ಸಾರಸ ಚರಣವ ತೋರೋ ನಿನ್ನ
[ಪಾರ] ಕರುಣಾಮೃತವನು ಬೀರೋ ಪ
ಮುರಳೀಧರ ಕೃಷ್ಣ ಬಾರೋ ಎನ್ನ
ಹೃದಯ ಮಂದಿರವನು ಸೇರೋ ಅ.ಪ
ನಿನ್ನ ಹೊರತು ಕೈ ಹಿಡಿಯುವರಾರೋ
ಎನ್ನ ಭವಗಳ ಹರಿಸುವರಾರೋ
ಎನ್ನಪರಾಧವ ಮನ್ನಿಸಿ ಬಾರೋ
ಪನ್ನಗಶಯನ ನೀ ನಸುನಗೆದೋರೋ 1
ನಿನ್ನ ದರ್ಶನಕಾಗಿ ಹಾತೊರೆಯುವೆನೋ
ನಿನ್ನ ಸೇವೆಗೆ ಎನ್ನ ತೆತ್ತಿಹೆನೋ
ನಿನ್ನ ಪರೀಕ್ಷೆಗೆ ಫಲ ನಿನಗೇನೋ
ಚೆನ್ನ ಮಾಂಗಿರಿರಂಗ ಮುನಿಸೆನ್ನೊಳೇನೋ 2