ಒಟ್ಟು 4323 ಕಡೆಗಳಲ್ಲಿ , 125 ದಾಸರು , 2943 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರಯೋದಶಿಯ ದಿವಸ ಲೀಲೆ ಪೇಳುವದೇನೆ ಬಾಲೆ ಪರಮಾತ್ಮನ ಲೀಲೆ ಮೂಡ ಗಿರೀಶನು ಪಾಡಿಲ್ಲದ ಪ್ರಭೆ ಗೂಡಿದ ಮಂಟಪಕ್ಕೇರಿದ ವಿಸ್ತರ1 ಕುಂದಣ ಪೂರಿತವಾ- ಹೇಮದ ಬಂದಿತವ- ಪ್ರಜ್ವಲದಿಂದಿರುವ ಶ್ರೇಷ್ಠವಾಗಿಹ ನಾಗರಹೆಡೆವದನದಿ ಇಷ್ಟದಿ ನೇತಾಡುವ ಸರಮಾಲೆಯ2 ಶುಕಪಿಕ ಮುಂತಾಗಿಹ ಧ್ರುವಮಂಡಲ ಪರಿಯಲಿ ನೋಡುವರತಿ ಚಂದ ಸುತ್ತಲು ಶೋಭಿಪ ಮುತ್ತಿನ ಬಿಂತಿಯ ಪೊತ್ತು ವಿನೂತನವೆತ್ತಿದ ವಿಸ್ತರ3 ಮಿನುಗುವದೋರಂತೆ ಕಾಣುವದೆಲೆ ಕಾಂತೆ ಕಾಣೆನು ಇದರಂತೆ ಚಾತುಷ್ಕಂಬದೊಳೂತು ನಡುವೆಯಿಹ ಕೌತುಕವಾಗಿಹನಾಥರದಾತನ4 ಬರುವನು ಗೋವಿಂದ ಪೊರೆಯುವದಿದು ಚಂದ ಭಕ್ತರ ಕೈಯಿಂದ ಪೊಂಬಣ್ಣದ ದಿವ್ಯಾರತಿ ಕೊಳ್ಳುತ ಇಂಬಾಗಿಹ ಕರುಣಾಂಬುಧಿ ಭರಿತ5 ವೇದವ ಲಾಲಿಪನು ಪ್ರೇಮನಾಗುತ ಸಂಗೀತಗಳನು ಕೇಳುತ ಸುತ್ತುವನು ತಾ ಮಮಕಾರದಿ ಬರುವನು ಮೇಣು ಕೋಮಲಕಾಯವ ಸಂತತ ಮಂಡಿಸಿ ಸಾಮಗಾನ ಲೋಲೋಪ್ತಿಯೊಳಿರುವನು6 ಭಕ್ತರ ಸಮುದಾಯಕೆ ತದನಂತರ ಗೈದೇ- ಕಾಂತ ಸೇವೆಯ ತಾ ಕೈಕೊಂಡ ಸಂತಸದಲಿ ಶ್ರೀಕಾಂತನು ಭಕುತರ ಚಿಂತಿತವೆಲ್ಲ ನಿರಂತರ ಕೊಡುವನು7
--------------
ತುಪಾಕಿ ವೆಂಕಟರಮಣಾಚಾರ್ಯ
ತ್ರಾಣ ತಗ್ಗಿತಯ್ಯಾ ಪ ಜಾಣರಾಮ ಕಾರ್ಯಧುರೀಣ ಗುರುವೇ ಅ.ಪ ಕಾಲು ನೋಯುತಿಹುದು ಕೈಸೋತು ಬೀಳಾಗಿರುತಿಹುದು ಕಾಲಮೃತ್ಯುಬಹ ಕಾಲದಲ್ಲಿ ಗೋ ಪಾಲನ ಸ್ಮøತಿ ಕೊಡು ಜಾಲವ ಮಾಡದೆ 1 ಧನಿಕನೆನ್ನುತಲಿ ಗೊಣಗಿ ಕೊಂಬುವರು 2 ವರುಷವೈವತ್ತಾರು ಕಳೆದಿತು ಪರಿಪಾಲಿಪರ್ಯಾರು ಚರಣವ ತೋರಿಸಿ ದುರಿತವ ಕಳೆಯೈ 3
--------------
ಗುರುರಾಮವಿಠಲ
ತ್ರಾಣಿ ಶ್ರೀ ಕೃಷ್ಣವೇಣಿ ಪ್ರಾಣಪತಿ ಪದಕಮಲ ಕಾಣಿಸು ಹೃದಯದಿ ತ್ರಾಣಿ ಶ್ರೀ ಕೃಷ್ಣ ವೇಣಿ ಪ ಯಮಧರ್ಮತನಯೆ ಶ್ರೀ ಕೃಷ್ಣ ಸಂಗದಿ ಜನಿಸಿ ಕಮಲ ಸಂಭವನ ಲೋಕದಲಿ ಮೆರೆದೆ ಸುಮನಸರ ನುಡಿಗೇಳಿ ಲೋಕಗಳ ದುರಿತೋಪ ಶಮನ ಗೊಳಿಸಲು ಬಂದೆ ತುಮಲ ಹರುಷದಲಿ 1 ಭೂತನಾಥನ ಜಟಾಜೂಟದಿಂದುದ್ಭವಿಸಿ ಶ್ವೇತಪಿಂಗಳ ಶೈಲಶಿಖರಕಿಳಿದೇ ಭೂತಳಕೆ ಭೂಷಣಳೆನಿಸಿ ಪೂರ್ವವನಧಿ ನಿ ಕೇತನವನೈದಿ ಸುಖಿಸಿದಿ ನಿನ್ನ ಪತಿಯೊಡನೇ 2 ಪ್ರಾಣಿಗಳು ನಿನ್ನ ಜಲಪಾನವನು ಗೈಯೆ ನಿ ತ್ರಾಣ ಸಂಹಾರ ವ್ಯಾಧಿಗೆ ಭೇಷಜಾ ಪ್ರಾಣ ಪ್ರಯಾಣ ಪಾಥೇಯವೆಂದರಿಯೆ ನಿ ರ್ವಾಣಪದವಿತ್ತು ಕಲ್ಯಾಣವಂತರ ಮಾಳ್ಪೆ 3 ಜನಪದಗಳಾಗಿ ಕಾನನವಾಗಿ ಮನ್ವಾದಿ ದಿನಗಳಲ್ಲಾಗಿ ಮತ್ತೇನಾಗಲೀ ಮನುಜ ಮಜನಗೈಯೆ ವಾಜಪೇಯಾದಿ ಮಖ ವನುಸರಿಸಿದಕೆ ಫಲವೇನು ತತ್ಪಲವೀವೆ 4 ಅರವತ್ತು ಸಹಸ್ರ ವರುಷಂಗಳಲ್ಲಿ ನಿ ರ್ಜರ ತರಂಗಿಣಿಯ ಮಜ್ಜನದ ಫಲವು ಗುರುವು ಕನ್ಯಸ್ಥನಾಗಿರಲು ಒಂದಿನ ಮಿಂದ ನರರಿಗಾ ಪುಣ್ಯಸಮನೆನಿಸಿ ತತ್ಫಲವೀವೇ 5 ಮನನಶೀಲ ಸುಯೋಗಿಗಳಿಗಾವ ಗತಿಯು ಇಹ ವನುದಿನದಿ ನಿನ್ನ ತೀರದಲಿ ಇಪ್ಪಾ ಮನುಜೋತ್ತಮರಿಗೆ ಆ ಗತಿಯಿತ್ತು ಪಾಲಿಸುವೆ ಅನುಪಮ ಸುಕಾರುಣ್ಯಕೆಣೆಗಾಣಿ ಜಗದೊಳಗೆ 6 ತಾಯೆ ಎನ್ನನುದಿನದಿ ಹೇಯ ಸಂಸಾರದೊಳ ಗಾಯಾಸ ಗೊಳಿಸದಲೆ ಕಾಯಬೇಕೊ ವಾಯುಪಿತ ಶ್ರೀ ಜಗನ್ನಾಥ ವಿಠ್ಠಲ ಹೃ ತ್ತೋಯಜದೊಳಗೆ ಕಾಂಬುಪಾಯ ಮಾರ್ಗವ ತೋರೆ 7
--------------
ಜಗನ್ನಾಥದಾಸರು
ತ್ರಾಹಿ ತ್ರಾಹಿ ತ್ರಾಹಿ ಎನ್ನಬೇಕು ಧ್ರುವ ಕಡ್ಡಿಮರೆಯಲ್ಯದ ನೋಡಿರೊ ಗುಡ್ಡ ಗುಡ್ಡಕಾಣಲರಿಯದವನ ಹೆಡ್ಡ ಹೆಡ್ಡನಾದರ ವಸ್ತುಕಾಗೇದಡ್ಡ ಅಡ್ಡಾಗಡ್ಡೇರಿಸಿದ ಶ್ರೀಗುರುದೊಡ್ಡ 1 ಅಡ್ಟಾUಡೆÀ್ಡಂಬುಕ ಅನುಮಾನ ಗುಡ್ಡವೆÀಂಬುವೆ ವಸ್ತು ತಾ ನಿಧಾನ ವಡ್ಡಗೊಂಡಿಹುದು ಕಾಣದ ಮನ ಅಡ್ಡಮರಿ ಬಿಡಿಸುವ ಗುರುಙÁ್ಞನ2 ಕಡ್ಡಿಮರೆಯು ಆಗಿಹ್ಯ ತಾ ಕಾರಣ ಅಡ್ಡ ಬಿದ್ದೆನಯ್ಯ ಗುರುವಿಗೆ ಶರಣ ದೊಡ್ಡ ಸ್ವಾಮಿ ನಮ್ಮ ಸದ್ಗುರು ಕರುಣ ವಡ್ಡುಗಳಿಸಿದ ಮಹಿಪತಿಗೆ ಪೂರ್ಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಗುರುನಾಥ ಧ್ರುವ ಏನೆಂದ್ಹೇಳಲಯ್ಯ ನೀವು ಮಾಡಿದುಪಕಾರ ನಾನೇನುತ್ತೀರ್ಣಾದೇನು ಹೀನ ದೀನ ಕಿಂಕರ ನೀನೆ ತ್ರಿಭುವನಕೆಲ್ಲ ಸುಖವಿಡುದಾರ ಮುನಿಜನರ ಮಂದಾರ ಘನ ಸಹಕಾರ 1 ಉಪಕಾರಕ ನೀ ಬಂದ್ಯೊ ಉಪಮೆರಹಿತ ಉಪಾಯವದೋರಲಿಕ್ಕೆ ಕೃಪೆಯುಳ್ಳ ಸಮರ್ಥ ತಾಪತ್ರಯ ಹರಿಸುವ ಶಕ್ತ ನೀನೆ ಶ್ರೀನಾಥ ಈ ಪರಿಮಾಡುವರಿಲ್ಲ ಆಪ ನೀನೆ ಅನಂತ 2 ಸಕಳಕೆ ಸಿಲುಕದ ಸುಖ ನೀಡಿದೆ ಅಯ್ಯ ನೀ ಅಕಳಂಕ ನಿಜರೂಪ ಪ್ರಕಟಿಸಿದ ಅಯ್ಯ ಸುಕಾಲ ಸುಭಿಕ್ಷದಿಂದ ಮಾಡಿದ್ಯೋ ನೀ ದಯ ಅಖಿಳದೊಳು ಮಹಿಪತಿಯ ಪಿಡಿದ್ಯೊ ನೀ ಕೈಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಗುರುನಾಥ ಬಾಹ್ಯಾಂತ್ರ ಪರಿಪೂರ್ಣ ನೀನೆ ಸದೋದಿತ ಸಹಕಾರ ನಿಜವಸ್ತು ನೀನೆ ಅಖಂಡಿತ ಗುಹ್ಯ ತಿಳಿಯದೊ ನಿನ್ನ ಸದ್ಗುರು ಸಮರ್ಥ 1 ಸೆರಗ ಸಿಲುಕದೆಂದು ತಿರುಗಿತು ವೇದ ಸರಸ್ವತಿ ಸ್ತುತಿಗೆ ತಾ ತೀರಲಿಲ್ಲ ಬೋಧ ವರಣಿಸಲಿಕ್ಕೆ ಶೇಷ ತಲೆಯು ಬಾಗಿದ ಮೊರೆ ಇಡುತಿಹುದೆಲ್ಲ ನಿನಗೆ ಗೋವಿಂದ 2 ಋಷಿಮುನಿಗಳಿಗೆ ತಾ ಪೆಸರೊಡೆಯದು ತುಸು ಕೊರತೆಲ್ಲ ತಾ ಪಸರಿಸಿಹ್ಯದು ಮಸಿ ಮಣ್ಣಾಯಿತು ಲೋಕ ಹೆಸರಿಗೆ ಬಂದು ದೆಸೆಗೆಟ್ಟಾಯಿತು ಬಹಳ ಉಸುರೊಡಿಯೆಂದು 3 ಮಾಡದ ಮಾಡಿತು ಲೋಕ ನೋಡೊ ನಿನಗಾಗಿ ಬಡದ ಭವಣೆಬಟ್ಟು ಹಿಡಿಯಲಿಕ್ಕೆ ಹೋಗಿ ಕೊಡಲಿಲ್ಲ ನಿಜಗುಟ್ಟು ಇವ್ಹನೀ ಅಡಗಿ ಯೋಗಿ 4 ಇದೆ ಮುಂದಣುವಾದ ನನ್ನದೇನು ಪಾಡು ಸಾಧಿಸಿ ಸದ್ಗುರು ಕೃಪೆ ನೀನೆ ದಂiÀiಮಾಡು ಒದಗಿ ಮಹಿಪತಿ ನೀ ದಯದಿಂದ ನೋಡು ಸದಮಲ ಸುಖವಾದ ಸುಧಾರಸವ ಕೊಡು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಶ್ರೀಗುರುನಾಥ ತ್ರಾಹಿ ತ್ರಾಹಿ ಎಂದವನಪರಾಧ ನೋಡದೆ ನೀ ಕಾಯಿ ಧ್ರುವ ಪತಿತಪಾವನೆಂಬ ಬಿರುದು ನಿನಗೆ ಎಚ್ಚರಿಲ್ಲೆ ಪ್ರತಿದಿನ ಮೊರೆ ಇಡಲಿಕ್ಕೆ ಮತ್ತಿದೆ ಸೋಜಿಗವಲ್ಲೆ ಅತಿ ಸೂಕ್ಷ್ಮ ಸುಪಥವರಿಯಲಿಕ್ಕೆ ನಾ ಏನು ಬಲ್ಲೆ ಹಿತದಾಯಕ ನನ್ನ ದೀನ ದಯಾಳು ನೀನೆವೆ ಅಲ್ಲೆ 1 ತಪ್ಪಿಲ್ಲದೆ ನಿನ್ನ ಮೊರೆಯ ಹೋಗುವರೇನೊ ಏ ಶ್ರೀಪತಿ ಒಪ್ಪಿಸಿಕೊಳ್ಳದಿದ್ದರಹುದೆ ಜಗದೊಳು ನಿನ್ನ ಖ್ಯಾತಿ ಕೃಪೆಯುಳ್ಳ ಸ್ವಾಮಿ ನಿನ್ನದೆ ಸಕಲ ಸಹಕಾರ ಸ್ಥಿತಿ ಅಪರಾಧ ಕ್ಷಮೆ ಮಾಡಿ ಸಲಹಬೇಕೆನ್ನ ಶ್ರೀಗುರುಮೂರ್ತಿ 2 ಅನಾಥ ಬಂಧು ನೀ ಎಂದಾಡುತಿರಲಿ ಅನಾದಿಯಿಂದ ನ್ಯೂನಾರಿಸದೆ ಬಾರÀದೆ ಬಿರುದಿಗೆ ತಾ ಕುಂದು ಅನುದಿನ ಅನುಕೂಲ ಮುನಿಜನರಿಗೆ ನೀ ಬ್ರಹ್ಮಾನಂದ ದೀನ ಮಹಿಪತಿ ಸ್ವಾಮಿ ಭಾನುಕೋಟಿತೇಜ ನೀ ಪ್ರಸಿದ್ಧ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿಯೆನ್ನಿರೊ ತ್ರಾಹಿ ತಾರಕ ಬ್ರಹ್ಮಗೆನ್ನಿರೊ ಧ್ರುವ ತ್ರಾಹಿ ಮಚ್ಚ ಕೂರ್ಮಾವತಾರಗೆನ್ನಿರೊ ತ್ರಾಹಿ ವರಹ ನರಸಿಂಹಗೆನ್ನಿರೊ ತ್ರಾಹಿ ವಾಮನ ಭಾರ್ಗವಗೆನ್ನಿರೊ ತ್ರಾಹಿ ರಾಮಕೃಷ್ಣ ಗೋಪಾಲಗೆನ್ನಿರೊ 1 ತ್ರಾಹಿ ಭೌದ್ಧ ಕಲ್ಕ್ಯಾವತಾರಗೆನ್ನಿರೊ ತ್ರಾಹಿ ಸಗುಣ ನಿರ್ಗುಣಗೆನ್ನಿರೊ ತ್ರಾಹಿ ವಟಪತ್ರಶಯನಗೆನ್ನಿರೊ ತ್ರಾಹಿ ತ್ರೈಲೋಕ್ಯ ವಂದಿತಗೆನ್ನಿರೊ2 ತ್ರಾಹಿ ಹರಿಹರ ವಿರಂಚಿಗೆನ್ನಿರೊ ತ್ರಾಹಿ ಸುರವರ ನಿರಂಜನಗೆನ್ನಿರೊ ತ್ರಾಹಿ ಭಕ್ತಜನ ಸಹಕಾರಗೆನ್ನಿರೊ ತ್ರಾಹಿ ಮಹಿಪತಿ ಪಾಲಗೆನ್ನಿರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರ್ಯಕ್ಷಾಂಶ ಸಂಭೂತ | ಅಕ್ಷೋಭ್ಯ ಕರಜಾತಕುಕ್ಷಿಯೊಳಗೆ ಖ್ಯಾತ | ಟೀಕಾರ್ಯರೆಂಬಾತ ಪ ಮರುತ ಮತಾಬ್ಧಿ ಸೋಮ | ಹರಿಗುಣ ಗಣಸ್ತೋಮಬರೆದು ವಿಬುಧಸ್ತೋಮ | ಪೊರೆದ ನಿಸ್ಸೀಮಾ ಅ.ಪ. ಎರಗೋಳ ಗುಹೆಯಲ್ಲಿ | ಮರುತ ಮತ ಗ್ರಂಥದಲಿನಿರುತ ಬಹು ಆಸಕ್ತ | ಟೀಕೆಗಳ ಕರ್ತಾ 1 ವೃಷಭದಾಕೃತಿ ಧರಿಸಿ | ಅಸುಪತಿಯ ಸೇವಿಸೀಎಸೆವ ಗ್ರಂಥಗಳ್ಹೊತ್ತು | ಜನ್ಮ ಸ್ಮøತಿ ಪೊತ್ತೂ 2 ಭೋಗಿ ಆವೇಶಿತನೆಯೋಗಿ ಕುಲ ಕಮಲಾಪ್ತ | ಮಾಯಿ ಮತ ಹರ್ತಾ 3 ವೇನ ಮತ ದುಧ್ರ್ವಾಂತ | ಕಳೆಯಲ್ಕೆ ಸುಧೆ ಗ್ರಂಥಜ್ಞಾನ ಸೂರ್ಯನೆ ಇತ್ತೂ | ಕಳೆದೆ ಆಪತ್ತೂ4 ಗೋವುಗಳ ಪಾಲ ಗುರು | ಗೋವಿಂದ ವಿಠಲದೇವ ಗುಣಗಳ ಜಾತ | ಬರೆದ ವಿಖ್ಯಾತಾ 5
--------------
ಗುರುಗೋವಿಂದವಿಠಲರು
ಥರವಲ್ಲ ಸ್ವಾಮಿ ಥರವಲ್ಲ ಪ. ಥರವಲ್ಲ ಸ್ವಾಮಿ ಈ ತೆರನ ಮಾಡುವುದು ಕರುಣ ಸಾಗರನೆಂಬ ಬಿರುದಿನ್ನು ನಿಲದು ಅ.ಪ. ಊರೊಳಗಿಹ ಜನರೆಲ್ಲರು ಕೂಡಿ ವಾರಿಜಾಕ್ಷನ ದಾಸನೆಂದು ಕೊಂಡಾಡಿ ಸಾರಿಸಾರಿಗೆ ನಿನ್ನ ಕೀರ್ತನೆ ಮಾಡಿ ಪೋರ ಪೇಚಾಡುವನೆಂಬರು ಕೂಡಿ1 ಪಾರಾಯಣದ ಪುಸ್ತಕವ ಕಟ್ಟಿಟ್ಟು ವಾರಿಜನಾಭ ನಿನ್ನಯ ಪೂಜೆ ಬಿಟ್ಟು ಕಾರಿ ಕೆಮ್ಮುತ ಬಿದ್ದಿರುವ ದೊಡ್ಡ ಗುಟ್ಟು ಯಾರ ಮೇಲಿನ್ನು ತೋರಿಸಲೆನ್ನ ಸಿಟ್ಟು 2 ಮೋಹ ಪಾಶದಿ ಮುಸುಕಿ ಕಟ್ಟಿದರೆ ಬಹ ಪಾತಕಗಳಿಗೆಲ್ಲ ನಾನಿದಿರೆ ನೀ ಹದಿನಾಲ್ಕು ಲೋಕೇಶನೆಂದೊದರೆ ದೇಹವ ಬಳಲಿಸಿದರೆ ನಾನೇನ್ಹೆದರೆ 3 ನಂಬಿರೊ ಭಕ್ತ ಕುಟುಂಬಿಯನೆಂದು ಅಂಬುಜಸಂಭವನ್ಯಾಕೆಂದನಂದು ಹಂಬಲಿಸಿದರು ನೀ ದಯದೋರದಿಂದು ಬೊಂಬೆಯೆ ಸರಿಯೆಂದು ಜನರೆಂಬೊ ಕುಂದು 4 ಸರ್ವದೋಷಹರ ಸಾಗರಜೇಶ ನಿರ್ವೇದದಿಂದ ನಾ ನುಡಿದೆನಾಕ್ರೋಶ ಸರ್ವಕಾಲಕು ಸಲಹುವ ನೀನೆ ಶ್ರೀಶ ಶರ್ವಾದಿ ವಂದ್ಯ ಶೇಷಾಚಲವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ
ದಡಿಗ ಮಾನವನೆ ಪ ಸೂನು ಹೆಡತಲೆಯಲಿ ನಗುವ ಅ.ಪ. ಬಾಲನು ನಾನು ಭಾಗ್ಯಶಾಲಿಯೆನುತ ನಿತ್ಯ ಲೀಲ ವಿನೋದವೆಂಬ ಜಾಲದೊಳು ಸಿಲುಕಿ ಕಾಲವ ಕಳೆದು ಮಾಲೋಲನ ಮರೆತಂಥ ಮಾನವ ಪಶುಪಾಲನಾದವ ನಿನಗೆ 1 ತಾಸು ತಾಸಿಗೆ ನೀನು ಲೇಸಾಗಿ ಭುಂಜಿಪೆ ಬೇಸರಿಲ್ಲವೊ ನಿನಗೆ ರಾಸಿ ಭೋಗಗಳಲಿ ಕಾಸುವೀಸವ ಕೊಡೆ ಹರಿದಾಸರಾದವರಿಗೆ ದೋಷಕಾರಿಯೆನಿಸಿದ ಹೇಸಿಕೆ ಮನದವನೆ 2 ಕಡುಪ್ರಿಯರೆಂದೆನಿಸುವ ಮಡದಿ ಮಕ್ಕಳು ಎಂಬ ಬೆಡಗು ತೋರುವ ಮೋಹ ಮಡುವಿನೋಳ್ಬಿದ್ದು ಒಡೆಯ ಶ್ರೀ ರಂಗೇಶವಿಠಲರೇಯನ ಪಾದ ಜಡಜವ ನಂಬದೆ ನೀ ಕೆಡಬೇಡ ಮನುಜ 3
--------------
ರಂಗೇಶವಿಠಲದಾಸರು
ದಂಡಿಸಬೇಡೈ ದಯೆದೋರೈ ಕರದಂಡದಳಾಂಬಕನೆಪ. ಕಂಡೀಶವಿನುತ ಬ್ರಹ್ಮಾಂಡಪಾಲ ಮಾ- ರ್ತಾಂಡಮಂಡಲಗ ಶುಂಡಾಲವರದಅ.ಪ. ಕ್ಷೇಮದಿ ಶ್ರೀಹರಿನಾಮವ ವರ್ಣಿಸೆ ನೇಮಾನುಷ್ಠಾನದೊಳಿರಲು ನಾ ಮಾಡಿದ ನಾನಾವಿಧ ಪಾಪವ ತಾಮಸಗೊಳಿಸುವ ಕಾಮಕ್ರೋಧಗಳಿಂ1 ಶಿಷ್ಟಾಚಾರದೊಳಿಷ್ಟನಾಗಿ ಪರ ಮೇಷ್ಠಿಜನಕ ಜಯ ಜಯವೆನಲು ಭ್ರಷ್ಟಾಲೋಚನೆ ಪುಟ್ಟಿಸಿ ಪಾಪದ ಬಟ್ಟಿಯ ಹೊದ್ದಿಪ ದುಷ್ಟಸಂಗದಿಂ2 ನಾರಾಯಣ ನರಹರಿಯೆನ್ನುವ ವ್ಯಾ- ಪಾರವ ನಾ ಮಾಡುತ್ತಿರಲು ಆರೋಹಣಾವರೋಹಣ ನಾದವಿ- ಕಾರಗೊಳಿಪ ಶಾರೀರಪ್ರಕೃತಿಯಿಂ 3 ಆರ್ಕಾರಣ ರಿಪುಗಳಿಗೈ ಸರ್ವ ದೇ- ವರ್ಕಳ ಮಸ್ತಕಮಣಿ ನೀನೈ ತರ್ಕಾಗಮ್ಯ ಲಕ್ಷ್ಮೀನಾರಾಯಣ ಅರ್ಕಾಮಿತಪ್ರಭ ಕಾರ್ಕಳಪುರವರ4
--------------
ತುಪಾಕಿ ವೆಂಕಟರಮಣಾಚಾರ್ಯ
ದಣಿದು ಮಲಗಿದೆನು ನಾನು-ದಣಿದು ಮಲಗಿದೆನುಮಣಿದೆ ಗುರುವಿಗೆ ಹಣಿದೆ ಶತ್ರುಗಳತಣಿದೆ ರಕ್ತವ ಕುಣಿದೆ ತಲೆಗಳಘಣ ಘಣ ಘಣ ಘಣ ನಾದವ ಕೇಳುತಮಣಿಮಯ ಮಂಟಪ ಉನ್ಮನಿ ಬಯಲಲಿ ಪ ತರಿಸಿ ತಾಪವನು ಕಾಲಲಿ ಒರೆಸಿ ಮಮತೆಯನುಹರಿಸಿ ಸಂಶಯ ಹುರಿಸಿ ದುರ್ಗುಣಕೊರೆಸಿ ವ್ಯಸನವ ಜರಿಸಿ ಮದಗಳಸುರಿ ಸುರಿ ಸುರಿವ ಸುಧಾ ಕಾರಂಜಿಯಮೆರೆವ ಸಹಸ್ರಾರ ಚಪ್ಪರ ಮಂಚದಿ 1 ಹೊಡೆದು ವಾಯುಗಳ ತುಂಡರಿಸಿ ಕ್ಲೇಶಗಳಮಡಿಯೆ ಈಷಣವು ಕಡಿಯೆ ಕಲ್ಪನೆಕೆಡೆಯೆ ಭ್ರಾಂತಿಯು ಒಡೆಯೆ ಶತ್ರುಗಳುಕಿಡಿ ಕಿಡಿಯುಗುಳುತ ವಿಷ ಮೂರ್ಧ್ನಿಯಬಿಡಿ ಮುತ್ತುದುರುವ ಹಂಸತೂಲದಿ2 ಬಳಿದು ವ್ರತಗಳನು ಎಳೆದು ಮತಗಳನುತುಳಿದು ಗರ್ವವ ತೊಳೆದು ಶೋಕವಮುರಿದು ರಾಗವ ಸೆಳೆದು ಮಾನವಥಳಥಳ ಬೆಳುದಿಂಗಳಿನೊಳುಬಲು ಚಿದಾನಂದ ಬ್ರಹ್ಮವೇ ಆಗಿಯೆ 3
--------------
ಚಿದಾನಂದ ಅವಧೂತರು
ದತ್ತವಧೂತ ಶ್ರೀ ಗುರು ಸಾಕ್ಷಾತ ನಿತ್ಯವಾಗಿಹ್ಯ ನಿಜ ನಿರ್ಗುಣನೀತ ಪ ನಿರ್ಗುಣ ನಿಶ್ಚಲ ಗಗನಾಕಾರ ಸುಗುಣದಲಿ ತಾನೆ ಸಹಕಾರ 1 ಸಹಕಾರನಹುದು ಸದ್ಗುರುನಾಥ ಬಾಹ್ಯಾಂತ್ರದಲಿ ತಾನೆ ಪ್ರಖ್ಯಾತ 2 ಪ್ರಖ್ಯಾತನಹುದು ತ್ರಿಗುಣರಹಿತ ಮುಖ್ಯಮುನಿಗಳಿಗೆ ಮೋಕ್ಷ ಸುದಾತ 3 ದಾತನಹುದು ತ್ರೈಲೋಕ್ಯದೊಳೀತ ಈತನೆ ವಿಶ್ವದೊಳಗೆ ದೈವತ 4 ದೈವತನಹುದು ದೇವಾದಿಗಳಾತ್ಮ ಮೂರ್ತಿ ಶ್ರೀಹರಿ ಸರ್ವಾತ್ಮ 5 ಹರಿ ಸರ್ವಾತ್ಮನಾಗಿಹ ನಿಜಪೂರ್ಣ ಪರಿಪರಿ ಆಗುವ ಅಗಣಿತಗುಣ 6 ಅಗಣಿತಗುಣ ಅಗಾಧ ಅಪಾರ ನಿಗಮಗೋಚರ ನಿರುಮಪ ನಿರ್ಧಾರ 7 ನಿರ್ಧಾರನು ನಿಜನಿಷ್ಟರಪ್ರಾಣ ಸಾಧಕರಿಗೆ ಸದ್ಗತಿ ಸಾಧನ 8 ಸಾಧನದೊಡೆಯನಹುದು ಶಾಶ್ವತ ಆದಿದೇವ ಸಕಲಾಗಮ ಪೂಜಿತ 9 ಪೂಜಿತ ಬ್ರಹ್ಮಾದಿಗಳ ಕೈಯ ಮೂಜಗದೊಳು ರಾಜಿಸುತಿಹ 10 ರಾಜಿಸುತಿಹ ತಾ ರಾಜರಾಜೇಂದ್ರ ಸುಜನರ ದೃಷ್ಟಿಯೊಳಿಡದಿಹ ಸಾಂದ್ರ 11 ಸಾಂದ್ರವಾಗಿಹನು ಸಾರ್ವಭೌಮ ಇಂದ್ರಾಧಿಕÀರೊಂದಿತ ಮಹಿಮ 12 ಮಹಿಮನಹುದು ಮುನಿಜನ ಮಂದಾರ ಧ್ಯಾಯಿಸುವರ ನಿಜ ಸಾಕ್ಷಾತಾರ 13 ಸಾಕ್ಷಾತಾರ ಶ್ರೀಗುರು ಜಗದೀಶ ಮೋಕ್ಷಾಧಿಕರಿಗಳಾತ್ಮ ಉಲ್ಹಾಸ 14 ಉಲ್ಹಾಸವೆ ನಿಜ ವಸ್ತುವೆ ತಾನು ಕಲ್ಪದ್ರುಮ ನಿಜ ಕಾಮಧೇನು 15 ಕಾಮಧೇನುವಾಗಿ ರಕ್ಷಿಸುವ ಬ್ರಹ್ಮನಿಷ್ಠರ ಹೃದಯದಲಿ ಭಾಸಿಸುವ 16 ಭಾಸುವ ಭಾಸ್ಕರಕೋಟಿ ಪ್ರಕಾಶ ಋಷಿ ಮುನಿಗಳ ನಿಜಮಾನಸ ಹಂಸ 17 ಹಂಸನಾಗಿ ವಿಶ್ವಂಭರಿತ ಸೂಸುವ ಸರ್ವಾಂತ್ರಲಿ ಅನಂತ 18 ಅನಂತ ಕೋಟಿ ಬ್ರಹ್ಮಾಂಡನಾಯಕ ಅನುಭವಿಗಳಿಗೆ ದೋರುವ ಕೌತುಕ 19 ಕೌತುಕದೋರಿದ ಕರುಣದಲ್ಯನಗೆ ಜೀವಪಾವನಗೈಸಿದ ಜಗದೊಳಗೆ 20 ಜಗದೊಳು ಸ್ತುತಿಸುವೆನು ಅನುದಿನ ಶ್ರೀಗುರು ದತ್ತವಧೂತ ಪೂರ್ಣ 21 ಪೂರ್ಣ ಸ್ಮರಿಸುವೆನು ಮನದೊಳು ನೋಡಿ ಪುಣ್ಯ ಪ್ರಭೆಯ ನಿಜ‌ಘನ ಒಡಗೂಡಿ22 ಒಡಗೂಡಿದ ನಿಜಾನಂದದ ಗತಿಯು ಕ್ಷಿತಿಯೊಳು ಕೊಂಡಾಡಿದ ಮಹಿಪತಿಯು 23
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದತ್ತಾತ್ರೇಯ ಸ್ವಾಮೀ ಕೃಪೆ ಮಾಡೈ ನೀಯನ್ನ ಮ್ಯಾಲ ಪ ಅನಿಮಿಷಮಾನಸ ಸಂಚಾರಾ ಅನಾಥ ಜನ ಸಂಕಟ ಪರಿಹಾರಾ ದೀನ ದಯಾಲ ರಮಾವರಾ ನೆನೆವರ ಸಹಕಾರಾ 1 ಅನಸೂಯಾಕರ ಸಂಪುಟರನ್ನಾ ಘನತರ ಚರಿತ ಪರಮ ಪಾವನ್ನಾ ಅನುಪಮ ತ್ರೈಜಗ ಜೀವನ್ನಾ ವನರುಹವದನಾ2 ಸರಸಿಜೋದ್ಭವ ನುತ ಮನ್ನಾಥಾ ವರ ನಿಗಮಾ ಗೋಚರ ಅನಂತಾ ಕರುಣಾಂಬುಧಿಯೇ ಸರ್ವಾತೀತಾ ಗುರು ಮಹಿಪತಿ ದಾತಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು