ಒಟ್ಟು 135 ಕಡೆಗಳಲ್ಲಿ , 31 ದಾಸರು , 128 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಂದಿಸುವೆನು ರಘುವರನಾ ಸುರವಂದಿತ ಚರಣಾಂಬುಜನ ಪ ತಂದೆ ಮಾತಿಗೆ ವನಕ್ಹೋಗಿ ಬಂದವನಾಸುಂದರ ಸಹ ಸೀತೆಯಿಂದ ಅನುಜನಾ ಅ.ಪ ಚಾಪ ಭಂಜಕನಾ 1 ವಾರಿಧಿ ಸೇತು ಬಂಧಕನಾ ಸೀತಾ -ಚೋರನ ಶಿರವಳಿದವನಾಚಾರು ಸಿಂಹಾಸನವೇರುತ ಸರಯು -ತೀರದ ಅಯೋಧ್ಯಾ ವಿಹಾರ ಸುಂದರನಾ2 ಕೇಸರಿ ಸುತಗೆ ತನುಧನಮಣಿಆಶ್ರಯವನು ಕೊಟ್ಟವನಾಕೋಸಲ ಜನರಿಗೆ ಮೋಕ್ಷವವಿತ್ತವನಾಇಂದಿರೇಶ ಸುಖಾತ್ಮ ನಿರ್ದೋಷ ಪುರುಷನಾ 3
--------------
ಇಂದಿರೇಶರು
ವರದಾತೀರದಿ ನೆಲಸಿಹ ಗುರುವರನ್ಯಾರೆ ಪೇಳಮ್ಮಯ್ಯ ಪ ವರದಾಯ ಶ್ರೀ ರಾಘವೇಂದ್ರರ ಕರುಣ ಪಡೆದ ಸುಶೀಲೇಂದ್ರ ಮುನಿಪನೆ ಅ.ಪ ದರಪೋಲುವ ಕಂಧರದಿ ತುಲಸಿ ಮಣಿಹಾರ | ಪೇಳಮ್ಮಯ್ಯ ಅರಶಶಿಸಮ ಸುವಿಶಾಲ ಫಾಲದಲಿ ತಿಲಕ ಪೇಳಮ್ಮಯ್ಯ ಪರಿ ಪರಿ ವಿಭವದಿ ಮೆರೆದ ಕರುಣವರ ಪುಣ್ಯ ಪುರುಷನ 1 ಮಾರ್ಗಣ ತೃಣ ಸಮವೇಣಿಸಿಹನು ಪೇಳಮ್ಮಯ್ಯ | ಅನಿಮಿಷ ಲೋಚನೆ ಅನುಮಾನಿಸದಿರು ಅನಿಮಿಷಾಮಶರಿವರನನುದಿನ ಸೇವಿಸು 2 ಯತಿ ಶಿರೋಮಣಿ ಧೀರೇಂದ್ರರ ಹಿತಕತಿ ಪಾತ್ರ ಪೇಳಮ್ಮಯ್ಯ ಅತುಳ ಮಹಿಮೆ ಸುಕೃತೀಂದ್ರ ಹೃದಯಶತಪ್ರ ಪೇಳಮ್ಮಯ್ಯ ಸತತ ರವಿ ಎನಿಸಿ ಶಾಮಸುಂದರನ ಅತಿ ಭಕುತಿಲಿ ತುತಿಪ ಗುಣನಿಧಿ 3
--------------
ಶಾಮಸುಂದರ ವಿಠಲ
ವರದೇಂದ್ರ ವರದೇಂದ್ರ ವರದಾಯಕ ಗುರು | ವರಗುಣಸಾಂದ್ರ ಪ ಪಾವನ ಚರಿತ ವೃಂದಾವನ ಮಂದಿರ ಕೋವಿದ ಜನ ಸುಸೇವಿತ ಸದಯ1 ಕಾಲಾಷಾಯಾಂಬರ | ಭೂಷಿತ ಎನ್ನಯ ದೋಷಗಳೆಣಿಸದೆ ಪೋಷಿಸು ಸತತ 2 ಕಠಿಣ ಭವಾಂಬುಧಿ ಘಟಜ ಕುಟಿಲಮತ ವಿಟಿಪಿ ಕುಠಾರಿ ಉತ್ಕಟ ಸನ್ಮಹಿಮ 3 ನತ ಸುರಕ್ಷಿತಿರುಹ | ಜಿತ ರತಿಪತಿ ಶರ ಮತಿವರ ದಶಮತಿ ದುರಿತವಾರಿಧಿ ವಿಭು 4 ಹೇಮೋದರ ವಿತ ಶಾಮಸುಂದರನ ಪ್ರೇಮಪಾತ್ರ ಪುಣ್ಯಧಾಮ ಮಹಾತ್ಮ 5
--------------
ಶಾಮಸುಂದರ ವಿಠಲ
ವಲ್ಲೀದೇವಿಯ ವಲ್ಲಭನೆ ಬಲ್ಲಿದ ಭಕ್ತರ ಸುಲ್ಲಭನೆ ಪ. ಸಲ್ಲಲಿತ ಪಾದಪಲ್ಲವ ಭಜಿಸುವ- ರೆಲ್ಲರ ಮನಸಿನೊಳುಲ್ಲಸನೆಅ.ಪ. ವೃಂದಾರಕಮುನಿವಂದಿತನೆ ಕಂದರ್ಪಾಮಿತಸುಂದರನೆ ಸ್ಕಂದನೆ ಸಚ್ಚಿದಾನಂದನೆ ಪಾರ್ವತೀ- ನಂದನ ಸದ್ಗುಣಮಂದಿರನೆ 1 ತಾರಕದೈತ್ಯ ಸಂಹಾರಕನೆ ಸೇರಿದ ಭಕ್ತೋದ್ಧಾರಕನೆ ಮಾರಾರಿಯ ಸುಕುಮಾರನೆ ಧೀರನೆ ಚಾರು ಮಯೂರ ತುರಂಗಮನೆ2 ಲಕ್ಷುಮಿನಾರಾಯಣ ಪ್ರಿಯನೆ ರಕ್ಕಸರಿಂಗತಿದುಃಖದನೆ ಕುಕ್ಕುಟವಜ್ರಾಭಯಶಕ್ತಿಹಸ್ತನೆ ಪ್ರಖ್ಯಾತ ಪಾವಂಜಾಖ್ಯ ಪುರವರನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ವಾರಿಜನಯನಗೆ ಜಯ ಮಂಗಳ ಶುಭ ಮಂಗಳಾ ಪ ನೀರಧಿಶಯನಗೆ ಜಯ ಮಂಗಳ ಶುಭ ಮಂಗಳಂ ಅ.ಪ ಭವ ಭಯ ಹರನಿಗೆ ಪವನಜನಮಿತಗೆ ಭುವನಸುಂದರನಿಗೆ ಜಯಮಂಗಳಂ ಕುವಲಯಶ್ಯಾಮಗೆ ನವಮಣಿಮಾಲಗೆ ದಿವಿಜಸಂಸೇವ್ಯಗೆ ಶುಭಮಂಗಳಂ1 ಕರುಣಾಜಲಧಿಗೆ ಶರಣರ ಪೊರೆವಗೆ ನರಹರಿರೂಪಗೆ ಜಯ ಮಂಗಳಂ ಪುರುಷೋತ್ತಮನಿಗೆ ದುರಿತಸಂಹಾರಗೆ ಶುಭ ಮಂಗಳಂ 2 ಗಂಗೆಯ ಜನಕಗೆ ಮಂಗಳರೂಪಗೆ ಸಂಗರಧೀರಗೆ ಶುಭಮಂಗಳಂ ತುಂಗವಿಕ್ರಮನಿಗೆ ಇಂಗಿತವರಿವಗೆ ಮಾಂಗಿರಿಯರಸಗೆ ಜಯ ಮಂಗಳಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವೆಂಕಟೇಶ ಕಾಯೋ ಕಿಂಕರರವನೆಂದು ಪ ಪಂಕಜಾಸನ ಶಂಕರರಾರ್ಚಿತ ಶಂಬಸುದರ್ಶನಾಂಕಿತ ಅ.ಪ. ವಾಸುದೇವ ನೀನೆ ಶ್ರೀ ಸರಸಿಜಭವ ವೀಶ ಫಣಿಪ ವಹೇಶ ವಾಸವರಾಶೆ ಪೂರೈಸಿ ಪೋಷಿಸುವ ಜಗದೀಶ ಜೀವನದ ವಾ ರಾಶಿಜಾಧಿಪ ಭೇಶ ರವಿ ಸಂಕಾಶ ಕರಿವರಕ್ಲೇಶ ಹಾ 1 ಸ್ವರಮಣ ಭಕುತರ ಕಾಮಿತಪ್ರದ ಕೈರವದಳಶ್ಯಾಮ ಸುಂದರನೆ ಹೇಮ ಶೃಂಗೀವರಧಾಮ ದೀನಬಂಧು ಸನ್ನುತ ಸೋಮಧರ ಸುತ್ರಾಮ ಮುಖ ಸುರಸ್ತೋಮನಾ 2 ತ್ರಿಗುಣಾತೀತ ನರಮೃಗರೂಪ ನಾನಿನ್ನ ಪೊಗಳಬಲ್ಲೆನೆ ನಿಗಮವೇದ್ಯನೆ ಜಗನ್ನಾಥ ವಿಠಲ ಸ್ವಗತಭೇದ ಶೂನ್ಯನೆ ಮುಗಿವೆ ಕರಗಳ ಪನ್ನಗನಗಾಧಿಪ ಪೊಗರೊಗುವ ನಗೆಮೊಗವ ಸೊಬಗಿನ ಸುಗುಣನೆ 3
--------------
ಜಗನ್ನಾಥದಾಸರು
ಶರಧಿಶಯನಾ ವರ ಸರಸಿಜ ಸುಂದರನಯನಾ ಪ ಸದನ ಅ.ಪ ನಿಗಮ ನಿರುಪಮ ಸೀಮಾ | ರಮ್ಯ ಪಟ್ಟಾಭಿರಾಮಾ | ದುರುಳದನುಜ ಭೀಮಾ ಶ್ರೀ[ಮಾಂಗಿರಿ] ರಮಾ ಪ್ರೇಮಾ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶಾಂತಿಯೆಂಬುದು ಸಕಲ ಸದ್ಗುಣಂಗಳ ಮುಕುಟ ಶಾಂತಿಯೊಂದಿರಲು ಕೃತಾಂತನಂಜಿಕೆಯಿಲ್ಲ ಪ ಶಾಂತಿಯೆ ಪ್ರದ್ವೇಷ ಕಾಂತಾರ ಪಾವಕವು | ಶಾಂತಿ ಕಾಂತಿಯು ದುರಿತಧ್ವಾಂತ ಓಡಿಸುವದು ಚಾಪ | ಮೊದಲಾದ ದು | ರಂತ ಶಸ್ತ್ರಾಯುಧಗಳು ಶಾಂತಿ ಖಡ್ಗಕೆ ಶರಣು ಹೊಡೆಯುತಿಹವು 1 ಶಾಂತಿಗೊಪ್ಪದ ಕುರುಪ ಭ್ರಾಂತಿಯಲಿ ತನ್ನ ಸಂತತ ಸಹಿತವಾಗಿ ಸಂಗರದಿ ಹತನಾದ ಶಾಂತಿಯಿಂದಲಿ ಧರ್ಮ ಚಿಂತೆಯನು ನೀಗಿದನು ಶಾಂತಿಯಿಂದಲಿ ಸತ್ಯ ಹರಿಶ್ಚಂದ್ರಗಾಧಿಪ ಜನ ಪೌರುಷÀವೆಲ್ಲ ನಿಸ್ತೇಜಗೊಳಿಸಿದನು 2 ಶಾಂತಿಯಲಿ ಭಕ್ತಿ ಮುಕ್ತಿ ಇಂತೆಂದು ವೇದಗಳು ಅಂತ್ಯದಲಿ ತ್ರೈವಾರ ಘೋಷಿಸುತಲಿಹವು ಶಾಂತಮೂರುತಿಯಾದ ಶ್ರೀ ಶಾಮಸುಂದರನು ಶಾಂತಿಗೆ ಮೆಚ್ಚಿ ಅಚ್ಯುತಪದವೀವಾ 3
--------------
ಶಾಮಸುಂದರ ವಿಠಲ
ಶಾಮಸುಂದರನೆ ನೀನು ಪ್ರೇಮಾದಿ ಕಾಯೊ ಪ ಧರೆಯೊಳು ನಾ ಬಂದು ಥರಥರದಲ್ಲಿ ನೊಂದು ಮರುಗಿದೆ ತೋರ್ನಿನ್ನ ಚರಣಕಮಲವಾ 1 ಅನ್ಯನೆಂದರಿಯದೆ ನಿನ್ನವನೆಂದೆನ್ನ ಬನ್ನ ಬಿಡಿಸು ಬಾರೋ 2 ಶ್ರೀವತ್ಸಾಂಕಿತ ನೀನು ಶರಣಾಗತ ನಾನು ಸರಸಿಜನಯನ ಬ್ಯಾಗ ಬಾರೊ ನಿನ್ನ 3
--------------
ಸಿರಿವತ್ಸಾಂಕಿತರು
ಶ್ರೀ ಗುರು ಜಗನ್ನಾಥಾರ್ಯ ಕರುಣಿಸಯ್ಯ ಮೊರೆಹೊಕ್ಕೆ ತ್ವತ್ವದಕೆÉ ಮರಿಯದಲೆ ಪಿಡಿ ಕೈಯ್ಯ ಪ ಪ್ರಹ್ಲಾದನನುಗ್ರವು ಎಲ್ಲ ಕಾಲದಲಿ ನಿ ನ್ನಲ್ಲಿ ಸಂಪೂರ್ಣವಾಗಿರುವದೆಂಬ ಸೊಲ್ಲು ಲಾಲಿಸಿ ನಿನ್ನ ಪಲ್ಲಾವಾಂಘ್ರಿಗೆ ನಮಿಪೆ ಬಲ್ಲಿದನೆ ಹರಿಧ್ಯಾನದಲ್ಲಿ ನಿಲ್ಲಿಸು ಮನವ 1 ಜನಕಾಗ್ರಜಾತಾರ್ಯ | ನರನಿಸಿ ಜನಿಸುತ ಮಂತ್ರಮುನಿ ನಿಲಯ ಮುನಿವರ್ಯ ಶ್ರೀ ರಾಯರ ಗುಣಸ್ತವನ ವಿರಚಿಸುತ ಪ್ರಣತರಿಗೆ ಪಠಿಸುತ್ತ ಮನದಿಚ್ಛೆ ಪಡೆವುದರೆ ಅನುಕೂಲಿಸಿದ ಜ್ಞಾನಿ 2 ಶ್ರೀಶಾಮಸುಂದರನ ದಾಸವರ್ಯರ ಉಪ ದೇಶವನು ಕೊಂಡು ಉಪಾಸನೆಯನು ಲೇಸಾಗಿ ಬಿಡದೆ ಪ್ರತಿವಾಸರದಿ ಗೈದಂಥ ಭೂಸುರಾಗ್ರಣಿಯಾದ ಪ್ರತಿವಾಸರದಿ ಗೈದಂಥ ಭೂಸುರಾಗ್ರಣಿಯಾದ ಕೋಸಿಗೆ ವಾಸ 3
--------------
ಶಾಮಸುಂದರ ವಿಠಲ
ಶ್ರೀ ಭಾರತೀದೇವಿ ಎಂತು ನೀವಶವಾದಿಯೇ ಭಾರತಿದೇವಿ ಎಂತು ನೀ ಮರುಳಾದಿಯೆ ಪ ಕಂತು ಹರನ ತಾಯಿ ದಂತಿಗಮನೆ ದಮಯಂತಿ ಕಾಂತಸುತೆ ಅ.ಪ ಧರೆಯೊಳು ಪುಟ್ಟುತಲಿ | ಆಕಾಶಕ್ಕೆ ಭರದಿಂದ ಜಿಗಿಯುತಲಿ ಸರಸಿಜ ಸಖನಾದ | ತರಣಿಯ ಫಲವೆಂದು ಅರಿತು ಭಕ್ಷಿಸಲ್ಹೋದ | ತರು ಚರ ರೂಪಿಗೆ 1 ಪುಂಡರೀಕಾಕ್ಷ ಕೇಳಿ | ದ್ವಾಪರದಿ ಪ್ರಚಂಡಗೆ ಒಲಿಯುತಲಿ ಭಂಡ ಬಕನ ಶಿರದಿಂಡು ಗೆಡಹಿ ಅವನ ಭಂಡಿ ಓದನವನ್ನು ಉಂಡ ಪುಂಡಗೆ ಮಾತೆ 2 ಶ್ರೀ ಶಾಮಸುಂದರನೇ ತ್ರೈಲೋಕ್ಯಕ್ಕೆ ಈಶನೆಂಬುದು ತಾನು ಲೇಸಾಗಿ ಪೇಳಲು | ಲೇಶವಾದರು ನಿನ್ನ ಆಶೆ ಇಲ್ಲದೆ ಸನ್ಯಾಸಿ ಆದವನಿಗೆ 3
--------------
ಶಾಮಸುಂದರ ವಿಠಲ
ಶ್ರೀ ಶೇಷದೇವರು ಪೋಷಿಸೆನ್ನನು ನಿರುತ ಶೇಷದೇವ ದೋಷ ನಾಶನಗೊಳಿಸಿ ಲೇಸಾಗಿ ಪಿಡಿಕರವ ಪ ತಲ್ಪ ಅನುಜ ಪೂರ್ವಜನಾ ಘನಸೇವೆಯನು ಗೈದು | ಫಣಿರಾಜನೆ ವಿನಯದಲಿ ಬಿನ್ನೈಪೆ | ನಿನಗಶನವಾದಾತ ಅನುದಿನ 1 ಭೂಗಗನ ಪಾತಾಳ | ಸಾಗರವ ವ್ಯಾಪಿಸಿದ ಯೋಗ ಸಾಧನ ಶೂರ | ನಾಗನಾಥ ಬಾಗಿಬೇಡುವೆ ಭವದ ರೋಗಕೌಷಧವಾದ ಭಾಗವತ ಶ್ರವಣ ಸುಖರಾಗದಲಿ ನೀಕೊಟ್ಟು 2 ಸಾನಿಸಿರಾಂಬಕ ನಮಿತ | ಸಾಸಿರಾನನನಾದ ವಾಸುಕೀವರ | ವಾರುಣೀಶ ನಿನ್ನ || ಹಾಸಿಗೆಯಗೈದಂಥ ಶ್ರೀ ಶಾಮಸುಂದರನ ನಿತ್ಯ 3
--------------
ಶಾಮಸುಂದರ ವಿಠಲ
ಶ್ರೀ ಸರಸ್ವತೀದೇವಿ ವಾಣಿಯೆ ವೀಣಾಪಾಣಿಯೆ ಪಾಲಿಸು ಸದಾ ಸ್ಥಾಣು ಜನನಿ ಚತುರಾನನ ರಾಣಿ ಶ್ರೀ ಪ ಕೃತಿ | ಸುತೆ ಸರಸ್ವತಿ ದೇವಿ ಹಿತದಿಂದಲೆನ್ನನು | ಸುತನೆಂದು ಭಾವಿಸೆ 1 ಬುದ್ಧ್ಯಾಭಿಮಾನಿ ಸದ್ವಿದ್ಯಾ ಪ್ರದಾಯಿನಿ ಶುದ್ಧ ಸುಮತಿ ಕೊಟ್ಟು | ಉದ್ಧರಿಸನುದಿನ 2 ಶಾರದೆ ದಯವ್ಯಾಕೆ | ಬಾರದೆ ಎನ್ನೊಳು ನಾರದ ಸೇವಿತೆ | ಸೇರಿದೆ ತ್ವತ್ಪಾದ 3 ಪವನಾಂತರ್ಗತ ಮಾಧವನ ಸನ್ಮಹಿಮೆಯ ಕವನದಿಂದಲಿ ಸುಸ್ತವನ ಮಾಡಿಸೆ 4 ಸಾಮಗಾನವಿಲೋಲ | ಶಾಮಸುಂದರನ ಸೊಸೆ ಪ್ರೇಮದಿ ಮನ್ಮುಖ ಧಾಮದಿ ವಾನಿಸೆ5
--------------
ಶಾಮಸುಂದರ ವಿಠಲ
ಶ್ರೀ ಹರಿ ಹರಿಯೇ ಬಾರೋ ತ್ವರಾ ಘೋರಾರಣ್ಯದಿ ಸೇರಿ ದಾರಿ ತೋರದೀಗ ಸಾರಿಕರೆವೆ ಅ.ಪ ಪಾಶದಿಂದ ಮುಂದಕ್ಕೆ ಬಿಡದಲಿಹರು ನೊಂದು ಬೆಂದು ಬಾಯಿ ಬಿಡುವೆ 1 ಹಿಂದೆ ವ್ಯಾಘ್ರ ಮುಂದೆ ಪಾವು ನಿಂದು ಕಾದು ನೋಡುತಿಹವು ಬಂದು ನೀನು ಕಾಯದಿರಲು ತಂದೆ ಇನ್ನಾರುಗತಿಯೋ 2 ನಂದಸುತ ಗೋವಿಂದ ಶಾಮಸುಂದರನೆ ನಿನ್ನ ನಾಮ ಮಂದ ಭಾಗ್ಯನಾದೆನಯ್ಯೋ 3
--------------
ಶಾಮಸುಂದರ ವಿಠಲ
ಶ್ರೀಕೃಷ್ಣಬಾಲಲೀಲೆಗಳು ನಕ್ಕು ನಲಿವ ಬಾಲ ಇವನಾರೆ ಪ ಕೈಯಿಕ್ಕಿ ಬರುವನಿವ ನೋಡುವ ಬಾರೆ ಅ.ಪ ಸುತ್ತಲು ಕುಣಿಯುವ ಬಾಲೆಯರಾಟ ಮಣಿ ಸರಗಳ ನಲಿದಾಟ ಅತ್ತಿತ್ತ ಮಿಂಚಿನ ಕಡೆಗಣ್ಣೋಟ 1 ಮಿಸುನಿಯ ಬಣ್ಣದ ಹೊಸವಸನ ರಸಿಕನನೀಕ್ಷಿಸು ಎನ್ನುತಿದೇ ಮನ 2 ಘಲ್ಲೆಂಬ ಕಿರುಗೆಜ್ಜೆ ಧರಿಸಿಹನು ನಲ್ಲೆಯ ಗಾನಕೆ ಸರಿಕುಣಿಯುವನು ಮೆಲ್ಲುಲಿವನು ಮತ್ತೆ ಕೊಳಲೂದುವನು 3 ಬಾಯಲಿ ಜಗಂಗಳ ತೋರಿಸಿದನಂತೆ ಮಾಯದ ನಾರಿಯ ಮಡುಹಿದನಂತೆ ಜೀಯನೀತನೆ ಗೋವಳನಂತೆ 4 ಮದನ ಸುಂದರನು ಲೋಕ ಮೋಹಕನು ಮುದವ ಬೀರುವನು ಮನವ ಸೆಳೆವನು ಪದುಳದಿಕಾವ ಮಾಂಗಿರಿ ಪತಿಯವನು5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್