ಒಟ್ಟು 3122 ಕಡೆಗಳಲ್ಲಿ , 120 ದಾಸರು , 2350 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀರಜದಳನಯನಾ ಅನ್ಯನಲ್ಲ ನಾ ನಿನ್ನ ದಾಸನುಯಂದು ಚಿನ್ಮಯ ಮೂರುತಿ ಶ್ರೀನಿವಾಸಹರೆ ಪ ಪಂಕಜೋದ್ಭವನಾ ಪಡೆದಂಥಾ ವೆಂಕಟಗಿರಿನಿಲಯ ವೇಣುನಾದಪ್ರೀಯಾ ಬಿಂಕಾದಿ ಶರಣರ ಪೊರೆದಂಥಾ ಚಕ್ರಧರ ಶೌರಿ ಮಹಾನುಭಾವ ಬಿಂಕದಾನವರಳಿದ ಬಲವಂತಾ ಶಂಕೆಯಿಲ್ಲದೆ ನಿಮ್ಮ ಸ್ಮರಿಸುವ ದಾಸರ ಕಿಂಕರ ಕಿಂಕರ ಕಿಂಕರನೆಂದು ಇನ್ನು 1 ವಾಸುಕಿಶಯನ ಶ್ರೀ ವಸುದೇವನಂದನ ಭೂಸರವಂದ್ಯ ಪುರಾಣ ಪುರುಷ ಈಶ ಜಗತ್ರಯ -----ರಾಜವರದಾ ಭೂಸುತೋನಾಯಕ ಭೂರಮಣಾ ಸಾಸಿರನಾಮದ ಸರ್ವೇಶನೆ ಕೃಷ್ಣಾ ಭೂಸೂರ ಕೀರ್ತಿ ಪ್ರಕಾಶನಾದ ಕೇಶವ ಗೋವಿಂದ ಕರುಣಿಸಿ ಕಾಯೋ ಎನ್ನ ಪಾದ ವೈಕುಂಠಾಧೀಶ 2 ಅಂಡಜಗಮನ ಭೂಮಂಡಲ ನಾಯಕ ಪುಂಡರೀಕಾ ವರದ ಪರಮಾತ್ಮನೆ ಚಂಡ ಪ್ರಚಂಡ ವೇದಾಂತ ರಹಸ್ಯನಾದ ಉದ್ದಂಡ ದೇವಾ ಕೊಂಡಾಡುವರ ನಿಮ್ಮ ಕರುಣಿಸಿ ಕೈಹಿಡಿದು ಕಾಯ್ವ ಭಾರವುಳ್ಳ ಘನನು ನೀನೂ ಪತಿ ` ಹೆನ್ನ ವಿಠ್ಠಲ' ನಿನ್ನಂದು ಸೇರಿದ ಅವರ ಹರುಷದಿ ಸಲಹೋ ಇನ್ನೂ 3
--------------
ಹೆನ್ನೆರಂಗದಾಸರು
ನೀರಜಾಕ್ಷನೆ ಚಾರುರೂಪನೆಸೇರಿ ಚಿತ್ತದೊಳು ಮೋರೆ ತೋರಿಸೀಗಾ ಪ ಎಷ್ಟು ಭಕ್ತರಾಭೀಷ್ಟ ನೀಡಿದಿವೃಷ್ಣಿವರ್ಯನೆ ಭೆಟ್ಟಿ ಪಾಲಿಸೀಗಾ 1 ಮುಷ್ಠಿ ಅವಲಿಯಾ ಕೊಟ್ಟ ವಿಪ್ರಗೆ ಕೊಟ್ಟೆ ಸಂಪದವಾಭೀಷ್ಟದಾಯಕನೆ 2 ಇಂದಿರೇಶನೆ ಬಂಧ ಮೋಚನೆ ಗೈದು ಬಂದು ಕಾಯೋ ನಂದ ಬಾಲಕನೇ 3
--------------
ಇಂದಿರೇಶರು
ನೀರೆ ತೋರೆಲೆ ಜಗಪಾಲ ಮುಕುಂದನಾ| ಶೂಲಧರನ ಮಿತ್ರನಾ ಪ ಪಾಂಡವರಕ್ಷಕನಾ|ಪುಂಡಲೀಕಾಕ್ಷನಾ| ಚಂಡಕೋಟಿ ಪ್ರಕಾಶನಾ|| ಕುಂಡಲ ವಿಭೂಷಿತ ಗಂಡಸತ್ಕಪೋಲನಾ| ಪುಂಡಲೀಕಗತಿವರದನ ನಂದಕಿಶೋರನ1 ಪರಮ ವರಪುರಾಣ ಪುರುಷೋತ್ತಮನಾ| ಕಂಸಾಸುರ ಮರ್ದನ ಗೋಪಾಲನಾ|| ಉರಗಾರಿ ಗಮನನಾ ನಿರುಪಮ ಚರಿತನಾ| ವಾಸುದೇವ ಮುಕುಂದನಾ2 ಸನಕ ಸನಂದನಮುನಿ ಮಾನಸ ಹಂಸನಾ| ಅನುಪಮ್ಯನಂತ ಮಹಿಮಾ|| ವನರುಹ ಯೋನಿವಂದ್ಯನ ಮಧು ಸೂಧನ| ಘನಗುರು ಮಹಿಪತಿ ಸುತಪ್ರಭು ಶ್ರೀ ಕೃಷ್ಣನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರೇ ತೋರೇ ಪಯೋನಿಧಿ ವಾಸನಾ| ನೀರ ಜಾಸನಾನಂತ ಸರ್ವೇಶನಾ ಪ ಹಸ್ತ ವರದನ ಹರಿಮಧುಸೂದನ| ಹಸ್ತಿ ವಾಹಜನ ಸೂತಾದನಾ 1 ಕರಿಯೇರಿದಾತನ ಶರಕುರುವಾತನ| ಕರಿಹರ ಸಖ ಸನಾತನಾ 2 ಅನಂತ ಮಹಿಮ ಕೇಶವ ಮುಕುಂದನ| ಅನಂತ ಶಯನ ಗೋವಿಂದನಾ 3 ಮಕರ ಧ್ವಜ ಪಿತನ ಪರಮಾನಂದನ| ಮಕರ ಧ್ವಜ ಪಿತ ವಂದ್ಯನಾ4 ತಂದೆ ಮಹಿಪತಿ ನಂದನ ಜೀವನ| ಹೊಂದಿದವರ ಕಾವಾ ದೇವನಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀಲ ಗಗನ ನಿಭ ನಿರ್ಮಲಗಾತ್ರನೆ ಪ ಬಾಲಶಶಾಂಕನ ಪೋಲ್ವ ಸ್ವಾಮಿ ಬಾಲಶಶಾಂಕನ ಪೋಲ್ವ ನೀಲಕುಂತಳ ಪರಿಶೋಭಿತ ಫಾಲಕೆ ಕುಂಕುಮವ ಹಚ್ಚುವೆನು 1 ನಳಿನ ನಯನ ಕೋಮಲ ಕಮಲಾನನ ಚಲುವ ಕರಂಗಳ ತೋರೋ ಸ್ವಾಮಿ ನಳಿನವ ಪೋಲುವ ಚಲುವ ಕರಕೆ ನಾ ನರಿಸಿನ ಹಚ್ಚುವೆನೀಗ ಸ್ವಾಮಿ 2 ಅಂಬುಜನಾಭನೆ ಅಂಬುಧಿ ಗಂಭೀರ ಶಂಬರಾರಿ ಶತತೇಜ ಸ್ವಾಮಿ ಕಂಬುಕಂಧರ ತೋರು ಸಂಭ್ರಮದಲಿ ನಾ ಗಂಧವ ಹಚ್ಚುವೆನೀಗ ಸ್ವಾಮಿ 3 ಸುಮಶರ ಜನಕನೆ ಸುವಶರ ವೈರಿಯ ಕಾರ್ಮುಕ ಭಂಜಕ ಸ್ವಾಮಿ ಸಮ ವಿರಹಿತ ನಿನ್ನ ಕೊರಳಿಗ್ಹಾಕುವೆನೀಗ ಕುಸುಮ ಮಾಲೆಯ ನಾನು ಸ್ವಾಮಿ 4 ವಾರಿಧಿ ಚಂದ್ರಮನೆ ಧೀರ ವೀರ ದಿತಿಜಾರಿದೇವ ಶ್ರೀರಘುವೀರ ಶ್ರೀ ಕರಿಗಿರೀಶನೇ ನಿಮ ಗಾರತಿ ಎತ್ತುವೆ ಸ್ವಾಮಿ 5
--------------
ವರಾವಾಣಿರಾಮರಾಯದಾಸರು
ನುಡಿಯು ನುಡಿದಾ ನೆಡೆಯು ಬಾರದೂ ಜಗದೊಳಗೆ ತತ್ವದ ಪ ನುಡಿಯು ನಡಿದಾ ನೆಡೆಯು ಬಂದರೆ ಗುಡಿಗಳಿಗೆ ತಾನೋಗಲ್ಯಾತಕೆ ಪೊಡವಿಗೀಶನು ಶಿವನು ತನ್ನೊಳ ಗಡಗಿಯಿರಲಿದನರಿಯದವರಿಗೆ 1 ಎದ್ದು ಹೋಗಲು ದಾರಿಯೊಳಗೊಂದು ತಾ ಹಿಂದೆ ಮಾಡಿದ ಬುದ್ಧಿ ಕರ್ಮದಂತೆ ಮತ್ತೊಂದು ಉದ್ದವಾಗಲುಕಡೆಗೆಜಗದೊಳುಹದ್ದುಕಾಗೆಯ ಜನ್ಮವಲ್ಲದೆ ಮುದ್ದೆಮಾತೇನಯ್ಯ ಸ್ತ್ರೀಪರಸಿದ್ಧಸಾಧ್ಯರಿಗಾದ ಈ ನಿಜ2 ಆದ ಬೆಳೆಯನ್ನಳತೆ ಮಾಡೆಲೊ ಯೀ ದೇಹತತ್ವದ ಶೋಧನೆಯೊಳು ಕುಳಿತು ನೋಡೆಲೈ ವೇದಗೋಚರನಾದ ಜಗದೇಕಾದಿಗುರುವು ತುಲಸಿರಾಮನ ಪಾದ ಭಜನೆಯೊಳಿರಲು ಕಾಣುವ ಬೋಧೆಯಾತ್ಮರಿಗಾದ ಈ ನಿಜ3
--------------
ಚನ್ನಪಟ್ಟಣದ ಅಹೋಬಲದಾಸರು
ನೃತ್ಯವನವಧರಿಸು ಮಾಯೆಯ ನ್ಯತ್ಯವನವಧರಿಸು ಪ ಕೃತ್ಯವು ಶ್ರೀಹರಿ ಕಟ್ಟಳೆಯಾಗಲು ಅ.ಪ ಸ್ವರವೆನೆ ಪ್ರಣವದ ಸೌಮ್ಯದ ನಾದವು ಯೆರಡೊಂದೆಂದರೆ ಈಶನು ಪ್ರಕೃತಿಯು 1 ಮರ್ದಳವೆಂದರೆ ಮೊದಲ ಮಹತ್ತದು ಮಾನಿನಿ ಮಾಯೆಯೆಂದೆನಿಪಳು2 ರಂಗವು ನಿನ್ನಯ ರತಿಕರ ನೋಟವು ಸಂಗಿಸೆ ನಮ್ಮಯ ಶಿರದಲಿ ಕುಣಿವಳು 3 ಭಂಗಿಸಿ ಭಂಗಿಸಿ ಭವದಲಿ ಮೆಟ್ಟುತ ಹಿಂಗದ ರೀತಿಗೆ ಹೀಗಾಡುವಳು4 ಮುಂಗುಡಿಯೆಂದರೆ ಮೊದಲಹಂಕಾರವು ತೊಂಗುತ ಭೂತಂಗಳ ಸಾಗಿಪುದು 5 ಮೊದಲಿನ ಕೊನೆಗಳು ಮಾತ್ರೆಗಳೈದವು ವೊದಗಿದ ಭೂತಗಳೊಡಲಾಗುವವು 6 ನಡದೀ ಕೊನೆಗಳು ನೂಕುತ ಬೆಳೆಯಲು ನೆಡುವವು ವೃಕ್ಷದ ನಿಡುಬೇರುಗಳು 7 ಒಡೆದಾ ಭೂತಗಳೊಂದೊಂದೈದವು ಬಿಡದವ ಬೆರಸುತ ಬಹುವಾಗುವವು 8 ಇಂತೀ ಲೋಕಗಳೀರೇಳೆಂತಲು ನಿಂತೇ ಕುಣಿವಳು ನಿನ್ನಯ ಮಾಯೆಯು 9 ಆಗಲು ಪ್ರಾಣಿಗಳಮಿತಗಳಿವರೊಳು ಭೋಗದ ಬಯಕೆಯೆ ಬಹು ರಾಗಗಳು10 ಲಯೆಗಳು ಕ್ರಿಯೆಗಳು ಲೋಕಗಳತಿಗಳುನಿಯಿಮಿಸಿ ತಿರುಪತಿ ನಾಯಕ ನಿಂತವು11
--------------
ತಿಮ್ಮಪ್ಪದಾಸರು
ನೆಚ್ಚದಿರು ಸಂಸಾರ ಕಾಡಗಿಚ್ಚಿನಂದದಿ ದಹಿಸುವದತಿ ಘೋರ ಪ ಕ್ಷುದ್ರ ಜನರ ಸಂಗತ್ಯಜಿಸೊ | ಸದಾ ಮಧ್ವಸುಶಾಸ್ತ್ರ ಕೇಳಿ ನೀ ಗ್ರಹಿಸೊ ಸದ್ಗುರುಗಳ ಪಾದಾಶ್ರೈಸೊ | ನೀನೆ ಉದ್ಧಾರಕನೆಂದು ಹರಿಯನ್ನೆ ಬಯಸೊ 1 ನಾನೆಂಬೊ ಅಹಂಕಾರಸಲ್ಲ | ನಿನ್ನ ಮಾನಿನಿ ಸುತರು ಸಂಗಡ ಬಾಹೋರಿಲ್ಲ ಈ ನುಡಿ ದಿಟ ಸಟಿಯಲ್ಲ | ಹೀಗೆ | ನೀನಾಚರಿಸಲು ಒಲಿವ ಶ್ರೀನಲ್ಲ2 ಆಶಾಕ್ರೋಧಂಗಳ ಕೀಳೊ | ಹರಿ | ದಾಸರ ದಾಸರ ದಾಸನೆಂದ್ಹೇಳೊ || ದೋಷಕ್ಕೆ ಅಂಜಿ ನೀ ಬಾಳೊ | ಎಲ್ಲ | ಈಶನಾಧೀಶವೆಂಬುದೆ ಮುಕ್ತಿ | ಕೇಳೋ 3 ಹರಿವಾಸರುಪವಾಸ ಮಾಡೊ | ಇರುಳು ಜಾಗರ ಮರಿಬ್ಯಾಡೊ ಮರುದಿನ ನಿದ್ರೆಯ ದೂಡೊ | ಇಂತು ಪರಿಯಲ್ಲಿ ನಡೆದರೆ ನಿನಗಿಲ್ಲ | ಕೇಡು 4 ಇಂದ್ರಿಯಗಳ ನಿಗ್ರಹಿಸೊ | ಮನಿಗೆ | ಬಂದ ಭೂಸುರರಿಗೆ ವಂದಿಸಿ | ಉಣಿಸೊ ಕುಂದು ನಿಂದೆಗಳೆಲ್ಲ ಸಹಿಸೊ | ಶಾಮ ಸುಂದರ ವಿಠಲನ್ನ ನೀ ಪೊಂದಿ ಸುಖಿಸೊ 5
--------------
ಶಾಮಸುಂದರ ವಿಠಲ
ನೆಚ್ಚಬ್ಯಾಡ ನೀರುಗುಳ್ಳೆಗೆ ಸರಿಯಾದ ಕುತ್ಸಿತ ದೇಹವೆಂದಿಗು ಸ್ಥಿರವಲ್ಲ ನ- ಮ್ಮಚ್ಚುತನಾನಂತನ ನೆನವುತ ಅನುಗಾಲ ಸ್ವಚ್ಛನಾಗಲು ಹರಿ ಮೆಚ್ಚುವನು ಪ. ಸ್ವಾತಂತ್ರ್ಯ ಲೇಶವಾದರು ನಿನಗಿಲ್ಲದೆ ಪಾತಕ ಫಲಕಿನ್ನು ಗುರಿಯಾದಿಯಲ್ಲದೆ ಯಾತರ ಸುಖವೆಂದೀ ಸಂಸಾರ ಕೂಪದಿ ಪ್ರೀತಿ ಬಡುವಿ ಪಂಚಬಂಧದಲಿ ವಾತ ಪಿತ್ತ ಶ್ಲೇಷ್ಮ ಪೂಯ ಸೃಕ್ಪೂರಿತ ಘಾತವಾಗುವುದೊಂದು ನಿಮಿಷಾರ್ಧದಲಿ ಜಗ- ನ್ನಾಥ ನಂಬಿದರೆಂದಿಗು ಪದಪಂಕ- ಜಾತಪತ್ರದ ನೆರಳಿರಿಸುವನು 1 ದೇಹವೆ ಸ್ಥಿರವಿಲ್ಲವಾದ ಮೇಲಿದರ ಸ- ನ್ನಾಹವಾಗಿರುವದನೇನೆಂದು ಗ್ರಹಿಸುವಿ ಗೇಹಧನಾಪತ್ಯ ಸ್ನೇಹವೆಲ್ಲವು ವ್ಯರ್ಥ ಮೋಹವಲ್ಲದೆ ನಿಶ್ಚಯವಲ್ಲವು ಐಹಿಕಾಮುಷ್ಮಿಕವೆಂಬ ಸಕಲ ಸುಖ ದೋಹನ ಧೇನು ಸರ್ವೇಶ್ವರ ಹರಿಯ ಸ- ಮಾಹಿತ ಮನದಿಂದ ಭಜಿಸೆ ನಿನ್ನನು ಪಕ್ಷಿ ವಾಹ ಕೈ ಬಿಡದೆ ಕಾಪಾಡುವನು 2 ಒಂದು ದಿವಸ ನೀರೊಳದ್ದದಿದ್ದರೆ ದು- ರ್ಗಂಧ ಭೂಯಿಷ್ಠವು ಸಹಿಸಲಸಾಧ್ಯವು ಹಿಂದಿನ ಕರ್ಮಾನುಬಂಧವು ತಿಳಿಯದು ಮುಂದಿನ ಹೊಂದಿಕೆ ಒಂದಾದರು ಇಂದಿರಾವರ ವೆಂಕಟೇಶನ ಪಾದಾರ- ವಿಂದ ಧ್ಯಾನಗಳೆಂಬದೊಂದೆ ಪರಮಸುಖ ವೆಂದು ತಿಳಿದು ಭಕ್ತಿಯಿಂದ ಭಜಿಸು ನಮ್ಮ ತಂದೆ ಬಿಡದೆ ಕಾವನೆಂದೆಂದಿಗು 3
--------------
ತುಪಾಕಿ ವೆಂಕಟರಮಣಾಚಾರ್ಯ
ನೆನವಿರೆ ಸಾಕೆನಗೆ ಶ್ರೀಶನ ನೆನವಿರೆ ಸಾಕೆನಗೆ ಪ. ಘನದುರಿತ ಮಹೋದಯವ ನದಿಯ ದಾಟಲು ನೆನವಿರೆ ಸಾಕೆನಗೆ ಅ.ಪ. ಶ್ರೀ ಮಹೀಶ ಸಕಲಾಮರಗಣಸುತ ಕಾಮದ ಕೈರವದಳಧಾಮ ರಾಮಚಂದ್ರ ಸರ್ವಾಮಯ ಹರನಿ- ಸ್ಸೀಮಮಹಿಮ ನಿ:ಶ್ಯಾಮಲ ಮೂರ್ತಿಯ 1 ನೋಡುವ ಕರುಣ ಕಟಾಕ್ಷದಿ ಸ್ಮರಣೆಯ ಮಾಡುವ ಜನರನು ಮಮತೆಯಲಿ ಪಾಡಿ ಪೊಗಳಿ ಕುಣಿದಾಡಲು ತನ್ನನೆ ನೀಡಿ ನಿತ್ಯದಲಿ ನಲಿದಾಡುವ ಕರುಣಿಯ 2 ಮಂಗಲಮೋದತರಂಗ ಮಹೋದಧಿ ಭಂಗುರ ಭವಭಯ ಭಂಗದನ ಇಂಗಿತದಾವನ ತುಂಗ ಶೇಷಗಿರಿ ಶೃಂಗವಾಸ ಕನಕಾಂಗದ ಮಕುಟನ3
--------------
ತುಪಾಕಿ ವೆಂಕಟರಮಣಾಚಾರ್ಯ
ನೆನಿಯೊ ಮನದಲಿ ಮನದಭಿಮಾನಿಯನ ಪ ಭವಭಯ ನಾಶನಾ ಪಾರ್ವತಿ ರಮಣನ ಅ.ಪ ಗಂಗೆಯ ಪೊತ್ತ ಘನ ಗಂಭೀರನಾ 1 ಇಂದು ಸುಜನ ರಕ್ಷಕ ಕರುಣಸಾಗರನಾ ---- 2 'ಹೊನ್ನ ವಿಠ್ಠಲ’ ಪ್ರೀಯ ಮಹಾದೇವನ 3
--------------
ಹೆನ್ನೆರಂಗದಾಸರು
ನೆನೆಮನವನುದಿನ ಹನುಮದೀಶನ ಕನಸಿನಲಿ ತನುಸುಖವನು ಬಯಸದೆ ನಿ ಪ. ಮನಸಿಜ ಪಿತನನೆ ನೆನೆನೆನೆದ್ಹಿಗ್ಗುತ ನಿನ ಹೃದಯದಲ್ಹರಿಯನು ನಿಲಿಸುತಲೆ ತನುಮನವರ್ಪಿಸೆ ಜನುಮ ಜನುಮದಘ ವನು ಕಳೆವನು ರಾಮನುಮಾನವೇಕೆ 1 ಆರು ಅರಿಯದ ತೋರಿ ಭಕ್ತಿಯೇ ಬಾರಿ ಪಾಶದಿ ಕಟ್ಟಿಹ ಹನುಮ ವಾರಿಜನಾಭನು ಹಿಗ್ಗಿ ನಿಲುತಲೆ ಚಾರುಸೇವೆಗೆ ಬಹೆ ಎನೆ ರಾಮನ ನೆನೆ2 ಕಲ್ಲಾಗಿದ್ದ ಅಹಲ್ಯೆಯ ರಾಮನು ನಲ್ಲೆಯ ಮಾಡಿದನರಿಯೆಯ ಮನವೆ ಚೆಲ್ಲುತ ಕರುಣವ ಶಬರಿಯ ಎಂಜಲನುಂಡ ರಮಾ ವಲ್ಲಭ ಶ್ರೀ ಶ್ರೀನಿವಾಸ ಕರುಣಿಯೊ ನೆನೆ 3
--------------
ಸರಸ್ವತಿ ಬಾಯಿ
ನೆನೆಮನವೇ ನಾರಾಯಣ ನಾಮವ ಅನುದಿನ ಧ್ಯಾನಿಸು ಗುರಮುಖದಂತೆ ಪ ಅನುಸಂಧಿಸುತಲಿ ಅವನಡಿ ಪಿಡಿಯುತ ಕನಿಕರದಿಂ ಕಾಯುವ ಕೈ ಹಿಡಿದು ಅ.ಪ ಅಡಿಗಡಿಗೊಂದೊಂದು ಯೋಚನೆ ಗೈವೆವೇ ಎಡಹಿ ಮುಗ್ಗುರಿಸುವೆ ಸುಡುಗಾಡೊಳಗೆ ಕಡಿದೋಡಿಸುತಲಿ ಪಾಪದ ಪಡೆಯಂ ಕಡೆಹಾಯಿಸುವನು ಕಷ್ಟದ ಕಡಲಿಂ 1 ತಮವೇ ತಾನು ಎಂಬ ಮೋಹದಿ ಕನವರಿಸುತ ಬಹು ಸಾಹಸ ತೋರ್ವೈ ಮನದೊಡೆ ಜೀವನು ಶರೀರವನು ಬಿಡೆ ಅನುಮತಿಸುತ್ತಲದ ಸುಟ್ಟು ಬಿಡುವರು 2 ತೃಷೆ ಜ್ವರ ರೋಗಗಳೊಳು ತಣಿವಂ ಕಾಣದೆ ತೊಳಲುತ್ತಿರುವೈ ಘನತರದಾಯುವು ಗತಿಸದ ಮೊದಲೆ ರಿನಕರನೊಳಗಿಹ ಶ್ರೀಶನ ನೋಡೈ 3 ಅನುಮಾನನ್ಯ ಆಶ್ರಯ ಬಿಡುಬಿಡು ತನುಮನ ತೊರೆಯನು ಆಪದ್ಭಂದು ಕೊನೆಗಳಿಗೆಯೊಳು ಕಡೆ ನುಡಿನುಡಿದು ಸನುಮತದಿಂ ಸಿರಿಯರಸನ ಪದವುಗು 4 ಸುಣ್ಣವ ತಿಂದ ತಿಮ್ಮಣನ ತೆರದಿ ನಿನ್ನ ಸ್ಥಿತಿಯ ಅನ್ಯಾಯವು ಸಹಜ ಕರ್ಮ ಬೆನ್ನನು ಬಿಡದಿದೆ ಇನ್ನು ಹೆಜ್ಜಾಜಿ ಶ್ರೀಶನ ಮರೆಹೊಗು 5
--------------
ಶಾಮಶರ್ಮರು
ನೆನೆಯಲಳವಲ್ಲಗಣಿತ ಜನುಮ (ಪ) ಕುಣಿಕೆಯೊಳಗೆ ಪೋಣಿಸಿ ನೋಯಿಸುತ ಕುಣಿಸಿ ಕೊಲ್ಲುದುಚಿತವೇ ಪೊರೆಯೊ ಸತತದಲಿ 1 ಶ್ವಾನ ಸೂಕರ ಕ್ರಿಮಿಯ ಕೀಟಕ ತೊಳಲಿ ಬಳಲುತ ನಾ ಹಾನಿಬಟ್ಟೆನ್ನದೇನು ತಪ್ಪಿರೆ ಜಾನಕೀಶನೆ ನೀನೆ ಕ್ಷಮೆಮಾಡಿ ಪೊರೆಯೊ ಸತತದಲಿ 2 ತುಂಬಿ ಮಾಯೆಯಿಂ ನಂದಿಪೋಗ್ವುದು ನಿನ್ನ ಮಾಯಾಮಹಿಮೆದೆಲ್ಲವು ನಿನ್ನ ಹೊರತಿನ್ನನ್ಯವೊಂದಿಲ್ಲ ಎನ್ನನ್ಯಾತಕೆ ಬನ್ನಬಡಿಸುವಿ ಭಿನ್ನವಿಲ್ಲದೆ ನಿನ್ನ ನಂಬಿದೆ ರಕ್ಷಿಸು ಪಿಡಿದು ಸತತದಲಿ 3
--------------
ರಾಮದಾಸರು
ನೆನೆಸಿ ನೆನೆಸಿ ನಗುವರಮ್ಮಯ್ಯಮನಸಿಜನಯ್ಯನ ಮಿತ್ರಿ ಧೇನಿಸಿಧೇನಿಸಿ ಹೇಳಿ ಬರೆಸಿದ ಚಿತ್ತಾರವ ಕಂಡು ನೆನೆಸಿ ನೆನೆಸಿ ನಗುವರಮ್ಮ ಪ. ಅತ್ತಿಗೆಯರು ಕುಳಿತಲ್ಲೆ ಅರ್ಥಿಯ ನೋಡುವ ಬರೆಬತ್ತಲೆ ಗೊಂಬೆ ಬಗೆ ಬಗೆ ಬತ್ತಲೆ ಗೊಂಬೆ ಬಗೆ ಬಗೆ ಕುಶಲರ್ಥಚಿತ್ತಾರವ ಯಾರು ಬರೆಸಿಹರು 1 ಜಾತಿ ಹಂಸ ಪಕ್ಷಿಗಳು ಮಾತಿನ ಗಿಳಿವಿಂಡುನೂತನ ನವಿಲು ಬರೆಸಿಲ್ಲನೂತನ ನವಿಲು ಪಕ್ಷಿ ಬರೆಸಿಲ್ಲಹನುಮನೆಂಬೊ ಕೋತಿ ಯಾಕೆ ಬರೆಸಿಹರು2 ಭೇರುಂಡ ಮೃಗವ ತಿದ್ದಿ ತಾನುಬರೆಸಿಲ್ಲ ಬಿದ್ದು ಜನರೆಲ್ಲ ನಗುವಂತೆ ಬಿದ್ದು ಜನರೆಲ್ಲ ನಗುವಂತೆ ತಾನುಮುದಿಹದ್ದ ಯಾಕೆ ಬರೆಸಿಹರು 3 ಎಂಟು ದಿಕ್ಕಿಗೊಪ್ಪೊ ಬಂಟರ ಬರೆಸಿಲ್ಲಕುಂಟ ಸಾರಥಿಯ ವಶವಾಗಿ ಕುಂಟ ಸಾರಥಿಯ ವಶವಾಗಿ ತಿರುಗಾಡುವ ಸೊಟ್ಟ ಸೂರ್ಯನ ಚಿತ್ತಾರ ಬರೆಸಿಹರು 4 ಸುಂದರ ಸುಂದರ ವೃಂದಾರಕರನೆಲ್ಲ ಬಿಟ್ಟುಬಂದ ಜನರೆಲ್ಲ ನಗುವಂತೆ ಬಂದ ಜನರೆಲ್ಲ ನಗುವಂತೆ ಕಳೆಗುಂದಿದಚಂದ್ರನ ಚಿತ್ತಾರ ಬರೆಸಿಹರು 5 ರೂಢಿಗೊಡೆಯನ ಮನೆಯ ಗೋಡೆ ಮ್ಯಾಲಿನ ಗೊಂಬೆ ನೋಡಿದವರೆಲ್ಲ ನಗುವಂತೆನೋಡಿದವರೆಲ್ಲ ನಗುವಂತೆ ತಾತನ ಕೋಡು ಇಲ್ಯಾಕೆ ಬರೆಸಿಹರು 6 ಚೆನ್ನ ರಾಮೇಶನ ಹೊನ್ನ ಗೋಡೆಯ ಮ್ಯಾಲೆ ಮುನ್ನೆ ಜನರೆಲ್ಲ ನಗುವಂತೆ ಮುನ್ನೆ ಜನರೆಲ್ಲ ನಗುವಂತೆ ರುಗ್ಮನ ಪನ್ನಿ ವಿಸ್ತಾರ ಬರೆಸಿಹರು ಚಿತ್ತಾರ 7
--------------
ಗಲಗಲಿಅವ್ವನವರು