ಒಟ್ಟು 54621 ಕಡೆಗಳಲ್ಲಿ , 139 ದಾಸರು , 12331 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರಸಿಜಾಸನವಿನುತ ಸರಸ ಕರುಣಾಭರಿತ ಪರಮಪಾವನ ಚರಿತ ಪುಣ್ಯಗಾತ್ರ ಭಾರ್ಗವ ಮದಾಪಹ ಭುವನ ಮೋಹಕ ದೇಹ ಭಗರ ಕಾರ್ಮಕಭಂಗ ಮಂಗಳಾಂಗ ಇನಕುಲಾರ್ಣವ ಸೋಮ ತ್ರಿನಯನ ಮನಃ ಪ್ರೇಮ ಜನನಿಲಯ ಸುವಿರಾಮ ದಿವ್ಯನಾಮ ಸಾಕೇತಪುರಧಾಮ ಕಾಕುತ್ಯರಾಮ ರಾಕೇಂಧು ನಿಭವದನ ದುರಿತದಮನ ಶ್ರೀಕಾಂತ ಶೇಷಾದ್ರಿನಿಲಯ ಸದಯ
--------------
ನಂಜನಗೂಡು ತಿರುಮಲಾಂಬಾ
ಸರಸಿಜೋದ್ಭವನುತ ಸಿರಿಲೋಲ ಹರಿ ಸರ್ವರೊಳಿಹ ಶ್ರೀ ಗೋಪಾಲ ಶರಣಾಗತವತ್ಸಲ ಕರುಣಾನಿಧಿ ಕೃಪಾಲ ಸುರಜನ ಸಾನುಕೂಲ ವರಮುನಿಪಾಲ 1 ಮಾಮನೋಹರ ಮಾರಪಿತನೀತ ಕಾಮಪೂರಿತ ವಿಮಲ ಚರಿತ ಸಾಮಗಾಯನಪ್ರಿಯ ಸೋಮಶೇಖರ ಧೇಯ ಸಾಮಜ ವರದ ಸಮಸ್ತಹೃದಯ 2 ಸಾಹ್ಯಸಕಲಕೆ ಸನ್ನಿಧನೀತ ಇಹ ಸರ್ವಾನಂದ ಸರ್ವಭರಿತ ಸ್ವಹಿತ ಸುಖದಾತ ಬಾಹ್ಯಾಂತ್ರ ಸದೋದಿತ ಮಹಿಪತಿ ಪ್ರಾಣನಾಥ ಶ್ರೀಹರಿ ಸಾಕ್ಷಾತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸರಸೀಔಂಬಕಿ ನೀರೇ ಎನಗ|ತ್ವರತದಿ ತೋರೆ| ಸರಸಿರುಹ ವಂದ್ಯನಾ ಪ ಪಲ್ಲವಧರದಲಿಂದಾ|ಕೊಳಲು ನಾನಾ ಪರಿಯಾ| ಬಲ್ಲತನದಲಿ ಊದಲು| ಹುಲ್ಲೆಯಂದದಿ ಮನಸು|ಮರಳು ಗೊಂಡಾಥನಿಗೆ| ಭುಲ್ಲವಿಸುತಿಹುದಮ್ಮಾ ನಮ್ಮಾ 1 ಕೈರವ ಸರ್ವೋದಯವ ಕಂಡು|ಮುದದಿಂದ| ಚಕೋರ ಸಂತೋಷಿಸುವಂತೆ| ನೀರಜಾನನ ನೋಡ ಲಕ್ಷಣದಿ ನೋಟಕ| ಪಾರಣೆ ಯಾಗುದಮ್ಮಾ ನಮ್ಮಾ 2 ಪರಮ ಜ್ಞಾನಾಂಗನೆಒಂದೊಂದು ಘಳಿಗೆ ವತ್ಸರ| ದಂತೆ ಪೋಗುತಿಹುದು| ತರಿತ ಮಹಿಪತಿ ನಂದ|ನೋಡಿ ಯನನು ತೋರೆದಡೆ| ಹರನ ನಿಲ್ಲದಮ್ಮಾ ನಮ್ಮಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸರಸೀರುಹಾಂಬಕಿ ನಿನ್ನ ಪಾದ- ಸರಸಿಜಗಳ ಸ್ಮರಿಸುವೆ ಪೊರೆಯೆನ್ನಪ. ಕಾಳಾಹಿವೇಣಿ ಕಲಕೀರವಾಣಿ ಫಾಲಾಕ್ಷನ ರಾಣಿ ಪರಮಕಲ್ಯಾಣಿ1 ಕಣ್ಮಯಜಾತೆ ಹಿರಣ್ಮಯ ಖ್ಯಾತೆ ಕಣ್ಮುಖ ವರಕರಿ ಷಣ್ಮುಖಮಾತೆ2 ಕಣ್ಮನದಣಿಯೆ ಕೊಂಡಾಡುವೆ ಪಾಡುವೆ ಮನ್ಮನೋರಥದಾಯೆ ಚಿನ್ಮಯೆ ಚೆಲುವೆ3 ಕಂಬುಕಂಧರಿ ನಿನ್ನ ನಂಬಿದೆ ಶಂಕರಿ ಕುಂಭಪಯೋಧರಿ ಶಂಭುಮನೋಹರಿ4 ಸಿರಿ ಕಾತ್ಯಾಯಿನಿ ಗೌರಿ ಭವಾನಿ ಹರಿಸರ್ವೋತ್ತಮ ಲಕ್ಷ್ಮೀನಾರಾಯಣ ಭಗಿನಿ5
--------------
ತುಪಾಕಿ ವೆಂಕಟರಮಣಾಚಾರ್ಯ
ಸರಸ್ವತಿ ಕಮಲಭವನ ಪ್ರಿಯ ರಾಣಿ ಪ ಅಂತರಂಗದ ತಂತಿಯ ಮಿಡಿಸೌನಿಂತು ಜಿಹ್ವೆಯಲಿ ಹರಿ ಗುಣ ನುಡಿಸೌಕಂತುಜನಕನ ದಯವನು ಕೊಡಿಸೌಸಂತತ ಶಾರದೆ ವೀಣಾ ಪಾಣಿ 1 ಪನ್ನಗ ವೇಣಿ 2 ಪ್ರೇರೆರಿಸರ್ಥಗರ್ಭದ ನುಡಿಗಳನುತೋರಿಸು ಪದ್ಯವ ರಚಿಪ ರೀತಿಯನುಚಾರು ಚರಣಗಳಿಗೆರಗುವೆ ಗದುಗಿನವೀರನಾರಾಯಣನ ಸೊಸೆಯೆ ಸುವಾಣಿ 3
--------------
ವೀರನಾರಾಯಣ
ಸರಸ್ವತಿ ದೇವಿ ಸರಸ್ವತೀ ಲೋಕಮಾತೆ ದೇವಿ ಪ ಪರಮಕಲ್ಯಾಣಿ ಪಾವನೆವಾಣಿ ಸುರುಚಿರ ಪುಸ್ತುಕಪಾಣಿ ದೇವಿ ಅ.ಪ ಬುದ್ಯಾಭಿಮಾನಿ ಬ್ರಹ್ಮನರಾಣಿ ತಿದ್ದು ಮನದ ಸಂಶಯಗಳನು ದೇವಿ 1 ಮಾತುಮಾತಿಗೆ ನಿನ್ನ ಬೇಡುವೆ ದೇವಿ 2 ಶರಣಜನರ ಸುರಧೇನು ದೇವಿ 3
--------------
ಗುರುರಾಮವಿಠಲ
ಸರಸ್ವತಿ ನಲಿಯೆ ನೀ ಜಿಹ್ವೆಯಲಿ ಚತುರಾನನ ಪ್ರಿಯ ರಾಣಿ ನಾನಾ ಧನಕನಕಾದಿ ವಿಭವಗಳು ಹಿರಿದುಕ್ಕುತಲಿರಲು ಪ ನೀನೊಲಿಯದಿರಲು ಮಾನವನಿಗೆ ಸ ನ್ಮಾನವೆಂತು ಬರುವುದು ಜಗದೊಳಗೆ ಅ.ಪ ಕರ ಧೃತ ವೀಣಾಪಾಣಿ ಉನ್ನತ ಮಹಿಮ ಪ್ರಸನ್ನ ಹರಿಗೆ ಸತಿ 1
--------------
ವಿದ್ಯಾಪ್ರಸನ್ನತೀರ್ಥರು
ಸರಸ್ವತಿ ಬ್ರಹ್ಮನರಸಿ ವಾಣೀ ನಿನ್ನ ಸ್ಮರಿಸೆ ವೇದಮರ್ಮ ತಿಳಿಸಿ ಪರಬ್ರಹ್ಮನ ತೋರಿಸೆ ಪ ಆನನ ತೂಗುತಶ್ರೀನಿವಾಸನ ಗುಣಗಾನ ಮಾಡುವಿಯೆ 1 ಮಣಿ ಭೂಷ ವೃಂದ ಶೋಭಿತ ಕರಇಂದುವದನೆ ಮಯೂರೇಂದ್ರ ವಾಹನಳೆ2 ಈಸು ಪುಸ್ತಕದೊಳು ವಾಸಮಾಡುತಇಂದಿರೇಶನ ಸೊಸೆ ಭಕ್ತರಾಶಿಗೆ ಪೊಳೆಯೆ 3
--------------
ಇಂದಿರೇಶರು
ಸರಸ್ವತಿ ಮಂಗಳಾರುತಿಯನೆತ್ತೀರೆ ವಾರಿಜಭವಮುಖಿಗೆ ಮಂಗಳಾರುತಿಯನೆತ್ತೀರೆ ಪ ಇಂದು ಬಿಂಬ ಸದೃಶ ವದನೆಗೆ ಲಾವಣ್ಯ ಖಣಿಗೆ ಅಂದ ಕುಂಕುಮಭೂಷಿತ ಫಣೆಗೆ ಹರಿದ್ರ ಭೂಷೆಗೆ ಸಂದ ಮೌಕ್ತಿಕ ಚಂಪಕ ನಾಸಿಕೆಗೆ ಚಂದ ಕರುಣಾಭರಣ ಭೂಷಿತೆಗೆ ಚಾಪ ಇಂದು ಛವಿಯ ಕಿರೀಟ ಭೃತೆಗೆ ಹಿಂದೆ ಜೋಲ್ವ ಕನಕವೇಣಿಗೆ ಮಂಗಳಾರುತಿಯನೆತ್ತಿರೆ 1 ಚಾರುವಸನ ಭೂಷಿತಾಂಗೆಗೆ ವಿದ್ಯುತ್ಸುಕಾಂತೆಗೆ ಹಾರಪದ ಶÀಮಿರೂಪ ಕಂಠೆಗೆ ಸುಕಂಬು ಶ್ರೀದೇವಿಗೆ ಸಾರ ವೇದಾಂಗ ಭೂತೆಗೆ ನೀರಜ ಪಲ್ಲವಗಾತ್ರೆಗೆ ಸಾರಸಾಕ್ಷಿ ಶಿರಿವಂತೆಗೆ ಮಂಗಳಾರುತಿಯನೆತ್ತಿರೆ2 ಕರದಿ ವೀಣೆ ಧರಿಪ ದೇವಿಗೆ ಪಾವನ್ನಗಾತ್ರೆಗೆ ಧರೆಯ ಸೃಷ್ಟಿಕರ್ತನರಸಿಗೆ ಮಂಗಳ ವಾಣಿಗೆ ಪರಿಪರಿಯಲಂಕಾರ ಭೂಷಿತೆಗೆ ಸರಸ ಕೋಮಲ ಪದ್ಮಪಾತೆಗೆ ಮರಕತಭೂಷಣ ಭಾಸೆಗೆ ನಿರುತ ಜನಕೆ ವಿದ್ಯಪ್ರದೆಗೆ ನರಸಿಂಹವಿಠ್ಠಲನ ಬಾಲೆಗೆ ಮಂಗಳಾರುತಿಯನೆತ್ತಿರೆ 3
--------------
ನರಸಿಂಹವಿಠಲರು
ಸರಸ್ವತಿ ತಾಯಿ ಬಿಡದೆನ್ನ ಕಾಯಿ || ಮೂರ್ತಿ ಹರಿಯ ಸುತನಸತಿ || ಪ ಕಡಗ ಕಂಕಣ ಗೆಜ್ಜೆ ಕಾಲು ಪೆಂಡಿಗಿಯಿಂದ || ಸಡಗರದಲಿ ಹೊಳೆವ ನಡುವಿನೊಡ್ಯಾಣವು || ಪೊಡವಿಯೊಳಗೆ ನಿಮ್ಮ ವಡಸತಿಯರೊಳು || ಕಡುಸುಂದರಿ ಜಗದಂಬೆ ಕನಕದ ಗೊಂಬೆ 1 ಕೊರಳಿಗೆ ವೈರನ(?) ಪೊಲುವ ಮುಖದಲ್ಲಿ ಹೊರಳೆಲಿಯಂದದಿ(?)ಫಣಿಯಲ್ಲಿ ತಿಲಕ | ಎರಳೆ ಕಂಗಳೆ ನಿನ್ನ ಹೆರಳಿನ ಸೊಬಗು ಉರಗನ ಪೋಲ್ವದು ಬಾಲೆ ಸುಲೀಲೆ 2 ಧರೆಯೊಳಧಿಕ ` ಹೆನ್ನೆಪುರ ಹೆನ್ನೆವಿಠಲನ’ ಚರಣ ಕಮಲದಲಿ ದೇವ ಭಜಿಸುವ ಪರಮ ಭಕುತಿಯಿಂದ ಪಾಲಿಸೆ ಮಣೀಯುವೆ | ಸ್ಥಿರ ನಿನ್ನ ನಂಬಿದ ಜನರನು ಕಾಯುವೀ 3
--------------
ಹೆನ್ನೆರಂಗದಾಸರು
ಸರಸ್ವತಿ ದೇವಿ ವಾರಿಜನೇತ್ರೆಯ ಶಾರದೆ ಶ್ರೀಮುಖ ತೋರುವದೆನ್ನಯ ಪಾರ ಪರಾತ್ಪರೆ ಪ ಮಯೂರ ವಾಹಿನಿ ಕಾಯುವುದೆನ್ನ ತಾಯೆ ಚಿದ್ಛನ ನಿಜದಾಯುವ ನೀಯುವ 1 ಬಾಲೆಯ ಭಾಗ್ಯವಿಶಾಲೆಯ ನವಕುಸುಮ ಮಾಲೆಯ ಗಾನವಿಲೋಲೆ ವಾಗೇಶ್ವರಿ 2 ಛಂಧದೊಳೆನ್ನ ಸಾನಂದವ ಪಾಲಿಪ ಮಂದಮತಿಯ ತಿದ್ದಿ ಸುಂದರ ಮುಖಿಯೆ ನೀ3 ನಂಬಿಕೆ ಹೊಂದಿಹನೆಂಬುವ ಭಕ್ತರ ಇಂಬುಗಳನ್ನೆ ಕೊಟ್ಟು ಬೆಂಬಲಕಿರ್ಪಳೆ 4 ಕಂತು ಬ್ರಹ್ಮನರಾಣಿ ಅಂತರಿಕ್ಷಣೆವಾಣಿ ಶಾಂತಿ ಸದ್ಗುರುಪದ ಸಂತಸಕಾರಿಣಿ 5
--------------
ಶಾಂತಿಬಾಯಿ
ಸರಸ್ವತಿ ದೇಹಿ ಸನ್ಮತಿ ಪ. ವಿಧಿಸತಿ ಸುವ್ರತಿ ಶ್ರೀಮತಿ ಭಾರತಿ ಅ.ಪ. ನಿತ್ಯ ಪೊಗಳುತಿ ಜಗದೀಶ್ವರಿ ಜಲಜಾಯತನೇತ್ರಿ ಭಗವತಿ ಪವಿತ್ರಿ ಸಾವಿತ್ರಿ ಗಾಯತ್ರಿ ಸರಸ್ವತಿ ದೇಹಿ ಸನ್ಮತಿ 1 ಶರ್ವೇಂದ್ರಪೂರ್ವ ಗೀರ್ವಾಣತತಿ ಸರ್ವದಾಚರಿಸುವುದು ತವ ಸ್ತುತಿ ಸದ್ಭಕ್ತಿ ವಿರಕ್ತಿ ತ್ರಿಶಕ್ತಿ ದೇವಕಿ ಸರಸ್ವತಿ ದೇಹಿ ಸನ್ಮತಿ 2 ಲಕ್ಷ್ಮೀನಾರಾಯಣನ ಮೂರುತಿ ಲಕ್ಷಿಸಿ ಮನದೊಳಾನಂದದೊಳಿರುತಿ ಗುಣವತಿ ಸುಗತಿ ಸುಧೃತಿ ವಿಧಾತ್ರಿ ಸರಸ್ವತಿ ದೇಹಿ ಸನ್ಮತಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸರಸ್ವತಿ ವಿಧಿಸತೀ ಸುರತತಿ ಪೂಜಿತೇ ಪ ಅಹಿವೇಣಿ ಶುಕವಾಣಿ ಸದ್ಗುಣ ಶ್ರೇಣೀ | ಕಲ್ಯಾಣೀ ಪದ್ಮಿನೀ 1 ರಮಣಿ ಕುಲದೊಳತಿ ಖ್ಯಾತೇ ಮುನಿನೀಕಾ ಸನ್ನುತೇ 2 ದಾಸ ರಕ್ಷೆ ಬುಧೆ ಪುನೀತೇ ವನಜಾಕ್ಷಾ ಮಾನಿತೇ 3
--------------
ಬೆಳ್ಳೆ ದಾಸಪ್ಪಯ್ಯ
ಸರಸ್ವತಿ ಸ್ತುತಿ ಅಂಬ ಬ್ರಹ್ಮಾಣಿ ನಿನ್ನ ನಂಬಿದೆನು ವಾಣಿ ವದ- ನಾಂಬುಜದಿನೀನಿಂಬುಗೊಂಡು ಪರಾಂಬರಿಸು ಜನನೀ ಪ. ಶೋಕಭಯದೂರೆ ಭಕ್ತಾನೀಕಮಂದಾರೆ ಜಗ- ದೇಕನಾಥೆ ಪಿನಾಕಿಮುಖ್ಯ ದಿವೌಕಸಾಧರೆ 1 ಶಾರದೆ ವರದೆ ಶ್ರುತಿಸಾರೆ ಸುಗುಣನಿಧೇ ಮಮ- ಕಾರ ಮೋಹವಿಕಾರಭಿದೆ ಜಂಭಾರಿವಿನುತಪದೆ 2 ಮಂಗಲಪ್ರದೆ ಸಾರಂಗನೇತ್ರೆ ಬುಧೆ ಕನ- ಕಾಂಗಿ ಸದಯಾಪಾಂಗಿ ಹಂಸತುರಂಗಿ ಸರ್ವವಿದೆ 3 ಪುಸ್ತಕಪಾಣಿ ನಮಸ್ತೇ ಕಲ್ಯಾಣಿ ಪರ- ವಸ್ತುವಿನ ಗುಣವಿಸ್ತರೈಕಪ್ರಶಸ್ತಫಣಿವೇಣಿ 4 ಪ್ರೀಯೆ ಶ್ರೀ ಲಕ್ಷ್ಮೀನಾರಾಯಣೀಪ್ರೇಮಿ ನಿಧಿ- ಜಾಯೆ ಚತುರೋಪಾಯೆ ಪಾವನಕಾಯೆ ನಿಷ್ಕಾಮಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಸರಸ್ವತಿ ಸ್ತುತಿ ಅಂಬ ಬ್ರಹ್ಮಾಣಿ ನಿನ್ನ ನಂಬಿದೆನು ವಾಣಿ ವದ- ನಾಂಬುಜದಿನೀನಿಂಬುಗೊಂಡು ಪರಾಂಬರಿಸು ಜನನೀ ಪ. ಶೋಕಭಯದೂರೆ ಭಕ್ತಾನೀಕಮಂದಾರೆ ಜಗ- ದೇಕನಾಥೆ ಪಿನಾಕಿಮುಖ್ಯ ದಿವೌಕಸಾಧರೆ 1 ಶಾರದೆ ವರದೆ ಶ್ರುತಿಸಾರೆ ಸುಗುಣನಿಧೇ ಮಮ- ಕಾರ ಮೋಹವಿಕಾರಭಿದೆ ಜಂಭಾರಿವಿನುತಪದೆ 2 ಮಂಗಲಪ್ರದೆ ಸಾರಂಗನೇತ್ರೆ ಬುಧೆ ಕನ - ಕಾಂಗಿ ಸದಯಾಪಾಂಗಿ ಹಂಸತುರಂಗಿ ಸರ್ವವಿದೆ 3 ಪುಸ್ತಕಪಾಣಿ ನಮಸ್ತೇ ಕಲ್ಯಾಣಿ ಪರ- ವಸ್ತುವಿನ ಗುಣವಿಸ್ತರೈಕಪ್ರಶಸ್ತಫಣಿವೇಣಿ 4 ಪ್ರೀಯೆ ಶ್ರೀ ಲಕ್ಷ್ಮೀನಾರಾಯಣೀಪ್ರೇಮಿ ನಿಧಿ- ಜಾಯೆ ಚತುರೋಪಾಯೆ ಪಾವನಕಾಯೆ ನಿಷ್ಕಾಮಿ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ