ಒಟ್ಟು 1244 ಕಡೆಗಳಲ್ಲಿ , 101 ದಾಸರು , 1055 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದೆಯಾ ಬಾರೊ ಗೋಪಾಲ ಕೃಷ್ಣಬಂದೆಯಾ ಬಾರೊ ಪ.ಇಲ್ಲಿಯ ಗೊಲ್ಲತೇರೆಲ್ಲರುಬಲ್ಲಿದಕಾಮುಕ ನಲ್ಲೇರುಫುಲ್ಲಲೋಚನ ನಿನ್ನ ಮುದ್ದಿನ ಮೊಗವಮೆಲ್ಲನೆ ಚುಂಬಿಸಿ ಬಿಡರೊ ಮಗುವೆ 1ಚಿಕ್ಕವನೆಂದಾಡಿಸಿ ನಿನ್ನಚಕ್ಕಂದಿಲಿ ಬಾಡಿಸಿ ಚಿನ್ನಸಕ್ಕರೆ ಮಾತಲಿ ಬಿಗಿದಪ್ಪುವರೊಕಕ್ಕಸಕುಚದಂಗನೆ ಗೋಪಿಯರೊ 2ಇರುಳ್ಹಗಲೆನ್ನ ಕಂದನ್ನಮರುಳಿಕ್ಕುವರೆಂದಂಜುವೆ ನಾತರಳನ ಕಾಲಿಂಗೆರಗುವೆ ನೋಡೋತರಳೇರೊಡಗೂಡಾಡಲಿ ಬೇಡೊ 3ನಿಲ್ಲದೆ ನಿನ್ನ ಬರಮಾಡುವರೊಚೆಲ್ವಹ ಹಣ್ಣುಗಳ ನೀಡುವರೊಒಳ್ಳೆ ನಾರೇರನುದಿನ ನಿನ್ನಬುಲ್ಲಿ ಬೆಲ್ಲಕೆ ಮನಸೋತಿಹರಣ್ಣ 4ವಿಗಡೇರ ದೃಷ್ಟ್ಯಾಗಲೆತಗಲಿದವೈ ನಿನ್ನ ಮೈಯಲಿಅಗಲದಿರೆನ್ನ ಪ್ರಸನ್ನವೆಂಕಟನಗಪತಿ ಬಡವರ ಧನವೆ ಕೃಷ್ಣ 5
--------------
ಪ್ರಸನ್ನವೆಂಕಟದಾಸರು
ಬರಗಾಲವಲ್ಲವಿದು ಬಳಲದಿರಿಧ್ಯಾನಪ್ರಿಯವು ಆಗೆ ಧನ ಬ್ಯಾರೆ ಪ್ರಿಯನಲ್ಲಅಗ್ಗವಾದಾಗಲಿ ಮುಗ್ಗಿ ಬೆಳುವರೆಮಾರುವಧಾರಣೆಯು ಏರಿ ಇಳುವುದಕೆವರಣ ಆಶ್ರಮಗಳ ಮರಿಯಾದಿಗಳು ತಪ್ಪಿಜ್ಞಾನ ಬರಗಾಲವು ಬಿದ್ದದೆ ಜನಕೆಲ್ಲಪಾಲನೆಯ ಕಾಲವಿದು ಸಂಹಾರ ಕಾಲಲ್ಲಿಹರಿಯ ಮರದಿಪ್ಪುದೆ ಬರಗಾಲ ಬರಗಾಲ
--------------
ಗೋಪಾಲದಾಸರು
ಬರಿಯ ಮಾತಲಿಲ್ಲ ಶ್ರೀಹರಿಯ ಪ್ರೀತಿರಣ್ಣ ಮಧ್ವಾಚಾರ್ಯರುಪದೇಶವೆ ಮುಕ್ತಿಪುರದೊಳು ಖ್ಯಾತಿರಣ್ಣ ಪ.ರಂಗನ ಪ್ರತಿಮೆಯನು ಬಿಡದೆ ಬಹಿರಂಗದಿ ಪೂಜೆಯ ಮಾಡಿಕಂಗಳುತುಂಬಲು ಮೆಲ್ಲನೆ ಅಂತರಂಗದಿ ಪೀಠದಿ ನೋಡಿಹಿಂಗದೆ ಗುರುಶಿಕ್ಷಾಕ್ರಮದಲಿ ಧ್ಯಾನಂಗತನಾಗ್ಯೊಲಿದಾಡಿಲಂಘಿಸಿ ಜನ್ಮಾಯುಷಗಳ ತುದಿಯಲಿಮಂಗಳ ಬಿಂಬವ ನೋಡದೆ ನೋಡಿ 1ಒಮ್ಮಿಂದೊಮ್ಮೆ ಹೃದಯದದ್ದಕೆಧರ್ಮವ ಜರಿದರೆ ಹೀನನಿರ್ಮಳ ಶೌಚಾಚಮನವೆ ಗಳಿಸಿದಸಮ್ಯಕ್‍ಜ್ಞಾನ ನಿಧಾನತಮ್ಮವಗುಣ ರೋಗಕೆ ಔಷಧವುಕರ್ಮದ ಮೂಲವೆ ಸ್ನಾನಹಮ್ಮಿಲಿ ಸನ್ಮಾರ್ಗಕೆ ಕುಂದಿಡದೆಇಮ್ಮಡಿ ಸಾಧಿಸಿ ನವನವೀನ 2ಸದ್ವ್ವ್ರತ ದೀಕ್ಷೆಯು ಧ್ರುವಪದ ಮುಕ್ತಿಯುಸುದ್ವಾರವ ಬಿಡಬಹುದೆಮಧ್ವೇಶನ ಮಹಿಮೆಯ ಕೇಳದೆ ರಕ್ಷಾಧ್ವರ ಕಥೆ ಕೇಳಬಹುದೆವಿಧ್ವಂಸಿಸುವ ಚೋರರು ಹೇಳ್ಯಾಡುವಸದ್ವಚನದಿ ಸುಖವಾಹುದೆಅದ್ವಯ ಪ್ರಸನ್ವೆÉಂಕಟೇಶನ ಪಾದಕಮಲದ್ವಯ ಬಿಟ್ಟಗೆ ತಮಸಹುದಹುದೆ 3
--------------
ಪ್ರಸನ್ನವೆಂಕಟದಾಸರು
ಬಾ ಬಾರೋ ಬೇಗ ಬಾರೋ ಶಿವಶಂಕರ ಪಬಾರೋ ಶಿವಶಂಕರಾ ಬಾರೋ ಶಶಿಶೇಖರಾಅ.ಪಘೋರದುರಿತಪಾರಶುಭಾಕಾರ ದಯಾಸಾಗರದಯಾಸಾಗರ ಶೂರ ಗಿರಿಜೇಶ್ವರಾ 1ನೀಲಲೋಹಿತಾಲಿಸೆಂದು ಬಾಲನಾ ವಾಗ್ವೊಲವನುಬಾಲನಾ ವಾಗ್ವೊಲವನೂ ಕಾಲನೆಮ್ಮನೆಳೆವನೂ ಬಾ ಬಾ 2ರಜತಗಿರಿವಾಸ ಜಗದೀಶ ಗೋವಿಂದದಾಸನಾಈಶ ಗೋವಿಂದದಾಸನಾ ಪೋಷ ಫಣೀಂದು ಪಣಾ 3
--------------
ಗೋವಿಂದದಾಸ
ಬಾಯ್ಬಡಿಕರಿಂದ ನಾನು ಬದುಕಿದೆನು - ಅವರು -|ಮಾಡಿದುಪಕಾರವ ಮರೆಯೆ ಶ್ರೀ ಹರಿಯೆ ಪಹಂಗಿಸಿ ಹಂಗಿಸಿ ಮನವ ಹರಿಯಲಿ ನಿಲಿಸಿದರು |ಭಂಗಿಸಿ ಭಂಗಿಸಿ ಬಯಲಾಸೆ ಕೆಡೆಸಿದರು ||ಕಂಗೆಡಿಸಿ ಕಂಗೆಡಿಸಿ ಕಾಮ ಕ್ರೋಧ ಬಿಡಿಸಿದರು |ಹಂಗಿಸಿದವರೆನ್ನಪರಮಬಂಧುಗಳು1ಜಾಡಿಸಿ ಜಾಡಿಸಿ ಎನ್ನ ಜನ್ಮಗಳ ಕಳೆದರು |ಹೂಡಿಸಿ ಹೂಡಿಸಿ ಹುಟ್ಟು ಹೊಂದುಗೊಳಿಸಿದರು ||ಪೀಡಿಸಿ ಪೀಡಿಸಿ ಎನ್ನ ಪ್ರಯತ್ನವ ಕಳೆದರು |ಕಾಡಿ ಕಾಡಿಕೈವಲ್ಯಪದವಿತೋರಿದರು2ಕಾಸು ಮುಟ್ಟಿದಾಗಕಾಯಪ್ರಾಯಶ್ಚಿತ್ತಕಿಕ್ಕಿದರು |ದೂಷಿಸಿ ದೂಷಿಸಿನಿರ್ದೋಷಮಾಡಿದರು ||ಲೇಸನು ಕೊಡು ನಮ್ಮಪುರಂದರವಿಠಲನೆ ||ದಾಸನೆಂದೆನಿಸುವರನುದಿನದಲಿ ಎನ್ನ 3
--------------
ಪುರಂದರದಾಸರು
ಬಾರಯ್ಯ ಶ್ರೀ ಶ್ರೀನಿವಾಸ ಭಕ್ತವತ್ಸಲ ಸ್ವಾಮಿಬಾಗಿ ನಮಿಸುವೆನು ಭಾಗವತರ ಪ್ರಿಯ ಪಬಾರೋ ಭಕುತರ ಭವವಿಮೋಚನಬಾರೊ ದ್ರೌಪದಿಮಾನಸಂರಕ್ಷಣಬಾರೊ ಧ್ರುವ ಪ್ರಹ್ಲಾದ ಪಾಲಕಬಾರೋ ಗಜರಾಜೇಂದ್ರ ವರದ ಅ.ಪಕಾಲಲಂದುಗೆ ಗೆಜ್ಜೆ ಘಲುಘಲುರೆನುತಲಿಕಾಲಪಾಡಗರುಳಿ ಕಾಲಪೈಜನಿಸರಕಾಲಲ್ಲಿ ಅಸುರರ ಧೂಳಿ ಮಾಡಿದ ದಿವ್ಯಕಾಲಿಗೆರಗುವೆನು ಕಾಯೊ ಶ್ರೀಹರಿಶೌರೆಕಾಲಿನಲಿಶಿಲೆನಾರಿಯಾದಳುಕಾಳಿಮದ ನಿರ್ಮೂಲವಾಯಿತುಕಾಲಿನಲಿ ಗಂಗೆಯು ಜನಿಸಿದಳುಕಾಲು ಪಾರ್ಥನೆÀ ರಥದಿ ಮೆರೆಸಿದೆ 1ಎಡಬಲದಿ ನಿನ್ನ ಮಡದೇರಿಂದೊಪ್ಪುತತಡಮಾಡದಲೆ ಬಾರೊ ಮೃಡಸಖನೆಉಡುಪ ಮುಖನೆ ನಿನ್ನ ಅಡಿಗೆರಗುವರಯ್ಯತಡಮಾಡದಲೆ ತಾಳಮೇಳ ವಾದ್ಯಗಳಿಂದಬಿಡದೆಶ್ವೇತಛತ್ರಚಾಮರಎಡಬಲದಿ ನಿನ್ನ ಸ್ತುತಿಪ ಭಕ್ತರಕಡುಸ್ವರದ ವಾದ್ಯ ವೇದ ಘೋಷಣೆಬಿಡದೆ ಮಾಳ್ಪರೊ ಕಡಲೊಡೆಯನೆ 2ಕಮಲಸಂಭವನಯ್ಯ ಕಮಲಜಾತೆಯ ಪ್ರಿಯಕಮಲಪೊಕ್ಕಳಲಿ ಪಡೆದಾತನೆಕಮಲದಳಾಕ್ಷನೆಕಮನೀಯರೂಪನೇಕಮಲಾಕ್ಷಿಯೊಡಗೂಡಿ ಕರುಣದಿ ಬಾರಯ್ಯಕಮಲಮಲ್ಲಿಗೆ ಮಳೆಯ ಕರೆವರುಕಮಲಗಂಧಿಯರೆಲ್ಲ ಹರುಷದಿಕಮಲನಾಭವಿಠ್ಠಲನೆ ಪೊಳೆವ ಹೃ-ತ್ಕಮಲದೊಳು ಮಿಗೆ ಶೋಭಿಸುವಹರಿ3
--------------
ನಿಡಗುರುಕಿ ಜೀವೂಬಾಯಿ
ಬಾರೊ ಮುನಿಸೇತಕೆಭಾವಜನಯ್ಯಪಮಾವನಳಿಯನೆ ಬಾರೊ ಭಾವತನಯನೆ ಬಾರೊ |ಮಾವನ ಮಡದಿಯ ಮಗಳ ಸೊಸೆಯಗಂಡ1ಅತ್ತಿಗೆಮೈದುನನೆ ಬಾರೊ ಅತ್ತಿಗೆಯ ಮಗಳಗಂಡ|ಮತ್ತೆ ಮೇಲೆ ಅತ್ತಿಗೆಯ ಪುತ್ರಿಯ ಮುದ್ದಾಡುತ 2ಅಂಬುಜನಯನನೆ ಬಾರೊ ಆದಿಮೂಲನೆ ಬಾರೊ |ಕಂಬದಿಂದೊಡೆದು ಬಂದ ಪುರಂದರವಿಠಲಯ್ಯ 3
--------------
ಪುರಂದರದಾಸರು
ಬಾರೋ ಗೋಪಾಲ ಬಾಲ ಸುಶೀಲದೇವಕಿ ಬಾಲಕಂಸಾರಿಶ್ರೀಲೋಲಪಗುರುಳು ಕೂದಲು ಹೊಸ ಅರಳೆಲೆಹೊಳಪುಕೊರಳ ಕೌಸ್ತುಭಹಾರ ಸರಗಳ ಝಳಪು 1ಮುದ್ದು ಬಾಲನೆ ಹೊಸ ಬೆಣ್ಣೆಮುದ್ದೆಯ ನೀವೆಸದ್ದು ಮಾಡದೆ ಬಾರೊ ಉದ್ಧವÀಸಖನೆ 2ಕಂಠದೊಳಸಲಿ ವೈಕುಂಠ ಶ್ರೀಪತಿಗೆಸೊಂಟಗೆಜ್ಜೆಯು ಕಿರುಗಂಟಿಗಳೊಲಿಯೆ 3ಭಕ್ತಿಯಿಂದಲಿ ಕರವೆತ್ತಿ ಪ್ರಾರ್ಥಿಸುವೆನುಅಪ್ರಮೇಯನೆ ಪುರುಷೋತ್ತಮ ನಮಿಪೆ 4ಕರುಣದಿಂದಲಿ ಬಾರೊಕಮಲಸಂಭವನಯ್ಯಕಮಲನಾಭ ವಿಠ್ಠಲ ನಮಿಸುವೆ ಸತತ 5
--------------
ನಿಡಗುರುಕಿ ಜೀವೂಬಾಯಿ
ಬಾರೋ ದೇವ ದೇವನೇ ಭಾವಜಾರಿಪ್ರಿಯನೆಬಾರೊ ಮನೆಗೆ ಶ್ರೀನಿವಾಸನೆ ಪಬಾರೊ ಭಾಮೆ ರುಕ್ಮಿಣೀಶಬಾರೋಯೋಗಿಹೃದಯವಾಸಬಾರೊ ಭಕ್ತಜನರ ಪೋಷನೇ 1ನಂದ ಗೋಪ ತನಯಗೋಪ-ವೃಂದದೊಳಗೆ ಕುಣಿದು ಮೆರೆದುಮಂದರೋದ್ಧರಮದನಜನಕನೇ2ಅಂದಿಗೆ ಕಾಲ್ಗೆಜ್ಜೆ ನಾದ-ದಿಂದ ಕುಣಿದು ನೆರೆದು ನಲಿದುಸುಂದರಾಂಗ ಶುಭಕರಾಂಗನೇ 3ಸರಿಗೆ ನಾಗಮುರಿಗೆ ಮುತ್ತಿನಸರಗಳ್ಹೊಳಯೆ ಉರದಿ ಲಕ್ಷ್ಮಿಜರಿಪೀತಾಂಬರ ಧಾರಿ ಶೌರಿಯೇ 4ಕೋಟಿ ಸೂರ್ಯಕಾಂತಿ ಮುಖಲ-ಲಾಟ ಕಸ್ತೂರಿ ತಿಲಕ ಶಿರದಿ ಕಿ-ರೀಟ ಧರಿಸಿ ಮೆರೆವ ದೇವನೇ 5ಮುರಳಿ ನುಡಿಸಿ ತರುಣಿಯರನುಮರುಳು ಮಾಡಿ ತುರುಕರುಗಳಪೊರೆದಕಮಲನಾಭವಿಠ್ಠಲನೆ6
--------------
ನಿಡಗುರುಕಿ ಜೀವೂಬಾಯಿ
ಬಿಡೆ ನಿನ್ನ ಚರಣವಉಡುಪಿಕೃಷ್ಣನೆಭವಕಡಲ ದಾಟಿಸು ಕೈಯವಿಡಿದು ಪಾಲಿಸು ತಂದೆ ಪ.ಧÀ್ರುವಶುಕಪ್ರÀಹ್ಲಾದಬಲಿಅಜಾಮಿಳನುದ್ಧವ ಅಂಬರೀಷ ವಿದುರ ಮುಖ್ಯರುತವ ಪಾದವಿಡಿಯಲವರಿಗಿಂಬು ನೀಡ್ದಹವಣವ ಬಲ್ಲೆ ನಾನೇನ ಮಾಡಿದರೇನ 1ಪಾಂಚಾಲಿಮಾನವಕಾಯ್ದೆ ಪೆರರಿಗಂದುಅಚ್ಯುತನಿನ್ನಂಗುಟವು ಸೋಂಕಲುನಿಚ್ಚಳ ಸತಿಯಾದಳೆಂಬ ಸಾಹಸಕೇಳಿಮುಚ್ಚು ಮರೆಯ ಮಾಡಿದರೆ ನಿಮ್ಮ ಮರೆಯೆನು 2ನಿನ್ನ ಪಾದಾಂಬುಜ ಧ್ಯಾನ ಮರೆಯದಂತೆಎನ್ನ ಮನದ ವಕ್ರಗತಿಯ ತಿರ್ದುಮನ್ನಿಸು ತಂದೆ ಪ್ರಸನ್ನವೆಂಕಟ ಕೃಷ್ಣಪೂರ್ಣಪ್ರಜ್ಞಾರ್ಚಿತ ಚರಣಕಮಲನೆ 3
--------------
ಪ್ರಸನ್ನವೆಂಕಟದಾಸರು
ಬೇಡಬೇಡೆಲಾ ಕೊಡಬೇಡೆಲಾ ಸೀರೆಬೇಡಿದರೆ ದೇವರಾಣೆಲಾ ಪಇನ್ನೆರಡು ಗಳಿಗೆಗೆ ನಿನ್ನ ಉಂಬುವ ಹೊತ್ತು |ಅನ್ನದಕಾಂಕ್ಷೆ ಹುಟ್ಟದೇನಲಾ ||ಮನ್ನಿಸಿ ಬೇಡಿದರೆ ಉನ್ನತಾಹಂಕಾರ- |ವನ್ನು ತೋರುವೆ ಇಟ್ಟುಕೊಳ್ಳೆಲಾ 1ವ್ಯಾಳೆವಾಗಲು ಯಮ್ಮನ್ನಾಳುವವರೇ ಬಹರು |ಹೇಳಿ ನಿನ್ನನೇ ಕೊಲ್ಲಿಸುವೆವೇವಲಾ ||ಖೂಳಪೂತನಿ ಕೊಂದ ಧಾಳಿ ಬಲ್ಲರವರು |ಬಾಲಕನೆನ್ನರು ನಿನ್ನಗೆಲಾ 2ಬತ್ತಲರಾಗಿ ಜಲ ವ್ಯರ್ಥ ಸೇರಿದಿರೆಂದು |ವತ್ತಿ ನಮ್ಮನು ಕೊಲ್ಲರವರೆಲಾ ||ಹತ್ತೆಂಟು ತಲೆಯಿಂದ ವಸ್ತ್ರರಹಿತ ಸ್ನಾನ |ನಿತ್ಯನಮ್ಮೊಳು ನಡತೆಲಾ 3ಕರಕರಿಗಾರದೆ ಮೈಮರೆದು ಊರಿಗೆ ಹೋಗಿ |ಭರದಿಂದೆಶೋದೆಗೆ ದೂರೆವೆಲಾ ||ತರುಣಿಯರೆಲ್ಲ ಹಿಂದೆ ಮೊರೆಯಿಡೆ ಲಾಲಿಸಿ |ಒರಳಿಗೆ ಕಟ್ಟಿಸಿದ್ದೆವೆಲಾ 4ಲಲನೆಯರೆಲ್ಲ ಕೂಡಿ ಜಲಬಿಟ್ಟು ಬಂದರೆ |ಕೊಳುವೆ ನಿನ್ನಯ ಪ್ರಾಣಾ | ತಿಳಿಯಲೊಗಳಿಸಿ ಸಂಸಾರವ ಸಲುಹುತಿಹರು ನಾವೇ |ಕಳವೇನೊ ಪ್ರಾಣೇಶ ವಿಠಲ 5
--------------
ಪ್ರಾಣೇಶದಾಸರು
ಬ್ಯಾಡಿರವ್ವ ಎನ್ನ ಕಂದನ್ನ ದೂರಬ್ಯಾಡಿರೆಗಾರುಮಾಡಿ ಚೋರನೆಂದು ಸಾರಿಪಿಡಿದು ತಂದು ದುರುಳನೆನ್ನ ಬ್ಯಾಡಿರೆ ಪ.ಹಸಿದೆ ಮಗುವೆ ಹಸಿದೆ ಚಿನ್ನಶಿಶುವೆ ಪಾಲ್ಗುಡಿಯ ಬಾರೆನ್ನೆಮಿಸುನಿಬಟ್ಟಲೊಳಿಟ್ಟ ಪಾಲಿನಬಿಸಿಗೆ ಬೊವ್ವೆಂದು ಬೆದರುವಮೊಸರ ಹರವಿಯೊಡೆದು ನಿಮ್ಮನೆಪೊಸಬೆಣ್ಣೆಗಳ ಮೆಲುವನೆಂದುಅಸಿಯರೊಂದುಗೂಡೆನ್ನ ಕೂಸಿಗೆಪುಸಿಯ ವಾಕನುಸುರಿ ದೂರ ಬ್ಯಾಡಿರೆ 1ಮುದ್ದು ತಾರೊ ರಂಗ ಎನಲುಎದ್ದು ತಪ್ಪಡಿಗಳನಿಡುತಬಿದ್ದು ಅಂಬೆಗಾಲನಿಕ್ಕಿಮುದ್ದು ನೀಡಲರಿಯನೆಕದ್ದು ನಿಮ್ಮನೆ ಕೆನೆವಾಲನುಗೆದ್ದು ನಿಮ್ಮ ಬಾಲರ ಬೆನ್ನಗುದ್ದಿ ಓಡಿ ಬರುವನೆಂತೆಬುದ್ಧಿ ಇಲ್ಲವೆ ನಿಮಗೆ ದೂರ ಬ್ಯಾಡಿರೆ 2ಎತ್ತಿಕೊಂಡು ರಂಬಿಸಿ ಬಾಯೊಳುತುತ್ತನಿಡಲು ಉಣ್ಣಲರಿಯಕತ್ತಲೆಯೊಳು ಹೆಂಗಳ ಪಿಡಿದುಚಿತ್ತ ಮೋಹಿಸಬಲ್ಲನೆಹೆತ್ತ ಮಕ್ಕಳಿಲ್ಲವೆ ನಿಮಗೆವ್ಯರ್ಥ ಜಾರನೆನ್ನುವಿರಮ್ಮಕರ್ತಪ್ರಸನ್ವೆಂಕಟರಾಯಗೆಭಕ್ತವತ್ಸಲನಲ್ಲೆಂದು ದೂರ ಬ್ಯಾಡಿರೆ 3
--------------
ಪ್ರಸನ್ನವೆಂಕಟದಾಸರು
ಭಕುತ ಜನ ಮುಂದೆ ನೀನವರ ಹಿಂದೆ - ಇದಕೆ |ಯುಕುತಿ ಕೈಕೊಳದಯ್ಯ ಗಯಾಗದಾಧರನೆ ಪಕಟ್ಟೆರಡು ಕೂಡಿ ತಾ ನದಿಸೂಸಿ ಹರಿವಾಗ |ಕಟ್ಟುಕ್ಕಿದಾಗ ಹರಿಗೋಲ ಹಾಕೆ ||ನೆಟ್ಟನೆ ಜಿಗಿಜಿಗಿದು ದಾಟಿ ತಾ ಪೋಪಾಗ |ಹುಟ್ಟು ಮುಂದಲ್ಲದಲೆ ಹರಿಗೋಲು ಮುಂದೆ? 1ಕಾಳೆಹೆಗ್ಗಾಳೆದುಂದುಭಿನಾನಾ ವಾದ್ಯದಿಂ |ಓಲಗದಿಂದೈದೆ ಅರಸು ತಾ ಬರುವಾಗ ||ಸಾಲಾಗಿ ಬಳಿವಿಡಿದು ಸಂಭ್ರಮದಿ ಇರುವಾಗ |ಆಳು ಮುಂದಲ್ಲದೆ ಅರಸು ತಾ ಮುಂದೆ 2ಉತ್ಸವ ಮೂರುತಿಯು ಬೀದಿ ಮೆರೆಯುತ ಬರಲು |ಸತ್ಸಂಗತಿಗೆ ಹರಿದಾಸರೆಲ್ಲ ||ಅಚ್ಚ ಸಿರಿಯರಸು ಸಿರಿಪುರಂದರ ವಿಠಲನೆ |ವತ್ಸಮುಂದಲ್ಲದೆಧೇನುತಾ ಮುಂದೆ?
--------------
ಪುರಂದರದಾಸರು
ಭಕ್ತವತ್ಸಲನೆಂಬ ಚಿಹ್ನೆ ನಿನಗೆಯುಕ್ತವಲ್ಲದೆ ಆರಿಗೊಪ್ಪುವುದು ಕೃಷ್ಣ ಪ.ಎಲ್ಲ ಜಗದ ತಂದೆ ನಿನ್ನ ಮಗ ಆ ನಂದನೊಲ್ಲಭೆಯ ಕಂದನಾದಚೆಲ್ಲುವೆ ಅರಸಿ ನಿನ್ನಂಗನೆ ಲಕುಮವ್ವಗೊಲ್ಲತೇರಿಗೆಂತು ಸೋತಿದ್ದೆ ಸ್ವಾಮಿ 1ಮಂದಿ ರಾಜಾಂಡಕೋಟಿಗೆ ಗುರುವರ್ಯ ನೀನುಸಾಂದೀಪನi್ಞ್ಯಳಿಗವ ಮಾಡ್ದೆಮಂದಜಾಸನಆ ವಾಯು ನಿನ್ನ ಓಲೈಸುತಿರೆಕಂದನೆನಿಸಿದೆ ಯಶೋದಾದೇವಿಗೆ ಸ್ವಾಮಿ 2ಮೂರು ಚಾವಡಿ ಪಾರುಪತ್ಯದ ಪ್ರಭುವೆ ನೀನೇರಿದೆ ನರನ ಬಂಡಿಯನುದ್ವಾರಕೆಯ ಅರಸೆ ನೀ ಚೀರಿದರೋಡಿ ಬಂದುಆ ರಮಣಿಯಮಾನಉಳಿಸಿದೆ ಸ್ವಾಮಿ3ಮುಕ್ತದ್ರುಹಿಣರಿಂದಸೇವ್ಯನೀ ಧರ್ಮನಮಖದೊಳೆಂಜಲ ಪತ್ರ ತೆಗೆದೆಪ್ರಕಟಿತನಿತ್ಯಮಹಾತೃಪ್ತ ನೀ ವಿದುರನಕಕುಲತೆಯ ಔತಣಗೊಂಡು ಮುದಿಸಿದೆ ಸ್ವಾಮಿ 4ಹಲವು ಶ್ರ್ರುತಿಗಳಿಗೆ ನೀ ನಿಲುಕದೆ ನೆನೆದವಗೆಸುಲಭದಿ ಪೊರೆವ ಉದಾರಿಬಲದ ಮ್ಯಾಲೊಲಿಯುವ ದೊರೆಯಲ್ಲ ಭಕ್ತರಛಲರಕ್ಷ ಪ್ರಸನ್ನವೆಂಕಟ ಜಗದಧ್ಯಕ್ಷ ಸ್ವಾಮಿ 5
--------------
ಪ್ರಸನ್ನವೆಂಕಟದಾಸರು
ಭಾರತೀರಮಣ ನಂಬಿದೆ ಪಾದವಾರಿಜಾಕರುಣಾ ವಾರಿಧೆ ಯನ್ನನು |ದೂರ ನೋಡದೆ ನಿನ್ನ ಸಾರೆಗರೆದುಭಯ ನಿವಾರಿಸಿ ಸಲಹೋ ಪನೀಲಲೋಹಿತನ ಪಿತನೇ ಗೋಪಾಲನ ಸುತಾ |ಕಾಳಕೂಟ ಪಾನಿ ವಿಶಾಲಾಂಬಕಾ ಮಾರರಿಂದ ||ವೇಳೆ ವೇಳೆಗಳಲ್ಲಿ ವೋಲಗವ ಕೈಕೊಂಬುವ |ಕಾಳೀವಲ್ಲಭಭೇಶಭಾಸ್ಕರರೋಲು ಸನ್ನಿಭ ||ಈ ಲೌಕಿಕ ನರರಾಲಯ ಕಾಯಿಸದೆ |ವಾಲಯ ಸುಮತಿಯ ಪಾಲಿಪುದೊಲಿದು 1ಜಾನಕೀಪತಿ ಸೇವೆ ಮಾಡಿದೈ ಕಾಣೆನೋಪ್ರತಿ|ಯಾ ನಿನಗಾರಾರಾ ಭುವನದೊಳಗೆ ಗಂಧವಹನೆ ||ಮುದ್ರಿಯ ಕೊಂಡು ಕ್ಷಣದೊಳಗೆ ಜಲಧಿಯನ್ನೆ ಹಾರಿದೆ |ಸೀತೆಗುಂಗುರವನ್ನೆ ತೋರಿದೆ ||ಆ ನಗರವನು ದಹನಗೈಸಿ ಬಹು |ದಾನವರನಳಿದು ದಶಾನನನೊದ್ದೆ 2ಪಾಪದೂರನೆ ವೃಕೋದರ ಶ್ರೀ ದ್ರೌಪದೀಶನೇ |ವಿಪಿನಚರಿಸಿ ಕುರುಪತಿಯ ತರಿದು ||ಕ್ಷಿತಿಪರನ್ನು ಬಿಡಿಸಿದೆಯೈ ಪಾಂಡವರ (ಪರಿ) ಪಾಲಕ |ಕೋಪನಾಶನ ಉದ್ಧರಿಸೆನ್ನ ಚಾಪಭಂಜನ ||ಶ್ರೀಪತಿ ದ್ವಯ ಪದ ಆಪಜ ಭಜಿಸುವ |ನೇ ಪರಮೇಷ್ಠಿಯರೂಪಗುಣಾಢ್ಯ 3ದೇಶಿಕೋತ್ತಮ ಮಾರುತಿ ಇಂದಿರೇಶನ ಪ್ರೇಮ |ಸಂಪಾದಿಸಿಕೊಂಡತಿಶಯ ಭಕುತಿಯಿಂದಲೀ ಸಮೀಚೀನವಾಗಿ ||ತ್ರಿಂಶತಿ ಸಪ್ತ ಸಂಖ್ಯಾ ದರುಶನ ಗ್ರಂಥ ವಿರಚಿಸಿ ದು |ರ್ಭಾಷ್ಯವ ಸಂತರಾ ಸಲಹುವರನಾಭಾಸ ಮಾಡಿದೆ ||ವ್ಯಾಸಭಜಕ ನಿನ್ನ ದಾಸನೆನಿಸಿಕೊಳ್ಳೋ4ಅಂಜನಾಸುತ ಪ್ರಾಣೇಶ ವಿಠಲನೆಂಜಲನೊಯ್ಯುತ |ಭುಂಜಿಸಿದಿಯಲೊನಿರಂಜನಕಪಿ ಪ್ರ- ||ಭಂಜನಕೊಡು ಕೃತಾಂಜಲಿಯಿಂ ಬೇಡುವೆ |ಕಂಜನಾಭನ ಸ್ಮರಣೆ ದಿವಾ ಸಂಜೆಯಲಿಘನ||ಪುಂಜ ಸುಗುಣಮಣಿ ಮಂಜರಿ ಅರ್ಥ ಪ- |ರಂಜಳ ತಿಳಿಸೋ ಧನಂಜಯ ರಕ್ಷ 5
--------------
ಪ್ರಾಣೇಶದಾಸರು