಪದಿಂ ಭರದಿ ಕಂಬದಿ ಬಂದು ಹಿರಣ್ಯಕನ ಶಿರತರಿದು ಪೊರೆದ ಪ್ರಹ್ಲಾದನ 2 ಲಲನೆ ದ್ರೌಪದಿ ಲಕ್ಷ್ಮೀನಿಲಯನ ದಯದಿಂದ ಉಳಿದಳು ಮಾನದಿಂ ಖುಲ್ಲನ ಸಭೆಯಲಿ ಅನುದಿನ ಚಲಿಸದೆ ಮನವಂ ತಿಳಿದು ನೀ ಭಜಿಸೆಲೊ ಸುಲಭ ಶ್ರೀರಾಮ 3
--------------
ರಾಮದಾಸರು
ಹರಿಹರಿ ಹರಿಯೆನ್ನಿ ಮಂದರಧರನೆ ಗತಿಯೆನ್ನಿ ದೀನ ದಯಾಕರನು ದಿವಿಭುವಿ ಪ. ಮಾನ ಭರಾಕರನು ನೀನೆಂದೊರವರನು ದುರಿತ- ಹೀನರ ಮಾಡುವನು 1 ತರಳನ ಮೊರೆ ಕೇಳಿ ವರ ನರ ಹರಿಯ ರೂಪವ ತಾಳಿ ದುರುಳ ಹಿರಣ್ಯಕನಾ ಕರುಳನು ಕೊರಳೊಳು ಧರಿಸಿದನಾ 2 ಗಜರಾಜನ ಕಾಯ್ದಾ ಬಾಣನ ಭುಂಜ ಪುಂಜವ ಕೊಯ್ದಾ ಗಜಪುರವರಗೊಲಿದಾ ಚರಣಾಂ- ಬುಜವೀವುತ ನಲಿದಾ 3 ನೆನೆದಲ್ಲಿಗೆ ಬರುವಾ ನಂಬಿದ ಜನರ ಸಂಗಡವಿರುವಾ ಅನುಗಾಲವು ಪೊರೆವಾ ಮನಸಿಜ ಜನನಿಯನಪ್ಪಿರುವಾ 4 ದಾಸರ ಸಲಹುವದು ಶೇಷ ಗಿ- ರೀಶನ ಮಹಾ ಬಿರುದು ದೋಷಗಳನು ತರಿದು ಈರೆರ- ಡಾಸೆ ಪೂರಿಪ ನೆರೆದೂ 5
--------------
ತುಪಾಕಿ ವೆಂಕಟರಮಣಾಚಾರ್ಯ
ಉಗಾಭೋಗಕರುಣವಾರಿಧಿ ನೀ ಕರುಣವಾರಿಧಿಯಾದ ಕಾರಣಕರಿಕುಲಾಗ್ರಣಿಯನ್ನ ಕಾಯ್ದೆಉರಿಉರಗಬಾಧೆಯ ತಪ್ಪಿಸಿ ತರಳನಾರೈದೆಕರುಣವಾರಿಧಿಯಾದ ಕಾರಣಸುರರ ಸಂಕಟ ಹರಿದುಕನಕಪುರದರಸುತನ ಕೊಟ್ಟೆ ಪೌಲಸ್ತ್ಯ ಅನುಜಗೊಲಿದುಕರುಣವಾರಿಧಿಯಾದ ಕಾರಣಸ್ಮರಿಸುತಿಹಗಂಬರದಿ ನಿಲಿಸಿದೆಭರದಿ ಮುನಿ ಬಂದೆದೆಯನೊದೆದರೆ ಮರಳಿ ಮನ್ನಿಸಿದೆಕರುಣವಾರಿಧಿ ನೀನು ನಿನ್ನಯಕರುಣ ಪಾತ್ರರುಸಿರಿವಿಧಾತ್ರರುಪರಿಚರರ ಅಭಿಮಾನಿ ಪ್ರಸನ್ವೆಂಕಟರೇಯ ಮಾಸಹಾಯ 1
--------------
ಪ್ರಸನ್ನವೆಂಕಟದಾಸರು
ಎಂತಹ ಸಣ್ಣವನೆ-ನಿನ್ನ ಮಗನಂತಹರೆಲ್ಲಿಲ್ಲವೆ |ಹೊಂತಕಾರಿಬಲವಂತರಿಗಧಿಕನುಪತರಳನಂತಿಪ್ಪನು ತರಳೆಯರೊಡನಾಡುವ |ಕಿರುಬೆರಳುಗುರಲಿ ಗಿರಿಯನೆತ್ತಿದವ 1ಕಾಳಿಯ ಸರ್ಪನ ಕಾಲಲ್ಲಿ ತುಳಿದವ |ಪಲಾಯನ ಮಾಡಿ ಕಾಲಯವನನ ಸುಟ್ಟ 2ಕಿಚ್ಚು ಪಾನವ ಮಾಡಿ ಅಚ್ಚರಿ ತೋರಿದ |ರಚ್ಚೆಮಾಡುವಿರೆಂದು ಮುಚ್ಚಿಕೊಂಬುವಿಯಲ್ಲೆ3ಬಾಯಿ ತೆರೆದನಲ್ಲೆ ನೀನಂಜುವಂದದಿ |ಆಯಮಳಾರ್ಜುನರಾಯಾಸ ಬಿಡಿಸಿದ 4ದಿಟ್ಟತನದಿ ಮೊಲೆಗೊಟ್ಟವಳನು ಕೊಂದ |ಪುಟ್ಟ ಪುರಂದರವಿಠಲರಾಯನು 5
--------------
ಪುರಂದರದಾಸರು
ಎಂಥಾ ಕಾಲವು ಬಂತು ಯಾತಕೀ ಭ್ರಾಂತುಪಿಂತೆ ಮಾಡಿದಕರ್ಮತೀರ್ಚಬೇಕಾಯ್ತು ಪಸಂತೋಷದಲಿ ಶ್ರೀಹರಿಯ ಧ್ಯಾನಿಸುತಿರೆಕಂತುಪಿತನು ಕಾಯಕರುಣ ಸಂಜೀವಾ ಅ.ಪವಿಪ್ರಕುಲದೊಳುದಿಸಿ ಸುಧಾಮನುತಾಪತ್ರಯವನುಭವಿಸಿಸರ್ಪಶಯನ ಕಾಯೆಂದೊಪ್ಪಿಸಿದವಲಕ್ಕಿಅರ್ಪಿಸಿದರೆ ತಿಂದು ವರವಿತ್ತ ಶ್ರೀಕೃಷ್ಣ 1ಶರಣರ ಕುಲತಿಲಕ ಪ್ರಹ್ಲಾದನುಶಿರಿಪತಿ ಪ್ರಿಯ ಭಜಕಸರಿಯಲ್ಲೆನುತ ದೈತ್ಯ ಮಗನನು ಬಾಧಿಸೆನರಹರಿಯ ರೂಪದಿ ತರಳನ ಕಾಯ್ದ 2ಮಂದರಗಿರಿಧರನೂ ಧ್ರುವನಿಗೆಷ್ಟುಚಂದದ ವರವನಿತ್ತನೂಒಂದು ದಿನ ವ್ಯೂಹ ಸುತೃಷೆಗಳಿಲ್ಲದ ಲೋಕವಂದ ಸೃಜಿಸಿ ಗೋವಿಂದನೆ ಪೊರೆದಾ 3
--------------
ಗೋವಿಂದದಾಸ
ಕ್ಷಮಾ ಸಮುದ್ರ ನಿನ್ನ ಸಮಾನರಿಲ್ಲರಮಾ ಬ್ರಹ್ಮಾದಿಗಳು ಪೊಗಳೆ ಪಉಮೆಯರಸ ನಿನ್ನ ಚರಣಮಹಿಮೆ ತನ್ನತರುಣಿಯೊಡನೆ ಹಗಲಿರುಳು ಪೇಳುವ ದಿವ್ಯ ಅ.ಪಅರಿಯದೆ ಅಜಮಿಳತರಳನಾರಗನೆಂದುಮರಣ ಕಾಲದಿ ಒದರೆಸರಸೀಜಾಕ್ಷನು ತನ್ನ ಪರಿವಾರದವರೆಂದುಸಿರಿದೇವಿಯೊಳು ಪೇಳಿ ತ್ವರಿತದಿ ರಕ್ಷಿಸಿದ 1ನಕ್ರನ ಬಾಧೆಗೆ ಸಿಕ್ಕಿದ ಗಜರಾಜಚಕ್ರಪಾಣಿಯ ಭಜಿಸೆಆ ಕ್ಷಣದಿ ತನ್ನ ಚಕ್ರಕಾಙÉÕಯ ಮಾಡಿಲಕ್ಷ್ಮೀದೇವಿಗ್ಹೇಳದೆ ಪಕ್ಷಿ ಹೆಗಲೇರಿ ಬಂದ 2ಹಿರಣ್ಯಕಶ್ಯಪು ತನ್ನತರಳಪ್ರಹ್ಲಾದನಿಗೆಪರಿಪರಿ ಬಾಧೆ ಪಡಿಸೆಹರಿಯ ತೋರೆಂದು ಆರ್ಭಟಿಸಿ ನುಡಿಯೆ ದೈತ್ಯನರಮೃಗರೂಪನಾಗಿ ಭರದಿ ಕಂಬದಿ ಬಂದ3ಪತಿಗಳೈವರು ಲಕ್ಷ್ಮೀಪತಿಯ ಧ್ಯಾನದೊಳಿರೆಮತಿಹೀನನೆಳೆತರಲುಗತಿನೀನಲ್ಲದೆ ಮತ್ತೆ ಹಿತರೊಬ್ಬರಿಲ್ಲವೆನೆಅತಿಬೇಗದಿಂದ ಧರ್ಮಸತಿಗೆ ಅಕ್ಷಯವಿತ್ತ 4ಇದರಂತೆ ತರಳಧ್ರÀುವ ಒದಗಿದ ತಾಪದಿಂದಪದುಮನಾಭನÀ ಭಜಿಸೆಮುದದಿಂದಾತಗೆ ಧ್ರುವಪದವಿಯನಿತ್ತು ಕಾಯ್ದೆಪದುಮನಾಭನೆ ನಿನಗೆದುರುಂಟೆ ತ್ರಿಜಗದಿ 5ಘಣಿಶಾಯಿ ನಿನ್ನಗುಣಮಹಿಮೆಯ ಪೊಗಳಲುಅಹಿಭೂಷಣನಿಗಳವೆಕ್ಷಣ ಬಿಡದಲೆ ನಿನ್ನ ಚರಣಸೇವೆಯ ಮಾಳ್ಪಸಿರಿದೇವಿ ಅರಿಯೆನೆಂದೆನಲು ನಿನ್ನಯಗುಣ6ಕರುಣಾಸಾಗರ ದೇವ ವಿಮಲಸ್ವರೂಪನೆ ಕಮಲನಾಭ ವಿಠ್ಠಲಶರಣಜನರ ಬಹುತ್ವರದಿಂದ ಬಂದು ಕಾಯ್ದಪರಮದಯಾಳೊ ನಿನ್ನ ಚರಣಕ್ಕೆ ನಮೋ ಎಂಬೆ7
--------------
ನಿಡಗುರುಕಿ ಜೀವೂಬಾಯಿ
ಖ್ಯಾತಿಯಿಂದಪುರುಹೂತಸಹಿತ ಸುರ |ವ್ರಾತವು ನಿನ್ನನು ಒತ್ತಿ ಓಲೈಸಲು ||ಭೂತಳದೊಳು ಸಂಪ್ರೀತಿಗೆ ಸಿಲುಕಿ ನೀ |ಪಾರ್ಥನ ರಥಕೆ ಸೂತನಾದ ಮೇಲೆ 2ಪರಮಪುರುಷ ಪರಬೊಮ್ಮ ನೀನೆನುತಲಿ |ನಿರುತದಿ ಶ್ರೂತಿಯು ಕೊಂಡಾಡುತಿರೆ ||ವರಪಾಂಡವರರ ಮನೆಯೊಳುಊಳಿಗ|ಕರೆಕರೆದಲ್ಲಿಗೆ ಪೋದಪೋದ ಮೇಲೆ 3ಧುರದಲಿ ಪಣೆಯನೊಡೆದ ಭೀಷ್ಮನ ಸಂ- |ಹರಿಪೆನೆನುತ ಚಕ್ರವ ಪಿಡಿಯೆ ||ಹರಿನಿನ್ನ ಕರುಣದ ಜೋಡು ತೊಟ್ಟಿರಲವ- |ನಿರವ ಕಾಣುತ ಸುಮ್ಮನೆ ತಿರುಗಿದ ಮೇಲೆ 4ತರಳನು ಕರೆಯಲು ಭರದಿ ಕಂಬದಿ ಬಂದು |ನರಮೃಗರೂಪ ಭಕ್ತರ ತೆತ್ತಿಗನೆ ||ವರದ ಪುರಂದರವಿಠಲರಾಯ ನಿನ |ಸ್ಮರಿಪರ ಮನದಲಿ ಸೆರೆಯು ಸಿಕ್ಕಿದ ಮೇಲೆ 5
--------------
ಪುರಂದರದಾಸರು
ತೂಗಿರೆ ರಂಗನ್ನ ತೂಗಿರೆ ಕೃಷ್ಣನತೂಗಿರೆ ಅಚ್ಯುತಾನಂತನ ಪ.ತೂಗಿರೆ ವರಗಿರಿ ಅಪ್ಪ ತಿಮ್ಮಪ್ಪನತೂಗಿರೆ ಕಾವೇರಿ ರಂಗಯ್ಯನ ಅಪಇಂದ್ರಲೋಕದೊಳುಪೇಂದ್ರ ಮಲಗಿಹನೆಬಂದೊಮ್ಮೆ ತೊಟ್ಟಿಲ ತೂಗಿರೆಮಂದಗಮನೆಯರು ಚೆಂದದಿ ಪಾಡುತನಂದನ ಕಂದನ ತೂಗಿರೆ 1ನಾಗಲೋಕದಲ್ಲಿ ನಾರಾಯಣ ಮಲಗಿಹನೆಹೋಗಿ ನೀವ್ ತೊಟ್ಟಿಲ ತೂಗಿರೆನಾಗವೇಣಿಯರು ನಾಲ್ಕು ನೇಣನು ಪಿಡಿದುಭಾಗ್ಯವಂತನೆಂದು ತೂಗಿರೆ 2ಜಲಧಿಯೊಳಾಲದ ಎಲೆಯಲ್ಲಿ ಮಲಗಿದಚೆಲುವನ ತೊಟ್ಟಿಲ ತೊಗಿರೆಸುಲಭ ದೇವರ ದೇವ ಬಲಿಬಂಧಮೋಚಕಎಳೆಯನ ತೊಟ್ಟಿಲ ತೂಗಿರೆ 3ಸೂಸುವ ಮಡುವಿನೊಳ್ ಕಾಳಿಯನ ತುಳಿದಿಟ್ಟದೋಷವಿದೂರನ ತೂಗಿರೆಸಾಸಿರ ನಾಮದ ಸರ್ವೋತ್ತಮನೆಂದುಲೇಸಾಗಿ ತೊಟ್ಟಿಲ ತೂಗಿರೆ 4ಅರಳೆಲೆ ಮಾಗಾಯಿ ಕೊರಳ ಪದಕ ಸರತರಳನ ತೊಟ್ಟಿಲ ತೂಗಿರೆಉರಗಾದ್ರಿವಾಸ ಶ್ರೀ ಪುರಂದರವಿಠಲನಹರುಷದಿ ಪಾಡುತ ತೂಗಿರೆ 5
--------------
ಪುರಂದರದಾಸರು
ತ್ವರಿತಾ ಬಾರಯ್ಯ ಹೇ ಶ್ರೀಯರಸ ವೆಂಕಟ ದೀನ |ಸುರತರುವೆ ದೇವೇಶವರಾಹಭೂಧರಧಾಮ|ಕರುಣಾ ಪಯೋದಧೆ ಸರ್ವ ರಕ್ಷಿ ಕಂಧರದೊಳ- |ಗಿರುತಿಹ ನರಗಜ ವದನನೇ ಪಇಳಿಪತಿಗಳ ಕೂಡ ಕಲಹ ಮಾಡಿ ತೋರೆಂದುಅಂಗಲಾಚಲಾ ಕುಂತೀದೇವಿ |ಗೊಲಿದಾಸೆ ಪೂರ್ತಿಸಿ ಅನಿಲಜನಾಗ ನಿನ್ನ ತೇರೊ-ತ್ತಲು ಹಿಂದಕ್ಕೆ ನೀ ನಗು- |ತ್ತಲೆ ಮುಂದಕ್ಕೆ ಬಂದಿ ದೂರಲಾಘವವಾದಿಂದಂದೀಗಹಲವು ಜನರು ಬಹು |ಬಲುವಿಂದ ರಥವನೆಳೆದರೂ ಬಾರದಿದುಖಲು ಸೋಜಿಗವೆಲೆ |ಹಲಧರನನುಜ ಕಡಲ ಮನೆ ಕಾರವಡಲ ರವಿದಶ ಧರಖಳವಿಪಿನದ್ವಿದಲ 1ಬರಬೇಡವೆಲವೊ ನಮ್ಮ ಮಂದಿರಾಕೆಂದು ಬಹಳಾ ಬೈ-ದರೂ ಮುದದಿಂದ ಗೋಪಿ- |ಯರ ಸದ್ಮಕೆ ಪೋಗುವೆಜರಿದುನಿನ್ನನು ತಾನಾತರಳನ ಕಾಯ್ವೆನೆಂದಾ |ನರನ ತಪ್ಪೆಣಿಸದೆ ಕರೆಯದಲೆ ಪೋದೆ ನಿ-ನ್ನರಮನೆಯ ತನಕಲಿ |ಎರಡೇ ಘಳಿಗೆಯೊಳು ಪರಿಪರಿ ಭಕುತ ಜನರುಗಳು ಬಿನ್ನೈ-ಪರು ಬೀದಿಗಳೊಳು |ಮೆರೆಯುತಲೀಗಲೆ ಸರಸರ ಬರುವದುಪರಮಾಯಾಸವೇ 2ಮೀನಾಕ್ಷಿ ಯಶೋದೆ ನಿನ್ನನು ಪೊತಾನೆಂದುನುಣ್ಣನೆ ತೊಟ್ಟಿಲೊಳಿಟ್ಟು |ತಾ ನುಡಿಯಲು ಜೋಗುಳಾನು ಕೇಳ್ವೆ ಕಿವಿಗೊಟ್ಟುನಾನಾಗಮ ಸಮ್ಮತ |ಗಾನ ಮಾಳ್ಪುದು ವಿದ್ವಾಂಸಾನೀಕವೀಗ ನಿನ್ನಧ್ಯಾನಕೆ ಬಾರದೆಯೇನು |ನಿನ್ನ ಬಗೆ ತಾನರಿಯಳು ಶ್ರೀಮಾನಿನಿಖಗವಹಶ್ರೀನಿಧೆ ಮೂರೊಂದು |ಹಾನಿರಹಿತ ಗದಾಪಾಣಿ ಹರಿಯೇ ಶ್ರೀ-ಪ್ರಾಣೇಶ ವಿಠಲನೆ 3
--------------
ಪ್ರಾಣೇಶದಾಸರು