ಹರಿಕಥಾಮೃತಸಾರ ಸುರಸ ಗ್ರಂಥವ | ಧರಣಿ ಸುರರಲ್ಲದೆ
ದುರುಳ ಪಾಷಂಡಿಗಳರಿತು ಇದರ ಮರ್ಮ
ಹರುಷಿತರಾಗುವರೇ ಪ
ಹಿಮ ಮಯೂಖನ ನೋಡಿ ಕುಮುದ ಪುಷ್ಪದವೊಲು
ಕಮಲವರಳುವದೇ ||
ಯಾಮಿಜನರಂದದಿ ದಿನಮಣಿಯುದದಿ
ತಿಮಿರಷ್ರ್ಯ ಕೊಡಬಲ್ಲದೇ 1
ಚಿನ್ನದಾಭರಣಗಳಿಡಲು ದಾಸಿಯು ದೇವ
ಕನ್ನಿಕೆಯಾಗುವಳೇ
ಮನ್ನಣೆಯರಿಯದ ಮನುಜನ ಶಿರ
ಪುಣ್ಯ ಪುರುಷರಿಗೆರಗದೇ 2
ಗಂಧವಾಹನ ಮತ ಪೊಂದದವರಿಗೆ
ಬಂಧ ತಪ್ಪುವದೇ |
ಮಂದಮತಿಗೆ ಶಾಮಸುಂದರನ
ಮಂದಿರ ದೊರಕುವದೇ 3