ಒಟ್ಟು 57925 ಕಡೆಗಳಲ್ಲಿ , 139 ದಾಸರು , 12496 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಧಿಸಿ ನೋಡಿ ಸುವೃತ್ತಿ ಭೇದಿಸಿಕೂಡಿ ಸುಮುಕ್ತಿ ಧ್ರುವ ಹಿಡಿದು ಸಾರುವ ಶ್ರುತಿ ನಿಜಗೂಡಿ ಗೂಡಿನೊಳಗೆ ಬೆರೆದಾಡಿ ಇಡಾಪಿಂಗಳ ನಾಡಿ ನಡುವಾವಿನ ಜಾಡೆ ಹಿಡಿದು ಘನಗೂಡಿ 1 ಏರಿನೋಡಲು ಆರು ಚಕ್ರತಾಂ ದೋರುತದೆ ಸುಪಥ ತಿರುಗಿನೋಡಲು ತನ್ನೊಳು ತಾ ಅಮೃತ 2 ಹಿಡಿದು ಗುರುಪಾದಾರವಿಂದ ಪಡೆದ ಮಹಿಪತಿ ಅನಂದ ಗೂಢ ಗುರುತವಾಯಿತು ಬಲು ಚಂದ ಕಡಿದ್ಹೋಯಿತು ಭವಬಂಧ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧಿಸಿ ಪಡೆದಿದ್ದೀ ನರಜನುಮ ಸಂ ಪಾದಿಸಿ ಕೊಳ್ಳೆಲೆ ಹರಿನಾಮ ಪ ಪೋದಬಳಿಕ ಇಂಥ ಮಹಜನುಮ ಮತ್ತೆ ಸಾಧನ ಸಾಧ್ಯವಲ್ಲೆಲೊ ತಮ್ಮ ಅ.ಪ ಮಡದಿಮಕ್ಕಳೆಂಬ ಒಣಭ್ರಾಂತಿ ನಿನ ಗ್ಹಿಡಿದಿದೆ ಮಾಯದ ಘನಚಿಂತಿ ಒಡೆದು ತೋರುವ ಜಗಕ್ಷಣ ಸಂತಿ ಇದು ಕಡೆಗೆ ಒಂದು ಇಲ್ಲ ನಿನ್ನ ಸಂಗತಿ1 ಅರ್ಥಇಲ್ಲದೆ ನಾನಾ ಯೋನಿಯಲ್ಲಿ ನೀ ಸತ್ತುಹುಟ್ಟುತ ಬಹು ಬಳಲುವ್ಯಲೇ ಸತ್ಯ ನಿತ್ಯಸುಖ ತಿಳಿಮರುಳೇ ಕಾಂಬ ಮತ್ರ್ಯಭೋಗವೆಲ್ಲ ಸುಳ್ಳುಸುಳ್ಳೆ 2 ತೊಳಲುತ ಎಂಭತ್ತು ನಾಲ್ಕುಲಕ್ಷ ಜನ್ಮ ತಾಳುತ ಪಡೆದಿದ್ದಿ ಬಲುಶಿಕ್ಷೆ ಚೆಲುವ ಶ್ರೀರಾಮನೊಳು ಇಡು ಲಕ್ಷ್ಯ ನಿನಗೊಲಿದು ಕೊಡುವ ಸ್ವಾಮಿ ನಿಜಮೋಕ್ಷ 3
--------------
ರಾಮದಾಸರು
ಸಾಧಿಸಿದೇ ಖೂನ ಸದಾಸದ್ಗುರು ಕೃಪೆ ಜ್ಞಾನ ಛೇದಿಸಲನುಮಾನ ಶೋಧಿಸ್ಯನುದಿನ ಭೇದಿಸಿ ನೋಡಿ ಸದೋದಿತಾತ್ಮಙÁ್ಞನ 1 ಹೇಳಿ ಕುಡುವದಲ್ಲ ಕೇಳಿ ಕೊಂಬುವುದಲ್ಲ ಹೇಳುವ ಮಾತಿನೊಳಿಲ್ಲ ಕೇಳುವ ಕಿವಿಯೊಳಿಲ್ಲ ತಿಳಿವಿನೊಳಿಹ ನಿಜಗುಟ್ಟು ತಿಳಿದವಬಲ್ಲ 2 ಸೋಹ್ಯ ಸೂತ್ರದ ಖೂನ ದೇಹಾತೀತನು ಬಲ್ಲನೆ ಪೂರ್ಣ ಗುಹ್ಯ ಗೊಪ್ಪದ ಧನ ಮಹಾನುಭವದ ಸ್ಥಾನ ಮಹಿಪತಿ ಮನೋನ್ಮನಲೀಯ ನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧಿಸಿದೇ ನೋಡಿ ಪೂರ್ಣ ಆದಿ ತತ್ವದ ಸುಸ್ಥಾನ ಭೇದಿಸುವದನುದಿನ ಸದಾನಂದ ಗುರುಜ್ಞಾನ ಧ್ರುವ ಮಾತಿನಂತಲ್ಲವಿದು ಸ್ವಾತ್ಮಸುಖದ ಸಾಧನ ಶ್ರುತಿಗಗೋಚರ ನೋಡಿ ಪ್ರತ್ಯೇಕದನುಸಂಧಾನ ಅತಿಗುಹ್ಯಗೂಢವಿದು ಹಿತೋಪಾಯದ ಖೂನ ರತಿಗೊಟ್ಟುನೋಡಿ ಪ್ರತ್ಯಕ್ಷ ಇಹ್ಯ ನಿಧಾನ 1 ನಡಿನೋಟ ನೀಟಮಾಡಿ ಪಡಕೊಳ್ಳದೆ ಸ್ವಹಿತ ನುಡಿಆಟದೋರಬ್ಯಾಡಿ ಕೂಡಿ ಸುಜ್ಞಾನÀಸನ್ಮತ ಬಡಬ್ಯಾಡಿ ನಾನಾಶ್ರಮವಿಡಿಯದೆ ಸುಗಮ ತಾ ಇಡಿದು ತುಂಬೇದ ಸಾಂದ್ರ ನೋಡಿ ಅನಂದೋಭರಿತ 2 ಸಾಧನಕಿದೇ ಮುಖ್ಯ ಸಾಧಿಸಿದೆ ಗುರುದಯ ಇದಕಿಲ್ಲ್ಲಿನ್ನೊಂದಧಿಕ ಬುಧಜನರ ಉಪಾಯ ಅದರಿಂದೊಲುವ ತಾನು ಸದ್ಗುರು ಭಾನುಕೋಟ್ಯುದಯ ಸದ್ಗೈಸಿ ಮಹಿಪತಿಯ ಸದೋದಿತ ಉದಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧು ನೀನಾಗೆಲೊ ಸ್ವಾಮಿ ತಾ ಕಾಣುವಾ ಪ ಮೇದಿನಿ ಅ.ಪ ಎಂದಿಗೆ ನಂದಿ ನಾನೊಂದುವೆನೆಂದು ನೀ ಸಂದೇಹ ಸಂವರಿಪನೊಲಿದು ತಾ 1 ತಾನಾದರೆ ತನ್ನದೇನು ಜಾಣ ತಾ ನೋಡುತಂ ಪ್ರಾಣನಾಥ ನೀನೆಂದಾಡುತಂ ಪಾಡುತ 2 ವಿಶ್ವದೊಳು ರಾಜಿಪ ಸಸ್ವರೂಪಾ ಗುರು ಅಸ್ಮದಾರ್ಯ ತುಲಸಿರಾಮದಾಸನಿತ್ತ 3
--------------
ಚನ್ನಪಟ್ಟಣದ ಅಹೋಬಲದಾಸರು
ಸಾಧು ಸಂಗತಿ ಮಾಡೋ ಎಲೆ ಮನಾ ಸಾಧು ಸಂಗತಿ ಮಾಡು ಪ ಘೋರತರದ ಸಂಸಾರ ಸಾಗರದಿ ಪಾರು ಮಾಡಿ ಮುರಾರಿಯ ಸ್ಮರಿಸುವ 1 ಕರ್ಮಫಲಾಪೇಕ್ಷಿಸದಲೇ ಮಾಡಿ ತಾ ನಿರ್ಮಲ ಚಿತ್ತದಿ ಹರಿಯನು ಪೊಗಳುವಾ 2 ತನ್ನ ಪಿತ ಹನುಮೇಶವಿಠಲಗೆ ಆತ್ಮಅರ್ಪಿಸಿ ಕೃತಾರ್ಥನಾದನು ಸಾಧು ಸಂಗತಿ ಮಾಡೋ 3
--------------
ಹನುಮೇಶವಿಠಲ
ಸಾಧು ಸಂಗವ ಮಾಡಿ ಪ ಜ್ಞಾನ ಸಾಧನೆಗಳ ಏನ ಬೇಡಿದದೆಲ್ಲಾ | ತಾನಿದಿರಿಡುವದಿ ನೋಡಿ 1 ಹವಣಕ ಮನ ತಂದು ನೆವನವೆಲ್ಲ ಬಿಡಿಸಿ | ಶ್ರವಣ ಮಾಡಿಸುವರು ಕೂಡಿಮ 2 ಸಾರಥಿ | ಬಂದು ಕೂಡುವ ವಡಮೂಡಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಧು ಸಜ್ಜನ ಸಂತರ ಸಲಹುವ ಪತಿ ಹರಿ ಯಶೋದ ನಂದನಾ ಪ ಕನಕಾಂಬರಧರ ಕಮಲಸಂಭವ ಪಿತ ಇನಕುಲ ಭೂಷಣ ವೀರಾಧಿವೀರ ಘನಮಕುಟಧರ ಶಿರ ಕಾರುಣ್ಯಸಾಗರ ಅನಿಮಿತ್ತ ಬಂಧು ಜಗದಾದಿ ಪ್ರಿಯ ದಿನಕರ ಕೋಟಿ ತೇಜ ದೇವಾದಿದೇವ ದೀನರಕ್ಷಕ ರಾಮ ಜಾನಕಿ ಪ್ರೇಮಾ ಅನಿಮಿಷ ರೊಡೆಯ ಶ್ರೀ ಆದಿನಾರಾಯಣ ಕನಿಕರಿಸಿ ಎನ್ನಮೇಲೆ ಕೃಪೆ ಮಾಡೋ ಗೋವಿಂದಾ1 ವಾಸುಕಿಶಯನ ಶ್ರೀವಸುದೇವ ತನಯಾ ಸಾಸಿರನಾಮದ ಸರ್ವೇಶಾ ಈಶಾ ವಾಸುದೇವಾಕೃಷ್ಣಾ ವಾರಿಜೋದರ ಶ್ರೀನಿವಾಸ ವೇದೋದ್ಧಾರ ವೈದೇಹಿ ರಮಣ ಭೂಸುರ ವಂದಿತ ಪೂಜಿತ ಸರ್ವತ್ರ ಶ್ರೀಶವೇಣನಾದ ಶೀತ ಜನಪೋಷಾ ಭಾಸುತ ಕೀರ್ತಿ ವಿಶಾಲ ಭಕ್ತವತ್ಸಲ ದಾಸನು ನಾ ನಿನ್ನ ದಯಮಾಡಿ ರಕ್ಷಿಸೆನ್ನ 2 ಸುಂದರ ವದನ ಸುರೇಂದ್ರ ಅರ್ಚಿತ ಪರಮಾನಂದ ಮುಕುಂದ ಮಹಾದೇವನೆ ಹೊಂದಿ ನಿಮ್ಮಯ ಚರಣದ್ವಂದ್ವ ಪೂಜಿಪ ರಂದದಿ ಪುರವಂತ ಬಿರುದುಳ್ಳ ದೇವಾ ಸಿಂಧು ಶಯನನಾದ 'ಶ್ರೀಹೆನ್ನವಿಠ್ಠಲಾ’ ಕರೆದೆನ್ನ ------------------------- ------ ಎನ್ನನ್ನು ಕರುಣಿಸು ಕಾಯೋ
--------------
ಹೆನ್ನೆರಂಗದಾಸರು
ಸಾಧು ಸಜ್ಜನ ಸತ್ಯಗುಣಕಿದಿರುಂಟೆಆದಿಕೇಶವನ ಪೋಲುವ ದೈವವುಂಟೆ ಪ ಸತ್ಯವ್ರತವುಳ್ಳವಗೆ ಮೃತ್ಯುಭಯವುಂಟೆಚಿತ್ತಶುದ್ಧಿಯಿಲ್ಲದವಗೆ ಪರಲೋಕವುಂಟೆವಿತ್ತವನರಸುವಂಗೆ ಮುಕ್ತಿಯೆಂಬುದುಂಟೆಉತ್ತಮರ ಸಂಗಕಿಂತಧಿಕ ಧರ್ಮವುಂಟೆ 1 ಸುತಲಾಭಕಿಂತಧಿಕ ಲಾಭವುಂಟೆಮತಿರಹಿತನೊಳು ಚತುರತೆಯುಂಟೆಪತಿಸೇವೆಗಿಂತಧಿಕ ಸೇವೆಯುಂಟೆಸತಿಯಿಲ್ಲದವಗೆ ಸಂಪದವೆಂಬುದುಂಟೆ 2 ಪಿಸುಣಗಿನ್ನಧಿಕ ಹೀನನುಂಟೆವಸುಧೆಯೊಳನ್ನದಾನಕೆ ಸರಿಯುಂಟೆಅಶನವ ತೊರೆದ ಯೋಗಿಗೆ ಭಯವುಂಟೆವ್ಯಸನಿಯಾದ ನೃಪನಿಗೆ ಸುಖವುಂಟೆ 3 ಧನಲೋಭಿಗಿನ್ನಧಿಕ ಹೀನನುಂಟೆಮನವಂಚಕ ಕಪಟಿಗೆ ನೀತಿಯುಂಟೆಸನುಮಾನಿಸುವ ಒಡೆಯಗೆ ಬಡತನವುಂಟೆವಿನಯವಾಗಿಹ ಸಂಗದೊಳು ಭಂಗವುಂಟೆ4 ಹರಿಭಕ್ತಿಯಿಲ್ಲದವಗೆ ಪರಲೋಕವುಂಟೆಪರಮಸಾತ್ತ್ವಿಕ ಗುಣಕೆ ಪಿರಿದುಂಟೆಪರನಿಂದೆಗಿಂತಧಿಕ ಪಾತಕವುಂಟೆವರದಾದಿಕೇಶವನಲ್ಲದೆ ದೈವವುಂಟೆ 5
--------------
ಕನಕದಾಸ
ಸಾಧು ಸಂತರಾಶ್ರಯ ಮಾಡಿ | ಇದೇ ಮಾಡಿ ಹಿತ ನೋಡಿ ಪ ಅವರ ವಚನಕಾಗಿ ಅಗೋಚರನಾದಾ | ದೇವ ಬಹನು ಒಡಮೂಡಿ 1 ಎಡಬಲದಲಿ ರಿದ್ದಿ ಶಿದ್ಧಿ ನಿಂದಿರಲು | ನೋಡಲು ನುಡಿಸರು ಕೂಡೀ 2 ಮಹಿಪತಿ ನಂದನು ಸಾರಿದ ನಿಜವಾ | ಇಹಪರ ಸುಖವ ಸೂರ್ಯಾಡಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಧು ಸಮಾಗಮ ಸಾಧನಕುತ್ತಮೋತ್ತಮ ಸಾಧಿಸಿದವ ಸಕಲಕ ನಿಸ್ಸೀಮ ಧ್ರುವ ಸಾಧು ಸುದರುಶನ ಸದಮಲಾನಂದ ಪೂರ್ಣ ಸದಾ ಸದ್ಗೈಸುವ ಸುಖಸಾಧನ 1 ಸಾಧು ಸಂಭಾಷಣ ಸುಧಾರಸ ಪ್ರಾಶನ ಸದೋದಿತ ಸಹಿತ ಭೂಷಣ2 ಸದಾ ಸಕಾಲದಲಿ ಮಹಿಪತಿಗಾನಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧು ಸಹವಾಸ ಸದಮಲಾನಂದ ಸಂತೋಷ ಧ್ರುವ ಇದ್ದರಿರಬೇಕು ನೋಡಿ ಅಧ್ಯಕ್ಷರಾಶ್ರಯ ನಿಜಗೂಡಿ ಸಿದ್ಧಿ ಬಾಹುದು ಎದುರಿಡಿ ಇದ್ದದ್ದೆ ಕೈಗೂಡಿ 1 ಒಡಲು ಹೊಕ್ಕರವನೆ ಕೂಡಿ ಪಡೆದು ಸ್ವಸುಖ ಸೂರ್ಯಾಡಿ ದೃಢಭಾವನೆ ಮಾಡಿ 2 ಸಾಧಿಸಿ ಮಹಿಪತಿ ನಿಜ ಭೇದಿಸಿ ನೋಡನುಭವದ ಬೀಜ ಆದಿ ಅನಾದಿ ಸಹಜಬೋಧದ ನಿಜಗುಜ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧು ಸ್ವರೂಪ ಸಾದು ಸ್ವರೂಪ ಸಾಧಿಸಿದವ ಕುಲದೀಪ ಧ್ರುವ ಸ್ವರೂಪ ನಿಜಗೌಪ್ಯ ಸರ್ವರಿಗಿದು ಅಪ್ರಾಪ್ಯ 1 ನಡಿನುಡಿ ಬಲು ಗೂಢ ಪಡೆದವ ತಾ ಘನ ಪ್ರೌಢ 2 ದುರ್ಲಭ ದರುಶನ ಸುಲಭಲ್ಯಾಗದು ಖೂನ 3 ಸ್ವಹಿತ ಸಾಧು ದಯ ಮಹಿಪತಿಗಾಯಿತು ಉದಯ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧುರ ಮಹಿಮೆಯು ಸಾಧಿಸದೆ ತಿಳಿಯದು ಭೇದಿಸದಲ್ಲದೆ ಹೊಳೆಯದಿದು ಧ್ರುವ ತೆಂಗಿನ ಫಲದಂತವರ ಸಂಗದಸುಖ ಹಿಂಗದಂತನುದಿನ ಅನುಭವಿಸುವದಲ್ಲದೆ 1 ಬಂಡೆಯೊಳಿದ್ದದ ತಾ ಒಡೆದು ಪ್ರಾಶಿಸಿದಂತೆ ಕಡಲೊಳಗಿದ್ದ ರತ್ನ ಮುಳುಗಿ ತೆಗೆದಂತೆ 2 ಅಂತರಾತ್ಮದ ಸುಖ ಮಹಾತ್ಮರಗಲ್ಲದೆ ಮೂಢಾತ್ಮರಿಗಿದು ಎಲ್ಲಿಹುದು 3 ಸಾಧು ಸಂತರ ನಿಜದಾಸ ಮಹಿಪತಿಗಿನ್ನು ಸಾಧು ಸಂಗತಿ ಜೀವನ್ಮುಕ್ತಿಯು 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧುಸಂಗ ಶೀಘ್ರಕೂಡಿಸೊ ಪ ಎಷ್ಟು ದಿನ ಕಷ್ಟಪಡುವದೋಈ ಭವದೊಳು ಈಸಲಾರೆನಯ್ಯ ಹರಿಯೇ ಇಷ್ಟು ದಿನ ಇದ್ದಂತೆ ಇರಲಾರೆನೆಂದು ಕರವ ಮುಟ್ಟಿ ಮುಗಿದು ಬೇಡಿಕೊಂಬೆ ಮುರಾರಿ ಕೃಷ್ಣ ನೀನೇ ಕಾಯೋ 1 ಹರಿಹರರು ಸಮಾನರೆನ್ನದಾ ಈ ಸಜ್ಜನರಾ- ಸಂಗದಿಂದ ಹೀನಾ ನಾನಾದೆ ಇನ್ನುಮ್ಯಾಲೆ ಇಲ್ಲವಯ್ಯ ಸೃಷ್ಟಿಗಧಿಕ ಶ್ರೀನಿವಾಸಾ ಇನ್ನು ನಿನ್ನ ಸ್ಮರಣೆಯಿಂದ ಇರುವೆನಯ್ಯ ಮುಕುಂದ 2 ಪೃಥ್ವಿಯಲ್ಲಿ ಪುಟ್ಟಿದಾ ಮೊದಲು ನಿನ್ನಾ ವೃತ್ತಾಂತ ಒಂದು ದಿನ ಮಾಡಲಿಲ್ಲವೋ ಎಂದು ಎನ್ನ ಮ್ಯಾಲೆ ಕ್ರೂರದೃಷ್ಟಿಯಿಂದಾ ನೋಡಾದೀರು ವಾಸುದೇವ ವೈಕುಂಠವಾಸ ಲಕ್ಷುಮಿ ರಮಣ3 ನಿತ್ಯದಲ್ಲಿ ವಿಪ್ರರಾ ವೃಂದಾದೊಳಗೆ ನಾ ಆ- ಸಕ್ತನಾಗಿ ಇರುವೆ ಮುಕುಂದಾ ಎಂಥ ಪಾಪಿ ಎಂದು ಉದಾಸೀನಮಾಡಿ ನೋಡಬೇಡ ನಿನ್ನ ಕಂದಾನೆಂದು ತಿಳಿದು ಪಾಲಿಸಯ್ಯ ನಾರಾಯಣ 4 ಹನುಮ ಭೀಮ ಮಧ್ವೇಶಾರಿಂದಾ ಸೇವಿತ ಪ್ರಿಯಾ ಶಾಂತಮೂರ್ತಿ ಶಾಮವರ್ಣನೇ ಶ್ರೀದವಿಠಲೇಶಾ ನಿನ್ನಾ ದಾಸನೆಂದು ಪಾಲಿಸೆನ್ನ ಸಾರಿ ಬೇಡಿಕೊಂಬೆನಯ್ಯ ರಾಮಚಂದ್ರ ರಾವಣಾಚಾರಿ5
--------------
ಶ್ರೀದವಿಠಲರು