ದಶರಥರಾಮಹರೆ ಸೀತಾಪತೆ
ದಶರಥರಾಮ ಸುಧಾಕರವದನ
¥ರಶುರಾಮ ಬಾಹುಪರಾಕ್ರಮ ಜಿತಶ್ರೀ ಪ
ಸುರಮುನಿ ಸೇವಿತ ಶುಭಕರ ಚರಿತ
ಕೌಸ್ತುಭ ಶೋಭಿತ
ವರ ವಿಶ್ವಾಮಿತ್ರಾಧ್ವರ ಪರಿಪಾಲನ
ಖರ ದೂಷಣ ರಾಕ್ಷಸ ಬಲ ಖಂಡನ 1
ವಾಲಿ ಮರ್ದನ ಭಕ್ತವತ್ಸಲ ಮಾಧವ
ವಿನುತ ಪಾದ ಪದ್ಮ
ನೀಲ ನೀರದ ಸನ್ನಿಭಗಾತ್ರ ಪರಮ ದಯಾಳು
ನಾರಾಯಣ ಲೀಲಾ ಮಾನುಷ ವೇಷ 2
ಸಿಂಧು ಬಂಧನ ಪಂಕ್ತಿ ಕಂಧರಾಂತಕ
ಗೋವಿಂದ ಮುಕುಂದಾರ ವಿಂದೋದರ
ಇಂದಿರಾಧಿಪ ಶ್ರೀ ಹೆನ್ನೆಪುರ ನಿಲಯಾ
ನಂದ ವಿಗ್ರಹ ಜಗದ್ವಂದ್ಯ ಮಂದಹಾಸ 3