ಒಟ್ಟು 99 ಕಡೆಗಳಲ್ಲಿ , 49 ದಾಸರು , 95 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರಣಿಗೆ ದೊರೆಯೆಂದು ನಂಬಿದೆ - ಇಂಥ - |ಪರಮಲೋಭಿಯೆಂದು ಅರಿಯೆ ಶ್ರೀ ಹರಿಯೆ ಪಕಾಡಿಬೇಡುವರಿಗೆ ಕೊಡಲಾರದೆ ಅಂಜಿ |ಓಡಿ ನೀರೊಳು ಸೇರಿಕೊಂಡೆ ಬೇಗ ||ಹೇಡಿಯ ತೆರದಲಿ ಮೋರೆಯ ತೋರದೆ |ಓಡಿ ಅರಣ್ಯದಿ ಮೃಗಗಳ ಸೇರಿದೆ 1ಬಡವರಬಿನ್ನಪ ಲಾಲಿಸದಲೆ ಹಲ್ಲ |ಕಡುಕೋಪದಲಿ ತೆರೆದಂಜಿಸಿದೆ ||ತಡೆಯದೆ ಭಿಕ್ಷುಕನಾದರು ಬಿಡರೆಂದು |ಕೊಡಲಿಯ ಪಿಡಿದುಕೋಡಗ ಹಿಂಡ ಕಾಯ್ದೆಯೊ2ಉತ್ತಮನೆಂದರೆ ಮತ್ತೆ ಚೋರನಾದೆ |ಬತ್ತಲೆ ನಿಂತು ತೇಜಿಯನೇರಿದೆ |ಎತ್ತಪೋದರು ಬಿಡೆ ಬಿಡೆ ನಿನ್ನ ಪಾದವ |ಚಿತ್ತಜ ಜನಕ ಶ್ರೀ ಪುರಂದರವಿಠಲನೆ3
--------------
ಪುರಂದರದಾಸರು
ನಗಲುಬಹುದು ನಗಲುಬಹುದುನಗು ನಗು ರಂಗಯ್ಯಜಗದ ಮಾತು ಅ‌ಘದ ಧಾತುಬಗೆಯನರಿತು ಮುಗಳುನಗೆಯ ಪ.ಒರೆದು ಒರೆದು ಭಾರತದರ್ಥಅರಿದುಅರಿದುವರಭಾಗವತಪರಿಯ ಪರಿಯ ಪುರಾಣಶ್ರ್ರುತಿಯಪಾರಾಯಣ ಮಾಡಿ ಕುರುಡಬಧಿರನರರ ತೆರದಿಅರಹುಮರಹುಬೆರೆತು ಬೆರೆತು ತರತಮಿಲ್ಲದೆಹರಿಹರಜರು ಬೇರೆಬೇರಿಲ್ಲೆಂಬಪರಮಪಾತಕರಿರವ ನೋಡಿ 1ಮಕ್ಕಳ ಮಡದೇರಕ್ಕರ ಬಡಿಸಿರೊಕ್ಕದ ಮದದಿ ಸೊಕ್ಕಿ ಸಜ್ಜನರಲೆಕ್ಕಿಸದವಗೆ ರಕ್ಕಸರಂತೆನಿಕ್ಕರ ನುಡಿದು ಕಕ್ಕಸದಿಂದಪುಕ್ಕಟೆ ಪುಣ್ಯದ ಲೆಕ್ಕವ ಕಳೆದುಘಕ್ಕನೆ ಜವನೋರಿಕ್ಕಿದ ಬಲೆಗೆಸಿಕ್ಕಿ ಬಳಲುತ ನರ್ಕವನುಂಬಮೂರ್ಖರ ತಾಮಸಮುಖ್ಯರ ನೋಡಿ 2ಸುಂದೋಪಸುಂದ ಜಲಂಧರ ಕೀಚಕಕಂದರದಶಕ ಸೈಂಧವ ಜಟಾದ್ಯರಂದು ಪರಸ್ತ್ರೀಯ ಸೌಂದರ್ಯಕ್ಕೆ ಮತಿಗುಂದಿ ಲಯವಾದರೆಂದುಕೇಳಿಇಂದುಮುಖಿಯರ ಚಂದಕೆ ಹುಚ್ಚಿಟ್ಟುಕಂದರ್ಪವಿಶಿಖವೃಂದ ವಶಾಗಿ ನೂರೊಂದುಕುಲ ಯಮಮಂದಿರ ಹೊಂದಿಪಮಂದರಮದೋನ್ಮತ್ತಾಂಧರ ನೋಡಿ3ಸುರರ ಸಂಪದ ಪರಮಪದಕೆಕಾರಣವಾಗಿರೆ ಸುರೇತರರೆಲ್ಲಇರುಳೆ ಹಗಲೆ ಸೈರಿಸಲಾರದೆಒರಗಿಹೋದ ವಿವರಕೇಳಿದುರುಳಕೌರವರ್ವರ ಪಾಂಡವರಸಿರಿತಮ್ಮದೆಂದ್ಹುರಿದು ಹೋಗಿರೆಪರರ ದ್ರವ್ಯಕ್ಕೆ ಮರುಗಿ ಬಯಸಿನರರು ಕೆಡುವ ಪರಿಯ ನೋಡಿ 4ಪ್ರತಿದಿನ ನಿನ್ನ ಪ್ರತಿಮ ಪೂಜೆ ಸದ್ವ್ರತವ ಮಾಡಿ ಸತ್ಕಥೆಯ ಶ್ರೀಮಧ್ವಮತ ಮಹಿಮೆಯನತಿಕ್ರಮಿಸಿ ಕುತ್ಸಿತವೆನಿಸುವ ಪಥದಲಿಪತಿತರಾಗಿ ಸದ್ಗತಿಯ ಕಾಣದಚತುರ ಪರಿಯ ಅಮಿತ ಭಕ್ಷಕರಸ್ಥಿತಿಯರಿತು ಮಾನಾಥ ಪ್ರಸನ್ವೆಂಕಟಪತಿಯೆ ನೀ ಮಂದಸ್ಮಿತದಲಿ 5
--------------
ಪ್ರಸನ್ನವೆಂಕಟದಾಸರು
ನಂಬಿ ಕೆಟ್ಟವರುಂಟೆ - ಕೃಷ್ಣಯ್ಯನ |ನಂಬಲಾರದೆ ಕೆಟ್ಟರು ಪ.ಅಂಬುಜನಾಭನ ಪಾದವ ನೆನೆದರೆ |ಇಂಬುಗೊಡದ ದುಃಖ ಹರಿಸುವ ಶ್ರೀ ಕೃಷ್ಣ ಅಪಬಲಿಯ ಪಾತಾಳಕಿಳುಹಿ - ಭಕ್ತನ ಬಾ - |ಗಿಲವ ಕಾಲುವೆ ನಾನೆಂದ ||ಛಲದೊಳು ಅಸುರರ ಶಿರಗಳ ತರಿದು ತಾ |ನೊಲಿದು ವಿಭೀಷಣಗೆ ಪಟ್ಟಗಟ್ಟಿದ ಈ ಕೃಷ್ಣ 1ತರಳ ಪ್ರಹ್ಮಾದಗೊಲಿದು - ಹಿರಣ್ಯಕನ ಉ - |ಗುರಿನಿಂದಲೆ ಸೀಳಿದ |ಕರಿರಾಜಗೊಲಿದುನೆಗಳು ನುಂಗುತಿರಲಾಗ ||ಪರಿಹರಿಸಿದ ಜಲದೊಳು ಪೊಕ್ಕು ಶ್ರೀ ಕೃಷ್ಣ 2ಪಾಂಡವರಿಗೆ ಒಲಿದು - ಕೌರವರನು |ತುಂಡು ಛಿದ್ರಮಾಡಿದೆ ||ಗಂಡರೈವರ ಮುಂದೆ ದ್ರೌಪದಿ ಕೂಗಲು |ಕಂಡು ಕರುಣದಿ ಕಾಯ್ದ ಪುರಂದರವಿಠಲನ 3
--------------
ಪುರಂದರದಾಸರು
ಮುಳುಗಿದನುಯೋಗಿಮುಳುಗಿದನುಒಳ್ಳೆ ಬಲಹುಳ್ಳ ನಾದ ಸಮುದ್ರ ಮಧ್ಯದಿಯೋಗಿಪಸತಿಮೂವರ ಸಮನಿಸಲಾರದೆಪಿತರೀರ್ವರ ಕರಕರೆಯನುನೀಗಿಸುತರೈವರೆನಿಪರು ಮಾತು ಕೇಳದಿರೆಮತಿಯೇನು ಹೇಳಲಿ ಎಲ್ಲ ಸಂಗವ ಬಿಟ್ಟು1ಜೇಷ್ಟರಾರುವರ ಕಾಟವ ತಾಳದೆದುಷ್ಟನಾದಿನಿಯ ನಾಲ್ವರ ತೊರೆದುಅಷ್ಟಮಾತುಳರಪ್ರಯೋಜಕವೆಂದುಕಷ್ಟರಿವರು ಎಂದು ಮನವ ಭೀತಿಯ ಬಿಟ್ಟು2ಇಂತು ಎಲ್ಲವ ಬಿಟ್ಟು ಚಿಂತಕ ತಾನಾಗಿಭ್ರಾಂತು ಎಳ್ಳಿನಿತು ಒಬ್ಬರೊಳಿಲ್ಲದೆಚಿಂತಕನು ಚಿದಾನಂದ ಮೂರುತಿಯನುಅಂತು ಬಲಿದು ಎನ್ನ ದೇಹ ಮರೆವಗಿಳಿ3
--------------
ಚಿದಾನಂದ ಅವಧೂತರು
ಸುಮ್ಮನೆ ಕಾಲವ ಕಳೆವರೆ - ಯಮ - |ಧರ್ಮರಾಯನ ದೂತರೆಳೆಯರೆ ಪ.ನರಿ - ನಾಯಿ ಜನುಮವು ಬಾರದೆ - ಹಾಗೆ - |ನರಜನ್ಮದಲಿ ಬಂದು ಸೇರದೆ ||ಹರಿಯ ಸ್ಮರಣೆ ಮಾಡಲಾರದೆ - ಸುಮ್ಮ |ನಿರಲು ಪಾಪದ ವಿಷವೇರದೆ 1ಬಾಲನಾಗಿದ್ದಾಗ ಬಹುಲೀಲೆ - ಮುಂದೆ |ಲೋಲನಾಗಿ ಬಾಳಿದ ಮೇಲೆ ||ಮೂಳ ವೃದ್ಧಾಪ್ಯ ಬಂತಾಮೇಲೆ - ಇನ್ನು - |ಬಾಳುವುದೆಲ್ಲ ನೂಲಮಾಲೆ 2ಮಡದಿ - ಮಕ್ಕಳ ಕೂಡಣ ಬಾಳು - ತನ್ನ |ಒಡಲಿಗಾಗೆ ತಾನು ಕರವಾಳು ||ಬಿಡದೆ ಸಂಕೀರ್ತನೆ ಮಾಡೇಳು - ಮಿಕ್ಕ - |ನುಡಿದ ನುಡಿಗಳೆಲ್ಲವು ಬೀಳು 3ಮನೆಮನೆ ವಾರ್ತೆಯು ಸ್ಥಿರವಲ್ಲ - ಈ |ಮನುಜರ ಮಾತೇನು ಘನವಲ್ಲ ||ವನಜಸಂಭವಗೂ ನಿಶ್ಚಯವಿಲ್ಲ - ಮುಂದೆ |ಹನುಮಂತ ಪಟ್ಟಕೆ ಬಹನಲ್ಲ 4ಇಂದಿನಹಮ್ಮು ನಾಳೆಗೆ ಇಲ್ಲ -ಭವ |ಬಂಧನದೊಳು ಸಿಕ್ಕಿ ನರಳಿದೆನಲ್ಲ ||ಮುಂದನರಿತು ನಡೆದುದಿಲ್ಲ - ಮೃತ್ಯು |ಬಂದಾಗ ಬಿಡಿಸಿಕೊಳ್ಳುವರಿಲ್ಲ 5ಮರಣವುಆವಾಗ ಬರುವುದೋ - ತನ್ನ |ಶರೀರವುಆವಾಗ ಮುರಿವುದೊ ||ಕರಣಂಗಳೆಲ್ಲವು ಜರಿವುದೊ - ತನ್ನ |ಗರುವದುಬ್ಬಸವೆಲ್ಲ ಮುರಿವುದೊ 6ಮರಣಕಾಲಕೆ ಅಜಮಿಳನಾಗ - ತನ್ನ |ತರಳನನಾರಗನೆಂದು ಕರೆದಾಗ ||ಕರುಣದಿ ವೈಕುಂಠ ಪದವೀಗ -ನಿತ್ಯ - |ಪುರಂದರವಿಠಲನ ನೆನೆ ಬೇಗ 7
--------------
ಪುರಂದರದಾಸರು