ಒಟ್ಟು 269 ಕಡೆಗಳಲ್ಲಿ , 63 ದಾಸರು , 248 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶಾರದಾ ಕೊಡು ಎನಗೆ | ಸಾರುವೆ ನಾ ನಿನ್ನ ಪ ಪುಂಡರೀಕ ನಯನೆ ಪುಂಡರೀಕನ ರಾಣಿ ಪುಂಡರೀಕ ಚರ್ಮಾಂಬರ | ಪುಂಡರೀಕನಾಥನುತೆ ಪುಂಡರೀಕವೆ ನಮಗೆ 1 ಶುಚಿ ಶರೀರಳೆ ಎನ್ನ ಶುಚಿಯ ಮಾಡುವ ಈ | ಶುಚಿಯೊಳಗೆ ನಿನ್ನ ಕೀರ್ತಿ ಶುಚಿಯಾಗಿ ಮನದಲ್ಲಿ | ಶುಚಿ ಜನ ಪೇಳುತಿದೆ | ಶುಚಿ ಮಾರ್ಗವನೆ ತೋರಿಸೆ 2 ಕೌಂಶಿಕ ವಾಣಿಯೆ ಕೌಂಶಿಕ ಬಿಂಬಸದನೆ | ಕೌಂಶಿಕವೇಣಿ ಕರುಣಿ | ಕೌಂಶಿಕ ವಿಜಯವಿಠ್ಠಲನಲ್ಲಿಕೌಂಶಿಕದವನ ಮಾಡು3
--------------
ವಿಜಯದಾಸ
ನಿನಗೇನೊ ಭಕುತರ ಚಿಂತೀ ಘನಮಹಿಮ ಮಹÀದಾದಿ ಸುರವಂದ್ಯ ತಿಮ್ಮಾ ಪ ಪರಮೇಷ್ಟಿ ನಿನಪುತ್ರ ಕಿರಿಯ ಮಗನು ಜಗತ್ಪ್ರಾಣದೇವಾ ಹಿರಿಯ ಸೊಸೆಯು ವಾಣಿ ಕಿರಿಯು ಭಾರತೀ ದೇವಿ ಸುರರು ಪರಿವಾರ 1 ಸಕಲಲೋಕಕೆ ಅರಸು ಲಕುಮಿಕಾಂತನು ಎಂದು ನಿಖಿಳವೇದ ಸ್ಮøತಿಯು ಸಾರುತಿಹದೋ ಅಖಿಳವ್ಯಾಪಕನಾಗಿ ಸಕಲಸುರನರರಿಂದ ಭಕುತಿಪೂರ್ವಕÀ ಓಲಗವಕೈಕೊಂಬ ಸಮಯದಲಿ 2 ಸುರನಾಥ ನೀನಲ್ಲದಿತರ ದೇವತೆಯುಂಟೆ ಸರವೋತ್ತಮಾನೆಂಬನಾವನವನೋ ಸರಸಗುಣನಿಧಿಯೆ ಶ್ರೀ ಗುರುಜಗನ್ನಾಥವಿಠಲ ವರಭಾಗ್ಯ ಮಬ್ಬಿನಲಿ ಇರುವೊ ಸಮಯದಲಿ 3
--------------
ಗುರುಜಗನ್ನಾಥದಾಸರು
ನಿನ್ನ ಚಿತ್ತ ನಿನ್ನ ಚಿತ್ತ ನಿನ್ನ ಚಿತ್ತವೋ ಪ. ಬನ್ನ ಬಡಿಸಬೇಡವಿನ್ನು ಭಯವ ಬಿಡಿಸಿ ಕಾಯೊ ಎನ್ನ ಅ.ಪ. ಘನ್ನ ಮನಸು ಮಾಡಿ ಈಗ ಎನ್ನ ಸಲಹಿದರೆ ಜಗದಿ ನಿನ್ನ ಕೀರ್ತಿಯು ಉನ್ನತದಲಿ ಮೆರೆವುದಿದೆಕೊ ಬನ್ನ ಬಡಿಸಬೇಡವಿನ್ನು ಘನ್ನಮಹಿಮ ಕೇಳು ಸೊಲ್ಲ ಇನ್ನು ಸುಮ್ಮನಿರಲು ಸಲ್ಲ ಘನಮಹಿಮನೆ 1 ಬುದ್ಧಿ ಭ್ರಮೆಯಿಂದ ನಾನು ಪೊದ್ದಿರುವ ಭಯವ ಬಿಡಿಸಿ ನಿದ್ದೆಯಲಿ ತಿಳಿಸಿದ್ವಾರ್ತೆ ಶುದ್ಧಗೊಳಿಸುತ ಮುದ್ದುಕೃಷ್ಣ ಅಭಯ ತೋರಿ ಉದ್ಧರಿಸಿದರೆ ಎನ್ನ ಶ್ರದ್ಧೆಯಿಂದ ನಿನ್ನ ಕೀರ್ತಿ ಮಧ್ವಮತದಿ ಸಾರುವೆನು2 ಬೆದರಿಸುವ ಪರಿಯದೇನು ಬದಿಗನಾಗಿ ಅರಿಯದೇನು ಹೃದಯದಲ್ಲಿ ನಿಂತ ಮೇಲೆ ಎನ್ನದಿನ್ನೇನು ಪದುಮನಾಭ ನಿನ್ನ ನಂಬಿ ಪದೋಪದಿಗೆ ನೆನೆಸುತಿರಲು ವಿಧ ವಿಧದಿ ಪರಿಕಿಸುವ ವಿಧವನರಿಯೆ ಪದುಮೆಯರಸ3 ಉಡಲು ಉಣಲು ಆಸೆಯಿಲ್ಲ ತೊಡಲು ಇಡಲು ಮಮತೆಯಿಲ್ಲ ಎಡದ ಬಲದ ನೆಂಟರಭಿಮಾನವಿಲ್ಲವು ಎಡರು ಬರಲು ಭಯವು ಇಲ್ಲ ಬಿಡಲು ದೇಹ ಅಂಜಿಕಿಲ್ಲ ನಡುವೆ ಕರೆವುದುಚಿತವಲ್ಲ ಮೃಡನ ಸಖನೆ ಕೇಳೊ ಸೊಲ್ಲ 4 ನಿರ್ದಯವನು ಮಾಡಲಿಕ್ಕೆ ಮಧ್ಯಮಧಮಳಲ್ಲವಿನ್ನು ಮಧ್ವಮುನಿಯ ಮತದಿ ಜನಿಸಿ ಶುದ್ಧ ಭಾವದಿ ಶುದ್ಧ ಸಾತ್ವಿಕರು ತಂದೆ ಮುದ್ದುಮೋಹನ ಗುರುಗಳಿಂದ ಪೊದ್ದಿ ದಾಸ್ಯರೀಗ ಜಗದಿ ಬದ್ಧ ಕಂಕಣಧರಿಸಿ ಮೆರೆವೆ 5 ಒಡೆಯ ನೀನು ಎನ್ನ ಧರೆಗೆ ಬಿಡದೆ ತಂದು ಜನ್ಮವಿತ್ತು ಬಿಡದೆ ಕಾಯ್ವ ಗುರುಗಳನ್ನು ಅಗಲಿಸುತ್ತಲಿ ಅಡಿಗಡಿಗಭಯವ ತೋರಿ ಪಿಡಿದು ಕೈಯ್ಯ ಸಲಹದಿರಲು ಅಡಿಗಳಾರದಿನ್ನು ನಾನು ಪಿಡಿಯೆ ಕಡಲಶಯನ 6 ನಾಥರಾರು ಎನಗೆ ಇಲ್ಲ |ಅ- ನಾಥಗಳನ್ನು ಮಾಡಿ ನಿನ್ನ ಮೂತಿ ತಿರುಹಿ ಸಲಹದಿರಲು ಪಾತಕಲ್ಲವೆ ಪಾತಕಾದಿ ದೂರನೆಂಬೊ ಖ್ಯಾತಿ ಸಟೆಯದಾಯ್ತು ಈಗ ನೀತಿಯರಿತು ಪೊರೆಯದಿರಲು ಜಾತರಹಿತ ಜಗದಿ ಸಲಹು 7 ದಾಸತನದಿ ಮೆರೆವೊದೊಂದು ಆಸೆಯಿಲ್ಲದಿನ್ನು ಬೇರೆ ಆಸೆಯೊಂದು ಇಲ್ಲ ಕೇಳು ನಾಶರಹಿತನೆ ಪಾಶಕರ್ಮ ಹರಿಸಿ ನಿನ್ನ ದಾಸಳೆಂದು ಮೆರೆಸೆ ಜಗಕೆ ಈಶನೆಂದು ನಿನ್ನ ಮೆರೆಸಿ ಆಸೆ ಪೂರೈಸಿಕೊಂಬೆ 8 ಮೃತ್ಯುವಿಗೆ ಮೃತ್ಯುವಾಗಿ ತುತ್ತುಮಾಡಿ ಜಗವ ನುಂಗಿ ಮತ್ತೆ ಬ್ರಹ್ಮಾಂಡ ಸೃಜಿಸಿ ಪೆತ್ತು ಜೀವರ ಭಕ್ತ ಜನಕೆ ಬಂದ ಎಡರು ಮೃತ್ಯುಗಳನು ಕಾಯ್ದ ದೇವ ಮೃತ್ಯು ಮೃತ್ಯು ಶರಣು ನೃಹರಿ ಮೃತ್ಯು ಹರಿಸಿ ಕಾಯೊ ಶೌರಿ9 ಬಿಡಲಿಬೇಡ ಕೈಯ್ಯ ಇನ್ನು ಬಿಡದೆ ಕಾಯೊ ಶರಣು ಶರಣು ಒಡೆಯ ಶ್ರೀ ಗೋಪಾಲಕೃಷ್ಣವಿಠ್ಠಲಾತ್ಮಕ ಕಡೆಗೆ ನಿನ್ನ ಪಾದಸೇವೆ ಬಿಡದೆ ಕೊಡುವ ದೃಢವ ಬಲ್ಲೆ ಕರವ ಪಿಡಿಯೊ 10
--------------
ಅಂಬಾಬಾಯಿ
ನಿನ್ನ ದರುಶನಕೆ ಬಂದವನಲ್ಲವೊ ಪುಣ್ಯವಂತರ ದಿವ್ಯ ಚರಣ ನೋಡಲಿ ಬಂದೆ ಪ ಎಲ್ಲೆಲ್ಲಿ ನಿನ್ನ ವ್ಯಾಪ್ತತನವಿರಲಿಕ್ಕೆ ಇಲ್ಲಿಗೆ ಬರುವ ಕಾರಣವಾವುದೊ ಸೊಲ್ಲಿಗೆ ಕಂಭದಲಿ ತೋರಿದ ಮಹಾಮಹಿಮ ಅಲ್ಲಿ ಇಲ್ಲೇನಯ್ಯ ಬಲ್ಲ ಭಜಕರಿಗೆ1 ಕರೆದಾಗಲೆ ಓಡಿ ಬಂದೊದಗುವ ಸ್ವಾಮಿ ಮರಳಿ ಗಾವುದ ಎಣಿಸಿ ಬರಲ್ಯಾತಕೊ ನೆರೆ ನಂಬಿದವರಿಗೆ ಆವಲ್ಲಾದರೇನು ಅರಿದವರ ಮನದೊಳಗೆ ನಿಂದಾಡುವ ಚಂದವಾ 2 ಕಠಿನವೊ ನಿನ್ನ ಭಕುತರನ ನೋಡುವ ಲಾಭ ಸಟೆಯಲ್ಲಾ ವೇದಗಳು ಸಾರುತಿವಕೊ ವಟು ಮೊದಲಾದ ವೈಷ್ಣವಾಗ್ರೇಸರಂಘ್ರಿ ತ್ರಿಟಿಯಾದರೂ ಎನಗೆ ಸೋಕಲು ಗತಿಗೆ ದಾರಿ3 ಧ್ಯಾನಕ್ಕೆ ಸಿಲುಕುವನೆ ನಿನ್ನ ಕಾಣಲಿಬಹುದು ಜ್ಞಾನಿಗಳು ಎಂತು ಬರುವರೊ ಅಲ್ಲಿಗೆ ಅನಂತ ಜನುಮದಲ್ಲಿ ಜಪ ತಪ ಹೋಮ ವ್ರತ ಏನೇನು ಮಾಡಿದರು ಇಷ್ಟು ಜನ ಕೂಡುವದೇ4 ನೀನಿದ್ದ ಸ್ಥಾನದಲಿ ಸಕಲ ಪುಣ್ಯಕ್ಷೇತ್ರ ನೀನಿದ್ದ ಸ್ಥಾನದಲಿ ಸರ್ವತೀರ್ಥ ನೀನಿದ್ದ ಸ್ಥಾನದಲಿ ಸಮಸ್ತ ತಾತ್ವಿಕರು ನಾನಿತ್ತ ಬರುವುದು ನಿನಗೆ ತಿಳಿಯದೆ ಸ್ವಾಮಿ5 ಇದನೆ ಲಾಲಿಸು ಜೀಯಾ ನಿನ್ನದೊಂದೇ ಮೂರ್ತಿ ನಿದರುಶನವಲ್ಲದೆ ಮಿಗಿಲಾವುದೊ ಪದೋಪದಿಗೆ ಮಧ್ವಮತ ಹೊಂದಿದ ಸುಜನರ ಹೃದಯದೊಳಗಾನಂತಪರಿ ನಿನ್ನ ರೂಪಗಳು 6 ಭಳಿರೆ ತಿರುಮಲರಾಯ ನಿನ್ನ ಕರುಣಾ ರಸಕೆ ವೊಲಿದು ಭಕುತರಿಗಾಗಿ ಮದುವೆ ಹಮ್ಮಿಕೊಂಡೆ ಸುಲಭ ದೇವರದೇವ ವಿಜಯವಿಠ್ಠಲ ವೆಂಕಟಾ7
--------------
ವಿಜಯದಾಸ
ನಿನ್ನವನೆನಿಸಿದಾ ಮಾನವನಿಂಗೆ ಇನ್ನು ಭವಭಯ ಉಂಟೇ ಭಕುತ ವತ್ಸಲ ಕೃಷ್ಣಾ ಪ ಶ್ರವಣ ದರಹು ಇಲ್ಲಾ ನವವಿಧ ಭಜನಿಲ್ಲಾ ಕವಿತದನುಡಿಯ ಚಾತುಯ್ರ್ಯವಿಲ್ಲಾ ತವಚರಣವನಂಬಿ ಅವನಿಯೋಳಗನಿಶಿ ದಿವಸದಿ ಅಚ್ಯುತಾನಂತ ಗೋವಿಂದ ಯನುತಲಿ 1 ಘನ್ನ ವಿರಕ್ತಿಯಿಲ್ಲಾ ಮನ್ನಣೆಯ ತಪವಿಲ್ಲಾ ಉನ್ನತ ದ ವ್ಯತಶೀಲ ಕರ್ಮವಿಲ್ಲಾ ಅನ್ಯದೈವ ಕೆರಗದೆ ನಿನ್ನ ನಾಮ ನಿನ್ನ ಮುದ್ರೆ ನಿನ್ನವರಪರಿಚಾರ ತನದಲ್ಲಿ ರಮಿಸುತಾ 2 ಮರೆದೊಮ್ಮೆನೆನೆದರೆ ಸರಿವದಘರಾಶಿ ಅರಿದೊಮ್ಮೆನೆನೆಯಲು ಗತಿಸಂಪದಾ ದೊರೆವುದೆನುತಶೃತಿ ನಿರುತ ಸಾರುತಲಿದೆ ಗುರುಮಹಿಪತಿ ಪ್ರಭು ಎನ್ನನುದ್ದರಿಸುದೈಯ್ಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನೊಳು ನೋಡಾನಂದವ ಎನ್ನ ಮನವೆ ಚೆನ್ನಾಗಿ ಚಿನ್ಮಯವ ಇನ್ನೊಂದಿಹವೆಂಬನ್ಯ ಪಥವಳಿದು ಉನ್ಮನಿಯೊಳು ಘನಸುಖ ಅನುಭವಿಸುತ ಧ್ರುವ ಕಂಗಳ ಕೊನೆಯ ಮೆಟ್ಟಿ ಮುಂಗಡಿಯಲಿಹ ಮಂಗಳಾತ್ಮಕನ ನೋಡಿ ಲಂಘಿಸಿ ಮೂಲಸ್ಥಾನವ ತುಂಗ ವಿಕ್ರಮನ ಸಂಗ ಸುಖವನರಿದು ಅನುದಿನ ಇಂಗಿತವಾಗಿ ನೀ ಗಂಗೆಯೊಳು ಜಲ ಬೆರೆದಾ ಸುಸಂಗದಿ 1 ನಾನು ನಾನೆಂಬದಳಿದು ನಿನ್ನೊಳು ನೀನೆ ಏನೆಂದು ತಿಳಿದು ನೋಡು ಆನಂದೋ ಬ್ರಹ್ಮದಾಟವು ತಾನೆ ತಾನಾಗಿ ತನುವಿನೊಳು ತೋರುವದು ಘನಗುರುವಚನಾನುಭವದಲಿ ಸೇವಿಸಿ ಸ್ವಾನುಭವದ ಸುಖದಲಿ ಲೋಲ್ಯಾಡುತ 2 ಮರೆದು ಮಾಯದ ಮಾಟವ ಅರಿತು ನೋಡು ಬೆರೆದು ದಾಂಟಿ ತ್ರಿಕೂಟವ ತೋರುವ ದಿವ್ಯಭಾವವ ತಾರಕಗುರು ಸಾರುವ ಕರುಣ ನೋಟವ ಅರವಿನೊಳಿರು ಮಹಿಪತಿ ಗುರುಪಾದದಿ ಪರಮಾನಂದದಿ ಸುಖ ಸೂರ್ಯಾಡುತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀ ಮುನಿದು ಇಳೆಯೊಳಗೇ| ಸುರಮುನಿ ಜನಪಾಲನ ಮನದಲಿ ಬಂದದಿ ನೆರೆಯದೇ ಸಾರುವದೀಗ ಪ ನಿನ್ನಯ ಒಪ್ಪುವ ಮಾರ್ಗವ ನೋಡುತ| ಮುಚ್ಚನು ಕುಡಿಗಂಗಳ ಯವಿಯಾ| ಪನ್ನಗವೇಣೀ ನಿನ್ನವಿಯೋಗ ದುಗುಡದೀ| ಕುಳಿತನುಡಗಿ ಅವಯವ ಸೋಹ್ಯಾ 1 ನಿನ್ನ ಕಾಣುವೆ ನೆಂಬಂಥ ವಾಣಿಯಲೆದ್ದು ಲಜ್ಜಿಸಿ ಹಿಂದಕ ಕಾಲೆಳೆದಾ| ಘನ್ನ ವಿರಹ ತಾಪದ ದೆಶೆಯಿಂದಲಿ ಕಿಡಿ ಕಿಡಿ ಜ್ವಾಲಾಂಗನು ಆದಾ 2 ಕಪಟದಿ ಬಂದು ನೋಡುವೆ ನಿನ್ನೆನುತಲಿ ಯಾಚಕ ರೂಪತಾಳಿದನು| ವಿಪುಳಾಂಗ ತಾಳಲಾದರದೇ ನಿನ್ನ ಕುವರಿಯ ತೊರೆಂದೆ ಚಂದನು ಶರಧಿಯನು3 ದಿನದೊಳಗರಗಳಗಿ ಗಮಿಸದು ಯನುತಲಿ ವನದೋಳು ಪೋಗಿ ಹೊತ್ತುಗಳೆವಾ|ಮನಿ ಮನಿ ಪೊಕ್ಕು ಗೋಕುಲದಲಿ ನಿನ್ನನು ಅರಸುತಿಹನು ಪಾವನ ದೇವಾ4 ಕ್ಷತ್ರೀಯರು ನಿಷ್ಠುರರೆಂದು ನಿನ್ನಮ್ಯಾಲಿನ ಕೋಪದಿ ಕಂಡ ವೃತವಳದಾ| ಅತಿತವನೋಡದೇ ತಾನಾಗಿ ಬಂದನು ಹಯವೇ ನೋಡೆ ಜೀವನ ಜಗದಾ 5 ಕುವಲಯ ಲೋಚನೆ ಕೂಡಿದ ನಿಮ್ಮಿರ್ವರ ಹಾಸ್ಯದ ಮುಖವನು| ಜವದೀ ಅವನಿಲಿ ಕಂಡೆನು ಧನ್ಯಧನ್ಯಾದೆನು ಮಹಿಪತಿ ಸುತ ಪ್ರಭುವಿನ ದಯದೀ6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀನಹುದೋ ಘನ ಮಹಿಮ ಮುನಿಜನರೊಡಿಯ ಪೂರ್ಣ ದೀನದಯಾಳು ನೀನೆ ಹರಿಯೆ 1 ಪತಿತಪಾವನನೆಂದು ಶ್ರುತಿ ಸಾರುವರು ಕೇಳಿ ಅತಿ ಹರುಷದಲಿ ಬಂದೆನೊ ಹರಿಯೆ 2 ಮತಿ ಹೀನನವಗುಣವ ಕ್ಷಿತಿಯೊಳು ನೀ ನೋಡದೆ ಪಥವಗೊಳಿಸುವದು ಎನಗೆ ಹರಿಯೆ 3 ಮರೆಯ ಹೊಕ್ಕಿಹೆ ನಿಮ್ಮ ಚರಣಕಮಲಕೆ ಪೂರ್ಣ ಕರುಣದ ಅಭಯ ತೋರೊ ಎನಗೆ ಹರಿಯೆ 4 ಅರಿಯೆ ನಾ ನಿಮ್ಮ ವಿನಾ ಬ್ಯಾರೆ ಇನ್ನೊಂದು ಪಥ ಶಿರವ ನಮಿಸಿಹೆನೊ ನಿಮಗೆ ಹರಿಯೆ 5 ಶರಣಾಗತರ ಹೊರೆವ ಬಿರದು ನಿಮ್ಮದು ಪೂರ್ಣ ಸಾರುವದು ತಿಳಿದುಕೊಳ್ಳೊ ಹರಿಯೆ 6 ಬಿಡಲರಿಯೆ ನಾ ನಿಮ್ಮ ಪಿಡಿದು ಶ್ರೀಪಾದವನು ನೋಡಿ ದಯಮಾಡೊ ಎನಗೆ ಹರಿಯೆ 7 ಬ್ಯಾರೆ ಗತಿ ಕಾಣೆ ನಿಮ್ಮ ಚರಣಕಮಲದಾಣೆ ಸಿರಿ ಸಕಲಪದವು ನೀನೆ ಹರಿಯೆ 8 ಭಿನ್ನವಿಲ್ಲದೆ ನೋಡಿ ಚೆನ್ನಾಗಿ ಮಹಿಪತಿಯ ಧನ್ಯಗೈಸೊ ಪ್ರಾಣವ ಹರಿಯೆ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ಸಜ್ಜನರ ಬಂಧು ಪ ಕರಿಮರಿಬಳಗ ಬಂದೊದಗಿದರೇನು ಪರಿಪರಿ ಕ್ಲೇಶವ ಬಿಡಿಸಲಿಲ್ಲ ಹರಿ ನೀನೆ ಗತಿಯೆಂದರೆ ಆ ಕ್ಷಣದಲ್ಲಿ ಕರಿಬಂಧನ ಪರಿಹರಿಸಿದೆ ಕೃಷ್ಣ 1 ಪಿತರು ಮಾತೆಯರಿದ್ದರೇನು ಸುತರಾಪತ್ತಿಗೊದಗಲಿಲ್ಲ ಗತಿ ನೀನೆಂದರೆ ಧ್ರುವ ಪ್ರಹ್ಲಾದರಿ- ಗ್ಹಿತ ಮಾಡಿದೆ ಶ್ರೀಪತಿ ಪರಮಾತ್ಮ 2 ವಲ್ಲಭರೈವರಿದ್ದರೇನು ವಸನ ದ್ರೌಪದಿಗುಡಿಸಲಿಲ್ಲ ಫುಲ್ಲಾಕ್ಷನೆ ಗತಿಯೆಂದರೆ ನೀ ತಡ- ವಿಲ್ಲದಲಕ್ಷಯ ನೀಡಿದೆ ದೊರೆಯೆ 3 ಮನೆಧನ ಧಾನ್ಯಗಳಿದ್ದರು ಧನಂಜಯ- ನ್ವನವಾಸಗಳನು ಬಿಡಿಸಲಿಲ್ಲ ವನಜಾಕ್ಷನೆ ವಾರಣಾವತಿ ದೊರೆತನ ವಿನಯದಿ ಕೊಟ್ಟಿದ್ದಿಂದಿರಾಪತಿಯೆ 4 ಭವ ಘೋರ ದುರಿತ ಯಮಬಾಧೆಗಳ ತಪ್ಪಿಸುವೋರಿಲ್ಲ ಶ್ರೀರಮಣನೆ ಭೀಮೇಶಕೃಷ್ಣನೆಂದು ಸಾರುವರಿಗೆ ಕರುಣಾವಾರಿಧಿ ಹರಿಯೆ 5
--------------
ಹರಪನಹಳ್ಳಿಭೀಮವ್ವ
ನೀರೆಯರು ಸಾರುತ್ತ ಮುದದಿ ನೀರಜದಾರತಿ ಬೆಳಗಿದರು ಪ ಸೇರಿ ಸೀತಾ ನಾರೀಮಣಿಯಿಂ ರಾರಾಜಿಪ ಶ್ರೀರಾಮಗೆ ಅ.ಪ. ಕಂದರ್ಪಸತಿ ಸುಂದರಾಂಗಿಗೆ ಇಂದುವಂಶ ನಂದಿನಿ ಸೀತೆಗೆ 1 ಕರಾಂಬಕಿ ಲೋಕ ವಂದ್ಯೆಗೆ ಮಾತೃ ಮಾತೆಗೆ ಸೀತೆಗೆ 2 ಚಿತ್ತ ಮಿತ್ರೆ ಮೀನನೇತ್ರೆಗೆ ಧೇನುನಗರ ನಾಥೆಗೆ ಸೀತೆಗೆ 3
--------------
ಬೇಟೆರಾಯ ದೀಕ್ಷಿತರು
ನೀವೆಲ್ಲ ಪರಮಾತ್ಮನೆ ಏಳಿ ಸಾರುವೆ ಈ ನುಡಿ ಕೇಳಿ ಪ ತುಂಬಿಹ ಜಗವನು ನಿಮ್ಮೊಳಗಿರನೇ ಅಲೋಚಿಸಿರೀನುಡಿಯಾ ನಂಬಿರಿ ಶ್ರುತಿಶಿರ ಸಾರಿತು ಪರಮನು ಹೃದಯದ ಗುಹೆಯೊಳಗಿರುವಾ ಕಾಂಬನು ಗುಹೆಗಳ ಕಳೆದುಳಿದಾ ನಿಜ ಸಂಪೂರ್ಣಪದವೇ ಪರಾನಂದಾ 1 ಸ್ಥೂಲದೇಹಮೊದಲಾಗಿಹ ಗುಹೆಗಳ ನೈದನು ಕಳೆಯಲು ಉಳಿವಾ ಮೂಲರೂಪ ಪರಮಾತ್ಮನೆ ತಾನೆಂ ದರಿಯುತ ತಿಳಿಯಿರಿ ನಿಜವಾ ತಿಳಿಯಿರಿ ನಿರುತದಿ ನೀವೇ ಆ ಪದ ಮಾಯಾ ಶಂಕರಾರ್ಯ 2
--------------
ಶಂಕರಭಟ್ಟ ಅಗ್ನಿಹೋತ್ರಿ
ನೆನಿ ಮನವೇ ಪಾವನ ದೇವನ ಚರಿತ ಕಥನುವೇ | ನಿನಗಿದ-ವನಿಲಿ ನೆಚ್ಚಿರೆ ತನುವೇ ಪ ಘನ ಶ್ಯಾಮನದಯ ಪಡಿಯದ ಸಾರ್ಥಕ | ಜನುಮಗಳೇವದಿದು ಗುಣವೇ ಅ.ಪ ಸುರಲೋಕ ಮೊದಲಾದ ಸುರಪ ವಿಚ್ಛೈಸಿ | ಪರಿ ಸಾಧನ ಮಾಳ್ಪರೆ | ಸುರಭಿಯಿರಲು ವಿಡಿಸದ ಪುಳಿ ಪಾಲವ | ಕರೆಸುವೆನೆಂದು ಅರಸುವರೇ 1 ಗುರು ಶರಣ ನಿಷ್ಠೆಯೊಂದ್ಹಿಡಿಯದೇ ಕಂಡಾ | ಧರೆಯ ದೈವಕ ತಲೆವಾಗುವರೇ | ಸುರ ತರುವಿನ ನೆರಳವನೇ ತ್ಯಜಿಸಿ | ಬ| ರ್ಬುರ ದ್ರುಮವನು ಸಾರುವೇ 2 ವಿಕಳಿತ ಮಾಡುವ ತಾಪತ್ರಯದಾ | ಸಕಲ ಹಳಾಹಳ ತ್ಯಜಿಸೀ ಅಖಿಳ ಜೀವನದೊಡಿಯನ ಸದ್ಮೂರ್ತಿಯ | ಹೃತ್ಕಮಲದೊಳಗಿರಿಸೀ 3 ಹರಿಮಹಿಮೆಯ ಕೊಂಡಾಡುತ ಪೊಗಳುತ | ಬೀರುತ ಗುರು ಭಕುತರಿಗೇ | ಪರಮ ಸದ್ಭಾವದ ಭಕುತಿಲಿ ಮುಣುಗೈನ | ವರತ ಪ್ರೇಮಾರ್ಣವದೊಳಗೇ 4 ನಯನದಿಂದಲೀ ಸ್ಮರಿಸುವ ಬಹು ಶರಣರ | ಭಯವ ನಿವಾರಣ ಮಾಡುವ | ದಯದಲಿ ಮಹಿಪತಿ ನಂದನ ಪಾಲಿಸು | ತಿಹಕರುಣಾಕರ ಮಾಧವಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೆರೆನಂಬು ಮನವೆ ಹರಿಯ ಸಿರಿಯನಾಳುವ ದೊರಿಯ ಧ್ರುವ ಸ್ಮರಿಸಿದಾಕ್ಷಣ ಕರಿಯ ಸೆರೆಯಬಿಡಿಸಿದನರಿಯ ಚರಣಕಮಲಯುಗ್ಮಮರಿಯ 1 ಧರಿಯೊಳು ದ್ರೌಪದಿ ಮೊರಿಯ ಹರಿ ಕೇಳಿದ ನೀನರಿಯ ಅರಿತು ನಡೆವನೀ ಪರಿಯ ಸಾರುತಿದೆ ಶ್ರುತಿ ಖರಿಯ 2 ಅರವಿನೊಳು ಮನ ಹರಿಯ ತೋರುವ ಘನ ಅಶ್ಚರ್ಯ ತರಳ ಮಹಿಪತಿದೊರಿಯ ನೆರೆನಂಬಿರೊ ಈ ಪರಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೈವೇದ್ಯ ಸಮರ್ಪಣೆ ಸುಳಾದಿ ಸಿರಿ ದಧಿ ವರುಣಧನ್ಯ ಸುಗಂಧಿನೀ ವಾಮನ್ನರೂಪವನ್ನು ಚಿಂತಿಸು ಸೂಪಕೆ ಗರುಡ - ನೀರನ್ನ ತಿಳಿದು ಸುಂದರಿ ಶ್ರೀಧರನೆನ್ನುಪನ್ನಂಗಶಯ್ಯ ಗುರು ಗೋವಿಂದ ವಿಠಲನುಮನ್ನಿಸಿ ಕೈಗೊಂಡು ಉನ್ನತ ಪದ ಕೊಡುವ 1 ಹುಳಿ ತೊವ್ವೆಯಲಿ ಸೌಪರಣಿ ಮತ್ತೆ ಪ್ರತಾಪಓಲೈಸು ಸುಂದರೀ ಶ್ರೀಧರ ದೇವನ್ನತಿಳಿ ಪತ್ರ ಶಾಖಕೆ ಮಿತ್ರನೆಂಬಿನನಗಾಳಿ ದೇವನೆ ಸಾಧು ಅವನೊಳಗೆ ವಿದ್ಯಾಒಲಿಸು ಹೃಷಿಕೇಶ ದೇವನ್ನಫಲಶಾಖಕೆ ಶೇಷ ಶೂರಾಧಭಿನ ಸು-ಶೀಲಾದೇವಿ ಪದ್ಮನಾಭನ್ನ ತಿಳಿದುಹುಳಿ ಸೊಪ್ಪು ಗೊಜ್ಜು ಸಾರು ಇವುಗಳೊಳ್‍ಶೈಲಜೆ ಕಪಿ ಸಲಕ್ಷಣಾ ದಾಮೋದರತಿಳಿ ಅನಾಮ್ಲ ಸಪ್ಪೆ ಭಕ್ಷಗಳಲ್ಲಿ ರುದ್ರ - ಅ-ನಿಲನು ಜಗತ್ಪತಿ ಜಯಲಕ್ಷ್ಮೀ - ಇವಳಲ್ಲಿ ಶ್ರೀ ಜಯಾಪತಿಯ ಚಿಂತಿಸೆವಲಿವ ಗುರುಗೋವಿಂದ ವಿಠಲ ಆನಂದ 2 ಶರ್ಕರ ಗುಡ ಭಕ್ಷ ಇಂದ್ರನು ಮಹಾಬಲಲಕ್ಕೂಮಿಯಾ ರೂಪ ಶ್ರೀ ವಾಸುದೇವನು ಸೋ-ಪಸ್ಕರಕೆ ಗುರು ಆಕಾಶಾಶ್ರಯ ಮನೋಜವರಲೆಕ್ಕಿಸು ಕಮಲೆಯ ಪ್ರದ್ಯುಮ್ನ ದೇವನಮಿಕ್ಕ ಕಟು ದ್ರವ್ಯವು ಖಾರಕೆ ಯಮಧರ್ಮಸತ್ಕರಿಸೆ ಜಿತನ ಪದ್ಮಾನಿರುದ್ದರಸೊಕ್ಕವರರಿ ಗುರು ಗೋವಿಂದ ವಿಠಲಯ್ಯಸಿಕ್ಕಾ ಸುಳಿವ ಮುಂದೆ ಕಕ್ಕುಲಾತಿಯ ಸಲ್ಲ 3 ಅಚ್ಯುತ ದೇವನ್ನ ಚಿಂ-ತಿಸು ಉಪ್ಪು ಉಪ್ಪಿನಕಾಯಿ ನಿರಋತಿ ಚಿರಚೀವಿವಾಸುವು ಧನ್ಯಾದೇವಿ ಜನಾರ್ಧನನು ಫಲರಸವು ಫಲೋದಕ ಶೀಕರಣೀತ್ಯಾದಿರಸದೊಳ ಹಂಪ್ರಾಣ ಣ್ರಾಣನು ಆದ್ವಯರುಭಾಸಿಸುವಳು ವೃದ್ಧೀದೇವಿ ಉಪೇಂದ್ರನುದೋಷದೂರನು ಗುರು ಗೋವಿಂದ ವಿಠಲ ಪ್ರ-ಕಾಶಿಸುವನು ಬಿಡದೆ ಈಪರಿ ಗುಣಪರ್ಗೆ 4 ಸದನ ಯಜ್ಞಾದೇವಿಯರರಂಗನು ಹರಿ ರೂಪದಲ್ಲಿರುವನು ಉತ್-ತುಂಗ ಸ್ವಾದೋದಕದೊಳಗಿರುವನು ಬುಧನುಪಿಂಗ ಕಣ್ಣಿನ ಮತಿಮತನ ಸುಧಾದೇವಿಅಂಗಜನಯ್ಯ ಶ್ರೀಕೃಷ್ಣನ್ನಧೇನಿಸೆಗಂಗಾಜನಕ ಗುರು ಗೋವಿಂದ ವಿಠಲನುಮಂಗಳ ಕೊಡುವನು ಸಂದೇಹವಿಲ್ಲದೆ5 ಭೋಜನ ದ್ರವ್ಯದಿ ಯೋಚಿಸ್ಯಭಿಮಾನಿಗಳಭೋಜ್ಯ ಗುರು ಗೋವಿಂದ ವಿಠಲನೆ ಭೋಜಕ6
--------------
ಗುರುಗೋವಿಂದವಿಠಲರು
ನೋಡಿದ್ಯಾ ಈ ದೇಹಕೆ ಬಂದು | ನೋಡಿದ್ಯಾ ನೋಡಿದ್ಯಾ |ನೋಡದವನ ನೀ ನೋಡುವೆ ಎಂದರೆ | ನೋಡುವಿ ಎಂದಿಗೆ ನೋಡಿದ್ಯಾ ಪ ಒಬ್ಬವರ್ಯಾರೂ ತೋರುವದಲ್ಲ | ತೋರಿಸಿಕೊಂಡರದು ತಾನಲ್ಲ | ತೋರಡಗುವದಕೆ ಮೀರಿರುವದು ಎಂದು | ಸಾರುತಿಹುದು ಶ್ರುತಿಸಾರವೆಂದು 1 ರೂಪವನ್ನು ಕಲ್ಪಿಸಲಿಲ್ಲಾ | ಚಿದ್ರೂಪವನು ಸರ್ವರೊಳೆಲ್ಲಾ | ಪಾಪ ಪುಣ್ಯಕೆ ವ್ಯಾಪಕನಾದ | ದೀಪ ಪ್ರಕಾಶನ ಬೋಧಿಪ ಬಲ್ಲಾ 2 ಕರೆದರೆ ಎತ್ತೆತ್ತ ಬಾರ ಮತ್ತೆ | ಮರೆದರೆ ಎತ್ತೆತ್ತ ಹೋಗನು ದೂರ | ಗುರು ಭವತಾರಕ ಶಿರದೊಳು ಕರವಿಟ್ಟು | ವರದ್ಹೇಳಿದ ವಸ್ತು ಪರಿಪೂರ್ಣವಾಗೆ 3
--------------
ಭಾವತರಕರು