ಒಟ್ಟು 24701 ಕಡೆಗಳಲ್ಲಿ , 138 ದಾಸರು , 9090 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಕ್ಕುವ ತುಪ್ಪಕೆ ಕೈಯಿಕ್ಕುವೆ ನಾನು ಪ ಚಕ್ರಧರ ಪರಮಾತ್ಮನೊಬ್ಬನಲ್ಲದಿಲ್ಲವೆಂದು ಅ.ಪ ಕರಿ ಮೊರೆಯಿಡಲು ಕಂಡುನೆರೆದ ಬೃಂದಾರಕರು ಅಂದು ಪೊರೆದರೆ ಬಂದುಕರದಲೊಪ್ಪುವ ಮುತ್ತಿಗೆ ಕನ್ನಡಿಯ ನೋಡಲೇಕೆಭರದಿ ಗಜೇಂದ್ರನ್ನ ಕಾಯ್ದ ಹರಿಯೆ ಪರದೈವವೆಂದು 1 ಮತಾಂತರದಲ್ಲಿ ಭಗವದ್ಗೀತೆಯನದ್ವೈತವೆಂದುವಾತಗುದ್ಧಿ ಕೈಗಳೆರಡು ನೋಯಿಸಲೇಕೆ‘ಏತತ್ಸರ್ವಾಣಿ ಭೂತಾನ್ಯೆಂ’ಬ ಶೃತ್ಯರ್ಥವ ತಿಳಿದುಜ್ಯೋತಿರ್ಮಯ ಕಿರೀಟಿ ಅಚ್ಯುತಾಂತರ್ಯಾಮಿಯೆಂದು 2 ತಾನೆ ಪರಬ್ರಹ್ಮನೆಂಬ ಮನುಷ್ಯಾಧಮನು ತಾನುಜ್ಞಾನಹೀನನಾಗೆ ಲೋಕದಾನವನೆಂದುಭಾನು ಕೋಟಿ ತೇಜೋತ್ತಮ ವರದ ಶ್ರೀಹರಿಯೆಂಬಜ್ಞಾನವೆ ಕೈವಲ್ಯದ ಸೋಪಾನವೆಂದು ಸಭೆಯಲ್ಲಿ 3 ತಪ್ಪಾದ ವಿಚಾರದಿಂದ ತತ್ತರವ ಪಡಲೇಕೆತಪ್ಪು ಶಾಸ್ತ್ರ ವೋದಿ ದೇಹ ದಂಡಿಸಲೇಕೆಕಲ್ಪ ಕಲ್ಪಾಂತರದಲ್ಲಿ ವಟಪತ್ರಶಯನನಾಗಿಮುಪ್ಪು ಮೊದಲಿಲ್ಲದ ಮುಕುಂದನಲ್ಲದಿಲ್ಲವೆಂದು 4 ಶಕ್ತಿ ಶೂನ್ಯನಿವನೆಂದು ಸಂಶಯವ ಪಡಲೇಕೆಕೃತ್ಯದಿಂದ ನೋಡೆ ಶ್ರೀಕೃಷ್ಣನೊಬ್ಬನೆಹತ್ತಾರು ಸಾಸಿರ ನೂರು ಗೋಪಸ್ತ್ರೀಯರನ್ನು ಆಳಿನಿತ್ಯ ಬ್ರಹ್ಮಚಾರಿಯೆನಿಪ ನಿಷ್ಕಳಂಕನೊಬ್ಬನೆಂದು 5
--------------
ವ್ಯಾಸರಾಯರು
ಉಗಾಭೋಗ ಅಡಿಗಾಧಾರವಿಲ್ಲ ಹಿಡಿವುದಕೆ ಕೊಂಬಿಲ್ಲಕಡೆ ಹಾಯಿಸುವರಿಲ್ಲ ಕಷ್ಟಪಟ್ಟೆನಲ್ಲಕಣ್ಣೀರು ತಪ್ಪಲಿಲ್ಲ ಕಾಯಸುಖಪಡಲಿಲ್ಲಉಣಹೋಗಿ ಬಾಯ ಮರೆತಂತಾಯಿತಲ್ಲಬಡತನವು ಬಿಡಲಿಲ್ಲ ಭಂಗಪಟ್ಟೆನಲ್ಲಗರುಡಸರ್ಪನ ಸ್ನೇಹದಂತಾಯಿತಲ್ಲಎನ್ನ ಮನದುಬ್ಬಸವ ಸ್ವಾಮಿ ಶ್ರೀಹರಿಯೆ ಬಲ್ಲಇನ್ನಾರಿಗುಸುರಲೋ ಶ್ರೀಹಯವದನರಾಯ
--------------
ವಾದಿರಾಜ
ಉಗಾಭೋಗ ಅನ್ನದಾ[ಸೆ]ಗೆ ಪರರ ಮ[ನೆ]ಯ ಬಾಗಿಲ ಕಾಯ್ದುನೇಕ ಬಗೆಯಿಂದ ನೊಂದೆನೋ ಹರಿಯೆಅನ್ಯಥಾ ಪೊರಮಟ್ಟ್ಟು ಪೋಗಲೀಸರು ಅವರುಮನ್ನಿಸಿ ಕೃಪೆಯಿಂದ ಕೂಡಿಕೊಂಡಿಹರೊಅನಾಥಬಂಧು ಶ್ರೀಹಯವದನ ನಿನ್ನಮ[ನೆ]ಯ ಕುನ್ನಿಗೆಂಜಲನಿಟ್ಟಂತೆ ಎನ್ನ ರಕ್ಷಿಸೊ
--------------
ವಾದಿರಾಜ
ಉಗಾಭೋಗ ಏಕೋನಾರಾಯಣಾಸೀತೆಂಬ ಶ್ರುತಿ ಪ್ರತಿಪಾದ್ಯನಾಗಿ ಮಾಕಮಲಾಸನ ಮೊದಲಾದವರಲ್ಲಿನಿಂತು ಸಾಕಿಸಲಹಿ ಸಂಹಾರ ಮಾಡುತ್ತ ಜೀವರಾಶಿಯೊಳಗೆನ್ನ ಸ್ವೀಕಾರ ಮಾಡದೆ ನೂಕಿ ಬಿಸಾಟು ಈಕುಂಭಿಣಿ ಮಧ್ಯದಲ್ಲಿ ಕಾಕುಮನುಜಾರಿಗಿಂತ ಕನಿಷ್ಠನ್ನಮಾಡಿ ಸಾಕಲಾರದೆ ಕೈಬಿಡುವಾರೇನೊ ನಾಕಜಜನಕ ಮುದ್ದುಮೋಹನವಿಠಲ ಲೌಕೀಕ ಮಾರ್ಗ ಬಿಡಿಸಿ ಹೃತ್ಕರ್ಣಿಕೆಯಲ್ಲಿ ಪೊಳೆಯೋ
--------------
ಮುದ್ದುಮೋಹನವಿಠಲದಾಸರು
ಉಗಾಭೋಗ ಚಿಕ್ಕ ಮಗುವಾದ ಪ್ರಹ್ಲಾದ ದೇವನನು ರಕ್ಕಸನು ಪಿಡಿದತಿ ಹಿಂಸೆಪಡಿಸುವದ ನೋಡಿ ಉಕ್ಕಿಬರುತಿಹ ಕೋಪದಿಂ ಕಿಡಿಕಿಡಿಯಾಗಿ ಉಕ್ಕಿನ ಕಂಬದಿಂ ಉರಿಯ ಕಾರುತ ಬಂದು ಪಕ್ಕಿದೇರನು ಹಿರಣ್ಯಕಶಿಪನ ಪಿಡಿದು ತಾ ಉರ ಬಗೆದು ಕರುಳ ಮಾಲೆಯ ಗಕ್ಕನೆ ಗಳಕಿಕ್ಕಿಕೊಂಡು ಆರ್ಭಟಿಸಿದಂದು ಲಕ್ಕುಮಿಯಾದಿಯಾಗಿ ಮುಕ್ಕೋಟಿ ದೇವತೆಗಳು ಬೆದರಿ ದಿಕ್ಕೆಟ್ಟು ಗಡ ಗಡ ನಡುಗುತಿರಲಾಗ ಅಕ್ಕರದ ಭಕುತ ಪ್ರಹ್ಲಾದ ಬರೆ ಬಿಗಿಯಪ್ಪಿ ತಕ್ಕೈಸಿ ಮುಂಡಾಡಿ ಪ್ರಸನ್ನನಾದನು ತನ್ನ ಭಕ್ತರೊಳಿನ್ನೆಷ್ಟು ಪ್ರೀತಿಯೋ ರಂಗೇಶವಿಠಲಗೆ
--------------
ರಂಗೇಶವಿಠಲದಾಸರು
ಉಗಾಭೋಗ ದಾಸ ಭಾಗ್ಯವೆ ಭಾಗ್ಯ ಹರಿಕೊಟ್ಟ ಸೌಭಾಗ್ಯ ದಾಸ ಭಾಗ್ಯಕ್ಕೆ ಜಗದಿ ಸರಿಮಿಗಿಲಿಲ್ಲವೆಂದು ದಾಸತ್ವವೇ ಮಧ್ವಮತ ಸಾರತತ್ವವೆಂದು ವ್ಯಾಸರಾಯರು ಜಗದಿ ದಾಸರ ನಿಲ್ಲಿಸಿದರು ದಾಸರಿಗಂಕಿತ ಇರಲೇಬೇಕೆನುತಲಿ ದಾಸ ಪುರಂದರವಿಠ್ಠಲನಿಗೆನಿಸಿದರು ಈ ಸುಮಾರ್ಗವ ತಂದೆ ಮುದ್ದುಮೋಹನ ಗುರು ಮಾಸದಂತೀಗ ಮತ್ತೆ ಬಿತ್ತಿ ಬೆಳೆಸಿದರು ದಾಸ ಜನಪ್ರಿಯ ಗೋಪಾಲಕೃಷ್ಣವಿಠ್ಠಲ ತಾ ಸುಮ್ಮನೀವ ತನ್ನ ನಿಜದಾಸರಿಗೆ ಮುಕ್ತಿ
--------------
ಅಂಬಾಬಾಯಿ
ಉಗಾಭೋಗ ಪರಮಪುರುಷ ಕೇಳು ಒರೆದ ಮಾತಿಗೆ ನಾನು ನೆರೆ ತಪ್ಪುವನಲ್ಲ ವಂಚನೆ ಲೇಶವಿಲ್ಲ ಉರುದೈವ ವ್ಯಾಪಾರಕ್ಕೇನ ಮಾಡಲಿ ನಾನು ಸರ್ವವು ನಿನಗೆಂದು ಒಪ್ಪಿಸಿಹೆನಲ್ಲ ನರಕವಾಸಕೆ ನಾನು ಅಂಜÀುವನಲ್ಲವು ಮರಣಪಾಶಕೆಯಿನ್ನು ಅಂಜುವ ನಾನಲ್ಲ ಸರ್ವಸ್ವ ಹೋದರೂ ಚಿಂತೆ ಎನಗಿಲ್ಲ ಥರಥರ ಅಂಜುವೆ ನೊಂದೆ ವಿಷಯಕ್ಕೆ ಅರಿಯಲು ಅನೃತಕ್ಕೆ ಅಂಜುವೆ ನಾನಿನ್ನು ಸಿರಿ ಪರಾಕ್ರಮ ಶೌರ್ಯ ಇವುಗಳಿಂದಲಿ ಕೂಡಿ ಗರುವಪಡುತ ನಾನು ಮದಾಂಧನಾಗಿದ್ದೆ ಉರು ಶಿಕ್ಷೆ ಎನಗಿತ್ತು ಉದ್ಧಾರ ಮಾಡಿದೆ ಕುರುಡಗೆ ನೇತ್ರವು ದೊರೆತಂತೆ ಆಯಿತು ಪರಮ ಭಕ್ತನು ಆತನೆ ಪ್ರಹ್ಲಾದನು ಪರಿ ಪೀಡೆಗೆ ಗುರಿಯಾಗಿದ್ದರು ನಿನ್ನ ಸ್ಮರಿಸಿ ತಾನುತ್ತಮ ಗತಿಯನ್ನು ಪಡೆದನು ಸಿರಿಮದ ಕಳೆದೆನ್ನುನುದ್ಧಾರ ಮಾಡಿದೆ ಪರಮಪುರುಷ ನಿನಗೆ ಪ್ರಣಾಮ ಮಾಡುವೆ ಕರಿಗಿರೀಶನೆ ಕರುಣಿ ಕಾಯಬೇಕೆನ್ನನು
--------------
ವರಾವಾಣಿರಾಮರಾಯದಾಸರು
ಉಗಾಭೋಗ ಪರಿಪರಿ ದೇಹ ಧರಿಸಿ ನರ ಜನ್ಮದಲಿ ಬಂದು ಕರಕರೆ ಪಡುತಲಿ ಇರುವ ಮಾನವರೊಳು ಅರಿತು ಸಾತ್ವಿಕರನು ಕರದು ಬುದ್ಧಿಯ ಪೇಳೆ ಹರಿಯ ಪಾದವ ತೋರ್ವ ಗುರುವು ಒಬ್ಬರು ಬೇಕು ಪರಮಪ್ರಿಯರು ಇವರು ಅರಿವರು ಸಾತ್ವಿಕರ ಕರದು ಉಪದೇಶವಿತ್ತು ಉದ್ಧಾರ ಮಾಡುವರು ಚರಿತೆಯ ವರ್ಣಿಸಲು ನರರಿಗೆ ಸಾಧ್ಯವಲ್ಲ ನರಹರಿಯೆ ಬಲ್ಲ ಉರಗಾಖ್ಯರ ಮಹಿಮೆ ವರಭಕ್ತರಾಗಿ ಹರಿಗೆ ಶರಣು ಹೊಕ್ಕವರನು ಕರುಣೆಯಿಂ ಸ್ವರೂಪವರಿತು ಉದ್ಧರಿಪರು ಪರತರ ಗೋಪಾಲಕೃಷ್ಣವಿಠ್ಠಲನ ಚರಣವ ತೋರುವರು ವರ ತಂದೆ ಮುದ್ದುಮೋಹನರು
--------------
ಅಂಬಾಬಾಯಿ
ಉಗಾಭೋಗ ಪ್ರಪಂಚದೊಳಗಿದ್ದು ಪ್ರಪಂಚವನೆ ಮೆದ್ದು ಪ್ರಪಂಚವನೆ ಗೆದ್ದು ಪ್ರಪಂಚವನೆ ಒದ್ದು ಪ್ರಪಂಚಾತೀತ ನಮ್ಮ ಗೋಪಾಲಕೃಷ್ಣವಿಠ್ಠಲನ ಪ್ರಪಂಚದೊಳು ಸುಖವ ಪೊಂದುವನೆ ಧನ್ಯ
--------------
ಅಂಬಾಬಾಯಿ
ಉಗಾಭೋಗ ಭಕ್ತಿದಾಯಕ ಕೇಳೊ ನಿನ್ನನು ಒಲಿಸಲು ಶಕ್ತಿ ಎನಗೆ ಇಲ್ಲ ಸರ್ವೇಶ್ವರ ಭಕ್ತಿಪಾಶದಿ ನಿನ್ನನುಕ್ತಿಯಿಂದಲಿ ಬಿಗಿವೆ ಮುಕ್ತಿಗೊಡೆಯ ಹೃದಯ ಮಧ್ಯದಿ ಬಂಧಿಸುವೆ ಶಕ್ತಿ ನಿನಗಿಲ್ಲ ಬಿಡಿಸಿಕೊಳ್ಳಲು ಇನ್ನು ಯುಕ್ತಾಯುಕ್ತ ತಿಳಿಸಿ ಉದ್ಧರಿಸಬೇಕಿನ್ನು ಶಕ್ತನಿಲ್ಲವೊ ನಿನಗೆ ಸರಿ ಜಗದೊಳು ಮಹ ಸಿರಿ ಗೋಪಾಲಕೃಷ್ಣವಿಠ್ಠಲಾ
--------------
ಅಂಬಾಬಾಯಿ
ಉಗಾಭೋಗ ಮಾಡಿದೆ ಯಾಕೆ ಫಲಗಳ ಮೆದ್ದೆಯಾಕೆ ಒಕ್ಕುಡಿತೆ ಪಾಲ ಕುಡಿದೆಯಾಕೆ ಅವಲ ಮೆದ್ದೆಯಾಕೆ ಕುರೂಪಿ ಕುಬುಜೆಗೆ ಮನಸೋತೆಯಾಕೆ ಅಖಿಲಾಂಡಕೋಟಿ ಬ್ರಹ್ಮಾಂಡನಾಯಕನಾದವ ಪಾಂಡವರೋಲೆಕಾರನಾದೆಯಾಕೆ ನಿನಗಾಗಿ ನೀನು ಬವಣೆಪಡಲಿಲ್ಲವೊ ದೇವ ನಿನ್ನ ಭಕುತರ ಪೊರೆಯಲೋಸುಗವೆಂಬುದ ನಾ ಬಲ್ಲೆ ನಿನ್ನ ದಯಕೆಣೆಯುಂಟೆ ಎನ್ನಪ್ಪ ರಂಗೇಶವಿಠಲ
--------------
ರಂಗೇಶವಿಠಲದಾಸರು
ಉಗಾಭೋಗ ವೈಕುಂಠಗಿರಿಯ ವಾಸ ಲೋಕೈಕನಾಥ ಶ್ರೀಶ ಏಕಮನಸು ನಿನ್ನ ಪಾದಧ್ಯಾನದಿ ಕೊಡು ನಾ ಕೇಳಲಿನ್ನೇನು ನಾಕ ಜನರ ನಾಥ ಬೇಕೊ ನಿನ್ನ ಭಕ್ತರ ಏಕಾಂತ ಸಹವಾಸ ನೀ ಕರುಣಿಸು ಇದನಾ- ನೇಕ ಜನ್ಮಗಳಲ್ಲಿ ಶ್ರೀಕಳತ್ರ ಶ್ರೀಶ ಗೋಪಾಲಕೃಷ್ಣವಿಠಲ
--------------
ಅಂಬಾಬಾಯಿ
ಉಗಾಭೋಗ ಹನುಮ ಭೀಮ ಮಧ್ವಮುನಿರಾಯ ಗುಣಧಾಮ ಹರಿಪಾದ ಸೇವೆಯೊಳಧಿಕ ಪ್ರೇಮ ಆಂಜನೇ ವರಪುತ್ರ ಅಕಳಂಕ ಚರಿತ್ರ ಸಂಜೀವಗಿರಿಧರನೆ ಸಾಧುವರನೆ ದುರಿತ ದೂರ ಸರಸ್ವತಿ-ಭಾರತಿ-ತುಳಸಿ
--------------
ವಾದಿರಾಜ
ಉಡಪಿಯ ಕೃಷ್ಣ ಯನ್ನ ನುಡಿ ಲಾಲಿಸೋ ಪ ಸಡಗರದಲಿ ನೀನು ಮಡದಿವೃಂದ ಬಿಟ್ಟು ಕಡಲಪಯಣದಿಂದಲಿ ವಂದು ಬಿಡದೆ ಭಕ್ತರಿಗೆಲ್ಲ ವಡೆಯನಾಗಿ ನೀನು ಷಡುರಸ ಅನ್ನವ ಕೊಡುತನಿಂತಿಹೆ 1 ಪ್ರಾಣಪತಿಯು ಅತಿ ಜಾಣನೆಂದೆನಿಶಿÉ ನೀ ಕಾಣಿಸುವಿ ನರಪ್ರಾಣಿಗೆ ಮಾಣವಕನೆ ನೀ ಜಾಣನೆಂದೆನುತಲಿ ಧ್ಯಾನಮಾಡಿ ಮೋದಿಸುವರು 2 ಧರೆಯೊಳು ರಜತಪೀಠ ಪುರದೊಳೂ ನೆಲೆಸಿಪ್ಪ ಸುರವೃಂದನುತ ಬೇಗ ಸಲಹೆನ್ನ ವರಮಧ್ವ ಮುನಿನುತ ಸರಸಿಜಭವ ವಂದ್ಯ ಶ್ರೀವತ್ಸಾಂಕಿತ ವೆಂಕಟಪತಿಯೇ 3
--------------
ಸಿರಿವತ್ಸಾಂಕಿತರು
ಉಡಿಯ ತುಂಬಿರೆ ಕಡಲೊಡೆಯನ ಮಡದಿಗ್ಹರುಷದಿ ಪ ಬಿಡಿಯ ಮುತ್ತು ಬಿಗಿದ ತಟ್ಟೆಯ ಪಿಡಿದು ಬೇಗದಿಅ.ಪ ಅಚ್ಚ ಜರಿಪೀತಾಂಬ್ರನುಟ್ಟ ಅಚ್ಚುತನರಸಿಗೆ ಹೆಚ್ಚಿನ ಆಭರಣ ಧರಿಸಿ ಮೆರೆವ ದೇವಿಗೆ ಅಚ್ಚುತನ ವಕ್ಷಸ್ಥಳದಿ ವಾಸಿಪ ಲಕುಮಿಗೆ ಅಚ್ಚಮುತ್ತು ಅರಿಶಿನಡಿಕೆ ಉತ್ತತ್ತಿ ಫಲಗಳು 1 ಕದಳಿ ಫಲಗಳಿಂ ಅಂಬುಜಾಕ್ಷನರಸಿಗೆ ದಾಳಿಂಬೆ ತೆಂಗು ಸಹಿತದಿ ಅಂಬುಧಿಯೊಳು ಜನಿಸಿದ ಮುಕುಂದನರಸಿಗೆ ಅಂಬುಜಾಕ್ಷಿಯರೆಲ್ಲ ನೆರೆದು ಸಂಭ್ರಮಪಡುತಲಿ2 ಮಾದಳದ ಫಲವು ಮಾವು ಪನೆÀ್ನರಿಲ ಫಲಗಳ ಮಾಧವನ ಮಡದಿಗೀಗ ಮಾನಿನಿಮಣಿಯರು ಕ್ರೋಧಿನಾಮ ಸಂವತ್ಸರದಿ ಸಾಧು ಜನಗಳ ಆದರಿಸಿ ಕಾವ ಕಮಲನಾಭ ವಿಠ್ಠಲನರಸಿಗೆ 3
--------------
ನಿಡಗುರುಕಿ ಜೀವೂಬಾಯಿ