ಒಟ್ಟು 1371 ಕಡೆಗಳಲ್ಲಿ , 103 ದಾಸರು , 1210 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹನುಮಂತ ಪಾಹಿ ಗುರು ಮನುಮಂತ ಪ ಹನುಮಂತ ಅನಿಮಿತ್ತ ಬಂಧು | ಶಿರ ಸಿಂಧು ಆಹಾ ಅನುದಿನ ಎನ್ನವಗುಣ ಎಣಿಸದೆ ಕಾಯೊ ಪತಿ ಸುರಮುನಿಗಣ ಸೇವಿಪ ಅ.ಪ ಸಂಜೀವನ ಗಿರಿಧಾರ | ಹೇ ಧ ನಂಜಯ ನಾಗ್ರಜ ಧೀರ | ಖಳ ಭಂಜನ ಕರುಣ ಸಾಗರ ಭಾವಿ ಕಂಜಜ ಭಕ್ತ ಮಂದಾರ ಆಹಾ ಅಂಜನೆಯಳ ತನು ಸಂಜಾತ ಸಲಹಯ್ಯ ಸಂಜೆ ಚರಾರಿ ಪ್ರಭಂಜನ ಮೂರುತಿ 1 ಕಾಳಿವಲ್ಲಭ ಕಪಿವರನೆ | ಕರು ಣಾಳು ನಂಬಿದೆ ಯತಿವರನೆ | ಖಳ ಕಾಲ ಪಾಲಿಸು ವೃಕೋದರನೆ | ಛಳಿ ಶೈಲಜೆ ಕಾಂತ ವಂದಿತನೆ | ಆಹಾ ಕೇಳಿ ಮಡದಿ ಮೊರೆ ತಾಳಿ ಸ್ತ್ರೀವೇಷರೂಪ ಖೂಳ ಕೀಚಕನುದರ ಸೀಳಿದ ಗುರುವೆರ 2 ಪೊಂದಿದೆ ಪಾಲಿಸು ಸತತ | ಕುಂತಿ ವಿನುತ | ಶಾಮ ಸುಂದರ ವಿಠಲನ ದೂತ | ಆಹಾ ಇಂದು ಕುಲಜವಿಲ್ಲ | ಒಂದೆಂಬವರ ಜೈಸಿ ಪತಿ ಪರನೆಂದು ಸ್ಥಾಪಿಸಿದೆ 3
--------------
ಶಾಮಸುಂದರ ವಿಠಲ
ಹರಹರ ಮಹಾದೇವ ಮಹಾನುಭಾವಾ | ಭವ ಯ್ಯೋಮಕೇಶ | ಅಂಧಕ ಸುರರಿಪು ಜಾಣಾ | ಸುರವರ ಪುರ ಮುರಹರ ಪದವಿನುತಾ ಪ ಸಂಜೀವ | ವಿಷ ಕರ್ತುವಾಭರಣ ಜಗದ ಸೂತ್ರಾಣ | ಎಸೆವ ರುಂಡಮಾಲಾ ಪಾರ್ವತಿಯ ಲೋಲ | ಪಶುಪತಿ ಪಾವನ್ನ ವರಸುಪ್ರಸನ್ನ | ಅಸಮಾನಸಮಾ ಕುಸುಮಾಭಿಸಮ | ನಿಶಕರ ದಿನಕರ ಬಿಸಿ ನಯನ | ದಶಶಿರ ಪ್ರಸನ್ನ ಭಜಿಪರ 1 ಗುರುಕುಲೋತ್ತ,ಮ ತುಂಗ ವೃಷಭ | ಸುರನದಿ ಧರ ಧೀರ ಜಗದೋದ್ಧಾರ | ನಿರಂಜನ ಸುಂದರ ವದನ | ಕರಿ ಚರ್ಮಾಂಬರ ಶೋಭಾಂತರವಾದನಾ ಭಾ | ಹರಣ ಚರಾಚರ ಸುರವರ ಡಮುರಗ ತ್ರಿಶೂಲಧರ | ನರವರ ಶರಭೂತ ಪರಿವಾರ ಭಯಂಕರ | ದುರಿತ ವಿದೂರಾ 2 ಅಂಬರ ವ್ಯಾಘ್ರಾವಾಸಾ | ಯ್ಯೋಮ | ಕೇಶ ಸ್ಮಶಾನವಾಸ | ಭಾಸುರೋನ್ನತ ಲೀಲಾ | ಸುರಮುನಿಪಾಲಾ | ಚಾಪ ಪಿನಾಕಿ ಚಮುಪಾ | ಕಾಸೀವಾಸಿ ತೋಷಿಸೆ | ದಾಶರಥಿ ನಾಮತಾರಕ ಉಪದೇಶಿ | ಕೋಶ ಶ್ರೀ ವಿಜಯವಿಠ್ಠಲ ವೆಂಕಟೇಶನ | ಪುರಂದರ ದಾಸನ ದಾಸನ ಕ್ಲೇಶವಿನಾಶಾ 3 (ಔ) ಶ್ರೀತುಳಸೀ
--------------
ವಿಜಯದಾಸ
ಹರಿ ಕೃಪೆಯಿಂದಲಿ ದೊರೆದಿತು ಯನಗೀ ಶಿರಿಕರ ತಂಬೂರಿಪ ನರಹರಿ ನಾಮ ಸ್ಮರಣೆಯಗೈಯುವಾ ನರಂಗೆ ಸಹಕಾರಿ ಅ.ಪ. ತಾಪತ್ರಯವನು ಲೊಪಗೈವ ಸುಖ ರೂಪಿನ ತಂಬೂರಿ ಶ್ರೀಪತಿ ಭಕ್ತಿನಿರೂಪಣದಿಂದಖಿಲಾಪತ್ಪರಿಹಾರಿ 1 ವಾಸುದೇವ ನಿಜದಾಸರು ಪಿಡಿಯುವ ಭಾಸುರ ತಂಬೂರಿ ವಾಸುಕಿ ಶಯನ ವಿಲಾಸದ ಕೀರ್ತಿವಿಕಾಸದ ಜಯಭೇರಿ 2 ಅಂಬುಜಭವನ ಕುಟುಂಬಿನಿಯ ಕರಾಲಂಬನ ತಂಬೂರಿ ತುಂಬುರನಾರದ ರಂಬುರುಹಾಕ್ಷನ ಹಂಬಲಿಗನುಸಾರಿ 3 ಗಂಧರ್ವರ ಕರಪೊಂದಿ ಮೆರೆವ ಬಲು ಸುಂದರ ತಂಬೂರಿ ಸುಂದರಿಯರ ನಲವಿಂದಲಿನುಡಿಸುವಾನಂದ ಸುಗುಣಧಾರಿ 4 ಶ್ರುತಿಯುತ ಮಾಗಲು ಮತಿಯುತರಿಗೆ ಸಮ್ಮತವಹತಂಬೂರಿ ಶ್ರುತಿಹೀನತೆಯಿಂದ ತಿಶಯಮಾಗದು ಕೃತಿಶತವನುಸಾರಿ 5 ಸುಕೃತ ಪರಿಪಾಕದ ತಂಬೂರಿ ಈ ಕಲಿದೋಷ ನಿರಾಕರಣೆಗೆ ಬಹು ಭೀಕರ ಮುಖಧಾರಿ 6 ಧರೆಯೊಳು ಪುಲಿಗಿರಿ ವರದ ವಿಠಲನ ಬಿರಿದಿನ ತಂಬೂರಿ ದುರಿತವೆಂಬ ಮದಕರಿಯನು ಸೀಳುವ ಹರ್ಯಕಾರಿ 7
--------------
ಸರಗೂರು ವೆಂಕಟವರದಾರ್ಯರು
ಹರಿ ನೀನೆವೆ ಸರ್ವ ಚೇತನ ಧೃತಿಯ ಸಕಲವೇ | ಧರಿಯೊಳು ನಾನೆಂಬುವ ಗುಣವೇ ವರಶೃತಿ ನೇಹನಾ ನಾಸ್ತಿಯಂದು | ಸಾರುವದಿದಕನು ಮಾನವೇ ಪ ಬಯಲೊಳು ಪುಟ್ಟದ ಪರಿಪರಿನಾದದ | ಹೊಯಿಲಿನ ಮಂಜುಳ ಶಬ್ದವಾ | ಬಯಲದಿ ಕೇಳಿತಲ್ಲಿನವ ಹೊಂದುವಾ | ಬಯಲಾಧಾರ ನೀನಲ್ಲವೇ 1 ಸೃಷ್ಟಿಯೊಳಗ ಕಮನೀಯ ಲಾವಣ್ಯದು | ತ್ಕøಷ್ಟತರ ಮೋಹನ ರೂಪವಾ | ದೃಷ್ಟಿಲಿ ಕಾಣುತ ಸುಖದೋಳಗಾಗುವ | ದೃಷ್ಟಸ್ವ ತೇಜ ನೀನಲ್ಲವೆ 2 ಕಮಲ ಪಾರಿಜಾತ ಮಲ್ಲಿಗೆ ಮಕ | ರಂಗದೊಳಗ ಸುಳಿದಾಡುತ | ಮಂದ ಮಾರುತ ಬಂದು ಸೋಕಲು ನಲಿವಾ | ಸುಂದರ ರೂಪನು ನೀನಲ್ಲವೆ 3 ರಸಭರಿತ ಬೇರೆ ಬೇರೆ ದೋರುತಲಿಹಾ | ಅಸಮತೆರೆದ ಪದರ್ಥವನು | ರಸನಾದಿ ಕೊಂಡು ಸವಿಗೆ ತಲೆದೂಗುವಾ | ಕುಶಲ ಭೋಕ್ತನುನೀನಲ್ಲವೇ 4 ಚೆನ್ನಾಗಿ ಕಸ್ತೂರಿ ಪುಳಕವ ಕೂಡಿಸಿ | ಪನ್ನೀರವನು ಮೇಲೆದಳಿದು | ಉನ್ನತ ಚಂದನ ಲೇಪಿಸೆ ಸುವಾ | ಸನೆ ಕೊಂಬುವ ನೀನಲ್ಲವೇ 5 ಅಷ್ಟದಳ ಕಮಲದಳ ಗದ್ದುಗಿಯೊಳು ನಿಂದು | ಅಷ್ಟಮ ಸ್ಥಳಗಳ ಮುಟ್ಟಿಸಿ | ನೆಟ್ಟಿನೆ ಮುಖದೊಳು ಸವಿಸವಿ ಮಾತವ | ಸ್ಪಷ್ಟದಿ ನುಡಿಪ ನೀನಲ್ಲವೇ 6 ಭಜಕನ ಮಾಡಿ ಸೌಮ್ಯತನದಿ ಕರದಿಂದ | ರಜತಮ ವಿರಹಿತ ದಾನವನಾ | ದ್ವಿಜರಿಗೆ ಕುಡಿಸಿ ಅದರಶ್ರಯ ಕೊಂಬುವ | ನಿಜಶಯ ಕರ್ತನು ನೀನಲ್ಲವೇ 7 ಪವನಭ್ರವ ನಡೆಸುವಪರಿಚರಣದಿ | ಜವದಿ ಸುಕೇತ್ರ ಯಾತ್ರೆಯಾ | ಬವರದಿ ಮಾಡಿ ಪುಣ್ಯ ಅರ್ಪಿಸಿ ಕೊಂಬಾ | ಭುವನ ಪಾವನ ನೀನಲ್ಲವೇ 8 ರಸನುಂಡು ಕಬ್ಬ ಹಿಪ್ಪಿಯುಗುಳುವಂತೆ | ಅಸಮತೆ ರಚಿಸಿ ಸರ್ವಾಂಗರ | ರಸವಿತ್ತು ಮಲವಘ ಮುಖದಿಂದ ಪವನದಿ | ಬಿಡಸುವನು ನೀನಲ್ಲವೇ 9 ಅಂಗನೆಯರ ಧೃಡಾಲಿಂಗನವನು ಮನ| ದಿಂಗಿತದಂದದಿ ಗೈಯ್ಯಲು | ಅಂಗಸಂಗದ ಲೋದಗುವ ಭೋಗಿಪ | ಅಂಗಜ ಜನಕ ನೀನಲ್ಲವೇ 10 ಯಂತ್ರವಾಹಕ ನಂದದಿ ಜಗನಿರ್ಮಿಸಿ | ಚಿತ್ರ ವಿಚಿತ್ರವ ದೋರುವಾ | ಅಂತ್ರ ಬಾಹ್ಯವ್ಯಾಪಕ ಮಹಿಪತಿ ಸುತ ಪ್ರಭು | ಸೂತ್ರಧಾರಿ ನೀನಲ್ಲವೆ 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿ ವಿಠಲ - ವಿಠಲ ಜಯ ವಿಠಲಾ ಹರಿ ವಿಠಲ - ಜಯ ವಿಠಲ ಪ ಜಯವಿಠಲಾ ನಮೋ ವಿಠಲಾ ಅ.ಪ ಹೇ ಮುರಾರೀ ಶ್ರೀ ಹರೀ ಬಾರೈ ಕೃಪಾಶರನಿಧಿ ಶೌರೀ ಶರಣಾಭರಣನೆಂದೆ ಬಿರುದನ್ನು ಕೇಳಿ ಬಂದೆ ಅರಿಯೆ ಇನ್ನೊಂದ ತಂದೆ ನೀನಾಗಿ ಪೊರೆಯೆಂದೆ ಇನ್ನು ಮುಂದೇ 1 ಇಂದಿರಾ ಮಂದಿರಾ ಹೇ ಸುಂದರಾನಂದ ಕುವರ ವರಾ ಇಂದೀವರಾಕ್ಷ ನಿನ್ನಾ ಸಂದರುಶನವೆನ- ಗೆಂದಿಗಾಹುದೋ ಮನವಾ ನಂದ ಹೊಂದುವುದು ಅಂದೇ 2 ಸರ್ವೇಶಾ ಶಾಶ್ವತ ಸರ್ವೋತ್ತಮ ಪರಮೋದಾರವರ ಸರ್ವಕಾರಣ ಕರ್ತಾ ಸರ್ವಸ್ವತಂತ್ರ ಶಕ್ತ ಸರ್ವತ್ರದಲಿ ವ್ಯಾಪ್ತ ಸರ್ವಾಂತರ್ಯಾಮಿ ಗುಪ್ತ ಶಿರಿಕಾಂತ 3
--------------
ಲಕ್ಷ್ಮೀನಾರಯಣರಾಯರು
ಹರಿಕಥಾಮೃತಸಾರ ಸುರಸ ಗ್ರಂಥವ | ಧರಣಿ ಸುರರಲ್ಲದೆ ದುರುಳ ಪಾಷಂಡಿಗಳರಿತು ಇದರ ಮರ್ಮ ಹರುಷಿತರಾಗುವರೇ ಪ ಹಿಮ ಮಯೂಖನ ನೋಡಿ ಕುಮುದ ಪುಷ್ಪದವೊಲು ಕಮಲವರಳುವದೇ || ಯಾಮಿಜನರಂದದಿ ದಿನಮಣಿಯುದದಿ ತಿಮಿರಷ್ರ್ಯ ಕೊಡಬಲ್ಲದೇ 1 ಚಿನ್ನದಾಭರಣಗಳಿಡಲು ದಾಸಿಯು ದೇವ ಕನ್ನಿಕೆಯಾಗುವಳೇ ಮನ್ನಣೆಯರಿಯದ ಮನುಜನ ಶಿರ ಪುಣ್ಯ ಪುರುಷರಿಗೆರಗದೇ 2 ಗಂಧವಾಹನ ಮತ ಪೊಂದದವರಿಗೆ ಬಂಧ ತಪ್ಪುವದೇ | ಮಂದಮತಿಗೆ ಶಾಮಸುಂದರನ ಮಂದಿರ ದೊರಕುವದೇ 3
--------------
ಶಾಮಸುಂದರ ವಿಠಲ
ಹರಿಸಿರಿ ರಮಣಿಯೆ ಕರಗಳ ಮುಗಿಯುವೆ ವರಮತಿ ನೀಡೆನಗೆ ಪ ಸರಸಿಜಾಕ್ಷನ ವಕ್ಷಸ್ಥಳದಿ ನಿವಾಸಿಯೆ ನಿರುತದಿ ಹರಿಪಾದ ಸ್ಮರಣೆ ಎನಗೆ ಕೊಡು ಅ.ಪ ಮಂದರೋದ್ಧರ ಗೋವಿಂದ ಗುಣಗಳಾ- ನಂದದಿ ಸ್ತುತಿಸಿ ಹಿಗ್ಗುವ ಜನನಿ ಇಂದಿರೆ ರಮೆ ಭಾರ್ಗವಿಯೆ ನಿನ್ನಯ ಪಾದ ದ್ವಂದ್ವಕೆ ನಮಿಪೆ ಸುಗಂಧಿ ಸುಂದರಿಯೆ 1 ಪರಮಪುರುಷ ಪುರುಷೋತ್ತಮನರಸಿಯೆ ಪಾವನಿ ಜನನಿ ಸುರರು ಕಿನ್ನರರು ಕಿಂಪುರುಷರು ಸ್ತುತಿಪರು ವರ ಮಹಾಲಕ್ಷ್ಮಿ ಸುಂದರಿ ಜಯ ಜಯ ಎಂದು 2 ಗಂಗಾಜನಕ ಪಾಂಡುರಂಗ ನಿಜ ಸತಿ ಭೃಂಗಕುಂತಳೆ ಭಾಗ್ಯದ ಖಣಿಯೆ ಅಂಗಜಜನಕ ವಿಹಂಗವಾಹನನ ಪಾ- ದಂಗಳ ಸ್ಮರಣೆಲಿ ನಲಿವ ಮನವ ಕೊಡು 3 ಪಕ್ಷಿವಾಹನ ಕಮಲಾಕ್ಷನ ಮಹಿಮೆಯ ವೀಕ್ಷಿಸಿ ಮನದಿ ಹಿಗ್ಗುವ ಜನನಿ ರಾಕ್ಷಸನಾಮ ವತ್ಸರದಲಿ ಭಕುತರ ಮೋಕ್ಷದಾತನು ಸಲಹುವ ಸುಜನರನು4 ಕಮಲಸಂಭವ ಕಮಲಾಲಯೆ ಹರಿಪಾದ ಕಮಲಭೃಂಗಳೆ ಹಿರಣ್ಯಹರಿಣಿ ಕಮಲನಾಭ ವಿಠ್ಠಲನೊಡಗೂಡಿ ಹೃ- ತ್ಕಮಲದಿ ಶೋಭಿಸು ಎನುತ ಸ್ತುತಿಸುವೆನು 5
--------------
ನಿಡಗುರುಕಿ ಜೀವೂಬಾಯಿ
ಹಸೆಗೀಗ ಬಾರೆ ಸಖಿಯೆ ಶಶಿಬಿಂಬಪೋಲ್ವ ಮುಖಿಯೆ ಪ ಸೊಗಸಾದ ಕಂಚುಕವ ತೋಟ್ಟು | ಮೃಗಮದದ ಕಸ್ತೂರಿ ಬಿಟ್ಟು ಮೃಗನಯನೆ ಫಣಿಯೊಳಿಟ್ಟು 1 ರಮಣೇರು ಕೂಡಿ ನಿನ್ನ ಘಮ‌ಘಮಿಸು ಕರೆಯುತಿಹರೇ | ಪ್ರಮದಾಮಣಿಯ ಶಿರದಿ ಸುಮಗಳ ಮುಡಿದು ಮುದದೀ 2 ಸಿರಿಯರಸ ಕಮಲನಯನ ವರಶಾಮಸುಂದರನಾ | ಸ್ಮರಿಸುತ್ತ ಮನದಿ ಲಲನೆ ತಿರಸ್ಕರಿಸದೆ ಹಂಸಗಮನೆ 3
--------------
ಶಾಮಸುಂದರ ವಿಠಲ
ಹಸೆಗೆ ಕರೆಯುವ ಹಾಡು ಇಂದಿರಾ ದೇವಿಯ ರಮಣ ಬಾವೃಂದಾರಕ ಮುನಿ ವಂದ್ಯ ಬಾ ಶೋಭಾನೇ ಪ ಸಿಂಧು ಶಯನ ಗೋವಿಂದ ಸದÀಮಲಾನಂದ ಬಾತಂದೆಯ ಕಂದ ಬಾ ಮಾವನಾ ಕೊಂದ ಬಾ ಗೋಪಿಯಕಂದ ಬಾ ಹಸೆಯ ಜಗುಲಿಗೇ ಅ.ಪ. ಕೃಷ್ಣವೇಣಿಯ ಪಡೆದವನೆ ಬಾಕೃಷ್ಣನ ರಥ ಹೊಡೆದವನೆ ಬಾಕೃಷ್ಣೆಯ ಕಷ್ಟವ ನಷ್ಟವ ಮಾಡಿದ ಕೃಷ್ಣನೆ ಬಾ ||ಯದುಕುಲ ಶ್ರೇಷ್ಠ ಬಾಸತತ ಸಂತುಷ್ಟನೆ ಬಾಉಡುಪೀಯ ಕೃಷ್ಣ ಬಾ ಹಸೆಯ ಜಗುಲಿಗೇ 1 ನಾಗಾರಿ ಮಧ್ಯಳೆ ಹೊಂತಕಾರಿ ಬಾ ||ಬಲು ದುರಿತಾರಿ ಬಾಬಹು ವೈಯ್ಯಾರಿ ಬಾಸುಂದರ ನಾರೀ ಬಾ ಹಸೆಯ ಜಗುಲಿಗೇ 2 ಮಣಿ ಖಣಿಯೇ ಬಾಸೌಭಾಗ್ಯದ ಪನ್ನಗವೇಣಿ ಬಾ ||ಪರಮ ಕಲ್ಯಾಣಿ ಬಾನಿಗಮಾಭಿಮಾನೀ ಬಾಭಾಗ್ಯದ ನಿಧಿಯೇ ಬಾ ಹಸೆಯ ಜಗುಲಿಗೇ 3 ಸಿರಿ ಮೋಹನ ವಿಠಲನ ಸತಿಯೇ ಬಾವೇದಾವತಿಯೇ ಬಾಬಲು ಪತಿವ್ರತೆಯೇ ಬಾ ಹಸೆಯ ಜಗುಲಿಗೇ 4
--------------
ಮೋಹನದಾಸರು
ಹಸೆಗೆ ಬಾರೆ ಸುಂದರಿ ಓ ಪ ಬಿಸಜಾಲಯೆ ಜನಕ ಕುಮಾರಿ ಅ.ಪ ಮುತ್ತು ಮಾಣಿಕದ ಪೀಠವಂ ಭಕ್ತಿಯಿಂದ ಅಲಂಕರಿಸಿ ಮಿತ್ರೆಯರೆಲ್ಲರು ಕರೆವರು 1 ಸುತ್ತ ಜ್ಯೋತಿಯು ಬೆಳಗಲು ಮತ್ತೆ ಮೆಲ್ಲಡಿಯಿಡುತಲಿ ಓ ಬಿಸಜಾಲಯೆ 2 ಭೂಮಿಜೆ ಲೋಕಮಾತೆಯೆ ಕಾಮಿತಪ್ರದೆ ಶ್ರೀ ಗುರುರಾಮ ವಿಠಲನರಸಿಯೆ 3
--------------
ಗುರುರಾಮವಿಠಲ
ಹಾಕುವೆ ಸುಮಾಲಾ ಸುಶೀಲಾ ಜೀವದೊಡೆಯ ಪರದೇವತೆ ನೀನೆಂಬೊ ಭಾವಕುಸುಮ ಭಕ್ತಿ ಸೂತ್ರದಿ ಬಂಧಿಸಿ 1 ಸರಸಿಜನಾಭನೆ ಸುರದೊಡೆಯನೆ ನೀ ವಿರಚಿಸಿದಂಥ ಪರಿಮಳ ಹಾರುವ ಸರುವ ಹಾರವ ತಂದು ಕೊರಳಿಗೆ ಹಾಕುವೆ 2 ಶಾಮಸುಂದರ ನಿಮ್ಮ ನೇಮದಿ ನಡೆವೆ ನಾ ಭಾಮೆಯನಗಲದೆ ಪ್ರೇಮದಿ ಪೊರೆಯೆಂದು 3
--------------
ಶಾಮಸುಂದರ ವಿಠಲ
ಹಾಕುವೆ ಸುಮಾಲಾ ಸುಶೀಲಾ ಸ್ವೀಕರಿಸೈ ಕರುಣಾಕರ ಕಂಠದಿ ಪ ಅರಳಿದ ಮಲ್ಲಿಗೆ ಸುರಸು ಶಾವಂತಿಗೆ ಪರಿಮಳ ಪುಷ್ಪದ ಸರವನು ಶಾವಂತಿಗೆ ಪರಿಮಳ ಪುಷ್ಪದ ಸರವನು ವಿರಚಿಸಿ 1 ಜೀವದೊಡೆಯ ಪರದೇವತೆ ನೀನೆಂಬೊ ಭಾವಕುಸುಮ ಭಕ್ತಿ ಸೂತ್ರದಿ ಬಂಧಿಸಿ 2 ಶಾಮಸುಂದರ ನಿನ್ನ ನೇಮದಿ ನೆನೆವೆನು ಭಾಮೆಯನಗಲದೆ ಪ್ರೇಮದಿ ಪೊರೆ ಎಂದು 3
--------------
ಶಾಮಸುಂದರ ವಿಠಲ
ಹಾರಶೋಭಿತ ಮುಖ ಸಾರಸ ಲೋಚನ ಪ ತೋರ್ಪ ಸುಂದರ ಬಾಹುಯುಗ ಬಂದು ಕಂದನ ಪೊರೆಯೈ 1 ಪಂಕಜಾಸನ ಮುಖ್ಯ ಶಂಕರಪೂಜಿತ ಸಂಕಟ ಪರಿಹರಿಸೈ ಶಂಕೆಯಿಲ್ಲದೆ ಸ್ಥಿರ ಲಂಕಾ ರಾಜ್ಯವನಿತ್ತೆ 2 ಜನನ ಮರಣಗಳ ಘನಪರಿವಾಹದಿ ನೆನೆದು ಶೋಕಿಪೆ ದೇವನೆ ವಿನಯದೊಳೀವುದೈ ಧೇನು ಪುರಪತೆ 3
--------------
ಬೇಟೆರಾಯ ದೀಕ್ಷಿತರು
ಹಾರಹಾಕುವೆ ಮಾರಸುಂದರ ಶರೀರ ಸುಕುಮಾರಗೆ ಪ ಮರುಗ ಮಲ್ಲಿಗೆ ಜಾಜಿಸಂಪಿಗೆ ಸುರಗಿಬಕುಳ ಪಾದರಿ ಪರಿಪರಿಯಿಂದ ಹಾರ ಕಟ್ಟಿ ಹರಿನಾ ನಿನ್ನ ಕೊರಳಿಗೆ 1 ಕಮಲ ಪುಷ್ಪದ ಹಾರವನ್ನು ವಿಮಲ ಮನದಿ ತಂÀದಿಹೆ ಸುಮಶರಪಿತ ಕೊರಳ ಕೊಟ್ಟರೆ ನಮಿಸಿ ನಿಮಗೆ ಹರುಷದಿ 2 ಮಾನಿನಿಯರ ಮೊರೆಯಕೇಳಿ ಪ್ರಾಣನಾಥವಿಠ್ಠಲ ತಾನೆ ಕರವನೀಡಿ ಹಾರವ ಗಾನಲೋಲ ಧರಿಸಿದ 3
--------------
ಬಾಗೇಪಲ್ಲಿ ಶೇಷದಾಸರು
ಹೀಗೆ ನಿರ್ದಯ ಮಾಡುವರೆ ಶ್ರೀಮನೃಹರೇ ಪ ಹೀಗೆ ನಿರ್ದಯ ಮಾಡುವರೆ ಕರುಣಾಂಬುಧೆ ಪಾಲನ ಅ.ಪ ನಿರ್ಜರ ಪೋಷಿತ ಘೋರದೈತ್ಯೇಯ ಸಂಹಾರ ಕೌಸ್ತುಭರತ್ನಹಾರ ಭೂಷಿತ ಯದುವೀರ ಮಾರಮಣನೇ 1 ಶಶಿವದನ ನೀರದ ಸಂಕಾಶ ಮಧು ಮುರಾಂತಕ ಕುಂದರದನ ಸುಂದರಗಾತ್ರ ಸದಮಲ ತೇಜ ಕಂಜದಲ ಲೋಚನ ಹರೇ 2 ಗರುಡವಾಹನ ಶ್ರೀಲೋಲ ಕರಿರಾಜವರದ ಸುಸ್ಥಿರ ಕೀರ್ತಿಸಾಂದ್ರಮಂ ದರಧರ ವರ ಹೆನ್ನೆಪುರ ಲಕ್ಷ್ಮೀನರಸಿಂಹ 3
--------------
ಹೆನ್ನೆರಂಗದಾಸರು