ಒಟ್ಟು 1348 ಕಡೆಗಳಲ್ಲಿ , 108 ದಾಸರು , 1005 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿಯಾಡುವೆನು ಸದ್ಗುರುವಿಗೆಆರತಿಯಾಡುವೆನು ಪ ಕಾಯವ ಜರೆಯುತ್ತಲಿಕೈಯನೆ ಮುಗಿಯುತಲಿಮಾಯವ ಹರಿಯುತಲಿಬಾಯಿ ಕೊಂಡಾಡುತಲಿ ಸದ್ಗುರುವಿಗೆ 1 ಕುಣಿ ಕುಣಿದಾಡುತಲಿಮನವನೆ ನೀಡುತಲಿಘನಮುಕ್ತಿ ಬೇಡುತಲಿಅನುಮಾನವ ಬಿಡುತಲಿ ಸದ್ಗುರುವಿಗೆ 2 ಅರಿವನೆ ಅರಿತುಗುರಿಯನೆ ಮರೆತುಪೂರವನೆ ಬೆರೆತುಗುರು ಚಿದಾನಂದನರಿತು ಸದ್ಗುರುವಿಗೆ 3
--------------
ಚಿದಾನಂದ ಅವಧೂತರು
ಆರತಿಯೆತ್ತಿದರು ಅಪ್ರಮೇಯಗೆ ಪ ಸಾರಸಮುಖಿಯರು ಸಂತೋಷದಿಂದ ಅ.ಪ ತರಳಗೋಸುಗ ಕಂಬ ಬಿರಿದು ಅವತಾರಗೈದು ದುರುಳನುದುರವ ಸೀಳಿ ಕರುಳ ಧರಿಸಿದವಗೆ 1 ದಾದಿ ಕಾರಣ ಪೂರ್ಣ ಭೋದಾಮೃತಮಯಗೆ 2 ಕಾಮುಕರನು ಕೊಂದು ಭೂಮಿ ಭಾರವನಿಳುಹಿ ಸ್ವಾಮಿಯಾಗಿ ಮೆರೆವ ಶ್ರೀ ಮನೋಹರನಿಗೆ 3 ಸ್ವಸ್ತಿಯಾಗಲಿ ಎಂದು ಹಸ್ತಿನಿಯರು | ಹವಳದ 4 ಕಿಂಕರ ಜನಮನ ಸಂಕಟಹರ ನಿಷ್ಕ ಳಂಕ ನೀನೆನ್ನುತ ಶಂಕಿನಿಯರು | ರತ್ನದ 5 ಭೃತ್ಯವತ್ಸಲನೆಂದು ಚಿತ್ತಿನಿಯರು | ಮುತ್ತಿನ 6 ಕುಂದಣ 7 ಸೌಪರ್ಣಿ ವಾರುಣಿ ರ್ವಾಣಿÉ ಸ್ಮರನ ರಾಣಿ ಯಿಂದ್ರಾಣಿ ಮುಖ್ಯರು | ಹುವ್ವಿನ 8 ಪುರಹರ ವೈರಿ ಮುಖ್ಯ ಸುರವಂದ್ಯ ಶರಣ ಶ್ರೀ ಗುರು ರಾಮವಿಠಲಗೆ 9
--------------
ಗುರುರಾಮವಿಠಲ
ಆರತಿಯೆತ್ತಿದರು ನಾರಿಯರು ಕೃಷ್ಣಗೆ ಪ ನೀರೆ ರುಕ್ಮಣಿ ಸತ್ಯಭಾಮ ಸಮೇತಗೆ ಅ.ಪ ಭವ ಮುಕ್ತರ ಪೊರೆವಗೆ ಮುನಿಜನ ವಂದ್ಯಗೆ 1 ವಾರಿಜಾಕ್ಷಿ ದ್ರೌಪದಿಗೆ ಸೀರೆಗಳಕ್ಷಯ ಮಾಡಿ ಕ್ರೂರರ ಮುಖಗರ್ವ ಕುಂದಿಸಿದ ಮಹಿಮಗೆ 2 ಕುಂಡಲಿಶಯನ ಶ್ರೀ ಗುರುರಾಮವಿಠಲಗೆ 3
--------------
ಗುರುರಾಮವಿಠಲ
ಆರತಿಯೆತ್ತಿದರೆ ಕೇಶವ ನಾರಾಯಣಗೆ ಪ. ಶಾಶ್ವತವೀವ ಮಾಧವ ವಾಸವವಂದ್ಯ ಗೋವಿಂದಗಾರತಿಯನೆತ್ತಿದರೆ ಅ.ಪ. ದ್ವಾಪರ ರಹಿತ ಶ್ರೀವಿಷ್ಣುವಿಗೆ ಅಪಾರ ಮಧುಸೂದನಗೆ ಪಾಪರಹಿತ ತ್ರಿವಿಕ್ರಮಗಾರತಿಯನೆತ್ತಿದರೆ1 ಸಾಧುಸೇವಿತ ವಾಮನಗೆ ಶ್ರೀಧರ ಹೃಷೀಕೇಶನಿಗೆ ಆದಿಮೂರುತಿ ಪದ್ಮನಾಭಗಾರತಿಯನೆತ್ತಿದರೆ 2 ದÁಮೋದರ ವಾಲುಳ್ಳವಗೆ(?) ಪ್ರೇಮದಿ ಸಂಕರ್ಷಣಗೆ ಕಾಮಿತಾರ್ಥವನೀವ ವಾಸುದೇವಗಾರತಿಯನೆತ್ತಿದರೆ 3 ಅನಿರುದ್ಧ ಪುರುಷೋತ್ತಮಗೆ ವಿನಯದಿಂದಲಿ ಅಧೋಕ್ಷಜಗಾರತಿಯನೆತ್ತಿದರೆ 4 ನರಸಿಂಹರೂಪನಾದವಗೆ ವರದ ಮೂರುತಿ ಅಚ್ಯುತಗೆ ಅರಿಭಯಂಕರ ಜನಾರ್ದನಗಾರತಿಯನೆತ್ತಿದರೆ 5 ಉಪೇಂದ್ರನೆಂದೆನಿಸಿಕೊಂಡವಗೆ ಅಪಾರಮಹಿಮ ಶ್ರೀಹರಿಗೆ ಗೋಪಾಲಮೂರುತಿ ಶ್ರೀಕೃಷ್ಣಗಾರತಿಯನೆತ್ತಿದರೆ 6 ಚತುರವಿಂಶತಿಮೂರುತಿಗಳಾ ಅತಿಶಯ ಧವಳವ ಪಾಡೆ ಸಿರಿ ಹಯವದನ 7
--------------
ವಾದಿರಾಜ
ಆರತಿಯೆತ್ತುವೆ ಆತ್ಮೇಶ್ವರಗೆ ಪ ಮಾರ ಕೋಟಿ ಲಾವಣ್ಯ ಮತ್ಪ್ರಿಯ ಸ್ವಾಮಿಗೆ ಅ.ಪ ಮನಕೊಡೆಯನೆನ್ನಿಸಿ ಮಮತೆಯ ವಿಸ್ತರಿಸಿ ಅನುದಿನ ಬೇಡಿದಿಷ್ಟಾರ್ಥವನೀವಗೆ 1 ಶುಭದಾಯಕನಾಗಿ ಶೋಭಿಸುತಿರ್ಪಗೆ2 ಗುರುರಾಮವಿಠ್ಠಲ ಕರುಣಾನಿಧಿಗೇ 3
--------------
ಗುರುರಾಮವಿಠಲ
ಆರತಿಯೇತ್ತುವೆ ನಾಂ ಪ ಸತತ ಮನ್ಮನೋರತದೊಡೆಯಗೆ ಅ.ಪ ಯಾವಾಗಲು ನಾಮಾಡುತಿರುವ ಸಂ ಸೇವೆಯಕೈಕೊಂಬ ಮಹಾತ್ಮಗೆ 1 ಬೇಡಿದಭೀಷ್ಟವ ನೀಡುತ ಎನ್ನಯ ನಾಮವ ಜಪಿಸುತ ನಲಿಯುವ ಪತಿಗೆ 3
--------------
ಗುರುರಾಮವಿಠಲ
ಆರಮ್ಮ ಮುರಲಿಯನೂದುವನುಮಾರ ಸುಂದರ ಸುಖ ಸಾರುವ ಜಗಕೆ ಪ ಪುಂಡರೀಕಾಕ್ಷನು ಹಿಂಡುಗೋವ್ಗಳ ಕಾಯ್ದುಕಂಡ ಕಂಡವರನ್ನು ಕರೆಯುತಾನೆಚೆಂಡು ಬಗರಿ ಗೋಲಿ ಗುಂಡುಗಳನೆ ಕಟ್ಟಿತಂಡ ತಂಡವಾಗಿ ಪೋದನಮ್ಮ 1 ತಾಯಿ ಕಟ್ಟಿರುವಂಥಾ ತೋರ ಬುತ್ತಿಯ ಗಂಟುತೂಗುತ ಯಮುನೆಯ ತೀರದಲ್ಲೇತೋರ ಉಪ್ಪಿನಕಾಯಿ ಬುತ್ತಿಗಳನೆ ತಿಂದುತೀರಿದವರಿಗೆಲ್ಲಾ ತಾ ಕೊಡುವಾ 2 ಇಂದಿರೇಶನು ಕೊಟ್ಟ ತಿಂದ ಉಪ್ಪಿನಕಾಯಿಆನಂದಬಟ್ಟರು ಗೋಪನಂದನರುಹಿಂದಿನ ಪುಣ್ಯವು ಬಂದೊದಗಿತು ಎಂದುತಿಂದ ಎಂಜಲನಿಟ್ಟ ಇಂದಿರೇಶ3
--------------
ಇಂದಿರೇಶರು
ಆರಯ್ಯಾ ಕಣ್ಣ ಮುಂದೆ ಬಂದು ನಿಂತಿಯೋ | ಸಾರು ನೀನು ಎನಗೆ ಸುಮ್ಮನ್ಯಾತÀಕೆ ಯಿದ್ದೀ ಪ ನೀರೊಳು ಮುಣಗೆ ವೇದವ ತಂದಾತನೊ | ಭಾರವನು ಪೊತ್ತು ಸುರರ ಕಾಯಿದಾತನೊ | ಧಾರುಣಿ ನೆಗಹಿ ಉದ್ಧಾರ ಮಾಡಿದಾತನೊ | ಕೂರ್ರ ದೈತ್ಯನ ಕೊಂದ ಕುಜನ ಗಿರಿಗೆ ವಜ್ರನೊ1 ಗಗನಕೆ ಬೆಳದು ಸುರ ನದಿಯ ಪಡೆದಾತನೊ | ಹಗೆಗಳ ಕೊಂದು ಹರುಷಿತನಾದನೊ | ಜಗವರಿಯೆ ಶಿಲಿಯ ನಾರಿಯ ಮಾಡಿದಾತನೊ | ಮಗನಮಗನ ತಂದ ಮಹಿಮನೊ 2 ಹರಗೆ ಸಾಯಕವಾಗಿ ಪುರ ಉರಹಿದಾತನೊ | ದುರುಳರನ ಕೊಂದ ದುರ್ಲಭದೇವನೊ | ಕರಿರಾಜ ವರದ ಶ್ರೀ ವಿಜಯವಿಠ್ಠಲರೇಯ - ಶರಣರಿಗೊಲಿದು ಬಂದ ಸರ್ವೋತ್ತಮನೊ 3
--------------
ವಿಜಯದಾಸ
ಆರಾಧನೆ ಪರಮಾನಂದ ಪ ತಾರಾನಾಥ ಕುಲೋದ್ಭವ ಕೃಷ್ಣನ ಅ.ಪ ಘೋರವು ಈ ಸಂಸಾರವೆನ್ನುವುದು ದೂರಿನ ನುಡಿಯಿದು ಬಾಳುವಗೆ ನೂರು ವರುಷಗಳ ಮೀರಿ ಜೀವಿಸಲು ಕೋರಿಕೆ ಬರುವುದು ಧೀರ ಜನರಿಗೆ 1 ನಿರ್ಮಲ ದೇಹವು ನಿರ್ಮಲ ಹೃದಯವು ನಿರ್ಮಲ ನಡೆನುಡಿ ಕರ್ಮಗಳು ಮರ್ಮಜ್ಞರ ಮಾರ್ಗಗಳಲಿ ಸ್ವೋಚಿತ ಧರ್ಮಗಳಲಿ ವಿಶ್ವಾಸವಿರುವವರಿಗೆ 2 ಅನ್ನವಿರುವವರಿಗೆ ತಿನ್ನಲಾಗದು ತಿನ್ನಬಲ್ಲವರಿಗೆ ಅನ್ನವು ಸಿಗದು ಘನ್ನ ಮಹಿಮನ ಪ್ರಸನ್ನತೆಯಿಂದಲಿ ಅನ್ನ ಪಡೆದು ತಿನ್ನಲು ಬಲ್ಲವರಿಗೆ 3
--------------
ವಿದ್ಯಾಪ್ರಸನ್ನತೀರ್ಥರು
ಆರಿಗಳವಲ್ಲಾತ್ಮ ಯೋಗ ಸಿದ್ಧಿಸೇರಿ ಸುಜ್ಞಾನದಲಿ ಸವಿದುಂಬಗಲ್ಲದೆ ಪ ರಜಸು - ತಾಮಸವೆಂಬ ರಯವನೆಲ್ಲವ ಕಳೆದುಗಜ ಬಜಿಸುವ ಪಂಚಭೂತಗಳರಜನಿಗೆ ಸಿಲ್ಕದೆ ಪರಬ್ರಹ್ಮನ ಬಲುನಿಜವ ತಿಳಿಯಬಲ್ಲ ನಿರ್ವಾಣಗಲ್ಲದೆ 1 ಭಿನ್ನ ಭೇದಗಳೆಂಬ ಬಲು ಸಂಶಯ ಕಳೆದುತನ್ನೊಳಗೆ ತಾ ತಿಳಿದು ತಾರಕಬ್ರಹ್ಮವಚೆನ್ನಾಗಿ ನೀ ನೋಡು ಚೆಲುವ ಕಂಗಳಿಂದತನ್ನಗ್ನಿಯೊಳಗಿರುವ ಪ್ರೌಢರಿಗಲ್ಲದೆ 2 ಅಕಾರ ಉಕಾರ ಮಕಾರ ಎಂತೆಂಬಓಂಕಾರಕೆ ಕೂಡಿ ಎರಡಿಲ್ಲದಸಾಕಾರ ಕಾಗಿನೆಲೆಯಾದಿಕೇಶವನಆಕಾರದೊಡನಾಡುವರಿಗಲ್ಲದೆ 3
--------------
ಕನಕದಾಸ
ಆರಿಗಾರು ಇಲ್ಲವಯ್ಯ ಆರಿಗಾರು ಇಲ್ಲವಯ್ಯ ಪ ಮಡದಿಯೆಂಬಳು ಯಾಕೆಬಿಡದೆ ಪಂಕ್ತಿಯ ಊಟ ಎಂಬ ಭಾವ ಮೈದುನನೇಕೆಪಡದ ತಂದೆ ತಾಯಿ ಏಕೆ ಪಡಿತತ್ವ ಯಾಕೆಬಡಿಯುತ ಯಮನೀಗ ಒಯ್ಯೆ ಬಿಡಿಸಿಕೊಂಬರಿಲ್ಲ 1 ಅಣ್ಣತಮ್ಮನು ಯಾಕೆ ಅಳಿಯನು ಯಾಕೆಬಣ್ಣದ ಬಾಳು ತಾನೇಕೆ ಬಂಧುಗಳದೇಕೆಚಿನ್ನಕೊಪ್ಪರಿಗೆ ಯಾಕೆ ಚಿತ್ರಮನೆಯಾಕೆಕಣ್ಣ ಕಟ್ಟಿ ಕಾಲನೆಳೆಯ ಕಾವರಾರು ಇಲ್ಲವಯ್ಯ2 ಆರ ನಂಬಿದರು ನಿನ್ನಕಡೆ ಹಾಯಿಪರಿಲ್ಲನೂರು ಬಾರಿ ತಿಳಿದು ನೋಡು ನಿನ್ನೊಳಗೆಲ್ಲಧೀಧೀ ಚಿದಾನಂದ ಹೊಂದೆಯುಕ್ತಿಯಹುದೆಲ್ಲಬಾರೆ ಜನನ ಮರಣಕೆ ಸಂದೇಹವಿಲ್ಲ 3
--------------
ಚಿದಾನಂದ ಅವಧೂತರು
ಆರಿಗಾರೋ ಕೃಷ್ಣ ಶೂರಕುಮಾರನೆಪ. ಆರಿಗಾರೋ ನಿನ್ನ ಹೊರತು ಪೊರೆವರೆನ್ನಶೂರ ಮಾರಜನಕ ಅಕ್ರೂರವರದ ದೊರೆಯೆಅ.ಪ. ಸತಿಸುತರು ಹಿತರೇನೊ ಮತಿಭ್ರಾಂತಿಬಡಿಸುವರುಗತಿ ಯಾರೊ ಮುಂದೆ ಗರುಡವಾಹನ ದೇವ1 ಆಶಪಾಶದಿ ಸಿಲುಕಿ ಘಾಸಿಪಟ್ಟೆನೊ ಬಹಳವಾಸುದೇವನೆ ನಿನ್ನ ದಾಸನೆಂದೆನಿಸಯ್ಯ 2 ಕಾಯ ಉ-ಪಾಯ ಯಾವುದೊ ಮುಂದೆ ರಾಯ ಹಯವದನ 3
--------------
ವಾದಿರಾಜ
ಆರಿಗ್ಯಾತಕೆ ಮೊರೆಯಿಡಲಿ ಸಾರಿದವರನ ಪೊರೆವ ಶ್ರೀರಮಣ ನೀನಿರಲು ಪ ಬೆಳಸಿಗೊಬ್ಬನ ಕೇಳೆ ಮಳೆಗೆ ಮತ್ತೊಬ್ಬನೆ ಅಳತಿಗೆ ಇನ್ನೊಬ್ಬನೆ ಹಾಗೆವೆ ವಳತಿಗೊಬ್ಬರು ದೊರೆಗಳೆ ಮ್ಯಾಲೆನ್ನ ಪ್ರಳಯಕೆ ಮತ್ತೊಬ್ಬನೆ ಪರಿಪರಿ ಖಳರ ಮಾತುಗಳೇ ಸ್ವಾಮಿ 1 ಆಕಾಲ ನೀನೆವೆ ಈ ಕಾಲದಲಿ ನೀನೆ ಸಾಕುವನು ಇನ್ನೊಬ್ಬನೆ ಸ್ಥಿರವಾಗಿ ತಾಕು ತಗಲಿಲ್ಲದೆಲೆ ಬೊಮ್ಮಾದಿ ಲೋಕಪತಿಗಳ ಒಡಿಯನೇ ಈ ವ್ಯಾಳ್ಯ ಲೋಕರನ ಕಾಯಬೇಕೊ ಸ್ವಾಮಿ 2 ಕಾಸು ಒಬ್ಬರಿಗಿಲ್ಲ ಲೇಸು ತೋರದಲೇವೆ ದೇಶಕೊಬ್ಬರು ಪೋದರೋ ಪೊಟ್ಟಿಗೆ ಕೂಸುಗಳ ಮಾರುಂಡರೋ ಈ ಜನರ ಕ್ಲೇಶಬಡಸದಲೆ ಪೊರಿಯೊ ಕರುಣದಲಿ ವಾಸುದೇವವಿಠಲ ಸ್ವಾಮಿ 3
--------------
ವ್ಯಾಸತತ್ವಜ್ಞದಾಸರು
ಆರಿಲ್ಲಿಲ್ಲೋ ಮನುಜಾ | ಅರಿಲ್ಲಿಲ್ಲೋ | ಹರಿಭಕ್ತರಿಗೆ ಸರಿ ಉಂಟೇನಣ್ಣಾ | ಆರಿಲ್ಲಿಲ್ಲೋ ತಮ್ಮಾ | ಬಿರದಿನ ಘಲಗಳ ನಡೆಸುವರಯ್ಯಾ ಪ ಕಂಭದೊಳಗ ಹರಿ ಬಿಂಬವ ತೋರಿಸಿ | ಹಿರಣ್ಯ ಕನಾ | ವೆಂಬ ಶಾರ್ದೂಲ ಕರಳವ ಹಾರಿಸಿದ | ನಂಬಿದ ಪ್ರಲ್ಹಾದ ಮಾಸಾಳ ನಮಾ 1 ಕಂಡು ಸೀತಾಪತಿ ನೊಯ್ದು ರಾವಣ ನೆಂಬಾ | ಖಂಡಿಸಿ ಮದ ಸೊಕ್ಕಿದಾನಿಯನು | ತುಂಡ ಮುಂಡ ಮಾಡಿ ಪದವಿಯ ಪಡದಾ | ಚಂಡ ವಿಭೀಷಣ ಮಾಸಾಳ ನಮಾ 2 ಖಂಡ ದಾಸನಬೇಡಿ ಹೊಂದಿದ್ದ ಕಾಯನ | ಸಂದ ಬಿಡಿಸಿ ಮಲ್ಲಯುದ್ಧದಲಿ | ಮಂದರ ಧರನತಿ ಮೆಚ್ಚಿಸಿ ಮೆರೆದಾ | ನಂದ ಭೀಮಶೇನ ಮಾ-ಸಾಳ ನಮಾ 3 ಬೊಮ್ಮ ಸಾರಥಿ | ಉರಗಸ ಹದಿ ಮೇರು ಗಿರಿ ಪಾಪವು | ಹರಿಶರದಿಂದಲಿ ತ್ರಿಪುರವ ಕೆಡಹಿದ | ಸುರ ರಕ್ಷ ಮಹೇಶ ಮಾಸಾಳನಮಾ 4 ಹಿಂದಿನ ಮಾತಿಂದು ಇಂದಿಲ್ಲ ವೆನಬ್ಯಾಡಿ | ಎಂದೆಂದು ಸ್ವರ್ಗದ ಸುಖಗಳಿಗೆ | ಕುಂದವ ನಿಡುವರು ಮಹಿಪತಿ ಸುತ ಪ್ರಭು | ಹೊಂದಿದ್ದ ದಾಸರು ಮಾಸಾಳರೈಯ್ಯಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರೀಗ ನೀ ಎನ್ನ ಕಣ್ಣು ಮುಚ್ಚಿದೆಯೊ ಕು- | ಮಾರ ಮೌನದಲಿದ್ದಿ ಮಾತನಾಡಯ್ಯಾ ಪ ಇಂದಿರಾ ಭೂದೇವಿ ಆಳಿದವನೊ | ನಂದ ಗೋಕುಲದಲ್ಲಿ ಪುಟ್ಟಿದವನೊ || ಕರಿ - | ಬಂಧನ ವಿನಾಶದ ವಿಠ್ಠಲನೊ 1 ಅಂಬರೀಷನ ಶಾಪ ಪರಿಹರನೊ | ಶಂಭು ಮೊರೆಯಿಡಲು ಕಾಯಿದವನೊ || ಕಂಭದಿಂದೊಡೆದು ಬಂದವನೊ | ತ್ರಿ - ಯಂಬಕನ ಭಕ್ತನ ಸಂಹರನೊ 2 ಬೆರಳಲ್ಲಿ ಬೆಟ್ಟವನೆತ್ತಿದವನೊ | ದುರುಳ ಕಾಳಿಂಗನ ತುಳಿದವನೊ || ಒರಳನು ಕಾಲಲ್ಲಿ ಎಳೆದವನೊ | ಸಿರಿ ವಿಜಯವಿಠ್ಠಲರಾಯನೊ 3
--------------
ವಿಜಯದಾಸ