ಒಟ್ಟು 745 ಕಡೆಗಳಲ್ಲಿ , 90 ದಾಸರು , 657 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಎಲೆ ಎಲೆ ಮನ ಉಳಿ ಉಳಿ ಸಿರಿ ವಲ್ಲಭನ ಭಜನೆಯೋಳ್ನಲಿ ನಲಿ ಪ ಮಲಿನ ಮಲದಭಾಂಡ ತೊಳಿತೊಳಿ ಈ ಹೊಲೆಮಯ ಸಂಸಾರ ತುಳಿ ತುಳಿ ಅ.ಪ ಶಮೆಶಾಂತಿ ಖಡ್ಗವ ಹಿಡಿಹಿಡಿ ಕಾಲ ಯಮನ ಭಟರ ಭೀತಿ ಕಡಿ ಕಡಿ ಕ್ರಮದಿ ಬಿಡದೆ ಸತ್ಯ ನುಡಿ ನುಡಿಮಹ ಪಡಿ ಪಡಿ ವಿಮಲ ಸನ್ಮಾರ್ಗದಿ ನಡಿ ನಡಿ ರಮಾರಮಣನ ಪಾದಕಮಲ್ಹಿಡಿ ಹಿಡಿ1 ಮಾನಾಪಮಾನ ಸಮ ತಿಳಿ ತಿಳಿ ನಿಜ ಸುಳಿ ಸುಳಿ ನಾನಾ ಕಲ್ಪನೆ ಕಳಿ ಕಳಿ ಸ್ಥಿರ ಧ್ಯಾನ ದಾಸರೊಳು ಹೊಳಿ ಹೊಳಿ ಹೀನ ಭವಾಂಬುಧಿಬಂಧ ಗೆಲಿ ಗೆಲಿ ಹರಿ ಅಮೃತ ಸದಾ ಮೆಲಿ ಮೆಲಿ 2 ಗಜಿಗಜಿ ಮಾಯ ಮುಸುಕು ತೆಗಿ ತೆಗಿ ನೀ ಕುಜನ ಕುಹಕಸಂಗ ಒಗಿ ಒಗಿ ಸುಜನ ಸುಸಂಗವ ಬಗಿ ಬಗಿ ಬಾಳು ಭಜನಾನಂದಕೆ ತಲೆದೂಗಿದೂಗಿ ಭಜಿಸಿ ಶ್ರೀರಾಮಪಾದ ಲಗಿಲಗಿ ಹಿಗ್ಗಿ ನಿಜಮುಕ್ತಿ ಸಾಮ್ರಾಜ್ಯದಿ ಜಿಗಿ ಜಿಗಿ 3
--------------
ರಾಮದಾಸರು
ಎಲೆ ಮನಸೆ ಎಲೆ ಮನಸೆ ಹರಿಪಾದ ನಂಬು ಸುಲಭ ಭಕ್ತರಿಗಾತ ಕೊಡುವ ನಿನಗಿಂಬು ಪ ಕುಲಹೀನನೆನಬೇಡ ಹಳಿದುಕೊಳ್ಳಲಿ ಬೇಡ ತಿಳಿಗೇಡಿಯೆನಬೇಡ ಕಳವಳಿಸಬೇಡ ಮಲಿನವೆಂದೆನಬೇಡ ಜಳಕ ಮಡಿಯೆನಬೇಡ ತಿಳಿದು ಭಜಿಪರ ಬೆಂಬಲನು ನಾನೆಂಬ 1 ವಿಪಿನ ಸೇರಲಿಬೇಡ ಕೌಪೀನ ಬೇಡ ಕಪಟಬುದ್ಧಿಯ ಬಿಟ್ಟು ಸಫಲ ಮಾನಸದಿಂದ ಆಪತ್ತು ಬಂಧುಯೆನೆ ಕೃಪೆಮಾಡ್ವ ಬಂದು 2 ದಾನಧರ್ಮವು ಬೇಡ ನಾನಾ ಕರ್ಮವು ಬೇಡ ಮೌನದೊಳಿರಬೇಡ ಏನುವ್ರತಬೇಡ ಧ್ಯಾನದಾಯಕ ಎನಗೆ ನೀನೆ ಗತಿಯೆಂದೆನಲು ದೀನದಯ ಶ್ರೀರಾಮ ಮಾಣದೆ ಕಾಯ್ವ 3
--------------
ರಾಮದಾಸರು
ಎಲ್ಲನು ನಿನಗೆ ಕೂಡಿತಯ್ಯ ಹರಿ ಪುಲ್ಲನಾಭ ದಯ ಮಾಡಯ್ಯ ಪ ಖುಲ್ಲನು ನಾಬಲು ಎಲ್ಲಿಯುಸಲ್ಲದೆ ತಲ್ಲಣಿಸುತ ನಿನ್ನ ಬಲವಂದೆ ದೇವ ದೇವ ಅ.ಪ ಧೃಢಗುಣ ಎನ್ನೊಳಿಲ್ಲಯ್ಯ ಬಲು ನುಡಿ ಹೀನ ನಾಕಡು ಪಾಪ್ಯಯ್ಯ ನಡೆ ನುಡಿ ಇಲ್ಲದೆ ಕಡುನೊಂದೀಗ ನಿಮ್ಮ ನ್ಹುಡುಕುತ ತಿರುಗುವೆ ಜಡಜಾಕ್ಷನೆ ಪೊರೆ 1 ಪರರದ್ರವ್ಯವಪಹರಿಸಿದೆನೊ ನಾ ಪರಮನೀಚನಾಗಿ ಚರಿಸಿದೆನೊ ಅಗಣಿತ ದುರಿತವನುನಾ ಜರೆಯದೆ ಪರಿಪರಿ ಮಾಡಿದೆನೊ ಮರೆವೆಲಿ ಮಾಡಿದ ಪರಮ ಎನ್ನತಪ್ಪು ಕರುಣಾಕರನೆ ನೀಕರುಣದಿ ಕ್ಷಮಿಸಯ್ಯ 2 ಶರಣಾಗತ ವತ್ಸಲನೆಂದು ನಿನ್ನ ಮರೆಯಹೊಕ್ಕೆನೆಯ್ಯ ದಯಾಸಿಂಧು ಮೊರೆಕೇಳು ಭಕ್ತರ ಪ್ರಿಯಬಂಧು ಎನ್ನ ದುರಿತದಿ ಕಡೆ ಹಾಯ್ಸಯ್ ಇಂದು ಶಿರಬಾಗಿ ನಿಮಗೆ ಸೆರೆಗೊಡ್ಡಿ ಬೇಡುವೆ ಕರಪಿಡಿ ಬಿಡಬೇಡ ಸಿರಿವರ ಶ್ರೀರಾಮ 3
--------------
ರಾಮದಾಸರು
ಎಲ್ಲರೂ ದಾಸರಹರೇ ಪ ಪುಲ್ಲನಾಭನ ದಯವಿಲ್ಲದೆ ಅ.ಪ. ಜ್ಞಾನವಿಲ್ಲ ಭಕುತಿಯಿಲ್ಲ ಧ್ಯಾನ ವೈರಾಗ್ಯ ಮೊದಲೆ ಇಲ್ಲ ಹೀನ ಕರ್ಮಗಳನು ಮಾಡಿ ಶ್ರೀನಿವಾಸನ ಮರೆತವರು 1 ಪರವಧುವಿನ ರೂಪ ಮನದಿ ಸ್ಮರಣೆ ಮಾಡುತ ಬಾಯಿಯೊಳು ಹರಿಯ ಧ್ಯಾನ ಮಾಡುತಿರುವ ಪರಮ ನೀಚರಾದ ಜನರು 2 ಪಟ್ಟೆನಾಮ ಹಚ್ಚಿ ಕಾವಿ ಬಟ್ಟೆಯನ್ನು ಹೊದ್ದುಕೊಂಡು ಅಟ್ಟಹಾಸ ತೋರಿಕೊಳುತ ಗುಟ್ಟು ತಿಳಿಯದಿರುವ ಜನರು 3 ದೊಡ್ಡ ತಂಬೂರಿಯ ಪಿಡಿದು ಅಡ್ಡ ಉದ್ದ ರಾಗ ಪಾಡಿ ದುಡ್ಡುಕಾಸಿಗಾಗಿ ಭ್ರಮಿಸಿ ಹೆಡ್ಡರಾಗಿ ತಿರುಗುವವರು 4 ನೋವು ಬಾರದಂತೆ ಸದಾ ಓವಿಕೊಂಡು ಬರುತಲಿರುವ ದೇವ ರಂಗೇಶವಿಠಲನ ಸೇವೆಯನ್ನು ಮಾಡದಿರುವ 5
--------------
ರಂಗೇಶವಿಠಲದಾಸರು
ಎಲ್ಲಿಂದೆಲ್ಯರುಳಿದ್ಯೋ ಎಲೆ ಮನವೆ ಪ ಎಲ್ಲಿಂದೆಲ್ಯುರುಳಿದ್ಯೋ | ಎಲೆ ಮನವೇ | ಬಲ್ಲತನದಲಿಗಿಡ ಕೊನೆಯ ನೇರಿ ಬಿದ್ದಂತೆ 1 ದುರ್ಲಭ ನರದೇಹದಿ ಬಂದು | ಫುಲ್ಲನಾಭನ ನೆನೆಯದೆ | ಕ್ಷುಲ್ಲಗುಣದಲಿ ನಾನಾ ಹೀನ ಯೋನಿಯ ಮುಖಕ 2 ಅಗ್ರಜನ್ಮದಲಿ ಬಂದು ಸಂತರಾನುಗ್ರಹವ | ಪಡೆದುಕೊಳ್ಳದೆ | ವ್ಯಗ್ರಬುದ್ಧಿಯಲಿ ಅತಿ ಶೂದ್ರ ನಡುವಳಿವಿಡಿದು 3 ವರಗಳನು ಪಡಕೊಳ್ಳವೆ | ಶರೀರಾಭಿಮಾನಿ ಗೆಳೆತನ ಕಟ್ಟಿ ವಿಷಯಕ್ಕು 4 ತಂದೆ ಮಹಿಪತಿ ಸ್ವಾಮಿಯಾ ಮೊರೆ ಹೊಕ್ಕು | ಬಂದ ಸಾರ್ಥಕವ ಮಾಡು | ಇಂದಿನೆಚ್ಚರ ನಾಳೆ ಸಂಧಿಸಿದು ನಿಜದಿಂದ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಷ್ಟು ಕೂಗಲು ದಯ | ಪುಟ್ಟಲಿಲ್ಲವೊ ನಿನಗೆ ಬೆಟ್ಟದೊಡೆಯ ಹರಿಯೆ ಪ. ಸಿಟ್ಟೇಕೆ ಎನ್ನೊಳು ಕೃಷ್ಣಮೂರುತಿ ನಿನಗೆ ಬಿಟ್ಟರೆ ನೀ ಎನ್ನ ಸೃಷ್ಟಿಯೊಳಾರುಂಟೊ ಅ.ಪ. ಪರಮ ಪಾತಕಿಯೆಂದು | ತೊರೆದರೆ ನೀ ಎನ್ನ ಮೊರೆಬೀಳಲಿನ್ನಾರಿಗೆ ಕರುಣಾಮೂರುತಿ ಎಂಬೊ ಬಿರುದು ಪೊತ್ತಿಲ್ಲವೆ ಸರಿಯೆ ನಿನಗಿದು ಕೊರಗಿಸುವುದು ಜರಿದು ಬಳಲುವೆ ಧರೆಯೊಳೀಗ ನಾ ಸುರರ ರಕ್ಷಕ ಪರಮಪಾವನ ಕರವ ಮುಗಿವೆ ದರುಶನವ ನೀಡೊ 1 ನೀನಲ್ಲದೆ ಇನ್ನು | ನಾನಾರ ಭಜಿಸಲೊ ಗಾನವಿಲೋಲ ಹರಿ ಕಾನನದೊಳು ಕಣ್ಣು ಕಾಣದಂತಾಗಿದೆ ಧ್ಯಾನಕೆ ಸಿಲುಕದೆ ನೀನೆನ್ನ ಕಾಡುವೆ ಮಾನ ಪ್ರಾಣ ಶರೀರ ನಿನ್ನದೊ ನಾನು ಅನ್ಯರ ಭಜಿಸಲಾರೆನೊ ಹೀನಬುದ್ಧಿಯ ಬಿಡಿಸಿ ಗುರುಗಳ ಧ್ಯಾನವೆನಗಿತ್ತು ನೀನು ಕಾಯೊ 2 ಅನ್ನಪಾನವ ಬಿಟ್ಟು | ನಿನ್ನನು ಸ್ತುತಿಸಲು ಇನ್ನು ಕರುಣವಿಲ್ಲವೆ ಇನ್ನು ಸೈರಿಸಲಾರೆ ಘನ್ನ ಮಹಿಮನೆ ದುಃಖ ನಿನ್ನ ಮನಸು ಕರಗಲಿನ್ನೇನಗೈಯ್ಯಲೊ ಎನ್ನ ಯತ್ನವು ವ್ಯರ್ಥವಾಯಿತು ಇನ್ನು ನೀ ದಯೆಗೆಯ್ಯಬೇಕೊ ಮುನ್ನ ಮಾಡಿದ ತಪ್ಪನೆಣಿಸದೆ ಎನ್ನ ದೃಷ್ಟಿಗೆ ನಿನ್ನ ತೋರೊ 3 ಸುತನ ಮೊರೆಯನೆ ಕೇಳಿ | ಹಿತದಿ ವೇದವನಿತ್ತೆ ಶರಧಿ ಅಮೃತ ಸುರರಿಗಿತ್ತೆ ಕ್ಷಿತಿಯ ಬಾಧೆಯ ಬಿಡಿಸಿ ಸುತನ ಬಾಧಿಸೊವೊನ ಹತಮಾಡಿ ಇಂದ್ರಗೆ ಗತಿಸಿದ ಪದವಿತ್ತೆ ಕ್ಷಿತಿಯನಾಳ್ವರ ಹತವಗೈಸಿದೆ ಕ್ಷಿತಿಸುತೆಯ ಪ್ರೇಮದಲಿ ತಂದೆ ಹಿತದಿ ಪಾಂಡವ ಸುತರ ಕಾಯ್ದೆ ವ್ರತವ ಕೆಡಿಸಿ ಕಲಿಹತವಗೈದೆ 4 ಕಂತು ಜನಕನೆ ನಿನಗೆ ನ್ನಂತರ ತಿಳಿಯದೇನೋ ಸಂತತ ಗೋಪಾಲಕೃಷ್ಣವಿಠ್ಠಲ ನಿನ್ನ ಶಾಂತರೂಪವ ಎನ್ನ ಅಂತರಂಗದಿ ತೋರೊ ಚಿಂತಿತಾರ್ಥ ಪಂಥಗಾರನೆ ಎಂತು ದಿನಗಳು ಸಂದು ಹೋದುವೊ ಸಂತತಾನಂದನಂತಶಯನ 5
--------------
ಅಂಬಾಬಾಯಿ
ಎಷ್ಟು ಜಾಣಳೆ ಸುಭದ್ರಾ ಎಷ್ಟು ಜಾಣಳೆ ನಷ್ಟ ಮಾತು ನಿನ್ನದುನಾವು ಅಷ್ಟು ತಾಳಿಕೊಂಡೆವಲ್ಲ ಪ. ಮಾನ್ಯ ಮಾನ್ಯರೊಳಗೆ ನೀನು ಕನಿ ರುಕ್ಮಿಣಿಗೆಧಿಕವಾಗಿಎನ್ನ ಹೀನ ನುಡಿದು ಹರಿಯ ನೀಬೆನ್ನ ಬಿದ್ದು ಬಂದುಕುಳಿತೆ1 ಫುಲ್ಲ ಮಲ್ಲಿಗಿ ಹಾಂಗಕುಳಿತೆ2 ಅಷ್ಟು ಜನರೊಳಗೆ ಎನಗೆ ನಿಷ್ಠುರವಾಡಿ ಬಹಳ ಕೃಷ್ಣರಾಯರ ಬದಿಲೆ ನೀನುಶ್ರೇಷ್ಠಳಾಗಿ ಬಂದು ಕುಳಿತಿ 3 ನೋಡ ಬಂದ ಜನರೊಳಗೆ ಆಡಿಕೊಂಡಿ ಅಕ್ಕನ ಬಹಳ ಮೂಡಲಗಿರಿವಾಸಗೆ ಮಾರಿ ಬಾಡಧಾಂಗೆ ತೋರಿಕೊಂಡಿ 4 ಮಾನ ಬಿಟ್ಟು ಮಂದಿಯೊಳಗೆ ನಾನಾ ಮಾತು ಎನಗೆ ಆಡದಿನೀನು ರಾಮೇಶನಂಫ್ರಿಯಲಿಮೌನ ದಿಂದ ಬಂದು ಕುಳಿತಿ 5
--------------
ಗಲಗಲಿಅವ್ವನವರು
ಎಷ್ಟೋ ಅಪರಾಧಿ ಯಾವುದು ಬಟ್ಟೆಯೋ ಕರುಣಾಬ್ಧಿ ಪ. ದುಷ್ಟರಾರು ಜನ ಒಟ್ಟುಗೂಡಿ ಎನ್ನ ಮೆಟ್ಟಿ ಕುಟ್ಟಿ ಪುಂಡಿಗುಟ್ಟುವರೈ ಹರಿ ಅ.ಪ. ಲೇಶ ಪುಣ್ಯವಿಲ್ಲ ಪಾಪದ ರಾಶಿ ಬೆಳೆಯಿತಲ್ಲ ಆಶಾವಶ ಹರಿದಾಸನೆಂದೆನಿಸಿದೆ ದೂಷಣ ಜನರ ಶಭಾಸಿಗೆ ಮೆಚ್ಚಿದೆ 1 ಕುಲಕಲ್ಮಷ ಬಹಳ ದೇಹದಿ ನೆಲೆಸಿತು ಶ್ರೀಲೋಲ ಜಲಜನಾಭ ನಿನ್ನೊಲುಮೆಯೆ ಮುಖ್ಯವು ಕುಲಕೆಟ್ಟ ಅಜಮಿಳ ಪಾವನನಾದ 2 ಹೀನರೈವರ ಸಂಗದಿಂದಲೆ ಹಾನಿಯಾದೆನೊ ರಂಗ ಪ್ರಾಣವು ನಿನ್ನಾಧೀನವಾದ ಮೇಲೆ ನೀನೆ ಗತಿ ಲಕ್ಷ್ಮೀನಾರಾಯಣ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಎಷ್ಟೋ ಆಪರಾಧಿ ಯಾವುದು ಬಟ್ಟೆಯೋ ಕರುಣಾಬ್ಧಿ ಪ. ದುಷ್ಟರಾರು ಜನ ಒಟ್ಟುಗೂಡಿ ಎನ್ನ ಮೆಟ್ಟಿ ಕುಟ್ಟಿ ಪುಂಡಿಗುಟ್ಟುವರೈ ಹರಿ ಅ.ಪ. ಲೇಶ ಪುಣ್ಯವಿಲ್ಲ ಪಾಪದ ರಾಶಿ ಬೆಳೆಯಿತಲ್ಲ ಆಶಾವಶ ಹರಿದಾಸನೆಂದೆನಿಸಿದೆ ದೂಷಣ ಜನರ ಶಭಾಸಿಗೆ ಮೆಚ್ಚಿದೆ1 ಕುಲಕಲ್ಮಷ ಬಹಳ ದೇಹದಿ ನೆಲೆಸಿತು ಶ್ರೀಲೋಲ ಜಲಜನಾಭ ನಿನ್ನೊಲುಮೆಯೆ ಮುಖ್ಯವು ಕುಲಕೆಟ್ಟ ಅಜಮಿಳ ಪಾವನನಾದ 2 ಹೀನರೈವರ ಸಂಗದಿಂದಲೆ ಹಾನಿಯಾದೆನೊ ರಂಗ ಪ್ರಾಣವು ನಿನ್ನಾಧೀನವಾದ ಮೇಲೆ ನೀನೆ ಗತಿ ಲಕ್ಷ್ಮೀನಾರಾಯಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ಏಕೆ ಎನ್ನೊಳು ಮೂಕನಾದ್ಯೊತ್ರಿ ಲೋಕ ಜೀವಾಳುಪ ಪಿತ ಮಾತೃದ್ರೋಹಿಯೆಂದು ಅತಿಥಿಗಳನಾದರನುಯೆಂದು ಅತಿ ಪಾತಕಿಯಿವನುಯೆಂದಹಿತದಿ ಮುಖವೆತ್ತದಿರುವ್ಯೋ 1 ವಾಚಹೀನ ನೀಚನೆಂದು ಸಾಚಮನವಿಗಳ್ನಿಂದಕನೆಂದು ಆಚರಿಪನನಾಚಾರವೆಂದು ನೀಚಾರಿ ದಯಸೂಚಿಸದಿರುವ್ಯೋ 2 ಭಕ್ತರನ್ನು ಕ್ಷಮಿಸಿ ಪೊರೆದು ಭಕ್ತವತ್ಸಲನೆಂಬ ಬಿರುದು ಹೊತ್ತದ್ದೆಲ್ಲಡಗಿಸಿದ್ಯೋ ಮುಕ್ತಿದಾತೆನ್ನಯ್ಯ ರಾಮ 3
--------------
ರಾಮದಾಸರು
ಏಕೆ ಚಿಂತಿಪೆ ನೀ ಎಲೆ ಕೋತಿಮನವೆ ಪಾದ ಗಟ್ಟ್ಯಾಗಿ ನಂಬದಲೆ ಪ ಹಿತದ ಭಕ್ತನು ಎಂದು ಮತಿಹೀನ ಭಸ್ಮಗುರಿ ಹಸ್ತವರವಿತ್ತ್ಹರನು ಮತಿದಪ್ಪೋಡುತಿರೆ ಗತಿನೀನೆ ಹರಿಯೆನಲು ಅತಿದಯದಿಂ ಶಿವನ್ನುಳಿಸಿ ಕೃತ್ತಿಮನ್ನಳದ ಹರಿ ಪತಿತಮಹಾತ್ಮರಿಯೆ 1 ಘುಡುಘುಡಿಸಿ ಹಿರಣ್ಯನು ಜಡಮತಿ ಹರಿಯೆಲ್ಲಿ ಗಡ ತೋರೀ ಕಂಬದಿ ಎಂದಾರ್ಭಟಿಸಿ ಬರಸೆಳೆಯೆ ನಡುನಡುಗಿ ಪ್ರಹ್ಲಾದ ಜಡಜಾಕ್ಷ ಪೊರೆಯೆನಲು ಮೂಡಿ ಕಂಬದಿ ಖಳನ ಒಡಲ ಬಗೆದದ್ದರ್ಹಿಯೆ 2 ಕುರುಪನ ಸಭೆಯೊಳಗೆ ಮೊರೆಯಿಟ್ಟ ದ್ರೌಪದಿಗೆ ಕರುಣದಕ್ಷಯವಿತ್ತು ಪೊರೆದ ಪರಮಾತ್ಮ ಕರುಣಾಳು ಶ್ರೀರಾಮ ಚರಣದಾಸರ ನೆರ ಅರೆಘಳಿಗೆ ಬಿಟ್ಟಿರನು ನಿರುತ ನೀ ಸ್ಮರಿಸೋ 3
--------------
ರಾಮದಾಸರು
ಏನ ನೋಡಿದೆ ದೇವಿ ಏನ ನೋಡಿದೆ | ಹೀನ ಜನರು ಭಜಕರ ಮಾನಹಾನಿ ಮಾಡುವದನ ಪ ಸಿಂಧು ಎಂದು ನಂಬಿ ಇದ್ದೆ 1 ಖಳರ ನಾಲಿಗೆಯನ್ನು ಮತ್ತೆ | ಸೆಳೆದು ಸೀಳಿ ಬಿಸುಟುತಿರಲು |ಉಳಿವುದಿಲ್ಲ ಮತವು ಎಂದು | ತಿಳಿಯವಲ್ಲದೇನೆ ನಿನಗೆ 2 ಪಾದ ಇಂದು ತೋರು ಮಹಿಮೆಗಳನು 3
--------------
ಭಾವತರಕರು
ಏನ ಹೇಳಲೆನ್ನ ಬುದ್ಧಿಹೀನತೆಯನಿಂದು ಹರಿಯೆ ಶ್ವಾನಕಿಂತ ನೀಚನಾದೆ ಧ್ಯಾನಿಸದೆ ಮರುಳಾದೆ ಪ. ಪಂಚವಿಂಶತ್ವದಲ್ಲಿ ಮಿಂಚುತ್ತಿರುವ ನಿನ್ನ ರೂಪ ಕಿಂಚಿತ್ತಾದರರಿಯದೆ ಕೀಳ್ಹಂಚಿನೊಳಸಂಚ ನಂಬಿ 1 ಮಾಯಾ ಶಕ್ತಿ ಪಾಶಬಂಧದಲ್ಲಿ ಸಿಲುಕಿ ಲೇಶ ಸ್ವಾತಂತ್ರ್ಯವರಿಯದಾಶೆಯೆಂಬ ಕಡಲೊಳಿಳಿದೆ 2 ಗಣನೆಯಿಲ್ಲದೆನ್ನ ಕೆಟ್ಟ ಗುಣಗಳೊಂದನೆಣಿಸದಿಂದು ಮೂರ್ತಿ ದೋರೊ 3
--------------
ತುಪಾಕಿ ವೆಂಕಟರಮಣಾಚಾರ್ಯ
ಏನಂತ ನರನೆನ್ನಬೇಕೋ ಜಾನಕೀಶನ ಧ್ಯಾನ ಮನದೊಳಿಲ್ಲದವಗೆ ಪ ಸುಕೃತ ಒಡಗೂಡಿ ಮಾನವನಾದದ್ದು ಖೂನವಿನತಿಲ್ಲದೆ ಜ್ಞಾನಶೂನ್ಯನಾಗಿ ಶ್ವಾನನಂದದಿ ಕೂಗಿ ಹೀನಭವಕೆ ಬಿದ್ದು ನರಕಕ್ಹೋಗುವನಿಗೆ 1 ತಾನಾರೆಂಬ ವಿಚಾರವು ಇಲ್ಲದೆ ಏನೇನು ಸುಖವಿಲ್ಲದ್ಹೇಯಸಂಸಾರದ ಕಾನನದೊಳು ಬಿದ್ದು ಕುನ್ನಿಯಂದದಿ ಮಹ ಜಾಣರ ಜರೆಯುತ ಜವಗೀಡಾಗುವನಿಗೆ 2 ಹೇಸಿಪ್ರಪಂಚದ ವಾಸನ್ಹಿಡಿದು ಹಿಂದ ಕ್ಕೇಸೇಸು ಜನಮದಿ ಘಾಸಿಯಾದಂಥಾದ್ದು ಸೋಸಿಲಿಂ ತಿಳಕೊಂಡು ದಾಸಾನುದಾಸರ ದಾಸನಾಗದೆ ಕಾಲಪಾಶಕ್ಹೋಗುವನಿಗೆ 3 ಮಿಥ್ಯೆ ಕಾಣುವುದೆಲ್ಲ ನಿತ್ಯವಲ್ಲೆನ್ನುತ ಸತ್ಯವೃತ್ತಿ ತನ್ನ ಚಿತ್ತದೋಳ್ಬಲಿಸಲು ನಿತ್ಯ ಸುಖವನೀವ ಉತ್ತಮವಾದಂಥ ಹೊತ್ತನು ಕಳಕೊಂಡು ಮೃತ್ಯುವಶನಾಗುವಗೆ 4 ಸುಮನಸಕಲ್ಪದ್ರುಮ ತಂದೆ ಶ್ರೀರಾಮ ನಮಿತ ಚರಣ ಕಂಡು ನಮಿಸಿ ಪ್ರಾರಬ್ದವ ಕ್ರಮದಿ ಗೆಲಿದು ನಿಜ ವಿಮಲಪದ ಪಡೆವ ಸಮಯವನರಿಯದೆ ಯಮಲೋಕ ಸೇರುವಗೆ 5
--------------
ರಾಮದಾಸರು
ಏನಬೇಡಲೊ ಕೃಷ್ಣ ನಾಚಿಕಿಲ್ಲದೆ ಪ ಜ್ಞಾನಶೂನ್ಯನಾಗಿ ಬಹಳ ಹೀನ ಕಾರ್ಯ ಮಾಡಿ ನಾನು ಅ.ಪ. ಪರರ ವನಿತೆ ಧನಗಳಿಂಗೆ ಅರಿತು ಅರಿತು ಆಶೆಪಡುತ ದುರಿತಕೋಟಿಗಳನು ಮಾಡಿ ಪರಮ ನೀಚನೆನಿಸಿದವನು 1 ವನಗಳನು ಕಡಿಸಿ ಹಿರಿದು ಮನೆಗಳನ್ನು ರಚಿಸಿಕೊಂಡು ವನಿತೆ ಮಾತು ಕೇಳಿ ಜನನಿ ಜನಕರನ್ನು ತೊರೆದ ಪಾಪಿ 2 ಸತ್ಯ ಮತವನು ತುಚ್ಛಗೈದು ನಿತ್ಯಕರ್ಮಗಳನು ಬಿಟ್ಟು ಮತ್ತನಾಗಿ ತಿಂದು ಮಲಗಿ ಕತ್ತೆಯಂತೆ ಹೊರಳುವವನು 3 ಆರ್ತರಾದ ಜನರ ಸಲಹಿ ಕೀರ್ತಿಯನ್ನು ಹೊಂದಿ ದೇಹ ಸಾರ್ಥಕವನು ಮಾಡಿಕೊಳದೆ ಧೂರ್ತನೆನಿಸಿಕೊಳುವ ನರನು 4 ವಾಸುದೇವ ಸಕಲ ದೋಷ ರಾಸಿಗಳನು ದಹಿಸುವ ರಂ- ಗೇಶವಿಠಲರೇಯ ನಿನ್ನ ದಾಸನೆಂದು ಪೇಳದವನು 5
--------------
ರಂಗೇಶವಿಠಲದಾಸರು