ಒಟ್ಟು 49258 ಕಡೆಗಳಲ್ಲಿ , 138 ದಾಸರು , 11863 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಸಮಯ ಹರಿಯೇ ಇದೇ ಸಮಯ ಪ ಕಮಲ ತೋರಿ ಸದಾ | ಬಿಡದೆ ಎನ್ನ ಮುದದಿ ಪೊರೆವುದಕೆ ಅ.ಪ ನಾನಾ ಯೋನಿಯಲಿ ಬಂದು ಜ್ಞಾನ ದುರ್ಲಭನಾಗಿ | ಹೀನನಾದವಗೆ ಸುಜ್ಞಾನ ಪಾಲಿಸುವುದಕೆ 1 ಆಶಾಪಾಶಕೆ ಸಿಲುಕಿ ಶ್ರೀಶನ ಮರೆತೆನೋ | ಲೇಸು ದಾರಿಯ ತೋರಿ ದಾಸನ ಕಾಯುವುದಕೆ 2 ಸಂತರ ಸಂಗವ ಸಂತತ ಪಾಲಿಸಿ ಅಂತರಂಗದಿ ನಿನ್ನ ಚಿಂತನೆ ಕೊಡುವುದಕೆ 3 ಹಿಂದಿನ ಸುಕೃತದಿ ಬಂದೆ ಭೂಸುರನಾಗಿ | ಮುಂದಿನ ಪದಕ್ಕಾಗಿ ಕುಂದದೆ ಸಲಹುವುದಕೆ 4 ಪತಿ ವಿಜಯವಿಠ್ಠಲ ವೆಂಕಟ | ತಾಪವ ಕಳೆದೆನ್ನ ಕಾಪಾಡುವುದಕೆ 5
--------------
ವಿಜಯದಾಸ
ಇದೇ ಸಮಯವು ನೋಡು ಸಖನೇ ರತಿ ಕ್ರೀಡೆಗೆ ಶುಭಕಾಲ ಪ ರತಿಪತಿಪಿತ ನಿನ್ನತಿಶಯ ಹಿತವಾಗುವ ಸುಖಸವಿಯದ ಮ್ಯಾಲೆ ಸಖಿಯರ ಬಾಳೇ ಅ.ಪ. ಮದನ ಸಾರ ಸುರಿಸೋ ಸರಸಿಜಾಕ್ಷಾ 1 ಜಾಣೆ ನೀಯೆನ್ನ ಪ್ರಾಣದಾಣೆಯೆ ಗೇಣು ವಳಗಡೆ ಜೀವದೊಳಗಿದ್ದುಪೂರ್ಣಸುಖವಿತ್ತು ಪಾರುಗಾಣಿಪೆ ಪ್ರಾಣಕಾಂತೆಯೆ 2 ಎಂತು ಪೇಳಲಿ ನಿನ್ನ ಮಹಿಮೆಯ ಪ್ರಾಂತಗಾಣದೆ ಶ್ರಾಂತರಾಗುವರೈ ಹನುಮಂತ ಮೊದಲಾದ್ಯನಂತ ಗುಣಿಗಳು ದಿಗ್ಭ್ರಾಂತರಾದರು ತಂದೆವರದಗೋಪಾಲಕಂತುಪಿತ 3
--------------
ತಂದೆವರದಗೋಪಾಲವಿಠಲರು
ಇದೇ ಸಾಧಿಸಿನೋಡಿ ಮನ ಉನ್ಮನÀಮಾಡಿ ಘನಸುಖ ಭೇಧಿಸಿದರ ಭಾಸುತದೆ ತನ್ನೊಳು ತಾನೆ ಕೌತುಕಧ್ರುವ ನೋಡಿ ನೋಡಿ ಖೂನ ಅರುಹು ಇಲ್ಲದೆ ಜನದೊಳು ಬರುದೆ ಹೇಳ್ಯಾಡುದೇನ ನಿರ್ವಿಕಲ್ಪನ ನಿಜನೆಲೆನಿಭವರಿತು ನೋಡಿ ಸ್ಥಾನ ಸರ್ವಸಾಕ್ಷಿ ಸರ್ವಾತೀತವೆಂಬ ವಸ್ತು ನೋಡಿ ಪೂರ್ಣ 1 ಕಣ್ಣಿನ ಕೊನೆ ಮುಟ್ಟಿ ಕರಗಿ ಮನವು ನೋಡಿ ಪೂರ್ಣ ಬೊಧ ಸಣ್ಣ ದೊಡ್ಡವರೊಳಗಿದೆ ಒಂದು ಸಾರುತಿದೆ ವೇದ ಧನ್ಯ ಧನ್ಯಗೈಸುವ ನಿಜ ಪುಣ್ಯ ಗುರುಪಾದ ಚನ್ನಾಗ್ಯನುಭವದಿಂದ ನೋಡಲಿಕ್ಯಾಗದು ಸ್ವಾದ 2 ಸುರಿಮಳಿಗರೆವುತಲ್ಯದೆ ಸ್ವಸುಖದಾನಂದೊ ಬ್ರಹ್ಮ ತೆರೆತಿಳಿಯಲಿಕ್ಕೆ ಗುರು ಶರಣ ಹೋಗಬೇಕು ಇದೇ ವರ್ಮ ಹರುಷಗೈಸಿದ ನೋಡಿ ಪತಿತಪಾವನ ಸದ್ಗುರು ನಮ್ಮ ತರಳ ಮಹಿಪತಿಗಿದೆ ನಿತ್ಯಭಿನವದ ನೋಡಿ ಸಂಭ್ರಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ಸೀತಾ ಮಹಾಮಂತ್ರ ಭವಾಬ್ದಿ ದಾಂಟುವಾ ಮಂತ್ರಾ ನಿತ್ಯ ಅನುದಿನಾ ಪಠಿಸುತಿರುವಾತಾ ಮುಕುತಿಪಂಥ ಪಡೆವ ನಿರುತಾ ಇದೇ ದೇಹದಲಿ ತಾನಿರುತಾ 1 ವಿರಾಗಿಯಾಗಿ ಮನದಲ್ಲಿ ಪರಾನಂದಾತ್ಮರೂಪವನು ತಿಳಿಯುವಾ ಚೈತನ್ಯರೂಪವನು ಇದೇ ಗೀತಾಪರಣಫಲ ತಾ ಪ್ರಶಾಂತಾಕಾಮನಾಗಿರುತಾ 2 ನಿಧಾನಾ ನೊಂದಮನನಿಗಿದೆ ಪ್ರಧಾನಾ ಶಾಸ್ತ್ರ ಸಂಚಯ ದೇ ಪ್ರಧಾನಾ ಷಟ್‍ಶಾಸ್ತ್ರ ಸಂಚಯದೇ ಸದಾ ಧ್ಯಾನಾ ಇದೇ ಮನನಾ ಮನುಜನೇ ಇದುವೆ ಸುಖತಾಣಾ 3 ತಿಳಿ ನೀ ಗೀತೆಯಾ ಬೋಧಾ ಅಳಿ ನೀ ಜೀವಪರ ಬೇಧಾ ತಿಳಿ ನೀ ಪರಮಾತ್ಮಪದ ಬೋಧಾ ಪಡೆವ ಮೋದಾ ಶ್ರವಣದಿಂದಾ ಇದೇ ಶ್ರೀ ಶಂಕರನ ಬೋಧಾ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಇದೇ ಸುಪಥನೋಡಿ ಸ್ವಹಿತ ಸಾಧು ಜನರ ಸುಸನ್ಮತ ವೇದಾಂತದ ಸುಸಾರಬೋಧವ್ಹೇಳಿದ ವಸ್ತು ಭಗವದ್ಗೀತಾ ಸಂದಿಸೀಹ್ಯದÀು ಸದೋದಿತ ಭೇದಿಸಿ ನೋಡಲು ತನ್ನೊಳಗ ತಾಂ ದೋರುತಿದೆ ಸಿದ್ದಾಂತ 1 ಮಮೈವಾಂಶೋ ಜೀವಲೋಕೇ ಜೀವಭೂತ ಸನಾತನ ಃ ಸ್ವಾಮಿ ಹೇಳಿದ್ದ ತಿಳಿಯಲಿಕ್ಕೆ ಆತ್ಮಾನುಸಂಧಾನದ ಖೂನ ನೇಮದಿಂದಲಿ ಹೇಳಿದ ಮಾತಿಗೆ ಮುಟ್ಟಿದನೊಬ್ಬರ್ಜುನ ತುಂಬೇದ ವಿಶ್ವದಿ ಪರಿಪೂರ್ಣ 2 ಏಕಾಂಶೇನ ಸ್ಥಿತೋ ಜಗತ ವೆಂಬ ವಾಕ್ಯದನುಭವ ಸೇವಿಸಿದೊಬ್ಬ ಶುಕದೇವ ನಾಲ್ಕುಶೂನ್ಯವು ಮೆಟ್ಟಿನೋಡಲು ಭಾಸುತಿದೆ ಸುಮನದೈವ ತಾನಾಗೀ ಹ್ಯದು ಜೀವ 3 ಜಾನಾತಿ ಪುರುಷೋತ್ತಮಂ ಮನುಷ್ಯರೊಳಗಧಮಾಧಮಾ ಕ್ರಮತಿಳಿದವನೆ ಪರಮಯೋಗಿ ಆತನೇ ಉತ್ತಮೋತ್ತಮಾ ತಾಂ ಕೇಳಿ ನಿಜಾಧ್ಯಾತ್ಮಾ 4 ` ಹರಿ ಃ ಓಂ ತತ್ಸದಿತಿ ' ವೆಂಬ ನಿಜ ತಿಳಯಬೇಕಿದೆ ಮುಖ್ಯ ಏಳುನೂರು ಶ್ಲೋಕದವಾಕ್ಯ ತ್ವರ ತಾಂ ತಿಳಿಯದು ಒಂದೇ ಮಾತಿನ ಬ್ರಹ್ಮಾದಿಕರಿಗಾಟಕ್ಯ ತರಳಮಹಿಪತಿಗಿದೆ ಸೌಖ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ಹೌದು ಭವತರಿಯುವ ಶಸ್ತ್ರ ಪದೇ ಪದೇ ಸಿರಿವರನ ಸ್ತೋತ್ರ ಪ ಅಧಮಮತಿಯ ಬಿಟ್ಟು ಸದಮಲ ಮನದಿಂ ವಿಧವಿಧ ಹರಿಯೆಂದೊದುರುತ ಕಾಣುವುದೆ ಅ.ಪ ದಾನಧರ್ಮಯಜ್ಞ ಇವು ಯಾಕೊ ಸ್ನಾನ ಮೌನ ಜಪ ಮತ್ತ್ಯಾಕೊ ನಾನಾ ಮಂತ್ರ ತಂತ್ರ ಗೋಜ್ಯಾಕೆಬೇಕೊ ಕ್ಷೋಣಿ ತಿರುಗಿ ಬಹು ದಣಿಲ್ಯಾಕೊ ನಾನಾಪರಿಯಲಿಂದ ದೀನದಯಾಪರ ಗಾನಲೋಲನ ಭಜನಾನಂದ ಪಡೆವುದೆ1 ವೇದಪುರಾಣ ಪುಣ್ಯ ಶಾಸ್ತ್ರಗಳ್ಯಾತಕೊ ಸಾಧನಸಿದ್ಧಿಗಳ ಬಲವ್ಯಾಕೋ ಭೇಧಯೋಗದ ಬಹು ಬೋಧಗಳ್ಯಾತಕೊ ಓದಿಓದಿ ದಿನಗಳಿಲ್ಯಾಕೊ ವೇದಗಮ್ಯದಾದಿ ಮೂರುತಿ ಶ್ರೀ ಪಾದವರಿತು ಆರಾಧಿಸುತಿರುವುದೆ 2 ಕಾಶಿ ಕಂಚಿ ಕಾಳಹಸ್ತಿ ತಿರುಗಲ್ಯಾಕೊ ಸಾಸಿರದೈವಕೆ ಬಾಗುವುದ್ಯಾಕೊ ಮಾಸಪಕ್ಷ ವ್ರತ ನೇಮಗಳ್ಯಾತಕೊ ಘಾಸಿಯಾಗಿ ದೇಹ ದಂಡಿಸಲ್ಯಾಕೊ ಶೇಷಶಯನ ನಮ್ಮ ಶ್ರೀಶ ಶ್ರೀರಾಮನ ಲೇಸಾದ ನಾಮವೊಂದೆ ಧ್ಯಾಸದಿಟ್ಟು ನುಡಿ 3
--------------
ರಾಮದಾಸರು
ಇದೇನಿದೇನು ನಿನ್ನ ಪದವ ನಂಬಿದವ ಗೆಡರು ಬಾಧಿಸು ವದೇನು ಪ ಅವನ ಬದಿಯಲಿ ಗರುಡ ಮಣಿಯಿರೆ| ಹಾವಿನ ಗರಳವ ಏರುವದೇ| ಅಮೃತ ಕಲಶ ಮನೆಯೊಳಿರೆ| ಸಾವಿನ ಭಯದಿಂಬಳಲುವರೇ ರಂಗಯ್ಯಾ 1 ಹನುಮನ ಪರಿಚಾರಕರಿಗೆ ಬೆಂಬತ್ತಿ ಬಿನಗು ಭೊತಂಗಳು ತಟ್ಟುವವೇ ಅನಳನ ಹೊರಿಯಲಿ ಕುಳಿತಿರೆ ಹಿಮದಿಂದ ತನುಗುಗ್ಗರಿಸಿ ಬಿದ್ದು ಎರಗುವ ದೇನಯ್ಯಾ 2 ದುರಿತ ಬಂದು| ಕುಂದ ನಿನಗಲ್ಲವೇ ಎನ್ನವ ಗುಣಗಳ ನೋಡದೆ ರಕ್ಷಿಸು ಸನ್ನುತ ಮಹಿಪತಿ ನಂದನ ಜೀವನ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇದೇನೈ ಛಂದಾ | ಗುರುವೇ | ಇದೇನೈ ಛಂದಾ ಪ ಅರೂಪದಲಿ ಗೋಚರಿಸಿತು ಪ್ರೇಮ1 ವನದೊಳು ವೃಂದಾವನದೊಳು ನಲಿದೆ2 ಯಾತಕೆ ಮೌನದ ರೀತಿಯ ಹಿಡಿದೆ 3 ಏನೆಂದು ಅರಿಯದ ಜ್ಞಾನಿಯುನಾನು | ನ್ಯೂನಾರಿಸದೆ ನೀಡು ಸ್ವಾನಂದವನು 4 ಎಂದೆಂದು ಕರಿಯೆ `ಓ' ಎಂದನು ಕರುಣಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇದೇವೆ ಗುರು ಘನ ಮಹಿಮೆ ಧ್ರುವ ಅಧ್ಯಾತ್ಮದಾನಂದದ ನೆಲೆನಿಭ ಮಹಾತ್ಮರು ಬಲ್ಲರು ಖೂನ ಹೊಳೆಯುತಿಹ್ಯದು ಅನುದಿನ ಚಿಂತಾಯಕ ಗುರು ಘನ ಪ್ರತಾಪವು ತುಂಬಿಹ್ಯದು ಪರಿಪೂರ್ಣ ಶುದ್ಧಾಂತ್ಮದ ಸೂತ್ರಾಂತ್ರದ ಗತಿಗಳ ಮೂಢಾತ್ಮರು ಬಲ್ಲವೇನ 1 ಮಹಿಮರು ಮನಿಮನಿಗಿಲ್ಲ ಮಹಿಮಾನಂದದನು ಸಂಧಾನ ಪರಮವಿರಕ್ತನೇ ಬಲ್ಲ ಜೀವನ್ಮುಕ್ತಾಗುವ ಗತಿ ಮಾರ್ಗವು ಎಂದಿಗೆ ದೊರೆವದಿದೆಲ್ಲ ಪೂರ್ವಕಲ್ಪನೆಯಲ್ಲ ಮಿಕ್ಕಿನಾ ನರಗುರಿಗಳಿಗಿದು ಇಲ್ಲ 2 ಹುರಳಿಲ್ಲದ ಕರ್ಮಾಚರಣೆಯೊಳು ಮರುಳಾದರು ಜನವೆಲ್ಲ ಸರ್ವರಿಗಾವುದಲ್ಲ ಪೂರ್ವಾ ಪಾರ ಮಹಾಗುರು ಯೋಗಮಾರ್ಗವು ಸ್ತುತಿಸಲೆನಗಳವಲ್ಲ ಸರ್ವಮಯವೆಲ್ಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇವೆ ಗುರುಕೃಪೆಯದಾಟಗಳು ಧ್ರುವ ಮನಯೋಗದ ಗೋಲ್ಹಾಟಗಳು ಅನುದಿನ ಅನಿಮಿಷ ನಯನದ ನೋಟಗಳು ಜ್ಞಾನ ಸಮುದ್ರದ ಲೋಟಗಳು ಏನೇಂದ್ಹೇಳಲಿ ಸ್ವಾನಂದದ ಸುಖ ಅನಂದೋಬ್ರಹ್ಮದ ಆಟಗಳು 1 ಸೊನ್ನೆಯ ಸೂಟಿಗಳು ತಾಳಮೃಂದಗವು ಭೇರಿಡುತಿಹ್ಯ ಕೇಳುವ ಧಿಮಿಧಿಮಿಟಗಳು ತಲ್ಲೀನದಿ ಶ್ರುತಿಘೋಷಾಲಿಸುವನೀದೃಶ್ಯದ ಉದಾಟಗಳು ತಿಳಿಯಲು ಬಲು ಆವ್ಹಾಟಗಳು 2 ಬಲ್ಲವೇನು ನರಕೀಟಗಳು ದೇವದೇವೋತ್ಮನ ನೋಟಗಳು ದಯಕರುಣದಿ ಜೀವನ ¸ದ್ಗೈಸುವ ಭವನಾಶನ ಕೃಪಾದೃಷ್ಟಿಗಳು ಧನ್ಯಧನ್ಯ ಕುಲಕೋಟಿಗಳು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇವೆ ನರ ಪಶು ಕಾಣಿರ್ಯೋ | ಇದೇ ಮನದ ಸ್ಥಿತಿ ನೋಡಿರ್ಯೋ ಪ ಉದಯದಲೇಳುತ ಉದರದಿ ಧಾವತಿ | ಉದರ ತುಂಬಲು ನಿದ್ರಿಯ ಭರವು | ಮದದಲಿ ಭಯ ಕೊಟ್ಟಿಗೆಯಲಿ ಮಾಯದ | ಸದಮಲ ಪಾರದ ಬಂಧನವು 1 ಸಂಚಿತ ನೊಗ ಹೆಗಲಲಿ ಪೊತ್ತು | ಘನ್ನದುರಿತ ಘಸಣೆಯ ತಳೆದು | ತನ್ನ ಹಿತಾ ಹಿತ ಲೇಶವ ನರಿಯದೆ | ಕಣ್ಣೆವೆಯಿಕ್ಕದೆ ಡೋಕುವನು 2 ಗುರುವರ ಮಹಿಪತಿ ನಂದನ ಸ್ವಾಮಿಯು | ಹೊರೆವ ವಡಿಯನೆಂಬ ಗುರುತರಿದೇ | ಅನುದಿನ ಕಾವವ | ಸಿರಿಯ ಮದಾಂಧನ ನಂಬಿಹುದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇದೇವೆ ನಿಜನೋಡಿ ನಮ್ಮ ನೇಮನಿತ್ಯ ಸಾಧು ಜನರಿಗೆ ನಡೆವದು ಸತ್ಯ ಧ್ರುವ ಅನುಸಂಧಾನ ತ್ರಿಕಾಲ ಸಂಧ್ಯಾನ ನಿತ್ಯ ನಿತ್ಯದಿತ್ಯರ್ಥದ ನಿಜಸುಷ್ಠಾನ 1 ದೇವದೇವೇಶನಾರಾಧನೆಯು ಭುವನತ್ರಯದಲಿದೆ ಸರ್ವಸಾಧನೆಯು 2 ಕರ್ಮಹರಿಸಿದ ನಿಮಿಷದೊಳಗೆ ಬ್ರಹ್ಮಾನಂದವಾಯಿತು ಮಹಿಪತಿಗೆ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇವೆ ಪೂಜೆಯ ನೋಡಿ ಹೃದಯದಲಿ ನಿಜ ಒಡಗೂಡಿ ಧ್ರುವ ನಾಮಸ್ವರೂಪದ ನಿಜಗುಹ್ಯವಾರ್ತಿ ವ್ಯೋಮಾಕಾರದ ಮನೆಮೂರ್ತಿ ಸ್ವಾಮಿ ಸದ್ಗುರುವಿನ ಕೀರ್ತಿ 1 ನಿತ್ಯ ನಿರ್ಗುಣ ನಿರ್ವಿಕಲ್ಪಾ ಸತ್ಯಸದ್ಗುರು ಸ್ವರೂಪಾ ನಿತ್ಯ ನಿತ್ಯರ್ಥ ಸುದೀಪಾ ತತ್ವಜ್ಞಾನ ಮನಮಂಟಪಾ 2 ಸ್ವಾದೋದಕ ಙÁ್ಞನ ಭಾಗೀರಥೀ ಅಭಿಷೇಕ ಮೌನಮೌನ್ಯವಸ್ತ್ರಾ ಮೋಲಿಕಾ ಧಾನ್ಯವೆಂಬುದೇ ಸೇವೆ ಅನೇಕಾ 3 ಗಂಧಾಕ್ಷತಿ ಪರಿಮಳವುಳ್ಳ ಪುಷ್ಪ ಬುದ್ಧಿಮನವಾಯಿತು ಸ್ವರೂಪಾ ಸದ್ವಾಸನ್ಯಾಯಿತು ಧೂಪದೀಪ ಸದ್ಭಾವನೆ ನೈವೇದ್ಯಮೋಪಾ 4 ಫಲತಾಂಬೋಲವೆ ಸದ್ಭಕ್ತಿ ಮ್ಯಾಲಭಿಭಾವನೆ ಮಂಗಳಾರ್ತಿ ಕುಲಕೋಟಿ ಉದ್ಧರಿಸುವ ಗತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇವೆ ಬಂದದಾ ಖೂನವು | ಇದೇವೆ ಸಾರ್ಥಕ ಜನುಮವು ಪ ಹೊತ್ತು ಹೋಗದ ಬೀದಿ ಮಾತುಗಳಾಡದೆ ಚಿತ್ತಕ ಆಲೇಶ ತರಗುಡನು ಉತ್ತಮರೊಳುಕೂಡಿ ಶ್ರೀಹರಿ ಮಹಿಮೆಯಾ ನಿತ್ಯ ಕಥಾಮೃತ ಸೇವಿಪನು 1 ಹಾಲವನೆರೆದರೆ ಸರಕನೆ ಕುಡಿಯದ ಬಾಲಕನಂದದಿ ಈ ಮನವು ಕಾಲಕಾಲಕ ಸದ್ಭೋದವ ಕೇಳಿಸಿ ಮ್ಯಾಲ ಸ್ವಹಿತ ಕೊಡುವನು 2 ಉದರದ ಧಾವತಿಗನುದಿನ ಬೆರತಿರ ಇದರೊಳಗೆಚ್ಚರ ಹಿಡಿದಿಹನು ಮದಮತ್ಸರಳಿದು ಗುರುಮಹಿಪತಿ ಪದ ಪದುಮದಹಿಷ್ಠೆಯ ಜಡಿದಿಹನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇದೋ ಬಂದಾನೇಳೇ ಭಾವೇ ನಿನ್ನರಸಾ| ಮುದದಿ ಪ್ರಾರ್ಥನೆಯ ಮಾಡಿ ಕರೆತಂದೆನೀಗ ಪ ನೊಸಲಲಿ ಇಟ್ಟ ಕಸ್ತೂರಿ ರತ್ನಮಯದಿಂದ| ಪೊಸಪರಿಯ ಕಿರೀಟವಧರಿಸಿ| ಎಸೆವ ಕುಂಡಲದಿಂದ ಪೊಳೆವಾಕದಪುಗಳು| ಬಿಸಿರು ಹದಳ ನೇತ್ರಲೊಪ್ಪುತ ನಮ್ಮ 1 ತುಂಬಿಯಂತೆ ವಳೆಕಾವಳಿ ಶೋಬಿ| ತುಂಬಜ ಮುಖ ಅತಿ ಸುಂದರ ರೂಪಾ| ಕಂಬುಕಂದರದಲಿ ಹಾರದಾ ಕೌಸ್ತಭ ಮಾಲೆ| ಅಂಬುಜಧರ ನೋಡು ಅರನಗೆ ನಗುತ್ತಾ 2 ಗರುಡನ ಮ್ಯಾಲೇರಿ ಕೊಂಡುತಾಹರುಷದಿ| ಪರಮ ಪಾವನೆ ಕೇಳು ಸದ್ಭಕುತಿಂದ| ಧರೆಯೊಳಾರಾರು ಕರೆದರೆ ಬಷ್ಟುವೆನೆಂಬ| ತೆರ ತೋರಿಸಲು ಮಹಿಪತಿ ನಂದ ನೊಡೆಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು