ಒಟ್ಟು 54621 ಕಡೆಗಳಲ್ಲಿ , 139 ದಾಸರು , 12331 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರಸಿಜನಯನಾ ಹೇ ಶ್ರೀನಿವಾಸ ಪ ಸರಸಿಜಭವಪಿತ ಸರಸಿಜಾಕ್ಷಿಧವ ಉರಗಶಯನ ನೀ ಉರಗಭೂಷಣವಂದ್ಯ ಅ.ಪ ಮೂರುಲೋಕದೊಡೆಯನಾದವ ನೀನು ತೋರೋ ನಿನ್ನ ಮಹಿಮೆಯಾ ಗಾರುಗೊಂಡಿಹೆ ಪಾರವಾರದೊಳು ತೋರಿ ನಿನ್ನಯ ಪದ ಸೇರಿಸುತಿರವ 1 ಬಾಲಕನ ಕಲಭಾಷೆಯ ಮಾತೆಯು ಬೇಗ ಲಾಲಿಸುವ ತೆರದಿ ಪಾಲಿಸೆನ್ನಾ ಶ್ರೀಲಲಾಮ ನೀ ಕುಲಲಾವರದನಾದಿ ನೀಲಮೇಘಶ್ಯಾಮಾ 2 ದಾನವಾಂತಕ ನೀನು ಶಿರಿವತ್ಸಾಂಕಿತ ದೀನÀಜನರ ಸುರಧೇನು ಏನು ತಪ್ಪಿದ್ದರೂ ನೀನು ಕ್ಷಮಿಸು ಇಂದು ದೇನುವರರ್ಪಿಸಿದಿ ಪ್ರಾಣೇ±ವಂದಿತ 3
--------------
ಸಿರಿವತ್ಸಾಂಕಿತರು
ಸರಸಿಜನಾಭ ಪ. ಉಡುಪಿಯ ಕೃಷ್ಣನೇ ಅ.ಪ. ಏನು ಕಾರಣವನ್ನು ತೋರಿದ್ಪೊ ಶ್ರೀನಿವಾಸನೆ ನಿನ್ನ ಮಹಿಮೆಯ ಪೊಗಳಲು ನಾ ಶಕ್ತಳಲ್ಲಾ ಭಕ್ತವತ್ಸಲಾ 1 ನಿನ್ನ ನೋಡಿ ಧನ್ಯಳಾದೆನೊ ಸನ್ನುತಾಂಗನೇ ಎನ್ನ ಮೇಲೆ ಕರುಣವ ತೋರಿ ನಿನ್ನ ದರುಶನವಿತ್ಯೋ ದೇವಾ 2 ಮಾಡಿಸೊ ಧ್ವಂದ್ವಕಾರ್ಯ ನಿನ್ನದೆಂಬ ಸೊಲ್ಲ ಪಾಲಿಸು 3 ನಿನ್ನ ನಾಮದ ಸ್ಮರಣೆಯನ್ನು ಮರಿಯದೆ ನುಡಿಸೆನೆಗೆ ಕರುಣಾನಿಧಿಯೇ4 ನಿನ್ನ ಪಾದದ ಧ್ಯಾನವು ನಿರಂತರವಿರಲೆನೆಗೆ ನಿನ್ನ ಕಡೆಯಾಕಣ್ಣಲಿ ನೋಡೊ ರಮಾವಲ್ಲಭವಿಠಲನೆ ಕರುಣದಿ5
--------------
ಸರಸಾಬಾಯಿ
ಸರಸಿಜನಾಭ ಶ್ರೀಹರಿಪಾದಕಾರತಿಯ ಬೆಳಗಿರೆ ಪ ವಸುದೇವ ಸುತನೆಂದೆನಿಸಿ ಅಸುರೆ ಪೂತನಿಯ ಸಂಹರಿಸಿ ಆನಂದ ಸುರಿಸಿ ಕಾಳಿಮಡುವ ಧುಮುಕಿ ಫಣಿಯ ಮೇಲೆ ನಾಟ್ಯವನಾಡಿದವಗೆ ಸನಕಾದಿ ನಾರದ ಮುನಿವಂದ್ಯಗೆ ಸುರ ರಮಣಿಯರು ಹರುಷದಿ 1 ಮಧುರೇಲಿ ಜನಿಸಿದವಗೆ ಮಾವಕಂಸನ ತರಿದವಗೆ ಮಧುವೈರಿಹರಿಗೆ ಮುರಳಿನಾದಗೈದು ಸ್ತ್ರೀಯರ ಮರುಳುಗೊಳಿಸಿ ಆಡಿದವಗೆ ಮುರವೈರಿ ಹರಿ ಮುಚುಕುಂದ ವರದನ ಪಾಡುತಲಿ ಮುದದಲಿ2 ಗೋಪಾಲರೊಡಗೂಡುತಲಿ ಗೋವರ್ಧನವೆತ್ತಿದವಗೆ ಗೋವಿಂದ ಹರಿಗೆ ಗೋಪಿಯರ ಮನೆಯ ಪೊಕ್ಕು ಬೇಕೆನ್ನುತ ಪಾಲ್ಬೆಣ್ಣೆ ಸವಿದ ಶ್ರೀಕಾಂತ ಕಮಲನಾಭ ವಿಠ್ಠಲನಿಗೆಸುದತಿಯರು ತ್ವರಿತದಿ 3
--------------
ನಿಡಗುರುಕಿ ಜೀವೂಬಾಯಿ
ಸರಸಿಜನಾಭನೆ ಸೆರಗೊಡ್ಡಿ ಬೇಡುವೆ,ದುರಿತಗಳೆಲ್ಲ ತರಿದು ವರವಿತ್ತು ಕರುಣಿಸೊ ಪ ಕರುಣಾಸಾಗರ ನಿನ್ನ ಚರಣವ ನಂಬಿದೆಪರಮ ಪಾವನ ನಿನ್ನ ಶರಣನ ಪೊರೆಯೆಂದು 1 ಈಶವಿನುತ ನಿನ್ನ ವಾಸಿಯ ಪೊಗಳುವೆದಾಸ ಎಂದೆನ್ನನು ಗಾಸಿಮಾಡದೆ ಕಾಯೊ 2 ಬಾರಿಬಾರಿಗೆ ಬರುವ ದಾರಿದ್ರ್ಯ ದುಃಖದದೂರಗೈಸುವಂಥ ದಾರಿ ತೋರಿಸೆಂದು 3 ಕಂತುಪಿತನೆ ಎನ್ನ ಅಂತರಂಗದಿ ನಿನ್ನಸಂತತÀ ನೆನೆವಂತೆ ಚಿಂತನೆ ನಿಲಿಸೆಂದು 4 ಮಂಗಳಾತ್ಮಕನೆ ಶ್ರೀರಂಗವಿಠ್ಠಲ ಭು-ಜಂಗಶಯನ ನಿನ್ನ ಹಿಂಗದೆ ಭಜಿಪೆನು5
--------------
ಶ್ರೀಪಾದರಾಜರು
ಸರಸಿಜನಾಭಾ ದಕ್ಷಿಣ ಶರಧಿನಿವಾಸಾ ಪ ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲು ಪರಿಯ ದೈವವೆ ಮೊರೆಯೋಗಲೂ ಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲು ಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ 1 ಭುಗಿಲೆನೆ ಧಿಗಿಲೆನೆ ದಿಕ್ಕಿನೆಲಿ ಪ್ರತಿ ಶಬ್ದ ಪುಟ್ಟಿತಿರೆ ಝಗಝಗಿಪ ಬೆಳಗು ಕವಿದದು ಮೂರು ಲೋಕಕ್ಕೆ ಉಗುರು ಕೊನೆ ಪೊಗಳಿ ವೇದಗಳು ಬೆರಗಾಗಿ 2 ರಕ್ಕಸ ನೋಡಲು ಬಗೆದು ಕರುಳು ಕೊರಳಿಗೆ ಮಾಲೆ ಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತಾ ಕಕ್ಕಸದ ದೈವ ಅನಂತ ಪದುಮನಾಭ ಮುಕ್ತಿದಾಯಕ ವಿಜಯವಿಠ್ಠಲ ಮಹದಾ3
--------------
ವಿಜಯದಾಸ
ಸರಸಿಜನೇತ್ರ ನಿನ್ನಲೀಗ ಸ್ಮರಿಸುವೆ ಬೇಗದಿ ಬಾ ಪ ಸಿರಿ ಪಂಕಜಪೀಠರ ಸ್ತೋತ್ರವನು ಸರಸಾಗಿ ನೀ ಪರಿಗ್ರಹಿಸಿ ಇರುತಿರ್ಪ ಹರೇ 1 ಮುರಲೀಧರ ಶ್ರೀ ಅರಿಪಂಕಜವ ಕರದೊಳಗೆ ತಿರುಗಿಸುತ ವರಗಾನಿಸುವಾ 2 ಮರುಛ್ರೀಕರು ಈ ತರುವಾಗಿಹರು ಚರಣವ ಚರಣವ ಶ್ರೀ ನರಹರಿಯ ನೆರೆ ಚೀಪುತಲಿ * 3
--------------
ಪ್ರದ್ಯುಮ್ನತೀರ್ಥರು
ಸರಸಿಜಭವಸತಿ ಕರುಣಿಸು ಸನ್ಮತಿ ಹರಿ ಸ್ಮರಣಾಭಿರತಿ ಪರಮ ಕೃಪಾಕರೆ ವರದಾಭಯಕರೆ ನೀನಹುದೌ ಸುಕರೆ ಪ. ಸತ್ಯವೆನಗಿದು ಉತ್ತಮಾಂಗವು ಭಕ್ತಿಯೆ ಫಾಲಸ್ಥಲವು ಉತ್ತಮೋತ್ತಮ ವಿನಯಮೆಂಬುದೇ ನಾಶಿಕವದು ನಿಜವು 1 ಆನನ ವಿದರೋಳ್ ತಾನಾಗಿರೆ ವೇದವೆ ವದನವು ಮಾನಸಕತಿ ಸುಖವು 2 ಬಗೆಗೊಳ್ಳುವ ನಿನ್ನೀ ಬಗೆಬಗೆ ರೂಪವ ಬಗೆಬಗೆದಾನೆವೇಂ ಸೊಗಸಿತೆ ನಿನ್ನೀ ಬಗೆ ಸೇವೆಗೆ ನಿನ್ನಣುಗರ ವರಿಸೆನುವೇ 3 ದೇಶಸೇವೆಯೊಳಾಶಿಸುತಿರುವೆಮಗಾಶ್ರಯತರು ನೀನೇ ಭಾಷಾಮಾನಿನಿ ಬಲಗೊಂಬೆನು ನಿನ್ನನೆ ಶೇಷಗಿರೀವರನಾಣೆ 4
--------------
ನಂಜನಗೂಡು ತಿರುಮಲಾಂಬಾ
ಸರಸಿಜಾಕ್ಷ ಸರಸದಿಂದ ಸರಸಿಜೋದ್ಭವಗೊಲಿದು ಬಂದ ಪ ಉರಸಿನ ಮ್ಯಾಲೆ ಸರಸಿಜಾಕ್ಷಿಯನಿರಿಸಿ ಬಂದಅ.ಪ. ಶರಧಿ ಗಂಭೀರ ವರಘನಸಾರ ಕಸ್ತೂರಿ ತಿಲಕಧರಹೀರ ಮೌಕ್ತಿಕ ಕೇಯೂರ ಧರಿಸಿದ ನವನೀತಚೋರ ಬಂದ 1 ನಂದ ಗೋಪಿಗಾನಂದವೂಡಿದ ಕಂದ ಗೋಕುಲದಿ ಬಂದಅಂದದಿಂದ ಸೌಂದರಿಯರ ಗೋವಿಂದ ಮುಕುಂದ 2 ಅಂಗನೆಯರ ಕುಚಗಳಾಲಿಂಗನವ ಮಾಡಿ ನವಮೋಹನಾಂಗರಂಗವಿಠಲನು ನಮ್ಮಂತರಂಗದೊಳಗಿಹ ಕಲ್ಮಷಭಂಗ3
--------------
ಶ್ರೀಪಾದರಾಜರು
ಸರಸಿಜಾಕ್ಷ ಸಾಧುಪಕ್ಷ ನಿರತ ನಿನ್ನ ನಂಬಿದೆ ಪ ವಿನುತ ಶ್ರೀಧರಾ ಕೃಪಾನಿದೆ.ಪ ಹಿರಣ್ಯ ತರಿದು ಕರುಳ ಮಾಲೆಧರಿಸಿದ ನರಹರಿ ಪತಿತ ಪಾವನ 1 ದಾನಕೊಟ್ಟಬಲಿಗೆ ಮೆಚ್ಚಿ ದ್ವಾರಪಾಲಕನಾದವನೆ 2 ಕರಿಯಪೊರೆದು ಕಾಂಚಿಪುರದೊಳಿರುವ ವರದರಾಜನೆ ಗುರುರಾಮ ವಿಠಲ ನೀನೆ ಶರಣ ಕಲ್ಪಭೂಜನೆ 3
--------------
ಗುರುರಾಮವಿಠಲ
ಸರಸಿಜಾಕ್ಷಿಯರೆಲ್ಲ ಹರುಷದಿ ಬೆಳಗಿರೆಕರ್ಮಾಭಿಮಾನಿ ಪುಷ್ಕರನಿಗಾರುತಿಯಾ ಪ ಮಾಡಿದ ಕರ್ಮವ ನೀಡಿ ಹರಿಗೆ ಅಂಗಗೂಡು ತೊಪ್ಪಿಸೋ ನಿನ್ನ ಪಾಡಿ ಪೊಗಳುವೆ 1 ನಿತ್ಯ ಮಾಡುತ ಹರಿಇಚ್ಛಿತ ಕರ್ಮವ ಪಠ್ಯ ಸಾಧಿಸಿದೆ 2 ಏಸು ಜನುಮದಿ ನಾನು ಮೋಸ ಹೋದೆನೊ ಇಂದಿ-ರೇಶಗರ್ಪಿಸೋ ಕೃಪಾಧೀಶ ಮರಿಯದೆ 3
--------------
ಇಂದಿರೇಶರು
ಸರಸಿಜಾಯತನೇತ್ರ ಸರಿಯಾರೆ ಧರೆಯೊಳಗೆ ಮೇರುಗಿರಿಯನೆಪೊತ್ತ ಧೀರನಿವನೆ ಅಪರಾಧವ ಪರಿಹರಿಸಿ ಕಾಪಿಡೆಂದೊರಲುವರ ಕೈಪಿಡಿದು ಕಾಪಾಡುವಾಪ್ತ ಬಂಧು
--------------
ನಂಜನಗೂಡು ತಿರುಮಲಾಂಬಾ
ಸರಸಿಜಾಲಯವೆನಿಪ ಸೊಗಸಿನ ವರರತ್ನ ಮಂಟಪದೊಳು ಸಿರಿದೇವಿಯೊಡನೆÉ ನೀಂ ಶಯನಿಸು 1 ಚಪಲಾಕ್ಷಿ ಶ್ರೀದೇವಿಯುಪಚಾರದಿಂ ನಲಿದು ಅಪರಿಮಿತಾನಂದದಿಂ ಶಯನಿಸು 2 ಸಂಭ್ರಮದಿ ಕೇಳುತ್ತ ಅಂಬುಜೋದ್ಬವ ತಾತ ಅಂಬುಜಾನನೆಯೊಡವೆರಸಿ ನಲಿಯುತ 3 ಗರುಡ ಪವನಜರೆಂಬುವ ನಿನ್ನಂಘ್ರಿಸರಸಿಜವ ಸೇವಿಸುವ ಪರಮಭಕ್ತರು ಬಂದು ಕರಮುಗಿದು ನಿಂದಿರಲು ಕುಡುತೆ ಮುದವಂ4 ವರಶೇಷಗಿರಿನಿಲಯನೆÀ ಜಯಜಯತು ವರದನಾರಾಯಣನೆ ಕರವಿಡಿದು ಪೊರೆಯೆನ್ನ ದೊರೆ ಮರೆಯೆ ನಾನಿನ್ನ ಪರಮಮಂಗಳೆಯೊಡನೆ ನೀಂ ಪರುಕಿಸೆನ್ನ 5
--------------
ನಂಜನಗೂಡು ತಿರುಮಲಾಂಬಾ
ಸರಸಿಜಾಲಯವೆಂಬುವ ಸೊಗಸಿನ [ಶಯನಿಸು] ಪ. ವರರತ್ನ ಮಂಟಪದೊಳು ಉರಗಪತಿಯಂತು ವರತಲ್ಪವಾಗಿರಲು ಸಿರಿಯೊಡನೆ ನೀಂ ಶಯನಿಸು ಅ.ಪ ತಪನ ಶಶಿಗಳೆಂಬುವ ಅಪ್ರತಿಮ [ವೆ ಚಪಲಾಕ್ಷಿ ಶ್ರೀದೇವಿಯುಪಚಾರದಿಂ ನಲಿದು ಅಪರಿಮಿದಾನಂದದಿಂ ಶಯನಿಸು 1 ತುಂಬುರು ನಾರದರೆಂಬುವ ವಂದಿಮಾಗಧರ ತಂಬೂರಿ ಸ್ವರಗಾನಮಂ | ಸಂಭ್ರಮದಿ ಕೇಳುತ್ತ ನಲಿಯುತ [ಶಯನಿಸು] 2 ಗರುಡಪವನಜರೆಂಬುವ ನಿನ್ನಂಘ್ರಿ | ಸರಸಿಜವ ಸೇವಿಸುವ ವರಭಕ್ತರು ಬಂದು | ಕರಮುಗಿದು ನಿಂದಿರಲು ನಲಮಂ[ಶಯನಿಸು] 3 ವರಶೇಷಗಿರಿ ನಿಲಯನೇ ಜಯಜಯತು | ವರದ ನಾರಾಯಣನೇ | ಕರುಣಾಭರಣ ಲಕ್ಷ್ಮೀನರಹರಿಯೆ ನಿ | ನ್ನರಸಿಯೊಡನೆ ನೀಂ ಶಯನಿಸು 5
--------------
ನಂಜನಗೂಡು ತಿರುಮಲಾಂಬಾ
ಸರಸಿಜಾಲಯೆ ಪೊರೆಯೆ ಬೇಗನೇ ಹೇ ಮಾತೆ ಪ ಸಾರಸಭವನ ವೀರ ಮಾತೆಯೆ ನೀರಜಾಕ್ಷಿಯೆ ಹೇ ಮಾತೆ ಸಾರಸಾಕ್ಷ ಪರಮಪ್ರಿಯಳೆ ಸಾರಿಬಾರೆನ್ನ ಹೇ ಮಾತೆ 1 ತುರುವು ತನ್ನ ಕರುವ ಧ್ವನಿಯಂ ಅರಿತು ಬಾರದೆ ಹೇ ಮಾತೆ ಈ ತೆರದಿ ಎನ್ನ ಮೊರೆಯ ಕೇಳಿ ಕರವ ಹಿಡಿಯೆ ಹೇ ಮಾತೆ 2 ಪರಿಯು ಯಾರೆ ಸಿರಿಯು ನಿನಗೆ ಪರಮಪಾವನೆ ಹೇ ಮಾತೆ ಕರುಣದಿಂದ ಪೊರೆದು ತೋರೆ ಸಿರಿರಂಗೇಶವಿಠಲನ ಹೇ ಮಾತೆ 3
--------------
ರಂಗೇಶವಿಠಲದಾಸರು
ಸರಸಿಜಾಸನ ಮೊದಲು ಸ್ತಂಭ ಪರ್ಯಂತವು ಚರಚರಾತ್ಮಕ ಜಗವು ಎಲ್ಲವು ಪ ಪರತರನಾದ ಯಾವಾತನಾಧೀನವೋ ಆ ಹರಿಯೇ ಬಲವು ನಿನಗೆ ಎನಗೆ ಮತ್ತೆಲ್ಲರಿಗೆ ಅ.ಪ. ಕಾಲ ಉರುಕ್ರತು ಭಾಸುರತೇಜ ಓಜಸು ಸತ್ವನೊ ಬಲು ಶಕ್ತನೊ ಸರ್ವಜಗತ್ಸøಷ್ಟಿ ಸ್ಥಿತಿ ಲಯಕಾರನೊ ಆ ಸರ್ವೇಶÀನ ಬಿಟ್ಟು ಬಲವಾವುದಿನ್ನಯ್ಯಾ 1 ಆರು ವರ್ಗಗಳೆಂಬ ವೈರಿಗಳ್ ಕಳ್ಳರಂತೆ ಸೇರಿಕೊಂಡಿಹರು ಶರೀರದೊಳು ಗಾರು ಮಾಡುವರವರಗಲ್ಲದೆ ಧರೆಯಲ್ಲಿ ಭೂರಿ ಜಯಿಸಿದೆನೆಂಬ ಗರ್ವ ಸಲ್ಲುವುದೇನೊ 2 ನಿನ್ನ ಆಸುರೀಭಾವ ಇನ್ನಾದರೂ ಬಿಟ್ಟು ಘನ್ನಮಹಿಮ ಕರಿಗಿರೀಶನೊಳ್ ಮನವ | ಚೆನ್ನಾಗಿ ಕಲಿಸಿ ನೀ ಸಮಚಿತ್ತನಾದೊಡೆ ಇನ್ನು ನಿನಗೆ ವೈರಿಗಳು ಯಾರು ಇಹರಯ್ಯಾ 3
--------------
ವರಾವಾಣಿರಾಮರಾಯದಾಸರು