ಒಟ್ಟು 1315 ಕಡೆಗಳಲ್ಲಿ , 98 ದಾಸರು , 1009 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮ ರಾಮ ರಾಮ ಸೀತಾ ರಾಮ ಎನ್ನಿರೋ ಪ.ಇಂದ್ರಿಯಂಗಳೆಲ್ಲ ಕೂಡಿಬಂದು ತನುವ ಮುಸುಕಲುಸಿಂಧು ಸುತೆಯ ಪತಿಯಧ್ಯಾನಎಂದಿಗಲ್ಲಿ ದೊರೆಯದೊ 1ಭರದಿ ಯಮನ ಭಟರಾಗಲೆಹೊರಡು ಎಂದು ಮೆಟ್ಟಿ ತುಳಿಯೆಕೊರಳಿಗಾತ್ಮ ಸೇರಿದಾಗಹರಿಯ ಧ್ಯಾನ ದೊರೆಯದೊ 2ದೋಷಕ್ಲೇಶ - ದುಃಖವೆಂಬಶ್ಲೇಷ್ಮದಲ್ಲಿ ಸಿಕ್ಕಿ ಇರಲುವಾಸುದೇವ ಕೃಷ್ಣನೆಂಬುದಾಸಮಯಕ್ಕೆ ದೊರೆಯದೊ 3ಸಿಂಗಾರವಾದ ದೇಹವೆಲ್ಲಅಂಗವಳಿದು ಮುರಿದು ಬೀಳೆ ||ಅಂಗಳಿಗಾತ್ಮ ಸೇರಿದಾಗರಂಗನ ಧ್ಯಾನವು ದೊರೆಯದೊ 4ಕೆಟ್ಟ ಕೆಟ್ಟರಲ್ಲೊ ಬರಿದೆಕಟ್ಟ ಕಡೆಯಲ್ಲಿಕಾಯಬಿಟ್ಟು ಹೋಗುವಾಗಪುರಂದರವಿಠಲ ಧ್ಯಾನ ದೊರೆಯದೊ 5
--------------
ಪುರಂದರದಾಸರು
ರಾಮನೆನ್ನಿ ರಾಮನೆನ್ನಿವ್ಯೋಮಕೇಶಗೆ ದಿವ್ಯನಾಮಾಮೃತವಿತ್ತ ಪ.ಪಾತಕವನು ಮಾಡಿ ಪಾತಕರೊಡನಾಡಿಸೂತಕಾಗಿ ವಿಪ್ರಘಾತಕಾಗಿಜಾತಿಬಾಹಿರನಾಗಿ ಧಾತುಗೆಟ್ಟವಗೆ ಶ್ರೀಸೀತಾಕಾಂತನ ನಾಮಪೂತಕಾರಣ 1ಕದ್ದು ಬಂಗಾರವ ಮೆದ್ದು ಅಭಕ್ಷಣಒದ್ದು ದುರ್ಬಲರ ಸೊಕ್ಕಿದ್ದುನಿತ್ಯಶ್ರದ್ಧಾವಿಹೀನನಾದ ಮದÀ್ಯಪ್ರಾಶನಿಯಾದಶುದ್ಧಾತ್ಮಕನಿಗೆ ಶುದ್ಧಕರನು ಮೂಲ 2ಪರಪತ್ನಿ ಗಮಿಸಿ ಭೂಸುರವೃತ್ತಿ ಭೇದಿಸಿಪರತಾಪೇಕ್ಷಿಸದೆ ಪಾಮರನಾಗಿಹನರಗೆ ಪಶ್ಚಾತ್ತಾಪ ಬರಿಸುವ ಪ್ರಸನ್ವೆಂಕಟರಸನೆ ತುದಿಯಲಿಹೊರೆವಬಿಡದೆ ರಘು3
--------------
ಪ್ರಸನ್ನವೆಂಕಟದಾಸರು
ಲಿಂಗ ಕಟ್ಟುವೆ ಯಾಕೋ ನೀ ಲಿಂಗಲಿಂಗಾಂಗವೆಲ್ಲವು ಸರ್ವಾಂಗ ಲಿಂಗಪಉಳಿಮುಟ್ಟದ ಲಿಂಗ, ಊರು ಮುಟ್ಟದ ಲಿಂಗತಿಳಿಯೆ ತಂದೆ ತಾಯಿಗಳಿಂದಾಗದ ಲಿಂಗಕುಲಕರ್ಣಿ ಕಂಚುಗಾರರಲಿ ಹುಟ್ಟದ ಲಿಂಗನಲಿಯತು ತನ್ನಿಂ ತಾನಾದ ಲಿಂಗ1ಏಕವಾಗಿಹ ಲಿಂಗ ಎಲ್ಲವು ತಾನಾದ ಲಿಂಗಸಾಕಾರವಾಗಿ ಸಂಚರಿಸುತಿರುವ ಲಿಂಗನಾಲ್ಕು ತನುವಿಗೆ ನಿಲುಕದ ಲಿಂಗಬೇಕೆಂದ ರೂಪಿಗೆ ಬಂದಂತ ಲಿಂಗ2ಏನು ತೋರದ ಲಿಂಗ ಎಡೆದೆರೆಪಿಲ್ಲದ ಲಿಂಗಧ್ಯಾನಕೆ ಮೌನಕೆ ನಿಲುಕದ ಲಿಂಗಜ್ಞಾನ ಮೂರುತಿ ಚಿದಾನಂದ ಲಿಂಗತಾನೆ ವಿಲಾಸದಿ ಬಂದಂಥ ಲಿಂಗ3
--------------
ಚಿದಾನಂದ ಅವಧೂತರು
ವಾರಣವದನ ತ್ರೈಲೋಕ್ಯಸುಮೋಹನ ವಾರಣವದನ ಪ.ವಾರಿಜಾಕ್ಷ ವರಗುಣಾಕರವಾರಿಜಾಕ್ಷಿ ವರದಾಯಕಸನ್ನುತನಾರದಾದಿ ಮುನಿವಂದಿತ ಪದಯುಗ ಅ.ಪ.ಸುಂದರಾಂಗ ಸುಕಲಾನ್ವಿತ ನಿಭಚರಣಕಟಿಶೋಭಿತ ವ್ಯಾಳಸ-ಬಂಧನಾಬ್ಧಿ ಶತಕೋಟಿಸದೃಶ ಕಿರಣಚಂದನಾಂಗಾರ್ಚಿತ ಸುಮನೋಹರಮಂದಹಾಸ ಮಹಿಮಾಂಬುಧಿಚಂದಿರ 1ಕಂಬುಗ್ರೀವಕಮನೀಯಕರಾಂಬುರುಹಪಾಶಾಂಕುಶಧರವರಶಂಬರಾರಿಜಿತುತನಯ ಮಧುರಗೇಹಜಂಭಭೇದಿವಂದಿತ ಅತ್ರಿವಂದಿತಲಂಬೋದರ ವಿಘ್ನಾಂಬುಧಿಕುಂಭಜ2ಚಾರುಭಾರ ಕನ್ಯಾಪುರವರನಿಲಯಮೃಕಂಡುಜದ ಮುನಿವರಸಾರಮಂತ್ರಸ್ಥಾಪಿತ ಮಂಗಲ ಕೆರೆಯವರಕಪಿತ್ಥಫಲೋರಸಭುಂಜಿತಧೀರ ಲಕ್ಷ್ಮೀ ನಾರಾಯಣಸಖಸುತ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವಾರಿಜನಾಭನ ಕರುಣವೆ ಸ್ಥಿರ ಸಂಸಾರ್ಯೆರವು ಕೇಳಾತ್ಮಜಾರುತದಾಯು ದೂರದ ಮುಕುತಿಯದಾರಿಯ ಪಾಥೇಯ್ಯೆಲ್ಲಾತ್ಮ ಪ.ಧರ್ಮದ ಸರಕಿಲ್ಲದವನೆಂದು ಬೇಗ್ಯಮಧರ್ಮ ಭಟರು ಬಂದರಲ್ಲೊಚರ್ಮದ ಮನೆ ಬಿಡಿಸಿದರು ಮುಟ್ಟಲು ನೋವಕರ್ಮಯಾತನೆ ಕೊಟ್ಟರಲ್ಲೊಹಮ್ರ್ಯನಿಕೇತನ ವೃತ್ತಿಕ್ಷೇತ್ರವನು ಅಧರ್ಮಿಗಳಗಲಿಪರಲ್ಲೊಮರ್ಮವರಿತು ತ್ರಾಟಿಸುವಾಗ ಶ್ರೀವಿಶ್ವಕರ್ಮನ ಪೂಜೆ ಹೋಯಿತೆಲ್ಲೊ 1ಹೆಡಗೈಯಕಟ್ಟಿಪರಿಘದೊಳು ಬಡಿವಾಗಮಡದಿ ಮಕ್ಕಳ ಸಹಾಯವೆಲ್ಲೊಒಡೆಯ ದಮ್ಮಯ್ಯ ನಮ್ಮಯ್ಯನೆಂದರೆಕಾಲಹಿಡಿದರೆ ಕೊಡಹಿದರಲ್ಲೊಸುಡುವ ಮಳಲು ಹುಡಿ ಕಲ್ಮುಳ್ಳೊಳೆಳೆವಾಗಹಿಡದೇಜಿ ಕೊಂಬುಕಾಳೆಲ್ಲೊಪೊಡವಿಲಿ ಬಂದಾಗ ಹರಿಸೇವೆ ಮಾಡದೆಕಡುಹುಂಟಾದರೆ ತೋರದೆಲ್ಲೊ 2ಕೀವು ರುಧಿರವಿಟ್ಟ ಕುಂಡದಿ ಮುಣುಗುವಾಗ್ಹ್ಯಾವಿನ ಮಾತೇನಾಯಿತಣ್ಣಸಾವುತೀನವ್ವಪ್ಪಾ ಮೊರೆಯ ಕೇಳೆಂದರೆಆವಾಗಬಾಧೆ ಕಾಣಣ್ಣಆವೈವಸ್ವತದಂಡ ಕೊಟ್ಟು ಬೊಗಳೆಂಬಾಗಚಾರ್ವಾಕತನವೆಲ್ಲಣ್ಣಆ ವಾಸುದೇವನ ಭಟಸಂಗ ನಿನಗೀಗ ವೈರ ಆಗೆಲ್ಲಿದಣ್ಣ 3ನಾಲಿಗೊಣಗಿ ನೀರು ಕೂಳೆಂದು ಅಳುವಾಗಹಾಲ ಶಾಲ್ಯೋದನವೆಲ್ಲೊಮ್ಯಾಲೆ ಮ್ಯಾಲ್ವೈತರಣಿ ಸ್ನಾನವ ಮಾಡುವಕಾಲಕೆ ಅಭ್ಯಂಗನವೆಲ್ಲೊಕಾಲನ ದೂತರ್ಗೆ ಕೊಟ್ಟುಳಿವೆನೆಂದರೆಹೂಳಿದ ಧನ ದೂರಾಯಿತಲ್ಲೊಕಾಲಕಾಲಕೆ ದ್ವಿಜಪಂಕ್ತಿಭೋಜನಸುಖವ್ಯಾಳೆ ತಪ್ಪಿತನ್ನವೆಲ್ಲೊ 4ಕಷ್ಟಿಸಿ ಬಳಲುವೆ ಹಾಹಾಯೆಂದಳಲುವೆಇಷ್ಟನೆಂಟರು ಹೋದರೆತ್ತಮುಷ್ಟಿಕುಠಾರಪ್ರಹಾರನೋಡುನಿನ್ನವರಿಷ್ಟತನವು ನಿಂತಿತೆತ್ತಶಿಷ್ಟರ ನೋಡದೆ ಸತ್ಕಾರ ಮಾಡದೆನಿಷ್ಠುರ ನುಡಿದೆ ಪ್ರಮತ್ತಕೃಷ್ಣ ನಮೊ ಎಂದು ಕಡೆಗಾಣಲರಿಯೆ ಎಳ್ಳಷ್ಟು ಪುಣ್ಯವ ಕಾಣೆನೆತ್ತ 5ಕಂಗೆಟ್ಟು ತಕ್ರನ್ನೆ ಕಾಸಿ ಸೀಸ್ಯೆರೆವಾಗಅಂಗಣದ ಪಶು ಬಹುದೂರಕೆಂಗೆಂಡಗಂಭವಪ್ಪಿಸುವರು ನಿನ್ನ ಪರಾಂಗನೆಭೋಗಿಚದುರಅಂಗ ಶೃಂಗಾರದ ಕೊನಬುಗಾರ ನಿನಗ್ಹಿಂಗುವದೆ ಯಮದ್ವಾರಮಂಗಳ ಮಹಿಮ ಮುಕುಂದ ಮುರಾರಿ ಶ್ರೀರಂಗನ ಭಕುತಿವಿದೂರ 6ಸುಟ್ಟರೆ ಹಿಡಿಬೂದಿ ಕೆಟ್ಟರೆ ಕ್ರಿಮಿಕಾಯಇಟ್ಟರಿರದು ವಾಯುವಿರದೆಹುಟ್ಟಿ ಸುಜನ್ಮದಿ ಜಾಣರಾಗದೆಬುಧರಟ್ಟುವರೆ ದಿವಸ ಬರಿದೆಇಟ್ಟಣಿಸಿದ ಭವಗತ ಸುಖದು:ಖವುಂಡುಟ್ಟು ರಾಮನ ಮನವಿರದೆಕಟ್ಟಕಡೆಲಿ ನರಕವನುಂಬೋದುಚಿತಲ್ಲದಿಟ್ಟನಾಗು ಮಾಯೆಯಜರಿದು7ನಿತ್ಯನೈಮಿತ್ಯಕಾಮ್ಯಾದಿ ಸತ್ಕರ್ಮವಮತ್ತೆ ತಿಳಿದು ನಡೆ ಆತ್ಮಹತ್ಯವಸತ್ಯ ಅನ್ಯವಧೂಜನಸಖ್ಯಪರವಿತ್ತದಂಜಿಕೆ ಇರಲ್ಯಾತ್ಮಕರ್ತಮೂರವತಾರಿ ಪೂರ್ಣ ಬೋಧಾಚಾರ್ಯರಭೃತ್ಯನಾಗಿ ಬಾಳೊ ಆತ್ಮಎತ್ತೆತ್ತ ನೋಡಲು ಬೆನ್ನಬಿಡದೆಕಾವಪ್ರತ್ಯಕ್ಷನಾಗಿ ಪರಮಾತ್ಮ 8ಮಂಗಳಾತ್ಮರಿಗೆಅಹರ್ನಿಶಿಶ್ರೀವರಅಂಗಜಜನಕನೆಚ್ಚರಿಕೆಸಂಗಡಿಸಿದ ವಿಷಯಂಗಳಿದ್ದರೇನುತಂಗಳ ಅನ್ನದೋಕರಿಕೆಹಿಂಗದೆ ವರಸಂಗ ಮಾಡಿದರೊಯಿವರುಮಂಗಳಾತ್ಮಕನಿದ್ದ ಪುರಕೆಬಂಗಾರ ಮನೆಯ ಪ್ರಸನ್ವೆಂಕಟೇಶನಡಿಂಗರರಿಗೆ ನರ್ಕಸರ್ಕೆ 9
--------------
ಪ್ರಸನ್ನವೆಂಕಟದಾಸರು
ವಿಠ್ಠಲ ದೇವರುನಮೋಯೆಂಬೆ ನಮೋಯೆಂಬೆನಮ್ಮಯ ವಿಠಲಗೆ ಪಕಾಷ್ಟಹಾರನ ಇಷ್ಟಮಿತ್ರನದಿಟ್ಟಪುತ್ರನ ಮನದಿಷ್ಟವಿತ್ತವಗೆ 1ಉತ್ತರಿತ್ತರಿ ತಮ್ಮ ಕತ್ತಲಮನೆಯೊಳುನೆತ್ತಿಹೊಡೆಸಿದಸ್ತ್ರೀನೆತ್ತಿ ಸಲಹಿದಗೆ2ಮಂಗಲಮುನಿಯಿಂದ ಭಂಗಪಟ್ಟವನಅಂಗಜನಶ್ವ ಶೃಂಗಾರದ್ಹಿಡಿದಗೆ 3ಕುರುಪನನುಜೆಯ ಪರಪತಿಶಿವತರಣಿಯಿದಿರಿನೋಳ್ ತರಿಸಿದ ಮಹಿಮಗೆ 4ಭಕ್ತವತ್ಸಲ ಮುಕ್ತಿದಾಯಕಭಕ್ತರ ಇಷ್ಟವ ಪೂರ್ತಿಪ ಶ್ರೀರಾಮಗೆ 5
--------------
ರಾಮದಾಸರು
ವಿವೇಕವೆಂಬ ಘೌಜದು ಮುತ್ತಲುಉಳಿವು ಅಸುರರಿಗಿಲ್ಲಾಯ್ತುಸವರಿಯೆ ಹೋದರು ದುಷ್ಟರು ನುಣ್ಣಗೆಸಂತೋಷವು ನಗರಕ್ಕಾಯ್ತುಪಭೂತ ದಯನು ಶಾಂತಾತ್ಮ ವಿಚಾರನುಬ್ರಹ್ಮನಿಷ್ಠವಿರತೆನಿಸುವನುಖ್ಯಾತಿಗೆ ಬಂದಿಹ ಹಿರಿಯ ವಜೀರರುಕವಿದರು ತನುಪುರದುರ್ಗವನು1ಧಮಧಮ ನಾದದ ನಗಾರಿ ಬಾರಿಸೆದಿಂಡೆಯರಸುಗಳು ನೆಲಕೊರಗೆಅಮಮ ಅಡರಿಯೆ ದುರ್ಗವ ಕೊಂಡರುಅರೆದರು ದುಷ್ಟರು ಊರೊಳಗೆ2ಕಡಿದರು ಕಾಮನ ಹೊಡೆದರು ಡಂಭನಕೆಡಹಿಯೆ ಕೊಯ್ದರು ಚಂಚಲನಹುಡಿಮಾಡಿದರು ಅಹಂಕಾರ ಕ್ರೋಧರಹುರಿದರು ಖಳರು ಬೀಜವನು3ಆದನು ಪುರಕೆ ವಿವೇಕ ಮಂತ್ರಿಯುಆದನು ವಿರತಿಯು ದಳವಾಯಿಆದನು ಶಾಂತನು ಸಮಸ್ತ ವೃತ್ತಿಗೆಆಯಿತು ನಗರಕೆ ಅದು ಹಾಯಿ4ಜೀವ ರಾಜನು ಹಿಡಿದೆ ಬೋಧಿಸಿಜಡನಾದಸುರ ಪ್ರಕೃತಿ ಎಂದುಜೀವ ಚಿದಾನಂದ ಸ್ವಾಮಿಯೆನೀನೆಂದು ದರಬಾರನೆ ಕಾಯ್ದರಂದು5
--------------
ಚಿದಾನಂದ ಅವಧೂತರು
ವೃಂದಾವನದೊಳಾಡುವನಾರೆ - ಗೋಪ-|ಚಂದಿರವದನೆ ನೋಡುವ ಬಾರೆ ಪಅರುಣಪಲ್ಲವಪಾದಯುಗಳನೆ ದಿವ್ಯ-|ಮರುಕತ ಮಂಜುಳಾಭರಣನೆ ||ಸಿರಿವರ ಯದುಕುಲ ಸೋಮನೆ ಇಂಥ-|ಪರಿಪೂರ್ಣ ಕಾಮ ನಿಸ್ಸೀಮನೆ 1ಹಾರ-ಹೀರ ಗುಣಧಾರನೆ - ದಿವ್ಯ |ಸಾರಶರೀರ ಶೃಂಗಾರನೆ ||ಆರಿಗಾದರು ಮನೋದೂರನೆ ತನ್ನ-|ಸೇರಿದವರ ಮಾತ ವಿೂರನೆ 2ಮಕರಕುಂಡಲಕಾಂತಿ ಭರಿತನೆ - ದಿವ್ಯ |ಆಕಳಂಕರೂಪ ಲಾವಣ್ಯನೆ ||ಸಕಲರೊಳಗೆ ದೇವನೀತನೆ - ನಮ್ಮ |ಮುಕುತೀಶಪುರಂದರವಿಠಲನೆ3
--------------
ಪುರಂದರದಾಸರು
ವೆಂಕಟರಮಣ ವೇದಾಂತಕೋಟಿವಂದ್ಯಶಂಕರಪ್ರಿಯಪತಿಏಳೆನ್ನುತಪ.ಪಂಕಜಮುಖಿಪದ್ಮಾವತಿ ಸರ್ವಾ-ಲಂಕಾರದ ನಿದ್ದೆ ಸಾಕೆನ್ನುತ ಅ.ಪ.ಮಂಗಲಚರಿತ ಭುಜಂಗಶಯನ ನಿ-ನ್ನಂಗದಾಯಾಸವ ಪರಿಹರಿಸಿಪೊಂಗಲಶದಿ ಉಷ್ಣೋದಕ ಗಂಧ ತೈಲಾ-ಭ್ಯಂಗಮಾಡುವರೇಳು ಶೃಂಗಾರದ ಮೂರ್ತಿ 1ದಧಿಯ ಪೃಥುಕದಲಿ ಹದಗೈದು ಮಧುರದಿಮಧುಸೂದನ ನಿನ್ನ ಪದದ ಮುಂದೆಸದ್ ಹೃದಯರು ತಂದಿಹರು ಸಮರ್ಪಿಸೆಮದಜನಕ ನಿನ್ನ ಓಲೈಸುವರಯ್ಯ 2ಸಣ್ಣಕ್ಕಿಯನು ದಿವ್ಯಾನ್ನ ಪಾಕವ ಮಾಡಿಚೆನ್ನಾದ ಗೋಕ್ಷೀರವನ್ನು ತಂದುಉನ್ನತ ಮಹಿಮನೆ ಉಣ್ಣೆಂದು ಲಲಿತ ಸು-ವರ್ಣಪಾತ್ರೆಯೊಳು ತಂದಿಹರು ಶ್ರೀಹರಿಯೇ 3ವಿಧವಿಧ ಷಡುರಸಭರಿತ ಮನೋಹರಸುಧೆಗೆಯಿಮ್ಮಡಿ ಮಧುರತ್ವದಲಿಮೃದುವಾದ ಉದ್ದಿನ ದೋಸೆಯ ಸವಿಯೆಂದುಪದುಮನಾಭನೆ ನಿನ್ನ ಹಾರೈಸುವರಯ್ಯ 4ಸಕ್ಕರೆಕದಳಿಉತ್ತಮ ಫಲಗಳ ತಂದುರಕ್ಕಸವೈರಿಯೆ ನಿನ್ನ ಮುಂದೆಚೊಕ್ಕಟವಾಗಿಡೆ ಲೆಕ್ಕ ಲೇಖನಗಳಒಕ್ಕಣಿಪರುವಾಸುದೇವನೀನೇಳಯ್ಯ5ಸಾರಹೃದಯ ಗೌಡಸಾರಸ್ವತವಿಪ್ರಭೂರಿವೇದಾದಿ ಮಂತ್ರದ ಘೋಷದಿಶ್ರೀರಮಣನೆ ದಯೆದೋರೆಂದು ಕರ್ಪೂರ-ದಾರತಿಯನು ಪಿಡಿದಿಹರು ಶ್ರೀಹರಿಯೇ 6ಭಾಗವತರು ಬಂದು ಬಾಗಿಲೊಳಗೆನಿಂದುಭೋಗಿಶಯನಶರಣಾದೆನೆಂದುಜಾಗರದಲಿ ಮದ್ದಳ ತಾಳರಭಸದಿರೇಗುಪ್ತಿರಾಗ ಸಂಗೀತ ಪಾಡುವರಯ್ಯ 7ಕರುಣಾಸಾಗರ ನಿನ್ನ ಚರಣದ ಸೇವೆಯಕರುಣಿಸೆಂದೆನುತಾಶ್ರಿತ ಜನರುಕರವಮುಗಿದು ಕಮಲಾಕ್ಷ ನಿನ್ನಯ ಪಾದ-ಸ್ಮರಣೆಗೈಯುತ ನೋಳ್ಪಾತುರದಿಂದ ಹರುಷದಿ 8ನಾನಾ ಜನರು ಬಂದುಕಾಣಿಕೆಕಪ್ಪವಶ್ರೀನಿವಾಸನೆ ನಿನ್ನ ಪದಕೆ ಒಪ್ಪಿದಾನವಾಂತಕ ನಿನ್ನ ದಯವೊಂದೆ ಸಾಕೆಂದುಧ್ಯಾನಮಾಳ್ಪರು ದಯಮಾಡೆಂದು ಹರಿಯೇ 9ನೀನೆ ಗತಿಯೆಂದು ನಿನ್ನ ನಂಬಿಹರು ಲ-ಕ್ಷ್ಮೀನಾರಾಯಣ ಪುರುಷೋತ್ತಮನೆಮಾನದಿ ಭಕ್ತರ ಸಲಹಯ್ಯ ಸಂತತಶ್ರೀನಿವಾಸನೆ ಬೇಗ ಏಳು ಶ್ರೀಹರಿಯೆ 10
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ ಬ್ರಹ್ಮ-ಶಂಕರಾದಿವಂದ್ಯ ಎನಗೆ ಮುಕ್ತಿ ತೋರಿಸೋ ಪಹುಟ್ಟು ಮೊದಲಾದಂಢ ಕಷ್ಟ ಬಿಡಿಸೋ-ನಿನ್ನಪಟ್ಟದ ರಾಣಿಗೆ ಹೇಳಿಪದವಿಕೊಡಿಸೋ ||ಇಷ್ಟ ಭಕ್ತಜನರೊಳು ಎನ್ನ ಸೇರಿಸೋ-ಈಸೃಷ್ಟಿಯೊಳು ನಿನ್ನ ದಾಸ-ದಾಸನೆನಿಸೋ 1ಅಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ ಪೊಂ-ಬಟ್ಟಲೊಳಗಿನ ಹಾಲು ಎನಗೆ ಹೊಯ್ಯಿಸೊ ||ಗಟ್ಟಿ ಸಕ್ಕರೆ ತುಪ್ಪ ರೊಟ್ಟಿಗಳನು ಉಣ್ಣಿಸೋ-ಮುಂದೆಹುಟ್ಟಿಬಾಹಜನ್ಮಂಗಳ ಎನಗೆ ಬಿಡಿಸೋ2ಕಿಟ್ಟಿಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೋ-ಉತ್ಕøಷ್ಟ ಬಂಗಾರದೊಳು ಎನ್ನ ಕೂಡಿಸೋ ||ಬೊಟ್ಟಿಗೆ ಉಂಗುರವ ಮಾಡಿ ಎನ್ನ ಸೇರಿಸೋ-ಎನಗೆದಿಟ್ಟ ಪುರಂದರವಿಠಲನೆಂಬುದನೆ ಪಾಲಿಸೋ 3
--------------
ಪುರಂದರದಾಸರು
ವೈರಾಗ್ಯದಾವಾಗ್ನಿ ಉರಿಯು ಛಟಿಛಟಿಸಿತುಸರ್ವಪ್ರಪಂಚವೆಲ್ಲವ ಅಟ್ಟಟ್ಟಿ ಸುಟ್ಟಿತುಪಸತಿಸುತರು ಎಂಬ ಹೆಮ್ಮರವೀಗ ಸುಟ್ಟವುಪಿತೃ ಮಾತೃವೆಂಬ ಪಲ್ಲವ ಕರಿಕಿಟ್ಟಿತುಹಿತವೆಂಬ ಬಳ್ಳಿಗಳು ಅನಿಲ ಪುಟ್ಟವಿಟ್ಟವುಅತಿಭಾಗ್ಯವೆಂದೆಂಬ ಸಿಂಗಾರ ಹೊಗೆಯಿಟ್ಟವು1ಏಸೋ ಬಂಧುಗಳೆಂಬ ಧ್ರುಮವು ಶಿಖಿಸೋಂಕಿದವುಕ್ಲೇಶವೆಂದೆಂಬ ಕರಡವು ಭುಗಿ ಭುಗಿ ಲೆಂದವುವಾಸಗಳೆಂದೆಂಬಕುಡಿಕಿಡಿಯಾಗಿ ಉದುರಿದವುಆಸೆ ಎಂಬ ಫಲ ವಹ್ನಿಗಾಹಾರವಾದವು2ಘನಭ್ರಾಂತಿ ಎಂಬ ಪಕ್ಷಿಗಳು ಹಾರಿಹೋದವುಮನೆಯೆಂಬ ಗೂಡುಗಳು ನಿಗಿನಿಗಿಯಾದವುಬಿನುಗುಚಿಂತೆ ಎಂಬ ಹರಿಣ ಮುಗ್ಗರಿಸಿದವುಮನಸಿಜನ ಕ್ರೋಧವೆಂಬ ಕಳ್ಳರು ಸತ್ತಿಹರು3ಅಷ್ಟಮದದಾನೆ ಎಂಬುವು ಅಡವಿಯ ಹಿಡಿದವುತುಚ್ಛವಿಷಯಗಳೆಂಬ ನರಿಗಳೋಡಿದವುದುಷ್ಟಗುಣವೆಂದೆಂಬ ದುರ್ಜನ ಮೃಗವು ಚಲ್ಲಿದವುಕಷ್ಟ ತಾಪತ್ರಯದ ಕತ್ತಲು ಹರಿಯಿತು4ಇಂತು ಪ್ರಪಂಚವೆಂಬೀ ವೈರಾಗ್ಯದಾವಾಗ್ನಿಯಂತೆ ಧಗಧಗನೆ ಝಗಝಗನೆ ಸುಡುತಲಿಚಿಂತಯಕ ಚಿದಾನಂದ ಉರಿಯು ಅಖಂಡವಾಗಿಶಾಂತರೆಂಬರ ಮುಕ್ತರುಗಳ ಮಾಡಿತ್ತು5
--------------
ಚಿದಾನಂದ ಅವಧೂತರು
ಶೋಭನವೇ ಶೋಭನವೇಶೋಭನ ಗುರುವಿಗೆ ಬಗಳಾಂಬಳಿಗೆಪಉರಿಬಿಟ್ಟಗ್ನಿಯು ಇಲ್ಲದಂತೆಉರಿಯು ಅಗ್ನಿಯು ಒಂದೆಂಬಂತೆಗುರುವು ಬಗಳಾಂಬನು ತಾನು ಕೂಡಿಯೆತರಣಿಶತಕೋಟಿಯಲಿ ಹೊಳೆಯುತಿದೆ1ಬಂಗಾರದಿ ಮಾಡಿಹ ಒಡವೆಗಳಂತೆಬಂಗಾರ ಒಡವೆ ಒಂದೆ ಎಂಬಂತೆಮಂಗಳಗುರುಬಗಳಾಂಬನು ಕೂಡಿಯೆತಿಂಗಳ ಶತಕೋಟಿಯಲಿ ಹೊಳೆಯುತಿದೆ2ತೆರೆ ಬಿಟ್ಟ ಉದಕವು ಇಲ್ಲದಂತೆತೆರೆ ಉದಕವು ಒಂದೆಂಬಂತೆಗುರುಚಿದಾನಂದ ಶ್ರೀ ಬಗಳೆ ಕೂಡಿಯೆಶರಣರ ಹೃದಯದಿ ಥಳಥಳಿಸುತಿರೆ3
--------------
ಚಿದಾನಂದ ಅವಧೂತರು
ಶ್ಯಾಮಸುಂದರ ಶ್ರೀಮಾಧವಕಾಮಿಸುವಳಾ ಕಾಮಿನಿಯು ಪ.ಭಾಮಾಮಣಿಯು ನಿನ್ನನೀಕ್ಷಿಸದೆಯಾಮಯಾಮಕೆ ತಾಮಸಗೊಂಬಳು ಅ.ಪ.ಚಂದನಾದಿ ಸೌಗಂಧಕುಸುಮ ವಿಷ-ದಂದವೆಣಿಸುವಳು ಚಂದ್ರಮುಖಿಮಂದಾನಿಲ ಮಕರಂದ ಪಾನರಸ-ವೊಂದನೊಲ್ಲಳ ಪ್ರಿಯಸಖಿನಂದನ ಕಂದನೆ ವಂದನೆ ವಲ್ಲಭಗೈವಳು 1ಹಾರ ಹೀರ ಬಂಗಾರ ಭೂಷಣವಭಾರವೆಂದು ಶೃಂಗರಿಸಳುಕೀರಕೀಕಿಪಿಕಚೀರುಸ್ವನ ಶರ-ಧಾರೆಯೆಂದು ತಾ ಸೈರಿಸಳುಕಾರುಣ್ಯವಾರಿಧೆ ಬಾರದೆ ಬಾಯಾರಿರುವಳು 2ಮೀನಧ್ವಜನುರುಬಾಣದುರುಬೆಗೆಕ್ಷೀಣವಾಗಿಹಳು ಮೀನಾಕ್ಷಿಭಾನುತೇಜ ಲಕ್ಷ್ಮೀನಾರಾಯಣಧ್ಯಾನಿಸುವಳು ನಿನ್ನ ಪ್ರಾಣಸಖಿಮಾನಾಭಿಮಾನಾಧೀನವನಿನ್ನೊಳಗಿಟ್ಟಿಹಳು3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶ್ರೀ ಗೋಪಾಲ ದಾಸಾರ್ಯವಿಜಯಶ್ರೀ ಲಕ್ಷ್ಮೀ137ಭಾಗಣ್ಣ ಗೋಪಾಲ ದಾಸಾರ್ಯರ್ ಪಾದಕ್ಕೆಬಾಗಿ ಶರಣಾದೆನು ಸತತ ನಿಶ್ಚಯದಿಜಗದಾದಿಕರ್ತಅಜಅಘದೂರ ಸುಗುಣಾಬ್ಧಿತುರಗಾಸ್ಯವಿಜಯಶ್ರೀನಿವಾಸ ಪ್ರಿಯತಮರು || ಭಾಗಣ್ಣಪನಾರಸುಗುಣಾರ್ಣವನು ಶ್ರೀರಮಾಪತಿ ಹಂಸಸರಿಸಿಜಾಸನಸನಕದೂರ್ವಾಸಇಂಥಾಪರಮೋತ್ಕøಷ್ಟಗುರುಪರಂಪರೆಗೆ ಶರಣೆಂಬೆಪುರುಷೋತ್ತಮಾಚ್ಯುತ ಪ್ರೇಕ್ಷರಿಗೆ ಶರಣು 1ಸದಾಗಮಾಮಾಯಗಳು ಬ್ರಹ್ಮ ಧಾಮವೆÉಂದುಉದ್ಘೋಷಿಸುತಿವೆ ಮುಖ್ಯವಾಯುದೇವಮಾತರಿಶ್ವಸೂತ್ರಪವಮಾನಮುಖ್ಯಪ್ರಾಣಪ್ರತಿರಹಿತ ಬಲಜ್ಞಾನರೂಪಹನುಮ ಭೀಮ ಮಧ್ವನ್ನ2ಪ್ರೋಚ್ಚಸುರವರ ವಾಯುವಿನ ತೃತೀಯಾವತಾರ ಮಧ್ವಅಚ್ಯುತಪ್ರೇಕ್ಷರಲಿ ಸಂನ್ಯಾಸಕೊಂಡುಪ್ರಚ್ಛನ್ನ ಬೌದ್ಧಾದಿ ಮತ ಪಂಕದಿ ಬಿದ್ದಿದ್ದಸಜ್ಜನರನ್ನುದ್ಧರಿಸಿ ಸತ್‍ಜ್ಞಾನವಿತ್ತ 3ಶ್ರೀ ಮಧ್ವಗುರು ವಂಶಸ್ಥಪದ್ಮನಾಭನರಹರಿಮಾಧವಾಕ್ಷೋಭ್ಯಜಯ ವಿದ್ಯಾಧಿರಾಜವಿದ್ಯಾಧಿರಾಜರ ಶಿಷ್ಯರು ಈರ್ವರುಸಾಧು ಉತ್ಕøಷ್ಟರೀ ತೀರ್ಥರ್‍ಗಳಿಗೆ ಶರಣು 4ಶ್ರೀ ವಿದ್ಯಾಧಿರಾಜರ ಪ್ರಥಮ ಶಿಷ್ಯ ರಾಜೇಂದ್ರಹಸ್ತಪದ್ಮ ಜಾತರು ಜಯಧ್ವಜಾರ್ಯಮಾಧವನ ಏಕಾಂತ ಭಕ್ತ ಪುರುಷೋತ್ತಮರುತತ್ಸುತ ಬ್ರಹ್ಮಣ್ಯರೀ ಸರ್ವರಿಗೂ ಶರಣು 5ಪದ್ಮನಾಭತೀರ್ಥಜ ಲಕ್ಷ್ಮೀಧರರ ವಂಶಜಾತ ಸುವರ್ಣವರ್ಣ ತೀರ್ಥಾಭಿದರಸುತಲಕ್ಷ್ಮೀ ನಾರಾಯಣ ಯತಿವರ್ಯ ಶ್ರೀಪಾದರಾಜರು ಈ ಸರ್ವರಿಗೂ ಶರಣು 6ಶಿಂಶುಮಾರಪುಚ್ಛಶ್ರಿತರ ಅವತಾರರೇವಸುಮತೀಖ್ಯಾತ ಶ್ರೀಪಾದರಾಜರಲಿಭಾಷ್ಯಾಧಿಗಳ ಕಲಿಯೇ ಬ್ರಹ್ಮಣ್ಯ ತೀರ್ಥರಶಿಷ್ಯವರ್ಯ ವ್ಯಾಸರಾಜರು ಸೇರಿದರು 7ವಾದಿಗಜಕೇಸರಿಮಧ್ವಮತೋದ್ಧಾರರುಮೇದಿನೀ ಪ್ರಖ್ಯಾತ ಮಹಾಭಾಗವತರುಸಾಧುಜನ ಆಹ್ಲಾದ ಶ್ರೀ ವ್ಯಾಸರಾಜರಲಿಸದಾ ಶರಣು ಪಾಲಿಪರುಪ್ರತಿಕ್ಷಣ ದಯದಿ8ಆನಂದ ಮುನಿಕರ ಅರವಿಂದ ಸಂಜಾತವಿಷ್ಣುತೀರ್ಥ ವಂಶಜ ವಾಗೀಶರಹಸ್ತವನರುಹೋತ್ಪನ್ನರು ಸುಮಹಾಮಹಿಮರುಘನದಯಾನಿಧಿ ವಾದಿರಾಜ ಸ್ವಾಮಿಗಳು9ಯುಕ್ತಿಮಲ್ಲಿಕಾ ಮೊದಲಾದ ತತ್ವಬೋಧಕವಾದಗ್ರಂಥ ಪದ್ಯ ಕೀರ್ತನೆಗಳ್ ಸಜ್ಜನರಿಗಿತ್ತುಸೋದೆಯಲ್ಲಿ ತ್ರಿವಿಕ್ರಮಮೂರ್ತಿ ನಿಲ್ಲಿಸಿಹರುಭೂಧರಹಯಾಸ್ಯಪ್ರಿಯತಮ ಶ್ರೀ ವಾದಿರಾಜಾರ್ಯ10ತೀರ್ಥಪಾದ ಶ್ರೀಪತಿಯು ಬ್ರಹ್ಮ ಶಿವಾದ್ಯಮರ ಸಹಸದಾ ಸನ್ನಿಹಿತವಾಗಿರುವ ಮತ್ತುತೀರ್ಥವನ ಕ್ಷೇತ್ರಗಳೊಳುತ್ತಮ ವೃಂದಾವನದಿಅತ್ಯಕ್ತ ದೇಹದಿ ಕುಳಿತಿಹರು ಗುರುರಾಟ್ 11ಬುಧರು ತಿಳಿದಂತೆಯೇ ಬ್ರಹ್ಮಾಂಡ ಪುರಾಣದಲ್ಲಿವಾದಿರಾಜರು ಭಾವೀಕಲ್ಪ ಮುಖ್ಯವಾಯುಎಂದು ಪ್ರಸಿದ್ಧರೀ ಸುದುಪಾಸ್ಯ ಮದ್ಗುರುವರ್ಯರಲ್ಲಿ ಶರಣಾದೆಸದಾನಮೋ ಲಾತವ್ಯಾಚಾರ್ಯ ಕರುಣಾಬ್ಧೆ 12ವಿದ್ಯಾಧಿರಾಜರ ಎರಡನೇ ಶಿಷ್ಯರುಕವೀಂದ್ರ ಪೀಳಿಗೆಯ ಶ್ರೀರಾಮಚಂದ್ರದ್ವಿತೀಯಶಿಷ್ಯ ವಿದ್ಯಾನಿಧಿ ವಂಶಜಾತರುಆದ್ಭುತಮಹಿಮರು ಕರುಣಿ ರಘೋತ್ತಮರು 13ಕಾಮಿತಪ್ರದ ಟೀಕಾಭಾವ ಬೋಧಾರ್ಯರುಎಮ್ಮಪಾಲಿಪ ರಘೋತ್ತಮರಿಗೆ ಶರಣುರಾಮಚಂದ್ರರ ಮೊದಲನೆ ಶಿಷ್ಯ ವಿಬುಧೇಂದ್ರಈ ಮಹಾತ್ಮರ ವಂಶಜರು ಸರ್ವರಿಗೂ ನಮಿಪೆ 14ದುರ್ಜನರ ಕುಮತಗಿರಿವಜ್ರ ವಿಜಯೀಂದ್ರರುಸಜ್ಜನರುದ್ಧಾಕರು ಸುಧೀಂದ್ರಸೂರಿನಿಜವಿರಾಗಿ ಯಾದವೇಂದ್ರ ವಿಜ್ಞಾನಿಯುಭಜಕಜನಸುರಧೇನುರಾಘವೇಂದ್ರಾರ್ಯ15ಯಾರುಹಿಂದೆ ಏಡಮೂಕ ಬ್ರಾಹ್ಮಣನಾಗಿದ್ದಾಗಯಾರದ್ವಾರಾ ಶ್ರೀ ವಾದಿರಾಜರು ಸ್ವಪ್ನದಲ್ಲಿಉತ್ಕøಷ್ಟ ಶುಭತಮ ವೃಂದಾವನಾಖ್ಯಾನ ತಾವೇ ಹೇಳಿದರುಆಸೂರಿ ವಿಶ್ವಪ್ರಿಯಾರ್ಯರಿಗೆ ಶರಣು 16ಸೂರಿಕುಲತಿಲಕರು ವಾದಿಕರಿಹರಿ ಖ್ಯಾತಸಿರಿವ್ಯಾಸರಾಯರಲಿ ಮುದ್ರಿಕೆಯಕೊಂಡನಾರದರ ಅವತಾರರೆಂದು ಪ್ರಸಿದ್ಧರುಪುರಂದರದಾಸಾರ್ಯ ಕರುಣಾಂಬುಧಿಗೆ ಆನಮಿಪೆ17ನಿರ್ಝರ ವೃಂದ ಋಷಿ ಭೃಗುಮುನಿಯೇ ಧರೆಯಲ್ಲಿವಿಜಯದಾಸಾರ್ಯರಾಗಿ ಮೆರೆದವರ್ಗೆ ಶರಣುವಿಜಯವಿಟ್ಠಲನೊಲಿಯೆ ಜ್ಞಾನ ಭಕ್ತಿಸತ್ತತ್ವಸಜ್ಜನರಿಗೆ ಬೋಧಿಸಿದ ನಿವ್ರ್ಯಾಜ ಕರುಣಿ 18ಆಲಸ್ಯದಿನಾ ಮೈಥಿಲೀಪತಿ ಪಲ್ಲಿಯಲ್ಲಿಮಲಗಿರಲು ಶ್ರೀ ಗೋಪಾಲದಾಸಾರ್ಯರುಬಲುಕರುಣದಲ್ಲಿ ಮುಂದೆ ನಿಂತು ಯತಿಕೃತಮಾಲೋಲ ಪೂಜೆನೋಡಿ ಒದಗಿದ ಗುರುವರ್ಯ 19ಉಮಾಸೂನು ವಿಘ್ನಹರ ಕ್ಷಿಪ್ರಪ್ರಸಾದನುಈ ಮಹೀಯಲ್ಲಿ ಗೋಪಾಲದಾಸರಾಗಿರಮಾಪತಿಯ ಸೇವಿಸಿ ಸಜ್ಜರನ್ನುದ್ಧರಿಸಿಹರುನಮಿಸಿ ಶರಣಾದೆ ಈ ಉದಾರ ಕರುಣಿಗೆ 20ಸುಪವಿತ್ರೆ ಸೌಭಾಗ್ಯಪ್ರದ ಮಂತ್ರಗಳನೆಗೆಉಪದೇಶಮಾಡಿದ ಕಪಿಗೋತ್ರದವರುಸುಪುಣ್ಯ ಶೇಶ್ಲೀಕರು ಉದಾರ ಸಾತ್ವಿಕರುಶ್ರೀಪತಿ ಕೃಷ್ಣಪ್ರಿಯ ಶ್ರೀರಾಮಾಚಾರ್ಯರಿಗೆ ಶರಣು 21ತರುಣತನಾರಭ್ಯ ಹರಿದಾಸತ್ವ ಒದಗಿಸಿಪರಿಪರಿ ವಿಧದಲ್ಲಿ ಔದಾರ್ಯದಿಂದಕಾರುಣ್ಯಬೀರಿ ಕಾಪಾಡುತಿರುವಂಥಾ ಈಹರಿಪ್ರತಿಮಾರೂಪ ಗುರುಸರ್ವರಿಗೂತಂದೆ ತಾಯಿಗೂ ಶರಣು 22ದಧಿಶಿಲಾ ಎಂಬುವರು ಆಡಂಬರ ಪ್ರಿಯರುಮಂದಿಗಳು ಮೊಸರು ಕಲ್ಲೆಂದು ಕರೆಯುವರುಸಾಧುವೈಷ್ಣವವಿಪ್ರಮುರಾರಿರಾಯರುಸಾಧ್ವಿ ವೆಂಕಮ್ಮ ದಂಪತಿ ಇದ್ದ ಕ್ಷೇತ್ರ 23ಪುತ್ರ ರತ್ನಗಳು ನಾಲ್ಕು ಈ ದಂಪತಿಗೆಅಗ್ರಜಭಾಗಣ್ಣ, ಸೀನಪ್ಪ, ದಾಸಪ್ಪತರುವಾಯ ರಂಗಪ್ಪ ನಾಲ್ಕನೆಯವನಾಗಿಗೌರವದಿ ಚರಿಸಿತು ಮುರಾರಿರಾಯರ ಕುಟುಂಬ 24ಸಂಸಾರಾವಸ್ಥೆಯಲ್ಲಿ ನಶ್ವರ ಸುಖ ದುಃಖಮಿಶ್ರವಾಗಿಯೆ ಉಂಟು ಆ ನಿಯತಿಯಲ್ಲಿಭೂಸುರವರ್ಯರು ಮುರಾರಿರಾಯರು ಸ್ವರ್ಗತಾ ಸೇರಿದರುಸತಿಸುತರನ್ನು ಬಿಟ್ಟು25ಬಾಲಕರನ್ನು ಪ್ರಿತ್ರವ್ಯರು ಲೆಕ್ಕಿಸದಿರಲುಮಾಲೋಲ ಪಾಲಿಸುವ ಕರ್ತನ್ನೇ ನಂಬಿಶೀಲೆ ವೆಂಕಮ್ಮ ಮಕ್ಕಳನ್ನ ಕರಕೊಂಡುಒಳ್ಳೆಯ ಜನಪದ ಶಂಖಪುರವೈದಿದಳು 26ಶಂಖಪುರ ಹತ್ತಿರವೇ ಹನೂಮಂತನ ಗುಡಿಮಕ್ಕಳ ಸಹ ಅಲ್ಲಿ ವಾಸಮಾಡಿಮುಖ್ಯ ಪ್ರಾಣದೇವರ ಸೇವಿಸಿದ ಫಲವಾಗಿಚಿಕ್ಕ ಜಮೀನು ಕೊಂಡಳು ದಾನವಾಗಿ 27ದಾನ ಕೊಟ್ಟವನಿಗೆ ಬಲು ಪುಣ್ಯ ದೊರೆಯಿತುದಾನಿಗಳುಭಾಗವತಶ್ರೇಷ್ಠರಾದ್ದರಿಂದಹನುಮ ಗೋಪಾಲಾನುಗ್ರಹದಿಂದ ಐವರೂಧಾನ್ಯಸಮೃದ್ದಿ ತೊರೆದರು ಆತಂಕ 28ಕುಲ್ಕರ್ಣಿ ಎಂಬಂಥ ಸರ್ಕಾರ ಅಧಿಕಾರಿವೆಂಕಮ್ಮನಲ್ಲಿ ಮಾತ್ಸರ್ಯ ದ್ವೇಷ ಬೆಳೆಸಿಸರ್ಕಾರ ಕೆರೆ ನೀರು ಕದ್ದು ಹೊಯಿಸಿದಳೆಂದು ಆಚಿಕ್ಕ ಜಮೀನ ಒಡಮೆ ಕಿತ್ತಿಕೊಂಡ 29ಸಾಧ್ವೀ ವೆಂಕಮ್ಮನಿಗೂ ಮಹಾತ್ಮ ತತ್ಪುತ್ರರಿಗೂಅಧಮ ಅಧಿಕಾರಿ ಮಾಡಿದ ದ್ರೋಹದಿಂದಪುತ್ರ ಸಂತಾನ ವಂಶಕ್ಷೀಣವಾಯಿತು ಅವಗೆಅಂದಿನಿಂದ ಕೆರೆ ಅದ್ಯಾಪಿ ನೀರಿಲ್ಲ ಆ ಕೆರೆಯಲ್ಲಿ 30ದೀನರಿಗೂ ಸಾಧು ಮಹಾತ್ಮರಿಗೂ ಮಾಳ್ಪಸಣ್ಣದೋ ದೊಡ್ಡದೋ ದ್ರೋಹಕ್ಕೆ ದಂಡನಾಅನುಭವ ಕ್ಷಿಪ್ರದಲ್ಲೋ ಮೆಲ್ಲಗೋ ಅಪರಾಧಿ ಮೂರ್ಖಗೆದೀನ ರಕ್ಷಕ ಸತ್ಪತಿ ಶ್ರೀಹರಿಈವ31ಭಾಗಣ್ಣ ಸೀನಪ್ಪ ದಾಸಪ್ಪ ರಂಗಪ್ಪಲೌಕಿಕ ವಿದ್ಯಾ ಕಲಿತು ಉಪಾಧ್ಯಾಯರಲ್ಲಿಭಾಗಣ್ಣನಿಗೆ ಶಾನುಭೋಗ ಮುಂಜಿಮಾಡಿಭಗವದ್ವಿಷಯ ಕಲಿತರೂ ಭಾಗಣ್ಣ 32ತತ್ಕಾಲ ಲೌಕಿಕ ಶ್ರೀತನ ಕೊರತೆ ನೋಡಿಬಂಧುಗಳಿವರನ್ನುದಾಸೀನಮಾಡಿದರುಇಂದಿರಾಪತಿವೆಂಕಟಕೃಷ್ಣಗೋಪಾಲಬಂದು ಶ್ರೀ ಒದಗಿಸಿದ ಕ್ಷಿಪ್ರದಲೆ ಇವರ್ಗೆ 33ಬ್ರಹ್ಮಚಾರಿ ಭಾಗಣ್ಣ ಗಾಯತ್ರೀ ಮಂತ್ರವಅಹರಹ ಸೂಕ್ಷ್ಮಾರ್ಥಅನುಸಂಧಾನವಿಹಿತ ಶ್ರದ್ಧಾ ಉದ್ಭಕ್ತಿಪೂರ್ವಕ ಜಪಿಸೆಶ್ರೀ ಹಯಾಸ್ಸ ನಾರಾಯಣನು ಒಲಿದ ಕ್ಷಿಪ್ರದಲೆ 34ವೇದೋಚ್ಚಾರಣವೇ ಗಾನವು ಜಗದ್ರಕ್ಷಣೆಯೇ ತ್ರಾಣವುಮಾಧವನೇ ಗಾಯತ್ರಿನಾಮ ಹಯಗ್ರೀವಭೂತಪೂರ್ಣವಾಗ್ವಶ್ರೀ ಪೃಥ್ವೀ ಆಶ್ರಯ ಶರೀರವ್ಯಾಪ್ತನುಹೃದಯ ಪ್ರಾಣಾಧಾರದಿವ ಪರಸ್ವರೂಪಪಾದತ್ರಯವು ಜಗತ್ಪಾದಸದೃಶ35ಜ್ಞಾನಸುಖ ಬಲಪೂರ್ಣ ಸರ್ವ ಜಗದಾದಿಕರ್ತದಿನಪತೇಜ ಸ್ಫೂರ್ತಿದ ಚೇಷ್ಟಕಾಧಾರಶ್ರೀ ನಾರಾಯಣದೇವ ನಿನ್ನ ಚಿಂತಿಪೆ ಭಜಿಪೆಅನುಪಮ ಸರ್ವೋತ್ತಮ ನಮೋ ಕೇಶವಾದಿ ನಾಮ 36ಲೌಕಿಕ ವಿಷಯಗಳೊಳ್ ಮನವಾಕ್ಕು ಚಲಿಸದೆಏಕಚಿತ್ತದಿ ಗಾಯತ್ರೀ ಪ್ರತಿಪಾದÀ್ಯಶ್ರೀ ಗಾಯತ್ರೀನಾಮ ನಾರಾಯಣನನ್ನಭಾಗಣ್ಣ ಜಪಿಸಿದರು ಕಂಡರು ಶ್ರೀಕರನ್ನ 37ಏಕಾಂತದಲ್ಲಿ ವೃಕ್ಷಮೂಲದಲ್ಲಿ ಕುಳಿತಿದ್ದಭಾಗಣ್ಣನ ಜಪಕೆಡಿಸಿ ಓರ್ವ ದುಷ್ಟಹಾಕಿದನು ಕುದಿನೀರು ಬೊಬ್ಬೆಗಳ್ ಅವನ ಮೇಲೆದ್ದವುಚಿಕಿತರಾಗಿ ಜನರು ಹೊಗಳಿದರು ಭಾಗಣ್ಣನ 38ಮತ್ತೊಂದುದಿನ ಇದಕೆÀ ಮುಂದೆಯೋ ಹಿಂದೆಯೋಸುತ್ತಿ ಭಾಗಣ್ಣ ವೃಕ್ಷಮೂಲದಲಿ ಸರ್ಪಹಿತದಿ ಆಶೀರ್ವದಿಸಿ ಪೋದಂತೆ ಪೋಯಿತುಇದು ನೋಡಿ ಜನರು ಕೊಂಡರು ಭೀತಿ, ಆಶ್ಚರ್ಯ ಮರ್ಯಾದೆ 39ಅಂದು ಮೃತಸರ್ಪ ಅರಿಯರಿಯರು ಶಮೀಕರು ಸಮಾಧಿಯಲಿಇಂದುತನ್ನ ಸರ್ಪ ಸುತ್ತಿರುವುದು ಭಾಗಣ್ಣ ಅರಿಯರುಇಂದಿರೇಶ ಒಲಿದವನಿವನೆಂದು ಶೇಷನೇ ಆಲಿಂಗಿಸಿದನೋಸ್ಕಂಧ ತನ್ನಯ ಸಹೋದರನೆಂದಪ್ಪಿ ಕೋಂಡನೋ 40ತತ್ವಮಾತೃಕಾನ್ಯಾಸಗಳ ಚರಿಸಿಮಂತ್ರ ಮೂಲಪ್ರಣವಅಷ್ಟಾಕ್ಷರೀ ಗಾಯತ್ರೀಭಕ್ತಿ ಪೂರ್ವಕ ಜಪಿಸಿ ಹೊರ ಒಳಗೆ ಶ್ರೀಹರಿಯವ್ಯಾಪ್ತಿವಿಜ್ಞಾನಪುಟ್ಟಿತು ಈ ಚೌತಾಪರೋಕ್ಷಿಗೆ41ವ್ಯಾಪ್ತಿ ದರ್ಶಿಯು ಇವರು ಶ್ರೀ ವಿಷ್ಣು ಅನುಗ್ರಹದಿಇಂದಿನ ಹಿಂದಿನ ಮುಂದಿನ ವಿಷಯ ಜ್ಞಾನವೇದ್ಯವಾಯಿತು ಹರಿಸ್ಮರಣಾ ಪೂರ್ವ ಆಲೋಚನದಿಬಂದು ಕೇಳುವವರಿಗೆ ಯೋಗ ಪೇಳಿದರು 42ಯೋಗಕ್ಷೇಮ ಸರ್ವಕೂ ನಿಯಾಮಕನು ಹರಿಯೇವೆಭಾಗಣ್ಣ ಈತತ್ವಜ್ಞಾನ ಪೂರ್ವಕದಿಲೌಕಿಕ ಧನ ಅಪೇಕ್ಷಿಸದಿದ್ದರೂ ಜನರುಬಾಗಿ ದ್ರವ್ಯಗಳಿತ್ತು ಬೇಡಿದರು ಸ್ವೀಕರಿಸೆ 43ಭವಿಷ್ಯ ಪೇಳುವುದರಲ್ಲಿ ಖ್ಯಾತಿ ಹರಡಿದ್ದಲ್ಲದೆಸರ್ವೇಶನ ಸ್ತೋತ್ರಕವನ ಪಟು ಎಂದುಸರ್ವರೂ ಕೊಂಡಾಡಿ ಆ ಊರಿಗೆ ಬಂದ ಪ್ರಖ್ಯಾತಕವಿಯನ್ನ ನಿಗ್ರಹಸಿ ಓಡಿಸಿದರು ಧೀರ 44ದಿಗ್ವಜಯ ಜಯಶೀಲನೆಂದು ಖ್ಯಾತ ಆಕವಿಭಾಗಣ್ಣ ಸೋಲಿಸಿ ಓಡಿಸಿದ್ದುಭಾಗಣ್ಣನ ಪ್ರಭಾವವ ಹರಡಿಸಿತು ನಾಡಲ್ಲಿಭಾಗಣ್ಣಗೆ ಸನ್ಮಾನ ಮಾಡಿದರು 45ಗದ್ವಾಲರಾಜನು ಇನ್ನೂ ಬಹು ಪ್ರಮುಖರುಬಂದು ನೇರವಾಗಿ ಭಾಗಣ್ಣನಲ್ಲಿವಂದಿಸಿ ಸನ್ಮಾನ ಪ್ರಶಸ್ತಿಗಳ ಅರ್ಪಿಸಿಪೋದರು ಶ್ಲಾಫಿಸುತ ತಮ್ಮ ತಮ್ಮ ಸ್ಥಳಕೆ 46ಹಿಂದೆ ದ್ರವ್ಯ ಹೀನನಾಗಿದ್ದ ಭಾಗಣ್ಣನಿಗೆಇಂದುಶ್ರೀಕೃಷ್ಣನ ಒಲುಮೆಯಿಂದಬಂದು ಸೌಭಾಗ್ಯ ಶ್ರೀ ದ್ರವ್ಯಗಳುಔದಾರ್ಯದಿ ದಾನಾದಿಗಳ್ ಮಾಡಿದರು 47ಇಷ್ಟರಲ್ಲೇ ಸೀನಪ್ಪ ದಾಸಪ್ಪ ರಂಗಪ್ಪಪ್ರೌಢವಯಸ್‍ಐದಿ ಗದ್ವಾಲು ಹೋಗೆ ಅಲ್ಲಿಮೌಢ್ಯ ಮಾತ್ಸರ್ಯದಿ ರಾಜ್ಯಾಧಿಕಾರಿಗಳುಕಡು ನಿರೋಧ ಮಾಡಿದರು ಮೂವರನ್ನು 48ವೆಂಕಟೇಶನ ಇಚ್ಛಾ ಈಮೂವರು ಅಣ್ಣಭಾಗಣ್ಣ ನಾಶ್ರಯದಲ್ಲೇವೆ ಇದ್ದುಅಗಲದೆ ಶ್ರೀಹರಿಗುಣಾನುವರ್ಣನಾಗಳಸುಗಾನ ಮಾಡುತ್ತಾ ಇರಬೇಕು ಎಂದು 49ಭಾಗಣ್ಣ ಅರ್ಯರು ಗದ್ವಾಲಿಗೆ ಪೋಗಿಸುಗುಣವಂತ ತಮ್ಮಂದಿರನ್ನ ಕರೆತಂದುಅಗಣಿತಗುಣಾರ್ಣವ ಶ್ರೀಯಃ ಪತಿಯ ಸೇವೆಗೆಯೋಗ್ಯೋಪದೇಶ ಪೂರ್ವಕ ತಯಾರು ಮಾಡಿದರು 50ದಾಸಪ್ಪ ಸೀನಪ್ಪ ರಂಗಪ್ಪ ತಮ್ಮ ಜ್ಞಾನಭಕ್ತಿಕಾಶಿಸಿ ವರ್ಧಿಪುದು ದಿನೇ ದಿನೇ ಹೆಚ್ಚಿಶ್ರೀ ಶ್ರೀನಿವಾಸನ ಪ್ರೀತಿಗೆ ಭಾಗಣ್ಣಚರಿಸುವ ಅನ್ನದಾನಾದಿಗಳಲ್ಲಿ ಸೇವಿಸಿದರು 51ದ್ರವ್ಯ ಧಾನ್ಯರಾಶಿಗಳು ತುಂಬಿದ್ದು ಕಂಡುದೇವ ಬ್ರಾಹ್ಮಣ ಸೇವೆಗೆ ಅಕ್ಕಿ ಹೆಚ್ಚು ಬೇಡೆಂದುಯಾವರೂ ಕಾಣದೆ ವೆಂಕಮ್ಮ ಮುಚ್ಚಿಡಲುಯಾವತ್ತೂ ಅಕ್ಕಿಯು ಹುಳುವಾಯ್ತು ಮರುದಿನ 52ಹರಿಬಲುಮೆಯಿಂದ ಭಾಗಣ್ಣ ಈ ರೀತಿ ತೋರಿಸಲುಹರಿಭಕ್ತಿ ವೈರಾಗ್ಯ ಹೆಚ್ಚಿತು ಮಾತೆಗೆಭಾರಿತರ ಕೀರ್ತನಾ ಸೇವೆ ಅತಿಶಯ ಚರ್ಯಅರಿತು ನಾಡೆಲ್ಲವೊ ಕೊಂಡಾಡಿತು ಭಾಗಣ್ಣನ 53ಉತ್ತನೂರು ಸಮೀಪವು ಐಜೀ ಎಂಬುವ ಗ್ರಾಮಉತ್ತಮ ಬ್ರಾಹ್ಮಣ ವೇಂಕಟನರಸಿಂಹಾಚಾರ್ಯದಂಪತಿಗೆ ಪುತ್ರರತ್ನ ವೇಂಕಟರಾಮಾಚಾರ್ಯಮಂದತನ ತೋರಿಸಿದ ಪುಸ್ತಕ ವಿದ್ಯೆಯಲ್ಲಿ 54ಭಾಗಣ್ಣ ಆರ್ಯರ ಪ್ರಭಾವದಲಿ ಆದರವೇಂಕಟನೃಸಿಂಹಾರ್ಯರ ಭಾರ್ಯೆಗೆ ಉಂಟುಭಾಗಣ್ಣನಲಿ ಪೋಗಿ ಮಗನ ತಿದ್ದುವ ಬಗೆಹೇಗೆಂದು ಅರಿಯಿರಿ ಎಂದಳು ಸಾಧ್ವೀ 55ಸಾಧ್ವೀ ಆಸ್ತ್ರೀರತ್ನಳಿಗೆ ಭಾಗಣ್ಣನುಔದಾರ್ಯದಿ ಒದಗುವ ಜ್ಞಾನಿವರ್ಯನೆಂದುಸುದೃಢದಿ ನಂಬಿದರೂ ಆಚಾರ್ಯ ಅರ್ಧಮನಸಿಂಪೋದರು ಕಂಡರು ಭಾಗಣ್ಣನ ಗುಡಿಯಲ್ಲಿ 56ವೇಂಕಟನೃಸಿಂಹಾರ್ಯ ತನ್ನ ಪಾಂಡಿತ್ಯ ಗುರುತನ ನೆನದುಆಕಸ್ಮಿಕ ಬೇಟಿಯಂತೆ ತೋರ್ಪಡಿಸಿವೇಂಕಟೇಶ ತುಳಸೀ ಸನ್ನಿಧಾನದಿ ಸಂಭಾಷಿಸಲುಶೀಘ್ರ ಕಂಡರು ಭಾಗಣ್ಣನ ಜ್ಞಾನಪ್ರಭಾವ 57ಭಾಗಣ್ಣ ಅಭಯವನಿತ್ತು ಆಚಾರ್ಯರನ್ನಹೋಗಿ ಬನ್ನಿ ಆತಂಕಬೇಡ ಮಹಾತ್ಮಮಗ ಸೂರಿಕುಲ ರತ್ನನು ವೇಂಕಟರಾಮಪ್ರಕಾಶಿಪುದು ಆತನ ಜ್ಞಾನಕ್ಷಿಪ್ರದಲೇ ಎಂದರು 58ಭಾಗಣ್ಣ ಆರ್ಯರು ಹೇಳಿದ ರೀತಿಯಲ್ಲೇವೇಂಕಟರಾಮಾರ್ಯ ಏಕವಾರ ಶ್ರವಣದಲ್ಲೇವೇಂಕಟನರಸಿಂಹಾಚಾರ್ಯ ಚಕಿತರಾಗುವಂತೆಅಕಳಂಕ ಪಾಂಡಿತ್ಯಪ್ರೌಢಿಮೆ ತೋರಿಸಿದ 59ಪ್ರತಿದಿನ ಐಜಿಯವರು ಭಾಗಣ್ಣ ದಾಸರೂ ಈರ್ವರುತತ್ವ ವಿಚಾರ ಹರಿಭಜನೆ ಮಾಡಿಒಂದು ದಿನ ಬ್ರಹ್ಮ ಜಿಜ್ಞಾಸ ಸ್ವಾರಸ್ಯದಲಿ ಸಾಯಂಸುಧ್ಯಾಕಾಲ ಅತಿಕ್ರಮವು ಆಯಿತು 60ಸೂರ್ಯಾಸ್ತ ಮನಃಪೂರ್ವಕರ್ತವ್ಯಕರ್ಮಬಿಟ್ಟದೋಷಪ್ರಾಯಶ್ಚಿತ್ತಾಘ್ರ್ಯ ಕೊಡಲಿಕ್ಕೆ ಇರಲುಭಯಬೇಡ ದೋಷವಿಲ್ಲ ಎಂದು ಭಾಗಣ್ಣಾರ್ಯಸೂರ್ಯನ್ನ ತಾನು ನೋಡಿ ತೋರಿಸಿದರು ಐಜೀಗೆ 61ಇಂದ್ರಜಾಲವಲ್ಲವು ಕ್ಷುದ್ರೋಪಾಸನಾದಿಗಳಿಂದಲ್ಲಅರ್ಧರಾತ್ರಿಯಲಿ ಸೂರ್ಯನ್ನ ನೋಡಿ ನೋಡಿಸಿದ್ದುಮಾಧವಶ್ರೀ ಮುಖ್ಯ ವಾಯುದೇವರು ರುದ್ರಸದಾ ಒಲಿದಿರುವ ಭಾಗಣ್ಣಗೆ ಇದು ಆಶ್ಚರ್ಯವಲ್ಲ 62ತೇಜೋಜಲ ಪೃಥ್ವೀಮುನಿಗಳು ಶ್ರೀ ಪ್ರಾಣರುದ್ರರುವಜ್ರ, ಅಗ್ನಿ, ವರುಣ ಪೃಥಿವ್ಯಾದಿ ಸರ್ವರೊಳಗೊರಾಜನೆ ನಿಯಮಿಸುವ ಅನಿರುದ್ಧ ಜಗದೀಶಜಗಜ್ಜನ್ಮಾದಿಕರ್ತ ಗಾಯತ್ರೀ ಭರ್ಗಸರ್ವಗನು 63ತೀರ್ಥಯಾತ್ರೆಯ ತೀರ್ಥರೂಪ ಭಾಗಣ್ಣ ತನ್ನಭ್ರಾತರೊಡಗೂಡಿ ಹೊರಟಿಹರುಮಂತ್ರಾಲಯ ವೇಂಕಟಗಿರಿ ಘಟಿಕಾದ್ರಿಹಸ್ತಿವರದಕಂಚಿ ಮೊದಲಾದ ಕ್ಷೇತ್ರ64ವೇಂಕಟ ಕೃಷ್ಣನ ಮುದ್ರೆಯಿಂ ಕವನಗಳಉತ್ಕøಷ್ಟ ರೀತಿಯಲ್ಲಿ ರಚಿಸಿ ಭಜಿಸುತ್ತಾಭಾಗಣ್ಣ ಆದವಾನೀಯಲ್ಲಿ ತಿಮ್ಮಣ್ಣಾರ್ಯರಲ್ಲಿಮುಕ್ಕಾಮು ಹಾಕಿದರು ಸ್ವಲ್ಪಕಾಲ 65ದಿವಾನು ತಿಮ್ಮಣ್ಣ ರಾಯರ ಉಪಚಾರಸರ್ವ ಅನುಕೂಲ ಆತಿಥ್ಯಕೊಳ್ಳುತ್ತಾದಿವ್ಯಮಾರುತೀ ಗುಡಿಗೆ ಪ್ರತಿದಿನ ಪೋಗಿಸೇವೆಸಲ್ಲಿಸಿದರು ಭಾಗಣ್ಣ ಶ್ರೀಹನುಮನಿಗೆ 66ಶ್ರೀ ವಿಜಯದಾಸಾರ್ಯರು ಶ್ರೀ ವ್ಯಾಸದೇವರ ಕಂಡುಶ್ರೀವರ ಒಲಿದು ಪುರಂದರಾರ್ಯರ ಕೈಯಿಂದದಿವ್ಯನಾಮಾಂಕಿತ ಬೀಜಾಕ್ಷರಗಳ ಹೊಂದಿಭುವಿಯಲಿ ಪ್ರಖ್ಯಾತರಾಗಿ ಬಂದಿದ್ದರಾಗ 67ವಿಜಯವಿಟ್ಠಲದಾಸರಾಯರು ತಮ್ಮನಿಜ ಶಿಷ್ಯವೃಂದದಲಿ ವ್ಯಾಸವಿಜಯಸಾರಥಿಗೋಪಾಲಹಯವದನಭಜನೀಯ ಈ ಮೂರು ಅಂಕಿತಕೊಡಬೇಕಾಗಿತ್ತು 68ಗೋಪಾಲವಿಠ್ಠಲಸುನಾಮಭಾಗಣ್ಣಗೆಸುಪ್ರಿಯ ಮನದಿಂದ ಇತ್ತು ಹಯವದನಸುಪವಿತ್ರ ಅಂಕಿತ ಚೀಕಲಪರವಿ ಆನಂದನಿಗೆಕೃಪಾಂಬುಧಿ ವಿಜಯದಾಸಾರ್ಯ ಇತ್ತರು 69ಶ್ರೀಪುರಂದರದಾಸಾರ್ಯರನುಗ್ರಹದಲಿಸುಪುಣ್ಯವಂತನು ಸಹನ ಶಾಲಿಯಾದಶ್ರೀಪಪ್ರಿಯ ತಿಮ್ಮಣ್ಣ ವೇಣುಗೋಪಾಲನಾಮತಾಪೊಂದಿದ ವಿಜಯದಾಸರು ಕೃಪದಿ ಕೊಡಲು 70ಶೋಭನ ಜ್ಞಾನಪ್ರದ ವ್ಯಾಸ ನಾಮಾಂಕಿತವಸುಬ್ಬಣ್ಣ ಕಲ್ಲೂರು ಪಂಡಿತೋತ್ತಮಗೆಲಭಿಸುವಂತೆ ವಿಜಯದಾಸ ಮಹಂತರುಕೃಪೆಯಿಂದ ಒದಗಿಸಿದರು ಔದಾರ್ಯನಿಧಿಯು 71ಗೋಪಾಲ ವಿಟ್ಠಲಾಂಕಿತದಲಿ ಭಾಗಣ್ಣಶ್ರೀಪಪ್ರಿಯತಮ ಪದ್ಯ ಸುಳಾದಿಗಳ ರಚಿಸಿಸುಪುಣ್ಯವಂತ ಸೀನಪ್ಪ ದಾಸಪ್ಪ ಈರ್ವರಿಗೂಉಪದೇಶ ಮಾಡಿದರು ಮಂತ್ರೋಪೇತ ನಾಮಾಂಕಿತಗಳನ್ನು 72ಕರಿರಾಜವರದನು ಗರುಡವಾಹನಸಿರಿವರವಾಸು ದೇವನೇ ವರದರಾಜನೆಂದೂಧರೆಯಲುತ್ತಮ ಕಂಚೀಪುರದಿ ಇರುವವನು ನಾಮವರದಗೋಪಾಲ ವಿಟ್ಠಲನಾಮ ಶ್ರೀನಿವಾಸನಿಗೆ 73ಇತರಾದೇವಿಯ ಸುತನೆನಿಸಿ ಮಹಿದಾಸನಾಮದಲಿಪ್ರಾದುರ್ಭವಿಸಿದ ಶ್ರೀಯಃಪತಿಗೆ ಪ್ರಿಯತಮವುಬೃಹತೀ ಸಹಸ್ರದಲಿ ವಿಷ್ಣು ನಾಮ ವಿಶ್ವಶಬ್ದಕ್ಕೆವಾಯುದೇವಾಂತರ್ಗತನು ಎಂದು ಜೆÕೀಯ 74ಮಧ್ವಾ ್ಯಖ್ಯ ವಾಯುದೇವರಗುರುಮಹಿದಾಸವೇದವ್ಯಾಸ ಹಂಸಾಖ್ಯ ಕಪಿಲ ಶ್ರೀಪತಿಯಉತ್ತಮನಾಮ ಗುರುಗೋಪಾಲ ವಿಟ್ಠಲನಾಮಅಕಳಂಕ ಯದುಪತಿಯ ನಾಮವ ಕೊಟ್ಟರು 75ಭಂಗಾರದಂಥ ವೈಷ್ಣವ ಸಂತತಿಯ ಪಡೆದುರಂಗನಾಥನನುಗ್ರಹದಿ ಪಾಲಿಸುವಂಥಾರಂಗಪ್ಪರಾಯರಿಗೆ ತಂದೆ ಗೋಪಾಲವಿಟ್ಠಲನಾಮಅಕಳಂಕ ಯದುಪತಿಯ ನಾಮವ ಕೊಟ್ಟರು 76ವಿಜಯರಾಯರ ಪರಮಭಕ್ತಾನುಗ್ರಹಿವಿಜಯಸಾರಥಿಪ್ರಿಯ ಗೋಪಾಲರಾಯರುವಿಜಯಾರ್ಯರ ಸುಪ್ರಸಾದದ ಬಲದಿಂದಅನುಜರಿಗೆ ಒದಗಿಸಿದರುಅಪರೋಕ್ಷ77ಗೋಪಾಲ ವರದಗುರು ಗೋಪಾಲದಾಸರ್ಗಳಅಪರೋಕ್ಷಮಹಿಮೆಗಳ ಸಾಧು ಸಜ್ಜನಗಳತೋರ್ಪಡಿಸಿ ಬೇರೆ ಬೇರೆಯಾಗಿಟ್ಟು ಮೂವರನ್ನುಶ್ರೀಪಪ್ರಿಯ ಕವನವ ರಚಿಸಿಗುರುಹೇಳಿದರು78ಗುರುಅಂತರ್ಗತನಾದ ಗೋಪಾಲನೃಹರಿಯಸ್ಮರಿಸಿ ಮೂವರೂ ಗುರುನಾಮವೂ ತದಂತಸ್ಥಹರಿಗೆ ಸುಪ್ರೀತಿಕರಯೆಂದು ರಚಿಸಿದರುಗುರುಸತ್ಯಬೋಧರ ಪ್ರಭಾವತೋರ್ಪಡಿಸಿ79ಸೂರಿಗಳುಗೋಪಾಲದಾಸಾದಿ ಮೂವರೂಬರೆದ ಕೀರ್ತನೆಯಲ್ಲಿ ಸತ್ಯಬೋಧಾರ್ಯರಸ್ವರೂಪವ ಸೂಕ್ಷ್ಮದಲಿ ಸೂಚಿಸಿಹರು ಎಂದುಅರಿವರು ಜ್ಞಾನಿಗಳು ಬಲ್ಲೇನೇ ನಾನು? 80ನೆರೆÀದಿದ್ದ ಜನರೆಲ್ಲ ಆಶ್ಚರ್ಯ ಚಕಿತರುಪರಿಪರಿ ವಿಧದಲ್ಲಿ ಮೂವರನ್ನು ಕೊಂಡಾಡೆಗುರುಸತ್ಯಬೋಧರು ಯುಕ್ತ ರೀತಿಯಲ್ಲಿಭಾರಿತರ ಭೂಷಣಾನುಗ್ರಹ ಮಾಡಿದರು 81ತಂದೆ ಗೋಪಾಲದಾಸಾರ್ಯರು ಮನೆಯಲ್ಲೇನಿಂದುಸತಿಸುತರಿಗೆ ಹರಿಸೇವೆಯನ್ನಒದಗಿಸುತ ಮಾತ್ರಂತರ್ಯಾಮಿ ಹರಿಯನ್ನ ತಾನುಭಕ್ತಿಪೂರ್ವಕ ಮಾಡುತ್ತಿದ್ದರು ಸೇವಾ ಸುಧ್ಯಾನ ಪರರು 82ಹರಿಕ್ಷೇತ್ರ ಹರಿತೀರ್ಥಯಾತ್ರೆಯಗೈಯ್ಯಲುಸಿರಿವಿಜಯರಾಯರ ಅನುಗ್ರಹ ಕೊಂಡುಹೊರಟರು ಗೋಪಾಲದಾಸಾರ್ಯರುವರದಗುರುಗೋಪಾಲದಾಸರ ಸಮೇತ83ಉಡುಪಿಕ್ಷೇತ್ರಸ್ಥ ಹರಿಮೂರ್ತಿಸ್ಥ ತೀರ್ಥಸ್ಥಕಡಲಶಯನನ್ನ ನೋಡಿ ಸೇವಿಸಲಿಕ್ಕೆಒಡಹುಟ್ಟಿದವರ ಸಹ ನಡೆಯುತ್ತಿರುವಾಗಅಡ್ಡಗಟ್ಟಿದ ಕ್ರೂರನು ಭೀಮಾಭಿದನು 84ಶ್ರೀ ವಿಜಯದಾಸರಿಂ ಮೊದಲೇ ಅನುಗ್ರಹೀತಭಾವುಕಾಗ್ರಣೀ ಗೋಪಾಲಾರ್ಯರು ಹರಿಗುರುಗಳಿತ್ತದಿವ್ಯ ಸಾಮಥ್ರ್ಯದಿಂ ಸಸೈನ್ಯ ಭೀಮನ್ನತೀವ್ರ ನಿಶ್ಚೇಷ್ಟಗೈಸಿ ಶರಣರ ಮಾಡಿದರು 85ಉಡುಪಿಸುಕ್ಷೇತ್ರದಲ್ಲಿ ಗೋಪಾಲಾರ್ಯರುಮಾಡಿದ್ದು ವರ್ಣಿಸಲು ಬಲ್ಲೆನೇ ನಾನು ?ಆಟದಲಿ ಜಗಪಡೆವ ಕೃಷ್ಣ ತಾಸುತನಂತೆಆಟವಾಡಿದ ಬಾಲರೂಪದಿ ಕೃಪಾಳು 86ಪೂರ್ವ ದಕ್ಷಿಣ ವರುಣ ದಿಶೆಯಾತ್ರೆಮಾಡಿಶ್ರೀ ವೇಣೀಸೋಮಪುರಕೆ ಮರಳಿ ಬಂದುಕೋವಿದಕುಲರತ್ನ ವಾಸುದೇವವಿಟ್ಠಲ ರಾಮಶ್ರೀವೇಂಕಟರಾಮಾರ್ಯರನ್ನು ಕಂಡರು 87ಉತ್ತನೂರು ಪೋಗಿ ವೇಂಕಟಕೃಷ್ಣನ್ನವಂದಿಸಿ ಬಂಧುಗಳ ಕೂಡ ತಾ ಇದ್ದುಒಂದುದಿನ ನಿಶ್ಚೈಸಿದರು ಪಂಡರೀಪುರಕ್ಕೆ ಪೋಗಿಇಂದಿರಾಪತಿಯನ್ನ ನೋಡಿ ಸೇವಿಸಲು 88ಪತ್ರಪೂ ಪಲ್ಲವ ಫಲವೃಕ್ಷ ದೇಶವುಸುಪವಿತ್ರ ಶ್ರೀ ತುಳಸೀ ಉತ್ಕøಷ್ಟವನದಿಸುಪುಣ್ಯ ಶ್ಲೋಕ ಶ್ರೀದಾಸಾರ್ಯರನ್ನ ಸುತ್ತಿ ಅಟ್ಟಿಶ್ರೀಪತಿ ಕೇಳ್ದ ಅಲೇನಾಹಿ ಎಂದು 89ಶ್ರೀಹರಿ ಸ್ವೇಚ್ಛೆಯಿಂ ಪ್ರಕೃತಿ ಕ್ಷೋಭಿಸಿ ತ್ರಿಗುಣ ಬೆರೆಸಿಮಹದಹಂಕಾರಾದಿ ತತ್ವ ಸೃಷ್ಟಿಗೈದುಬ್ರಹ್ಮಾಂಡ ನಿರ್ಮಿಸಿ ತದಾಶ್ರಯನಾಗಿ ಇಪ್ಪವನು ತಾನೇಮಹಾದ್ಭುತ ಕುದುರೆ ಸವಾರನಾಗಿ ತೋರಿ ಮರೆಯಾದ 90ಆಲೋಚಿಸಿ ತಿಳಿದು ವಿಟ್ಠಲನೇ ಬಂದವನೆಂದುನೀಲಕುದುರೆ ಎಂಬ ಸ್ತೋತ್ರ ಮಾಡಿದರುಪೇಳ್ವರು ವ್ಯಾಪ್ತೋಪಾಸಕ ಜ್ಞಾನಿಗಳು ಇದರ ರ್ಥಮೊದಲನೇ ನುಡಿಯು ಮೇಲೆ ಹೇಳಿದಹರಿಮಹಿಮೆಯೆಂದು ಬಲ್ಲೆನೇ ನಾನು 91ಭೀಮರಥಿ ಸ್ನಾನವು ಪುರಂದರಾರ್ಯರ ನಮಿಸಿಭೂಯಾದಿ ಗುಣಗಣಾರ್ಣವ ವಿಟ್ಠಲನ್ನಪ್ರೇಮೋತ್ಸಾಹದಲಿ ಸನ್ನಮಿಸಿಸ್ತುತಿಸಿರಮ ರುಕ್ಮಿಣಿಯ ನಮಿಸಿದರು ದಾಸಾರ್ಯ 92ಕೋಲ್ಹಾಪುರ ಪೋಗಿ ಮಹಾಲಕ್ಷ್ಮಿ ಮಂದಿರದಿಶೀಲ ಪರಮಾದರದಿ ಲಕ್ಷ್ಮೀನಾರಾಯಣರನ್ನಕೀಲಾಲಜಾದಿ ಪುಷ್ಪಾರ್ಚನೆಗೈದು ಕಾಪಾಡೆಂದು ಕೀರ್ತನೆಗಳಿಂದ ಸ್ತುತಿಸಿದರು 93ಇನ್ನು ಬಹು ಬಹು ಕ್ಷೇತ್ರಯಾತ್ರೆ ಸೋದರರ ಕೂಡಿಅನವರತಸುವ್ರತ ಧ್ಯಾನಪರರಾಗಿಘನಮಹಿಮ ಗೋಪಾಲ ವಿಟ್ಠಲನ ಸ್ತುತಿಸುತ್ತವೇಣೀ ಸೋಮಪುರಕ್ಕೆ ಬಂದರು ತಿರುಗಿ 94ಗುರುಗಳು ವಿಜಯದಾಸಾರ್ಯರ ದ್ವಾರಾಯಾತ್ರಫಲ ಕೃಷ್ಣನಿಗೆ ಸಮರ್ಪಿಸಿಉದ್ದಾಮಪಂಡಿತವೇಂಕಟರಾಮಾರ್ಯರಲಿಇದ್ದು ಪೋದರು ಉತ್ತನೂರ ಸ್ವಕ್ಷೇತ್ರ 95ಉತ್ತನೂರು ವೇಂಕಟಕೃಷ್ಣನಾಲಯ ಮುಂದೆನಿಂತು ತುಳಸೀ ವನದಿಂದ ಸುಳ್ಳಿ ತೆಗೆವಾಗಬಂದರು ಭ್ಯಾಗವಟ್ಟಿ ಶ್ರೀನಿವಾಸಾಚಾರ್ಯವಂದಿಸಿ ನಿಂತರು ಕೈಮುಗಿದು ವಿನಯದಿ 96ಜ್ಞಾನದಲಿ ಋಜುಮಾರ್ಗ ಗರ್ವದಲ್ಲಿನಿತ್ಯಸಂಸಾರಿಮಾರ್ಗಜ್ಞಾನ ಬೋಧಿಸುವುದರಲ್ಲಿ ಪಂಡಿತರಮಾರ್ಗಮಾನುಷಾನ್ನವನುಂಡು ಮಂದಧೀಯಲ್ಲಿ ಗುರುನಿಂದಾಈ ಶ್ರೀನಿವಾಸಾಭಿದನು ಮಾಡಿ ನರಳುತಿದ್ದ 97ಭಾಗಣ್ಣ ಆರ್ಯರು ಶ್ರೀನಿವಾಸಾಚಾರ್ಯಗೆಅಘನಾಶವಿಜ್ಞಾನಲಭಿಸುವ ಸಾಧನವುನಿಗಮಾರ್ಥ ಬೋಧಕ ಉಪದೇಶ ಮಾಡಿ ಪಂಡರಿಪುರ ಪೋಗಿರಿಜಗನ್ನಾಥ ವಿಟ್ಠಲ ಒಲಿದು ಕಾಂಬ ಎಂದರು 98ಶ್ರೀನಿವಾಸಾಚಾರ್ಯರು ದಾಸಾರ್ಯಾರ್ ಹೇಳಿದಂತೆಸುನಿರ್ಮಲ ಭೀಮ ರಥಿಯಲ್ಲಿ ಸ್ನಾನಗೈದುಇನನಲಿ ಅನಿಲಾಂತರ್ಗತ ನಾರಾಯಣನ್ನಧ್ಯಾನಿಸಿ ಭಕ್ತಿಜ್ಞಾನದಿಂದ ಕೊಟ್ಟರು ಅಘ್ರ್ಯ 99ಐದೆರಡು ಸಾಧು ಭಕ್ತಿ ಪ್ರತಿಪಾದ್ಯ ಶ್ರೀ ನಾರಾಯಣನುವಾಗ್ದೇವಿವರವಾಯುಗಳಿಂದ ಋಕ್‍ಸಾಮದಿಂಸ್ತುತಇಪತ್ತೆರಡಕ್ಷರದಲ್ಲಿ ಎರಡನೇ ಮೂರಕ್ಷರ ಬೋಧಿತಆದಿತ್ಯಸ್ಥ ವಾಯುಸ್ಥನ್ನ ಸ್ಮರಿಸಿಕೊಟ್ಟರು ಅಘ್ರ್ಯ 100ಜಗನ್ನಾಥದಾಸರ್ಗೆ ಗೋಪಾಲದಾಸಾರ್ಯಗುರುಜಗತ್ತಲ್ಲಿ ಕಂಡಿಲ್ಲದ ಉದಾರದಲಿತೆಗೆದು ತನ್ನಾಯುಷ್ಯದಿಂ ಚತ್ವಾರಿವರ್ಷಕೊಟ್ಟರುಗುರುಗ ಶ್ರೀವಿಜಯಗೋಪಾಲ ಶ್ರೀನಿವಾಸನ ಪ್ರೀತಿಗೆ101ಭಕ್ತಿಯಲ್ಲಿ ಭಾಗಣ್ಣನೆಂದು ಸುಪ್ರಖ್ಯಾತಭಕ್ತ ಶಿರೋಮಣಿಯು ಗೋಪಾಲ ದಾಸಾರ್ಯಬೀದಿಯಲಿ ಜರುಗದ ರಥಕೂಢನ್ನ ಬಾರೈಯ್ಯಎಂದು ಸ್ತುತಿಸೆ ರಥ ಓಡೋಡಿ ಬಂತು 102ತಿರುಪತಿ ಶ್ರೀ ಶ್ರೀನಿವಾಸನ ರಥವುಸರಸರ ಬಂದದ್ದು ಜನರು ನೋಡಿಹರಿಭಕ್ತಾಗ್ರೇಸ ಗೋಪಾಲ ದಾಸರನ್ನಪರಿಪರಿ ವಿಧದಿ ಕೊಂಡಾಡಿದರು ಮುದದಿ 103ಕಂಚೀ ವರದರಾಜನ ದೇವಾಲಯದಲ್ಲಿಕಿಚ್ಚು ಸೋಕಿ ಚೀಲ ಉರಿಯಲು ಅದನ್ನದಾಸವರ್ಯ ದೂರದೇಶದಲಿದ್ದರೂ | ತನ್ನ ಚೀಲ |ಕಸಕಿ ಶಾಂತ ಮಾಡಿದರು ಕಂಚಿಯ ಉರಿಯ 104ದಾರಿದ್ರ್ಯ ಋಣರೋಗ ಅಪಮೃತ್ಯು ಅಪಿಚಾರಪರಿಪರಿ ಕಷ್ಟೋಪಟಳ ವಿಘ್ನಗಳಗುರುವಿಜಯರಾಯಾಂತರ್ಗತ ಗೋಪಾಲನ ಒಲುಮೆಯಿಂದಎರಗುವರ್ಗೆ ಕಳೆದಿಹರು ಅದ್ಯಾಪಿ ಒದಗುತಿಹರು 105ಗೋಪಾಲದಾಸರಿಗೆವಿಜಯದಾಸರಲ್ಲಿಇಪ್ಪ ಭಕ್ತಿಯ ವರ್ಣಿಸಲಶಕ್ಯಗೋಪಾಲ ದಾಸರನ್ನು ನಂಬಿದವರನ್ನ ವಿಜಯಾರ್ಯ ಕೈ ಬಿಡರುಗೋಪಾಲವಿಜಯವಿಟ್ಠಲ ಬಂದು ತಾನೇ ಒಲಿವ106ಗೋಪಾಲ ದಾಸಾರ್ಯರೇ ನೀವು ವಿಜಯಾರ್ಯರಲ್ಲಿತಪ್ಪದೇ ಮಾಡಿದ ಭಕ್ತಿಯಿಂದದಿ ಎನಗೆಸ್ವಲ್ಪವಾದರೂ ನಿಮ್ಮಲ್ಲಿ ಪುಟ್ಟುವಂತೆ ಮಾಡಿರಿಗೋಪಾಲ ಪ್ರಿಯತಮರೇ ಪಾಹಿಮಾಂ ಶರಣು 107ಹೆಳವನಕಟ್ಟೆ ಗಿರಿಯಮ್ಮ ಮೊದಲಾದಶೀಲ ಶಿಷ್ಯರು ಬಹುಮಂದಿಗಳುಬಲು ಭಕ್ತಿಶ್ರದ್ಧೆಯಿಂ ಉಪದೇಶಗೊಂಡುಜಲಜನಾಭನ ಒಲುಮೆ ಪಾತ್ರರಾಗಿಹರು 108ಜ್ಞಾನ ಭಕ್ತಿ ವೈರಾಗ್ಯವಂತಳು ಗಿರಿಯಮ್ಮಕ, ೃಷ್ಣ ಮಂತ್ರ ಉಪದೇಶ ದಾಸಾರ್ಯರಿಂದಕೊಂಡು ಶ್ರೀ ರಂಗವಿಟ್ಠಲ ಕೃಷ್ಣನ್ನ ಪ್ರತ್ಯಕ್ಷಕಾಣುವಂಥ ಸೌಭಾಗ್ಯ ಶಾಲಿಯಾಗಿಹಳು 109ಅದ್ವಿಜನು ಶೈವನು ಪತ್ನಿ ಸಹಸೇವಿಸಿಮಂತ್ರಾಲಯ ಗುರುಗಳಿಂ ಅನುಕೂಲ ಹೊಂದಿಕೃತಜÕಭಾವದಿ ಲಕ್ಷ ಬ್ರಾಹ್ಮಣ ಭೋಜನ ಮಾಡಿಸುವೆನುಎಂದು ಹರಕೆ ಮಾಡಿಸಲಿಕ್ಕಾಗಲಿಲ್ಲ 110ಸ್ವಪ್ನದಲಿ ಹೇಳಿದರು ಕರುಣಿ ಶ್ರೀ ರಾಘವೇಂದ್ರಗುರುತಪ್ಪದೇ ಹರಕೆ ಸಲ್ಲುವುದು ಮೂವರು ಬ್ರಾಹ್ಮಣರುಸುಪುಣ್ಯವಂತರು ಮಹಾತ್ಮರು ಮರುದಿನ ಬೆಳಿಗ್ಗೆಈ ಪಥದಿ ಬರುವರ್ಗೆ ಭೋಜನ ಮಾಡಿಸೆಂದು 111ವರದಗುರುಗೋಪಾಲದಾಸರು ದಾಸಾರ್ಯರುಅರಿತುಅಪರೋಕ್ಷಸಾಮಥ್ರ್ಯದಿ ಈ ಸ್ವಪ್ನನೇರಾಗಿ ಬರಲಾಗ ಆಶೈವಗುರುಭಕ್ತನುನಾರೀ ಸಹನಮಸ್ಕರಿಸಿ ಸ್ವಾಗತವನಿತ್ತ 112ಮೂವರಿಗೂ ಅಧಿಕವಾದ ಪದಾರ್ಥಗಳನರ್ಪಿಸಿದೇವರ ನೈವೇದ್ಯ ಮೂವರಿಗೂ ಭೋಜನದೇವಗುರುಬ್ರಾಹ್ಮಣ ಪ್ರೀತಿಯಾಗಲಿ ಎಂದು ನಮಿಸಿದರುಶೈವ ಕುಲೀನ ದಂಪತಿ ಭಕ್ತಿ ಪೂರ್ವಕದಿ 113ಅಂದು ರಾತ್ರಿ ಆ ಭಕ್ತ ದಂಪತಿಗೆ ಸ್ವಪ್ನದಲಿಪ್ರೀತಿ ಆಯಿತು ಕೃಷ್ಣನಿಗೆ ಹರಕೆ ಪೂರ್ಣ ಆಯ್ತುಎಂದು ರಾಘವೇಂದ್ರ ತೀರ್ಥ ಸ್ವಾಮಿಗಳು ಹೇಳಿಮುದದಿ ದಂಪತಿಯ ಕೃತ ಕೃತ್ಯ ಮಾಡಿದರು 114ಮೊದಲು ಆದರ ರಹಿತ ವೆಂಕಟನೃಸಿಂಹಾರ್ಯನಿಂದುಗೋಪಾಲ ದಾಸಾರ್ಯರಹರಿಪೂಜಾಪದ್ಧತಿಯ ನೋಡುತಿರೆ ಹನುಮಂತ ದೇವರುಮೂರ್ತಿಮತ್ ಕುಳಿತಿದ್ದುದು ಕಂಡರು 115ಬಂದು ವೆಂಕಟ ನೃಸಿಂಹಾಚಾರ್ಯರು ಮತ್ತುನಿಂದಿಸಿದ ವೈದಿಕರು ತತ್ವ ಕೀರ್ತನೆಗಳಅದ್ಭುತ ಸುಳಾದಿಕೇಳಿನಿರ್ಮತ್ಸರರಾಗಿಬಂದು ಶಿಷ್ಯತ್ವ ಬೇಡಿದರು ಆರ್ಯರಲಿ 116ವೈರಾಗ್ಯನಿಧಿ ಗಂಗಾಧರನ ಅನುಗ್ರಹದಿವೈರಾಗ್ಯ ಯುಕ್‍ಜ್ಞಾನಹರಿಭಕ್ತಿ ಲಭಿಸಿದ್ದಸೂರಿವರ ಗೋಪಾಲ ದಾಸಾರ್ಯ ಜರಿಗೆ ಶಾಲು ರೇಷ್ಮೆಭಾರಿ ಪಲ್ಲಕ್ಕಿ ವೈಭವದಿ ಮೆರೆದರುಹರಿಪ್ರೀತಿಗಾಗಿ117ಪನ್ನಗಾಚಲಶ್ರೀ ಶ್ರೀನಿವಾಸನ ಭಕ್ತಅನಿಮಿಷಾಂಶರು ಗೋಪಾಲ ದಾಸಾರ್ಯಶ್ರೀನಿವಾಸನಪ್ಪಣೆಕೊಂಡು ಊರಿಗೆ ಬಂದುಅವನೀಸುರರಿಗೆ ಔತಣವಿತ್ತು ಧ್ಯಾನದಿ ಕುಳಿತರು 118ಮುಖ್ಯಕಾರಣ ವಿಷ್ಣು ಸ್ವತಂತ್ರ ಎಂದುತಾ ಭಜಿಸಿಶಿಷ್ಯರಿಗೆ ಬೋಧಿಸಿ ಸಜ್ಜನರ ಪೊರೆದುಪುಷ್ಯ ಬಹುಲಾಷ್ಟಮೀಯಲ್ಲಿ ಪೂಷಯದುಪತಿಧಾಮಕೃಷ್ಣ ಭಕ್ತಿರಿಗೌತಣವಿತ್ತು ಐದಿದರು 119ಗದ್ವಾಲ ರಾಜ ಮೊದಲಾದ ರಾಜ ಪ್ರಮುಖರಿಂದಮೇದಿನೀ ಪ್ರಖ್ಯಾತ ಯತಿಗಳು ಪಂಡಿತರಿಂಎದುರಿಲ್ಲದಸೂರಿಐಜೀಯವರಿಂದಲುಸದಾ ಮರ್ಯಾದೆ ಕೊಂಡವರು ದಾಸಾರ್ಯ 120ವಿಜಯದಾಸಾರ್ಯ ಪೂಜಿಸಿದಹರಿಮೂರ್ತಿವಿಜಯವಿಟ್ಠಲ ಪ್ರತಿಮೆ ಅಂತರ್ಗತನ್ನವಿಜಯಸಾರಥಿಪ್ರಿಯ ಗೋಪಾಲ ದಾಸರು ಪೂಜಿಸಿರಾಜಿಸುತಿಹ ಮೂರ್ತಿಇಹುದುಅವರಮನೆಯಲ್ಲಿ121ಜ್ಞಾನ ಸುಖ ಬಲ ಪೂರ್ಣ ಜನ್ಮಾದಿಕರ್ತಅಜವನರುಹಜ ಪಿತ ಶ್ರೀಶಪ್ರಸನ್ನ ಶ್ರೀನಿವಾಸಅನಘಹಯಮುಖವಿಜಯಗೋಪಾಲ ಸರ್ವಗಗೆಘನ್ನ ಪ್ರಿಯ ಗೋಪಾಲ ದಾಸಾರ್ಯ ಶರಣು 122|| ಸಂಪೂರ್ಣಂ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಮಂಗಳ ದೇವಿಗೆ ಜಯ ಜಯಶ್ರೀ ಮಂಗಳ ದೇವಿಗೆ ಜಯ ಜಯಸ್ವಾಮಿಗೆ ಜಯ ಸ್ವಾಮಿನಿಗೆ ಜಯ ಜಯವೆಂದು ಪಾಡಿ ಜಾನಕಿರಾಮಗಾರತಿಯ ಬೆಳಗಿರೆ ಪ.ಪದುಮಿಣಿಯರು ಪತಿವ್ರÀ್ರತಾಮಣಿಯರುವಿಧುಬಿಂಬದ ಮುಖಿಯರು ಸಖಿಯರುಪದುಮರಾಗದ ಹರಿವಾಣದಿ ಹರಿವಾಣದಿ ಹರಿಮಣಿದೀಪದಕದÀಡಿನಾರತಿಯ ಬೆಳಗಿರೆ 1ಉಲಿವಂದುಗೆಗಾಲಿನ ಮೇಲಿನಕಲಧೌತದ ಇತ್ತರದುತ್ತರಿಥಳಥಳಿಸುವ ಶಶಿರವಿ ಕೋಟಿಗಳ ಕೋಟಿಗಳಗೆಲುವ ರವಿಕುಲ ತಿಲಕಗಾರತಿಯ ಬೆಳಗಿರೆ 2ಅಂಗದವಲಯಾಂಗುಲಿಮುದ್ರಿಕೆರಂಗುಮಾಣಿಕ ಮುತ್ತಿನ ಸರಬಂಗಾರದ ಮೇಲೆವೈಜಯಂತಿವೈಜಯಂತಿ ಪದಕವು ತುಳಸಿಶೃಂಗಾರಗಾರತಿಯ ಬೆಳಗಿರೆ 3ಇಂದಿರೆಸೀತಾರ್ಪಿತಮಾಲಾಕಂಧರಭುವನಾವಳಿಗಪ್ರತಿಸುಂದರ ಸದ್ಗುಣಸಾಂದ್ರಉಪೇಂದ್ರ ಭೂಮಿಜೆÉೀಂದ್ರÀ ಲಕ್ಷ್ಮಣಾಗ್ರಜ ರಾಮ ಚಂದ್ರಗಾರತಿಯ ಬೆಳಗಿರೆ 4ಕುಂಡಲಮುಕುಟಾಂಕಿತ ಸನ್ಮುಖ ಸುಭ್ರೂಹಿತಮಂಡಲ ಗಂಡದಪುಂಡರೀಕಾಭಾನಯನದ ನಯನದ ಘನಶಾಮಲವರಕೋದಂಡಗಾರತಿಯ ಬೆಳಗಿರೆ 5ಋಷಿಮಖವನು ಈಕ್ಷಿಸಿ ರಕ್ಷಿಸಿವಿಷಕಂಠನ ಧನುವ ಮುರಿಹೊಯಿದು ಮುರಿಹೊಯಿದುತುಷಿಸಿದಗಾರತಿಯ ಬೆಳಗಿರೆ 6ಹನುಮನ ಕಂಠದ ಸನ್ಮಣಿಗೆಪಣೆಗಣ್ಣನ ಶ್ರೀ ಜಪಮಣಿಗೆನೆನೆವರ ಚಿಂತಾಮಣಿ ಸೀತಾಶಿರೋಮಣಿಗೆ ಶಿರೋಮಣಿಗೆಪ್ರಸನ್ನವೆಂಕಟ ವನಜೋದ್ಭವಪಿತಗಾರತಿಯ ಬೆಳಗಿರೆ 7
--------------
ಪ್ರಸನ್ನವೆಂಕಟದಾಸರು