ಒಟ್ಟು 1734 ಕಡೆಗಳಲ್ಲಿ , 106 ದಾಸರು , 1498 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಾಲಿ ಪಾವನ ಚರಣ ಲಾಲಿ ಅಘಹರಣಲಾಲಿ ವೆಂಕಟರಮಣ ಲಲಿತ ಕಲ್ಯಾಣ ಪ ಮಾಧವ ವಸುದೇವ ತನಯಸನಕಾದಿ ಮುನಿವಂದ್ಯ ಸಾಧುಜನಪ್ರಿಯಇನ ಕೋಟಿಶತತೇಜ ಮುನಿಕಲ್ಪ ಭೂಜಕನಕಾದ್ರಿನಿಲಯ ವೆಂಕಟರಾಯ ಜೀಯ 1 ಜಗದೇಕನಾಯಕ ಜಲಜದಳನೇತ್ರಖಗರಾಜವಾಹನ ಕಲ್ಯಾಣ ಚರಿತಸಗರತನಯಾರ್ಚಿತ ಸನಕಾದಿ ವಿನುತರಘುವಂಶ ಕುಲತಿಲಕ ರಮಣೀಯ ಗಾತ್ರ2 ನವನೀತ ಸತಿ ವಿನುತ ವಿಶ್ವಸಂಚಾರನಂದ ಗೋವಿಂದ ಮುಚುಕುಂದ ನುತಸಾರ 3 ಅಖಿಳ ಲೋಕೇಶಲಕ್ಷಣ ಪರಿಪೂರ್ಣ ಲಕ್ಷ್ಮೀ ಪ್ರಾಣೇಶ4 ನರಮೃಗಾಕಾರಿ ಹಿರಣ್ಯಕ ವೈರಿಕರಿರಾಜ ರಕ್ಷಕ ಕಾರುಣ್ಯಮೂರ್ತಿಹರಿ ಆದಿಕೇಶವ ಗುರು ಅಪ್ರಮೇಯಸಿರಿಧರ ಶೇಷಗಿರಿ ವರ ತಿಮ್ಮರಾಯ 5
--------------
ಕನಕದಾಸ
ಲಾಲಿ ರಘುಕುಲತಿಲಕ ಲಾವಣ್ಯ ಗುಣಧಾಮ ಪ. ವಿನುತ ಲಾಲಿ ಸುಜನರ ಪಾಲ ಅ.ಪ. ಅಸುರ ಕುಲ ಬಾಧಿಸಲು ವಸುದೇವ ಸುತ ರಕ್ಷ ಹಸನಾಗಿ ಪ್ರಾರ್ಥಿಸಲು ನಿನ್ನ ದೇವತೆಗಳಾಗ ವಸುಧೆ ಭಾರವ ಇಳುಹೆ ಶಿಶುವಾಗಿ ದಶರಥಗೆ ದಶ ದಿಗ್ವಲಯ ಬೆಳಗೆ ದಶಮ ಬಲರಾಮ 1 ಶಿವನ ಧನುವನು ಮುರಿಯೆ ಅವನಿಜೆಯು ಹಾರವನು ಜವದಿ ಹಾಕಲು ಪರಶುರಾಮನ ಗರ್ವ ತವಕದಲಿ ಮುರಿದಯೋಧ್ಯೆಯ ಪಾವನ ಮಾಡೆಂ ದವನಿ ಜಾಲವು ಕೂಗೆ ಸವಿಗಾನದಿಂದ 2 ಮಾತೆ ವಾಕ್ಯವ ಕೇಳಿ ಸೀತೆ ಸಹಿತಲೆ ವನಕೆ ಆತ ಲಕ್ಷ್ಮಣನೊಡನೆನೀತನೀ ತೆರಳೆ ದೂತ ರಾವಣನ ಹತವಾತಸುತ ದೂತ ಸಹ ಖ್ಯಾತಿಲಯೋಧ್ಯೆಗೆ ಬಂದ ಶ್ರೀನಾಥ ಶ್ರೀ ಶ್ರೀನಿವಾಸಾ ಲಾಲಿ 3
--------------
ಸರಸ್ವತಿ ಬಾಯಿ
ಲೇಸು ಲೇಸಾಯಿತು ನೋಡಿ ಭಾಸ್ಕರನ ಕೂಡಿ ಧ್ರುವ ಲೇಸು ಲೇಸಾಯಿತು ನೋಡಿ ಸ್ವಸುಖಗೂಡಿ ಆಶೆ ಪೂರಿಸಿದ ನೋಡಿ ಭಾಸಿ ನೀಡಿ 1 ಶಿರದಲಿ ಅಭಯನಿಟ್ಟ ಹರುಷವ ಕೊಟ್ಟ ಹರಿದು ಭವಜೀವ ಸುಟ್ಟ ಸ್ಮರಣಿಯೊಳಿಟ್ಟ 2 ಮಾಯದ ಮೊನೆ ಮುರಿದ ಭಯ ಹರಿದ ಸಾಯೋಜ್ಯಪದ ತೋರಿದ ದಯ ಬೀರಿದ 3 ಸದ್ವಾಕ್ಯವೆ ಬೋಧಿಸಿದ ಸದ್ಗುಣದ ಸದ್ಭಾವ ಭಕ್ತಿ ತೋರಿದ ಸದ್ಗೈಸಿದ 4 ಅನುಭವ ಸುಖದೋರಿದ ಸ್ವಾನುಭವದ ಮನವಿಗ್ಯೆನುಕೂಲಾದ ತಾನೆ ತಾನಾದ 5 ಸವಿಸುಖವನುಣಿಸಿದ ಸುವಿದ್ಯದ ರವಿ ಕೋಟಿ ಪ್ರಭೆಯ ತೋರಿದ ಅವಿನಾಶದ 6 ತರಳ ಮಹಿಪತಿ ಪ್ರಾಣ ಗುರುನಿಧಾನ ಹರುಷಗೈಸಿದ ಜೀವನ ಪರಮಪಾವನ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಲೋಕನೀತಿ ಮನವೇ ನೀ ಭಜಿಸು| ರಾಮನಾಮವನು ಘನ ಮುಕ್ತಿಸಾಧನೆ | ಪಾದನಾಮವನು ಪ ಅಂದದ ನಾಮ| ಚಂದದ ನಾಮ|| ವಂದಿಸೆ ಮನಕಾ| ನಂದದ ನಾಮ 1 ಕೋಮಲ ನಾಮ| ನಿರ್ಮಲ ನಾಮ| ಕಾಮಿತವೀವ ಸು| ಪ್ರೇಮದ ನಾಮ 2 ಪಾವನ ನಾಮ| ಶ್ರೀವರ ನಾಮ|| ಪವನಸಂಜಾತನು ಸ್ಮರಿಸುವ | ನಾಮ 3 ಅಗಣಿತ ಮಹಿಮ|| ಜಗದಭಿರಾಮನ | ಘನಗುಣ ನಾಮ 4 ಭಕ್ತಾದಿ ಜನರು| ಭಜಿಸುವ ನಾಮ| ಮುಕ್ತಿಸಾಧನವಾದ| ಭಕ್ತಿಯ ನಾಮ 5
--------------
ವೆಂಕಟ್‍ರಾವ್
ಲೋಕನೀತಿಯ ಹಾಡುಗಳು ಆರು ಹಿತರಾದಾರು ಈ ವಿಶ್ವದೊಳಗೆ ಕೃತಿ ಹೊರತು ಪ ಪಿತನಲ್ಲ ಸುತನಲ್ಲ ರತಿಯಲ್ಲ ಸುತೆಯಲ್ಲ ಅತಿ ಪ್ರೀತಿಯಿಂ ಪೊರೆದ ನಿಜಮಾತೆಯಲ್ಲಾ ಸುತನಪೇಕ್ಷಿಸಿ ಹೆದರಿ ಅಜಮಿಳನು ಕರೆಯಲ್ಕೆ ಪತಿತ ಪಾವನ ಹರಿಯ ನಾಮ ಹಿತವಾಯ್ತು 1 ಧನವಲ್ಲ ಸಿರಿಯಲ್ಲ ಬಹು ಬೆಳೆದ ಮೈಯಲ್ಲ ಹಣ ರಾಶಿ ಗಳಿಸುವ ದುರ್ಬುದ್ಧಿಯಲ್ಲ ಮನ ಮತ್ಸರಗಳಲ್ಲ ಕಾಮಕ್ರೋಧಗಳಲ್ಲ ತನುವಲ್ಲ ಡಂಬರದ ವೇದಾಂತವಲ್ಲ2 ತರಳನಾಗಿಹ ಧೃವಗೆ ತರುಣ ಪ್ರಲ್ಹಾದನಿಗೆ ಕರಿರಾಜ ಹನುಮಾದಿ ನಿಜ ಭಕ್ತರಿಂಗೇ ವರಧರ್ಮ ಪುತ್ರನಿಗೆ ಮಧ್ಯ ಪಾಂಡವನಿಗೇ ಪರಮ ಪತಿವ್ರತಾ ರಮಣಿ ದ್ರೌಪದಿಗೇ 3 ಧರಣಿಯನು ಹೊತ್ತಿರುವ ಆದಿಶೇಷಗೆ ಮತ್ತೆ ನಿರುತವೂ ಭಜಿಸಿದ ಪರಮ ದಾಸರಿಗೆ ಸಿರಿಯರಸ ಶ್ರೀಹರಿಯ ಭಜನೆಯೊಂದುಳಿದು 4 ಜನ್ಮಬಂಧವ ನೀಗಿ ಪರಮ ಪದವಿಯ ಕೊಡುವ ಸನ್ನುತವು ನಿಜ ಸೌಖ್ಯವನ್ನು ಕರುಣಿಸುವ ಪ್ರಾಣಿಯಲಿ ಆತ್ಮನಲಿ ಶ್ರಧ್ಧೆ ಹುಟ್ಟಿಸುವಂಥ ಚನ್ನಕೇಶವ ಸ್ವಾಮಿ ಭಕ್ತಿಯೊಂದುಳಿದು 5
--------------
ಕರ್ಕಿ ಕೇಶವದಾಸ
ಲೋಕಪಾಲನೆ ನಾಕವಂದ್ಯನೆ ಸಾಕುಬಿಡು ಚಲವಾ ಯಾಕೆ ಕೋಪ ದೀನ ನಾನೆಲೈ ಶ್ರೀಕರ ಸುಗುಣಾ ಪ ಕಾವರಿಲ್ಲವೋ ದೇವ ದೇವನೆ ಭಾವಜಾತಪಿತನೆ ಜೀವಕೋಟಿಯ ಜೀವರಾಶಿಯ ಪಾವನಾಂಗನೆ ಅ.ಪ ಪರರ ನಾನುಪರಿಚರಿಸಲಿಲ್ಲವೋ ದುರುಳಭಾವದಿ ಪರರ ಹಿಂಸೆಗೈದು ಎನ್ನ ಉದರ ಪೊರೆದೆನೋ 1 ವೇದಗಳ ನಾನೋದಿ ಅರಿಯೇ ಸಾಧು ಸಂಗಮ ಭೇದಗೈದೆ ಗರ್ವದಿಂದೆ ವೇದವೇದ್ಯನೆ 2 ಗಂಗಜನಕ ತುಂಗ ವಿಕ್ರಮ | ಮಂಗಳಾಂಗನೇ ಮಾಂಗಿರೀಶ ನಿನ್ನ ನಾಮಭೃಂಗವ ತೋರೈ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಂದನೆ ಮಾಡಿರೈ ವ್ಯಾಸ ಮುನೀಂದ್ರರ ಪಾಡಿರೈ ಪ ವಂದಿಸುವರ ಭವಬಂಧವ ಬಿಡಿಸಿ ಆ ನಂದವ ಕೊಡುವ ಕರ್ಮಂದಿವರೇಣ್ಯರ ಅ.ಪ ಸದ್ಗುಣ ಸಾಂದ್ರಾ ಚಂದ್ರಿಕಾದಿ ಪ್ರಬಂಧತ್ರಯ ನಿರ್ಮಿಸಿದಾ ಮತವರ್ಧಿಸಿದಾ ಸತಿ ಮೆಚ್ಚಿಸಿದಾ ಹಿಂದಕೆ ಹರಿಯನು ಸ್ತಂಭದಿ ತೋರಿದ ಕಂದ ಪ್ರಹ್ಲಾದರೆ ಬಂದಿಹರೆನ್ನುತ 1 ಕೃಷ್ಣರಾಯನಿಗೆ ದುಷ್ಟಯೋಗ ಪರಿಹರಿಸಿ ರಾಜ್ಯವಹಿಸಿ ಯ- ಥೇಷ್ಟ ದಾನಫಲಕೊಟ್ಟು ನೃಪನನುಗ್ರಹಿಸಿ ರಾಜ್ಯದೊಳಿರಿಸಿ ಶ್ರೇಷ್ಠವಾದ ಸಿಂಹಾಸನದಲಿ ಕುಳ್ಳಿರಿಸಿ ಆಜ್ಞೆಯ ತಿಳಿಸಿ ಎಷ್ಟು ಮಹಿಮರೆಂದರಿತು ಇವರ ಮನ ಮುಟ್ಟಿ ಭಜಿಪರಿಗ ಭೀಷ್ಟೆಯಗರಿವರ 2 ಸೂರ್ಯಯತಿ ಕುಲ- ವರ್ಯ ಗುರುಮಧ್ವಮ ತದಿಸದ್ವೈಷ್ಣವ ಕುಮುದಕೆ ಭಾರ್ಯಾ ಪಾವನ ಚರ್ಯ ಪರಮಮಹಿಮ ಬ್ರಹ್ಮಣ್ಯ- ತೀರ್ಥರಿಗೆ ತನಯಾ ಕವಿಜನಗೇಯಾ ಶರಣರ ಪೊರಿಯುವ ಶಿರಿಕಾರ್ಪರನರಹರಿಯ ನೊಲಿಸಿರುವ ಪರಮ ಮಹಾತ್ಮರ3
--------------
ಕಾರ್ಪರ ನರಹರಿದಾಸರು
ವಂದನೆಯ ಮಾಡುವೆ ಶ್ರೀಗುರುವಿಗೆ- ವಂದನೆಯ ಮಾಡುವೆÀ ಪ ವಂದನೆ ಮಾಡುವೆನಿಂದು ಯದುಶೈಲದೋಳ್ ಚಂದದೊಳಿರುತಿಹ ತಂದೆ ನಾರಾಯಣಗೆ ಅ.ಪ ಹರುಷದಿಂದಲಿ ಇನ್ನು ಹರಸಿ ಸಜ್ಜನರಿಗೆ ವರಗಳ ಕೊಡುತಿಹ ವರಲಕ್ಷ್ಮಿ ತಾಯಿಗೆ 1 ಹಿರಿದಾದ ದೈತ್ಯನ ಸೀಳಿ ಸಂತೋಷದಿ ಮೊರೆಹೊಕ್ಕ ಕಂದನ ಪೊರೆದ ನರಸಿಂಹಗೆ 2 ಪಾವನತರಮಾದ ದೇವಸಮೂಹವ ಕಾವ ಕೃಪಾನಿಧಿ ಕಲ್ಯಾಣಮ್ಮಗೆ 3 ವಿಸ್ಫುರಿತದಲ್ಲಿರ್ಪ ವೈರ್ಮುಡಿ ತಿರುಮಣ್ಣು ಸರ್ಪಶಯನಗರ್ಪಿಸಿದಂತ ಗರುಡಗೆ 4 ಶ್ರೀಲೋಲನಡಿಗಳ ಲೀಲಾಮೃತಗಳ ಶೀಲರಾಗಿ ಕುಡಿದ ಶ್ರೇಷ್ಠ ಆಳ್ವಾರ್ರಿಗೆ 5 ವರದವಿಠಲನ ಒಲಿದು ತಾ ಬಂದಿನ್ನು ಗಿರಿಯೊಳು ನೆಲೆಸಿದ ವರ ಗುರುಪೀಠಕೆ 6 ಪಂಕಜಾಕ್ಷನಪಾದಪಂಕಜ ನಂಬಿಹ ವೆಂಕಟಪುರದೊಳಗಿರುವ ವೈಷ್ಣವರಿಗೆ 7 ವಿಷ್ಣುವಿನಂಶದಿ ಪುಟ್ಟಿ ಸಂತೋಷದಿ ಸೃಷ್ಟಿಯನಾಳ್ವ ಶ್ರೀ ಕೃಷ್ಣಭೂಪಾಲಗೆ8 ಮರೆಯದೆ ಭಕ್ತರ ಕರುಣದಿಂದಲಿ ಕಾಯ್ವ ವರಮಹದೇವನ ಪುರದಶ್ರೀರಂಗಗೆ 9
--------------
ರಂಗದಾಸರು
ವಂದಿಸುವೆನೆಲೆ ತಾಯೆ ವಂದಿತಾಮರೆಯೆ ಪ. ಶ್ರೀಕಲಶಾಬ್ಧಿಕನ್ಯೆ ಸುರಕುಲಮಾನ್ಯೆ ಶ್ರೀಕರ ಗುಣಪೂರ್ಣೆ ಶೋಕಾಪಹರಣೆ ಲೋಕನಾಯಕೆ ಘನ್ನೆ ಪಾಕಶಾಸನಸುತೆ ಪವನಜಸೇವಿತೆ ಸಾಕೇತನಿಲಯೆ ಸರಾಗದಿ ರಕ್ಷಿಸು 1 ಆನತನುತ ಗೀರ್ವಾಣಿ ಅಂಬುಜಪಾಣಿ ಮಾನಿನೀಮಣಿ ಕಲ್ಯಾಣಿ ಭಯವಾರಿಣಿ ಭಾವಜಾತ ಜನನೀ ಭಾಗವತಾರ್ಚಿತೆ ಭಕ್ತಾಭಯಪ್ರದಾತೆ ಬಾಗುತೆ ಶಿರ ನಿನಗೇಗಳುಂ ಮನವಾರೆ 2 ಅರಿಯೆನು ನಿನಗೆಣೆಯಾರ ಕಾಣೆನು ಹಿತರ ಚರಣವ ನಂಬಿದೆ ಮನವಾರ ಪಿಡಿಯೆನ್ನ ಕರವ ಕರುಣದಿ ನೋಡೆನ್ನಿರವ ಪರಮಪಾವನ ಶೇಷಗಿರೀಶನ ಕರುಣಾರೂಪಿಣಿ ಜಗತ್ಕಾರಿಣಿ3
--------------
ನಂಜನಗೂಡು ತಿರುಮಲಾಂಬಾ
ವಂದೇ ವಂದೇ ವಂದೇ ನಾರಾಯಣ ಗುರುದೇವಾ ವಂದೇ ವಂದೇ ವಂದೇ ಪರಿಪೂರ್ಣ ಬ್ರಹ್ಮರೂಪ ಪರಮಾತ್ಮ ಜ್ಞಾನದೀಪ ತಾಪ ಪರಿಹರಿಪ ಜ್ಞಾನಿ ಭೂಪ ಶಿರವಿಡುವೆ ಚರಣಯುಗದೀ ಗುರುದೇವ ಎನ್ನಮನದಿ ಪರತತ್ವ ತಿಳಿವ ತೆರದಿ ಕರುಣಿಪುದು ನೀನೇ ಮುದದಿ ಜಾಗರಣ ಕನಸು ನಿದ್ರಾ ಆಗುಗಳನರಿಯುತಿರ್ದಾ ಈ ಗತಿಗಳೆಲ್ಲ ಮೀರ್ದಾ ಆ ಘನವೆ ನಿರ್ವಿಕಲ್ಪ ಅದೇ ನೀನು ಎಂದು ಪೇಳ್ದೀ ಇದು ಎಲ್ಲ ಮಿಥ್ಯವೆಂದಿ ಇದೊ ಮರಣಭಯವ ಕಳೆದಿ ನಿಜಬೋಧವಚನ ಬಲದಿ ಮರೆದಿರ್ದ ತತ್ವವಿದನು ಪರತತ್ವ ಶೋಧಕರನು ಬೊಧಿಸುತ ನೀ ನಿಜವನು ತೋರಿಸುತ ಕಾಯುವವನು ವರಜ್ಞಾನ ಜಗದಲೆಲ್ಲಾ ಮರೆದಾಡಿ ತಮವನೆಲ್ಲಾ ಪರಿಹರಿಸಲೆಂದು ನೀನೇ ಗುರುಶಂಕರನಿಗೆ ಪೇಳ್ದೀ ವಂದೇ ಶಂಕರಾ ಗುರುದೇವಾ ವಂದೇ ಶಂಕರ ಗುರುದೇವಾ ಪಾವನಚರಣಾ ತೋರೈ ಕರುಣಾ ಜ್ಞಾನಾಂಬುಧಿ ಪೂರ್ಣಾ ವಂದೇ
--------------
ಶಂಕರಭಟ್ಟ ಅಗ್ನಿಹೋತ್ರಿ
ವಂದೇ ಶಂಕರ ಗುರುದೇವಾ ವಂದೇ ಶಂಕರ ಗುರುದೇವಾ ಪಾವನ ಚರಣಾ ತೋರೈ ಕರುಣಾ ಜ್ಞಾನಾಂಬುಧಿ ಪೂರ್ಣಾ ವಂದೇ ನಿರಂಜನ ಸತ್ಯ ಸ್ವರೂಪಾ ಪ್ರತ್ಯಗಾತ್ಮನೇ ಆನಂದರೂಪಾ ನೀಡೈ ಘನಜ್ಞಾನಾ ಬೋಧಾ ಬೇಡುವೆ ನಿನ್ನೊಳ್ ಗುರುವೇ ವಂದೇ ಆತ್ಮಸ್ವರೂಪವ ಬೋಧಿಸಿ ಎನ್ನ ಮುಕ್ತ ಮಾಡುನೀ ಶ್ರೀ ಗುರುದೇವಾ ನಾರಾಯಣಪದದಾ ಜ್ಞಾನಾ ಸಾರಿದ ಶಂಕರ ಗುರುವೇ ವಂದೇ
--------------
ಶಂಕರಭಟ್ಟ ಅಗ್ನಿಹೋತ್ರಿ
ವಂದೇ ಶ್ರೀ ಗೌರಿನಂದನ ಸುರನರ ವೃಂದವಂದಿತಚರಣ ಗಜಾನನ ಪ. ಶಂಕರೋಲ್ಲಾಸ ಪಾಶಾಂಕುಶಧರ ಕರ ಪಂಕಜ ಸುವಿರಾಜ ರವಿತೇಜ 1 ಜಂಭಾರಿಸಂನುತ ಜಾಹ್ನವೀಧರಸುತ ಲಂಬೋದರ ಸುಂದರ ಕೃಪಾಕರ 2 ಸುಕ್ಷೇಮಧಾಮ ಶ್ರೀ ಲಕ್ಷ್ಮೀನಾರಾಯಣನ ಪಕ್ಷೈಕಪಾವನ ಸುಧೀಷಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ವಧು ವರರ ಯದ್ಧರಿಸೊ ಉದಧಿಶಯನ ಒದಗಿಸುತಲಾಯುರಾರೋಗ್ಯ ಸುಜ್ಞಾನ ಪ ಯತಿಪೂಜೆ ಕ್ಷಿತಿದೇವ ತತಿಸೇವೆ ತಿಥಿತ್ರಯದ ವೃತನೇಮ ಮೊದಲಾದ ಸತ್ಕಕರ್ಮವ ಮತಿಯಿಂದ ಗೈಯುತಲಿ ಪತಿತಪಾವನ ನಿನ್ನ ಕಥೆಗಳನು ಕೇಳ್ವದಕೆÉ ರತಿಯಿತ್ತು ಪ್ರತಿದಿನದಿ 1 ಹಿರಿಯರಲಿ ವಿಶ್ವಾಸ ಗುರುಮುಖದಿ ಉಪದೇಶ ಮರುತ ಸಚ್ಛ್ಯಾಸ್ತ್ರದಔಯಾಸವ ಸ್ಥಿರವಾದ ಮನವಿತ್ತು ಮರಿಯದಲೆ ಮಾರಮಣ 2 ಸಾಮಗಾನವಿಲೋಲ ಶಾಮಸುಂದರವಿಠಲ ಸ್ವಾಮಿಮನ್ನಿಸಿ ಎನ್ನ ಎನ್ನ ವಿಜ್ಞಾಪನೆ ಯಾಮಯಾಮಕೆ ನಾಮಸುಧೆಯನು ಸವಿಪ ಈ ಮಹಾಸುಖ ಗರೆದು ಪ್ರೇಮದಿಲಿ ಕೈಪಿಡಿದು 3
--------------
ಶಾಮಸುಂದರ ವಿಠಲ
ವನಜನಾಭ ನೀನೆ ದಯಾನಿಧಿ ಮೂರು ಜಗದೊಳಗೆ ಮಣಿದುಬೇಡ್ವೆ ಕನಿಕರದೆನ್ನ ರಿಣಮುಕ್ತನೆನಿಸು ಬೇಗ ಪ ಭಾವಿಗಳ ಭಾವಪೂರ್ಣ ದೇವ ದೇವ ವಿಮಲಮಹಿಮ ಸಾವು ಹುಟ್ಟುಯಿಲ್ಲದ ಘನ ಸ್ವಾಮಿಯೆನ್ನ ಮಾಡೋ ಪಾವನ 1 ವೇದವೇದ್ಯನೀತ ಅ ನಾದಿಕಾಲದ್ವಸ್ತುವೇ ನೀ ಸಾಧುಸುಜನೈಕ್ಯನೆನ್ನ ಮೋದದಿಂದ ಸಲಹೋ ಮುದ 2 ಭೂಮಿಗಧಿಕ ನಿಸ್ಸೀಮ ಸುಖಧಾಮ ಭೀಮ ಗಂಭೀರ ಎನ್ನ ಕಾಮಿತಾರ್ಥ ಕರುಣೆಗೈದು ಪ್ರೇಮದಾಳೆನ್ನೊಡೆಯ ಶ್ರೀರಾಮ3
--------------
ರಾಮದಾಸರು
ವನಭೋಜನ ಊರ್ವಶಿ:ಇದೀಗ ಮನವು ಇಂದಿರಾಕ್ಷಿ ಇದೀಗ ಮನವು ಪ. ಮಧುಸೂದನ ತನ್ನ ಸದನದಿಂದಲಿ ಒಮ್ಮೆ ಒದಗಿ ಪಯಣಗೈದು ಪದುಳದಿ ಮಂಡಿಪ 1 ವಾಸುದೇವ ತಂಪಾಶುಗದಿಂದಾ- ಯಾಸವ ಬಿಡಿಸಿ ಸಂತೋಷಪಡಿಸುವಂತಿದೀಗ 2 ಭಾಗವತರು ಅನುರಾಗದಿ ಕೂಡಿ ಸ- ರಾಗದಿ ಯೋಗಾರೋಗಣೆಮಾಡುವದೀಗ 3 ಸತ್ಪಾತ್ರ ವಿಯೋಗ ಸು- ಕ್ಷೇತ್ರ ಸುಧಾಮಯ ಕೀರ್ತಿಯೆಂದಿನಿಸುವ 4 ತರುಗುಲ್ಮಾವಳಿ ಸುರಮುನಿಗಳು ಕಾಣೆ ಉರು ಪಾಷಾಣವೆಲ್ಲವು ಸಚ್ಚರಿತವು 5 ರಂಭೆ : ಪೋಗಿ ಬರುವ ವನಕ್ಕಾಗಿ ನಾಗವೇಣಿ ಲೇಸಾಗಿ ಬೇಗ ನಾವು ಪ. ಭಾಗವತಾದಿ ಸಮಾಗಮವಾದರೆ ಭಾಗ್ಯವಂತೆಯರ್ನಾವಾಗಿ 1 ಹರಬ್ರಹ್ಮಾದಿ ನಿರ್ಜರರಿಗಸಾಧ್ಯವು ಹರಿಪ್ರಸಾದವೆಂದು ಸಾಗಿ ಬೇಗ 2 ನಾರಿ ನಿನ್ನ ಉಪಕಾರ ಮರೆಯೆ ನಾ ಭೂರಿ ಪುಣ್ಯವಶಳಾಗಿ 3 ಕಾಣದಿರಲು ಯೆನ್ನ ಪ್ರಾಣ ನಿಲ್ಲದು ಕಾಣೆ ಶ್ರೀನಿವಾಸನ ಭೇಟಿಗಾಗಿ 4 ಊರ್ವಶಿ :ಅಭಿಷೇಕವನು ಗೈದರಾಗ ಮನಸಿಗನುರಾಗ ಪ. ವಿಭುಧೋತ್ತಮರೆಲ್ಲರು ಕೂಡುತ್ತ ಶುಭ ಋಗ್ವೇದೋಕ್ತದಿ ನಲಿಯುತ್ತ ಅ.ಪ. ಕ್ಷೀರಾರ್ಣವದೊಳಗಾಳಿದವಂಗೆ ಕ್ಷೀರಾಬ್ಧಿಯ ದುಹಿತೆಯ ಗಂಡನಿಗೆ ನೀರಜನಾಭನ ನಿಖಿಲ ಚರಾಚರ ಪೂರಿತ ಕಲ್ಮಷದೊರಗೆ ಕ್ಷೀರದ1 ಚದುರತನದಿ ಗೊಲ್ಲರೊಳಾಡಿದಗೆ ದಧಿಪಾಲ್ ಬೆಣ್ಣೆಯ ಸವಿದುಂಡವಗೆ ಮದನಜನಕ ಮಹಿಮಾಂಬುಧಿ ಕರುಣಾ- ಸ್ಪದ ಸತ್ಯಾತ್ಮ ಸನಾಥಗೆ ದಧಿಯ 2 ಶ್ರುತಿಸ್ಮøತಿತತಿನುತ ರತಿಪತಿಪಿತಗೆ ಅತುಲಿತಗುಣ ಸೂನೃತಭಾಷಿತಗೆ ದಿತಿಸುತಹತ ಶೋಭಿತ ಮೂರುತಿ ಶಾ- ಶ್ವತವಾಶ್ರಿತ ವಾಂಛಿತಗೆ ಘೃತವ 3 ಮಧುಸೂದನ ಮಂದರಗಿರಿಧರೆಗೆ ಮೃದುವಾಕ್ಯಗೆ ಮಂಗಲಾಂಗನಿಗೆ ಪದಮಳಾಕ್ಷ ಪರಾತ್ಪರವಸ್ತು ನೀ- ರದ ಶ್ಯಾಮಲ ನಿತ್ಯಾತ್ಮಗೆ ಮಧುವಿನ 4 ಕರುಣಾಕರ ಕಮಲಜತಾತನಿಗೆ ದುರುಳ ಸುಬಾಹು ತಾಟಕಿ ಮರ್ದನಗೆ ನರಕಾಂತಕ ನಾರಾಯಣ ಸಕಲಾ- ಮರಪೂಜಿತಗೆ ಸರ್ವಾತ್ಮಗೆ ಸಕ್ಕರೆ 5 ಎಳೆತುಳಸೀವನಮಾಲಾಧರಗೆ ಫಲದಾಯಕ ಪರಬ್ರಹ್ಮರೂಪನಿಗೆ ಕಲುಷರಹಿತ ನಿರ್ಮಲಚಾರಿತ್ರ್ಯ ನಿ- ಶ್ಚಲಿತಾನಂದ ನಿತ್ಯನಿಗಳ ನೀರಿನ 6 ಕನಕಾಂಬರಧರ ಶೋಭತನಿಂಗೆ ಮನಕಾನಂದವ ಪಡಿಸುವನಿಂಗೆ ಚಿನಮಯ ಪರಿಪೂರ್ಣ ವಿಶ್ವಂಭರ ಜನಕಜಾ ವರನಿಗೆ ಕನಕಾನನೀಕದ 7 * * * ವೆಂಕಟೇಶ ಕಣ್ಣ ಮುಂದೆ ನಿಂತಿದಂತಿದೆ ಪ. ಶಿರದೊಳು ರತ್ನಕಿರೀಟದ ಝಳಕ ಮೆರೆವ ಲಲಾಟದಿ ಕಸ್ತೂರಿತಿಲಕ ವರ ಕರ್ಣಕುಂಡಲಗಳ ಮಯಕನಕ ಚೆಲುವ ಚರಾಚರಭರಿತಜ ಜನಕ1 ಕಂಬುಕಂಠದಿ ಕೌಸ್ತುಭವನಮಾಲ ಇಂಬಾಗಿಹ ಭೂಷಣ ಶುಭಲೋಲ ಸಂಭ್ರಮಿಸುವ ಮೋಹನ ಗುಣಶೀಲ ಅಂಬುಜನಾಭಾಶ್ರಿತಜನಪಾಲ 2 ಶಂಖಸುದರ್ಶನಗದಾಪದ್ಮ ಧಾರಿ ಕಂಕಣವೇಣುವಡ್ಯಾಣವಿಹಾರಿ ಬಿಂಕದ ಬಿರುದಾಂಕಿತ ಕಂಸಾರಿ ಶಂಕೆಯಿಲ್ಲದ ಭೂಷಣಾಲಂಕಾರಿ 3 ಎಡಬಲದಲಿ ಮಡದಿಯರ ವಿಲಾಸ ಕಡುಬೆಡಗಿನ ಪೀತಾಂಬರಭೂಷ ಕಡಗ ಕಾಲಗೆಜ್ಜೆ ಅಂದುಗೆಯಿಟ್ಟು ತೋಷ ಒಡೆಯ ಶ್ರೀನಾರಾಯಣ ಸರ್ವೇಶ 4 ಈ ರೀತಿಯಲಿ ಶೃಂಗಾರನಾಗುತ್ತ ಭೂರಿಭಕ್ತರ ಕಣ್ಮನಕೆ ತೋರುತ್ತ ನಾರದಾದಿ ಮುನಿವರ ಗೋಚರದ ಚಾರುಚರಣವನು ತೋರಿಸಿ ಪೊರೆದ 5 * * * ಆರೋಗಣೆಯ ಗೈದನು ಶ್ರೀರಂಗ ಸಾರಸವಾದ ಸಮಸ್ತ ವಸ್ತುಗಳ ಪ. ಧೂಪದೀಪನೈವೇದ್ಯವಿಧಾನ ಶ್ರೀಪರಮಾತ್ಮ ಮಂಗಲಗುಣಪೂರ್ಣ 1 ಸುರತರುವಿನ ಸೌಭಾಗ್ಯದ ತೆರನ ಮರಕತಮಯ ಹರಿವಾಣದೊಳಿದನ 2 ಭಕುತರ ಸೌಖ್ಯವಿನ್ನೇನೆಂಬುವೆನು ಶಕುತ ಶ್ರೀಮಾಧವ ನಿರತ ತೋರುವನು 3 * * * ಆರತಿ ಶ್ರೀನಿವಾಸಂ ಶ್ರೀವೆಂಕಟೇಶಂ ಗಾರತಿ ಶ್ರೀನಿವಾಸಂ ಪ. ಮಂಗಲಾಂಗ ನರಸಿಂಗ ಮನೋಹರ ರಂಗರಾಯ ಶ್ರೀಗಂಗಾಜನಕಗೆ 1 ಮಾಧವ ಮಧುಹರ ಮೋದಭರಿತ ಜಗ- ದಾಧಾರ ವೇಣುನಾದವಿನೋದಗೆ 2 ನಿತ್ಯನಿರಂಜನ ಸತ್ಯಸ್ವರೂಪಗೆ ಪ್ರತ್ಯಗಾತ್ಮಪರತತ್ತ್ವಸ್ವರೂಪಗೆ3 ಭೋಜನವ ಗೈದರು ಪ. ಮೂಜಗತ್ಪತಿಯ ಪ್ರಸಾದಪ್ರತಾಪದಿ ನೈಜವಾಗಿಹ ಪಾಪ ಮಾಜಿ ಹೋಗಾಡುತ್ತ1 ಜಿಹ್ವೆಗೆ ರುಚಿಕರವಪ್ಪುದ ಮಿಗಿಲಾದ ಶಾಕಪಾಕಗಳನ್ನು ಪಾತ್ರದಿ ತೆಗೆದು ಸಂತೋಷ ಬೆಡಗುಗಳ ತೋರುತ್ತ 2 ಹಪ್ಪಳ ಸಂಡಿಗೆಯು ತಪ್ಪು ಒಗರ ಶಾಲ್ಯನ್ನಗಳೆಲ್ಲವ ತಪ್ಪದೆ ಸವಿದು ಬಾಯ್ ಚಪ್ಪರಿಸಿದರಾಗ 3 ಹೋಳಿಗೆಯು ಕಾಯದ ಜಡಗಳು ಮಾಯಕವಾದವು ಆಯುರಾರೋಗ್ಯ ಸುಶ್ರೇಯ ಕಾರಣವಾಯ್ತು 4 ಸುರರು ಉರಗ ಮಾನವರೆಲ್ಲರೂ ದೊರೆಯ ಪ್ರಸಾದವು ದೊರಕಿತು ಎನುತ ವಿ- ಸ್ತರವಾದ ತೋಷದಿ ಭರದಿಂದೊದಗುತಲಿ 5 ಭೋಗವಿನ್ನಂತೆಯಿಲ್ಲಿ ರೋಗ ದುರಿತವೆಲ್ಲ ನೀಗಿತು ಎನುತನು- ರಾಗದಿ ಸವಿದುಂಡು ತೇಗಿದರೆಲ್ಲರು 6 ಪುಣ್ಯ-ಫಲದಿಂದ ದೊರಕಿತಲ್ಲೇ ನಲವಿಂದಾನತರು ಕೈ ತೊಳೆದ ನೀರಿನೊಳಿದ್ದ ಜಲಜಂತು ಸಹವು ನಿರ್ಮಲಿನವಾದವು ಕಾಣೆ 7 ಪಾವನವಾದರು ಹಿಂಡು ಉದ್ದಂಡ ಮೃಗಗಳೆಲ್ಲ &ಟಿb
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ