ಒಟ್ಟು 919 ಕಡೆಗಳಲ್ಲಿ , 94 ದಾಸರು , 786 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಎಂಥಾ ದಯವಂತ ನೀತನೊ | ಭಾರತಿ ಕಾಂತಅಂತರ್ಬಹಿ ವ್ಯಾಪ್ತನೋ ಪ ಸಂತತ ಶ್ವಾಸೋಚ್ಛ್ವಾಸ | ಮಂತ್ರ ತಾ ಜಪಿಸುತ ಶಾಂತೀಶ ಪಾದದಲ್ಲಿ | ಕ್ರಾಂತನಾಗಿಹ ನೀತ ಅ.ಪ. ಸೂರ್ಯ ಕೋಟಿ ಸಂಕಾಶದಿ ಪರಿಕಿಪ 1 ಪ್ರಾಣಾ - ಅಪಾನ - ಸಮಾನ | ಮತ್ತೆರಡು | ವ್ಯಾನಾ ಉದಾನರಲ್ಲಿರುತಾ ||ಪ್ರಾಣಿಗಳೊಳಗಿದ್ದು | ಜಾಣ ತನದಿ ತಾನುನಾನಾ ಕರ್ಮವ ಮುಖ್ಯ | ಪ್ರಾಣಾ ತಾನೇವೆ ಮಾಳ್ಪ ||ಪ್ರಾಣನ ಮಹಿಮಾನಂತವೆ | ವಾಣಿ ಮುಖಾದ್ಯರು ಎಣಿಸಲಸು ಅಳವೇ ನಾನಾ ರೂಪದಿ ಶ್ರೀನಿವಾಸ ಪದಧ್ಯಾನಾರಾಧಕ ನೆನಿಸುತ ಮೆರೆವಾ 2 ಸುರರಾ ಮೊರೆಯ ಕೇಳುತ | ಪರಿಸರ | ಹರಿಯ ಮತವ ಸಾರಿದ ||ಗುರು ಗೋವಿಂದ ವಿಠಲ | ಸರ್ವಾಧಿಕನು ಎಂದುಸರ್ವ ಶಾಸ್ತ್ರವ ನಿರ್ಣ | ಯವ ಮಾಡಿದ ನೀತ ||ಸರ್ವನಾಮಾಭಿಧ | ಸರ್ವ ನಿಯಾಮಕ | ಸರ್ವ ವ್ಯಾಪ್ತಹರಿ | ಕರುಣವಿಲ್ಲದಲೆಹರಿ ಚರಣಾಂಬುಜ | ದೊರಕದೆಂದನುತಲಿಸರ್ವಾಗಮಗಳ | ಸಾರವ ನ್ವೊರೆದ 3
ಎಂಥಾ ಬಲವಂತನೋ ಭಾರತೀಕಾಂತಾ ಎಂಥಾ ದಯವಂತನೋ ಪ ಎಂಥ ಮಹಬಲವಂತ ಬಹುಗುಣ - ವಂತ ಸರ್ವದಾನಂತಚೇತನ ರಂತರಾದೋಳ್ನಿಂತು ಪ್ರೇರಿಪ ನಂತು ಮಹಿಮೆಯ ಅಂತು ತಿಳಿಯದೊ ಅ.ಪ ವೀರರಾಘವನಂಘ್ರಿಯ ಭಜಿಸಿ ಕಪಿ - ವೀರನಾದನು ಮಹರಾಯಾ ವಾರಿಧಿಯಾಗಾಧತೋಯ ಲಂಘಿಸಿ ಲಂಕಾ ಸಾರಿ ಪೇಳಿದ ವಾರ್ತೆಯ ವೀರ ವನವನಂಗಾರಮುಖಕೆ ಇತ್ತು ವೀರಾಕ್ಷನೆನಿಪ ಕುಮಾರನ ದಂಡಿಸಿ ಸಾರಿ ಉಂಗುರವಿತ್ತು ಮತ್ತೆ ವಾರಿಧಿ ವಾನÀರೇಶನು ತೋರಿ ರಾಮನ ಪದಕೆ ನಮಿಸಿ ಚಾರು ರಾಗಟೆ ಇತ್ತ ತ್ವರದಿ 1 ತರುಳೆ ದ್ರೌಪದಿಯನ್ನು ಶರಗು ಪಿಡಿದು ಶಳದಾನು ಕರಿಯಲು ಬ್ಯಾಗ ಹರಿ ತಾನಂಬರವಿತ್ತನು ಧುರದಿ ಭೀಮನು ನಿನ್ನ ತರಿದರಕ್ತದಿ ತಾನು ಬೆರೆಸಿ ಕೇಶವ ಕಟ್ಟಿ ಕರುಳ ದಂಡೆಯನಿಟ್ಟು ಮೇರೆವೆ ಕೇಳೆಲೋ ದುರುಳನೆಂದಾ - ತರುಣಿವಚನವ ಸ್ಥಿರವ ಮಾಡಿದ ಧರಿಯತಳದಲಿ ಸರಿಯುಗಾಣೆನೊ ವgವÀೃಕೋದರ ಪರಮ ಕರುಣಿಯೆ 2 ಭೂತೇಶ ಸರ್ವೋತ್ತುಮಾನೆಂಬುವೊ ಮಹಾ - ಪಾತಕಿ ಜನಮಾತನೇಮ ಈತ ಮಾಡಿದ ನಿರ್ಧೂಮ ಹರಿಗೆ ಶಿವ ದೂತಜನರಿಗುತ್ತುಮ ಖ್ಯಾತಿ ಮಾಡಿದ ಜೀವಜಾತಿ ಪ್ರೇರಕನಾಗಿ ಶ್ವೇತವಾಹನ ದೂತನಾಗಿಹ ನಾಥ ಗುರು ಜಗನ್ನಾಥವಿಠಲ ಧಾತನಾಂಡಕೆನಾಥ, ನಿರ್ಜರÀ ನಾಥರೆಲ್ಲರೂ ದೂತರೆಂದರು 3
ಎಂಥಾದ್ದೊ ಹರಿಯ ಕರುಣ ಪ ಎಂಥಾದ್ದೊ ಹರಿಯ ಮಹಿಮೆಎಂಥಾದ್ದೆನ್ನ ಬಾರದು ಗಡ ಅ.ಪ ಅಂತ್ಯವಿಲ್ಲದ ನಿಜಾನಂದ ತೃಪ್ತನು ಗಡಸಂತರೊಕ್ಕುಡಿತೆಯ ಜಲಕೆ ಹಿಗ್ಗುವ ಗಡ 1 ಸನಕಾದಿ ಮುನಿಮನಕೆ ಸಿಲುಕದಗಮ್ಯನು ಗಡನೆನೆವರ ಮನದಣಿಯೆ ತನ್ನ ತೋರುವ ಗಡ2 ಶ್ರ್ರುತಿತತಿಗೆ ಮೈದೋರದತಿ ಮಹಿಮನು ಗಡಮತಿಯುಳ್ಳವನ ಭಕ್ತಿ ಸ್ತುತಿಗೆ ಹಿಗ್ಗುವ ಗಡ3 ಲೋಕ ಪತಿಗಳಿಗೆಲ್ಲ ಒಡೆಯ ತಾನೆ ಗಡಬಾಕುಳಿಕನಾಗಿ ಭಕುತರ ವಶದಲ್ಲಿಪ್ಪ ಗಡ 4 ಆರರೊಳು ಸಡ್ಡೆಯಿಲ್ಲದ ನಿಸ್ಸಂಗನು ಗಡಸಾರಿದವರಿಗೆ ತಂದೆತಾಯಿ ಸಿರಿಕೃಷ್ಣ ಗಡ 5
ಎಂದಿಗಾಹುದೋ ನಿನ್ನ ದರುಶನ | ಇಂದಿರೇಶ ಮುಕುಂದ ಕೇಶವ ಪ ಗಾನಲೋಲನೆ ದೀನವತ್ಸಲ | ಮಾನದಿಂದಲಿ ನೀನೆ ಪಾಲಿಸೋ 1 ಯಾರಿಗೆ ಮೊರೆ ಇಡುವೆ ಶ್ರೀ ಹರಿ | ಸಾರಿ ಬಂದು ನೀ ಈಗಲೆ ಪೊರಿ 2 ಗಜವ ಪಾಲಿಸೊ ಗರುವದಿಂದಲಿ | ಭುಜಗಶಯನ ಶ್ರೀ ವಿಜಯವಿಠಲಾ 3
ಎಂದು ಕಾಣಬೇಕೋ ಹೀಂಗಾದ ಮೇ ಲೆಂದು ಕಾಣಬೇಕೋ ಪ ಎಂದು ಕಾಣಬೇಕು ಮಂದಮನವೇ ನೀ ಹೊಂದಿ ಭಜಿಸವಲ್ಲ್ಯಾಮಂದರಧರನಡಿ ಅ.ಪ ದುರಾಸೆ ತೊರಿವಲ್ಲಿ ನಿನ್ನ ದುರ್ಗುಣ ಬಿಡವಲ್ಲಿ ಅರಿವು ನಿಲ್ಲಿಸವಲ್ಲಿ ಮರುಳುಗುಣಳಿವಲ್ಲಿ ನಿರುತ ಭಜಿಸುವಲ್ಲಿ ನರಹರಿ ಚರಣ 1 ಸಂಶಯ ಬಿಡವಲ್ಲಿ ಮನದ ಹಿಂಸಗುಣಳಿವಲ್ಲಿ ಧ್ವಂಸ ಮಾಡುವಲ್ಲಿ ಸಂಸಾರದ ಬಲೆ ಹಿಂಸನೆ ನೆನೆವಲ್ಲಿ ಕಂಸಾರಿಯಪಾದ 2 ಕ್ಲೇಶ ನೀಗುವಲ್ಲಿ ವಿಷಯದಾಸೆ ತೊರೆಯವಲ್ಲಿ ವಾಸನಳಿಯುವಲ್ಲಿ ಮೋಸಬಿಡವಲ್ಲಿ ಪಾದ 3
ಎಂಬ ನಾಮವನು ಉಚ್ಚರಿಸೆ ಸಾರುವರು ಭಕುತರಾದವರು ವೈಕುಂಠವನು ಆರಾದರೇನು ಮರೆಯದೆ ಹರಿಯಧ್ಯಾನಿಸಲು ಸಿರಿಯರಸ ಕಾಯ್ದು ಕೊಂಬ ಪ ಅರಸಕೇಳೈ ಬಳೀಕ ಪಾಂಡ್ಯದೇಶದೊಳೋರ್ವ ಪತಿ ಪೆಸರು ಇಂದ್ರ ದ್ಯುಮ್ನಧರಾತ್ಮ ಹರಿ ಪರಾಯಣನೆನಿಸಿ ನಿರುತಸತ್ಯ ಸುಶೀಲ ಕರಿತುರಗದಾಸೇಯ ತೊರೆದು ವಿರತನಾಗಿಯೆ ಪುರವ ಪೊರಟು ಸುಸ್ಥಿರನಾಗಿ ಬರವಾಯ್ತ ಗಸ್ತ ಶಿಷ್ಯವೆರಸಿ 1 ಸದಮಳಾತ್ಮರನ ಚಿಂತೆಯಿಂದ ಭೂಪೇಳದಿರೆ ಮದಮುಖನ ತಪವ ನೋಡುವೆನೆನುತ ಮುನಿ ಮುನಿದು ತದುಬಿಗರ್ಜಿಸಿ ಶಾಪವೀಯಗಜವಾಗೆನುತ ಸದು ಹೃದಯನೆದ್ದು ಬಳಿಕ ಪಾದಕ್ಕೆ ವಂದಿಸಿ ಶಾಪ ವೆಂದು ಬಿಗುಗಡೆಯೆನಲು ಸಾದರದಿಂ ಮುನಿಪನೆಲ ನೆಗಳು ಪಿಡಿಯೆಗತಿನಿನ ಗೆಂದು ಹೋದ ಮುನಿಪತಿ ಇತ್ತಲು 2 ಇಂತು ಭೂಮೀಶ ಶಾಪವ ತಾಳ್ದು ಬಿಸುಸುಯ್ದು ಕಂತು ಜನಕನೆ ಬಲ್ಲನೆಂತು ಗೆಲಿದಪೆನ್‍ನುತ ದಂತಿ ಮುಖವಾಗಿ ಭೂಕಾಂತೆಯೊಳು ಜನಿಸಿ ಸುರ ಸಂತತಿಗಳಲ್ಲು ಮಾ ಇಂತೆಸೆದನು 3 ತರುನಿಕರ ಚೂತಾಮಲಕ ಸುರಹೊನ್ನೆ ಪುನ್ನಾಗ ಮೆರೆವಬಿಲ್ವಶ್ವತ್ಥಮಾ ಕಿರುಗಿಡುವಿನೊಳಗೆ ಚರಿಸುವ ಕರಡಿ ಸೀಳ್ನಾಯಿ ಭೇರುಂಡ ಮುಂತಿರುತಿರಲು ಗರುಡ ಗಂಧರ್ವ ಚಾರಣರು ಸುರಕಿನ್ನರರು ಇರುತಿಹರು ಕಿಂಪುರುಷರು 4 ತ್ರಿಜಗದೊಳಗೆಣೆ ಗಾಣೆ ಭುಜಗಶಯನನೆ ಬಲ್ಲ ಗಜರಾಜ ಬೆಳೆದು ಕುಜನರ ಮಾರ್ಗವಂ ಪಿಡಿದು ಅಜಸೃಷ್ಟಿ ಬಿರಿಯೆ ಒದರಿ ನಿಜಪುತ್ರ ಮಿತ್ರಸ್ತ್ರೀಜನ ಸಹಿತಲೊಡಗೊಂಡು ಬುಜ್ಜಸತ್ವದಿಂದ ವನವನು ಮುರಿದು ಸಂಹರಿಸಿ ಭೂಜಲವ ನರಸಿ ಬಂದ 5 ಗಂಡು ಹೆಣ್ಣಾನೆಗಳ ತಂಡ ಸಹಿತಲೆ ಬಂದು ಕಂಡು ಜಲವನು ಈಂಟಿಗುಂಡಿ ಮಡುವನುಸಾರಿ ಚಂಡಿಗೊಳಿಸುತ ಧರಣಿಯ ಅಂಡೆಲೆವ ಮದದ ಸ್ತ್ರೀಯರ ಕೂಡಿ ನೆಗಳು ಖತಿಗೊಂಡು ಮಡುವಿನೊಳಗೆಳೆಯಲು 6 ನೆಗಳು ಸುತ್ತಲಿಹ ಕರಿಘಟೆಗಳೇನಿದದ್ಬುತವೆಂದು ಮತ್ತೆ ಸತ್ವದಲೆಳೆಯೆ ತೆತ್ತಿಗನು ಬಾರದಿರೆ ತಮ್ಮಗುತ್ತಿಗುಳಿದಿಹ ಹಸ್ತಿ ಇತ್ತ ಗಜರಾಜ ಕಾದುತಿರಲು ಹಲಕಾಲ ಬತ್ತಿ ಅಸುಗುಂದಿ ಚಿತ್ತದಿ ತಿಳಿದು ಧ್ಯಾನಿಸುತ ಮತ್ತಾರು ಕಾಯ್ವರೆನುತ 7 ಇಕ್ಕರ್ತರಿಂತು ಕಾದುತ್ತಿರಲು ಕರಿವರನ ಸೊಕ್ಕು ಮುರಿದುದು ತಮವುಚೊಕ್ಕಿ ಮುಖವನು ನಭಕೆ ಸೊಕ್ಕಿದುದುನೆಗಳು ಬಳಿಕ ಮುಕ್ಕುರು ದಿವ್ಯಸಾಗರ ವರುಷ ಪರಿಯಂತ ಸಿಕ್ಕಿ ನಗಳೊಳು ಕಾದಿ ಕುಕ್ಕುರಿಸಿ ನೀರಿನೊಳು ದಿಕ್ಕನೊಡುತ್ತ ಕಕ್ಕನೆ ಕರಗಿ ಜ್ಞಾನದಲಿ ಭಕ್ತವತ್ಸಲನ ನೆನೆದ 8 ರಕ್ಷಿಸೆನ್ನನು ಬಿಡದೆ ಪಕ್ಷಿವಾಹನಗಮನ ಸೇವ್ಯ ಕುಕ್ಷಿಯೊಳಗಿಂಬಿಟ್ಟು ರಕ್ಷಿಸುವೆ ಭಜಕರನು ಮೋಕ್ಷದಾಯಕನೆ ಕಾಯೋ ಲಕ್ಷ್ಮೀಶ ಕೇಶವ ಉಪೇಕ್ಷಿಸದೆ ನೀ ಬಂದು ಭಕ್ಷಿಸುವ ನೆಗಳನೀ ಶಿಕ್ಷಿಸಲು ಬೇಕು ಅಕ್ಷಿಯನು ಇಟ್ಟುಬಂದು 9 ಸರಸಿರುಹದಳನಯನ ಮೂರ್ತಿ ಪರಿ ಹರಿಸೋ ಕ್ಷೀರಾಬ್ಧಿ ಶಯನನೆಂದು ಪರಿ ಪರಿಯ ಸ್ತುತಿಸಲಾಕ್ಷಣ ಮಹಿಮ ಧ್ವನಿಗೇಳ್ದು ನಾಗಿಕರದಿ ಚಕ್ರವ ಕೊಂಡು ಭರದಿ ಭಕುತನ ಕಂಡು ಕರಿರಾಜಗಭಯವಿತ್ತ 10 ಸಿರಿ ಮೊಗದ ನಳಿನಾಯತೇಕ್ಷಣದ ತೊಳಪ ಕದಪಿನ ಮಿಸುಪ ನವರತ್ನ ಕುಂಡಲದ ಕೌಸ್ತುಭ ಹಾರದುರಸ್ಥಳದ ಹೊಳೆವ ಮಣಿಮಕುಟ ನೇಳಿವದಂತಪಂಕ್ತಿಯ ಚಾರು ಕೋರವಿಸೆ ಕಂಡ 11 ಮೇಲೆ ಕೈವಾರಿಸುವ ಸುರರ ದುಂದುಭಿ ಮೊಳಗೆ ಹೊಳೆಯ ಎತ್ತಿದ ತೋರ ಸತ್ತಿಗೆಯ ತೋರಣದ ಸಾಲುಗಳ ಸಂದಣಿಯ ಸಂಭ್ರಮದ ಜಾಲವನು ಕಂಡುಗಜವು ಪಾಲಿಸೈ ಗೋವಿಂದನಾಥ ಬಂಧು ತ್ರಾಹಿ ಭವಾಬ್ಧಿಸಾರ ತ್ರಾಹಿ ಪಾಲಿಸೈ ತ್ರಾಹಿ ಎನುತ 12 ಗಡಗಡನೆ ನಡುಗತಿರೆ ಕಡಲಶಯನನು ಕಂಡು ಕಡುಕೃಪೆಯೊಳೈ ತಂದು ಮಡುವ ಧುಮುಕಿಯ ಗಜವ ಪಿಡಿದಾಗ ವಾಮಕರದಿಂದಳೆಯನೆಗಳು ಸಹತಡಿಗೆ ಬರಲಾಗಕಂಡು ಘುಡು ಘುಡಿಸಿ ಕೋಪದಿಂ ತುಡುಕಿ ಚಕ್ರವತೆಗೆದು ಪಿಡಿದು ನೆಗಳನು ಕಡಿಯೆ ಒಡನಾಗ ನಿಜರೂಪ ಬಿಡುಗಡೆಯಾಯಿತೆಂದು ನಡೆದು 13 ಹರಿ ಬಳಿಕ ಕರಿವರಗೆ ವಿಶ್ವರೂಪವತೋರಿ ತರಣಿಕೋಟಿ ಸಹಸ್ರತೇಜದಿಲ ರಂಜಿಸಿಯೆ ಪರಿದುಹರಿವೋಲೆಸೆದನು ಬಳಲಿದೆಯಾ ಎಂದು ಕರುಣಾಕಟಾಕ್ಷದಿಂ ಕರಿವರನ ಸಹಿತ ವಾಸ ದೆಡೆಗೆ 14 ಅವನುದಯ ಕಾಲದೊಳೆದ್ದು ಪೇಳುವನು ಆವರಿದ ಭಕ್ತಿ ಭಾವದಲಿದನು ಕೇಳುವರು ಪಾವನರು ಪುಣ್ಯಾತ್ಮರು ಕೋವಿದರು ಧರಗೆ ಗಜರಾಜೇಂದ್ರ ಮೋಕ್ಷವನು ಸಾವದಾನ ದಲಿದನು ನೇಮದಲಿ ಕೇಳ್ವವರ ನೆನೆದವರ ಕಾಯ್ವನೆಂದು 15
ಎಲ್ಯಾಡಿ ನೀ ಬಂದ್ಯೋ ಹರಿ ಫುಲ್ಲಲೋಚನ ಕೃಷ್ಣ ಧ್ರುವ ಬಲಿ ಮಹಿಮರನೆಲ್ಲ ಸಂರಕ್ಷಿಸಿ ಮಲ್ಲದೈತ್ಯರ ಹಲ್ಲು ಮುರಿದು ನೀ ಬಂದ್ಯೊ 1 ಸುಗಮ ಸುಪಥದೋರಿ ನಿನ್ನ ಉಗಮ ಸಾರಿ ನೀ ಬಂದ್ಯೊ ನಗ ನೆಗಹಿ ನಿಂದು ಜಗದೋದ್ಧಾರವ ಮಾಡಿ ನೀ ಬಂದ್ಯೋ 2 ಶರಣ ರಕ್ಷಕನಾಗಿ ನಿನ್ನ ಕರುಣ ನೀ ಬೀರಿ ಬಂದ್ಯೋ ತರಳಗೊಲಿದು ಧÀರಿ ಮೂರಡಿಯೆನೆ ಮಾಡಿ ಪರಶುಧರನಾಗಿ ಆಡಿ ನೀ ಬಂದ್ಯೊ 3 ಮೊರೆಯ ಹೊಕ್ಕವರಿಗೆ ಪದ ಸ್ಥಿತವನಿತ್ತುನೀ ಬಂದ್ಯೊ ಸುರರ ಸ್ಥಾಪನೆ ಮಾಡಿ ತುರುಗಳ ಕಾಯಿದು ಪರ ನಾರೇರ ವ್ರತವಳಿದು ನೀ ಬಂದ್ಯೋ 4 ನೀನೆ ರಾವುತನಾಗಿ ನಿನ್ನ ಖೂನ ನೀ ದೋರಿ ಬಂದ್ಯೊ ದೀನ ಮಹಿಪತಿ ಸ್ವಾಮಿ ಭಾನುಕೋಟಿ ತೇಜ ನೀನೆ ನೀನಾಗೆನ್ನ ಹೊರಿಯಲು ಬಂದ್ಯೊ 5
ಎಲ್ಲಿ ಶ್ರೀ ಗುರುವಿನ ದಯದೊಲವಿಹುದು | ದುರಿತ ಭಯ ಮುಟ್ಟ ಲರಿಯದು 1 ದಿವಸಾಧಿಪನಾ ಮಂಡಲವನು ಸಾರಿಹಗ | ಜವದಿ ಕತ್ತಲೆಯು ಮುಸುಕುವದೇನವಗ 2 ಸಕಲ ಗಜಗಳು ಮುದದಲಿ ಒಂದಾಗಿ | ಶಕ್ತಿ ಸಿಂಹನ ಮುಂದೆ ನಿಲ್ಲುವವೇ ಪೋಗಿ 3 ಪ್ರತ್ಯಕ್ಷದಲಿ ಅನಳನಿಹು ಸ್ಥಳದಲಿ | ಮತ್ತೆದೋರುದೇ ಮುಖ ಹಿಮವು ಇದಿರಲಿ 4 ಕಂದನ ಪ್ರಿಯ ಮಹಿಪತಿಯ | ಸ್ಮರಿಸದೇ | ಅಂಧಕನಂತೆ ಬಾಳುತಿಹಾವರಿಗಲ್ಲದೇ 5
ಎಷ್ಟು ಸುಸ್ವರ ಊದುತಿಹನಮ್ಮ ಶ್ರೀಕೃಷ್ಣ ಕೊಳಲನ ಪ ಎಷ್ಟು ಸುಸ್ವರ ಊದುತಿಹನೋ ಗೋಷ್ಠಿಯೊಳು ಗೋವುಗಳಕಿವಿಗಳು ನೆಟ್ಟನಿಲ್ಲಿಗೆ ಕೇಳಿ ಮೋದದಿ ಕಟ್ಟಿದೆಲೆ ಕಣ್ಣಿಗಳಹರಿವವೊಅ.ಪ ತರಣಿ ತನುಜನ ತೀರದಲ್ಲಿಹನೆ ಕೊರಳೊಳಗೆ ಕೌಸ್ತುಭಹರಳಿನಿಂದ ಜಗವ ಬೆಳಗುವನೆ ಕುರುಳು ಕುಣಿಸುತಬಾಲಬಿಂಬದಿಕರ್ಣಕುಂಡಲ ಗಂಡ ಸುಪ್ರಭ ಮರುಳು ಮಾಡುತಮೂರು ಲೋಕವಸಿರಿಯ ಮೋಹಿಪ ಪರಮ ಪುರುಷನು1 ನಗ ಮುರಿಗೆ ತೋಡೆ ಸುಹಾರಭೂಷಿತಉರದಿ ಕುಳಿತಿಹ ಸಿರಿಯ ಮೋಹಿಪ 2 ಅರಗೀಮನೆ ಬಾಂಧವರು ಬೇಕೆ ನಿಜ ಪತಿಗಳೆಮ್ಮನುಮೀರಿ ಪೋದರು ಅಂದರೆನಲೇಕೆ ಮಾರನಯ್ಯನ ಮುರಲಿಸುಸ್ವರಸಾರಿ ಮನಸಪಹಾರ ಮಾಡಿತು ನಾರಿ ಮಣಿಯರೆ ಕ್ಷಣವುತಡೆಯದೆವಾರಿಜಾಸನ ವನಕೆ ತೆರಳಿರೆ 3 ಎಷ್ಟು ಜನ್ಮದ ಪುಣ್ಯವಿರುತಿಹದೆ ಈ ಮುರಲಿ ಬಾಲನಪುಟ್ಟತುಟಿಯಲಿ ಸುಧೆಯ ಸುರಿಸುವದೇಸೃಷ್ಟಿರವ ಬಳ್ಳಿಮನದಲಿ ವೃಷ್ಟಿಹಿಡಿಸದೆ ಕುಸುಮಫಲಗಳುವೃಷ್ಟಿಯಿಂದಲೆ ಹೊರಗೆ ಚೆಲ್ಲುತ ಅಭೀಷ್ಠೆ ಸುರಿಸುತಪೇಳುತಿಹವೊ 4 ಅರುಣನಂದಧಿ ಅದರ ಸೌಭಗವೊ ವನ ನಿಲಯ ಮೃಗಗಳುತೊರೆದು ವೈರವ ಸುತ್ತು ನಿಂತಿಹವೋ ಹರುಷದಲೆ ಮನತೊರೆದು ನಿಲ್ಲಲು ಇಂದಿರೇಶನ ತರುಣಿಯರು ಪೋಗೋಣ ನಡೆಯಿರಿ 5
ಎಷ್ಟೆಂದು ಹೇಳಲಮ್ಮಯ್ಯಕೃಷ್ಣನ ದಯವ ದಿಟ್ಟ ಪಾಂಡವರಲ್ಲೆಪ್ರಾಣ ಇಟ್ಟುಕೊಂಡಿ ಹನಮ್ಮ ಪ. ನೀರಜಾಕ್ಷಗೆ ನಮಿಸಿ ವೀರರೈವರು ಮಹಾದ್ವಾರದಲ್ಲಿ ಹೋರೆಂದು ಸಾರಿ ಹೇಳಿದೆನಮ್ಮಮಾರನಯ್ಯನ ಪಿತನ ಮೋರೆ ನೋಡುತಲಿತೀವ್ರ ಕರೆತಾರೆ ಮುತ್ತಿನ ಹಾರ ನಿನಗೆ ಈವೆನೆಂದ1 ಇಂದು ಮುಖಿಗೆ ನಾನು ವಂದಿಸಿ ಐವರು ಹೊರಗೆ ಬಂದಾರೆ ಹೀಗೆಂದೆ ನಮ್ಮಯ್ಯಮಂದಹಾಸನು ದಯದಿಂದ ನೋಡುತಲೆನ್ನತಂದು ತೋರಮ್ಮ ತೋಳಬಂದಿ ನಿನಗೀವೆನೆಂದ2 ಪುಟ್ಟ್ಟಸುಭದ್ರೆ ಪಾಂಡವರ ಪಟ್ಟದರಾಣಿ ದ್ರೌಪತಿಅಷ್ಟೂರೂ ಬಂದಾರೆಂಬೊ ಉತ್ಕ್ರಷ್ಟ ಹೇಳಿದೆನಮ್ಮತುಷ್ಟÀನಾಗಿ ರಮಿಯರಸು ಥಟ್ಟನೆ ಕರೆತಾರೆÀಂದುಕೊಟ್ಟು ವೀಳ್ಯವ ದಯದ ವೃಷ್ಟಿಗರೆದನಮ್ಮ 3
ಏತಕೀಪಂಥ ಜಾನಕೀಕಾಂತ ಭೂತಲನಾಥ ಶಾಂತಸುಸ್ವಾಂತ ಪ. ಸೊಮಸಮಾನನೆ ತಾಮರಸೇಕ್ಷಣ ಶ್ರೀಮಾನಿನೀ ಮನೋಮೋಹನ ಸುಂದರ 1 ಅಂಗಜತಾತ ಮಂಗಳಗಾತ್ರ ಗಂಗೆಯಪೆತ್ತ ಉತ್ತುಂಗಮಹಿತ 2 ಮಂದರೋದ್ಧಾರಿ ತಂದೆ ಕಂಸಾರಿ ಬಂದುಮೈದೋರಿ ಪೊರೆಯೆನ್ನ ಶೌರಿ3 ವರಶೇಷಗಿರಿದೊರೆ ಶರಣರ ಈ ಮೊರೆ ಕರಗಿಸಲಾರದೆ ಏನಿದು ಕಲ್ಲೆದೆ 4
ಏನಾದರೇನು ಮೋಕ್ಷವಿಲ್ಲ ಜ್ಞಾನವಿಲ್ಲದೆ ಪÀ ವೇದ ಓದಿದರೇನು ಶಾಸ್ತ್ರ ನೋಡಿದರೇನು | ಕಾದಿ ಕಾದಾಡಿ ಗೆದ್ದರೇನು | ಜ್ಞಾನವಿಲ್ಲದೆ 1 ಕಾನನ ಸೇರಿದರೇನು | ಕಾಶಿ ಪೀತಾಂಬರ ಉಟ್ಟರೇನು, ಜ್ಞಾನವಿಲ್ಲದೆ 2 ಜಪತಪ ಮಾಡಲೇನು, ಜಾಣತನ ಮೆರೆದರೇನು | ವಿಜಯವಿಠಲನ ಸಾರಿದರೇನು, ಜ್ಞಾನವಿಲ್ಲದೆ 3
ಏನಿದೆತ್ತಣ ಬಯಕೆ ಎಲೊ ಮಂಕು ಜೀವನೀನು ಅರಿತರೆ ಪೇಳು ನಿಜವನೆನಗೆ ಪ ಎಂಟೆರಡು ಮಾರುತರು ಎಡೆಎಡೆಗೆ ಬರುತಿರಲುನಂಟರೈವರು ಕೂಡಿ ಆಕ್ರಮಿಸುತಿಹರುದಾಂಟುವುದು ಅಸದಳವೊ ಎರಡೊಂದು ಬಲೆಗಳಲಿಕಂಟಕದಿ ಬಲು ತಾಪದಿಂದ ಬಳಲುವರು 1 ಆರೆರಡು ದಂತಿಗಳು ದಾರಿಯೊಳು ನಿಂತಿಹವುಆರು ಮೂರು ತುರುಗಗಳು ದಾರಿಯನು ಕೊಡವುಮೂರೆರಡನೀಡಾಡಿ ತೋರುವುದು ಎನ್ನಾಣೆಸಾರಿ ಏನೇನಹುದು ಎಂಬುದನು ನೋಡು 2 ಪರರನು ನಿಂದಿಸದೆ ಪರಯೋಗ್ಯ ನೀನಾಗಿಪರರ ಪಾಪಗಳ ನೀ ಕಟ್ಟಿಕೊಳದೆಪರಮಾತ್ಮ ಕಾಗಿನೆಲೆಯಾದಿಕೇಶವರಾಯಪರಹಿತಕೆ ಸಖನೆಂದು ಭಜಿಸೆಲೊ ಮನುಜ 3
ಏನು ಕರುಣವೊ ಸ್ವಾಮಿ | ಧೇನುಕ್ಹನನಾ ಪ ಮಾನ ನಿಧಿ ತೈಜಸನೆ | ಕಾಣಿಸಿದೆ ಪುಷ್ಕರವಾಅ.ಪ. ಮಾಧವ | ತ್ರಿವೇಣಿಯನೆ ಮೀಯುತ್ತಅಜ ಜನಕ ಶ್ರೀವ್ಯಾಸ | ಕಾಶಿ ನೋಡಿದೆವೋ 1 ವ್ರಜ ಸಾರಿ | ದೆಹಲಿ ಪುರವನು ಸೇರಿಭಯ ರಹಿತ ಕುರುಕ್ಷೇತ್ರ | ಸೇರಿ ಚಿಂತಿಸದೇ 2 ರೊಕ್ಕ ರೂಪನು ಹರಿಯ | ಅಕ್ಕರವ ಕಾಣದಲೆಪುಷ್ಕರ್ವೊರ್ಜಿತ ಮನದಿ | ಚಕ್ರಿಧ್ಯಾನದಿ ಮಲಗಿರೇ |ಚೊಕ್ಕ ತೈಜಸನನ್ನ | ಚಿಕ್ಕ ಲಿಂಗವು ಸ್ತಂಭಪುಷ್ಕರದಿ ಪೂಜಿಸುತ | ಸ್ನಾನ ಸೂಚಿಸಿದೇ 3 ಕಾಳಗ ಗೈದು | ವೀರ ಸ್ವರ್ಗವ ಸೇರ್ದೆಸ್ಮಾರಕಗಳಂ ತೋರ್ದೆ | ಶ್ರೀರಮಾಪತಿಯೇ 4 ಸೂರ್ಯ ಕುಂಡದಿ ಪಿತರ | ಕಾರ್ಯಗಳ ನಿರ್ವಹಿಸಿಆರ್ಯರುಕ್ತಿಯಗೊಂಡು | ಕಾರ್ಯ ಮುಂಬರಿಸೇ |ಪ್ರೇರ್ಯ ಪ್ರೇರಕ ಗುರು | ಗೋವಿಂದ ವಿಠ್ಠಲನ ವೀರ್ಯಗಳ ಸ್ತುತಿಸಿ ಮನ | ಸ್ಥೈರ್ಯ ಸಾಧಿಸಿದೇ 5
ಏನು ಕಾರಣವೆಮ್ಮ ದೂರಕೆ ನೀನು ನೂಕಿದನೆನಿಸಿದೆಹಾನಿ ವೃದ್ಧಿಗಳನ್ನು ಕಾಣಿಸಿ ದೀನಧೀರರ ಮಾಡಿದೆ ಪಎಲ್ಲರೊಳು ನೀ ಪೂರ್ಣ'ರುತಿಲ್ಲವೆಮ್ಮೆಡೆಯೊಳಗೆನುವ ಭ್ರಮೆಯಲ್ಲಿ ಬಂದುದು ಎಮಗೆ ಠಾ'ನ್ನೆಲ್ಲಿ ನಿನ್ನನಗಲುವರೆಉಳ್ಳವನೆ ನಿನಗಿಂತು ಬರುತಿರುವಲ್ಲಿ ನ'್ಮುರವನ್ನು ಪೇಳ್ವದುಜಳ್ಳು ನೀನಿದಿರಿಟ್ಟು ತೊಲಗಿದೆಯಲ್ಲ ಶ್ರೀಗುರುವರ್ಯನೆ 1ಹಲವು ಪರಿಯಲಿ ಚಿತ್ತಪಾಕವ ತಿಳಿದು ಶ್ರುತಿತಾ ಸಾರಿದರ್ಥವುಹೊಳೆಯದೊಂದೊಂದರ್ಥದಲಿ ಮನತೊಳಲಿ ಮಾರ್ಗವ ಕಾಣದೆನಲುಗಿ ಭವಮೃತಿಯೊಂದಿ ಜೀವರು ಬಳಲುತಿರಲವತರಿಪನೆಂಬರುತಿಳಿ'ಯಗಲುವನೆಂದರ ನುಡಿಯಳವಡದು ಗುರುವರ್ಯನೆ 2ಕೊರಗಿ ಕರಗುವ ಜೀವರಾರೈ ಬರುವೆ ನೀನೆಲ್ಲಿಂದ ಸಮಯಕೆಇರುವೆ ನೀನಾವೆಡೆಯೊಳಜ್ಞತೆ ಬರುವದಿವರಿಂಗೇತಕ್ಕೆಹರೆವದೆಂತದರಂದತೋರದು ಧರಿಸುತಿಹೆ ನೀನೆಂತು ತನುವನುಮರೆಯ ಮಾಳ್ವೆಯದೇಕೆ ಮೂರ್ತಿಯ ಕರುಣಿಸೈ ಗುರುವರ್ಯನೆ 3ನಿನ್ನ ನಿನ್ನೊಳು ನೀನೆ ನಾನೆಂದೆನ್ನದೆಂಬುದರಿಂದ ತಿಳಿದರೆನನ್ನ ನಿನ್ನೊಳು ಕಾಣ್ಬೆ ಅಂದು ಪ್ರಸನ್ನನಾಗಿಯೆ ಕರುಣಿಸಿಎನ್ನೊಳಗೆ ಸರ್ವವನು ಸರ್ವರೊಳೆನ್ನ ತಿಳಿದನ್ಯಾರ್ಥವನೆ ಮರತುನ್ನತಾಮಲ ಪೂರ್ಣನಹೆಯೆಂದಿನ್ನು ತೋರದು ದೇವನೆ 4ಸಾಕು ಸನಿಯವ ಸೇರಿಸೆಮ್ಮೊಳು ನೂಕು ಕ'ದಿಹ ತಮವ ಸುಖವನುಸೋಕಿಸೈ ಕಡೆಗೊಳಿಸು ಚಿಂತೆಯ ಬೇಕು ನಿನ್ನಡಿ ಸೇವೆಯುಶ್ರೀಕರನೆ ಚಿಕನಾಗಪುರ ವರದರಸನೆ ಗುರುವಾಸುದೇವನೆತಾಕು ತಡೆ ಬರದಂತೆ ನಿನ್ನೊಳಗೇಕತೆಯ ದಯಮಾಡಿಸೈ 5