ಒಟ್ಟು 3371 ಕಡೆಗಳಲ್ಲಿ , 119 ದಾಸರು , 2565 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾರ್ವತಿಪತಿ ಆರ್ವರಾಭಿಷ್ಟಿಯ ಸರ್ವಪೂರಿಸಿ ತನ್ನಿಜಪದ ಸೇವಕನಿಗೆ ಕರುಣವ ಬೀರ್ವನಿಗೆ ಚರಿತ ಆ ಪೂರ್ವನಿಗಾರತಿಯಾ ಬೆಳಗಿರೇ ಸೋ 1 ತಾರ್ಕು ಪದೇಶಿತಾ ಸರ್ಕನೆ ಕರ್ಕಶ ಮಾರ್ಗವ ಬಿಡಿಸುವ ಅತಕ್ರ್ಯನಿಗೆ ಅಘತಮರ್ಕನಿಗೆ ಸುರಸ ಪರ್ಕನಿಗಾರತಿಯಾ ಬೆಳಗೀರೇ ಸೋ 2 ಅಂಬುಶಶಿಬಿಂಬಾಂಕಿತ ಜಟೆ ಅಂಬಕತ್ರಯ ಶಾಂಭವ ವಾಸೆ ಚಿದಂಬರಗೆ ಗಜಚರ್ಮಾಂಬರಗೆ ಹರಸಿ ಶ್ವಂಭರಗಾರತಿಯ ಬೆಳಗಿರೇ ಸೋ3 ಕರ್ಪುರ ಗೌರವತನು ತೋರ್ಪುವ ಸರ್ಪಾಭರಣಗಳಲಿ ಶೋಭಿಸುತಿರ್ಪನಿಗೆ ಹತ ಕಂರ್ದಪನಿಗೆ ಸುಜ್ಞಾನ ದರ್ಪಣೆಗಾರತಿಯಾ ಬೆಳಗೀರೆ ಸೋ 4 ಕುಂದದಿ ಆನಂದದಿ ಮಹೀಪತಿ ನಂದನ ಸಲಹುವ ಘನ ಅಶಿತ ಕಂದರಿಗೆ ಪೂಜಿತ ಇಂದರಗೆ ಸದ್ಗುಣ ಸಾಂದರ ಗಾರತಿಯಾಬೆಳಗೀರೆ ಸೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಬಾಲಕ ಸುಂದರ ಪ ಲೋಲ ಶ್ರೀವರ ಶ್ರೀಕರ ಪಾಲ ನೀ ಕರುಣಾಲವಾಲನೆ 1 ನವನೀತದಧಿಚೋರ | ಭುವನಮೋಹನಾಕಾರ | ಭುವನೋದ್ಧಾರಕ ಶ್ರೀಧರ|| ಸೇವ್ಯ ವಿವಿಧಮಾನುಷವಿಗ್ರಹ || ಕುವರ ನೀನೆನಿಸುತ್ತ ಯಾದವ | ಭುವನದಲಿ ಪಾಲಿಸಿದ ಶ್ರೀಹರಿ2 ಕಂಕಣ ಕೇಯೂರ| ಕಡಗಾದ್ಯಲಂಕಾರಿ | ಕಿಂಕರಜನಪ್ರಿಯ ಶËರಿ || ಸಂಖ್ಯೆಯಿಲ್ಲದ ದುಷ್ಟದಾನವ | ಳಾಂಕ ಮಹಿಮಾನಂತ ರೂಪನೆ 3 ಜಂಭಾರಿ ಶಂಭುಸುಪ್ರೀತ ಖ್ಯಾತ|| ಕಂಬುಕಂಧರ ದೇವ ಕುಂಭಿನಿನಾಥ || ಯಂಭು ತ್ರಿದಶರಿಗಿಂಬುದೋರಲು | ಬೆಂಬಿಡದೆ ಪಾಲಿಸಿದ ಶ್ರೀಹರಿ 4
--------------
ವೆಂಕಟ್‍ರಾವ್
ಪಾಲಯ ದನುಜಾರೆ ನೃಹರೆ ಪ ಮಾಧವ ಮಧುರಾಪುರ ಪರಿಪಾಲಕ ಶೌರೀ 1 ನಂದ ಕಿಶೋರ ಗೋಪಾಲ ಮುಕುಂದ ಬೃಂದಾವನಾ ಸಾನಂದ ಗೋವಿಂದ 2 ಸನಕಸನಂದನ ವಿನಮಿತ ಚರಣಾ ವನಜನಯನ ಗೋಪೀಜನ ಕರುಣಾ 3 ಮಂಗಳಭಾಸಾ ಮುನಿಗಣತೋಷಾ ಮಾಂಗಿರಿವಾಸಾ ಮಣಿಗಣಭೂಷಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಯ ನರಕೇಸರಿ ಸತತಂ ಪರಿಪೂರ್ಣ ಗುಣಾಕರ ಪ ವಿನುತ ಸಂಜೀವ ದೇವ ಲೀಲಾ ಖೇಲನ ಸ್ತಂಭ ವಿದಾರಣ 1 ರಾಕ್ಷಸ ಗರ್ಭ ನಿರ್ಭೇದನ ನಿಪುಣ ಸಿಂಹನಾದ ಶ್ರೀದ ದಕ್ಷೀ ವಿಪಕ್ಷಸು ಶಿಕ್ಷಣ ದಕ್ಷನೆ 2 ಶೂರ ಹಿರಣ್ಯಕ ಹೃದಯ ದಳನಸಂಹಾರ ವೀರ ಸಾರ ಪೊರ ಹರೆ 3 ಕಾಲ ಲೋಲ ಭಂಜನ ರಂಜನ 4 ಶ್ರೀ ಲಕ್ಷ್ಮೀ ಕುಚ ಕುಂಕುಮ ಪಂಕಿಲ ದೇಹ ದೇವ ನೀಲ ನಿಭಾಕೃತಿ ಧೇನುನಗರ ಪತೇ 5
--------------
ಬೇಟೆರಾಯ ದೀಕ್ಷಿತರು
ಪಾಲಯಮಾಂ ಪಾರ್ವತಿಯೆ ಪಾಪ ವಿನಾಶಿನಿ ತಾಯೆ ಶೀಲ ಮೂರುತಿ ಶಿವೆ ಈ ಜಾಲ ಸಂಸಾರದಿ ಪ. ತ್ರಿಜಗ ಪೂಜಿತೆ ನಿನ್ನ ಭಜಿಸೂವಾಮನವಿತ್ತು ಸುಜನರಾಪ್ತೆಯೆ ಎನ್ನಾ 1 ರಾಗ ರಾಗದಿ ನಿನ್ನ ಅನುರಾಗದಿಂ ಪೂಜಿಪೆ ಭಾಗ್ಯವನು ಕೊಟ್ಟು ನೀ ವೈರಾಗ್ಯ ಭಕ್ತಿಯನು 2 ಅರಿಶಿಣ ಕುಂಕುಮವನ್ನು ವರ ಮಾಂಗಲ್ಯದಾ ಭಾಗ್ಯ ನಿರುತದಿ ನೀಡುತ ಪೊರೆಯೆ ಶ್ರೀ ಶ್ರೀನಿವಾಸ ಸಹೋದರಿಯೆ3
--------------
ಸರಸ್ವತಿ ಬಾಯಿ
ಪಾಲಯಾ ಉರಗಾರಿ ಗಮನಾ | ಶ್ರೀ ಲಕ್ಷುಮಿ ರಮಣಾ | ಭಂಜನ ಸಾಗರ | ಕೀಲನ ಫಣಿಶಯನಾ | ಭಾಲಲೋಚನ ವಂದಿತ ಚರಣಾ | ತ್ರಿಲೋಕ ಜೀವನಾ | ವಾಲಿ ಮರ್ದನ ಶರಣಾಗತ ಜನ | ಕಮಲ ನಯನಾ 1 ವಾರಜಾನನ ವಾರಿಜ ಭ್ರಮರಾ | ಕರಿಭಯ ನಿವಾರಾ | ನೀಲ - ಶರೀರಾ | ಕೇಶವ ಕೇಯೂರ ಕೌಸ್ತುಭಧಾರ | ನೀರಜಾಸನನುತ ಯದುವೀರಾ | ಶ್ರೀರಂಗ ಗದಾಧರಾ | ಸುಜನ | ಹೃದ್ವನಜ ವಿಹಾರ ಧರಣೀಧರಾ 2 ಮಂದರೋದ್ದರ ಪತಿತ ಪಾವನ | ಕುಂದ ಕುಟುಲಮರದನಾ | ಸ್ಯಂದ ಜನಕ ಸಖಸ್ಮರಪಿತಹರಿ | ಗೋವಿಂದ ಧುರಿತ ಹರಣಾ | ನಂದಕಿಶೋರ ಶ್ರೀ ನಾರಾಯಣಾ | ಸುಂದರ ವದನಾ | ಮಂದರಕುಲರಿಸಹೋದರ ಮಹಿಪತಿ | ನಂದನ ಪ್ರಭು ಕೃಷ್ಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಯಾನಂತ ಶಯನಾ| ಶ್ರೀ ಲೋಲಂಬುಜ ನಯನಾ ಪ ಸರಸಿಜಾಸನ ಜನಕಾ ವರ ಯದುಕುಲ ತಿಲಕಾ| ಸುರಮುನಿಜನ ಪ್ರೀಯ ಪಾಂಡವ ರಕ್ಷಕ| ಶರಣಾಗತ ವತ್ಸಲಾ ವಿಶ್ವವ್ಯಾಪಕಾ 1 ಭವ ಪಾಶಾ| ಮುರಹರ ಸರ್ವೇಶಾ| ಕರುಣಾ ಸಾಗರ| ಮುಕುಂದ ಹೃಷಿಕೇಶಾ| ಸರಸಿರುಹ ಸಖ| ಕೋಟಿ ಪ್ರಕಾಶ2 ನವನೀತ ಚೋರಾ| ಗಿರಿವೈರಿ ಸೋದರಾ| ದುರಿತ ನಿವಾರಣ| ಪೀತಾಂಬರ ಧರಾ| ಗುರುವರ ಮಹಿಪತಿ| ಸುತ ಮನೋಹರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಿಪುದು ನಯನಗಳ ನಾಲಿಗೆಯ ನೀನು ಶ್ರೀಲೋಲ ಸಾರ್ವಭೌಮನೇ ಪ ನೀಲಮೇಘಶ್ಯಾಮ ಬೇಲಾಪುರಾಧೀಶ ಶೀಲ ಅಚ್ಚುತದಾಸಗೆ ಸ್ವಾಮಿ ಅ.ಪ ಪರಮಪದನಾಥ ಇಂದಿರೆಯರಸ ಸಕಲ ನಿ ರ್ಜರರು ಪೂಜಿಸುವಂಘ್ರಿಯಾ [ವರ]ನೇಮದಿಂ ಪಾಡೀ ಆಡೀ ದುರಿತಭವ ಶರಧಿಯಾ ಪಿರಿದು ದಾಟುವೆನೆಂದು ಭರದೊಳೈದಿದವಗಾ ಶ್ಚರ್ಯದಾಪತ್ತಡಸಿತ್ತೇ ಸ್ವಾಮಿ 1 ಹಿಂದೆ ಮಾಡಿದ ಕರ್ಮವೆಂಬದಕೆ ಜನನವಾದು ದಿಂದು ಊನನಲ್ಲಾ ಪೊಂದಲೀ ನಗರವನು ಪೋಗಲಾಕ್ಷಣದಿ ವಾಗ್ಬಂಧವತ್ವವೆರೆಡು ಮುಂದಕಡಿಯಿಡಲು ಇಂದಿನದೊಲಚ್ಚುತನ ದಾಸ ನಂದವಳಿದುಬ್ಬಸದೊಳು ಇಂದು ನೀ ಸಲಹಿದಡೆ ಪೂರ್ವಾರ್ಜಿತ ಕರ್ಮ ವೃಂದಗಳು ನಿಂದಿರುವವೆ ಸ್ವಾಮಿ 2 ಮನುಜ ಮಾಡಿದ ಪಾತಕಗಳನು ಎಣಿಸುವಡೆ ಘಣಿರಾಜಗಳವಡುವುದೇ ಗುಣ ತರಂಗಿಣಿಯೆ ದುರ್ಗುಣಗಳೆಣಿಸಲು ಶ ರಣಜನರೊಳೇಂಪುರುಳಿರುವುದೇ ಚಿನುಮಯನೆ ಭಕ್ತವತ್ಸಲನೆ ಅಚ್ಚುತz ಸನವಗುಣಗಳನೀ ಮರೆದು ಗುಣನಿಧಿಯೆ ಚೈತನ್ಯವಿತ್ತುಳುಹೆ ಬೇಗ ನಾ ಧನ್ಯನೆಲೊ ವೈಕುಂಠರಮಣಾ 3
--------------
ಬೇಲೂರು ವೈಕುಂಠದಾಸರು
ಪಾಲಿಸಬೇಕಯ್ಯ ಪವಮಾನ ದೂತಾ ಪ. ಬಾಲಕನು ಮಾಡಿರುವ ಅಪರಾಧವೆಣಿಸದೆಲೆ ಅ.ಪ. ಕಾಲ ಶಿಷ್ಟರೊಡೆಯಮುಟ್ಟಿ ಭಜಿಸುವ ನಿನ್ನ ಘಟ್ಟಿ ಜ್ಞಾನಮೃತವಕೊಟ್ಟು ಸಲಹಲಿ ಬೇಕು ದಿಟ್ಟ ಪುರುಷ 1 ಮಧ್ವ ದಾಸರೊಳ್ ನಿಂದು ತಾರತಮ್ಯ ಪಂಚಭೇದಪದ್ಧತಿಗಳನುಸರಿಸಿ ತಿದ್ದಿ ತಿಳುಹಿದೆಯೋ ಶ್ರೀಮಧ್ವರಾಯರೇ ಜಗಕೆಲ್ಲ ಗುರುವೆಂಬಶ್ರದ್ಧೆಯನು ಪುಟ್ಟಿಸಿದೋ ಶೇಷಪದ ಯೋಗ್ಯ 2 ಮಂದಮತಿಯೆಂದು ನಾ ನಿಂದ್ಯ ಮಾಡದೆ ಮನಮಂದಿರದಿ ಛಂದದಲಿ ಪೊಳೆಯಬೇಕುಮಂದರೋದ್ಧರನ ಪದ ಕುಂದದಲೆ ಭಜಿಸುವಸಿಂಧುಶಯನ ತಂದೆವರದವಿಠಲದಾಸ 3
--------------
ಸಿರಿಗುರುತಂದೆವರದವಿಠಲರು
ಪಾಲಿಸು ನಮ್ಮಮ್ಮ ಮುದ್ದು ಶಾರದೆ ನಮ್ಮ ನಾಲಿಗೆ ಯೊಳು ತಪ್ಪುಬಾರದೆ ನೀಲ ಕುಂತಳೆ ತಾಯೀ ನಿನ್ನ ನಂಬಿದೆ ಕಾಯೆ ಪ ಅಕ್ಷರಾಕ್ಷರ ವಿವೇಕಿಯೇ ನಿಮ್ಮ ಕುಕ್ಷಿಯೊಳೀರೇಳು ಲೋಕವೆ ಸಾಕ್ಷಾತ್ ಸ್ವರೂಪಿಣಿ ಮೋಕ್ಷದಾ ಯಕಿಯೆ ತಾಯೆ ಪಾಲಿಸಮ್ಮಮ್ಮ 1 ಸರ್ವಾಲಂಕಾರ ಮೂರ್ತಿಯ ಚರಣ ಭಜಿ ಸುವೆ ಕೀರ್ತಿಯ ಗುರುಮೂರ್ತಿ ಪರಮಾ ನಂದದೊಳ್ ಪಾಲಿಸಮ್ಮಮ್ಮ 2 ಶೃಂಗಪುರದ ನೆಲೆವಾಸಿಯೆ ನಿಮ್ಮ ಸಂಗೀತ ಶಾಸ್ತ್ರ ವಿಶಾಲಯ ಭೃಂಗ ಕುಂತಳೆ ತಾಯೆ ಭಳಿರೆ ಬ್ರಹ್ಮನರಾಣಿ ಪಾಲಿಸಮ್ಮಮ್ಮ 3
--------------
ಕವಿ ಪರಮದೇವದಾಸರು
ಪಾಲಿಸು ಪನ್ನಗಧರನೆ ಪ ಅಂಧಕ ಮಥನನೆ ಗಂಗಾಧರನೆ ಕುಂದೇಂದು ನಿರ್ಮಲ ಭೂತಿ ಭೂಷಿತನೆ 1 ಶಂಕರ ಭವಭಯ ಶಂಕಾವಿನಾಶ ನ್ಯಂಕುಭಾಸಿತ ಕರಪಂಕಜ ಭೂಷ 2 ಕೈಲಾಸ ವಾಸನೆ ಕಾಲಕಂಧರನೆ ಶೈಲಜಾ ಕುಚತಟ ಕುಂಕುಮ ಭಾಸ3 ಗಂಗಾಜನಕ ಪ್ರಿಯ ಅಂಗಜ ಹರಣ ತುಂಗಭುಜಗ ಚಂದ್ರ ಸಂಗಮಹಿಮ 4 ಲೀಲಾತಾಂಡವ ಗೌರೀ ಲಾಲಿತ ಹೃದಯ ಬಾಲಕ ನುತಿಪ್ರೀತ ಧೇನು ಪುರೀಶಾ 5
--------------
ಬೇಟೆರಾಯ ದೀಕ್ಷಿತರು
ಪಾಲಿಸು ಪಾಲಿಸು ಪಾರ್ವತಿ ತನಯನೆ ಫಾಲಚಂದ್ರಯುತನೆ ಕಾಲ ಸಂಭಾವನಲೋಲುಪ ವಾರಿಜಾಸ್ಯನುತನೆ ಪ ಸುಜನ ಗಜವದನಾ ಸುರಕುವಲಯ ದಿನಕರ ಧೂರ್ಜಟಿಸುತ ಗಣಪ 1 ಕಾಮಿತ ಫಲಗಳ ಪಡೆಯಲು ಸುಜನರು ನೇಮದಿ ಪೂಜಿಪರು ಸಾಮಜ ವದನನೆ ಭಕ್ತರಭೀಷ್ಟವÀ ಪ್ರೇಮದಿ ಕರುಣಿಸುತ 2 ಗಾನಲೋಲ ವರತಾಂಡವ ಪ್ರೀತನೆ ಕೋಮಲಾಂಗ ಸತತಂ ಧೇನುನಗರ ಸಂರಕ್ಷಣ ದಕ್ಷನೆ ಸಾನುರಾಗದಲನಿಶಂ 3 ಇಂದ್ರಾದಿ ದಿವಿಜರೆಲ್ಲ ಕುಂದುತ್ತ ದೈತ್ಯ ಭಯದಿಂ ಸುಂದರಿ ನಿನ್ನ ಭಜಿಸೆ ನಿಂದೆಲ್ಲರನ್ನು ಪೊರೆದೆÀ 4 ಕಮಲಾಕ್ಷಿ ವಿಮಲಪಾಣಿ ಕಮಲಾಪ್ತ ಮುಖ್ಯರಮಣೆ ಸುಮಶೋಭಮಾನವೇಣಿ ಕಮನೀಯ ದಿವ್ಯಪಾಣಿ 5 ಶಾಕಿನಿರೂಪೆ ದೇವಿ ಲೋಕೈಕ ವೀರ್ಯ ಧೈರ್ಯ ಬೇಕಾದ ವರಗಳಿತ್ತು ಶ್ರೀಕಾರ ಶಕ್ತಿಯೆನ್ನ 6 ಜ್ಞಾನವು ಮೌನ ಜಯವುಂ ಧ್ಯಾನ ಸುಮಂಗಲತ್ವಂಮಾನ ಸುಪುತ್ರ ಹಿತಮಂ ಧೇನು ಪುರೀಶೆ ಕೊಟ್ಟು 7
--------------
ಬೇಟೆರಾಯ ದೀಕ್ಷಿತರು
ಪಾಲಿಸು ಮರೆಯದೆನ್ನ ಪಾಲ ತ್ರಿಜಗಮೋಹ ಮಾಲಕೌಸ್ತುಭ ಸತ್ಯಭಾಮಾ ಲೋಲ ಭಕ್ತಜನರ ಪ್ರೇಮ ಕಾಲಕಾಲದಿ ನಿಮ್ಮ ಭಜನಲೋಲಜನರೊಳಿರಿಸಿ ಎನ್ನ ಬಾಲನೆಂದು ಕರುಣದಾಳು ಕಾಳರಕ್ಕಸಕುಲಸಂಹಾರ ಪ ವಾರಿಧಿಯೊಳು ಮುಳುಗಿದ ವೇದಗಳ ತಂದು ವಾರಿಜಾಸನಗೊಪ್ಪಿಸಿದಿ ಸಾಧುಗಳ ಬಂಧು ವಾರಿಧಿಯೊಳು ವಾರಿಧಿಯ ಕಡೆದಿ ವಾರಿಧಿಯೊಳು ವಾಸನಾದಿ ವಾರಿಧಿಸುತೆಪತಿ ನೀನಾದಿ ವಾರಿಧಿಯನು ಬಂಧಿಸಿ ಮತ್ತೆ ವಾರಿಧಿಯ ಮಧ್ಯದ ಪುರವ ಸೂರೆಗೈದಾಪಾರಮಹಿಮ ಘೋರತಾಪದಿ ಬಿಡದೆ ದೇವ1 ಮಾಯಾಜಗವ ತುಂಬಿದಿ ಮಹರಮಣ ಹರಿಯೆ ಮಾಯದ ಮರುಣುಣಿಸಿದಿ ವೈಕುಂಠಪತಿಯೆ ಮಾಯೆಗೆ ಮಾಯೆಯೆನಿಸಿದಿ ಮಾಯೆಹರನಾದಿ ಮಾಯದಿಂ ಬಲಿಯನ್ನು ತುಳಿದಿ ಕಶ್ಯಪನ ಅಳಿದಿ ಮಾಯದ್ಹಿರಣ್ಯಕನ ಸೀಳಿದಿ ಮಾಯದಿಂ ಮಾಯೆಮೂಗು ಕುಯ್ಸಿದಿ ಮಾಯಮೃಗವನು ಮಾಯದಿಂ ಕೊಂದಿ ಮಾಯದೆನ್ನ ನೂಕದೆ ದೇವ 2 ಕಪಟಕೋಟಿಗಳನ್ನಳಿದಿ ಚಪಲಸುರಪನ ಕಪಟಗರುವವ ಮುರಿದಿ ಲಕುಮಿರಮಣ ಕಪಟನಾಟಕ ನೆನಿಸಿದಿ ಕಪಟಹರನಾದಿ ಕಪಟ ಅಸುವ ಸೆಳೆದಿ ಕಪಟ ಕಂಸನ ಶಿರವಮೆಟ್ಟಿದಿ ಕಪಟಿಗಳ ಮಹ ಕಪಟದಿಂ ಕೊಂದಿ ಶ್ರೀರಾಮ3
--------------
ರಾಮದಾಸರು
ಪಾಲಿಸು ಯದುಪತಿಯೆ ಶ್ರೀಹರಿಯೆ ಹರಿಯೆ ಹರಿಯೆ ಪ ನಾನಾಯೋನಿಗಳಲ್ಲಿ ಶ್ವಾನನಂದದೆ ಸುತ್ತಿ ಶ್ರೀಹರಿಯೆ ಹರಿಯೆ ಹರಿಯೆ 1 ದೇಶಕೋಶವು ಬಂಧು ಪಾಶದೊಳಗೆ ಸಿಕ್ಕಿ ದೋಷಗೈವೆ ಆಶೆಯಬಿಡೆನಾ ಶ್ರೀಹರಿಯೆ ಹರಿಯೆ ಹರಿಯೆ 2 ಅಂಗವು ಕುಂದಿತು ಭಂಗವ ಪೊಂದುವೆ ಶ್ರೀಹರಿಯೆ ಹರಿಯೆ ಹರಿಯೆ 3 ಧೇನುನಗರ ದೊರೆ ಭಾನುಸನ್ನಿಭ ಶೌರೆ ಶ್ರೀಹರಿಯೆ ಹರಿಯೆ ಹರಿಯೆ 4
--------------
ಬೇಟೆರಾಯ ದೀಕ್ಷಿತರು
ಪಾಲಿಸುಗಣನಾಯಕಾ ವಿನಾಯಕ ಪ ಶೂಲಪಾಶಾಂಕುಶಧೃತ ವರದಾಯಕ ಅ.ಪ ಲಂಬೋದರಾಂಕಿತ ಜಂಭಾರಿವಂದಿತ ಕುಂಭೋದ್ಭವಾನತ ಅಂಬಾಸುತ ಅಂಭೋಜ ಸಖನುತ ಗಂಭೀರ ಗುಣಯುತ ಸಾರ ಸಂತೋಷಿತ 1 ಆತಂಕಪರಿಹಾರ ಮಾತಂಗಮುಖವೀರ ಶೀತಾಂಶುಶೃಂಗಾರ ಶ್ವೇತಾಂಬರ ಭೂತಾಳಿಪರಿವಾರ ಖ್ಯಾತಾವಿಘ್ನೇಶ್ವರ ದಾತಾರ ಮಾಂಗಿರಿನಾಥಾ ಕೃಪಾಧರ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್