ಒಟ್ಟು 1792 ಕಡೆಗಳಲ್ಲಿ , 51 ದಾಸರು , 1465 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮನಾಮ ಸ್ಮರಣೆಯ ಮಾಡದೆ ನೀ ಪಾಮರನಾಗದಿರೊ ಮನುಜ ಪಾಮರನಾಗದಿರೊ ಪ ತಾಮಸಗುಣಬಿಟ್ಟು ಪ್ರೇಮದಿಂದಲಿ ನಮ್ಮ ಸ್ವಾಮಿಯ ನೆರೆ ನಂಬಿರೋ ಅ.ಪ ದೇಹವನಿತ್ಯವೋ ಮೋಹಪಡಬ್ಯಾಡವೋ ಲೇಶ ಸುಖ ಕಾಣೆನು 1 ಹಗರಣವಹ ವ್ಯಕ್ತಿಗಳನು ನಂಬುತಾ ನಗೆಗೀಡಾಗದಿರೊ 2 ಹೊರಗೊಳಗಿದ್ದು ನಮ್ಮ ಗುರುರಾಮವಿಠ್ಠಲ ಕರತಳವಾಗುವುದು3
--------------
ಗುರುರಾಮವಿಠಲ
ರಾಮನಾಮದಿ ಪಾಮರರಿಗೆ ಪ್ರೇಮ ಪುಟ್ಟುವುದೆ ಪ. ಭೃತ್ಯ ನ್ಯಾಯವರಿಯದ ಕಾಮಿಗಿದರೊಳು ನೇಮ ಬಪ್ಪುದೆ ಅ.ಪ. ದಾಶರಥಿ ಎನಿಸಿ ಜಗದೊಳು ಶ್ರೀಶನವತರಿಸೆ ಕೌಶಿಕನ ಮಖ ಘಾಸಿಗೈಯ್ಯುವ ದೋಷಿಗಳ ತಾ ನಾಶಗೈಸಿದ 1 ಶಿಲೆಯ ಪೆಣ್ಗೈದು ಲಲನೆ ಸೀತೆಯ ಒಲುಮೆಯಿಂ ವರಿಸಿ ಕುಲವನಳಿದನ ಛಲವ ಭಂಗಿಸಿ ಲಲನೆ ಸಹಿತದಿ ನೆಲಸೆ ಪುರದಲಿ 2 ಅನುಜ ಸ ಹಿತ ವನಕೆ ಬರೆ ಖ್ಯಾತಿ ರಾವಣನಾ ತಳೋದರಿ ಪ್ರೀತಿಸಲು ವಿಘಾತಿಗೈಸಿದ 3 ಮಾಯಾಮೃಗ ಕಂಡು ಪ್ರಿಯ ನೀಡೆನೆ ಸಾಯಕವನೆಸೆಯೆ ಕಾಯ ಬಿಡುತಿರೆ ಹೇಯ ರಾವಣ ಪ್ರಿಯಳನುಯ್ಯೆ ನೋಯ್ದ ಮನದಲಿ 4 ಬೆಟ್ಟವನೆ ಕಂಡು ಕುಟ್ಟಿ ವಾಲಿಯ ಪಟ್ಟ ಕಪಿಗಿತ್ತು ಶ್ರೇಷ್ಠ ಹನುಮಗೆ ಕೊಟ್ಟು ಉಂಗುರ ಪಟ್ಟದರಸಿಗೆ ಮುಟ್ಟಿಸೆಂದ 5 ಕೇಳಿ ಶ್ರೀ ವಾರ್ತೆ ತಾಳೀ ಹರುಷವ ಬೀಳು ಕೊಂಡಲ್ಲಿಂ ತಾಳೆ ಕೋಪವ ಕೇಳಿ ವನಧಿ ಸೀಳು ಆಗಲು ಶಿಲೆಯ ಬಿಗಿದ 6 ದುಷ್ಟ ರಾವಣನ ಕುಟ್ಟಿ ಶಿರವನು ಪಟ್ಟದರಸಿ ಕೂಡಿ ಶ್ರೇಷ್ಠ ಭರತಗೆ ಕೊಟ್ಟು ದಶರ್Àನ ಪಟ್ಟವಾಳಿದ ದಿಟ್ಟಯೋಧ್ಯೆದಿ 7 ರಾಮ ರಾಮನೆಂಬಾ ಹನುಮಗೆ ಪ್ರೇಮದಿಂದೊಲಿದು ಧಾಮ ಅಜಪದ ನೇಮಿಸಿ ಮುಂದೆ ಸೋಮನೆನಿಸಿದ ಭಾನು ವಂಶಕೆ8 ಬೆಟ್ಟದೊಡೆಯನ ಇಷ್ಟು ಮಹಿಮೆಯ ಮುಟ್ಟಿಮನ ಭಜಿಸಿ ದಿಟ್ಟ ಗೋಪಾಲಕೃಷ್ಣವಿಠ್ಠಲ ಶ್ರೇಷ್ಠನೆನ್ನುವ ಶ್ರೇಷ್ಠಗಲ್ಲದೆ 9
--------------
ಅಂಬಾಬಾಯಿ
ರಾಮಾ ರಕ್ಷಿಸೋ ಎನ್ನ ಪ್ರೇಮಾ ಸಂಪೂರ್ಣಕಾಮಾ ಪ ಸ್ವಾಮಿ ಜಗನ್ನಾಥ ಸರ್ವಾಂತರ್ಯಾಮಿ ರಾಮಿಯ ರಮಣ ಶ್ರೀ ರಘುಕುಲಭೂಷಣ ಅ.ಪ ಅಂಗಜ ಜನಕಯ್ಯ ಮೋಹನಾಂಗ ಜಗದಂತರಂಗ ಶೃಂಗಾರ ಪರಿಮಳ ಭೂಷಿತಾಂಗಾ ಒಪ್ಪಿರುವೊ ರಂಗಾ ಗಂಗೆಯ ಜನಕ ತುರಂಗನೇರಿದಾ ಮಂಗಳ ಮಹಿಮ ಕುರಂಗಲೋಚನಾ ಅಂಗನೆಯರೆಡಬಲ ಸಂಗಡದಲಿ ಮೋಹಂಗಳ ಮಾಡುತ ಶೃಂಗಾರದಲಿ ರಂಗ ಮಂಟಪ ಮಧ್ಯರಂಗಲಿರುವ ರಾಮಂಗಾರ --- ಹೆನ್ನರಂಗನಾಯಕ 1 ಚಂದದಿಂದಾದಿ ವೇಣು -----ನಂದದಿ ಮೋದ ಮಂದಾರಧರ ಮಾಧವನಾದ ಗೋವಿಂದ ನಿ ನೋಡಾ ಸಿಂಧು ಶಯನ ಮುನಿ ವಂದಿತ ಚರಣಾರವಿಂದ ಭಜಿಸುವ ಕಂದನ ತೋರದಯ ದಿಂದ ಪಾಲಿಸುವ ತಂದೆಯು ನೀನೆ ಎಂದು ತಿಳಿದು ಈ ಪಾದ ಹೊಂದಿ ಭಜಿಸುವೆನು 2 ಚಂಡಶಾಸನ ಬಿರುದಿನಾ ದೇವಾದಿದೇವ ಮಂಡಲಾಧಿಪ ಮಹಾನುಭಾವ ಭಕ್ತರ ಕಾಯುವ ಪುಂಡರೀಕ ವರದಂಡ-----ಕುಂಡಲಿಶಯನ ಕೋ ದಂಡಧರ ಬಲೋದ್ದಂಡ ವಾನರದಂಡನೆ ಕೂಡಿಸಿ ಪುಂಡ ರಕ್ಕಸರ ಹಿಂಡನೆ ಹಿಡಿದು ಮಂಡಿಗಳನು ಬಿಡದೆ ಚಂಡಿಸಿದಂಥಾ ಗಂಡರಗಂಡ `ಶ್ರೀ ಹೆನ್ನೆವಿಠ್ಠಲಾ ' 3
--------------
ಹೆನ್ನೆರಂಗದಾಸರು
ರಾಯ ಬಾರೋ ತಂದೆ ತಾಯಿ ಬಾರೋ ನಮ್ಮ ಕಾಯೊ ಬಾರೋ ಮಾಯಿಗಳ ಮರ್ದಿಸಿದ ರಾಘವೇಂದ್ರ ರಾಯ ಬಾರೋ ಪ ಭಾಸುರ ಚರಿತನೆ ಭೂಸುರ ವಂದ್ಯನೆ ಶ್ರೀ ಸುಧೀಂದ್ರಾರ್ಯರ ವರಪುತ್ರ ರಾಯ ಬಾರೋ ಶ್ರೀ ಸುಧೀಂದ್ರಾರ್ಯರ ವರಪುತ್ರರೆನಿಸಿದ ದೇಸಿಕರೊಡೆಯ ರಾಘವೇಂದ್ರರಾಯ ಬಾರೋ 1 ವಂದಿಪ ಜನರಿಗೆ ಮಂದಾರ ತರುವಂತೆ ಕುಂದಾದಭೀಷ್ಟೆಯ ಸಲಿಸುತಿಪ್ಪ ರಾಯ ಕುಂದದಾಭೀಷ್ಟ ಸಲಿಸುತಿಪ್ಪ ಸರ್ವಜ್ಞ ಮಂದನಮತಿಗೆ ರಾಘವೇಂದ್ರ ರಾಯ ಬಾರೋ 2 ಆರು ಮೂರೇಳು ನಾಲ್ಕೆಂಟು ಗ್ರಂಥ ಸಾರಾರ್ಥ ತೋರಿಸಿದೆ ನ್ಯಾಯದಿಂದ ಸರ್ವರಿಗೆ ರಾಯ ಬಾರೋ ಸೂರಿಗಳರಸನೆ ರಾಘವೇಂದ್ರಾ ರಾಯ ಬಾರೋ 3 ರಾಮ ಪಾದಾಂಬುಜ ಸರಸಭೃಂಗ ಕೃಪಾಪಾಂಗ ಭ್ರಾಮಕ ಜನರ ಮಾನಭಂಗ ರಾಯ ಬಾರೋ ಭ್ರಾಮಕಜನ ಸನ್ಮಾನಭಂಗ ಮಾಡೀದಾ ಧೀಮಂತರೊಡೆಯನೆ ರಾಘವೇಂದ್ರಾ ರಾಯ ಬಾರೋ4 ಭೂತಳಾಧಿಪನಾ ಭೀತಿಯ ಬಿಡಿಸಿದೆ ಪ್ರೇತತ್ವ ಕಳೆದ ಮಹಿಷಿಯಾ ರಾಯ ಬಾರೋ ಪ್ರೇತತ್ವ ಕಳೆವ ಮಹಿಷಿಯಾ ಶ್ರೀಜಗ ನ್ನಾಥ ವಿಠ್ಠಲನಾ ಪ್ರೀತಿಪಾತ್ರಾ ರಾಯ ಬಾರೋ 5
--------------
ಜಗನ್ನಾಥದಾಸರು
ರಾಯರ ನೋಡಿರೈ ಮ'ಪತಿರಾಯರ ಪಾಡಿರೈ ಪರಾಯರ ನೋಡುತ ಪಾಡುತ ಭಕುತಿಯಮಾಡಲು ಬೇಡಿದ ವರಗಳ ಕೊಡುವಾ 1ತಂದೆಯ ನೋಡಿರೈ ಮ'ಪತಿಕಂದನ ಪಾಡಿರೈಕುಂದಗಳೆಣಿಸದೆ ಬಂದು ಭಕುತಜನ ವೃಂದವ ಪೊರೆಯುವ ತಂದೆ ಮ'ಪತಿ 2ಭೋಗಿಯ ನೋಡಿರೈ ತಾಪಸಯೋಗಿಯ ಪಾಡಿರೈತ್ಯಾಗರಾಜ ಭೂಪತಿ'ಠ್ಠಲಪ್ರಿಯ ಭೋಗಿಭೂಷಣಾಂಕ ವೈಷ್ಣವಾಗ್ರಣಿ 3
--------------
ಭೂಪತಿ ವಿಠಲರು
ರಾಯರ ನೋಡಿರೈ ಶ್ರೀ ಗುರು |ರಾಯರ ಪಾಡಿರೈ |ಶ್ರೀ ಯರಸನ ಪ್ರಿಯಕಂಜಾಪ್ತಾಭಸು |ಕಾಯ ಕವಿಜನಗೇಯಾ ಪ ಶ್ರೀ ಸುಧೀಂದ್ರ ಕರಕಮಲದಲಿ ಸಂಭೂತಾ |ಬಹು ವಿಖ್ಯಾತಾ |ಶ್ರೀಶನ ಗುಣಗಳ ತುತಿಸುವ ಯತಿ ಶಿರೋಮಣಿಯೊ | ಚಿಂತಾಮಣಿಯೊ |ಈ ಸುಜನರ ಮನಸಿಗೆ ತೋರುವದಹಲ್ಲಾದಾ |ಶಿರಿ ಪ್ರಲ್ಹಾದಾ 1 ದಂಡಕಮಂಡಲ ಕಾಷಾಯವು ಸೂವಸನಾ |ವೇದ ವ್ಯಸನಾ |ಪುಂಡರೀಕ ಪದಭೃಂಗಾ ಮುನಿಕುಲೋತ್ತುಂಗಾ |ಕರುಣಾಪಾಂಗಾ |ಮಂಡಲದೊಳು ಬಹುತೋಂಡರ ಪರಿಪಾಲಕಾ |ವರ ಬಾಹ್ಲೀಕಾ 2 ತುಂಗಾ ತೀರದಿ ಮಂತ್ರಾಲಯದೊಳಗಿರುವೊ |ಕಲ್ಪ ತರುವೊ |ಗಂಗಾಜನಕ ವಿಹಂಗವಾಹನ ಇಲ್ಲಿಹನು |ನತ ಸುರದೇನು |ಮಂಗಳ ಮಹಿಮರ ದರುಶನ ಮಾತ್ರಾ ಫನಾಶಾ |ಶ್ರೀ ಗುರುವ್ಯಾಸಾ 3 ಪರಿಮಳ ವಿರಚಿಸಿ ಬುಧರಿಗೆ ಬೀರಿದದೀಶಾ |ಗುಣಗಂಭೀರಾ |ಪರಿಪರಿ ಚರಿತೆಯ ತೋರ್ದಭೂದೇವರ ದೇವಾ |ದೇವ ಸ್ವಭಾವಾ |ನರ ಇವರನು ಕ್ಷಣಬಿಡದಲೆ ಭಜಿಸಲು ಸುಖವೊ |ಅಹಿಕಾಮುಕವೊ (ಅಘ ಪರಿಹರವೊ) 4 ದುಷ್ಟ ಮತವ ಖಂಡಿಸಿ ಹರಿಪರನೆಂದೊರೆದಾ |ಭೀಷ್ಟಿಯಗರದಾ |ಸೃಷ್ಠಿಯೊಳಗೆ ಶ್ರೀಶ ಪ್ರಾಣೇಶ ವಿಠ್ಠಲನದಾಸಾಮುನಿಕುಲೋತ್ತಂಸಾ |ಎಷ್ಟು ಪೊಗಳಲಾಶಕ್ಯವು ಸದ್ಗುಣ ಸಾಂದ್ರಾ |ಶ್ರೀ ರಾಘವೇಂದ್ರಾ 5
--------------
ಶ್ರೀಶಪ್ರಾಣೇಶವಿಠಲರು
ರುದ್ರದೇವರ ಸ್ತುತಿ ಮಹದೇವಾ ಮಹದೇವಾ |ಕಾಯೋ ಮಹದೇವ ಎನ್ನನೀ ||ನೋಯಗೊಡದೆ ತ್ವರ |ಪಾವನ ಮಾಡಿ ಪ ಅಸಮ ರಕ್ಕಸಗೆ |ವಶವಾಗೆ ವನನುಬಿಸಜಾಕ್ಷಗೆ ಒಪ್ಪಿಸಿ |ಕೊಲಿಸಿದನೇ1 ನಂಜುಂಡರಗಿಸಿ |ದಂಜನೆ ಕುವರ ಪ್ರ ||ಭಂಜನ ಸುತನಾನಂಜುವೆನೀಗಾ 2 ಸೂಸುವ ಭವಶರ |ದೀಸದೆ ಗುರು ಪ್ರಾ ||ಣೇಶ ವಿಠ್ಠಲನ |ದಾಸ ಮುಣುಗುವೆ 3
--------------
ಗುರುಪ್ರಾಣೇಶವಿಠಲರು
ರುದ್ರದೇವರು ಉಮೇಶಾ ಪರಿಪಾಲಿಸೊ ಪ ಉಮೇಶ ಪಾಲಿಸು ರಮೇಶನ ಪಾದ ಕಮಲಗಳಿಗೆ ಭ್ರಮರನೆನಿಸಿ1 ಕಾಲನಿಯಾಮಕ ನೀನಾಗಿ ಜಗವನು ಲೀಲೆಯಿಂದಲಿ ಕಾವ ಶೂಲ ಪಾಣಿಯೆ 2 ಸಿರಿ ಶೇಷಾವಿಠ್ಠಲನ ದಾಸನೆನಿಸಿ ಸಂತೋಷಗೊಳಿಸೊ 3
--------------
ಬಾಗೇಪಲ್ಲಿ ಶೇಷದಾಸರು
ರುದ್ರದೇವರು ಪರಿ ವೈರಾಗ್ಯವು ವೀರ ವೈಷ್ಣವ ಭಕ್ತಾಗ್ರಣಿಯೆ ಪ ಮಾರಹರನೆ ಮನ್ಮಥನ ವೈರಿಯೆ ಮನ- ಸಾರ ಶ್ರೀರಾಮ ನಾಮವ ಜಪಿಸುವದಿದು ಅ,ಪ ಮುತ್ತು ಮಾಣಿಕ್ಯದ ಕಿರೀಟವು ಧರಿಸದೆ ನೆತ್ತಿಲಿ ಕೆಂಜೆಡೆ ಸುತ್ತಿಹುದು ಹಸ್ತದಿ ಶಂಖು ಚಕ್ರಗದೆ ಪದುಮವು ಬಿಟ್ಟು ಉತ್ತಮ ಡಮರು ತ್ರಿಶೂಲ ಪಿಡಿವುದಿದು 1 ನೊಸಲಲಿ ಕಸ್ತೂರಿ ತಿಲಕವನಿಡದಲೆ ಭಸುಮವ ಲೇಪಿಸುವುದು ತರವೆ ಕುಸುಮಲೋಚನೆ ಪ್ರಿಯ ಸಖನಾಗಿರುತಿರೆ ಎಸೆವ ಕಪಾಲ ಪಿಡಿದು ಬೇಡುವದಿದು 2 ದುಂಡು ಮುತ್ತಿನ ಹಾರ ಪದಕಗಳಿರುತಿರೆ ರುಂಡಮಾಲೆಯ ಕೊರಳೊಳು ತರವೆ ತಂಡ ತಂಡ ಪರಮಾನ್ನ ಭಕ್ಷಗಳಿರೆ ಉಂಡು ತೇಗದೇ ವಿಷಪಾನ ಮಾಡುವದಿದು3 ಭರ್ಜರಿ ಪೀತಾಂಬರ ಉಡುವುದು ಬಿಟ್ಟು ಕರಿಯ ಚರ್ಮನುಡುವುದು ತರವೆ ಪರಿ ರತ್ನಾಭರಣಗಳಿರುತಿರೆ ಉರಗಗಳಿಂದಲಂಕೃತನಾಗಿರುವದು 4 ಭೃತ್ಯರು ಸೇವೆಗೆ ಬೇಕಾದವರಿರೆ ಮತ್ತೆ ಪಿಶಾಚ ಗಣಗಳೇತಕೆ ಹಸ್ತಿ ತುರಗ ಪಲ್ಲಕ್ಕಿ ಪುಷ್ಪಕವಿರೆ ಎತ್ತನೇರಿ ಚರಿಸುವುದುಚಿತವೆ ಶಂಭೊ 5 ಸಿರದಲಿ ಗಂಗೆಯು ಸ್ಥಿರವಾಗಿರುತಿರೆ ಪರ್ವತರಾಜಕುವರಿಯೇತಕೆ ಅರಮನೆ ವಾಸಕೆ ಯೋಗ್ಯವಾಗಿರುತಿರೆ ಗಿರಿ ಕೈಲಾಸ ಪರ್ವತದಿ ವಾಸಿಸುವದು 6 ಭಕ್ತರು ಭಕುತಿಲಿ ಪಾಡಿ ಕೊಂಡಾಡಲು ನೃತ್ಯವ ಮಾಡುತ ಹರುಷದಲಿ ಕರ್ತೃ ಶ್ರೀ ಕಮಲನಾಭ ವಿಠ್ಠಲನೆಂದು ಪತ್ನಿಗೆ ಉಪದೇಶ ಮಾಡುವದಿದು 7
--------------
ನಿಡಗುರುಕಿ ಜೀವೂಬಾಯಿ
ರುದ್ರಾ ವೀರಭದ್ರ ಅದ್ರಿನಂದನೆ ರಮಣಾ ಪ ರೌದ್ರ ಮೂರುತಿ ದಯಾಸಮುದ್ರ ಎನ್ನನು ಕಾಣೊ ಅ. ಪ. ಮುಪ್ಪುರವ ಗೆದ್ದ ಮುಕ್ಕಣ್ಣ ಮನ್ಮಥ ವೈರಿ ಸರ್ಪಭೂಷಣ ಮೃತ್ಯು ನಿವಾರಣ ವಾಕು 1 ಸದ್ಯೋಜಾತ ಭೂತನಾಥ ಭಕುತರದಾತ ಖದ್ಯೋತ ಲಾವಣ್ಯ ಸುರಜ್ಯೇಷ್ಠನ ಮಧ್ಯವಾಸನ ಛೇದ ಶ್ರೀ ವಿಷ್ಣುವಿನ ಪಾದ ಹೃದ್ಯದೊಳಗಿಟ್ಟ ಜಟಾ ಜೂಟ ಬಲು ಧಿಟ್ಟ2 ಮನೋನಿಯಾಮಕ ಗುರುವೆ ದೈನ್ಯದಿಂದಲಿ ಕರೆವೆ ಜನಿಸಿ ಕಾಡುವ ರೋಗ ಕಳೆಯೊ ಬೇಗ ಅನುಪಮ ವಿಜಯವಿಠ್ಠಲನ ನಾಮಾಮೃತವ ಎನಗುಣಿಸುವುದೋ ಸಾಂಬು ಮರುತ ಪ್ರತಿಬಿಂಬ 3
--------------
ವಿಜಯದಾಸ
ರೂಪನ ಗುಡಿನಿ¯ಯಾ ವೇಂಟಕರಾಯಾ ರೂಪನ ಗುಡಿ ನಿಲಯಾ ವ್ಯಾಪಕ ಜಗತ್ರಯ ಕಾಪಾಡುವ ಭಾರತರ್ಕನು ದಾಸರ ಪ ದಂಡಿ ದಾನವಮರ್ದನ ಸಕಲಜಗ ಉ- ದ್ದಂಡ ರಕ್ಷಕ ಪಾವನಾ ಚಂಡ ಪ್ರ- ಚಂಡ ಮಾರ್ತಾಂಡ----ದ್ಭವ ಕುಂಡಲಿ ಶಯನ ಕೋದಂಡ ಪಾಣಿ ಹರಿ 1 ಗಂಗಾಜನಕ ದೇವಾ ಸಕಲಮೋಹ- ನಾಂಗನಾ ಪಡೆದನಾ ಶೃಂಗಾರದಲಿ ಕುಜ ರಂಗ ಮಂಟಪದಲಿ ಮಂಗ ಳಾಂಗಿಯ ಬಿಡದೆ ಮಡಗಿಸಿ ಇರುವಂಥಾ 2 ಮಂದರಾದ್ರಿಯ ಧರಿಸಿ ಸುಜನರಿಗೆ ಆ- ನಂದದಿ ಸುಧೆಯನುಣಿಸಿ ಅಂದು ಭಕ್ತರ ಆನಂದದಿ ಸಲುಹಿದ ತಂದೆ 'ಹೊನ್ನ ವಿಠ್ಠಲ’ ದಯಮಾಡಿ ಸಲಹಯ್ಯಾ 3
--------------
ಹೆನ್ನೆರಂಗದಾಸರು
ರೋಗವನು ಪರಿಹರಿಸೊ ಗುರು ರಾಘವೇಂದ್ರಾ ಪ ಕರಮುಗಿದು ಬಿನ್ನೈಪೆ ಧೀರ ಯೋಗೇಂದ್ರ ಪಾಲಾ ಅ.ಪ. ಅರಿಯದಾ ತರಳ ತನ್ನ ನಿಜಮತಿಯಿಂದ ದೂಷಿಸಲಿಲ್ಲ ಪರರ ಮಾತನು ಕೇಳಿ ದೂಷಿಸಿದನಲ್ಲದೇ 1 ಏನ ಪೇಳಲಿ ಗುರುವೆ ನಿನ್ನ ಸಮಕರುಣಿಗಳು ಇನ್ನುಂಟೆ ಜಗದೊಳು ಕೇಳಿದ ಕಾರಣದಿ ಬಂದು ಬಿನ್ನೈಸಿದೆ 2 ಬಾಲಕನು ಪರಿಪರಿಯಿಂದ ಪೀಡಿತನಾಗಿ ಬೆಂಡುಬೆಂಡಾದಾತಂದೆವರದಗೋಪಾಲವಿಠ್ಠಲ ಪ್ರೀಯಾ 3
--------------
ತಂದೆವರದಗೋಪಾಲವಿಠಲರು
ಲಂಕೆ ನಿರ್ಧಾಮ ಮಾಡಲು ಇಲ್ಲದೆ ಈ ಸೀತಾ ಲಲನೆ ಕ್ಷೇಮವು ತರಲು ಶಂಕೆಯಿಲ್ಲದ ಬಿರುದಾಂಕನ ಸೇವಕರು ಅಂಕರಲಿ ಪೇಳಿರಲಧಿಕ ಬಲವಂತರೆಲ್ಲಾ ಪ ಭೇದಿಸಿ ದೈತ್ಯರ ಹಿಡಿಯಲೊ ಆಪುರಿಸೇರಿ ಹೊಡೆದು ಮಾರಿಯ ಮಾಡಲು ದೃಢವು ಎನ್ನಯಮಾತುಬಿಡದೆ ಆರಾವಣನಾ ಹೊಡೆದು ಹೆಡ ಮುಡಿ ಕಟ್ಟಿ ----ಲ್ಲಿ ತರಲು ಇಲ್ಲದೆ 1 ವಾರಿಧಿ ಲಂಘಿಸಲು ಒಳಹೊಕ್ಕು ದೈತ್ಯ ವಂಶವೇ ಭೇದಿಸಲೆ ಸಾರಿ ಹೇಳುವೆ ಇನ್ನು ಸರಸಜ್ಞರೆಲ್ಲ ಕೇಳಿ ವಾರೆಲ್ಲ ಎನ್ನ ಮಾತು ಒಂದೇ ನಿಮಿಷದಿ ಹೇಳಿನ್ನೂ 2 ನಿಟ್ಟಾಗಿ ಒಳಹೋಗಲು ಹೋಗುತಲಿ ನಗರಸುಟ್ಟು ಬೂದಿಯ ಮಾಡಲು ಘಟ್ಟ್ಯಾಗಿ ಕೇಳಿರಿನ್ನು ಘನ 'ಹೊನ್ನವಿಠ್ಠಲ 'ನಾದ ಧಿಟ್ಟ ಶ್ರೀರಾಮರ ಭಂಟ ಹನುಮಂತನಾನು 3
--------------
ಹೆನ್ನೆರಂಗದಾಸರು
ಲಕ್ಷ್ಮೀ ಬಾರಮ್ಮ ಮುತ್ತೈದೆ ಬಾರಮ್ಮ ಪ ಲಕ್ಷ್ಮೀರಮಣನ ವಕ್ಷಸ್ಥಳದಲಿ ರಕ್ಷಿತಳಾದೆ ಸುಲಕ್ಷಣ ದೇವಿ 1 ಗೆಜ್ಜೆಯ ಕಾಲಿನ ನಾದಗಳಿಂದಲಿ ಸಜ್ಜನರಿಗೆ ನೀ ಅಭಯವ ಕೊಡುತಲಿ2 ಕಮಲನಾಭ ವಿಠ್ಠಲನೊಡಗೂಡುತ ಭ್ರಮರ ಕುಂತಳೆ ಸೌಭಾಗ್ಯದ ನಿಧಿಯೆ3
--------------
ನಿಡಗುರುಕಿ ಜೀವೂಬಾಯಿ
ಲಕ್ಷ್ಮೀ ಮನೋಹರ ವಿಠಲ | ರಕ್ಷಿಸೋ ಹರಿಯೇ ಪ ಲಕ್ಷಿಸದಲೇ ಇವಳ | ಲಕ್ಷಾಪರಾಧಾ ಅ.ಪ. ತೈಜಸ ಮೂರ್ತಿದರುಶನವ ತಾನಿತ್ತು | ಹರುಷ ಪಡೆಸಿಹನೋಹರಿದಾಸ್ಯಕೇ ಮಾರ್ಗ | ವರಸೂಚಿ ಎಂಬಂತೆಪರಮ ಸಿದ್ಧತೆ ತೋರ್ದೆ | ವರಸತೀ ಮಣಿಗೇ 1 ಕಾರುಣಿಕ ನೆಂ | ದರಿತು ಬೇಡುವೆ ಹರಿಯೆಸರುವ ಕಾರ್ಯದಿ ನಿನ್ನ | ಸ್ಮರಣೆ ಸುಖವೀಯೋ 2 ಎರಡು ಮೂರ್ಭೇಧಗಳ | ಅರಿವನೀಕೆಗೆ ಇತ್ತುಎರಡು ನಾಲ್ಕರ ವರ್ಗ | ದೂರಗೈಸೋಮರುತಾಂತರಾತ್ಮ ನಿ | ನ್ಹೊರತು ಕಾಯುವರಾರೊಎರಡೇಳು ಭುವನಗಳ | ಅರಸಿಯೂ ಕಾಣೇ 3 ವಿಶ್ವ ಕರ್ಮ | ಸತ್ಶ್ರವಣ ಕೊಡುತಾ 4 ಭೂವಿ ಬುಧ ಹೆದ್ದೈವ | ಮಾವಿನೋದಿಯೆ ಹರಿಯೆನೀವೊಲಿಯ ದಿನ್ನಿಲ್ಲ | ಮಾವ ಕಂಸಾರೀದೇವ ದೇವೇಶ ಗುರು | ಗೋವಿಂದ ವಿಠ್ಠಲ್ಲಭಾವದೊಳು ಮೈದೋರಿ | ಕಾವುದೀಕೆಯನೂ 5
--------------
ಗುರುಗೋವಿಂದವಿಠಲರು